ಕವಯಿತ್ರಿ -ಕವಿತೆಗಳನ್ನು ಬರೆಯುವ ಮಹಿಳೆ. ಕಾವ್ಯ ರಚನೆ ಮಾಡುವ ಮಹಿಳೆಯರನ್ನು "ಕವಯಿತ್ರಿ"ಎಂದು ಕರೆಯಲಾಗುತ್ತದೆ.ಭಾರತದ ಹಲವಾರು ಭಾಷೆಗಳಲ್ಲಿ ಕಾವ್ಯ ರಚನೆ ಮಾಡುವ ಮಹಿಳೆಯರನ್ನು ಕವಯಿತ್ರಿ ಎಂದು ಕರೆಯಲಾಗುತ್ತದೆ. ಕನ್ನಡ ಭಾಷೆ ಅಲ್ಲದೆ ಮಲಯಾಳಂ, ತಮಿಳ್, ತೆಲುಗು, ಮರಾಠಿ ಭಾಷೆಗಳಲ್ಲೂ "ಕವಯಿತ್ರಿ"ಎಂದೇ ಕರೆಯುವುದು.

ಅಕ್ಕಮಹಾದೇವಿ
ಕಮಲಾ ಸುರಯ್ಯ

ಪರಿಚಯಸಂಪಾದಿಸಿ

 • ಕಾವ್ಯಗಳು ಮತ್ತು ಪದ್ಯಗಳು ಒಂದು ಭಾಷೆಯ ಸಾಹಿತ್ಯದಲ್ಲಿ ಮುಖ್ಯ ಕೊಡುಗೆ ನೀಡುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ-ಅನೀತಿ-ಮನುಷ್ಯತ್ವರಹಿತ ಅನಾಚಾರಗಳ ಎದುರಾಗಿ ಎಂದಿಗೂ ಧೀರವಾಗಿ ಪ್ರತಿರೋಧಿಸಿದ್ದವರು ಕವಿಗಳು ಹಾಗೂ ಕವಯತ್ರಿಯರು ಎಂಬುವುದು ಅನುಭವ ಸಾಕ್ಷ್ಯ.
 • ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಜನರ ಬದುಕಿಗೆ ಸೇರಿಕೊಂಡ ಸಾಂಸ್ಕೃತಿಕ ಮಾಲಿನ್ಯಗಳು ತೊಡೆದುಹಾಕಿ ತಲೆಮಾರುಗಳಿಗೆ ಅವು ಹೀನವೆಂದು ತಿಳಿಸುತ್ತಿರುವ ಧರ್ಮವೂ ಕೂಡ ಇವರು ಮಾಡಿಕೊಂಡಿದ್ದಾರೆ. ಪುರುಷ ಕೇಂದ್ರಿತವಾದ ಈ ಸಮೂಹದಲ್ಲಿ ಹಲವಾರು ತರದ ಸಮಸ್ಯೆಗಳಿಗೆದುರಾಗಿ ಪ್ರತಿರೋಧಿಸಿಕೊಂಡು ಸ್ತ್ರೀ ಪಕ್ಷದ ವಿಚಾರಗಳನ್ನು ತಿಳಿಸುವ ವಿಶಿಷ್ಟ ಸಂಭಾವನೆಗಳು ಕವಯಿತ್ರಿಯರು ನೀಡಿದ್ದಾರೆ ಎಂಬುವುದು ಒಂದು ಯಾಥಾರ್ಥ್ಯ.

ವಚನ ಸಾಹಿತ್ಯಸಂಪಾದಿಸಿ

 • ಕನ್ನಡದ ಮೊಟ್ಟಮೊದಲ ಕವಯಿತ್ರಿ ಅಕ್ಕಮಹಾದೇವಿಯವರು. ೧೨ನೇ ಶತಮಾನದ ಮೊದಲ ಕವಿಗಳಲ್ಲಿ ಇವರೂ ಕೂಡ ಒಬ್ಬರು. ಹನ್ನೆರಡೆನೇ ಶತಮಾನದ ಪ್ರಾರಂಭ ವರ್ಷಗಳಲ್ಲೇ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ರೀತಿಯ ಕಾವ್ಯರಚನೆ ಶುರುವಾದದ್ದು. "ವಚನ"ಗಳು ಎಂದು ಹೆಸರಾಗಿದ್ದ ಈ ಸಾಹಿತ್ಯ ಶಾಖೆಯ ಕವಿಗಳು ಸಂಸ್ಕೃತ ಮಿಶ್ರಣವಿಲ್ಲದ ಶುದ್ಡ ಕನ್ನಡ ಭಾಷೆಯಲ್ಲಿ ಕವಿತೆಗಳನ್ನು ಬರೆಯುವುದು ಪ್ರೋತ್ಸಾಹಿಸಿದರು.
 • ಸಾಮಾನ್ಯ ಜನರಿಗೆ ಸರಳವಾಗಿ ಅರ್ಥ್ವಾಗುವುದೇ ಇದರ ಮುಖ್ಯ ಲಕ್ಷ್ಯವಾಗಿತ್ತು. ವಚನಸಾಹಿತ್ಯದ ಮೊದಲ ಕವಿ ಬಸವಣ್ಣನವರು ಸಮಾಜದಲ್ಲಿನ ಮಹಿಳೆಯರ ಮತ್ತು ಹಿಂದುಳಿದವರ ಪ್ರತಿಭಟನೆಗಾಗಿ "ಅನುಭವ ಮಂಟಪ" ಎಂದೊಂದು ವೇದಿಕೆಯನ್ನು ಪ್ರಾರಂಭಿಸಿದರು.
 • ಅನುಭವಮಂಟಪದ ಮೂಲಕ ಹಲವಾರು ಮಹಿಳೆಯರು ಹಾಗೂ ಹಿಂದುಳಿದವರು ಕಾವ್ಯರಚನೆಯ ಕ್ಷೇತ್ರಕ್ಕೆ ಬಂದರು. ನಮ್ಮ ಕನ್ನಡದ ಮೊದಲ ಕವಿಯಿತ್ರಿಯಾದ ಅಕ್ಕಮಹಾದೇವಿಯವರು ಕೂಡ ಈ ವೇದಿಕೆಯ ಒಂದು ಕೊಡುಗೆ ಎಂದು ಹೇಳಬಹುದು. ವಚನ ಪಾರಂಪರ್ಯದ ಮುಖ್ಯ ಹಾಗೂ ಮೊದಲ ಕವಿಗಳಲ್ಲಿ ಕವಿಯಿತ್ರಿ ಅಕ್ಕಮಹಾದೇವಿಯವರು ಕೂಡ ಒಳಗೊಂಡರು.
 • ವೀರಶಿವಭಕ್ತೆಯಾದ ಅಕ್ಕ ಶಿವನನ್ನು ಸಂಭೋದಿಸುತ್ತ ವಚನಗಳನ್ನು ರಚಿಸಿದರು. ಚಿಕ್ಕ ವಯಸ್ಸಿನಲ್ಲೇ ಸಕಲ ಸುಖವನ್ನು ತ್ಯಜಿಸಿದ ಅಕ್ಕ ಬಹಳಷ್ಟು ಪರೀಕ್ಷೆಗಳನ್ನು ಎದುರಿಸಿದರು. ಸಾಕ್ಷಾತ್ ಶಿವನನ್ನು ಪತಿ ಎಂದು ಸ್ವೀಕರಿಸಿದರು, ಲೌಕಿಕ ಜಗತ್ತನ್ನು ಪೂರ್ಣವಾಗಿ ತಪ್ಪಿಸಿಕೊಂಡರು. ಅವರ ವಚನಗಳಲ್ಲಿ ಸತ್ಯ, ತಾಳ್ಮೆ, ಸಮಾಧಾನ ಮುಂತಾದ ವಿಷಯಗಳು ಹೆಚ್ಚಾಗಿ ಬಂದರು.ಅವರ 'ಮಂತ್ರಗೋಪ್ಯ' ಮತ್ತು ಯೋಗಂಗಾತ್ರಿವಿಧಿ ಕನ್ನಡ ಸಾಹಿತ್ಯಕ್ಕೆ ಅವರ ವಿಶೇಷ ಕೊಡುಗೆ.

thumb|ಸರೋಜಿನಿ ನಾಯಿಡು

ಭಾರತದ ಕವಯಿತ್ರಿಯರುಸಂಪಾದಿಸಿ

 • ಭಾರತದ ಮೊಟ್ಟಮೊದಲ ಗವರ್‍ಣರನ್ನಾಗಿ ಸೇವೆ ಸಲ್ಲಿಸಿದ ಸರೋಜಿನಿ ನಾಯಿಡು ಅವರು ನಮ್ಮ ದೇಶದ ಕವಯಿತ್ರಿಯರಲ್ಲಿ ಪ್ರಸಿಧ್ಧರು.ಅವರನ್ನು "ಭಾರತದ ಕೋಗಿಲೆ" ಎಂಬ ಹೆಸರಿನಲ್ಲಿ ಗುರುತಿಸಿದರು. 'ಇಂಡಿಯನ್', 'ಇಂಡಿಯನ್ ಲವ್ ಸಾಂಗ್', 'ಟು ದ ಗಾಡ್ ಆಫ಼್ ಪೆಯ್‍ನ್', 'ಸ್ಟ್ರೀಟ್ ಕ್ರೈಸ್', 'ಪಾಸ್ಟ್ ಆಂಡ್ ಫ಼್ಯುಚರ್',' ಮೊದಲಾದ ಹಲವಾರು ಕವಿತೆಗಳನ್ನು ರಚಿಸಿದರು.
 • ೧೯೦೫ರಲ್ಲಿ ಅವರ ಪ್ರಥಮ ಕಾವ್ಯಸಂಕಲನ 'ದ ಗಾಲ್ಡನ್ ತ್ರೆಶಾಲ್ಡ್' ಪ್ರಕಟಿಸಿದರು. ಅವರ ಕವಿತೆಗಳು ಭಾರತದ ಹಲವಾರು ರಾಜಕಾರಣಿಗಳ ಅಚ್ಚುಮೆಚ್ಚಿಗೆ ಕಾರಣವಾಯಿತ್ತು. ಇಂಡೋ-ಇಂಗ್ಲೀಷ್ ಸಾಹಿತ್ಯದ 'ಕೀಟ್ಸ್' ಎಂದು ಕರೆಯಲಾಗುತ್ತಿರುವ ಟೊರು ದತ್ ಅವರೇ ಭಾರತದ ಮೊದಲನೇ ಆಂಗ್ಲಾ ಕವಯಿತ್ರಿ.
 • 'ಎ ಶೀಫ಼್ ಗ್ಲೀನ್ಡ್ ಇನ್ ಫ಼್ರೆಂಚ್ ಫ಼ೀಲ್ದ್ಸ್' ಎಂಬುದು ಅವರ ಅತ್ಯುತ್ತಮ ರಚನೆ.ಕೇವಲ ೨೧ ವರ್ಷ್‍ಗಳಲ್ಲೇ ಅವರು ಮೃತ್ಯುವಾದರು.
 • ಭಾರತದ ಅತಿ ಮಹತ್ವವಾದ ಸಾಹಿತ್ಯ ಬಹುಮಾನ 'ಸಾಹಿತ್ಯ ಅಕಾಡೆಮಿ ಫ಼ೆಲೋಷಿಪ್' ದೊರೆತ ಮೊದಲ ಸ್ತ್ರೀಯಾದ ಮಹಾದೇವಿ ವರ್ಮಾ ಒಂದು ಕವಯಿತ್ರಿ.
 • "ಆಧುನಿಕ ಇಂಗ್ಲೀಷ್ ಭಾರತೀಯ ಕಾವ್ಯದ ತಾಯಿ"ಎಂದು ಪರಿಚಿತರಾಗಿದ್ದ ಕಮಲಾ ಸುರಯ್ಯರವರು ಆಂಗ್ಲಾ ಭಾಷೆಯಲ್ಲಿ ಕವಿತೆಗಳನ್ನು ಹೆಚ್ಚಾಗಿ ಬರೆದರು. ಸ್ತ್ರೀ ವಿಷಯಗಳನ್ನು ತಮ್ಮ ಕವಿತೆಗಳಲ್ಲಿ ಮುಖ್ಯವಾಗಿ ವ್ಯಕ್ತಪಡಿಸಿದರು.
 • ೨೦ನೇ ಶತಮಾನದ ಭಾರತದ ಆಂಗ್ಲಭಾಷೆ ಕವಯಿತ್ರಿಯರಲ್ಲಿ ಹೆಸರುವಾಸಿಯಾದವರು ಸುಕೃತ ಪೋಲ್ ಕುಮಾರ್, ನಳಿನಿ ಪ್ರಿಯದರ್ಶಿನಿ, ರುಕ್ಮಿಣಿ ಭಯ ನಾಯರ್, ಮೀನ ಅಲ್ಕ್ಸಾಂಡರ್, ಸುಜಾತ ಭಟ್ ಮೊದಲಾದವರು.


ಕನ್ನಡದ ಕವಯಿತ್ರಿಯರುಸಂಪಾದಿಸಿ

 • ಹಾಗೆಯೇ, ತನ್ನ ವಚನಗಳ ಮೂಲಕ ಹಿಡೀ ಸ್ತ್ರೀ ಸಮೂಹದ ವಿಕಾರ ವಿಚಾರಗಳನ್ನು ಪ್ರಕಟಿಸಿದ ಕವಿಯಿತ್ರಿಗಳು ಆಯ್ದಕ್ಕಿ ಲಕ್ಕಮ್ಮ ಹಾಗೂ ಸೂಳೆ ಸಂಕವ್ವ. ಇವರಿಬ್ಬರ ಹೆಸರಿನಲ್ಲಿ ಒಂದು ವೈಶಿಷ್ಟ್ಯವಿದೆ. ಇವರ ಹೆಸರಿನ ಮೊದಲು ಭಾಗವು ಹಿಂದಿನ ಬದುಕನ್ನು ಸೂಚಿಸುತ್ತದೆ.
 • ಲಕ್ಕಮ್ಮನ ಕುಟುಂಬ ಬಡತನದಲ್ಲಿ ಕಷ್ಟಪಡುತ್ತಿದ್ದ ಕಾಲದಲ್ಲಿ, ಲಕ್ಕಮ್ಮನವರು ಹೊಲ ಮತ್ತು ಗದ್ದೆಗಳಲ್ಲಿ ಅಲ್ಲಲ್ಲಿ ಬಿದ್ದಿರುವ ಹಕ್ಕಿಯನ್ನು ಆರಿಸಿಕೊಂಡು ಊಟ ಮಾಡುತ್ತಿದ್ದರು, ಆದರಿಂದಲೇ ಅವರಿಗೆ ಆಯ್ದಕ್ಕಿ ಲಕ್ಕಮ್ಮ ಎಂಬ ಹೆಸರು ಬಂತು. ಸಂಕವ್ವ ಮೊದಲು ವೇಶ್ಯಾವೃತ್ತಿಯನ್ನು ಮಾಡುತ್ತಿದ್ದರು, ಇದರಿಂದಲೇ ಅವರಿಗೆ ಸೂಳೆ ಸಂಕವ್ವ ಎಂದು ಹೆಸರು ಬಂದದ್ದು. ಬಸವಣ್ಣನವರ ವಚನ ಚಳುವಳಿಯ ಮೂಲಕ ಸಂಕವ್ವನವರು ವೇಶ್ಯಾವೃತ್ತಿಯನ್ನು ಬಿಟ್ಟು ಶಿವಶರಣೆಯಾದರು.
 • ಇಂದಿನ ಕನ್ನಡ ಕವಯಿತ್ರಿಗಳಲ್ಲಿ ಪ್ರಶಸ್ತರಾದ ಕೆಲವರು -ಸರಸ್ವತಿ ಚಿಮ್ಮಳಗಿ, ವಿಜಯಲಕ್ಷ್ಮಿ ಕೊಸಗಿ, ಪ್ರಭಾವತಿ ದೇಸಾಯಿ, ರಮಾದೇವಿ, ಸರೋಜಿನಿ ಮಿರ್ಜಿ, ರೇಣುಕಾ ದೇವಿ ಹಾಗೂ ಶ್ರುತಿ ನಾಯಿಕ್. ಎನ್.ವಿ.ಭಾಗ್ಯಲಕ್ಷ್ಮಿಯವರು ತನ್ನ "ಬೆರಳ ಸಂದಿಯ ಬದುಕು" ಎಂಬ ಕವಿತಾ ಸಮಾಹಾರದ ಮೂಲಕ ಕನ್ನಡದ ಕಾವ್ಯರಚನಕ್ಕೆ ಒಂದು ಹೊಸ ಗತಿಯನ್ನು ತೋರಿದರು.
 • ಈ ಸಮಾಹಾರದಲ್ಲಿ ಅವರು ಅವಿವಾಹಿತ ಹೆಣ್ಣಿನ ಅಂತರಂಗದ ನೋವನ್ನು ಸಮೂಹದ ಮುಂದೆ ಸ್ಪಷ್ಟಪಡಿಸಿದರು. ಈ ಕೃತಿಯು ವಿವಾಹ ಮಾರುಕಟ್ಟೆಯಲ್ಲಿ ತನ್ನನ್ನು ಒಪ್ಪಿಸಿಕೊಳ್ಳುವುದಕ್ಕಾಗಿ ಅವಿವಾಹಿತ ಹೆಣ್ಣು ಅನುಭವಿಸುವ ಕಷ್ಟವನ್ನು ಬಹಳ ಬಹಿರಂಗವಾಗಿ ವ್ಯಕ್ತಪಡಿಸಿದರು.

ಆಂಗ್ಲ ಭಾಷೆಯ ಕವಯಿತ್ರಿಯರುಸಂಪಾದಿಸಿ

 • ಸಿಲ್ವಿಯ ಪ್ಲಾತ್, ಕ್ರಿಸ್ಟಿನಾ ರೊಸೆಟ್ಟಿ, ಎಲಿಜ಼ಬೆತ್ ಬಾರೆಟ್,ಎಮಿಲಿ ಡಿಕ್ಕಿನ್ಸನ್, ಮಾರ್ಗರೆಟ್ ವಾಕರ್, ಮ್ಯಾರಿ ಮಿಲ್ಲರ್ ಆಂಗ್ಲ ಭಾಷೆಯ ಕವಯಿತ್ರಿಯರಲ್ಲಿ ಕೆಲವರು.. "ಪ್ರಣಯ"ಎಂಬ ವಿಷಯದ ಕವಿತೆಗಳಲ್ಲೂ ಪುರುಷಾಧಿಪತ್ಯ ತೋರುವಾಗ ಅದರಲ್ಲಿ ಜನಾಧಿಪತ್ಯದ ಮೌಲ್ಯವು ಕಳೆದುಹೋಗುತ್ತಿದೆ ಎಂದು ವ್ಯಕ್ತಪಡಿಸಿ "ಪ್ರಣಯ" ವಿಷಯವು ವೈವಿಧ್ಯ ದೃಷ್ಟಿಯಿಂದ ಬರೆದ ಫ಼್ರೆಂಚ್ ಭಾಷೆಯ ಮಹಾ ಕವಯಿತ್ರಿಯೇ ಮ್ಯಾರಿ ದೆ ಫ಼್ರೇನ್ .
 • ಹಾಗೆಯೇ, ಓದುಗಾರರ ಪ್ರಶಂಸೆಗಾಗಿಯೋ ಅಥವಾ ಆರ್ಥಿಕ ಲಾಭಕ್ಕಾಗಿಯೋ ಸ್ತ್ರೀ ಸೌಂದರ್ಯವು ನೀಚ ರೀತಿಯಲ್ಲಿ ಪ್ರಕಟಿಸಿ -ಅಂದರೆ-ಲೈಂಗಿಕತೆಯನ್ನು ಒಳಗೊಳ್ಳಿಸಿ ಬರೆದ ಕವಿತೆಗಳ ಅಧಾರ್ಮಿಕತೆಯನ್ನು ತನ್ನ ಕವಿತೆಗಳ ಮೂಲಕ ಎತ್ತಿತೋರಿಸಿದ ಉರ್ದು ಭಾಷೆಯ ಕವಯಿತ್ರಿಯಾದ ಫ಼ಹ್ಮಿದ ರಿಯಾಜ಼್,ಸ್ವೀಡ್ನ್‍ನ ಅನ್ನ ಮರಿಯ ಮೊದಲಾದವರು ಚರಿತ್ರದ ಪುಟಗಳಲ್ಲಿ ಎಂದಿಗೂ ಜೀವಿಸುತ್ತಾರೆ.
 
ಸಿಲ್ವಿಯ ಪ್ಲಾತ್
 
ಎಮಿಲಿ ಡಿಕ್ಕಿನ್‍ಸನ್

ಉಲ್ಲೇಖಸಂಪಾದಿಸಿ