ಊಟದ ಶಿಷ್ಟಾಚಾರಗಳು ತಿನ್ನುವ ಸಮಯದಲ್ಲಿ ಅನುಸರಿಸುವಂತಹ ಸಭ್ಯಾಚಾರದ ನಿಯಮಗಳು, ಇವುಗಳಲ್ಲಿ ಪಾತ್ರೆಗಳನ್ನು ಉಪಯೋಗಿಸುವ ಕ್ರಮವೂ ಒಳ ಗೊಂಡಿರಬಹುದು. ವಿವಿಧ ಸಂಸ್ಕೃತಿಗಳು ವಿವಿಧ ರೀತಿಯ ಊಟದ ಶಿಷ್ಟಾಚಾರ ನಿಯಮಗಳನ್ನು ಹೊಂದಿರುತ್ತವೆ. ಹಲವು ಊಟದ ಶಿಷ್ಟಾಚಾರಗಳು ಅಭ್ಯಾಸಗಳಿಂದ ಕೂಡಿ ರುತ್ತವೆ. ಉದಾಹರಣೆಗೆ, ಸಾಮಾನ್ಯವಾಗಿ ಮೇಜಿನ ಮೇಲೆ ಮೊಣಕೈಗಳನ್ನು ಊರಿ ಊಟಮಾಡುವುದು ಅಸಭ್ಯವೆನಿಸುತ್ತದೆ.[] ಪ್ರತಿಯೊಂದು ಕುಟುಂಬ ಅಥವಾ ಪಂಗಡಗಳು ತಮ್ಮದೇ ಆದ ರೀತಿ-ರಿವಾಜು, ಸಂಸ್ಕಾರ-ಸಂಸ್ಕೃತಿ, ನೀತಿ-ನಿಯಮಗಳನ್ನು ಅನುಸರಿಸುತ್ತವೆ.

Table Manners in the Nursery (1916)

ಆಫ್ರಿಕಾ

ಬದಲಾಯಿಸಿ

ಬಹಳಷ್ಟು ಆಫ್ರಿಕನ್ ದೇಶಗಳಲ್ಲಿ, ಕಟ್ಲರಿಗಳನ್ನು ಉಪಯೋಗಿಸದೆ ಊಟ ಮಾಡುತ್ತಾರೆ, ಸಾಮುದಾಯಿಕ ಖಾದ್ಯವನ್ನು (ಅಥವಾ ಖಾದ್ಯಗಳು) ತಮ್ಮ ಬಲಗೈಯಿಂದ ತಿನ್ನುತ್ತಾರೆ. ಮುಸ್ಲಿಮರು ಊಟಕ್ಕಿಂತ ಮೊದಲು ಗ್ರೇಸ್ (ಬಿಸ್ಮಿಲಾಹ್) ಎಂದು ಹೇಳುತ್ತಾರೆ.

  • ಸಮಯಕ್ಕಿಂತಲೂ ಮೊದಲೇ ಊಟಕ್ಕೆ ಹಾಜರಾಗುವುದು ಅಸಭ್ಯ; ನಿರೀಕ್ಷಿಸಿದ ಸಮಯಕ್ಕಿಂತಲೂ 15–30 ನಿಮಿಷ ತಡವಾಗಿ ಹಾಜರಾಗಲು ಪ್ರಯತ್ನಿಸಿ.
  • ಚಪಾತಿ ಅಥವಾ ಉಗಾಲಿಯನ್ನು ತಿನ್ನಲು ಚಾಕು ಅಥವಾ ಫೋರ್ಕುಗಳನ್ನು ಬಳಸುವುದನ್ನು ಬಡಾಯಿಕೋರನೆಂದು ಪರಿಗಣಿಸಲಾಗುತ್ತದೆ.
  • ಚಾಪೆ ಅಥವಾ ಕಾರ್ಪೆಟ್ ಮೇಲೆ ಕುಳಿತು ತಿನ್ನುವುದಾಗಿದ್ದರೆ, ನಿಮ್ಮ ಪಾದವನ್ನು ಹೊರಗೆ ತೋರುವಂತೆ ಕುಳಿತುಕೊಳ್ಳಬೇಡಿ, ಇದನ್ನು ಬಹಳ ಅಸಭ್ಯವೆಂದು ಪರಿಗಣಿಸಲಾಗುತ್ತದೆ.
  • ಮಕ್ಕಳು ದೊಡ್ಡವರ ಜೊತೆ ತಿನ್ನಬಹುದು, ಹಾಗೆಂದು ತಿಳಿಸಿದ್ದಲ್ಲಿ ಮಾತ್ರ.
  • ಬಹಳಷ್ಟು ತಾನ್‌ಜೇನಿಯನ್ನರ ಊಟದ ಶಿಷ್ಟಾಚಾರಗಳು ಬ್ರಿಟಿಷರ ಊಟದ ಶಿಷ್ಟಾಚಾರಗಳಿಗೆ ಹೋಲುತ್ತವೆ.
  • ಬಾಯಿಯಲ್ಲಿ ಆಹಾರವನ್ನಿಟ್ಟುಕೊಂಡು ನಗುವುದು ಅಥವಾ ಮಾತನಾಡುವುದನ್ನು ಬಹಳ ಅಸಭ್ಯವೆಂದು ಪರಿಗಣಿಸಲಾಗುತ್ತದೆ.
  • ಆತಿಥ್ಯ ನೀಡುವವರಿಗೆ ಊಟವು ಎಷ್ಟು ಚೆನ್ನಾಗಿದೆ ಎಂದು ಗೊತ್ತಿದ್ದರೂ, ಉತ್ಪ್ರೇಕ್ಷೆ ಮಾಡಬಾರದು; ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದಾಗಿದೆ.
  • ತಿನ್ನುವಾಗ ನಿಮ್ಮ ಮುಖ, ಮೂಗು, ಕಿವಿ ಮತ್ತು ಕೂದಲನ್ನು ಮುಟ್ಟಿಕೊಳ್ಳುವುದನ್ನು ದೂರವಿರಿಸಿ.
  • ಬಾಟಲಿಯಿಂದ ನೇರವಾಗಿ ಬಿಯರನ್ನು ಕುಡಿಯುವುದು ಅಸಭ್ಯ ವರ್ತನೆಯಾಗಿದೆ. ಗಾಜಿನ ಲೋಟಕ್ಕೆ ಬಗ್ಗಿಸಿ ಕುಡಿಯುವುದನ್ನು ನಿರೀಕ್ಷಿಸಲಾಗುತ್ತದೆ.
  • ಕೆಲವು ಪ್ರದೇಶಗಳಾದ ಝಂಜಿಬಾರ್ ನಂತಹವುಗಳಲ್ಲಿ, ಕೆಲವು ಊಟದ ಮೇಜುಗಳನ್ನು ಸ್ತ್ರೀ ಪುರುಷರಿಗೆಂದು ಪ್ರತ್ಯೇಕಿಸಲಾಗಿರುತ್ತದೆ.

ಏಷ್ಯಾ ಮತ್ತು ಒಷಿಯಾನಿಯಾ

ಬದಲಾಯಿಸಿ
 
ಬ್ರೆಡ್‌ ಅನ್ನು ಮುರಿಯುತ್ತಿರುವುದು, ಒಂದು ಸಾಮಾನ್ಯವಾದ ಊಟದ ಸಮಯದಲ್ಲಿ
  • ಅತಿಥಿಗಳು ಯಾವಾಗಲೂ ಬಾಗಿಲಿನಿಂದ ದೂರ ಕುಳಿತುಕೊಳ್ಳಬೇಕು; ಒಂದು ವೇಳೆ ಅತಿಥಿಗಳಿಲ್ಲದೇ ಇದ್ದಲ್ಲಿ ಅಜ್ಜಿ ತಾತಂದಿರು ಬಾಗಿಲಿನಿಂದ ದೂರವಿರುವ ಸ್ಥಳದಲ್ಲಿ ಕುಳಿತು ಕೊಳ್ಳಬೇಕು.
  • ಆ ಮನೆಯ ರೀತಿ ರಿವಾಜಿಗನುಸಾರವಾಗಿ, ಊಟಕ್ಕಿಂತ ಮೊದಲೇ ಅಥವಾ ನಂತರ ಪ್ರಾರ್ಥನೆಯನ್ನು ಮಾಡುತ್ತಾರೆ.
  • ಅತಿಥಿಗಳಿಗೆ ಮೊದಲು ಆಹಾರ ಬಡಿಸಲಾಗುತ್ತದೆ ಮತ್ತು ಹೆಚ್ಚು ತಿನ್ನಬೇಕೆಂದು ನಿರೀಕ್ಷಿಸಲಾಗುತ್ತದೆ ಹಾಗೂ ಸತ್ಕಾರ ನೀಡುವವರು ಕೊನೆಯಲ್ಲಿ ಊಟ ಪ್ರಾರಂಭಿಸಿ ಹಾಗೂ ಕಡಿಮೆ ತಿನ್ನುತ್ತಾರೆ.
  • ಅವನು/ಅವಳು ಅವರಿಗೆ ಸಾಕಾಗುವಷ್ಟು ತಿನ್ನಲು ಸತ್ಕಾರ ನೀಡುವವರು ಹೆಚ್ಚು ತಿನ್ನುವಂತೆ ಒತ್ತಾಯಿಸುವವರೆಗೂ ಅತಿಥಿಗಳು ಹೆಚ್ಚು ಹೆಚ್ಚು ತಿನ್ನುವುದನ್ನು ತಡೆದು ಕೊಳ್ಳಬೇಕು. ಒಬ್ಬ ಆತಿಥ್ಯ ನೀಡುವವ/ನೀಡುವವಳು ಅತಿಥಿಗಳಿಗೆ ಹೆಚ್ಚು ತಿನ್ನುವಂತೆ ಒತ್ತಯಿಸಿದರೆ ಅವರನ್ನು ತುಂಬಾ ಒಳ್ಳೆಯ ಹಾಗೂ ದಯಾಳು ಎಂದು ಪರಿಗಣಿಸಲಾಗುತ್ತದೆ. ಆತಿಥ್ಯ ನೀಡುವವರು ಯಾವಾಗಲೂ ಕನಿಷ್ಟ ಮೂರು ಬಾರಿಯಾದರೂ ಅತಿಥಿಗಳಿಗೆ ಹೆಚ್ಚು ಬೇಕಾ ಎಂದು ಕೇಳಬೇಕು, ಹಾಗೂ ಅತಿಥಿಗಳು ಕನಿಷ್ಟ ಮೂರು ಬಾರಿಯಾದರೂ ನಿರಾಕರಿಸಬೇಕು.
  • ಅತಿಥಿಗಳಿಗೆ ಯಾವಾಗಲೂ ಆಹಾರದ ಉತ್ತಮ ಭಾಗವನ್ನು ನೀಡಲಾಗುತ್ತದೆ. ಹೇಗಾದರೂ ತಿನ್ನುವುದನ್ನು ನಿರಾಕರಿಸುವುದನ್ನು ಕೆಟ್ಟ ವರ್ತನೆಯೆಂದು ಪರಿಗಣಿಸಲಾಗುತ್ತದೆ, ಮತ್ತು ಅತಿಥಿಗಳು ತಿನ್ನಲೇಬೇಕು. ಇದೇರೀತಿಯಾಗಿ, ಆಹಾರವನ್ನು ನೀಡಲಾಗದೆ ಇರುವುದು ಅಥವಾ ಗಮನ ನೀಡದೆ ಇರುವುದು ಆತಿಥ್ಯ ನೀಡುವವರ ಕೆಟ್ಟ ಶಿಷ್ಟಾಚಾರವೆಂದು ಪರಿಗಣಿಸ ಲಾಗುತ್ತದೆ.
  • ಸಾಂಪ್ರದಾಯಿಕವಾಗಿ ಆಹಾರವನ್ನು ಖಾಲಿ ಕೈಗಳಿಂದ ತಿನ್ನಲಾಗುತ್ತದೆ. ಆದಾಗ್ಯೂ, ಆತಿಥ್ಯ ನೀಡುವವರ ವೈಯಕ್ತಿಕ ಸಂಸ್ಕೃತಿಯಂತೆ ಕೆಲವು ಬಾರಿ ಕಟ್ಲೆರಿಯನ್ನು ನೀಡಲಾಗುತ್ತದೆ. ಕೈಗಳಿಂದ ತಿನ್ನುವಾಗ ತಮ್ಮ ಬಲಗೈಯನ್ನು ಮಾತ್ರ ಬಳಸಬೇಕು. ಅನ್ನ ಹಾಗೂ ಇತರೆ ಉದುರಾದ ಆಹಾರ ಪದಾರ್ಥಗಳನ್ನು ತಿನ್ನುವಾಗ ಅದನ್ನು ಬೀಳಿಸದ ಹಾಗೆ ತಿನ್ನಲು ಸೂಕ್ತ ಕ್ರಮಗಳಿವೆ, ಇವನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಕಲಿಯಬಹುದಾಗಿದೆ. ಆಹಾರವನ್ನು ಎಸೆಯುವುದನ್ನು ತಿರಸ್ಕಾರದಿಂದ ನೋಡಲಾಗುವುದು. ತಿನ್ನಲು ಕಟ್ಲೆರಿಯನ್ನು ಒದಗಿಸಿದರೆ ಸಾಮಾನ್ಯವಾಗಿ ಅವು ಚಮಚೆ ಮತ್ತು ಫೋರ್ಕ್‌ಗಳಾಗಿರುತ್ತವೆ, ಏಕೆಂದರೆ ಆಫ್ಘಾನಿ ಆಹಾರವನ್ನು ತಿನ್ನಲು ಬಹಳ ವಿರಳವಾಗಿ ಚಾಕುವನ್ನು ಬಳಸಲಾಗುತ್ತದೆ. ಕಟ್ಲೆರಿಯನ್ನು ಒದಗಿಸಿದಾಗ್ಯೂ ಕೈಯಲ್ಲಿ ತಿನ್ನುವುದನ್ನು ಒಪ್ಪಿಕೊಳ್ಳಲಾಗುತ್ತದೆ.
  • ಸೂಪ್‌ಗಳನ್ನು ಬ್ರೆಡ್ ಅನ್ನು ಅದರಲ್ಲಿ ಅದ್ದಿಕೊಂಡು ತಿನ್ನಲಾಗುತ್ತದೆ.
  • ಉಳಿದ ಅಲ್ಪ ಸ್ವಲ್ಪ ಆಹಾರವನ್ನು ಬ್ರೆಡ್ ಚೂರುಗಳ ಜೊತೆ ಒಟ್ಟುಗೂಡಿಸಲಾಗುತ್ತದೆ.
  • ಕೆಲವು ಬಾರಿ ಒಂದು ದೊಡ್ಡ ತಟ್ಟೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ತಿನ್ನಲಾಗುತ್ತದೆ. ಒಬ್ಬರು ಅವರ ಕಡೆ ಇರುವುದನ್ನು ಮಾತ್ರ ತಿನ್ನಬೇಕು.
  • ಒಂದು ವೇಳೆ ಮೇಜಿನ ಮೇಲೆ ತಿನ್ನುವಾಗ ಬ್ರೆಡ್ ನೆಲದ ಮೇಲೆ ಬಿದ್ದರೆ, ಆ ಬ್ರೆಡ್ ಚೂರನ್ನು ಎತ್ತಿಕೊಂಡು, ಮುತ್ತಿಟ್ಟು, ಹಾಗೂ ಬೇರೆ ಕಡೆ ಹಾಕುವ ಮೊದಲೆ ಹಣೆಗೆ ಮುಟ್ಟಿಸಿ ಕೊಳ್ಳಬೇಕು.
  • ನೆಲದ ಮೇಲೆ ಕುಳಿತು ತಿನ್ನುತ್ತಿದ್ದರೆ, ನಿಮ್ಮ ಪಾದಗಳು ಆಹಾರಕ್ಕೆ ತಗುಲದಂತೆ ಎಚ್ಚರವಹಿಸಿ.
  • ಅಡಿಗೆ ಮಾಡಿದವರಿಗೆ ಅಭಿನಂದನೆ ಸಲ್ಲಿಸುವುದು ವಾಡಿಕೆ; ಆದಾಗ್ಯೂ, ಹೊಗಳಿಕೆಗಳನ್ನು ಅತ್ಯಂತ ಸಭ್ಯ ರೀತಿಯಲ್ಲಿ ಹೇಳಬೇಕು.
  • ಸಾಂಪ್ರದಾಯಿಕವಾಗಿ, ಮನೆಯ ಹಿರಿಯರು ಊಟವನ್ನು ಬಡಿಸುತ್ತಾರೆ. ಮೊದಲು ಒಂದು ದೊಡ್ಡ ಜಗ್ ಹಾಗೂ ಒಂದು ದೊಡ್ಡ ಬಟ್ಟಲನ್ನು ಕೈತೊಳೆಯಲು ತರಲಾಗುತ್ತದೆ.

ಜಗ್ ಮತ್ತು ಬಟ್ಟಲು ಯಾವುದಾದರೂ ಒಂದು ಲೋಹದಿಂದ ತಯಾರಿಸಿದವಾಗಿರುತ್ತವೆ. ನಂತರ ಊಟವನ್ನು ಬಡಿಸಲಾಗುತ್ತದೆ.ಆ ನಂತರದಲ್ಲಿ ಹಣ್ಣು ಮತ್ತು ಟೀ ನೀಡಬಹುದು.

  • ಊಟದ ನಂತರ ಒಣ ಹಣ್ಣುಗಳು, ಸಿಹಿತಿಂಡಿಗಳು ಮತ್ತು ಸಕ್ಕರೆ ತುಂಡುಗಳೊಂದಿಗೆ ಟೀಯನ್ನು ನೀಡಲಾಗುತ್ತದೆ. ಟೀಯನ್ನು ನೀಡಿದಾಗ, ಅತಿಥಿಗಳ ಕಪ್ ಯಾವಾಗಲೂ ಖಾಲಿಯಿರಬಾರದು, ಮತ್ತು ತಿಂಡಿಗಳನ್ನು ಕೊಡಬೇಕು. ಅವನಾಗಲಿ ಅಥವಾ ಅವಳಾಗಲೀ ಅತಿಥಿಗಳನ್ನು ಟೀ ಬೇಕೋ ಬೇಡವೋ ಎಂಬುದನ್ನು ಎಂದಿಗೂ ಕೇಳಬಾರದು. ಆತಿಥ್ಯ ನೀಡುವವರು ಟೀಯನ್ನು ಕೊಡಬೇಕು. ಅತಿಥಿಯು ಅವನಿಗಾಗಿ ಅಥವಾ ಅವಳಿಗಾಗಿ ಎಂದಿಗೂ ಟೀಯನ್ನು ತೆಗೆದುಕೊಳ್ಳುವುದಿಲ್ಲ, ಅದನ್ನು ಪುನಃ ಭರ್ತಿ ಮಾಡಿಕೊಳ್ಳುವುದೂ ಇಲ್ಲ. ಆತಿಥ್ಯ ನೀಡುವವರು ಅತಿಥಿಗಳಿಗೆ ತೃಪ್ತಿಯಾಗುವವರೆಗೂ ಅವರ ಕಪ್‌ಗಳನ್ನು ತುಂಬಿಸುವ ಕಡೆಗೆ ಗಮನ ನೀಡಬೇಕು. ಆಫ್ಘನ್ನರು ಹೆಚ್ಚು ಪ್ರಮಾಣದ ಟೀಯನ್ನು ಕುಡಿಯುತ್ತಾರೆ ಮತ್ತು ಒಂದು ಬಾರಿ ಕುಳಿತರೆ 2-3 ಕಪ್‌ಗಳಷ್ಟು ಕುಡಿಯುವುದು ಸಾಮಾನ್ಯ. ಒಮ್ಮೆ ಅತಿಥಿಗಳು ಟೀ ಕುಡಿಯುವುದನ್ನು ಮುಗಿಸಿದಲ್ಲಿ, ಅವರ ಟೀ ಕಪ್ ಅನ್ನು ತಿರುಗಿಸಿಡಬೇಕು, ಅದು ಅವರಿಗೆ ಸಾಕೆಂಬ ಸಂಕೇತವಾಗಿರುತ್ತದೆ.
  • ಒಬ್ಬರ ಬಾಯಿ ತುಂಬಾ ಆಹಾರವಿರುವಾಗ ತಿನ್ನುವುದು ಅಥವಾ ಮಾತಾಡುವುದನ್ನು ತಿರಸ್ಕಾರದಿಂದ ನೋಡಲಾಗುತ್ತದೆ.
  • ಒಬ್ಬರಿಗೆ ಅತೀ ಹಸಿವಾದಾಗಲೂ ಕೂಡ, ಊಟದ ಮೇಜಿನ ಬಳಿ ತಮ್ಮ ಕಟ್ಟಾಸೆಯನ್ನು ತಡೆದುಕೊಳ್ಳಬೇಕು.
  • ಒಬ್ಬರ ಬೆನ್ನಿಗೆ ಬೆನ್ನು ಮಾಡಿ ಯಾರೂ ಕುಳಿತುಕೊಳ್ಳಬಾರದು, ಅದರಲ್ಲೂ ಅತಿಥಿ ಅಥವಾ ಹಿರಿಯರ ಹಿಂದೆ. ಒಬ್ಬರ ಮುಂದೆ ಅವರೆಡೆ ಕಾಲು ಚಾಚಿ ಕುಳಿತುಕೊಳ್ಳಬಾರದು, ವಿಶೇಷವಾಗಿ ಹಿರಿಯರ ಅಥವಾ ಅತಿಥಿಗಳ ಮುಂದೆ.
  • ಊಟದ ನಂತರ, ಒಂದು ಜಗ್ ನೀರನ್ನು ಕೈತೊಳೆದುಕೊಳ್ಳಲು ನೀಡಲಾಗುತ್ತದೆ. ಕರವಸ್ತ್ರವನ್ನೂ ನೀಡಬಹುದು.

ಸಾಮಾನ್ಯವಾಗಿ, ಚೀನೀಯರ ಊಟದ ಶಿಷ್ಟಾಚಾರಗಳು ಪಶ್ಚಿಮಕ್ಕಿಂತ ಅನೌಪಚಾರಿಕವಾಗಿರುತ್ತವೆ, ಆದಾಗ್ಯೂ ಉನ್ನತ ಮಟ್ಟದ ಸಾಮಾಜಿಕ ವರ್ತನೆಗಳಲ್ಲಿ ಸಾಮುದಾಯಿಕ ಶೈಲಿಯಲ್ಲಿ ಊಟ ಬಡಿಸುವಾಗ ಇತರೆ ಅತಿಥಿಗಳೊಂದಿಗೆ ಹೆಚ್ಚು ನಿಯಮಗಳನ್ನು ಪಾಲಿಸಬೇಕಾಗುತ್ತದೆ

ಚಾಪ್‌ಸ್ಟಿಕ್‌ ಬಳಕೆ

ಬದಲಾಯಿಸಿ
  • ಚಾಪ್‌ಸ್ಟಿಕ್‌ಗಳನ್ನು ಯಾವಾಗಲೂ ಸರಿಯಾಗಿ ಹಿಡಿಯಬೇಕು, ಅಂದರೆ ಬಲಗೈನ ಹೆಬ್ಬೆರಳು ಮತ್ತು ಮೊದಲೆರಡು ಬೆರಳುಗಳ ಮಧ್ಯೆ.
  • ಬಳಸದೆ ಇದ್ದಲ್ಲಿ, ಚಾಪ್‌ಸ್ಟಿಕ್‌ಗಳನ್ನು ಸರಿಯಾಗಿ ಮೇಜಿನ ಮೇಲೆ ಎರಡೂ ಕಡ್ಡಿಗಳು ಅಚ್ಚುಕಟ್ಟಾಗಿ ಎರಡು ಬದಿಗಳು ಸೇರಿರುವಂತೆ ಇಡಬೇಕು. ಆ ತರಹ ಮಾಡಲು ಸಾಧ್ಯವಾಗ ದಿದ್ದಲ್ಲಿ ಅದನ್ನು ಹೆಣವನ್ನು ಫನರಲ್‌ಗಿಂತಲೂ ಮೊದಲೇ ಕಾಫಿನ್‌ನಿಂದ ಎದ್ದು ಬರುವಂತೆ ಮತ್ತು ಪ್ರಮುಖ ಮರ್ಯಾದೋಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
  • ಚಾಪ್‌ಸ್ಟಿಕ್‌ಗಳನ್ನು ಸಾಂಪ್ರದಾಯಿಕವಾಗಿ ಬಲಗೈಯಲ್ಲಿ ಮಾತ್ರ ಹಿಡಿದುಕೊಳ್ಳಲಾಗುತ್ತದೆ, ಆತ ರೊಡ್ಡಗೈಯವನಾಗಿದ್ದರೂ ಸಹ. ಆದಾಗ್ಯೂ ಚಾಪ್‌ಸ್ಟಿಕ್‌ಗಳು ಎರಡೂ ಕೈಯಲ್ಲಿ ಕಂಡು ಬಂದರೆ, ಕೆಲವರು ಈಗಲೂ ಅದನ್ನು ಅನುಚಿತ ಶಿಷ್ಟಾಚಾರವೆಂದು ಪರಿಗಣಿಸುತ್ತಾರೆ.
  • ಎಂದಿಗೂ ನಿಮ್ಮ ಚಾಪ್‌ಸ್ಟಿಕ್‌ಗಳನ್ನು ಬೇರೆಯವರೆಡೆಗೆ ತೋರಿಸಬಾರದು. ಇದು ಆ ವ್ಯಕ್ತಿಯನ್ನು ಅಪಮಾನ ಮಾಡಿದಂತಾಗುತ್ತದೆ, ಹಾಗೂ ಅದು ಪ್ರಮುಖವಾದ ಮರ್ಯಾದೋಲ್ಲಂಘನೆಯಾಗಿದೆ.
  • ಎಂದಿಗೂ ಚಾಪ್‌ಸ್ಟಿಕ್‌ಗಳನ್ನು ನಿಮ್ಮ ಕೈಗಳನ್ನು ಚಾಚಿ ತೂಗಾಡಿಸಬೇಡಿ.
  • ಡ್ರಮ್‌ಸ್ಟಿಕ್‌ಗಳ ಹಾಗೆ ಎಂದಿಗೂ ಚಾಪ್‌ಸ್ಟಿಕ್‌ಗಳನ್ನು ಎತ್ತಿ ಹೊಡೆಯಬೇಡಿ. ನೀವು ಭಿಕ್ಷುಕರೆಂದು ಮೇಜಿನ ಬಳಿ ಇತರರೊಡನೆ ಹೇಳುವುದು ಸರಿಯಲ್ಲ.
  • ಎಂದಿಗೂ ನಿಮ್ಮ ಚಾಪ್‌ಸ್ಟಿಕ್‌ಗಳನ್ನು ತಟ್ಟೆ ಅಥವಾ ಬಟ್ಟಲುಗಳನ್ನು ತಳ್ಳಲು ಬಳಸಬೇಡಿ.
  • ಎಂದಿಗೂ ಚಾಪ್‌ಸ್ಟಿಕ್‌ಗಳನ್ನು ನೆಕ್ಕಬೇಡಿ.
  • ಯಾವ ಖಾದ್ಯವನ್ನು ತೆಗೆದುಕೊಳ್ಳಬೇಕೆಂಬ ಗೊಂದಲದಿಂದ ದೂರವಿರಲು ಚಾಪ್‌ಸ್ಟಿಕ್‌ಗಳನ್ನು ಚಾಚುವುದಕ್ಕೆ ಮೊದಲೆ ಏನನ್ನು ತೆಗೆದು ಕೊಳ್ಳಬೇಕೆಂದು ನಿರ್ಧರಿಸಿ.
  • ಮೇಜಿನ ಬಳಿ ತಿನ್ನದೆ ಇರುವಾಗ ಚಾಪ್‌ಸ್ಟಿಕ್‌ಗಳನ್ನು ಕೆಳಗಿಡಿ, ಅವನ್ನು ತಟ್ಟೆ ಅಥವಾ ಬಟ್ಟಲಿನ ಮೇಲೆ ಸಮಾಂತರವಾಗಿ ಇಡಿ; ಚಾಪ್‌ಸ್ಟಿಕ್‌ ಇಡುವ ಸ್ಟ್ಯಾಂಡ್ ಕೂಡಾ ಬಳಸಬಹುದು (ಕೆಲವು ಹೋಟೆಲುಗಳಲ್ಲಿ ಕಾಣಬಹುದು).
  • ಆಹಾರವನ್ನು ತೆಗೆದುಕೊಳ್ಳುವಾಗ, ಫೋರ್ಕ್‌ ತರಹ ಆಹಾರವನ್ನು ಇರಿಯಲು ಚಾಪ್‌ಸ್ಟಿಕ್‌ ತುದಿಯನ್ನು ಬಳಸಬೇಡಿ; ತರಕಾರಿಗಳಂತಹ ದೊಡ್ಡ ಪದಾರ್ಥಗಳನ್ನು ಹರಿಯಲೂ ಸಹ ಬಳಸಬಾರದು. ಕೆಲವು ಬಾರಿ, ಚೆರ್ರಿ ಟೊಮ್ಯಾಟೊ ಅಥವಾ ಫಿಶ್‌ಬಾಲ್‌ಗಳಂತಹ ಅತಿ ಚಿಕ್ಕ ಪದಾರ್ಥಗಳನ್ನು ಚಾಪ್‌ಸ್ಟಿಕ್‌ನಲ್ಲಿ ತೆಗೆದು ಕೊಳ್ಳುವುದು ಕಷ್ಟವಾಗುತ್ತದೆ, ಆದರೆ ಸಾಂಪ್ರದಾಯಿಕವಾದಿಗಳು ಇದಕ್ಕಾಗಿ ಮುಖ ಸಿಂಡರಿಸಿಕೊಳ್ಳುತ್ತಾರೆ.
  • ಅನ್ನದ ಬಟ್ಟಲಿನಲ್ಲಿ ಎಂದಿಗೂ ಚಾಪ್‌ಸ್ಟಿಕ್‌ಗಳನ್ನು ನಿಲ್ಲಿಸಬೇಡಿ, ಇದು ಖಾಯಿಲೆ ಬಿದ್ದವರ ಪರವಾಗಿ ದೇವಸ್ಥಾನಗಳಲ್ಲಿ ಹಚ್ಚುವ ಧೂಪಕಡ್ಡಿಗಳನ್ನು ಹೋಲುವಂತಿರುವುದರಿಂದ ಹಾಗೆ ಮಾಡಬಾರದು. ಇದನ್ನು ಸಂಪೂರ್ಣವಾಗಿ ಊಟದ ಮೇಜಿನ ಮರ್ಯಾದೋಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
ಸಾಮುದಾಯಿಕ ಚಾಪ್‌ಸ್ಟಿಕ್‌ಗಳು
ಬದಲಾಯಿಸಿ
  • ಸಾಮುದಾಯಿಕ ಚಾಪ್‌ಸ್ಟಿಕ್‌ಗಳು ಇದ್ದಲ್ಲಿ, ಎಲ್ಲರಿಗಾಗಿ ಇರುವ ತಟ್ಟೆಯಿಂದ ನಿಮ್ಮ ಸ್ವತಃ ಚಾಪ್‌ಸ್ಟಿಕ್‌ಗಳನ್ನು ಉಪಯೋಗಿಸುವುದು ಅಸಭ್ಯವೆನಿಸುತ್ತದೆ, ಅಥವಾ ಸಾಮುದಾಯಿಕ ಚಾಪ್‌ಸ್ಟಿಕ್‌ಗಳನ್ನು ಬಳಸಿ ತಿನ್ನಬಹುದು.
  • ನಿಮ್ಮ ಚಾಪ್‌ಸ್ಟಿಕ್‌ನ ಮೊಂಡಾದ ತುದಿಯನ್ನು ಸಾಮುದಾಯಿಕ ಖಾದ್ಯವನ್ನು ಇನ್ನೊಬ್ಬರಿಗೆ ನೀಡಲು ಬಳಸುವುದು ಅಸಭ್ಯ; ಅದರ ಬದಲಿಗೆ ಸಾಮುದಾಯಿಕ ಚಾಪ್‌ಸ್ಟಿಕ್‌ಗಳನ್ನು ಬಳಸಿ ಬಡಿಸಿ.
  • ಸಾಮುದಾಯಿಕ ಚಾಪ್‌ಸ್ಟಿಕ್‌ಗಳು ಲಭ್ಯವಿರದೆ ಇದ್ದಲ್ಲಿ ನಿಮ್ಮ ಚಾಪ್‌ಸ್ಟಿಕ್‌ನ ಮೊಂಡಾದ ತುದಿಯನ್ನು ಖಾದ್ಯಗಳನ್ನು ಅತಿಥಿಗಳಿಗೆ ಬಡಿಸಲು ಬಳಸಬಹುದಾಗಿದೆ.
  • ಮನೆಯಲ್ಲಿ ಒಟ್ಟಿಗೆ ಕುಳಿತು ಊಟಮಾಡುವಾಗ ಈ ರೀತಿ ಅನುಸರಿಸಬಹುದಾಗಿದೆ.
ಇತರೆ ಪಾತ್ರೆಗಳು
ಬದಲಾಯಿಸಿ
  • ನೂಡಲ್ ಸೂಪನ್ನು ನೀಡಿದಾಗ, ಚಮಚೆಯಲ್ಲಿ ಮೊದಲು ನೂಡಲ್ ತೆಗೆದುಕೊಂಡು ತಿನ್ನುವುದು ಒಳ್ಳೆಯ ಅಭಿರುಚಿ ಎಂದು ಪರಿಗಣಿಸಲಾಗುತ್ತದೆ, ಬಟ್ಟಲಿನಿಂದ ನೇರವಾಗಿ ಶಬ್ಧ ಮಾಡುತ್ತಾ ಕುಡಿಯುವುದರ ಬದಲಾಗಿ ಚಮಚೆ ಮತ್ತು ಚಾಪ್‌ಸ್ಟಿಕ್ ಬಳಸಿ ತಿನ್ನುವುದು ಉತ್ತಮ.
  • ಚೀನೀಯರು ಸಾಂಪ್ರದಾಯಿಕವಾಗಿ ಒಂದು ಚಿಕ್ಕ ಬಟ್ಟಲನ್ನು ಎಡಗೈಯಲ್ಲಿ ಹಿಡಿದು ಅನ್ನವನ್ನು ತಿನ್ನುತ್ತಾರೆ, ಹೇಗಾದರೂ ಇದರಲ್ಲಿ ಏನು ಉತ್ತಮವಾದದ್ದು ಇಲ್ಲ. ಸಾಮಾನ್ಯವಾಗಿ ಬಹಳಷ್ಟು ಜನ ಇದೇ ರೀತಿಯಾಗಿ ತಿನ್ನುತ್ತಾರೆ, ಹಾಗೇ ಮಾಡಬೇಕೆಂದು ಎಲ್ಲೂ ಹೇಳಿಲ್ಲ. ಅನ್ನದ ಬಟ್ಟಲನ್ನು ಬಾಯಿ ಹತ್ತಿರಕ್ಕೆ ತೆಗೆದು ಚಾಪ್‌ಸ್ಟಿಕ್‌ನಿಂದ ಒಳಗೆ ತಳ್ಳಿ ಕೊಳ್ಳಲಾಗುತ್ತದೆ. ಕೆಲ ಚೈನೀಸರು ಅನ್ನವನ್ನು ಬಟ್ಟಲಿನಲ್ಲಿ ಹಾಕಿಕೊಂಡು ಚಮಚೆಯಲ್ಲಿ ತಿನ್ನುವುದನ್ನು ಅವಮಾನ ಎಂದು ಭಾವಿಸುತ್ತಾರೆ. ಪಶ್ಚಿಮದಲ್ಲಿರುವ ಸಾಮಾನ್ಯ ಪದ್ದತಿಯ ಹಾಗೆ ಅನ್ನವನ್ನು ತಟ್ಟೆಯಲ್ಲಿ ಬಡಿಸಿದರೆ, ಫೋರ್ಕ್ ಅಥವಾ ಚಮಚೆಯಲ್ಲಿ ತಿನ್ನುವುದು ಸ್ವಾಗತಾರ್ಹ. ಹೆಬ್ಬೆರಳು ಯಾವಾಗಲೂ ಬಟ್ಟಲಿನ ತುದಿಯ ಮೇಲಿರಬೇಕು.

ಸಾಮಾನ್ಯ ತಟ್ಟೆಯಿಂದ ತಿನ್ನುವುದು

ಬದಲಾಯಿಸಿ
  • ನಿಮಗೆ ಹತ್ತಿರದಲ್ಲಿರುವ ಮತ್ತು ಮೇಲಿರುವ ಆಹಾರವನ್ನು ಎತ್ತಿಕೊಳ್ಳಿ. ಖಾದ್ಯವನ್ನು ಎಂದಿಗೂ ಕೆದಕಬೇಡಿ ಅಥವಾ ನಿಮ್ಮ ಇಷ್ಟದ ಖಾದ್ಯಕ್ಕಾಗಿ ನಿಮ್ಮಕಡೆಯಿಂದ ದೂರವಿರುವುದಕ್ಕೆ ಕೈ ಹಾಕಬೇಡಿ.
  • ಪಾಶ್ಚಿಮಾತ್ಯ ರೀತಿಯಲ್ಲಿ ತಿನ್ನುತ್ತಿದ್ದರೆ, ನಿಮ್ಮ ಬಟ್ಟಲು ಅಥವಾ ಸಾಮಾನ್ಯ ತಟ್ಟೆಯಿಂದ ಒಂದು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ತೆಗೆದುಕೊಂಡರೆ ಸಾಮಾನ್ಯವಾಗಿ, ಅತಿ ಸಂಪ್ರದಾಯ ವಾದಿ ಚೀನೀಯರು ತಿರಸ್ಕಾರ ದೃಷ್ಟಿಯಿಂದ ನೋಡುತ್ತಾರೆ. ಒಬ್ಬ ವ್ಯಕ್ತಿ ಪಾಶ್ಚಿಮಾತ್ಯದಿಂದ ಬಂದವನಾಗಿದ್ದರೆ, ಅಥವಾ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದವನಾಗಿದ್ದರೆ ಅವರ ಅಭ್ಯಾಸಗಳಿಂದ ಬಹಳಷ್ಟು ಚೀನೀಯರು ಅರ್ಥಮಾಡಿಕೊಳ್ಳುತ್ತಾರೆ.
  • ಅನ್ನದ ಬಟ್ಟಲನ್ನು ಬಿಟ್ಟು - ಬಡಿಸುವ ಒಂದು ಬಟ್ಟಲು ಮತ್ತು ತಟ್ಟೆಯನ್ನು ಒದಗಿಸಲಾಗುತ್ತದೆ, ತಿನ್ನುವ ಪದಾರ್ಥಗಳನ್ನು ಬಡಿಸುವ ತಟ್ಟೆಗೆ ಹಾಕಿಕೊಳ್ಳಬೇಡಿ. ಈ ನಿಯಮವು ವಿದೇಶೀಯರಿಗೆ ಇರುವುದಿಲ್ಲ.
  • ಖಾದ್ಯವು ಸೂಫಿಯಾಗಿದ್ದರೆ, ಬಡಿಸುವ ಬಟ್ಟಲನ್ನು ಹತ್ತಿರಕ್ಕೆ ತಂದುಕೊಳ್ಳಿ ಮತ್ತು ಚಾಪ್‌ಸ್ಟಿಕ್‌ಗಳಿಗೆ ಖಾದ್ಯ ನಿಲುಕುವಂತಿರಲಿ. ಹೆಚ್ಚಾಗಿ ಸಾಸನ್ನು ಮೇಜಿನ ಮೇಲೆ ಬೀಳಿಸುವುದು ಪ್ರಮುಖ ಮರ್ಯಾದೋಲ್ಲಂಘನೆ ಎನಿಸುತ್ತದೆ.
  • ಯಾವುದಾದರೊಂದು ಪದಾರ್ಥವನ್ನು ನೀವು ಕೈಗೆತ್ತಿಕೊಂಡಮೇಲೆ, ಮತ್ತೆ ಅದನ್ನು ಆ ಬಟ್ಟಲಿಗೆ ಹಿಂದಿರುಗಿ ಹಾಕಬೇಡಿ.

ಮೇಜಿನ ಬಳಿ ಹಿರಿಯತನ ಮತ್ತು ಅತಿಥಿಗಳು

ಬದಲಾಯಿಸಿ
  • ಹಿರಿಯರು ಅಥವಾ ಅತಿಥಿ(ಗಳು)ಗೆ ಮೊದಲು ಊಟ ಪ್ರಾರಂಭಿಸುವ ಗೌರವವಿರುತ್ತದೆ.
  • ಅತಿ ಚಿಕ್ಕ ಅಥವಾ ಹಿರಿಯರಲ್ಲಿ ಕಿರಿಯರು, ಹಿರಿಯರಿಗೆ ಅಥವಾ ಎಲ್ಲರಿಗಿಂತ ದೊಡ್ಡವರಿಗೆ ಬಡಿಸಬೇಕು, ಇದು ಕನ್‌ಫ್ಯೂಸಿಯನ್ ತತ್ವಗಳಲ್ಲಿ ಹಿರಿಯರಿಗೆ ಗೌರವ ಸಲ್ಲಿಸುವು ದನ್ನು ಸೂಚಿಸುತ್ತದೆ.
  • ಮೇಜಿನ ಬಳಿ ಇರುವ ಎಲ್ಲರಿಗಿಂತ ಚಿಕ್ಕವರು ಎಲ್ಲಾ ಹಿರಿಯ ಸದಸ್ಯರನ್ನು ಉದ್ದೇಶಿಸಿ ತಿನ್ನುವುದಕ್ಕಿಂತ ಮೊದಲು ದಯವಿಟ್ಟು "ಅನ್ನ ತಿನ್ನಿರಿ" ಎಂದು ಹೇಳಿ ಪ್ರಾರಂಭಿಸಬಹುದು.
  • ಉತ್ತಮವಾದ ಖಾದ್ಯವನ್ನು ಹಿರಿಯರಿಗಾಗಿ, ಮಕ್ಕಳಿಗಾಗಿ, ಅಥವಾ ಗೌರವದ ಅತಿಥಿಗಳಿಗಾಗಿ ಉಳಿಸಲಾಗುತ್ತದೆ, ಯಾರೊಬ್ಬರ ಪ್ರಿಯವಾದ ಖಾದ್ಯವಾಗಿದ್ದಲ್ಲಿ ಅವರಿಗೂ ಸಹ.
  • ಅಲ್ಲಿರುವ ಹಿರಿಯರು, ಅಥವಾ ಗೌರವಯುತ ಅತಿಥಿಗಳಿಗೆ ಬಾಗಿಲಿಗೆ ಅಭಿಮುಖವಾಗಿರುವ ಸ್ಥಾನವನ್ನು ನೀಡಲಾಗುತ್ತದೆ.
  • ಆತಿಥ್ಯ ನೀಡುವವಳು ತಾನು ನೀಡಿದ ಖಾದ್ಯಗಳು ಚೆನ್ನಾಗಿಲ್ಲವೆಂದರೆ, ಅತಿಥಿಗಳನ್ನು ಅದನ್ನು ಒಪ್ಪಿಕೊಳ್ಳಲೇ ಬಾರದು ಮತ್ತು ಇಂದಿನ ವರೆಗೂ ರುಚಿನೋಡಿದ ಖಾದ್ಯಗಳಲ್ಲಿಯೇ ಇದು ಅತ್ಯುತ್ತಮವಾದದ್ದು ಎಂದು ಹೇಳಬೇಕು.

ಪಾನೀಯಗಳು

ಬದಲಾಯಿಸಿ
  • ಆತಿಥ್ಯ ನೀಡುವವರು ಎಲ್ಲರ ಲೋಟಗಳು ಬಹಳ ಹೊತ್ತು ಖಾಲಿ ಇರದಂತೆ ನೋಡಿಕೊಳ್ಳಬೇಕು. ಯಾರೂ ಅವರಷ್ಟಕ್ಕೆ ಅವರೇ ಪಾನೀಯಗಳನ್ನು ಹಾಕಿ ಕೊಳ್ಳುವಂತಿಲ್ಲ, ಬಹಳ ಬಾಯಾರಿಕೆಯಾಗಿದ್ದಲ್ಲಿ ಮೊದಲು ಬೇರೆಯವರಿಗೆ ಬೇಕಾ ಎಂದು ಕೇಳಿ ಹಾಕಿಕೊಳ್ಳಬಹುದು. ನಿಮಗಾಗಿ ಪಾನೀಯವನ್ನು ಸುರಿದಾಗ, ನೀವು "ಧನ್ಯವಾದಗಳು" ಎಂದು ಹೇಳಲೇ ಬೇಕು, ಮತ್ತು/ಅಥವಾ ಹೊಗಳಿಕೆಯನ್ನು ತೋರ್ಪಡಿಸಲು ನಿಮ್ಮ ತೋರ್ಬೆರಳು ಮತ್ತು ಮಧ್ಯದ ಬೆರಳನ್ನು ಮೇಜಿನ ಮೇಲೆ ತಟ್ಟಬೇಕು, ವಿಶೇಷವಾಗಿ ನೀವು ದಕ್ಷಿಣ ಚೈನಾ ದಲ್ಲಿದ್ದರೆ, ಉದಾಹರಣೆಗೆ. ಗ್ಯಾಂಗ್‌ಡಾಂಗ್ ಪ್ರಾವಿನ್ಸ್. ಈ ಕ್ರಿಯೆಯು ನಿಮ್ಮ ತಲೆಯನ್ನು ತೂಗಿಸುವಂತೆ.
  • ಜನರು ಜೊತೆಯಲ್ಲಿ ಪಾನೀಯಗಳನ್ನು ಸೇವಿಸುವಾಗ ಲೋಟಗಳನ್ನು ಚೀರ್ ಮಾಡಲು ಇಚ್ಛಿಸಿದರೆ, ಚಿಕ್ಕವನ ಲೋಟವನ್ನು ದೊಡ್ಡವರ ಲೋಟದ ಕೆಳಭಾಗಕ್ಕೆ ತಾಗಿಸುವುದು ಹಿರಿಯರಿಗೆ ಗೌರವ ಸಲ್ಲಿಸುವಲ್ಲಿ ಪ್ರಮುಖವಾಗಿದೆ.
  • ಬೈಜಿಯು ["ಬೈ ಜೋ" ಎಂದು ಕರೆಯಲಾಗುವ] ಕಟುವಾದ ಆಲ್ಕೋಹಾಲ್ ಅನ್ನು ಹೆಚ್ಚಾಗಿ ಊಟದುದ್ದಕೂ ನೀಡಲಾಗುತ್ತದೆ; ಆತಿಥ್ಯ ನೀಡುವವನು[ರು]/ಆತಿಥ್ಯ ನೀಡುವ ವಳು[ರು] ಅತಿಥಿಗಳಿಗೆ ಇದನ್ನು ಕುಡಿಯಿರೆಂದು ಹೇಳುವುದು ಅವರ "ಸ್ನೇಹವನ್ನು ತೋರುತ್ತದೆ." ಅತಿಥಿಗಳು ಅದನ್ನು ಕುಡಿಯಲ್ಲು ಇಷ್ಟವಿಲ್ಲವಾದರೆ, ಅವರು "ನನಗೆ ಕುಡಿಯಲಾ ಗುವುದಿಲ್ಲ, ಆದರೆ ಧನ್ಯವಾದಗಳು" ಎಂದು ಹೇಳಬಹುದು [ಮ್ಯಾಂಡರಿನ್‌ನಲ್ಲಿ: "Wo bu neng he jiu, xie xie ." {whoa boo nung huh joe}] ಆತಿಥ್ಯ ನೀಡುವವರು ಇನ್ನೂ ಕೆಲವು ಬಾರಿ ಕುಡಿಯಿರೆಂದು ಒತ್ತಾಯಿಸಬಹುದು ಅದರಂತೆ ಅತಿಥಿಗಳು ಕೂಡಾ ಕುಡಿಯಲು "ಆಗುವುದಿಲ್ಲ" ಎಂದು ಹೇಳಬಹುದು. ಆತಿಥ್ಯ ನೀಡುವವರು ಅವರ ಉದಾರತೆಯನ್ನು ತೋರಿಸಿಕೊಳ್ಳುವುದಾಗಿರುವುದು. ಆದ್ದರಿಂದ, ಅತಿಥಿಗಳು ತಿರಸ್ಕರಿಸುವುದು ಅತಿ ವಿನಯವಾಗಿರಬೇಕು. ಎಚ್ಚರಿಕೆ: ಒಬ್ಬ ಅತಿಥಿಯು ಮೇಜಿನಲ್ಲಿರುವ ಕೆಳದರ್ಜೆ ಯವರೊಂದಿಗೆ ಆಲ್ಕೋಹಾಲನ್ನು ಕುಡಿದರೆ, ಅತಿಥಿಯು ಅಲ್ಲಿರುವ ಪ್ರತಿಯೊಬ್ಬ ಉನ್ನತ ಮಟ್ಟದವರೆ ಜೊತೆ ಅದೇ ಆಲ್ಕೋಹಾಲನ್ನು ಕುಡಿಯಬೇಕೆಂದು ನಿರೀಕ್ಷಿಸಲಾಗುತ್ತದೆ [ಬಲವಂತ ಮಾಡಿಲ್ಲವಾದರೆ] ಮತ್ತು ಇತರೆ ಮೇಜುಗಳಲ್ಲಿಯೂ ಸಾಧ್ಯತೆ ಇದೆ- ಅತಿಥಿಯು ಅದನ್ನು ಮುಂದೆ ಪಾಸ್ ಮಾಡದೇ ಹೋದಲ್ಲಿ.

ಧೂಮಪಾನ

ಬದಲಾಯಿಸಿ
  • ಧೂಮಪಾನವು ಚೀನಿಯರ ಪ್ರಮುಖ ಚಟವಾಗಿದೆ, ವಿಶೇಷವಾಗಿ ಪುರುಷರಲ್ಲಿ. ಊಟದ ಸಮಯದಲ್ಲಿ, ಆತಿಥ್ಯ ನೀಡುವವರು ಕೆಲವುಬಾರಿ ಮೇಜಿನ ಸುತ್ತ ಇರುವ ಪುರುಷರಿಗೆ ಸಿಗರೇಟ್‌ಗಳನ್ನು ನೀಡುತ್ತಾರೆ. ಅತಿಥಿಗಳು ಧೂಮಪಾನ ಮಾಡಲು ಇಚ್ಛಿಸುವುದಿಲ್ಲ ವಾದರೆ, ಅವಳು/ಅವನು ನಯವಾಗಿ ತಿರಸ್ಕರಿಸಬಹುದು.ಮ್ಯಾಂಡ್ರಿನ್‌ನಲ್ಲಿ, ಹೀಗೆ ಹೇಳಬಹುದು, "我不抽烟,谢谢" (Wo bu chou yan, xie xie).

ವ್ಯವಹಾರಿಕ ಊಟ

ಬದಲಾಯಿಸಿ
  • ವ್ಯವಹಾರಿಕ ಊಟದಲ್ಲಿ, ಸಂತೃಪ್ತಿಯಾಗುವ ತನಕ ತಿನ್ನದೆ ಇರುವುದು ಒಳ್ಳೆಯದು, ವ್ಯವಹಾರದಲ್ಲಿ ಊಟಕ್ಕೆ ಪ್ರಮುಖ ಸ್ಥಾನವಿರುವುದಿಲ್ಲ, ಒಟ್ಟಾಗಿ ಸೇರುವುದು ಉದ್ದೇಶವಾಗಿರು ತ್ತದೆ.

ಬಹುಮುಖ ವಿಚಾರಗಳು

ಬದಲಾಯಿಸಿ
  • ಈ ಹಿಂದೆ, ಕೆಲವು ಜನರು ಊಟದ ಮೇಜಿನಿಂದ ಕನಿಷ್ಟ 1 ಮೀಟರ್ (3 chi) ದೂರದಲ್ಲಿ ಕುಳಿತುಕೊಳ್ಳುತ್ತಿದ್ದರಂತೆ ಅದರಿಂದಾಗಿ ಇತರೆ ಅತಿಥಿಗಳ ಮೊಣಕೈಯನ್ನು ಉಜ್ಜುವ ಗೋಜಿರುತ್ತಿರಲಿಲ್ಲ. ಈ ದಿನಗಳಲ್ಲಿ ಆ ಅಭ್ಯಾಸವು ವಿರಳವಾಗಿ ಕಾಣಿಸುತ್ತದೆ.
  • ಮೂಳೆಗಳನ್ನು ಹೊಂದಿರುವ ಖಾದ್ಯಗಳನ್ನು ತಿನ್ನುವಾಗ, ಮೂಳೆಗಳನ್ನು ತಮ್ಮ ತಟ್ಟೆಯ ಪಕ್ಕದಲ್ಲಿ ಮೇಜಿನ ಮೇಲೆ ಉಗುಳುವುದು ಸಾಮಾನ್ಯ. ಮೂಳೆಗಳನ್ನು ನೆಲದ ಮೇಲೆ ಉಗುಳುವುದು ಎಂದಿಗೂ ಒಪ್ಪಿಕೊಳ್ಳುವಂತಹದ್ದಲ್ಲ.
  • ತೇಗುವುದು,ತಟ್ಟುವುದು ಮತ್ತು ಶಬ್ಧ ಮಾಡುವುದು ಸಾಮಾನ್ಯ..
  • ಪಾಶ್ಚಿಮಾತ್ಯ ದರ್ಜೆಗಳಲ್ಲಿ, ಊಟದ ಸಮಯದಲ್ಲಿನ ಮಾತುಗಳು ಯಾವಾಗಲೂ ಜೋರಾಗಿರುತ್ತವೆ ಮತ್ತು ಉತ್ಸಾಹದಿಂದ ಕೂಡಿರುತ್ತವೆ.
  • ರೆಸ್ಟಾರೆಂಟುಗಳ ನೌಕರ ವರ್ಗವಾದ ವೆಯ್ಟರ್/ವೆಯ್ಟ್ರೆಸ್‌ಗಳನ್ನು ನಡೆಸಿಕೊಳ್ಳುವ ರೀತಿ ಸ್ವಲ್ಪ "ಒರಟಾಗಿರುತ್ತದೆ", ಅವರಿಗೆ ಯಾವಾಗಲೂ ಹೀಗೆ ಹೇಳಲಾಗುತ್ತದೆ 快点 (kuai dian), ಇದರರ್ಥ "ಬೇಗ ಬೇಗ."
  • ಬಾಯಿ ತುಂಬಾ ಇಟ್ಟು ಕೊಂಡು ಮಾತನಾಡುವುದು, ಮೇಜಿನ ಮೇಲೆ ಮೊಣಕೈಯಿಟ್ಟು ತಿನ್ನುವುದು ಎರಡೂ ಸಾಮಾನ್ಯ, ಮತ್ತು ಮೇಜಿನ ಅತಿಥಿಗಳ ತಟ್ಟೆಯಲ್ಲಿರುವುದನ್ನು ರುಚಿ ನೋಡುವುದು ಸಹ ಸಭ್ಯತೆಯಲ್ಲ.[]
  • ಆಹಾರವನ್ನು ಸಾಮಾನ್ಯವನ್ನು ಬಲಗೈಯಲ್ಲಿ ತಿನ್ನುವುದನ್ನು ನಿರೀಕ್ಷಿಸಲಾಗುತ್ತದೆ. ಭಕ್ಷ್ಯಗಳನ್ನು ಒಬ್ಬರಿಂದೊಬ್ಬರಿಗೆ ನೀಡಲು ಎಡಗೈ ಬಳಸಬಹುದು.
  • ಹಲವು ಬಾರಿ , ಹಲವು ಖಾದ್ಯಗಳನ್ನು ಕೈಯಿಂದ ತಿನ್ನುವುದು ಸ್ವಾಗತಾರ್ಹ, ಹಾಗೂ ಹಾಗೆಯೇ ಮಾಡಬೇಕು - ಭಾರತೀಯ ಖಾದ್ಯಗಳಾದ ಬ್ರೆಡ್‌ಗಳು ಮತ್ತು ಪಲ್ಯ - ಇವನ್ನು ಸಾಮಾನ್ಯವಾಗಿ ಇದೇ ರೀತಿಯಲ್ಲೇ ತಿನ್ನುತ್ತಾರೆ.
  • ಊಟಕ್ಕೆ ಕುಳಿತುಕೊಳ್ಳುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದು ಕೊಳ್ಳಿ ಏಕೆಂದರೆ ಕೆಲ ಭಾರತೀಯ ಖಾದ್ಯಗಳು ಕೈಯಿಂದಲೇ ತಿನ್ನುವಂತಹದ್ದಾಗಿರುತ್ತವೆ. ಅಲ್ಲದೆ, ಊಟದ ನಂತರವೂ ಕೈಗಳನ್ನು ಚನ್ನಾಗಿ ತೊಳೆದು ಕೊಳ್ಳಿ. ಸಾಮಾನ್ಯವಾಗಿ, ಒಂದು ಫಿಂಗರ್ ಬೌಲ್ (ನಿಂಬೆ ಮತ್ತು ಸ್ವಲ್ಪ ಬಿಸಿ ಮಾಡಿದ ನೀರಿನ ಮಿಶ್ರಣ) ಅನ್ನು ಪ್ರತಿಯೊಬ್ಬರಿಗೂ ನೀಡಲಾಗುತ್ತದೆ.
  • ಉತ್ತರ ಭಾರತದಲ್ಲಿ, ಪಲ್ಯಗಳನ್ನು ತಿನ್ನುವಾಗ, ಅದರ ರಸವು ಕೈಗಳಿಗೆ ಅಂಟಿಕೊಳ್ಳದಂತೆ ತಿನ್ನಬೇಕು - ಬರೀ ಬೆರಳುಗಳನ್ನು ಉಪಯೋಗಿಸಿ ತಿನ್ನಬೇಕು.
  • ಚಪಾತಿ, ರೋಟಿ, ಅಥವಾ ನಾನ್‌ಗಳಂತಹ ಚಪ್ಪಟೆ ಬ್ರೆಡ್‌ಗಳನ್ನು ಊಟದ ಜೊತೆ ನೀಡಿದಾಗ, ಅವುಗಳ ಚೂರುಗಳನ್ನು ಆಹಾರ ಒಟ್ಟುಗೂಡಿಸಿಕೊಳ್ಳುವುದಕ್ಕಾಗಿ, ಸಾಸ್‌ಗಳಲ್ಲಿ ಅದ್ದಿ ಮತ್ತು ಪಲ್ಯಗಳ ಜೊತೆ ತಿನ್ನಬಹುದು, ಮತ್ತು ಇದನ್ನೆ ನಿರೀಕ್ಷಿಸಲಾಗುತ್ತದೆ.
  • ದಕ್ಷಿಣ ಭಾರತದಲ್ಲಿ, ಊಟಮಾಡುವಾಗ ಬೆರಳುಗಳ ಎರಡನೇ ಭಾಗದವರೆಗೂ ಬಳಸಬಹುದು (middle phalanx till the interphalangeal joint) ಮತ್ತು ಹೆಬ್ಬೆರಳಿನ ಮೊದಲನೇ ಭಾಗದವರೆಗೂ ಬಳಸಬಹುದಾಗಿದೆ (distal phalanx). ದಕ್ಷಿಣ ಭಾರತೀಯ ಸಂಸ್ಕೃತಿಯಲ್ಲಿ, ಆಹಾರವನ್ನು ಎತ್ತಿಕೊಳ್ಳಲು ಅಥವಾ ಚಮಚೆಯಲ್ಲಿ ತೆಗೆದುಕೊಳ್ಳಲು ನಾಲ್ಕು ಬೆರಳುಗಳನ್ನು ಬಳಸುತ್ತಾರೆ. ಆಹಾರವನ್ನು ಬಾಯಿಯೊಳಗೆ ತಳ್ಳಲು ಹೆಬ್ಬೆರಳನ್ನು ಬಳಸುತ್ತಾರೆ. ಎಲ್ಲ ಐದು ಬೆರಳುಗಳನ್ನೂ ಬಾಯಿಯೊಳಗೆ ಆಹಾರವನ್ನಿಟ್ಟುಕೊಳ್ಳಲು ಬಳಸಿದರೆ ಅದನ್ನು ಅಸಭ್ಯವೆಂದು ಪರಿಗಣಿಸಲಾಗುತ್ತದೆ.
  • ನೀವು ನಿಮ್ಮ ತಟ್ಟೆಯಲ್ಲಿ ತಿನ್ನಲು ಪ್ರಾರಂಭಿಸಿದ ಮೇಲೆ ಬೇರೆಯವರ ತಟ್ಟೆಯಿಂದ ಆಹಾರವನ್ನು ತೆಗೆದುಕೊಳ್ಳಲು ನಿಮ್ಮ ಬೆರಳುಗಳನ್ನು ಬಳಸುವುದು ಅನುಚಿತವೆಂದು ಪರಿಗಣಿಸಲಾಗುತ್ತದೆ. ಬದಲಾಗಿ, ಸಾಮಾನ್ಯ ಖಾದ್ಯವನ್ನು ನಿಮ್ಮ ತಟ್ಟೆಗೆ ಹಾಕಿಕೊಳ್ಳಲು ಚಮಚೆಯನ್ನು ಕೇಳಬಹುದು.
  • ತಯಾರಿಸಿದ ಎಲ್ಲ ಖಾದ್ಯಗಳನ್ನು ನೀವು ರುಚಿ ನೋಡಲೇಬೇಕಾಗುತ್ತದೆ, ಆದರೆ ನೀವು ನಿಮ್ಮ ತಟ್ಟೆಗೆ ಹಾಕಿಕೊಂಡ ಎಲ್ಲ ಪದಾರ್ಥಗಳನ್ನು ತಿಂದು ಮುಗಿಸಿದರೆ ಅದನ್ನು ಗೌರವಾನ್ವಿತ ಎಂದು ಪರಿಗಣಿಸಲಾಗುತ್ತದೆ. ಆ ಕಾರಣಕ್ಕಾಗಿ, ನಿಮ್ಮಿಂದ ಎಷ್ಟು ತಿನ್ನಲು ಸಾಧ್ಯವೋ ಅಷ್ಟನ್ನು ಮಾತ್ರ ನಿಮ್ಮ ತಟ್ಟಗೆ ಬಡಿಸಿಕೊಳ್ಳಿ.
  • ಹೆಚ್ಚಾದ ಭಾರತೀಯ ಭಕ್ಷ್ಯಗಳನ್ನು ಕೈಯಿಂದಲೇ ತಿನ್ನಲಾಗುತ್ತದೆ, ಒಬ್ಬರ ಕುಡಿಯುವ ನೀರಿನ ಲೋಟವು ಕೊಳಕಾಗದಂತೆ ನೋಡಿಕೊಳ್ಳುವುದು ಅವಶ್ಯಕ.
  • ಇತರರು ಊಟವನ್ನು ಸಂಪೂರ್ಣಗೊಳಿಸುವವರೆಗೂ ಮೇಜಿನಿಂದ ಏಳಬೇಡಿ ಅಥವಾ ಆತಿಥ್ಯ ನೀಡುವವರು ನಿಮ್ಮನ್ನು ಕೇಳಿಕೊಳ್ಳುವವರೆಗೂ ಕಾಯಿರಿ. ನೀವು ಏಳಲೇ ಬೇಕಾದಲ್ಲಿ, ನಿಮಗೆ ಆತಿಥ್ಯ ನೀಡಿದವರ ಅನುಮತಿ ಕೇಳಿ.
  • ದಕ್ಷಿಣ ಭಾರತೀಯ ಊಟವನ್ನು, ಬಿಸಿ ನೀರಿನಿಂದ ಶುದ್ಧೀಕರಿಸಿದ ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ತರಕಾರಿಗಳನ್ನು ಎಲೆಯ ಮೇಲರ್ಧ ಭಾಗದಲ್ಲಿ ಬಡಿಸಲಾಗುತ್ತದೆ, ಮತ್ತು ಅನ್ನ, ಸಿಹಿಖಾದ್ಯಗಳು ಮತ್ತು ತಿಂಡಿಗಳನ್ನು ಉಳಿದರ್ಧ ಭಾಗದಲ್ಲಿ ಬಡಿಸಲಾಗುತ್ತದೆ.
  • ನೀವು ನಿಮ್ಮ ಊಟವನ್ನು ಮುಗಿಸಿದ ನಂತರ ಬಾಳೆ ಎಲೆಯನ್ನು ಹಾಗೆಯೇ ತೆರೆದು ಇಡಬೇಕಾಗುತ್ತದೆ. ಅದನ್ನು ಮಡಿಸಬೇಕಾದರೆ ಮೇಲರ್ಧ ಭಾಗವು ಉಳಿದರ್ಧ ಭಾಗವನ್ನು ಮುಚ್ಚುವಂತೆ ನೀಟಾಗಿ ಮಡಿಸಬೇಕು. ಒಂದು ವೇಳೆ ಕೆಳಗಿನ ಅರ್ಧ ಭಾಗವು ಮೇಲರ್ಧ ಭಾಗವನ್ನು ಮುಚ್ಚುವಂತೆ ಮಡಿಸಿದರೆ ಅದನ್ನು ಅಗೌರವವೆಂದು ಪರಿಗಣಿಸಲಾಗುತ್ತದೆ, ಈ ರೀತಿಯಾಗಿ ಯಾರಾದರೂ ಸತ್ತಾಗ ಮಾತ್ರ ಆ ಘಟನೆ ಇನ್ನೊಮ್ಮೆ ಆಗದಿರಲಿ ಎಂದು ಮಡಿಸಲಾಗುತ್ತದೆ.
  • ಚಾಪ್‌ಸ್ಟಿಕ್‌ಗಳನ್ನು ಬಟ್ಟಲಿನಲ್ಲಿ ನೇರವಾಗಿ ನಿಲ್ಲುವಂತೆ ಇಡಬೇಡಿ, ತಮ್ಮ ಪೂರ್ವಜರಿಗೆ ನೈವೇದ್ಯ ಸಲ್ಲಿಸಲು ಸಾಂಪ್ರದಾಯಿಕವಾಗಿ ಹೀಗೆ ಇಡಲಾಗುತ್ತದೆ.
  • ಆತಿಥ್ಯ ನೀಡುವವ ಅಥವಾ ನೀಡುವವಳು ತಿನ್ನುವ ಮೊದಲೇ ಮೂರು ಬಾರಿ ತಿನ್ನುವಂತೆ ಹೇಳುವ ವರೆಗೂ ಕಾಯುತ್ತಿರಿ.
  • ಸಾಮುದಾಯಿಕ ಖಾದ್ಯಗಳಾದ ಸಲಾಡ್‌ನಂತಹವುಗಳನ್ನು, ಚಾಪ್‌ಸ್ಟಿಕ್‌ನ ಹಿಂಬಾಗದಿಂದ ತೆಗೆದುಕೊಳ್ಳುವುದು ಸ್ವಾಗತಾರ್ಹ. ಹೇಗಾದರೂ ಇದು ಎಲ್ಲ ಪುರುಷರ ಪರವಾಗಿ, ಅಥವಾ ಪ್ರಾಸಂಗಿಕ ಸಂದರ್ಭಗಳಲ್ಲಿ, ತುಂಬಾ ಔಪಚಾರಿಕವಾಗಿ ಮತ್ತು ಜೊತೆಯಲ್ಲಿ ಮಹಿಳೆಯರ ರೂಢಿ.
  • ಬಟ್ಟಲಿಂದ ಬಾಯಿಗೆ ಚಾಪ್‌ಸ್ಟಿಕ್‌ನಿಂದ ತಿನ್ನುವಾಗ ಹೆಂಗಸರು ತಮ್ಮ ಇನ್ನೊಂದು ಕೈಯನ್ನು ಊಟ ಬಡಿಸಲು ಬಳಸಬಹುದು. ಪುರುಷರು ಹಾಗೆ ಮಾಡುವ ಹಾಗಿಲ್ಲ.
  • ಸಾಮುದಾಯಿಕ ಊಟ ಅಥವಾ ಪಾನೀಯ ಕುಡಿಯುವಾಗ, ಅಲ್ಲಿರುವ ಅತಿ ಚಿಕ್ಕವಯಸ್ಸಿನ ವ್ಯಕ್ತಿಯು ಎಲ್ಲರಿಗೂ ಆಲ್ಕೋಹಾಲನ್ನು ನೀಡಬೇಕು, ಮೊದಲು ಎಲ್ಲರಿಗಿಂತ ದೊಡ್ಡರಿಗೆ ನೀಡಬೇಕು. ಎಲ್ಲರಿಗೂ ಬಡಿಸಿಯಾದ ಮೇಲೆ ಅವರ ಗಾಜಿನ ಲೋಟಕ್ಕೆ ಅವರೇ ಹಾಕಿಕೊಳ್ಳುವಂತಿಲ್ಲ, ಎಲ್ಲರಿಗೂ ಹಾಕಿದ ನಂತರ ಸೇಕ್, ಬಿಯರ್, ವೈನ್ ಅಥವಾ ಸ್ಪಿರಿಟ್ ಬಾಟಲುಗಳನ್ನು ಮೇಜಿನ ಮೇಲಿರಿಸಬೇಕು, ಮತ್ತು ದೊಡ್ಡವರು ಬಡಿಸುವವರೆಗೂ ಕಾಯಬೇಕು. ಪಾನೀಯವನ್ನು ಹಾಕಿಸಿಕೊಳ್ಳುವವರು ಹಾಕುವ ಸಮಯದಲ್ಲಿ ತಮ್ಮ ಗಾಜಿನ ಲೋಟ/ಕಪ್‌ ಅನ್ನು ಕೈಯಲ್ಲಿ ಹಿಡಿದಿರಬೇಕು.
  • ಒದಗಿಸಲಾದ ಬಿಸಿ ಹಬೆಯಿಂದ ಕೂಡಿದ ಟವೆಲ್‌ನಿಂದ ಕೈಗಳನ್ನು (ಮುಖವನ್ನಲ್ಲ) ಸ್ವಚ್ಛಗೊಳಿಸಿಕೊಳ್ಳಬೇಕು.
  • ಜಪಾನೀಯರ ಸೂಪ್ ಅನ್ನು ಬಟ್ಟಲನ್ನು ಬಾಯಿಗಿಟ್ಟು ಕುಡಿಯಬೇಕು, ಚಮಚದಿಂದಲ್ಲ. ಇದಕ್ಕೆ ವ್ಯತಿರಿಕ್ತವೆಂದರೆ ಒ-ಝೋನಿ , ಇದು ಹೊಸ ವರ್ಷದ ದಿನದಂದು ಬಡಿಸ ಲಾಗುವ ಸಾಂಪ್ರದಾಯಿಕ ಸೂಪ್; ಸೂಪ್‌ಗಳ ಜೊತೆ ನೂಡಲ್‌ಗಳನ್ನು ದೊಡ್ಡ ಬಟ್ಟಲುಗಳಲ್ಲಿ ನೀಡಲಾಗುತ್ತದೆ ರಾಮೆನ್‌ ನಂತಹವುಗಳು, ಇದರಲ್ಲಿ ಚಾಪ್‌ಸ್ಟಿಕ್ ಬಳಸಿ ಹಾಗೂ ಸೂಪ್ ಅನ್ನು ನೇರವಾಗಿ ಬಟ್ಟಲಿನಿಂದ ಕುಡಿಯುವುದು ಕೂಡಾ ಸರಿಯಾದ ಕ್ರಮವಾಗಿದೆ.
  • ಚಾಪ್‌ಸ್ಟಿಕ್‌ನಿಂದ ತಿನ್ನುವಾಗ ಮೇಜಿನ ಮೇಲೆ ಸೋರುವಂತಹ ಸಂದರ್ಭದಲ್ಲಿ, ನಿಮ್ಮ ಇನ್ನೊಂದು ಕೈಯಲ್ಲಿ ಅನ್ನದ ಬಟ್ಟಲಲ್ಲಿ ಬೀಳುವಂತೆ ಅಡ್ಡ ಹಿಡಿಯಿರಿ. ಆ ತರಹ ಬಿದ್ದ ದ್ರವವನ್ನು ಅನ್ನದ ಮೇಲೆ ಹಾಗೆಯೇ ಬಿಡಬಾರದೆಂಬುದು ಮುಖ್ಯ, ಮತ್ತು ಬಿದ್ದ ಆ ಭಾಗವನ್ನು ತಕ್ಷಣವೇ ತಿನ್ನಬೇಕು. ಅನ್ನ (ಬಟ್ಟಲಿನಲ್ಲಿರುವ)ವು ಹಾಗೇ ಬಡಿಸಿದಾಗ ಇರುವ ತರಹ ಬೆಳ್ಳಗೆ ಇರಬೇಕು.
  • ಒಂದೇ ಸಮಯದಲ್ಲಿ ಬಡಿಸಿದ ಎಲ್ಲಾ ತರಹದ ಖಾದ್ಯಗಳನ್ನು ತಿಂದು ಮುಗಿಸುವುದು ಸಾಮಾನ್ಯವಾಗಿ ಸಭ್ಯತೆಯಾಗಿದೆ. ಒಂದು ಬುಟ್ಟಿಯಲ್ಲಿರುವ ಪದಾರ್ಥವನ್ನು ಸ್ವಲ್ಪ ತೆಗೆದು ಕೊಂಡು ನಂತರ ಸ್ವಲ್ಪ ಅನ್ನವನ್ನು ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ. ಇನ್ನೊಂದು ಬುಟ್ಟಿಯಲ್ಲಿರುವ ಪದಾರ್ಥವನ್ನು ತೆಗೆದುಕೊಂಡು, ಇನ್ನೊಂದು ಸ್ವಲ್ಪ ಅನ್ನವನ್ನು ತೆಗೆದು ಕೊಳ್ಳಬೇಕು, ಮತ್ತು ಹಾಗೆಯೇ ಮುಂದುವರೆಯಿರಿ.
  • ಉಡನ್, ರಾಮೆನ್ ಅಥವಾ ಸೊಬಾ ದಂತಹ ಬಿಸಿ ನೂಡಲ್‌ಗಳನ್ನು ತಿನ್ನುವಾಗ ಶಬ್ಧ ಮಾಡುತ್ತಾ ಕುಡಿಯುವುದು ಸಂಪೂರ್ಣವಾಗಿ ಸ್ವಾಗತಾರ್ಹ. ಇದು ಜಪಾನ್‌ನಲ್ಲಿ ಉತ್ತಮ ಮಟ್ಟದ ನಡವಳಿಕೆ, ಮತ್ತು ಬಿಸಿ ನೂಡಲ್‌ಗಳನ್ನು ತಿನ್ನುವಾಗ ಗಾಳಿಯನ್ನು ತೆಗೆದುಕೊಳ್ಳುವುದು ಅದರ ಪರಿಮಳವನ್ನು ಹೆಚ್ಚಿಸುತ್ತದೆ ಎಂದು ಜಪಾನೀಯರು ನೆನೆಸುತ್ತಾರೆ. ಒಬ್ಬರು ಮಾಡುವುದಿಲ್ಲವಾದರೂ, ಸೂಪನ್ನು ತಿನ್ನುವಾಗ ಯಾವ ತರಹದ ಶಬ್ಧವನ್ನಾದರೂ ಮಾಡಬಹುದು.
  • ಊಟದ ಮಧ್ಯೆ ವಿರಾಮ ತೆಗೆದು ಕೊಳ್ಳಬೇಕಾದಾಗ, ಅವರ ಚಾಪ್‌ಸ್ಟಿಕ್‌ಗಳನ್ನು ಒದಗಿಸಲಾದ ಚಾಪ್‌ಸ್ಟಿಕ್ ರೆಸ್ಟ್‌ನಲ್ಲಿ (hashi-oki ) ಇಡಬೇಕು. ಒಂದು hashi-oki ಯು ಸಾಮಾನ್ಯವಾಗಿ ಸಿರಾಮಿಕ್ ಆಯತಾಕಾರವಾಗಿದ್ದು ನಾಲ್ಕು ಸೆಂಟಿಮೀಟರ್‌ಗಳಷ್ಟು ಉದ್ದವಿರುತ್ತದೆ, ಅಥವಾ ಕೆಲವು ರೆಸ್ಟಾರೆಂಟುಗಳಲ್ಲಿ, ಅರ್ಧ ಕತ್ತರಿಸಿದ ಕಾರ್ಕನ್ನು ನೀಡಲಾಗುತ್ತದೆ.
  • ಕೈಯಲ್ಲಿ ಹಿಡಿದು ತಿನ್ನುತ್ತಿರುವ ಅನ್ನದ ಬಟ್ಟಲನ್ನು ತೂಗಾಡಿಸುವುದು ಸ್ವೀಕಾರಾರ್ಹ.
  • ಚಾಪ್‌ಸ್ಟಿಕ್‌ಗಳನ್ನು ಬಳಸಿ ಸಂಜ್ಞೆ ಮಾಡಬಾರದು.
  • ಚಾಪ್‌ಸ್ಟಿಕ್‌ ಜೋಡಿಯಿಂದ ಎಂದಿಗೂ ಖಾದ್ಯಗಳನ್ನು ಇನ್ನೊಬ್ಬರಿಗೆ ನೀಡಬೇಡಿ. ಈ ವಿಧಾನವನ್ನು ಜಪಾನೀಯರ ಬುದ್ಧಿಸ್ಟರ ಅಂತ್ಯಸಂಸ್ಕಾರದ ವಿಧಿಯಲ್ಲಿ ಸುಟ್ಟ ಮೂಳೆಗಳನ್ನು ಭಸ್ಮ ಕರಂಡಕ್ಕೆ ವರ್ಗಾಯಿಸಲು ಬಳಸಲಾಗುತ್ತದೆ.
  • ವೈನ್ ಅಥವಾ ಬಿಯರ್ ಅನ್ನು ಸುರಿಯುವಾಗ, ಕೈಯಲ್ಲಿ ಹಿಡಿದುಕೊಂಡು ಮುಂಭಾಗಕ್ಕೆ ಸುರಿಯಬೇಕು, ಹಿಂಭಾಗಕ್ಕೆ ಸುರಿಯಬಾರದು ಅದನ್ನು ಅವಮಾನವೆಂದು ಪರಿಗಣಿಸ ಲಾಗುತ್ತದೆ.
  • ಸಾಂಪ್ರದಾಯಿಕ ರೆಸ್ಟಾರೆಂಟುಗಳಲ್ಲಿ, ಸೀಝಾ ರೀತಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ, ಕೆಲವೊಂದು ಅನೌಪಚಾರಿಕ ಸಂದರ್ಭಗಳಲ್ಲಿ ಟೈಲರ್‌ ಶೈಲಿಯಲ್ಲಿ (ಭಾರತೀಯ ಶೈಲಿ) ಕುಳಿತುಕೊಳ್ಳಬಹುದು ಅಥವಾ 2 ಕಾಲುಗಳನ್ನು 1 ಬದಿ ಹಾಕಿ ಕುಳಿತುಕೊಳ್ಳಬಹುದು (ಮಹಿಳೆಯರು-ಮಾತ್ರ)
  • ಜಪಾನೀಯರ ಹೋಟೆಲುಗಳಲ್ಲಿ ಭಕ್ಷೀಸು ಕೊಡುವ ಹಾಗಿಲ್ಲ.
ಸುಶಿ (esp. ಹೋಟೆಲಿನಲ್ಲಿ)
ಬದಲಾಯಿಸಿ
  • ಸುಶಿಯನ್ನು ಚಾಪ್‌ಸ್ಟಿಕ್‌ನಿಂದಲ್ಲದೆ ಕೈಯಿಂದಲೂ ತಿನ್ನಬಹುದು, ಊಟವು ಹೆಚ್ಚು ಕಡಿಮೆ ಪ್ರಾಸಂಗಿಕವಾಗಿದ್ದಲ್ಲಿ ಮಾತ್ರ (ಇದನ್ನು ಕೆಯ್ಟೆನ್ಜುಶಿ ಹೋಟೆಲಿನಲ್ಲಿ ತಿನ್ನುವಾಗಲೂ ಕೈಯನ್ನು ಬಳಸಬಹುದು).
  • ಸಾಧ್ಯವಿದ್ದಾಗ, ಸುಶಿಯ ಚೂರುಗಳು ಮತ್ತು ಕತ್ತರಿಸಲಾದ ರೋಲ್‌ಗಳ ಭಾಗಗಳನ್ನು ಒಂದೇ ಬಾರಿ ಕಚ್ಚುವ ಮೂಲಕ ತಿನ್ನಬೇಕು, ಅಥವಾ ಮುಗಿಯುವವರೆಗೂ ಉಳಿದ ಭಾಗ ವನ್ನು ಕೈಯಲ್ಲಿ ಹಿಡಿದುಕೊಂಡಿರಬೇಕು; ಕಚ್ಚಿ ಉಳಿದರ್ಧ ಭಾಗವನ್ನು ತಟ್ಟೆಯಲ್ಲಿ ಇಡುವುದನ್ನು ಅಸಭ್ಯವೆಂದು ಪರಿಗಣಿಸಲಾಗುತ್ತದೆ.
  • ನಿಗಿರಿ ಸುಶಿ (ಅನ್ನದ ಮೇಲೆ ಮೀನು) ಮತ್ತು ಮಕಿ (ಸುರುಳಿಗಳು) ಯನ್ನು ಕೈಯಿಂದ ತಿನ್ನಬಹುದು; ಸಶಿಮಿ(ಹಸಿ ಮೀನುಗಳ ಚೂರುಗಳು)ಯನ್ನು ಚಾಪ್‌ಸ್ಟಿಕ್‌ ಗಳಿಂದ ತಿನ್ನಬೇಕು.
  • ನಿಗಿರಿಜುಶಿ ಯನ್ನು ತಿನ್ನುವಾಗ, ಮೇಲ್ಭಾಗವನ್ನು ನಿಮ್ಮ ತೋರ್ಬೆರಳಿನಿಂದ ಮತ್ತು ಹೆಬ್ಬೆರಳು ಮತ್ತು ಮಧ್ಯಬೆರಳನ್ನು ಪಕ್ಕಗಳಲ್ಲಿರುವಂತೆ ಹಿಡಿದುಕೊಳ್ಳಿ. ಮೀನಿನ ಭಾಗವನ್ನು ಅದ್ದಿ (ನೆಟಾ )--ಶೊಯುನಲ್ಲಿ ಅನ್ನದ ಕಡೆಯ ಭಾಗವನ್ನು ಅಲ್ಲ.
  • ನೀವು ವಸಬಿಯನ್ನು ಇಷ್ಟ ಪಡುತ್ತಿದ್ದರೆ, ನಿಮ್ಮ ಶೋಯುಗೆ ಅದನ್ನು ಸ್ವಲ್ಪ ಸೇರಿಸಿಕೊಳ್ಳಿ. ಹೆಚ್ಚಿನ ಪ್ರಮಾಣದ ವಸಬಿಯನ್ನು ನಿಮ್ಮ ಶೋಯುಗೆ ಸೇರಿಸಿಕೊಳ್ಳುವುದನ್ನು ಅಸಭ್ಯವೆಂದು ಪರಿಗಣಿಸಲಾಗುತ್ತದೆ, ಮತ್ತು ಅಡಿಗೆ ಮಾಡಿದವನನ್ನು ಅಪಮಾನ ಮಾಡಿದಂತಾಗುತ್ತದೆ. ಅಡಿಗೆ ಮಾಡಿದವನಿಗೆ ಆ ಚೂರಿಗೆ ಹೆಚ್ಚು ಪ್ರಮಾಣದ ವಸಬಿಯ ಅವಶ್ಯಕತೆಯಿದೆ ಎಂದೆನಿಸಿ ದರೆ, ಅವನೇ ಅದನ್ನು ನಿಮಗಾಗಿ ಸೇರಿಸುತ್ತಾನೆ.
  • ಚಾಪ್‌ಸ್ಟಿಕ್‌ಗಳನ್ನು ಉಜ್ಜುವುದು (ಒಹಾಶಿ ) ಅತಿಯಾದ ಅಸಭ್ಯ ವರ್ತನೆ, ಅದು ಹೋಟೆಲುಗಳು ಅತಿ ಕಡಿಮೆ ದರ್ಜೆಯ ಚಾಪ್‌ಸ್ಟಿಕ್‌ಗಳನ್ನು ಬಳಸುತ್ತದೆ ಎಂದು ನಂಬಲಾಗುತ್ತದೆ.
  • ಮಧ್ಯಮ ವರ್ಗದ ಸುಶಿ ಬಾರ್‌ನಲ್ಲಿ (ಸುಶಿ ತಯಾರಿಸಿದವನು ಇಡುವ ಕಪಾಟು, ಅಥವಾ ಇಟಮೇ ನಿಮ್ಮ ಆಹಾರವನ್ನು ಇಡುವುದು) ನಿಮ್ಮ ಹಾಗೂ ತಯಾರಿಸಿದವನ ಮಧ್ಯೆ ಸಂಪರ್ಕ ಏರ್ಪಡಿಸುವುದೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಗೆಟಾ (ಅಡಿಗೆ ತಯಾರಿಸಿದವನು ಸುಶಿಯನ್ನಿಡಲು ಬಳಸುವ ಮರದ ಹರಿವಾಣ)ವನ್ನು ಈ ದರ್ಜೆಯಲ್ಲಿ ತೆಗೆಯುವುದು ಸೂಕ್ತವಲ್ಲ. ಸುಶಿಯನ್ನು ತೆಗೆದುಕೊಳ್ಳಿ, ಹರಿವಾಣವನ್ನಲ್ಲ.
  • ಅತಿಥಿಯಾಗಿ, ನಿಮಗೆ ಹೆಚ್ಚು ತಿನ್ನಬಾರದು ಎಂದೆನಿಸಿದರೆ, ಸ್ವಲ್ಪವನ್ನೇ ತಿನ್ನುವುದು ಅಥವಾ ದಾಕ್ಷಿಣ್ಯದಿಂದ ಒಟ್ಟಾಗಿ ನಿರಾಕರಿಸುವುದು ಅಸಂಸ್ಕೃತತೆ ಎನಿಸುತ್ತದೆ.
  • ಸಾಂಪ್ರದಾಯಿಕ ಮಲಾಯ್ ರೀತಿಯಲ್ಲಿ ಯಾವಾಗಲೂ ಬಲಗೈಯನ್ನು ಬಳಸಬೇಕು. ಎಂದಿಗೂ ಎಡಗೈಯನ್ನು ಬಳಸಬಾರದು ಇದನ್ನು ಶುದ್ಧವಿಲ್ಲದ ಕೈಯೆಂದು ಪರಿಗಣಿಸ ಲಾಗುತ್ತದೆ.
  • ಅತ್ಯಂತ ಹಿರಿಯ ವ್ಯಕ್ತಿಗೆ ಮೊದಲು ಬಡಿಸಬೇಕು (ಪುರುಷ ಅಥವ ಸ್ತ್ರೀ ಯಾರೇ ಆಗಿರಲಿ).
  • ಹಲ್ಲುಕಡ್ಡಿಗಳನ್ನು ಬಳಸುವಾಗ ಬಾಯಿಯನ್ನು ಮುಚ್ಚಿಕೊಂಡಿರಿ.
  • ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ತಲೆಯನ್ನು ಮೇಜಿನಿಂದ ದೂರಕ್ಕೆ ಬಾಗಿಸಿರಿ.
  • ಸಮಾರಂಭಗಳಲ್ಲಿ ಅತಿಥಿಗಳು ನೆಲದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ, ಗಂಡಸರು ಕಾಲುಗಳನ್ನು ಅಡ್ಡವಾಗಿ ಇಟ್ಟುಕೊಳ್ಳಬೇಕಾಗುತ್ತದೆ, ಹಾಗೂ ಚಾಚುವ ಹಾಗಿಲ್ಲ.
  • ನಿಮ್ಮ ಪಾದಗಳನ್ನು ಇತರರೆಡೆಗೆ ಚಾಚುವುದು ಅಸಭ್ಯ- ನಿಮ್ಮ ಪಾದಗಳನ್ನು ಎದುರು ಇರುವವರಿಂದ ದೂರವಿಡಿ.
  • ನೀವು ಪಾನೀಯಗಳನ್ನು ಕುಡಿದು ಮುಗಿಸುವಾಗ ಸ್ವಲ್ಪವನ್ನು ತಳಭಾಗದಲ್ಲಿ ಬಿಡಬೇಕು.
  • ತಿಂದಾದ ಮೇಲೆ ಒಣಗಿದ ತಟ್ಟೆಯನ್ನು ಹಾಗೇ ಬಿಡಬಾರದು.
  • ಖಾಲಿಯಾದ ತಟ್ಟೆಯನ್ನು ಹೊಡೆಯುವುದು ಅಥವಾ ಬಡಿಯುವುದನ್ನು ಅಸಭ್ಯ ಎಂದು ಪರಿಗಣಿಸಲಾಗುತ್ತದೆ.
  • ನಿಮ್ಮ ತಟ್ಟೆಗೆ ತೆಗೆದುಕೊಂಡ ಖಾದ್ಯಗಳನ್ನು ಪುನಃ ಅದರ ಬಟ್ಟಲಿಗೆ ಹಾಕಬೇಡಿ.
  • ನಿಮ್ಮ ಬಾಯಿಯಲ್ಲಿ ಆಹಾರವಿರುವಾಗ ಮಾತಾಡುವುದನ್ನು ಅಸಭ್ಯ ಎಂದು ಪರಿಗಣಿಸಲಾಗುತ್ತದೆ.

ಪಾಕೀಸ್ತಾನಿ ಊಟದ ಶಿಷ್ಟಾಚಾರಗಳು ಇಸ್ಲಾಮಿಕ್ ಶಿಕ್ಷಣದ, ದಕ್ಷಿಣ ಏಷಿಯಾ ಸಂಪ್ರದಾಯ ಮತ್ತು ಬ್ರಿಟಿಷ್ ಪ್ರಭಾವದ ಮಿಶ್ರಣವಾಗಿವೆ:

  • ಊಟಕ್ಕಿಂತ ಮೊದಲು "ಬಿಸ್ಮಿಲ್ಲಾಹ್ ಅರ್-ರಹಮಾನ್ ಅಲ್-ರಹೀಮ್" ಎಂದು ಪಠಿಸಿ (ದಯಾಳು & amp; ಉಪಕಾರಿಯಾದ ಅಲ್ಲಾನ ಹೆಸರಲ್ಲಿ)
  • ಆತಿಥ್ಯ ನೀಡುವವರನ್ನು ಅಭಿನಂದಿಸುವ ಹಾಗೂ ಕುಳಿತುಕೊಳ್ಳುವ ಮೊದಲೆ ನಿಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
  • ಚಾಕು ಮತ್ತು ಫೋರ್ಕ್‌ಗಳನ್ನು ಬಳಸುವಾಗ, ಕಾಂಟಿನೆಂಟಲ್ ಶೈಲಿಯಲ್ಲಿ ತಿನ್ನಿ, ಫೋರ್ಕ್ ಅನ್ನು ಎಡಗೈಯಲ್ಲಿ ಹಿಡಿಯಿರಿ.
  • ಕುಟುಂಬದ ಹಿರಿಯರು ಮೇಜಿನ ಬಳಿ ಬರುವವರೆಗೂ ತಿನ್ನಬೇಡಿ.
  • ದಸ್ತರ್ಖ್ವಾನ್ (ಒಂಡು ಉದ್ದನೆಯ ಬಟ್ಟೆಯ ತುಂಡು) ಅನ್ನು ನೆಲದ ಮೇಲೆ ಊಟಕ್ಕೆ ಕುಳಿತುಕೊಳ್ಳುವಾಗ ಹಾಸಿಕೊಳ್ಳಬೇಕು ಮತ್ತು ಇದರ ಮೇಲೆ ಊಟ ತಿನ್ನುವುದು ಅತಿ ಸಭ್ಯ ವಾದ ರೀತಿ ಎಂದು ಪರಿಗಣಿಸಲಾಗುತ್ತದೆ.
  • ಬ್ರೆಡ್ (ಚಪಾತಿ)ಯನ್ನು ಮೊದಲಿಗೆ ಕೈಯಿಂದ ತಿನ್ನಲಾಗುತ್ತದೆ.
  • ಬ್ರೆಡ್ (ಚಪಾತಿ)ಯನ್ನು ಬಲಗೈಯಿಂದ ತಿನ್ನಲು ಪ್ರಯತ್ನಿಸಿ.
  • ತಿನ್ನುವಾಗ ಇತರರ ತಟ್ಟೆಗಳತ್ತ ನೋಡಬೇಡಿ.
  • ಇತರರಿಗೆ ಕೇಳಿಸುವಂತೆ ಜೋರಾಗಿ ಶಬ್ಧ ಮಾಡುತ್ತ ಅಗಿಯಬೇಡಿ.
  • ಬಾಯಿಯನ್ನು ಮುಚ್ಚಿ ಅಗಿಯಿರಿ.
  • ತಟ್ಟೆಯಲ್ಲಿರುವ ಎಲ್ಲವನ್ನೂ ತಿನ್ನಿ; ತಟ್ಟೆಯಲ್ಲಿ ಅಲ್ಪ ಸ್ವಲ್ಪ ಉಳಿಸುವುದನ್ನು ದುಂದುಗಾರನೆಂದು ಪರಿಗಣಿಸಲಾಗುತ್ತದೆ.
  • ಪುನಃ ಬಡಿಸಿಕೊಂಡು ತಿನ್ನುವುದನ್ನು ಸಭ್ಯವೆಂದು ಭಾವಿಸಲಾಗುತ್ತದೆ.
  • ಖಾದ್ಯಗಳನ್ನು ಬ್ರೆಡ್‌ನ ಜೊತೆ ತಿನ್ನುತ್ತಿದ್ದರೆ, ಮೊದಲಿಗೆ ಅದನ್ನು ತುಂಡು ಮಾಡಿಕೊಳ್ಳಿ.
  • ಯಾವಾಗಲೂ "ಅಲ್-ಹಮ್ದು-ಲಿಲ್ಲಾಹ್" (ದೇವರಿಗೆ ಧನ್ಯವಾದಗಳು)ಎಂದು ಊಟದ ನಂತರ ಹೇಳಿ.
  • ಊಟದ ಕೋಣೆಯೊಳಕ್ಕೆ ಹೋಗುವ ಮೊದಲು ಅಥವಾ ಊಟವನ್ನು ತೆಗೆದುಕೊಳ್ಳುವುದಕ್ಕಿಂತ ಮೊದಲೇ ಕೇಳಿಕೊಳ್ಳುವವರೆಗೂ ಕಾಯಿರಿ.
  • ಎಲ್ಲಿ ಕುಳಿತುಕೊಳ್ಳಬೇಕೆಂದು ಹೇಳುವವರೆಗೂ ಕಾಯಿರಿ. ಕುಳಿತುಕೊಳ್ಳುವುದಕ್ಕಾಗಿ ಒಂದು ಯೋಜನೆ ಇರಬಹುದು.
  • ಕುಟುಂಬದ ಹಿರಿಯ, ಸಾಮಾನ್ಯವಾಗಿ ತಂದೆ, ಅಥವಾ ಅತಿಥಿಯು ಸಾಮಾನ್ಯವಾಗಿ ಮೇಜಿನ ಪ್ರಮುಖ ಸ್ಥಾನದಲ್ಲಿ ಕುಳಿತುಕೊಳ್ಳುವ ಗೌರವ ಹೊಂದಿರುತ್ತಾನೆ.
  • ನೀವು ತಿನ್ನುವುದಕ್ಕಿಂತ ಮೊದಲೇ ಆತಿಥ್ಯ ನೀಡುವವರು ಹಾಗೆಂದು ಹೇಳುವವರೆಗೂ ಕಾಯುವುದು ಸಭ್ಯತೆ.
  • ಆತಿಥ್ಯ ನೀಡುವವರು ಯಾವುದಾದರೊಂದು ಖಾದ್ಯವನ್ನು ರುಚಿ ನೋಡಲು ಹೇಳಿದಾಗ, ನಿರಾಕರಿಸುವುದನ್ನು ಮನಸ್ಸನ್ನು ನೋಯಿಸುವುದೆಂದು ಪರಿಗಣಿಸಲಾಗುತ್ತದೆ.
  • ಊಟವನ್ನು ಸಾಮಾನ್ಯವಾಗಿ ಕೌಟುಂಬಿಕ-ಶೈಲಿ ಅಥವಾ ನೀವೇ ಬಡಿಸಿಕೊಳ್ಳುವಂತಹ ಬಫೆಟ್-ಶೈಲಿಯಲ್ಲಿ ನೀಡಲಾಗುತ್ತದೆ.
  • ಒಂದು ಫೋರ್ಕ್ ಮತ್ತು ಚಮಚೆಯು ಊಟದಲ್ಲಿ ಬಳಸುವ ಸಾಮಾನ್ಯ ಪಾತ್ರೆಗಳಾಗಿರುತ್ತವೆ. ಫೋರ್ಕ್ ಅನ್ನು ಖಾದ್ಯವನ್ನು ಸರಿಪಡಿಸಿಕೊಳ್ಳಲು ಎಡಗೈಯಲ್ಲಿ ಹಿಡಿದುಕೊಳ್ಳಲಾಗುತ್ತದೆ, ವಿಶೇಷವಾಗಿ ಅನ್ನವನ್ನು, ಮತ್ತು ಚಮಚೆಯನ್ನು ಬಲಗೈಯಲ್ಲಿ ಹಿಡಿದುಕೊಳ್ಳಲಾಗುತ್ತದೆ. ಚಾಕು ಲಭ್ಯವಿಲ್ಲದಿದ್ದಲ್ಲಿ, ಫೋರ್ಕನ್ನು ಖಾದ್ಯಗಳನ್ನು ಚೂರುಗಳನ್ನಾಗಿ ಮಾಡಲು ಬಳಸಲಾಗುತ್ತದೆ.
  • ಪ್ರಾಸಂಗಿಕ ವ್ಯವಸ್ಥೆಗಳಲ್ಲಿ ಕೈಗಳನ್ನು ಬಳಸಿ ತಿನ್ನಬಹುದು.
  • ಸಾಮಾನ್ಯವಾಗಿ ಊಟವನ್ನು ಬಡಿಸುವ ಮೊದಲು ಮನೆಯ ಮುಖ್ಯಸ್ಥ ಪ್ರಾರ್ಥನೆಯನ್ನು ಪಠಿಸುತ್ತಾನೆ.
  • ಬಡಿಸುವಾಗ ಯಾವಾಗಲೂ ಚಮಚೆಯನ್ನು ಬಳಸಬೇಕು.

ಮಧ್ಯ ಹಾಗೂ ದಕ್ಷಿಣ ಅಮೇರಿಕಾ

ಬದಲಾಯಿಸಿ

ಬ್ರೆಜಿಲ್‌

ಬದಲಾಯಿಸಿ
  • ಬ್ರೆಜಿಲ್‌ನಲ್ಲಿ, ಆತಿಥ್ಯ ನೀಡುವವರು ಯಾವಾಗಲೂ ಅತಿಥಿಗಳು ತಾವಾಗಿಯೇ ಬಡಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ. ಬಡಿಸಿಕೊಳ್ಳುವವರು ತಟ್ಟೆ ತುಂಬುವವರೆಗೂ ತೆಗೆದುಕೊಳ್ಳ ಬಾರದು. ತಟ್ಟೆಯಲ್ಲಿ ಆಹಾರವನ್ನು ಉಳಿಸಿದರೆ ಅದು ಕೆಟ್ಟ ಲಕ್ಷಣವಾಗುತ್ತದೆ.
  • ಪ್ರತಿಬಾರಿ ಮೇಜಿನ ಬಳಿ ಊಟಕ್ಕೆ ಹೋಗುವ ಮೊದಲೆ ಕೈಗಳನ್ನು ತೊಳೆದುಕೊಳ್ಳಬೇಕು. ನೀವು ಏನನ್ನಾದರೂ ಕುಡಿದ ಬಳಿಕ ಬಾಯಿಯನ್ನು ಒರೆಸಿಕೊಳ್ಳಿ ಮತ್ತು ಎಂದಿಗೂ ಬಾಟಲ್‌ನಿಂದ ನೇರವಾಗಿ ಕುಡಿಯಬೇಡಿ. ಯಾವಾಗಲೂ ಕಟ್ಲೆರಿಯನ್ನು ಬಳಸಬೇಕು, ಪಿಜ್ಜಾ ತಿನ್ನುವಾಗಲೂ ಸಹ.
  • ಕುಟುಂಬದ ಹಿರಿಯ, ಸಾಮಾನ್ಯವಾಗಿ ತಂದೆ, ಅಥವಾ ಅತಿಥಿಯು ಸಾಮಾನ್ಯವಾಗಿ ಮೇಜಿನ ಪ್ರಮುಖ ಸ್ಥಾನದಲ್ಲಿ ಕುಳಿತುಕೊಳ್ಳುವ ಗೌರವ ಹೊಂದಿರುತ್ತಾನೆ.
  • ಕರವಸ್ತ್ರವನ್ನು ನಿಮ್ಮ ತೊಡೆಯ ಮೇಲಿರಿಸಿಕೊಳ್ಳಿ ಹಾಗೂ ಅದನ್ನು ಬಾಯಿ ಒರೆಸಿಕೊಳ್ಳಲು ಉಪಯೋಗಿಸಿ. ನಿಮ್ಮ ಮೂಗನ್ನು ಅದರಲ್ಲಿ ಎಂದೂ ಒರೆಸಿಕೊಳ್ಳಬೇಡಿ.
  • ಖಾದ್ಯಗಳನ್ನು ಎಡಭಾಗದಿಂದ ಬಡಿಸಬೇಕು, ಹಾಗೂ ಬಲಭಾಗದಿಂದ ತೆಗೆದುಕೊಳ್ಳಬೇಕು. ಮೇಜಿನ ಮೇಲಿರುವ ನಿಮ್ಮ ತಟ್ಟೆಯಲ್ಲಿ ಆಹಾರ ಇದ್ದರೆ, ಅದು ಎಡಭಾಗದಿಂಡ ಮಾತ್ರ ಬರುತ್ತದೆ.
  • ಇದು ಉತ್ತಮ ಶಿಕ್ಷಣ, ಆದರೆ ಕಟ್ಟು ಪಾಡು ಇಲ್ಲ, ಅತಿಥಿಗಳಿಗೆ ಮೊದಲು ಬಡಿಸಬೇಕು
  • ಆತಿಥ್ಯ ನೀಡುವವರು ತಿನ್ನುವಂತೆ ಹೇಳುವವರೆಗೂ ತಿನ್ನಲು ಪ್ರಾರಂಭಿಸಬಾರದು. ಬಹಳಷ್ಟು ಜನರು ಊಟಕ್ಕೆ ಕುಳಿತಿರುವಾಗ, ಎಲ್ಲರಿಗೂ ಬಡಿಸಿದ ನಂತರ ತಿನ್ನಲು ಪ್ರಾರಂಭಿಸ ಬೇಕು.
  • ಎಂದಿಗೂ ನಿಮ್ಮ ಕೈಗಳನ್ನು ತಿನ್ನಲು ಬಳಸಬೇಡಿ, ವಾಡಿಕೆಯಂತೆ ಕೆಲವು ಖಾದ್ಯಗಳಾದ ಬ್ರೆಡ್, ಆಸ್ಪರಾಗಸ್ ಸ್ಪಿಯರ್ಸ್ ನಂತಹವುಗಳನ್ನು ಕೈಯಲ್ಲಿ ತಿನ್ನಬಹುದು. ಅನೌಪಚಾರಿಕ ಊಟದಲ್ಲಿ ನೀವು ಬೆರಳುಗಳನ್ನು ಬಳಸಬಹುದು, ನೀವು ಚಿಕನ್ ವಿಂಗ್ಸ್, ಪಿಜ್ಜಾ, ಎಂಪನಾಡಸ್ (ನಿಶ್ಚಿತ ಆಹಾರ), ಇತ್ಯಾದಿಗಳನ್ನು ತಿನ್ನಬಹುದು.
  • ಬ್ರೆಡ್ ಸುರುಳಿಗಳನ್ನು ತಿನ್ನುವಾಗ, ಬೆಣ್ಣೆ ಹಚ್ಚುವುದಕ್ಕಿಂತ ಮೊದಲೆ ತುಂಡು ಮಾಡಿಕೊಳ್ಳಿ. ಚಾಕುವನ್ನು ಬರೀ ಬೆಣ್ಣೆ ಹಚ್ಚಲು ಬಳಸಿ, ತುಂಡು ಮಾಡಲು ಅಲ್ಲ.
  • ಮೇಜಿನ ಮೇಲೆ ನಿಮ್ಮ ಮೊಣಕೈಗಳನ್ನು ಇಡಲೇ ಬಾರದು.
  • ನಿಮಗೋಸ್ಕರ ಪಾನೀಯವನ್ನು ಸುರಿದು ಕೊಳ್ಳುತ್ತಿದ್ದಲ್ಲಿ, ನಿಮ್ಮ ಪಕ್ಕದಲ್ಲಿರುವವರಿಗಾಗಿ ಪಾನೀಯವನ್ನು ನೀಡಿ.
  • ಮೇಜಿನ ಬಳಿ ಫೋನ್‌ಗೆ ಉತ್ತರಿಸುವುದು ಅಸಭ್ಯ ಎಂದು ಪರಿಗಣಿಸಲಾಗುತ್ತದೆ. ತುರ್ತಾಗಿ ಕರೆಯನ್ನು ಸ್ವೀಕರಿಸಬೇಕಾದಲ್ಲಿ, ಬೇರೆಯವರ ಕ್ಷಮೆ ಕೇಳಿ ಹೊರಗೆ ಹೋಗಿ ಮಾತಾಡಿ.
  • ನೀವು ಮೇಜಿನಿಂದ ದೂರ ಹೋಗಬೇಕಾದಲ್ಲಿ ನಿಮ್ಮಷ್ಟಕ್ಕೆ ಕ್ಷಮೆ ಕೇಳಬೇಕಾಗುತ್ತದೆ.
  • ಇತರರ ತಟ್ಟೆಯ ಕಡೆ ವಾಲಬೇಡಿ. ನೀವು ಏನಾದರೂ ಒಬ್ಬರಿಗೆ ಕೊಡಬೇಕೆಂದು ಕೊಂಡಲ್ಲಿ ಹತ್ತಿರದ ವ್ಯಕ್ತಿಯನ್ನು ಕೇಳಿಕೊಳ್ಳಿ. ನೀವು ಏನಾದರೂ ಮುಂದೆ ಕೊಡಬೇಕೆಂದಿದ್ದಲ್ಲಿ, ನಿಮಗೆ ಹತ್ತಿರವಿದ್ದರೆ ಮಾತ್ರ ಕೊಡಿ ಮತ್ತು ನಿಮಗೆ ಸಾಧ್ಯವಾದರೆ ನೇರವಾಗಿ ಅವರಿಗೇ ಕೊಡಿ.
  • ಪಕ್ಕದವರ ತಟ್ಟೆಯಿಂದ ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಡಿ ಹಾಗೂ ಹಾಗೆಂದು ಅವರನ್ನು ಕೇಳಿಕೊಳ್ಳಬೇಡಿ.
  • ಆಹಾರವನ್ನು ಅಗಿಯುವಾಗ, ನಿಮ್ಮ ಬಾಯಿ ಮುಚ್ಚಿರುವಂತೆ ನೋಡಿಕೊಳ್ಳಿ ಅದು ನುಂಗಿದ ಮೇಲೆ ಮಾತ್ರ ಮಾತನಾಡಿ. ಒಬ್ಬರ ಬಾಯಿ ತುಂಬಾ ಇರುವಾಗ ಮಾತನಾಡುವುದು ಅಥವಾ ತಿನ್ನುವುದನ್ನು ತಿರಸ್ಕಾರದಿಂದ ನೋಡಲಾಗುತ್ತದೆ, ಬಹಳ ಅವಶ್ಯಕವಿದ್ದರೆ, ಬಾಯಿಗೆ ಒಂದು ಕೈಯನ್ನು ಅಡ್ಡ ಹಿಡಿದು ಮಾತನಾಡಬಹುದು (ಬಾಯಿಯಿಂದ ಆಹಾರ ಹೊರಬೀಳದಂತೆ ತಡೆಯಲು), ಮತ್ತು ಬರೀ ಚಿಕ್ಕ ವಾಕ್ಯಗಳನ್ನು ಮಾತ್ರ ಮಾತನಾಡಿ.
  • ಆಹಾರವನ್ನು ಗಬಗಬನೆ ತಿನ್ನಬೇಡಿ ಅಥವಾ ಜೋರಾಗಿ ಸದ್ದು ಮಾಡುತ್ತ ತಿನ್ನಬೇಡಿ.
  • ಹಲ್ಲಿನ ಸಂದುಗಳಿಂದ ಆಹಾರವನ್ನು ಉಗುರುಗಳಿಂದ ಅಥವಾ ಕಟ್ಲೆರಿಗಳಿಂದ ಎಂದಿಗೂ ತೆಗೆಯಬೇಡಿ
  • ತಟ್ಟೆಯಲ್ಲಿರುವುದೆಲ್ಲವನ್ನೂ ತಿನ್ನಿ; ಆಹಾರವನ್ನು ತಟ್ಟೆಯಲ್ಲಿ ಬಿಡುವವರನ್ನು ದುಂದುಗಾರನೆಂದು ಪರಿಗಣಿಸಲಾಗುತ್ತದೆ.
  • ನಿಮ್ಮ ಚಾಕುವಿನಿಂದ ಎಂದಿಗೂ ಆಹಾರವನ್ನು ಬಾಯಿಗೆ ಹಾಕಬೇಡಿ.
  • ಕೇಳುವುದಕ್ಕೆ ಮೊದಲೇ ಎರಡನೆಯ ಭಕ್ಷ್ಯಗಳನ್ನು ತೆಗೆದುಕೊಳ್ಳುವುದು ಎಂದಿಗೂ ಸೂಕ್ತವಲ್ಲ.
  • ಊಟ ಸರಿಯಾಗಿಲ್ಲ ಎಂದು ಹೇಳಲೇ ಬಾರದು, ಅವಶ್ಯಕತೆ ಇಲ್ಲದೆ ("ಈ ಊಟ ತುಂಬಾ ಉಪ್ಪಾಗಿದೆ" ಎನ್ನುವಂತಹ).
  • ತೇಗುವುದು, ಕೆಮ್ಮುವುದು, ಆಕಳಿಸುವುದು, ಅಥವಾ ಸೀನುವುದನ್ನು ಮೇಜಿನ ಬಳಿ ದೂರವಿರಿಸಬೇಕು. ಒಂದು ವೇಳೆ ಮಾಡಿದರೆ, "ನನ್ನನ್ನು ಕ್ಷಮಿಸಿ" ಎಂದು ಕೇಳಿಕೊಳ್ಳಬೇಕು.
  • ಬಟ್ಟಲು ಅಥವಾ ಒಂದು ದೊಡ್ಡ "ಸೂಪ್ ತಟ್ಟೆ"ಯಲ್ಲಿರುವುದನ್ನು ನೀವು ತಿಂದು ಖಾಲಿ ಮಾಡಿದಲ್ಲಿ ಒಂದು ಚಮಚೆಯನ್ನು ಅದರ ಮೇಲೆ ಇಡಬೇಕು.
  • ಚಾಕು ಲಭ್ಯವಿಲ್ಲದಿದ್ದರೆ ಫೋರ್ಕನ್ನು ಆಹಾರವನ್ನು ತುಂಡುಮಾಡಲು ಬಳಸಬಹುದು.
  • ಬಾಯಿಯಲ್ಲಿ ಹಿಡಿಸಲಾರದಷ್ಟು ದೊಡ್ಡ ತುಂಡುಗಳನ್ನು ತೆಗೆದು ಕೊಳ್ಳಬೇಡಿ.
  • ಅಡಿಗೆ ಮಾಡಿದವರಿಗೆ ಧನ್ಯವಾದಗಳನ್ನು ಹೇಳುವುದು ಸ್ವಾಗತಾರ್ಹ (ಅವನು / ಅವಳು ಮೇಜಿನ ಬಳಿ ಇದ್ದಾಗ), ಅಲ್ಲಿ ಇಲ್ಲ ಇದ್ದಲ್ಲಿ ಕಡ್ಡಾಯವಲ್ಲ.
  • ಹೆಚ್ಚಾಗಿ ಯೂರೋಪಿಯನ್ ದರ್ಜೆಯ ಊಟದ ಶಿಷ್ಟಾಚಾರವನ್ನು ಅನುಸರಿಸಲಾಗುತ್ತದೆ, ಜೊತೆಯಲ್ಲಿ ಕೆಲವು ಅಳವಡಿಕೆಗಳೂ ಇವೆ ಕೆಲ ವಿಶೇಷ ಖಾದ್ಯಗಳಿಗೆ ಅಥವಾ ಸ್ಥಳೀಯ ಸಂಪ್ರದಾಯಗಳಂತೆ.
  • ಉಳಿದ ಕೆವಿಚೆ ನಿಂಬೆ ರಸವನ್ನು ಮೀನಿನ ಚೂರುಗಳಿರುವ ಲೋಟಕ್ಕೆ ಸುರಿದುಕೊಳ್ಳಬಹುದು. ಈ ಅಭ್ಯಾಸವನ್ನು "ಹುಲಿಯ ಹಾಲನ್ನು ಕುಡಿಯುವುದು" ಎಂದು ಹೇಳಲಾಗು ವುದು, ಪೆರುವಿನಲ್ಲಿ ಹುಲಿಗಳಿಲ್ಲದೇ ಇರುವುದು ಪ್ರಶ್ನಾರ್ಹ.ಬಹುಶಃ ಇದನ್ನು ಚಿರತೆಯ ಹಾಲು ಎನ್ನಬಹುದು
  • ಊಟದ ನಂತರ ಮೈಮುರಿಯಬಾರದು.

ಯುರೋಪ್‌

ಬದಲಾಯಿಸಿ
  • ದಯವಿಟ್ಟು ಮತ್ತು ಧನ್ಯವಾದಗಳ ನ್ನು ಹೇಳುವುದನ್ನು ನೆನಪಿಟ್ಟುಕೊಳ್ಳಿ
  • ಫ್ರೆಂಚ್ ಬ್ರೆಡ್ ಅನ್ನು ಯಾವಾಗಲೂ ಕತ್ತರಿಸುವುದಕ್ಕಿಂತ ಹಾಗೇ ತುಂಡು ಮಾಡಿ. ಅದನ್ನು ಸೂಪ್ ಅಥವಾ ಸಾಸ್‌ನಲ್ಲಿ ಅದ್ದಬೇಡಿ.
  • ಮೇಜಿನ ಮೇಲೆ ಮೊಣಕೈಯನ್ನು ಇಡಬೇಡಿ.
  • ಪ್ರತಿಬಾರಿ ನೀವು ಏನಾದರೂ ಕುಡಿದಲ್ಲಿ ಕರವಸ್ತ್ರ ಬಳಸಿ.
  • ಹೆಚ್ಚು ಹೆಚ್ಚು ತೆಗೆದುಕೊಳ್ಳುವುದಕ್ಕಿಂತ ಮೊದಲೇ ತಟ್ಟೆಯಲ್ಲಿರುವುದನ್ನು ಮುಗಿಸಿ.
  • ನಿಮ್ಮ ವೈನ್‌ನಲ್ಲಿ ಐಸ್ ಹಾಕಿಕೊಳ್ಳಬೇಡಿ. ರೆಸ್ಟಾರೆಂಟುಗಳಲ್ಲಿ, ವೈನ್ ಅನ್ನು ಸೂಕ್ತ ತಾಪಮಾನದಲ್ಲಿ ನೀಡಲಾಗುತ್ತದೆ.
  • ಊಟವನ್ನು ಮುಗಿಸಿದ ನಂತರ, ಕಟ್ಲೆರಿಗಳನ್ನು ಸಮಾನಾಂತವಾಗಿ ಇಡಿ, ನೇರವಾಗಿ ಮಧ್ಯದಲ್ಲಿ ಇಟ್ಟರೆ ವೆಯ್ಟರ್‌ಗೆ ನಿಮ್ಮ ತಟ್ಟೆಯನ್ನು ತೆಗೆದು ಕೊಂಡು ಹೋಗಬಹುದೆಂದು ತಿಳಿಯುತ್ತದೆ. ನೀವು ಊಟವನ್ನು ಇನ್ನೂ ತಿನ್ನುತ್ತಿದ್ದರೆ, ಕಟ್ಲೆರಿಯನ್ನು ತಟ್ಟೆಯ ಪಕ್ಕದಲ್ಲಿ 4:00 ಮತ್ತು 8:00 ಹಾಗೆ ಇಡಿ ತಟ್ಟೆಯ ಎರಡೂ ಬದಿಗಳಲ್ಲಿ, ಇದು ವೆಯ್ಟರ್‌ಗೆ ನಿಮ್ಮ ತಟ್ಟೆಯನ್ನು ಅಲ್ಲಿಯೇ ಬಿಡಬೇಕೆಂಬ ಸೂಚನೆಯಾಗಿದೆ.
  • ಫೋರ್ಕನ್ನು ನಿಮ್ಮ ಬಾಯಿಗಿಡುವಾಗ ಮುಂದೋಳನ್ನು ಮೇಲಕ್ಕೆತ್ತಿ.
  • ಸ್ವಿಟ್ಜರ್ಲ್ಯಾಂಡ್‌ನಲ್ಲಿ ನಿಮ್ಮನ್ನು ಊಟಕ್ಕೆ ಕರೆದರೆ ಸರಿಯಾದ ಸಮಯಕ್ಕೆ ಬರುವುದನ್ನು ನಿರೀಕ್ಷಿಸಲಾಗುತ್ತದೆ.
  • ಸ್ವಿಟ್ದರ್ಲ್ಯಾಂಡ್‌ನಲ್ಲಿ ಟೋಸ್ಟಿಂಗ್ ಮಾಡುವಾಗ, ನಿಮ್ಮ ಲೋಟವನ್ನು ಹಿಡಿದು ಕುಡಿಯುವುದಕ್ಕಿಂತ ಮೊದಲೆ ಎಲ್ಲರತ್ತ ನೋಡಿ.
  • ನಿಮಗೆ ಚೀಸ್ ಅನ್ನು ಗಾಲಿಯಾಕಾರದಲ್ಲಿ ನೀಡಿದರೆ, ಅದನ್ನು ಮಧ್ಯ ಭಾಗದಿಂದ ಕತ್ತರಿಸಿ ತುಂಡುಗಳನ್ನಾಗಿ ಮಾಡಿ (ಪೈಯನ್ನು ಭಾಗ ಮಾಡುವಂತೆ).
  • ಊಟ ಮುಗಿಸುವ ಮುನ್ನ ತಟ್ಟೆಯಲ್ಲಿ ಸ್ವಲ್ಪವೇ ಉಳಿಸುವುದು ಸಭ್ಯತೆ, ಇದರಿಂದಾಗಿ ಆತಿಥ್ಯ ನೀಡುವವರ ಸತ್ಕಾರವನ್ನು ಹೊಗಳಿದಂತಾಗುತ್ತದೆ. ಜೊತೆಯಲ್ಲಿ, ಆತಿಥ್ಯ ನೀಡುವವರು ಎರಡನೇ ಬಾರಿಗೆ ಆಹಾರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ.
  • ಬೇರೊಬ್ಬರ ತಟ್ಟೆ ಅಥವಾ ಬಟ್ಟಲನ್ನು ನೋಡುವುದು ಅನುಚಿತ.
  • ತಯಾರಿಸಿದವರಿಗೆ "ಅದು ಚೆನ್ನಾಗಿತ್ತು" ಎಂದು ಹೇಳಲು ನೆನಪಿಡಿ.
  • ಚಿಕ್ಕ ಪದಾರ್ಥವನ್ನು ಕತ್ತರಿಸಬಾರದು.
  • ಮೇಜಿನ ಮೇಲೆ ಮೊಣಕೈ ಇಡಬಾರದು.
  • ಅಹಿತಕಾರಿ ಶಬ್ಧಗಳು ಇರಬಾರದು.
  • ಒಟ್ಟಿನಲ್ಲಿ, ಉಸಿರು ಕಟ್ಟುವಂತಿರಬಾರದು ಅಥವಾ ವಿಪರೀತವಾಗಿ ಔಪಚಾರಿಕತೆ ಕೂಡಾ ಇರಬಾರದು. ವಿಶೇಷವಾಗಿ ಊಟ ಬೇರೆಯವರ ಮನೆಯಲ್ಲಿದ್ದಾಗ, ಉಲ್ಲಾಸ ಮತ್ತು ಉಚಿತ ಮರ್ಯಾದೆಗೆ ಅನುಗುಣವಾಗಿರಬೇಕು. ಅತಿಥಿಯು ಪಾರ್ಟಿಯಲ್ಲಿ ಹಾಸ್ಯಭರಿತರಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ.
  • ಬಾಯಲ್ಲಿ ಆಹಾರವಿರುವಾಗ ಮಾತನಾಡಬೇಡಿ
  • ಎರಡನ್ನೂ ಒಟ್ಟಿಗೆ ಬಳಸುವಾಗ ಫೋರ್ಕನ್ನು ಎಡಗೈಯಲ್ಲಿ ಮತ್ತು ಚಾಕುವನ್ನು ಬಲಗೈಯಲ್ಲಿ ಹಿಡಿಯಬೇಕು.
  • ಹಸ್ತದಿಂದ ಚಾಕುವನ್ನು ಹಿಡಿಯಬೇಕು ಮತ್ತು ಇನ್ನೊಂದು ಕೈಯಲ್ಲಿ ಫೋರ್ಕ್ ಅನ್ನು ಟೈನ್ಸ್ (ಪ್ರಾಂಗ್ಸ್) ಕೆಳಮುಖವಾಗಿರುವಂತೆ ಹಿಡಿಯಿರಿ.
  • ಖಾದ್ಯವನ್ನು ತಿನ್ನುವುದಕ್ಕಿಂತ ಮೊದಲೆ "ಒಂದು ಬಾರಿಗೆ ಒಂದು ಚೂರಿ"ನಂತೆ ಕತ್ತರಿಸಬೇಕು, ಮತ್ತು ತಕ್ಷಣಾ ಅದನ್ನು ತಿನ್ನಬೇಕು. ಬಹಳಷ್ಟು ತುಂಡುಗಳಿಗೆ "ಆಕಾರ ನೀಡಿ" ಆಮೇಲೆ ತಿನ್ನಲು ಪ್ರಾರಂಭಿಸಬಾರದು.
  • ನೀವು ಸಿಹಿ ಖಾದ್ಯವನ್ನು ತಿನ್ನುತ್ತಿದ್ದರೆ, ನಿಮ್ಮ ಫೋರ್ಕ್ (ಒಂದನ್ನು ಹೊಂದಿದ್ದರೆ) ಅನ್ನು ಎಡಗೈಯಲ್ಲಿ ಹಿಡಿಯಬೇಕು ಮತ್ತು ಚಮಚೆಯನ್ನು ಬಲಗೈಯಲ್ಲಿ.
  • ಸೂಪ್ ಅನ್ನು ತಿನ್ನುವಾಗ, ನಿಮ್ಮ ಚಮಚೆಯನ್ನು ಬಲಗೈಯಲ್ಲಿ ಹಿಡಿಯಬೇಕು ಮತ್ತು ಬಟ್ಟಲನ್ನು ದೂರವಿಟ್ಟು ತೆಗೆದುಕೊಳ್ಳಬೇಕು. ಸೂಪ್‌ನ ಚಮಚೆಯನ್ನು ಪೂರ್ಣವಾಗಿ ಬಾಯಿಯೊಳಗೆ ಇಡಬಾರದು, ಅದನ್ನು ಚಮಚೆಯ ಒಂದು ತುದಿಯಿಂದ ಹೀರಿ ಕುಡಿಯಬೇಕು.
  • ಫೋರ್ಕ್‌ನಲ್ಲಿ ತೆಗೆದುಕೊಳ್ಳುವಂತೆ ಬೆರಳಿನಲ್ಲಿ ಆಹಾರವನ್ನು ತಳ್ಳುವುದು ಪ್ರಿಯವಾದುದಲ್ಲ, ಬಹಳಷ್ಟು ಆಹಾರ ಪದಾರ್ಥಗಳನ್ನು ಹಿಡಿಯುವುದೂ ಸಹ. ಹಣ್ಣು, ಬ್ರೆಡ್, ಸ್ಯಾಂಡ್‌ ವಿಚ್‌ಗಳು ಅಥವಾ ಬರ್ಗರ್‌ಗಳಂತಹ ಆಹಾರವನ್ನು ಬೆರಳುಗಳಿಂದ ತಿನ್ನಬಹುದು, ಕೆಲವೊಂದು ಆಹಾರಗಳಾದ ಆಸ್ಪರಾಗಸ್ ಸ್ಪಿಯರ್ಸ್‌ನಂತಹ ಸಾಸ್‌ನಲ್ಲಿ ಅದ್ದಿ ತಿನ್ನಬಹುದಾದ ಸಾಂಪ್ರದಾಯಿಕ ಖಾದ್ಯವನ್ನು ಬೆರಳುಗಳಿಂದಲೇ ತಿನ್ನಬೇಕು.
  • ಅಲ್ಲಿ ಬಹಳಷ್ಟು ಚಾಕುಗಳು ಅಥವಾ ಫೋರ್ಕುಗಳು ಇದ್ದರೆ, ನಿಮ್ಮ ಕಡೆಯಲ್ಲಿ ಹೊರಭಾಗದಲ್ಲಿರುವುದನ್ನು ಆಯ್ದುಕೊಳ್ಳಿ.
  • ಪಾನೀಯಗಳು ಯಾವಾಗಲೂ ನಿಮ್ಮ ತಟ್ಟೆಯ ಬಲಭಾಗದಲ್ಲಿ ಇರಬೇಕು ಹಾಗೂ ಬ್ರೆಡ್‌ನ ತಟ್ಟೆ ಎಡಭಾಗದಲ್ಲಿ.
  • ಬ್ರೆಡ್‌ನ ಸುರುಳಿಗಳನ್ನು ತಿನ್ನುವಾಗ, ಬೆಣ್ಣೆ ಸವರುವ ಮುನ್ನ ತುಂಡು ಮಾಡಿ. ಚಾಕುವನ್ನು ಬ್ರೆಡ್‌ಗೆ ಬೆಣ್ಣೆ ಹಚ್ಚಲು ಮಾತ್ರ ಬಳಸಿ, ಕತ್ತರಿಸಲು ಅಲ್ಲ.
  • ಆತಿಥ್ಯ ನೀಡುವವರು, ಅತಿಥಿಗಳಿಗೆ ತಿನ್ನುವಂತೆ ಸೂಚನೆ ಕೊಡುವವರೆಗೂ ಪ್ರಾರಂಭಿಸಬೇಡಿ. ಬಹಳಷ್ಟು ಜನರು ಊಟಕ್ಕೆ ಕುಳಿತಿರುವಾಗ, ಎಲ್ಲರಿಗೂ ಬಡಿಸಿದ ನಂತರ ತಿನ್ನಲು ಪ್ರಾರಂಭಿಸಬೇಕು.
  • ತಿನ್ನುವುದು ಮುಗಿಸಿದ ಮೇಲೆ ಚಾಕು ಮತ್ತು ಫೋರ್ಕನ್ನು ಜೊತೆಯಾಗಿ six o’clock ರೀತಿಯಲ್ಲಿಡಿ ಫೋರ್ಕನ್ನು ಮೇಲ್ಭಾಗದಲ್ಲಿ (ಟೈನ್ಸ್ ಮೇಲ್ಮುಖವಾಗಿ) ಮತ್ತು ಚಾಕುವನ್ನು ಬಲಭಾಗದಲ್ಲಿ, ಚಾಕುವಿನ ಬ್ಲೇಡು ಒಳಮುಖವಾಗಿರುವಂತೆ. ಇದು ಊಟ ಮುಗಿದ ಸೂಚನೆಯಾಗಿದೆ.
  • ಕರವಸ್ತ್ರವು ಎಂದಿಗೂ ಸುಕ್ಕಾಗಬಾರದು. ಅದನ್ನು ಮಡಿಸಲೂ ಬಾರದು ನಿಮಗೆ ಆತಿಥ್ಯ ನೀಡುವವರು ಇನ್ನೊಮ್ಮೆ ತೊಳೆಯದೆ ಬಳಸುವ ಯೋಜನೆ ಹಾಕುವಂತಿರಬೇಕು - ಅದನ್ನು ಮೇಜಿನ ಮೇಲೆ ನೀಟಾಗಿರುವಂತೆ ಬಿಡಿ.
  • ಎಂದಿಗೂ ಕರವಸ್ತ್ರದಲ್ಲಿ ನಿಮ್ಮ ಮೂಗಿನಿಂದ ಊದಬೇಡಿ. ಅದನ್ನು ನಿಮ್ಮ ತೊಡೆಯ ಮೇಲಿರಿಸಿಕೊಳ್ಳಿ ನಿಮ್ಮ ಬಾಯಿಗೆ ಏನಾದರೂ ತಗುಲಿದಾಗ ಒರೆಸಿಕೊಳ್ಳುವುದಕ್ಕೆ ಬಳಸಿ.
  • ಮೇಜಿನ ಬಳಿ ಫೋನ್‌ಗೆ ಉತ್ತರಿಸುವುದು ಅಸಭ್ಯ ಎಂದು ಪರಿಗಣಿಸಲಾಗುತ್ತದೆ. ತುರ್ತಾಗಿ ಕರೆಯನ್ನು ಸ್ವೀಕರಿಸಬೇಕಾದಲ್ಲಿ, ಬೇರೆಯವರ ಕ್ಷಮೆ ಕೇಳಿ ಹೊರಗೆ ಹೋಗಿ ಮಾತಾಡಿ.
  • ಮೇಜಿನಿಂದ ದೂರಹೋಗಬೇಕಾದಲ್ಲಿ ಯಾವಾಗಲೂ ನಿಮಗೆ ಆತಿಥ್ಯ ನೀಡುವವರನ್ನು ಹಾಗೂ ನಿಮ್ಮಷ್ಟಕ್ಕೆ ನೀವು ಕ್ಷಮೆ ಕೇಳಿ ಕೊಳ್ಳಿ. ನೀವು ಹಿಂದಿರುಗಿ ಬರುವವರೆಗೂ ಕರವಸ್ತ್ರ ವನ್ನು ನಿಮ್ಮ ಸ್ಥಳದಲ್ಲಿರಿಸಿ. ಮಹಿಳೆಯೊಬ್ಬಳು ಮೇಜಿನ ಬಳಿ ಬಂದಾಗ ಅಥವಾ ಎದ್ದು ಹೋಗುವಾಗ ಮೇಜಿನ ಬಳಿ ಇರುವ ಎಲ್ಲಾ ಪುರುಷರು ಎಂದು ನಿಲ್ಲುವುದನ್ನು ಸಾಮಾನ್ಯ ಸೌಜನ್ಯ ಎಂದು ಪರಿಗಣಿಸಲಾಗುತ್ತದೆ.
  • ನೀವು ಮೇಜಿನ ಬಳಿಯಿಂದ ಹೋಗಲೇ ಬೇಕಾದಾಗ ಅಥವಾ ವಿರಾಮ ತೆಗೆದುಕೊಳ್ಳುವಾಗ ನಿಮ್ಮ ಫೋರ್ಕ್‌ನ ಟೈನ್‌ಗಳು (ಪ್ರಾಂಗ್ಸ್) eight o’clock ರೀತಿಯಲ್ಲಿ ಕೆಳಮುಖವಾಗಿರಬೇಕು ಮತ್ತು ನಿಮ್ಮ ಚಾಕುವು four o’clock (ಬ್ಲೇಡ್ ಒಳಮುಖವಾಗಿರಬೇಕು). ಒಂದು ಬಾರಿ ಕಟ್ಲೆರಿಯನ್ನು ಬಳಸಲು ತೆಗೆದುಕೊಂಡ ಮೇಲೆ ಅದು ಮೇಜಿಗೆ ಮತ್ತೆ ತಾಗಬಾರದು.
  • ಫೋರ್ಕ್‌ನ ಹಿಂಭಾಗದಿಂದ ಆಹಾರವನ್ನು ನಿಮ್ಮ ಬಾಯಿಯ ಹತ್ತಿರಕ್ಕೆ ತರಬೇಕು.
  • ಖಾದ್ಯಗಳನ್ನು ಎಡಭಾಗದಿಂಡ ಬಡಿಸಬೇಕು, ಮತ್ತು ಬಲಭಾಗದಿಂದ ತೆಗೆದುಕೊಳ್ಳಬೇಕು. ಮೇಜಿನ ಬಳಿ ನಿಮ್ಮ ತಟ್ಟೆಯಲ್ಲಿ ಆಹಾರವಿರಿಸಿದರೆ ಅದು ಎಡಭಾಗದಿಂದಲೇ ಬರಬೇಕು.
  • ಪಾನೀಯಗಳನ್ನು ಬಲಭಾಗದಿಂಡ ಬಡಿಸಬೇಕು.
  • ಬೇರೆಯವರ ತಟ್ಟೆಯ ಕಡೆ ಎಂದಿಗೂ ಬಾಗಬೇಡಿ. ನೀವು ಏನಾದರೂ ತೆಗೆದುಕೊಳ್ಳಬೇಕೆಂದಿದ್ದಲ್ಲಿ ಅದರ ಹತ್ತಿರದವರಿಗೆ ಕೇಳಿ. ನೀವು ಏನಾದರೂ ಪಾಸ್ ಮಾಡಬೇಕೆಂದಿದ್ದಲ್ಲಿ, ನೀವು ಹತ್ತಿರವಿದ್ದಲ್ಲಿ ಅದನ್ನು ನೀಡಿ ಮತ್ತು ನೇರವಾಗಿ ಯಾರಿಗೆ ಬೇಕೊ ಅವರಿಗೆ ಕೊಡಿ.
  • ಉಪ್ಪು ಮತ್ತು ಮೆಣಸು ಅಲ್ಲಾಡಿಸುವದನ್ನು ಒಟ್ಟಿಗೆ ಕೊಡಬಹುದು.
  • ಪಕ್ಕದವರ ತಟ್ಟೆಯಿಂದ ಆಹಾರವನ್ನು ಎಂದಿಗೂ ತೆಗೆದುಕೊಳ್ಳಬೇಡಿ ಮತ್ತು ಹಾಗೆಂದು ಅವರನ್ನು ಕೇಳಬೇಡಿ.
  • ಮೇಜಿನ ಮೇಲೆ ಮೊಣಕೈಗಳನ್ನು ಇಡಲೇ ಬಾರದು.
  • ಪಾನೀಯವನ್ನು ನಿಮ್ಮಷ್ಟಕ್ಕೆ ಲೋಟಕ್ಕೆ ಹಾಕಿಕೊಳ್ಳಬೇಕೆಂದುಕೊಂಡಿದ್ದಲ್ಲಿ, ಮೊದಲು ನಿಮ್ಮ ಪಕ್ಕದಲ್ಲಿರುವವರಿಗೆ ಬೇಕಾ ಎಂದು ಕೇಳಿ.
  • ಹೆಚ್ಚಾದ ಖಾದ್ಯಗಳು ಮೇಜಿನ ಮೇಲಿದ್ದರೆ, ನೀವು ತೆಗೆದುಕೊಳ್ಳುವ ಮುನ್ನ ಬೇರೆಯವರಿಗೂ ಕೇಳಿ.
  • ಆಹಾರವನ್ನು ಅಗಿಯುವಾಗ, ನಿಮ್ಮ ಬಾಯಿಯನ್ನು ಮುಚ್ಚಿಕೊಂಡಿರಿ ಮತ್ತು ಅದನ್ನು ನುಂಗಿದ ಬಳಿಕವೇ ಮಾತನಾಡಿ.
  • ಹೆಚ್ಚು ತಿನ್ನುವ ಅಥವಾ ಕುಡಿಯುವ ಮುನ್ನ ಬಾಯಲ್ಲಿರುವ ಆಹಾರವನ್ನು ನುಂಗಿ.
  • ಆಹಾರವನ್ನು ಗಬಗಬನೆ ತಿನ್ನಬೇಡಿ ಮತ್ತು ಜೋರಾಗಿ ಶಬ್ಧ ಮಾಡಿ ತಿನ್ನಬೇಡಿ.
  • ಉಗುರುಗಳಿಂದ ಹಲ್ಲಿನಲ್ಲಿರುವ ಆಹಾರವನ್ನು ಎಂದಿಗೂ ತೆಗೆಯಬೇಡಿ.
  • ನಿಮಗೆ ಬಡಿಸಿದ ಎಲ್ಲಾ ಖಾದ್ಯಗಳನ್ನು ತಿನ್ನಲು ಪ್ರಯತ್ನಿಸಿ.
  • ಬಿಳಿ ವೈನ್ ‍ಆಗಿದ್ದಲ್ಲಿ ವೈನ್ ಲೋಟಗಳನ್ನು ಮಧ್ಯಭಾಗದಲ್ಲಿ ಹಿಡಿಯಬೇಕು, ಮತ್ತು ಕೆಂಪು ವೈನ್‌ಗಳಾದಲ್ಲಿ ಬೌಲ್‌ನಲ್ಲಿ ಕುಡಿಯಬೇಕು.
  • ಒಂದು ವೇಳೆ ಊಟವಾದ ನಂತರ ಪೋರ್ಟ್ ಅನ್ನು ಬಡಿಸಿದರೆ, ಅದನ್ನು ಬಸಿಯುವವನು ಮೊದಲು ಅವನ ಎಡಭಾಗದಲ್ಲಿರುವವನಿಗೆ ನೀಡಬೇಕು, ಬಲಭಾಗದಲ್ಲಿರುವವನಿಗೆ ಎಂದಿಗೂ ಇಲ್ಲ.
  • ಎಂದಿಗೂ ನಿಮ್ಮ ಚಾಕುವಿನಿಂದ ಊಟವನ್ನು ಬಾಯಿಗೆ ಹಾಕಬೇಡಿ.

ಉತ್ತರ ಅಮೇರಿಕ

ಬದಲಾಯಿಸಿ

ಮೇಜು ಜೋಡಿಸುವುದು

ಬದಲಾಯಿಸಿ
  • ಬ್ರೆಡ್ ಅಥವಾ ಸಲಾಡ್ ತಟ್ಟೆಗಳು ಮುಖ್ಯ ತಟ್ಟೆಯ ಎಡಭಾಗದಲ್ಲಿರಬೇಕು, ಪಾನೀಯದ ಲೋಟಗಳು ಬಲಭಾಗದಲ್ಲಿರಬೇಕು. ಚಿಕ್ಕ ಬ್ರೆಡ್ ಚಾಕುಗಳಿದ್ದರೆ, ಬ್ರೆಡ್ ತಟ್ಟೆಯಮೇಲೆ ಅವುಗಳ ಹ್ಯಾಂಡಲ್‌ಗಳು ಬಲಭಾಗವನ್ನು ತೋರುವಂತೆ ಅಡ್ಡಲಾಗಿ ಇಡಿ.
  • 10 ರಿಂದ 15 ಇಂಚುಗಳಷ್ಟು ಹೆಚ್ಚಾಗುವಂತಹ ಒಂದು ಮೇಜಿನ ವಸ್ತ್ರವನ್ನು ಪ್ರಮುಖವಾದ ಊಟದಲ್ಲಿ ಬಳಸಬೇಕು, ಸ್ಥಳದ ಚಾಪೆಗಳನ್ನು ತಿಂಡಿ, ಮಧ್ಯಾಹ್ನದ ಊಟ ಹಾಗೂ ಅನೌಪಚಾರಿಕ ರಾತ್ರಿ ಊಟಗಳಲ್ಲಿ ಬಳಸಬಹುದು.[]
  • ಆಧುನಿಕ ಶಿಷ್ಟಾಚಾರಗಳು ಕಡಿಮೆ ಸಂಖ್ಯೆಯವಾಗಿರುತ್ತವೆ ಮತ್ತು ಊಟಕ್ಕೆ ಅವಶ್ಯಕವಾದ ಪಾತ್ರೆಗಳ ವಿಧಗಳನ್ನು ತಿಳಿಸುತ್ತವೆ. ಯೋಜಿತ ಊಟಕ್ಕೆ ಬಳಸುವ ಪಾತ್ರೆಗಳನ್ನು ಮಾತ್ರ ಜೋಡಿಸಬೇಕು. ಒಂದು ವೇಳೆ ಬೇಕಾದರೂ, ಆತಿಥ್ಯ ನೀಡುವವರು ಊಟಕ್ಕಿಂತ ಮೊದಲೆ ತಟ್ಟೆಯ ಎರಡೂ ಬದಿಗಳಲ್ಲಿ ಮೂರಕ್ಕಿಂತ ಹೆಚ್ಚು ಪಾತ್ರೆಗಳನ್ನು ಬಳಸುವ ಹಾಗಿಲ್ಲ. ಹೆಚ್ಚುವರಿ ಪಾತ್ರೆಗಳ ಅವಶ್ಯಕತೆ ಇದ್ದಲ್ಲಿ, ನಂತರದ ಖಾದ್ಯಗಳ ಜೊತೆಯಲ್ಲಿ ಅವುಗಳನ್ನು ತರಬಹುದು.[]
  • ಒಂದು ವೇಳೆ ಸಲಾಡ್ ಅನ್ನು ಊಟದ ಮೊದಲು ಬಡಿಸಿದರೆ, ಸಲಾಡ್ ಫೋರ್ಕ್ ಮುಖ್ಯ ಖಾದ್ಯಗಳನ್ನು ತಿನ್ನುವ ಫೋರ್ಕ್‌ಗಿಂತ ಮೊದಲೆ ಇರಬೇಕು, ಎರಡನ್ನೂ ಎಡಭಾಗದಲ್ಲಿ ಜೋಡಿಸಿರಬೇಕು, ಚಮಚೆಯನ್ನು ಬಲಭಾಗದಲ್ಲಿ ಚಾಕುವಿನ ನಂತರ ಜೋಡಿಸಿರಬೇಕು. ಸಿಹಿ ಖಾದ್ಯಗಳ ಪಾತ್ರೆಗಳು, ಒಂದು ಚಿಕ್ಕ (ಸಲಾಡ್ ನಂತಹ) ಫೋರ್ಕ್ ಮತ್ತು ಟೀ ಚಮಚೆ ಯನ್ನು ತಟ್ಟೆಯ ಮೇಲೆ ಸಮವಾಗಿ ಇಡಬೇಕು (ಬಟ್ಟಲಿನ ಚಮಚೆಯು ಎಡಕ್ಕೆ, ಫೋರ್ಕ್ ಕೆಳಗೆ ಮತ್ತು ಅದರ ತುದಿಗಳು ಬಲಕ್ಕೆ ಮುಖಮಾಡಿರಬೇಕು), ಅಥವಾ ಇನ್ನೂ ಹೆಚ್ಚಾಗಿ ಅದನ್ನು ಸಿಹಿ ಖಾದ್ಯಗಳ ಜೊತೆಯಲ್ಲಿ ತರುವುದು. ಅನುಕೂಲಕ್ಕಾಗಿ, ರೆಸ್ಟಾರೆಂಟುಗಳು ಮತ್ತು ಬಾಂಕ್ವೆಟ್ ಹಾಲ್‌ಗಳು ಎಲ್ಲ ನಿಯಮಗಳನ್ನು ಪಾಲಿಸದೆ ಇರಬಹುದು, ಬದಲಾಗಿ ಎಲ್ಲ ಸ್ಥಾನಗಳಲ್ಲಿ ಒಂದೇ ತರಹದ ಪಾತ್ರೆಗಳನ್ನು ಜೋಡಿಸಿರುತ್ತಾರೆ.
  • ಒಂದು ವೇಳೆ ವೈನ್ ಲೋಟ ಮತ್ತು ನೀರಿನ ಲೋಟ ಎರಡನ್ನೂ ಜೋಡಿಸಿದ್ದರೆ, ವೈನ್ ಲೋಟವು ಚಾಕುವಿನ ನೇರ ಮೇಲ್ಭಾಗದಲ್ಲಿರುತ್ತದೆ. ನೀರಿನ ಲೋಟವು ವೈನ್ ಲೋಟಕ್ಕೆ 45 ಡಿಗ್ರಿ ಕೋನದಲ್ಲಿ ಎಡಭಾಗಕ್ಕೆ ಹಾಗೂ ತಟ್ಟೆಯ ಹತ್ತಿರದಲ್ಲಿ ಇರುತ್ತದೆ.
  • ವೈನ್‌ಗಳಿಗೆಂದೇ ವಿನ್ಯಾಸಗೊಳಿಸಲಾದ ಕೆಲ ಲೋಟಗಳು ಲಭ್ಯ. ಒಂದೇ ರೀತಿಯ ಲೋಟಗಳು ಲಭ್ಯವಿದ್ದರೆ, ಯಾವ ವಿಧದ ವೈನ್ ಅನ್ನು ನೀಡಲಾಗುತ್ತಿದೆ ಅದು ಸರಿ ಎಂದು ಪರಿಗಣಿಸಲಾಗುತ್ತದೆ.
  • ಆತಿಥ್ಯ ನೀಡುವವರು ಅತಿಥಿಗಳಿಗೆ ಬಟ್ಟೆಯ ಕರವಸ್ತ್ರಗಳನ್ನು ನೀಡಲೇಬೇಕು. ಪೇಪರ್ ಕರವಸ್ತ್ರಗಳಾನ್ನು ನೀಡಿದಾಗ, ಅವುಗಳನ್ನೂ ಬಟ್ಟೆಯ ಕರವಸ್ತ್ರಗಳ ತರಹ ಉಪಯೋಗಿಸಬೇಕು ಮತ್ತು ಅವು ಹರಿಯುವುದನ್ನು ಅಥವಾ ಸುರುಳಿ ಸುತ್ತುವುದು ಮಾಡಬಾರದು. ಕರವಸ್ತ್ರಗಳ ರಿಂಗ್‌ನಲ್ಲಿ ಮನೆಯ ಸದಸ್ಯರು ಪದೇ ಪದೇ ಬಳಸುವ ಕರವಸ್ತ್ರಗಳಿರುವುದರಿಂದ, ಅವುಗಳನ್ನು ಅತಿಥಿಗಳಿಗೆ ನೀಡಲು ಉಪಯೋಗಿಸಬಾರದು ಅವರಿಗೆ ತೊಳೆದ ನೀಟಾದ ಕರವಸ್ತ್ರಗಳನ್ನು ನೀಡಬೇಕು. ಕರವಸ್ತ್ರಗಳನ್ನು ತಟ್ಟೆಯ ಮೇಲೆ ಜೋಡಿಸಬಹುದು, ಅಥವಾ ಫೋರ್ಕ್‌ನ ಎಡಭಾಗದಲ್ಲಿ ಜೋಡಿಸಬಹುದು.
  • ಕಾಫಿ ಅಥವಾ ಟೀ ಲೋಟಗಳನ್ನು ಮೇಜು ಜೋಡಣೆಯ ಬಲಭಾಗದಲ್ಲಿರಿಸಬೇಕು, ಅಥವಾ ಜಾಗ ಕಡಿಮೆ ಇದ್ದರೆ ಅಲ್ಲೆ ಸ್ವಲ್ಪ ಮೇಲ್ಭಾಗದಲ್ಲಿಡಬೇಕು. ಲೋಟಗಳ ಹಿಡಿಕೆಗಳು ಬಲಕ್ಕಿರಬೇಕು.
  • ಕ್ಯಾಂಡಲ್‌ಸ್ಟಿಕ್‌ಗಳು, ಬೆಳಕು ಇಲ್ಲದಿರುವಾಗ ಮಾತ್ರ ಮತ್ತು ದಿನದ ಬೆಳಕಿನಲ್ಲಿ ಊಟ ಮಾಡುವಾಗ ಅವು ಮೇಜಿನ ಮೇಲೆ ಇರಬಾರದು.[]

ಊಟಕ್ಕೆ ಮೊದಲು

ಬದಲಾಯಿಸಿ
  • ಪುರುಷರು ಮತ್ತು ಯೂನಿಸೆಕ್ಸ್‌ಗಳು ಮೇಜಿನ ಬಳಿ ಎಂದಿಗೂ ಟೋಪಿಯನ್ನು ಧರಿಸಬಾರದು. ಮಹಿಳೆಯರ ಟೋಪಿಗಳನ್ನು ದಿನದ ಸಮಯದಲ್ಲಿ ಬೇರೆಯವರನ್ನು ಭೇಟಿ ಯಾಗುವ ಸಂದರ್ಭದಲ್ಲಿ ಧರಿಸಬಹುದು.[]
  • ಔಪಚಾರಿಕ ಊಟಕ್ಕೆ ಕುಳಿತುಕೊಳ್ಳುವ ಮೊದಲು, ಮಹಿಳೆಯರು ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುವವರೆಗೂ ಪುರುಷರು ತಮ್ಮ ಕುರ್ಚಿಗಳ ಹಿಂದೆ ನಿಲ್ಲಬೇಕು.
  • ಒಂದು ಪ್ರಾರ್ಥನೆ ಅಥವಾ 'ಆಶೀರ್ವಾದ' ವು ಕೆಲವು ಕುಟುಂಬಗಳಲ್ಲಿ ವಾಡಿಕೆಯಾಗಿರುತ್ತದೆ, ಹಾಗೂ ಅತಿಥಿಗಳು ಗೌರವಾನ್ವಿತವಾಗಿ ಮೌನದಿಂದ ಅದರಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಪ್ರಾರ್ಥನೆಗಳು ಊಟಕ್ಕಿಂತ ಮೊದಲೇ ಆತಿಥ್ಯ ನೀಡುವವರಿಂದ ಹೇಳಲ್ಪಡುತ್ತವೆ. ಆತಿಥ್ಯ ನೀಡುವವರು ಅವರ ಸಾಂಪ್ರದಾಯಿಕ, ಧಾರ್ಮಿಕವಾದ ಹೆಚ್ಚಿನ ಆಚರಣೆಗಳನ್ನು ಬೇರೆ ನಂಬಿಕೆಗಳನ್ನು ಹೊಂದಿದಂತಹ ಆಹ್ವಾನಿಸಿದ ಅತಿಥಿಗಳ ಮುಂದೆ ಮಾಡಬಾರದು.
  • (a) ಎಲ್ಲರಿಗೂ ಊಟವನ್ನು ಬಡಿಸುವವರೆಗೂ ಅಥವಾ (b) ಊಟ ಬಡಿಸಿಕೊಳ್ಳದೆ ಇರುವವರು ನೀವು ತಿನ್ನಿರೆಂದು ಕೋರುವವರೆಗೂ ಊಟ ಪ್ರಾರಂಭಿಸದಂತೆ ಕಾಯಬೇಕು. ತೀರಾ ಔಪಚಾರಿಕ ಸಂದರ್ಭಗಳಲ್ಲಿ ಎಲ್ಲರಿಗೂ ಒಟ್ಟಿಗೇ ಊಟ ಬಡಿಸಲಾಗುತ್ತದೆ ಮತ್ತು ಆತಿಥ್ಯ ನೀಡುವವನು ಅಥವಾ ನೀಡುವವಳು ಕೈಗೆ ಫೋರ್ಕ್ ಅಥವಾ ಚಮಚೆಯನ್ನು ಎತ್ತಿಕೊಳ್ಳುವವರೆಗೂ ಕಾಯಬೇಕು.
  • ಕರವಸ್ತ್ರಗಳನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು. ಹೆಚ್ಚು ಔಪಚಾರಿಕ ಸಂದರ್ಭಗಳಲ್ಲಿ ಊಟ ಮಾಡುವವರು ತಮ್ಮ ಕರವಸ್ತ್ರವನ್ನು ತೊಡೆಯ ಮೇಲೆ ಹಾಕಿಕೊಳ್ಳಲು ಆತಿಥ್ಯ ನೀಡುವವರು ಅವರ ಕರವಸ್ತ್ರವನ್ನು ತೊಡೆಯ ಮೇಲೆ ಹಾಕಿಕೊಳ್ಳುವವರೆಗೂ ಕಾಯಬೇಕಾಗುತ್ತದೆ.
  • ಆತಿಥ್ಯ ನೀಡುವವರು ಅವನ ಅಥವಾ ಅವಳ ಫೋರ್ಕ್ ಅಥವಾ ಚಮಚೆಯನ್ನು ತೆಗೆದುಕೊಳ್ಳುವವರೆಗೂ ತಿನ್ನದೆ ಕಾಯಬೇಕು.
  • ಅವ್ಯವಸ್ಥೆಯ ಆಹಾರಗಳನ್ನು ತಿನ್ನುವಾಗ, ಬಾರ್ಬೆಕ್ಯೂಡ್ ರಿಬ್ಸ್ ಅಥವಾ ಕ್ರ್ಯಾಬ್, ಅನೌಪಚಾರಿಕವಾಗಿ ಜೋಡಿಸುವುದು, ಅದನ್ನು ಬೆರಳುಗಳಿಂದ ತಿನ್ನಬೇಕಾಗಿದ್ದಲ್ಲಿ ಮತ್ತು such as barbecued ribs or crab, in an informal setting, where it must be eaten with the fingers and could cause flying food particles, a 'bib' or napkin tucked into the collar may be used by adults. Wet wipes or ample paper napkins should be provided to clean the hands. In formal settings, bibs or napkins used as such are improper, and food should be prepared by the chef so that it may be eaten properly with the provided utensils.
  • Even if one has dietary restrictions, it is inappropriate for non-relatives to request food other than that which is being served by the host at a private function.

ಊಟ ಮಾಡುವಾಗಿನ ಸಾಮಾನ್ಯ ಶಿಷ್ಟಾಚಾರಗಳು

ಬದಲಾಯಿಸಿ
  • ಖಾದ್ಯಗಳನ್ನು ಬಡಿಸುವಾಗ (a.k.a. ಕೌಟುಂಬಿಕ ಶೈಲಿಯಲ್ಲಿ), ಸಾಂಪ್ರದಾಯಿಕ ಶೈಲಿಯಲ್ಲಿ ಖಾದ್ಯವನ್ನು ಪಾಸ್ ಮಾಡಲಾಗುತ್ತದೆ ಅಥವಾ ಆತಿಥ್ಯ ನೀಡುವವರಿಂದ ಅಥವಾ ಪರಿಚಾರಕರಿಂದ ಬಡಿಸಲ್ಪಡುತ್ತದೆ. ಪಾಸ್ ಮಾಡುತ್ತಿದ್ದರೆ, ನೀವು ಅದೇ ದಿಕ್ಕಿನಲ್ಲಿ ಮುಂದಿನವರಿಗೆ ಪಾಸ್ ಮಾಡಬೇಕು, ಬೇರೆ ಖಾದ್ಯಗಳನ್ನೂ ಸಹ. ಬಡಿಸಿಕೊಳ್ಳುವಂತಹ ಖಾದ್ಯವನ್ನು ನಿಮ್ಮ ಎಡಭಾಗದಲ್ಲಿರಿಸಿ, ಸ್ವಲ್ಪ ತೆಗೆದುಕೊಳ್ಳಿ, ಮತ್ತು ನಿಮ್ಮ ನಂತರದ ವ್ಯಕ್ತಿಗೆ ಪಾಸ್ ಮಾಡಿ. ಖಾದ್ಯದ ಪ್ರಮಾಣವು ಎಷ್ಟಿದೆ ಎಂಬುದನ್ನು ನೀವು ಪರಿಗಣಿಸಬೇಕು ಮತ್ತು ಅದು ಎಲ್ಲರಿಗೂ ಸಾಕಾಗಬೇಕೆನ್ನುವುದನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಬೇಕು. ನಿಮಗೆ ಯಾವುದಾದರೂ ಖಾದ್ಯ ಬೇಡವೆನಿಸಿದಲ್ಲಿ, ಏನನ್ನೂ ಹೇಳದೆ ಮುಂದಿನವರಿಗೆ ಅದನ್ನು ಪಾಸ್ ಮಾಡಿ. ಒಬ್ಬನೇ ವ್ಯಕ್ತಿಯು ಬಡಿಸುವಾಗ, ಬಡಿಸುವವರು ಅತಿಥಿಗಳಿಗೆ ಯಾವ ಖಾದ್ಯ ಬೇಕು ಬೇಡ ಎಂಬುದನ್ನು ಕೇಳಬೇಕು. ಅತಿಥಿಯು "ಬೇಕು, ದಯವಿಟ್ಟು," ಅಥವಾ "ಬೇಡ, ಧನ್ಯವಾದ ಗಳು" ಎಂದು ಹೇಳಬಹುದು.
  • ಬಡಿಸುವಾಗ, ಎಡಭಾಗದಿಂದ ಬಡಿಸಿ ಮತ್ತು ಖಾದ್ಯವನ್ನು ಬಲಭಾಗದಿಂದ ತೆಗೆದುಕೊಳ್ಳಿ. ಪಾನೀಯಗಳನ್ನು, ಬಡಿಸುವುದು ಮತ್ತು ತೆಗೆಯುವುದು ಎರಡೂ ಬಲ-ಭಾಗದಿಂದಲೇ.
  • ನಿಮ್ಮ ಸೂಪ್ ಚಮಚೆಯನ್ನು ನಿಮ್ಮಿಂದ ದೂರವಿರುವ ಕಡೆ ಮುಳುಗಿಸಿಡಿ. ಸೂಪನ್ನು ಶಬ್ಧ ಮಾಡದೆ, ಚಮಚೆಯ ಒಂದು ಬದಿಯಿಂದ ನಿಧಾನವಾಗಿ ಕುಡಿಯಿರಿ. ತಳಭಾಗದಲ್ಲಿ ಸ್ವಲ್ಪವೇ ಉಳಿದಿರುವಾಗ, ನಿಮ್ಮ ಇನ್ನೊಂದು ಕೈಯಿಂದ ಬಟ್ಟಲಿನ ಒಂದು ಬದಿಯನ್ನು ಮೇಲಕ್ಕೆತ್ತಿ ಚಮಚೆಯಲ್ಲಿ ತೆಗೆದುಕೊಳ್ಳಿ.
  • ನಿಮಗೆ ಫೋರ್ಕ್‌ನಿಂದ ಖಾದ್ಯಗಳನ್ನು ತೆಗೆದುಕೊಂಡು ತಿನ್ನಲು ಕಷ್ಟವಾಗುತ್ತಿದ್ದಲ್ಲಿ, ಒಂದು ಸಣ್ಣ ಬ್ರೆಡ್ ತುಂಡು ಅಥವಾ ಚಾಕುವಿನ ಸಹಾಯ ಪಡೆದುಕೊಳ್ಳಿ. ಬೆರಳುಗಳು ಅಥವಾ ಹೆಬ್ಬೆರಳನ್ನು ಎಂದಿಗೂ ಉಪಯೋಗಿಸಬೇಡಿ.
  • ನೀವು ಪರಿಚಾರಕರ ಜೊತೆ ಮಾತನಾಡುವುದು ಅಥವಾ ಧನ್ಯವಾದಗಳನ್ನು ಹೇಳಬಹುದು ಆದರೆ ಅಗತ್ಯವಿಲ್ಲ, ವಿಶೇಶವಾಗಿ ಇತರರೊಂದಿಗೆ ಮಾತಿನಲ್ಲಿ ಮುಳುಗಿರುವುದು.
  • ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೇಳಲಾದ ಎಲ್ಲವನ್ನೂ ತೆಗೆದುಕೊಳ್ಳದಿರುವುದು ಸ್ವಾಗತಾರ್ಹ ಮತ್ತು ತಟ್ಟೆಯಲ್ಲಿರುವ ಎಲ್ಲವನ್ನೂ ತಿನ್ನದಿರುವುದು ಕೂಡಾ. ಯಾರೊಬ್ಬರೂ ನಿನಗೆ ಅದು ಏಕೆ ಬೇಡ ಎಂದು ಕೇಳುವುದಿಲ್ಲ ಅಥವಾ ತಿನ್ನುವುದನ್ನು ಪೂರ್ಣಗೊಳಿಸದೆ ಇದ್ದುದನ್ನೂ ಸಹ ಕೇಳುವುದಿಲ್ಲ.
  • ಅಲ್ಲಿ ಲಭ್ಯವಿರುವ ಖಾದ್ಯಗಳ ಬಗ್ಗೆ ಅಥವಾ ತಿಂದ ಖಾದ್ಯಗಳ ಬಗ್ಗೆ ಅಲ್ಲಗಳೆಯಬಾರದು.
  • ಬಾಯಿ ಮುಚ್ಚಿಕೊಂಡು ಅಗಿಯಬೇಕು. ಗಬಗಬನೆ ತಿನ್ನಬಾರದು, ಬಾಯಲ್ಲಿ ಆಹಾರವಿರುವಾಗ ಮಾತನಾಡುವುದು ಅಥವಾ ತಿನ್ನುವಾಗ ಜೋರಾಗಿ ಅಥವಾ ಅಸಂಬದ್ಧವಾಗಿ ಶಬ್ಧಮಾಡಬಾರದು.
  • "ಕ್ಷಮಿಸಿ," ಎಂದು ಹೇಳಿ ಅಥವಾ "ಕ್ಷಮಿಸಿ. ನಾನು ಈಗ ಬರುತ್ತೇನೆ, ಎಂದು ಮೇಜನ್ನು ಬಿಡುವ ಮೊದಲೆ ಹೇಳಿ. ನೀವು ರೆಸ್ಟ್ ರೂಮ್‌ಗೆ ಹೋಗುತ್ತಿದ್ದೀರೆಂದು ಹೇಳಬೇಡಿ.
  • ಹೆಚ್ಚು ಜೋರಾಗಿ ಮಾತನಾಡಬೇಡಿ. ಇತರರಿಗೂ ಮಾತನಾಡಲು ಅವಕಾಶ ನೀಡಿ.
  • ಮೇಜಿನ ಬಳಿ ಮೂಗಿನಿಂದ ಊದುವುದನ್ನು ತಡೆದುಕೊಳ್ಳಿ. ನೀವು ನಿಮ್ಮಲ್ಲಿ ಕ್ಷಮೆ ಕೇಳಿಕೊಳ್ಳಿ, ಹಾಗೆ ಮಾಡಬೇಕಾದಲ್ಲಿ.
  • ಮೇಜಿನ ಬಳಿ ತೇಗುವುದು, ಕೆಮ್ಮುವುದು, ಆಕಳಿಸುವುದು, ಅಥವಾ ಸೀನುವುದನ್ನು ದೂರವಿರಿಸಬೇಕು. ಹಾಗೆ ಮಾಡಿದಲ್ಲಿ "ಕ್ಷಮಿಸಿ" ಎಂದು ಕೇಳಿ.
  • ಕುರ್ಚಿಯಲ್ಲಿ ಕುಳಿತಾಗ ಜೋಲುವುದು ಅಥವಾ ಹಿಂದಕ್ಕೆ ಬಾಗುವುದನ್ನು ಎಂದಿಗೂ ಮಾಡಬೇಡಿ.
  • ಆಹಾರದ ಜೊತೆಗೆ ಅಥವಾ ಪಾತ್ರೆಗಳ ಜೊತೆಗೆ ಆಟವಾಡಬೇಡಿ. ಬೆಳ್ಳಿ ಪಾತ್ರೆಗಳನ್ನು ಎಂದಿಗೂ ತೂಗಾಡಿಸುವುದು ಅಥವಾ ತೋರಿಸುವುದನ್ನು ಮಾಡಬೇಡಿ.
  • ನಿಮ್ಮ ಮುಂಗೈಗಳನ್ನು ಮೇಜಿನ ಮೇಲಿಟ್ಟು ವಿರಮಿಸಬಹುದು, ಆದರೆ ಮೊಣಕೈಗಳನ್ನು ಅಲ್ಲ.
  • ಫೋನ್‌ನಲ್ಲಿ ಮಾತನಾಡುವುದು ಅಥವಾ ಮೇಜಿನ ಬಳಿ "ಪಠ್ಯ" ನೀಡುವುದನ್ನು ಮಾಡಬಾರದು, ಅಥವಾ ಇತರೆ ರೀತಿಯ , ಓದುವುದು ಅಥವಾ ಮ್ಯೂಸಿಕ್ ಪ್ಲೇಯರ್‌ನಿಂದ ಹಾಡು ಕೇಳುವಂತಹ ಗಮನವನ್ನು ಬೇರೆಡೆ ಹರಿಸುವುದನ್ನು ಮಾಡಬಾರದು. ತಿಂಡಿಯ ಸಮಯದಲ್ಲಿ ಮಾತ್ರ ಮೇಜಿನ ಬಳಿ ಓದಬಹುದು.[] ಏನಾದರೂ ತುರ್ತು ವಿಷಯವಿದ್ದಲ್ಲಿ, ಕ್ಷಮೆ ಕೇಳಿ, ನಿಮ್ಮಷ್ಟಕ್ಕೆ ಕ್ಷಮಿಸಿ ಕೊಳ್ಳಿ, ಮತ್ತು ಮೇಜಿನಿಂದ ಸ್ವಲ್ಪ ದೂರ ಹೋಗಿ ಮಾತನಾಡಿ ಇದರಿಂದ ಬೇರೆಯವರಿಗೆ ನಿಮ್ಮ ಮಾತಿನಿಂದ ತೊಂದರೆಯಾಗುವುದಿಲ್ಲ.
  • ಒಂದು ವೇಳೆ ಆಹಾರವನ್ನು ನಿಮ್ಮ ಬಾಯಿಂದ ಕೆಲ ಕಾರಣಗಳಿಂದ ಹೊರತೆಗೆಯಬೇಕಾಗಿ ಬಂದಲ್ಲಿ, ಅದನ್ನು ನೀವು ಯಾವ ರೀತಿ ತಿನ್ನುವಿರೋ ಅಂದರೆ ಕೈಗಳಿಂದ, ಫೋರ್ಕ್‌ನಿಂದ ಇತ್ಯಾದಿಗಳು ಅದೇ ರೀತಿಯಾಗಿ ಹೊರತೆಗೆಯಬೇಕು, ಆದರೆ ಮೀನಿನ ಮೂಳೆಗಳನ್ನು ತೆಗೆಯ ಬೇಕಾದಲ್ಲಿ ನಿಮ್ಮ ಬೆರಳುಗಳನ್ನು ಬಳಸಿ ತೆಗೆಯಬಹುದು.[]
  • ಇನ್ನಷ್ಟು ಸಹಾಯವನ್ನು ಅಥವಾ ಖಾದ್ಯಗಳನ್ನು ಕೇಳುವ ಮೊದಲೇ ನಿಮ್ಮ ತಟ್ಟೆಯಲ್ಲಿರುವುದನ್ನು ಮೊದಲು ಮುಗಿಸಿ.
  • ಮಹಿಳೆಯು ಬಂದು ಕುಳಿತು ಕೊಳ್ಳುವಾಗ ಅಥವಾ ಸ್ಥಳವನ್ನು ಬಿಟ್ಟು ಹೋಗುವಾಗ ಪುರುಷರು ಮೇಜಿನ ಬಳಿ ಎದ್ದು ನಿಲ್ಲಬೇಕು.
ಪಾತ್ರೆಗಳನ್ನು ಬಳಸುವುದು
ಬದಲಾಯಿಸಿ
  • ಫೋರ್ಕನ್ನು ಘನ ಪದಾರ್ಥವನ್ನು ಬಾಯಿಯಲ್ಲಿರಿಸಲು ಬಳಸಲಾಗುತ್ತದೆ. ಬ್ರೆಡ್, ಆಸ್ಪರಾಗಸ್ ಸ್ಪಿಯರ್ಸ್, ಚಿಕನ್ ವಿಂಗ್ಸ್, ಪಿಜ್ಜಾ ಮುಂತಾದ. ಕೆಲವು ಖಾದ್ಯಗಳನ್ನು ವಾಡಿಕೆಯಂತೆ ಬೆರಳುಗಳಿಂದ ತಿನ್ನಬಹುದು ಬಿಟ್ಟರೆ ಬೇರೆ ಪದಾರ್ಥಗಳಿಗೆ ಬೆರಳುಗಳನ್ನು ಬಳಸಬಾರದು.
  • ಪಾತ್ರೆಗಳಿಂದ ಅನವಶ್ಯಕ ಶಬ್ಧಗಳನ್ನು ಮಾಡಬೇಡಿ.
  • ಫೋರ್ಕನ್ನು "ಅಮೇರಿಕನ್" ಶೈಲಿಯಲ್ಲಿ ಬಳಸಬಹುದು (ಕತ್ತರಿಸುವಾಗ ಫೋರ್ಕನ್ನು ಎಡಗೈಯಲ್ಲಿ ಹಿಡಿದು; ತೆಗೆದುಕೊಂಡು ತಿನ್ನುವಾಗ ಬಲಗೈಯಿಂದ ಬಳಸುವುದು)ಅಥವಾ ಯೂರೋಪಿಯನ್ "ಕಾಂಟಿನೆಂಟಲ್" ಶೈಲಿಯಲ್ಲಿ ಬಳಸಬಹುದು (ಫೋರ್ಕ್ ಯಾವಾಗಲೂ ಎಡಗೈಯಲ್ಲಿ). (ಫೋರ್ಕ್ ಶಿಷ್ಟಾಚಾರವನ್ನು ನೋಡಿ)
  • ಚಾಕುವಿನ ಸ್ಟ್ಯಾಂಡ್‌ಅನ್ನು ನೀಡದೆ ಇದ್ದಲ್ಲಿ, ಬಳಸದೆ ಇರುವಾಗ ನಿಮ್ಮ ತಟ್ಟೆಯ ತುದಿಯಲ್ಲಿ ಇರಿಸಿ ಮತ್ತು ಅದು ಒಳಮುಖವಾಗಿರಬೇಕು.
  • ನೀವು ಬಟ್ಟಲಿನಲ್ಲಿರುವ ಅಥವಾ ದೊಡ್ಡ "ಸೂಪ್ ತಟ್ಟೆ"ಯಲ್ಲಿರುವ ಸೂಪನ್ನು ಕುಡಿದು ಮುಗಿಸಿದ ಮೇಲೆ ಚಮಚೆಯನ್ನು ತಟ್ಟೆಯ ಮೇಲೆ ಇಡಿ.
  • ತಿನಿಸುಗಳನ್ನು ಬಡಿಸುವಾಗ, ಬೆಳ್ಳಿಪಾತ್ರೆಗಳನ್ನು ಹೊರಭಾಗದಿಂದ ನಿಮ್ಮ ತಟ್ಟೆಯೆಡೆಗೆ ತನ್ನಿ. ಸಿಹಿ ಖಾದ್ಯಗಳ ಪಾತ್ರೆಗಳು ಮುಖ್ಯ ತಟ್ಟೆಯ ಮೇಲೆ ಅಥವಾ ಸಿಹಿಖಾದ್ಯದ ಜೊತೆಯಲ್ಲಿ ಬಡಿಸಬೇಕು.

ಊಟದ ಕೊನೆಯಲ್ಲಿ

ಬದಲಾಯಿಸಿ
  • ನೀವು ಊಟ ಮುಗಿಸಿದ ನಂತರ, ಪಕ್ಕದಲ್ಲಿರುವ ಎಲ್ಲಾ ಪಾತ್ರೆಗಳನ್ನು ತಟ್ಟೆಯಲ್ಲಿ ಅವುಗಳ ತುದಿಗಳು ಬಲಭಾಗವನ್ನು ತೋರಿಸುವಂತೆ ಮಾಡಿ ಇಡಿ, ಇದರಿಂದ ಪರಿಚಾರಕನು ನಿಮ್ಮ ಊಟ ಮುಗಿದಿದೆ ಎಂದು ತಿಳಿಯುತ್ತಾನೆ. ಊಟಕ್ಕೆ ಬಳಸಿದ ಪಾತ್ರೆಗಳನ್ನು ಮೇಜಿನ ಮೇಲೆ ಇಡಬೇಡಿ.
  • ಸಾರ್ವಜನಿಕ ಹೋಟೆಲುಗಳಲ್ಲದೆ, ಬೇರೆ ಎಲ್ಲೂ ತಿನ್ನದೆ ಉಳಿದಿರುವ ಊಟವನ್ನು ತೆಗೆದುಕೊಂಡು ಹೋಗಲು ಕೇಳಬೇಡಿ, ಹಾಗೂ ಔಪಚಾರಿಕ ಊಟದಲ್ಲಿಯಂತೂ ಖಂಡಿತಾ ಇಲ್ಲ. ಆತಿಥ್ಯ ನೀಡಿದವರು ಅತಿಥಿಗಳು ಉಳಿದ ಖಾದ್ಯಗಳನ್ನು ತೆಗೆದುಹೋಗಬಹುದೆಂದು ಸೂಚಿಸಬಹುದು, ಆದರೆ ಒತ್ತಿ ಹೇಳಬಾರದು.
  • ನೀವು ನಿಮ್ಮ ಸ್ಥಳವನ್ನು ತಾತ್ಕಾಲಿಕವಾಗಿ ಬಿಡುತ್ತಿದ್ದೀರಾದರೆ ಅಲ್ಲಿ ಕರವಸ್ತ್ರವನ್ನು ಇಡಿ.[] ನೀವು ಊಟ ಮುಗಿಸಿ ಏಳುವಾಗ, ಕರವಸ್ತ್ರವನ್ನು ಸಡಿಲವಾಗಿ ನಿಮ್ಮ ತಟ್ಟೆಯ ಎಡಭಾಗದಲ್ಲಿರಿಸಿ.[೧೦]

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. Citation needed
  2. Etiquette in het buitenland by Kevin Strubbe, Liesbeth Hobert
  3. "Miss Manners" syndicated column, by Judith Martin, Universal Press Syndicate, ಜೂನ್ 18, 2009
  4. "ಆರ್ಕೈವ್ ನಕಲು". Archived from the original on 2009-01-24. Retrieved 2009-01-24.
  5. "ಆರ್ಕೈವ್ ನಕಲು". Archived from the original on 2012-07-20. Retrieved 2012-07-20.
  6. "ಆರ್ಕೈವ್ ನಕಲು". Archived from the original on 2010-07-22. Retrieved 2010-05-25.
  7. "ಆರ್ಕೈವ್ ನಕಲು". Archived from the original on 2009-07-26. Retrieved 2010-05-25.
  8. "ಆರ್ಕೈವ್ ನಕಲು". Archived from the original on 2009-04-13. Retrieved 2010-05-25.
  9. "ಆರ್ಕೈವ್ ನಕಲು". Archived from the original on 2009-03-20. Retrieved 2010-05-25.
  10. Emily Post's Etiquette: The Definitive Guide to Manners , ಪೆಗ್ಗಿ ಪೋಸ್ಟ್ ಅವರಿಂದ ಸಂಪೂರ್ಣವಾಗಿ ಪರಿಷ್ಕರಿಸಿ ಹಾಗೂ ಆಧುನೀಕರಿಸಲಾಗಿದೆ(ಹಾರ್ಪರ್ ಕಾಲಿನ್ಸ್ 2004).

ಬಾಹ್ಯ ಕೊಂಡಿಗಳು

ಬದಲಾಯಿಸಿ

ಜಪಾನ್‌

ಮಲೇಷ್ಯಾ

ಯುನೈಟೆಡ್ ಸ್ಟೇಟ್ಸ್

ದಿ ಫಿಲಿಪೈನ್ಸ್