ಉಪವರ್ಗ:
ವಚನ ಸಾಹಿತ್ಯ ಕನ್ನಡ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಆಗಿ ಹೋದ ಶರಣರು.ಮಹಾಶಿವಶರಣರಲ್ಲಿ ಇವರೊಬ್ಬರು. ಶಿವ ಶರಣರಲ್ಲಿ ಮೊದಲಿಗರಾದ ಮೊಟ್ಟ ಮೊದಲ ವಚನಕಾರ ದೇವರ ದಾಸಿಮಯ್ಯನವರು, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪುರುಷ ನೆಂಬುದಕ್ಕೆ ಶಿಲಾ ಶಾಸನಗಳು ಬಲವಾದ ಪ್ರಮಾಣಗಳಾಗಿವೆ. ಅವರ ನಂತರ ಸ್ವಲ್ಪ ಕಾಲ ದಲ್ಲಿಯೇ ಅವತರಿಸಿದ ಬಸವಣ್ಣನವರು ಈ ಶರಣ ದಂಪತಿಗಳ ಮಹಿಮೆಯನ್ನು ಅವರ ಚರಿತ್ರೆಯಲ್ಲಿ ಘಟನೆಗಳನ್ನು, ವಚನಗಳನ್ನು ತನ್ನ ವಚನ ವಾಜ್ಞಯದಲ್ಲಿ ನಿರರ್ಗಳವಾಗಿ ಉಲ್ಲೇಖಿಸಿದ್ದಾರೆ.
ದೇವರ ದಾಸಿಮಯ್ಯನವರ ಉಪಲಬ್ಧ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ. ದೇವರ ದಾಸಿಮಯ್ಯ ವಿಶ್ವದ ಪ್ರಥಮ ವಚನಕಾರ. ಅವರು ರಾಮನಾಥ ಎಂಬ ಹೆಸರಲ್ಲಿಯೇ 176 ವಚನಗಳನ್ನು ರಚಿಸಿದ್ದಾರೆ.ಆದ್ಯ ವಚನಕಾರ ದೇವರ ದಾಸಿಮಯ್ಯನವರು ತಮ್ಮ ಆದ್ಯಾತ್ಮ ಸಿರಿವಂತಿಕೆಯಿಂದ ಮೆರೆದು, ಶಿವನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು, ತಮ್ಮ ಹೆಜ್ಜೆ ಪಾಡುಗಳನ್ನು ನಮಗಾಗಿ ಉಳಿಸಿಹೋಗಿದ್ದಾರೆ. ಇವುಗಳನ್ನು ಅನುಸರಿಸಿ ನಡೆದರೆ ಸಾಕು ನಮ್ಮ ಬಾಳು ಬೆಳಕಾಗುವುದು ಇಂತಹ ಮಹಾಪುರುಷನನನ್ನು ಪಡೆದ ಸಮಾಜವೇ ದನ್ಯ.
ವಚನ ಸಾಹಿತ್ಯ ೧೨ನೇ ಶತಮಾನದಲ್ಲಿ ಜಾತಿ, ಧರ್ಮ, ವರ್ಣಾಶ್ರಮದ ವಿರುದ್ದ ಬಂಡೆದ್ದು ಮಾನವ ಜಾತಿ, ಧರ್ಮ ಒಂದೇ ಸಾರಿದಲ್ಲದೆ ಅದನ್ನು ನಿಜಜೀವನದಲ್ಲಿಯೂ ಕಾರ್ಯರೂಪಕ್ಕೆ ತಂದವರು ಶಿವಶರಣರು. ಶ್ರೀ ಬಸವಣ್ಣನವರ ನೇತೃತ್ವದಲ್ಲಿ ಆತ್ಮ ಶುದ್ಧಿ ಮತ್ತು ಕಾಯಕದ ಮಹತ್ವವನ್ನು ಜಗತ್ತಿಗೇ ತಿಳಿ ಹೇಳಿದ್ದಲ್ಲದೇ ಕಾರ್ಯರೂಪಕ್ಕೂ ತಂದವರು ಶಿವಶರಣರು. ಉಚ್ಛ ಕುಲದವರ ಸ್ವತ್ತೆಂದು ಪರಿಗಣಿಸಿದ್ದ, ಸಂಸ್ಕೃತದ ಸೋಂಕಿಲ್ಲದೆ, ಪ್ರಾಸ, ಛಂದಸ್ಸುಗಳ ಸೋಂಕಿಲ್ಲದೆ, ನಾಡಿನ ಜನರ ಆಡುಭಾಷೆಯಾದ ಕನ್ನಡದಲ್ಲಿಯೇ ಸೀದಾ ಸಾದಾ ನೇರ ನುಡಿಗಳಲ್ಲಿ ರಚಿತ ವಾದವುಗಳು ಶಿವ ಶರಣರ ವಚನಗಳು. ಈ ವಚನಗಳು ಕೇವಲ ದೇವರು, ದಿಂಡಿರುಗಳ ಬಗ್ಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳ ಎಳೆಗಳನ್ನು ವಚನಕಾರರ ವಚನಗಳು ಮಾರ್ಮಿಕವಾಗಿ ತಿಳಿಸಿವೆ
ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ದೇವರ ದಾಸಿಮಯ್ಯ 'ರಾಮನಾಥ' ಎಂದು ಬಳಸಿದರೆ,ಬಸವಣ್ಣನವರು 'ಕೂಡಲ ಸಂಗಮದೇವ' ಹಾಗೂ ಅಕ್ಕಮಹಾದೇವಿಯು 'ಚೆನ್ನಮಲ್ಲಿಕಾರ್ಜುನ' ಎಂದು ಬಳಸಿದ್ದಾರೆ. ಮತ್ತು ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ,ಆಯ್ದಕ್ಕಿ ಲಕ್ಕಮ, ಹೆಂಡದ ಮಾರಯ್ಯ, ಅಂಗಸೋಂಕಿನ ಲಿಂಗತಂದೆ, ಅಕ್ಕಮ್ಮ, ಅಖಂಡ ಮಂಡಲೇಶ್ವರ, ಅಗ್ಘವಣಿ ಹಂಪಯ್ಯ, ಅಗ್ಘವಣಿ ಹೊನ್ನಯ್ಯ, ಅಜಗಣ್ಣ ತಂದೆ, ಅರಿವಿನ ಮಾರಿತಂದೆ, ಅನುಗಲೇಶ್ವರ, ಅನಾಮಿಕ ನಾಚಯ್ಯ, ಅಪ್ರಮಾಣ ಗುಹೇಶ್ವರ, ಅಪ್ಪಿದೇವಯ್ಯ, ಅವಸರದ ರೇಕಣ್ಣ, ಅಮರಗುಂಡದ ಮಲ್ಲಿಕಾರ್ಜುನ ತಂದೆ, ಅಮುಗೆ ರಾಯಮ್ಮ, ಅಮುಗಿದೇವಯ್ಯ, ಅಲ್ಲಮಪ್ರಭುದೇವರು,ಅಶ್ವಥರಾಮ, ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಆದಯ್ಯ, ಆನಂದ ಸಿದ್ಧೇಶ್ವರ, ಆನಂದಯ್ಯ, ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ, ಈಶ್ವರೀಯ ವರದ ಚೆನ್ನರಾಮ, ಉಗ್ಘಡಿಸುವ ಗಬ್ಬಿದೇವಯ್ಯ, ಉರಿಲಿಂಗದೇವ, ಉರಿಲಿಂಗಪೆದ್ದಿ, ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಉಪ್ಪರಗುಡಿಯ ಸೋಮಿದೇವಯ್ಯ, ಉಳಿಯುಮೇಶ್ವರ ಚಿಕ್ಕಣ್ಣ, ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ, ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ, ಎಲೆಗಾರ ಕಾಮಣ್ಣ, ಏಕಾಂತ ವೀರಸೊಡ್ಡಳ, ಏಕಾಂತರಾಮಿತಂದೆ, ಏಕೋರಾಮೇಶ್ವರ ಲಿಂಗ, ಏಲೇಶ್ವರ ಕೇತಯ್ಯ, ಒಕ್ಕಲಿಗ ಮುದ್ದಣ್ಣ, ಕಂಬದ ಮಾರಿತಂದೆ, ಕರಸ್ಥಲದ ಮಲ್ಲಿಕಾರ್ಜುನೊಡೆಯ, ಕರುಳ ಕೇತಯ್ಯ, ಕದಿರಕಾಯಕದ ಕಾಳವ್ವೆ, ಕದಿರರೆಮ್ಮವ್ವೆ ಕನ್ನಡಿಕಾಯಕದ ಅಮ್ಮಿದೇವಯ್ಯ, ಕನ್ನಡಿಕಾಯಕದ ರೇಮಮ್ಮ, ಕನ್ನಡ ಮಾರಿತಂದೆ, ಕಲಕೇತಯ್ಯ, ಕಲ್ಲಯ್ಯದೇವರು, ಕುರಂಗಲಿಂಗ, ಕುರಂಗಲಿಂಗ, ಕುರಂಗೇಶ್ವರಲಿಂಗ, ಕುಷ್ಟಗಿ ಕರಿಬಸವೇಶ್ವರ, ಕೂಗಿನ ಮಾರಯ್ಯ, ಕೂಡಲಸಂಗಮೇಶ್ವರ, ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ, ಕಾಡಸಿದ್ಧೇಶ್ವರ, ಕಾಮಾಟದ ಭೀಮಣ್ಣ, ಕಾಲಕಣ್ಣಿಯ ಕಾಮಮ್ಮ, ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ, ಕೊಟ್ಟಣದ ಸೋಮಮ್ಮ, ಕೊಟಾರದ ಸೋಮಣ್ಣ, ಕೋಲ ಶಾಂತಯ್ಯ, ಕಿನ್ನರಿ ಬ್ರಹ್ಮಯ್ಯ, ಕೀಲಾರದ ಭೀಮಣ್ಣ, ಗಂಗಾಂಬಿಕೆ, ಗಜೇಶ ಮಸಣಯ್ಯ, ಗಜೇಶಮಸಣಯ್ಯದ ಪುಣ್ಯಸ್ತ್ರೀ, ಗಣದಾಸಿ ವೀರಣ್ಣ, ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಗುರು ವಿಶ್ವೇಶ್ವರಾ, ಗುರುಪುರದ ಮಲ್ಲಯ್ಯ, ಗುರುಬಸವೇಶ್ವರ, ಮೋಳಿಗೆ ಮಾರಯ್ಯ ಇನ್ನೂ ಮೊದಲಾದ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.