2014 ಸೆ.೧೩ರಂದು ಹತ್ತು ರಾಜ್ಯಗಳ ೩೩ ವಿಧಾನ ಸಭಾ ಸ್ಥಾನಗಳಿಗೆ ಮತ ಚಲಾವಣೆ ನಡೆದಿತ್ತು. ಈ ಪೈಕಿ ಮಂಗಳವಾರ ಒಂಬತ್ತು ರಾಜ್ಯಗಳ ೩೨ ಕ್ಷೇತ್ರಗಳ ಮತ ಎಣಿಕೆ ನಡೆಯಿತು. ಬಿಜೆಪಿ ೧೨, ಕಾಂಗ್ರೆಸ್ ೭, ಸಮಾಜವಾದಿ ಪಕ್ಷ ೮ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಟಿಡಿಪಿ, ತೃಣಮೂಲ ಕಾಂಗ್ರೆಸ್, ಎಐಯುಡಿಎಫ್ ಮತ್ತು ಸಿಪಿಎಂ ತಲಾ ಒಂದು ಕ್ಷೇತ್ರ ಗೆದ್ದಿವೆ. ಸಿಕ್ಕಿಂನಲ್ಲಿ ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. (ಛತ್ತೀಸಗಡದ ಅಂತಾಗಡದಲ್ಲಿ ಸೆ.೨೦ರಂದು ಎಣಿಕೆ ನಡೆದು ಬಿಜೆಪಿ ಗೆದ್ದಿದೆ.)ಬಿಜೆಪಿ. ೨೫/25 ಸ್ಥಾನಗಳಲ್ಲಿ ೧೫/15 ಸ್ಥಾನ ಕಳೆದುಕೊಂಡಿದೆ. ಒಂದು ಹೆಚ್ಚುವರಿ ಸ್ಥಾನವನ್ನು ಬಂಗಾಳಾದಲ್ಲಿ ಗಳಿಸಿದೆ.