ಎಲಿಜಬೆಥ್ ಕ್ಯಾರಿ, ವಿಸ್ಕೌಂಟೇಸ್ ಫಾಕ್ಲ್ಯಾಂಡ್
ಎಲಿಜಬೆಥ್ ಕ್ಯಾರಿಯವರು ಒಂದು ಇಂಗ್ಲಿಷ್ ಕವಯಿತ್ರಿ,ಅನುವಾದಕರು ಹಾಗು ನಾಟಕ ಕಲಾವಿದರಾಗಿದ್ದರು. ಅವರು ತಮ್ಮ ಬಾಲ್ಯದಿಂದಲೆ ಭಾಷೆಗಳ ಬಗ್ಗೆ ಅರಿವನ್ನು ಪಡೆದವರು. ಎಲಿಜಬೆಥ್‌ರವರು ಸ್ವಂತ ಹೆಸರಿನಲ್ಲಿ ತಮ್ಮ ಕಾವ್ಯವನ್ನು ಪ್ರಕಟಿಸುವ ಮೊದಲ ಮಹಿಳೆಯಾಗಿದ್ದಾರೆ.
ಜೀವನ
ಬದಲಾಯಿಸಿಎಲಿಜಬೆಥ್ ಕ್ಯಾರಿಯವರು ೧೫೮೫ರಲ್ಲಿ ಬರ್ಫರ್ಡ್ ಪ್ರಿಯರಿ ಎಂಬ ಸ್ಥಳದಲ್ಲಿ ಹುಟ್ಟಿದ್ದರು. ಅವರ ತಂದೆಯ ಹೆಸರು ಸರ್ ಲಾರೆನ್ಸ್ ಟಾನ್‌ಫೀಲ್ಡ್ ಹಾಗು ತಾಯಿಯ ಹೆಸರು ಎಲಿಜಬೆಥ್. ಅವರ ತಂದೆ ಒಂದು ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು ಅದರ ನಂತರ ಅವರು ನ್ಯಾಯಾಧೀಶರಾಗಿ ಸೇವೆ ಸಲಿಸಿದ್ದರು. ಎಲಿಜಬೆಥ್‌ರವರ ತಂದೆ ತಾಯಿ ಇಬ್ಬರು ಅವರ ಓದುವಿಕೆಯ ಬಗ್ಗೆ ಪ್ರೀತಿಯನ್ನು ತಿಲಿದು ಅವರಿಗೆ ಪ್ರೋತ್ಸಾಹನವನ್ನು ನಿಡಿದರು. ಕ್ಯಾರಿಯವರ ೫ನೇ ವಯಸಿನಲ್ಲಿ ಅವರ ತಂದೆ ತಾಯಿ ಅವರಿಗೆ ಒಂದು ಫ್ರೆಂಚ್ ಅಧ್ಯಾಪಕರನ್ನು ಎರ್ಪಡಿಸಿದ್ದರು. ಅನಂತರ ಬರಿ ಐದು ವಾರದಲ್ಲಿ ಫ್ರೇಂಚ್ ಮಾತಾಡಲು ಪ್ರಾರಂಭಿಸಿದ್ದರು. ಈ ರೀತಿ ಅವರು ಅನೇಕ ಭಾಷೆಗಳನ್ನು ತಮ್ಮ ಸ್ವಂತ ಇಷ್ಟದಿಂದ ಕಲಿತರು. ಹೀಗೆ ಅವರು ಕಲಿತ ಭಾಷೆಗಳು ಸ್ಪ್ಯಾನಿಶ್, ಇಟಾಲಿಯನ್, ಲ್ಯಾಟಿನ್, ಯೆಹೊದ್ಯ ಮುಒತಾದವು. ಈ ಎಲ್ಲಾ ಭಾಷೆಗಳನ್ನು ಅವರು ಸ್ವಂತವಾಗಿ ಯಾವ ಸಹಾಯವಿಲ್ಲದೆ ಕಲಿತ್ತದ್ದು. ೧೫ನೇಯ ವಯಸಿನಲ್ಲಿ ಎಲಿಜಬೆತ್‌ರವರ ತಂದೆ ಅವರ ಮದುವೆ ಸರ್ ಹೆನ್‌ರಿ ಕ್ಯಾರಿ, ವಿಸ್ಕೌಂಟ್ ಆಫ್ ಫಾಕ್ಲ್ಯಾಂಡ್ ಜೊತೆ ತೀರ್ಮಾನಿಸಿದ್ದರು. ಮದುವೆಯ ನಂತರ ಎಲಿಜಬೆಥ್ ಅತ್ತೆ ಅವರ ಓದುವ ಅಭ್ಯಾಸವನ್ನು ಮುಂದುವರಿಸಲು ಅನುಮತಿ ನೀಡಲಿಲ್ಲ, ಈ ಸಂದರ್ಭದ್ದಲ್ಲಿ ಅವರು ಕಾವ್ಯಗಳನ್ನು ಬರೆಯಲು ಆರಂಭಿಸಿದ್ದರು. ೧೬೨೨ನಲ್ಲಿ ಅವರ ಗಂಡನು ಐರ್ಲ್ಯಾಂಡಿನ ಲಾರ್ಡ್ ಡೆಪ್ಯುಟಿಯಾಗಿದ್ದರು. ೧೬೨೨-೧೬೨೯ ತಂಕ ಅವರು ಈ ಪದವಿಯಲ್ಲಿದ್ದರು. ಎಲಿಜಬೆಥ್ ಕೇವಲ ೧೬೨೫ ತಂಕ ಐರ್ಲ್ಯಾಂಡಿನಲ್ಲಿ ನೆಲಸಿದ್ದರು, ಆದರೆ ಅಲ್ಲಿ ಅವರು ಇರುವ ಸಮಯದ್ದಲ್ಲಿ ಅಲ್ಲಿನ ಜೆನರಿಗೆ ಸೇವೆ ಸಲ್ಲಿಸಿದ್ದರು. ಅವರ ಮದುವೆಯ ಏಳು ವರ್ಷಗಳಿಗೆ ಅವರಿಗೆ ಮಕ್ಕಳಿರಲಿಲ್ಲ. ಅದರ ನಂತರ ಅವರು ೧೧ ಮಕ್ಕಳಿಗೆ ಜನ್ಮ ಕೊಟ್ಟರು. ಅವರ ೧೧ ಮಕ್ಕಳಲ್ಲಿ ಆರು ಹೆಣ್ಣು ಮಕ್ಕಳು ಮತ್ತು ಐದು ಗಂಡು ಮಕ್ಕಳು. ಆ ಮಕ್ಕಳಲ್ಲಿ ಪಟ್ರಿಕ್, ಅವರ ಕಿರುಮಗ ಒಂದು ಕವಿಯಾಗಿದ್ದನು. ಅವರ ಗಂಡರು ೧೬೩೩ನಲ್ಲಿ ಮರಣ ಹೊಂದಿದ್ದರು. ಅವರಿಬ್ಬರ ಮಧ್ಯೇ ಹಣಕಾಸಿನ ವಿಷಯದಲ್ಲಿ ಪ್ರಶ್ನೆಗಳಿದ್ದವು. ಗಂರ್ಡನೊಂದಿಗೆ ಇದ್ದ ಈ ಪ್ರಶ್ನೆಗಳ ಕಾರಣ ಎಲಿಜಬೆಥ್ ಹಸಿದು ಸಾಯುವ ಪರಿಸ್ಥಿತಿಗೆ ಕೂಡ ಸೇರಿದ್ದರು. ೨೦ನೇ ವಯಸಿನಲ್ಲಿ ಅವರು ಕ್ಯಾಥೊಲಿಕ್ ವಿಶ್ವಾಸವನ್ನು ನಂಬಲು ಆರಂಭಿಸಿದ್ದರು. ಇದು ಅವರಿಗೆ ಶಕ್ತಿ ನೀಡಲು ಪ್ರಾರಂಭಿಸಿತ್ತು.
ಬರವಣಿಗೆ
ಬದಲಾಯಿಸಿಎಲಿಜಬೆಥ್ರವರು ಸಾಹಿತ್ಯದಲ್ಲಿ ಕಾವ್ಯ ಪ್ರಮುಕವಾದ ಪ್ರಕಾರವೆಂದು ಹೇಳಿದ್ದರು. ಅವರ ಕಾವ್ಯದ ಬಗ್ಗೆ ಇರುವ ಪ್ರೀತಿ ಅವರ ನಾಟಕಗಳಲ್ಲಿ ಕಂಡು ಬಂದಿದೆ. ಅವರ ಮೊದಲ ನಾಟಕ 'ದ ಟ್ರಾಜಡಿ ಆಫ್ ಮರಿಯಂಮ್' ಸ್ಪಷ್ಟತ್ತೆಯಿಂದ ಹಾಗು ವ್ಯಾಕರಣದ ಉಪಯೋಗದಿಂದ ಬರೆದರು. 'ದ ಟ್ರಾಜಡಿ ಆಫ್ ಮರಿಯಂಮ್' ಆ ಕಾಲದಲ್ಲಿ ಒಂದು ಮಹಿಳೆ ಬರೆದ ಮೊದಲ ನಾಟಕವಾಗಿತ್ತು. ಆ ನಾಟಕದಲ್ಲಿ ಅವರು ಪ್ರತೀಕಾರ ಹಾಗು ಸಂಚು ನಡಿಸುವ ವಿಚಾರಗಳ ಬಗ್ಗೆ ಬರೆದಿದ್ದಾರೆ. ಈ ನಾಟಕದ ನಂತರ ಅವರು 'ದ ಹಿಸ್ಟರಿ ಆಫ್ ದ ಲೈಫ್, ರೈನ್ ಅನ್ಡ್ ಡೆತ್ತ್ ಆಫ್ ಎಡ್‌ವರ್ಡ್ ೨' ಎಂಬ ನಾಟಕವನ್ನು ಬರೆದರು. ಇದ್ದರಲ್ಲಿ ಮುಖ್ಯವಾಗಿ ಹಿತಿಹಾಸದ ಬಗ್ಗೆ ವಿಚಾರಗಳು ಕಂಡು ಬಂದಿದ್ದೆ. ಈ ನಾಟಕ ಎಡ್‌ವೇರ್ಡ್ ರಾಜನ ಚರಿತ್ರೆ ಮತ್ತು ಅವರ ವೀರ ಕಥೆಯನ್ನು ತಿಳಿಸುತ್ತದೆ. ಎಲಿಜಬೆಥ್ ಫಾಕ್ಲ್ಯಾಂಡ್ ಪಕ್ಷಪಾತವೆಂಬ ಸ್ವಭಾವವನ್ನು ಅವರ ಹಿಸ್ಟರಿಯಂಬ ನಾಟಕದಲ್ಲಿ ಪ್ರದರ್ಶಿಸಿದ್ದರು ಹಾಗು ಇಂತಹ ಸ್ವಭಾವದ ಮೂಲಕ ಬರುವ ತೊಂದರೆಯ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದರು. ಸೆಂಟ್ ವೆರ್ಜಿನ್ ಮೆರಿ, ದ ಲೈಫ್ ಆಫ್ ಸೆಂಟ್ ಅಗ್ನೆಸ್, ಸೆಂಟ್ ಎಲಿಜಬೆಥ್ ಆಫ್ ಪೋರ್ಚುಗಲ್, ಮುಂತಾದವು ಕೂಡ ಅವರ ಬರವಣಿಗೆ.
ಜೀವನ ಚರಿತ್ರೆ
ಬದಲಾಯಿಸಿ'ದ ಲೇಡಿ ಫಾಕ್ಲ್ಯಾಂಡ್:ಹೆರ್ ಲೈಫ್' ಅವರ ಜೀವನ ಚರಿತ್ರೆ. ಈ ಪುಸ್ತಕವನ್ನು ಅವರ ಮಗಳು ಲೂಸಿ ಬರೆದದ್ದು. ಅವರ ಮಕ್ಕಳಾದ ಮೆರಿ ಹಾಗು ಪಟ್ರಿಕ್ ಎಲಿಜಬೆಥ್ ಜೀವ ಚರಿತ್ರೆ ಬರೆಯಲು ಲೂಸಿಗೆ ಸಹಾಯ ಮಾಡಿದರು.
ಕ್ಯಾಥೊಲಿಕ್ ವಿಶ್ವಾಸ
ಬದಲಾಯಿಸಿಎಲಿಜಬೆಥ್ ಅವರ ೨೦ನೇ ವಯಸಿನ್ನಲ್ಲಿ ಪ್ರತಿಭಟನಾಕಾರ ವಿಶ್ವಾಸದ ಮೇಲೆ ಅನುಮಾನ ಉಂಟಾಯಿತ್ತು. ಅವರ ಭಾವ ಕ್ಯಾಥೊಲಿಕ್ ವಿಶ್ವಾಸದ ಬಗ್ಗೆ ಅವರಿಗೆ ಪರಿಚಯ ನೀಡಿದ್ದರು. ಕ್ಯಾಥೊಲಿಕ್ ವಿಶ್ವಾಸದ್ದಲ್ಲಿ ಓದ ಬೇಕಾಗಿರುವ ಪುಸ್ತಕಗಳ ಬಗ್ಗೆ ಅವರ ಭಾವ ಎಲಿಜಬೆಥ್‌ಗೆ ತಿಳಿವಳಿಕೆ ನೀಡಿದ್ದರು. ೧೬೨೬ನಲ್ಲಿ ಅವರು ಕ್ಯಾಥೊಲಿಕ್ ವಿಶ್ವಾಸಕ್ಕೆ ಸೇರಿದರು. ಇದ್ದರಿಂದ ಅವರ ವಿವಾಹ ಜೀವನದಲ್ಲಿ ತೊಂದರೆಗಳು ಆರಂಭಿಸಿತ್ತು. ಅವರ ಗಂಡನ್ನು ಅವರಿಂದ ಮದುಮುರಿಕೆಗೆ ಪ್ರಯತ್ನಿಸಿದ್ದನ್ನು. ಆದರೆ ಅವರ ಗಂಡನ ಪ್ರಯತ್ನ ನಿಷ್ಪಲವಾಯಿತ್ತು. ಅವರ ಜೀವನದಲ್ಲಿ ನಡೆದಿರುವ ಅನುಭವಗಳು ಹಾಗು ಅದ್ಬುತಗಳ ಕಾರಣ ಅವರು ಕ್ಯಾಥೊಲಿಕ್ ವಿಶ್ವಾಸಕ್ಕೆ ಸೇರಿದ್ದು ಎಂದು ಅವರು ತಿಳಿಸಿದ್ದಾರೆ. ಸಾಹಿತ್ಯದಲ್ಲಿ ಅವರಿಗಿದ್ದ ಅರಿವು ಅವರನ್ನು ಧಾರ್ಮಿಕ ಪುಸ್ತಕಗಳನ್ನು ಓದಲು ಸಹಾಯ ಮಾಡಿತ್ತು. ಈ ವಿಶ್ವಾಸಕ್ಕೆ ಸೇರಿದ ನಂತರ ಅವರು ತಮ್ಮ ಮಕ್ಕಳನ್ನು ಕೂಡ ಕ್ಯಾಥೊಲಿಕ್ ವಿಶ್ವಾಸಕ್ಕೆ ಸೇರಿಸುವ ಪ್ರಯತ್ನ ಆರಂಭಿಸಿದ್ದರು. ಅವರ ಈ ಪ್ರಯತನ ಒಂದಷ್ಟು ಸಫಲವಾಯಿತ್ತು. ೧೧ ಮಕ್ಕಳಲ್ಲಿ ಐದು ಜನರು ಈ ವಿಶ್ವಾಸ ಸ್ವೀಕರಿಸಿದ್ದರು. ಅದರಲ್ಲಿ ೪ ಹುಡಿಗಿಯರು ಕ್ರೈಸ್ತ್ ಸನ್ಯಾಸಿನಿ ಮತ್ತು ಒಬ್ಬರು ಪುರೋಹಿತನಾದ್ದನು.
ಮರಣ
ಬದಲಾಯಿಸಿ೧೬೩೯ನಲ್ಲಿ ಎಲಿಜಬೆಥ್ ಫಾಕ್ಲ್ಯಾಂಡ್ ಲಂಡನ್‌ನಲ್ಲಿ ಮರಣ ಹೊಂದಿದರು. ಮರಣದ ಸಮಯದಲ್ಲಿ ಬಡತನದಲ್ಲಿ ಇದ್ದರು, ಆದರೆ ಅವರು ದೊಡ್ದತನದ್ದಲ್ಲಿ, ಸಾಮರ್ಥ್ಯದ್ದಲ್ಲಿ ಹಾಗು ಬಲದಲ್ಲಿ ಶ್ರೀಮಂತರಾಗಿದ್ದರು. [೧] [೨] [೩]
ಉಲ್ಲೇಖಗಳು
ಬದಲಾಯಿಸಿ