ಉಜ್ವಾಡು (ಚಲನಚಿತ್ರ)

ಉಜ್ವಾಡು ೨೦೧೧ ರಲ್ಲಿ ಬಿಡುಗಡೆಯಾದ ಒಂದು ಕೊಂಕಣಿ ಚಲನಚಿತ್ರ. ಇದನ್ನು ಕಾಸರಗೋಡು ಚಿನ್ನಾ ಅವರು ನಿರ್ದೇಶಿಸಿದ್ದು, ಕೆ ಜೆ ಧನಂಜಯ ಮತ್ತು ಅನುರಾಧ ಪಡಿಯಾರ್ ಅವರು ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ಜಿ ಎಸ್ ಬಿ ಕೊಂಕಣಿಯ ಮೂರನೇ ಚಲನಚಿತ್ರವಾಗಿದ್ದು, ಕೊಂಕಣಿ ಸಾರಸ್ವತ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಉಜ್ವಾಡು
ನಿರ್ದೇಶನಕಾಸರಗೋಡು ಚಿನ್ನ
ನಿರ್ಮಾಪಕಕೆ ಜೆ ಧನಂಜಯ
ಅನುರಾಧ ಪಡಿಯಾರ್
ಲೇಖಕಗೋಪಾಲಕೃಷ್ಣ ಪೈ
ಸಂಗೀತವಿ ಮನೋಹರ್
ಛಾಯಾಗ್ರಹಣಉತ್ಪಲ್ ನಯನರ್
ಸಂಕಲನಸುರೇಶ್ ಅರಸ್
ಸ್ಟುಡಿಯೋMithra Media Pvt. Ltd
ಬಿಡುಗಡೆಯಾಗಿದ್ದು೧೪ ಅಕ್ಟೋಬರ್ ೨೦೧೧ (ಭಾರತ)
ದೇಶಭಾರತ
ಭಾಷೆಕೊಂಕಣಿ
ಬಂಡವಾಳ₹೪೫ ಲಕ್ಷ

೧೪ ಅಕ್ಟೋಬರ್ ೨೦೧೧ ರಂದು ಬಿಡುಗಡೆಯಾಗಿದ್ದು, ವಿ ಮನೋಹರ್ ಅವರ ಸಂಗೀತವಿದೆ. ಶಿವಧ್ವಜ್, ನೀತು, ಸದಾಶಿವ್ ಬ್ರಹ್ಮಾವರ್, ಸಂಧ್ಯಾ ಪೈ, ಪ್ರಮಿಳಾ ನೇಸರ್ಗಿ, ಡಾ. ಅನಂತ್ ಪ್ರಭು, ಉಮಾಶ್ರೀ ಮುಂತಾದವರು ನಟಿಸಿದ್ದಾರೆ.[][]

ಚಿತ್ರಕಥೆ

ಬದಲಾಯಿಸಿ

ಉಜ್ವಾಡು ಸಾಮಾನ್ಯ ಗೌಡ ಸಾರಸ್ವತ ಬ್ರಾಹ್ಮಣರ ಜೀವನದ ಕಷ್ಟಗಳ ಕುರಿತ ಚಲನಚಿತ್ರವಾಗಿದೆ.

ತಾರಾಗಣ

ಬದಲಾಯಿಸಿ
  • ಉಮಾಶ್ರೀ
  • ಶಿವಧ್ವಜ್
  • ನೀತು
  • ಸದಾಶಿವ್ ಬ್ರಹ್ಮಾವರ್
  • ಸಂಧ್ಯಾ ಪೈ
  • ಪ್ರಮಿಳಾ ನೇಸರ್ಗಿ
  • ಡಾ. ಅನಂತ್ ಪ್ರಭು
  • ಶ್ರೀನಿವಾಸ್ ಶೇಷಗಿರಿ ಪ್ರಭು (ಗಜ್ಜು ಪಾತ್ರದಲ್ಲಿ)

ನಿರ್ಮಾಣ ಹಿನ್ನೆಲೆ ಮತ್ತು ಬೆಳವಣಿಗೆಗಳು

ಬದಲಾಯಿಸಿ

೨೨ ಏಪ್ರಿಲ್ ೨೦೧೧ ರಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಉಜ್ವಾಡು ಚಿತ್ರೀಕರಣದ ಮುಹೂರ್ತವಾಯಿತು. ಕನ್ನಡ ಚಿತ್ರರಂಗದ ಖ್ಯಾತನಾಮರಾದ ಗಿರೀಶ್ ಕಾಸರವಳ್ಳಿ, ಟಿ ಎಸ್ ನಾಗಾಭರಣ, ಜಯಮಾಲಾ, ಉಮಾಶ್ರೀ ಮತ್ತು ೧೯೮೦ರ ದಶಕದಲ್ಲಿಲಿ "ಜನ ಮನ" ಹೆಸರಿನ ಕೊಂಕಣಿ ಚಲನಚಿತ್ರವನ್ನು ನಿರ್ಮಾಣಿಸಿ, ನಿರ್ದೇಶಿಸಿದ್ದ ಡಾ. ಕೆ ರಮೇಶ್ ಕಾಮತ್ ಅವರು ಉಪಸ್ಥಿತರಿದ್ದರು. ಉಜ್ವಾಡು ಚಲನಚಿತ್ರವು ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'ಯು' ಪ್ರಮಾಣಪತ್ರವನ್ನು ಪಡೆದಿದೆ.

ಮಂಗಳೂರು ಮತ್ತು ಕಾರ್ಕಳ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಜಿ ಎಸ್ ಬಿ ಕೊಂಕಣಿಯಲ್ಲಿ ತೆಗೆದ ಮೂರನೇ ಚಲನಚಿತ್ರವಾಗಿದೆ. ಇದಕ್ಕೂ ಮುಂಚಿನ ಎರಡು ಜಿ ಎಸ್ ಬಿ ಕೊಂಕಣಿ ಚಲನಚಿತ್ರಗಳೆಂದರೆ ತಪಸ್ವಿನಿ ಮತ್ತು ಜನ ಮನ.

ಉಲ್ಲೇಖಗಳು

ಬದಲಾಯಿಸಿ
  1. "Konkani film Ujwadu to be released on Oct 14". www.mangaloretoday.com. 8 October 2011. Archived from the original on 30 January 2021. Retrieved 2021-01-30.
  2. "Ujwadu (2011) Konkani movie: Cast & Crew". chiloka.com. Archived from the original on 21 October 2020. Retrieved 2021-01-30.