ಅವಸರದ ರೇಕಣ್ಣ ೧೨ನೇ ಶತಮಾನದಲ್ಲಿ ಬಸವಾದಿ ಶರಣರ ಸಂಗದಲ್ಲಿದ್ದ ಗುಪ್ತ ವಚನಕಾರ. ಅವನು ಹಿಡಿದ ಯಾವ ಕೆಲಸವನ್ನಾದರೂ ತ್ವರಿತಗತಿಯಲ್ಲಿ ಮಾಡಿ ಮುಗಿಸುತ್ತಿದ್ದುದರಿಂದ, ಅವನನ್ನು ಅವಸರದ ರೇಕಣ್ಣನೆಂದು ಕರೆಯಲಾಗಿದೆ. ಶಿವಶಕ್ತಿ-ಶಿವಭಕ್ತಿಗಳ ಸಂಗಮವನ್ನು ಈತನ ವಚನಗಳಲ್ಲಿ ಕಾಣಬಹುದು. ಶರಣರ ಅಂತರಂಗವನ್ನು ಬಣ್ಣಿಸುವಂತಹ ವಚನಗಳನ್ನು ಇವನು ರಚಿಸಿರುವನು. ಇವನ ವಚನಗಳ ಅಂಕಿತ 'ಸದ್ಯೋಜಾತಲಿಂಗ'.

ಅವಸರದ ರೇಕಣ್ಣ
ಜನನ೧೧೬೦
ಅಂಕಿತನಾಮಸದ್ಯೋಜಾತಲಿಂಗ

ನೀತಿಭಕ್ತಿ ಕ್ರಿಯಾಭಕ್ತಿ ಭಾವಭಕ್ತಿ ಸದ್ಭಾವಭಕ್ತಿ
ಜ್ಞಾನಭಕ್ತಿ ಇಂತಿ ಭಕ್ತಿಯ ವಿವರ:
ನೀತಿಭಕ್ತಿಗೆ ಸರ್ವಗುಣ ಪ್ರೀತಿವಂತನಾಗಿ,
ಕ್ರಿಯಾಭಕ್ತಿಗೆ ಬಿಡುಮುಡಿ ಉಭಯವನರಿದು
ಭಾವಭಕ್ತಿಗೆ ಸಂಕಲ್ಪವಿಕಲ್ಪ ದೋಷವ ಕಂಡು,
ಸದ್ಭಾವಭಕ್ತಿಗೆ ಮನ ವಚನ ಕಾಯ ತ್ರಿಕರಣವನರಿದು,
ಜ್ಞಾನಭಕ್ತಿಗೆ ಜ್ಞಾತೃಜ್ಞೇಯ ಮುಂತಾದ
ಮರ್ಕಟ ವಿಹಂಗ ವಿಪೀಲಿಕ ಸಂಚಿತ
ಪ್ರಾರಬ್ಧ ಆಗಾಮಿಗಳೆಂಬ ತೆರನ ತಿಳಿದು
ವಿಷಚರಣಾಂಗುಲದಲ್ಲಿ ವೃಧಿಸಿ ಕಪಾಲದಲ್ಲಿ ನಿಂದು
ಅಂಗಮೂರ್ಛೆಗೊಂಡಂತೆ
ಇಂತಿ ಭಕ್ತಿ ಸ್ಥಲದ ವಿವರ
ಹೆಚ್ಚುಕುಂದನರಿದು ಕೊಡುವಲ್ಲಿ
ಕೊಂಬುವಲ್ಲಿ ತಟ್ಟುವಲ್ಲಿ ಮುಟ್ಟುವಲ್ಲಿ
ತಾಗುವಲ್ಲಿ ಸೋಂಕುವಲ್ಲಿ ನಾನಾಗುಣಂಗಳಲ್ಲಿ
ವಿವರವನರಿತು ವರ್ಮಜ್ಞನಾಗಿಪ್ಪ ಭಕ್ತನಂಗ
ಆ ಸುಖದಸಂಗ ಸದ್ಯೋಜಾತಲಿಂಗದ ನಿರಂಗ