ಉಚ್ಚಿ ಪಿಳ್ಳ್ಯಾರ್ ದೇವಸ್ಥಾನ, ರಾಕ್‌ಫೋರ್ಟ್
ಉಚ್ಚಿ ಪಿಳ್ಳ್ಯಾರ್ ದೇವಾಲಯವು ೭ ನೇ ಶತಮಾನದ ಹಿಂದೂ ದೇವಾಲಯವಾಗಿದೆ. ಇದು ಭಾರತದ ತಮಿಳುನಾಡಿನ ತಿರುಚ್ಚಿಯ ರಾಕ್‌ಫೋರ್ಟ್‌ನ ಮೇಲ್ಭಾಗದಲ್ಲಿರುವ ಗಣೇಶನಿಗೆ ಸಮರ್ಪಿತವಾಗಿದೆ. ದಂತಕಥೆಯ ಪ್ರಕಾರ, ಈ ಬಂಡೆಯು ಶ್ರೀರಂಗಂನಲ್ಲಿ ರಂಗನಾಥಸ್ವಾಮಿ ದೇವರನ್ನು ಸ್ಥಾಪಿಸಿದ ನಂತರ ದೇವ ಗಣೇಶನು ರಾಜ ವಿಬೀಷಣನಿಂದ ಓಡಿಹೋದ ಸ್ಥಳವಾಗಿದೆ. ತಿರುಚ್ಚಿರಾಪಳ್ಳಿ ರಾಕ್ ಫೋರ್ಟ್ ಅನ್ನು ತಮಿಳಿನಲ್ಲಿ ಮಲೈಕೊಟ್ಟೈ ಎಂದೂ ಕರೆಯುತ್ತಾರೆ.
ಉಚ್ಚಿ ಪಿಳ್ಳ್ಯಾರ್ ದೇವಾಲಯ | |
---|---|
ಭೂಗೋಳ | |
ದೇಶ | ಭಾರತ |
ರಾಜ್ಯ | ತಮಿಳು ನಾಡು |
ಸ್ಥಳ | ತಿರುಚ್ಚಿರಾಪಳ್ಳಿ |
ವಾಸ್ತುಶಿಲ್ಪ
ಬದಲಾಯಿಸಿರಾಕ್ ಫೋರ್ಟ್ ದೇವಾಲಯವು ೮೩ ಮೀ(೨೭೨ಅಡಿ) ಎತ್ತರದಲ್ಲಿ ಬಂಡೆಯ ಮೇಲೆ ನಿರ್ಮಿತವಾದ ದೇವಾಲಯವಾಗಿದೆ. ನಯವಾದ ಬಂಡೆಯನ್ನು ಮೊದಲು ಪಲ್ಲವರು ಕತ್ತರಿಸಿದರು ಆದರೆ ಮಧುರೈನ ನಾಯಕರು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಎರಡೂ ದೇವಾಲಯಗಳನ್ನು ಪೂರ್ಣಗೊಳಿಸಿದರು. [೧]
ದೇವಾಲಯವು ಬಂಡೆಯ ತುದಿಯಲ್ಲಿದೆ. ಗಣೇಶನ ದೇವಾಲಯವು ಬಂಡೆಯ ಮೇಲೆ ಕೆತ್ತಲಾದ ಕಡಿದಾದ ಮೆಟ್ಟಿಲುಗಳ ಮೂಲಕ ಪ್ರವೇಶವನ್ನು ಹೊಂದಿದೆ. ಈ ದೇವಾಲಯವು ಬಂಡೆಯ ಮೇಲೆ ನಿರ್ಮಿತವಾದುದರಿಂದ ತಿರುಚ್ಚಿ, ಶ್ರೀರಂಗಂ ಜೊತೆಗೆ ಕಾವೇರಿ ಮತ್ತು ಕೊಲ್ಲಿಡಂ ನದಿಗಳ ವೀಕ್ಷಣೆಗಳನ್ನು ಒದಗಿಸುತ್ತದೆ. ಪಲ್ಲವರು ರಚಿಸಿದ ಪ್ರಾಚೀನ ವಾಸ್ತುಶೈಲಿಯಿಂದಾಗಿ, ಈ ದೇವಾಲಯವನ್ನು ಭಾರತದ ಪುರಾತತ್ವ ಇಲಾಖೆಯು ನಿರ್ವಹಿಸುತ್ತದೆ.
ವಿನಾಯಕ ದೇವಸ್ಥಾನದ ಇತಿಹಾಸ
ಬದಲಾಯಿಸಿವಿಭೀಷಣ, ಲಂಕಾವನ್ನು ಆಳಿದ ಅಸುರ ರಾಜ ರಾವಣನ ಕಿರಿಯ ಸಹೋದರ. ರಾಮಾಯಣ ಮಹಾಕಾವ್ಯದಲ್ಲಿ ಶ್ರೀರಾಮನು ರಾವಣನಿಂದ ಅಪಹರಿಸಿ ಹಿಡಿದಿದ್ದ ತನ್ನ ಹೆಂಡತಿ ಸೀತೆಯನ್ನು ಸುಗ್ರೀವನ ಸಹಾಯದಿಂದ ರಕ್ಷಿಸುತ್ತಾನೆ. ಈ ಯುದ್ಧದಲ್ಲಿ, ರಾವಣನ ನೈತಿಕ ಮತ್ತು ಸತ್ಯವನ್ನು ಪಾಲಿಸುವ ಸಹೋದರ, ವಿಭೀಷಣನು ತನ್ನ ಸಹೋದರನ ವಿರುದ್ಧದ ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡುತ್ತಾನೆ. ಅಂತಿಮವಾಗಿ ರಾಮನು ಯುದ್ಧವನ್ನು ಗೆಲ್ಲುತ್ತಾನೆ ಮತ್ತು ಪ್ರೀತಿಯ ಸಂಕೇತವಾಗಿ ವಿಭೀಷಣನಿಗೆ ವಿಷ್ಣುವಿನ ರೂಪವಾದ ರಂಗನಾಥನ ವಿಗ್ರಹವನ್ನು (ಪೂಜೆಗಾಗಿ ವಿಗ್ರಹ) ನೀಡುತ್ತಾನೆ.
ವಿಭೀಷಣ ರಾಮನನ್ನು ಬೆಂಬಲಿಸಿದರೂ, ಮೂಲತಃ ಅಸುರನಾಗಿದ್ದನು. ಆದ್ದರಿಂದ ದೇವತೆಗಳು (ಹಿಂದೂ ಪುರಾಣಗಳ ಪ್ರಕಾರ ಅಸುರರ ಪರಮ ಪ್ರತಿಸ್ಪರ್ಧಿಗಳು) ಅಸುರನು ಭಗವಂತನ ಪರಮೋಚ್ಚ ರೂಪವನ್ನು ತನ್ನ ರಾಜ್ಯಕ್ಕೆ ತೆಗೆದುಕೊಳ್ಳುವ ಈ ಕಲ್ಪನೆಯನ್ನು ನಿಲ್ಲಿಸಲು ಬಯಸಿದರು. ಅವರು ಅಡೆತಡೆಗಳನ್ನು ನಿವಾರಿಸುವ ಮತ್ತು ಸಿದ್ದಿ-ಬುದ್ದಿಯನ್ನು ನೀಡುವ ದೇವ ಭಗವಾನ್ ವಿನಾಯಕನ ಸಹಾಯವನ್ನು ಕೋರುತ್ತಾರೆ ಮತ್ತು ಭಗವಂತನು ಈ ಯೋಜನೆಯನ್ನು ಸ್ವೀಕರಿಸುತ್ತಾನೆ. ತನ್ನ ರಾಜ್ಯಕ್ಕೆ ಬೆನ್ನೆಲುಬಾಗಿದ್ದ ವಿಭೀಷಣನು, ತಿರುಚಿಯ ಮೂಲಕ ಹೋಗುತ್ತಾನೆ ಮತ್ತು ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹಾಗೂ ತನ್ನ ದೈನಂದಿನ ಆಚರಣೆಗಳನ್ನು ಮಾಡಲು ಬಯಸುತ್ತಾನೆ. ಆದಾಗ್ಯೂ, ಒಮ್ಮೆ ಭೂಮಿಯಲ್ಲಿ ಇರಿಸಲಾದ ದೇವತೆಯನ್ನು ಎಂದಿಗೂ ತೆಗೆದುಹಾಕಲಾಗುವುದಿಲ್ಲ ಮತ್ತು ಶಾಶ್ವತವಾಗಿ ಆ ಸ್ಥಳದಲ್ಲಿ ಇರಬೇಕಾಗಿರುವುದರಿಂದ ಅವನು ಗೊಂದಲಕ್ಕೊಳಗಾಗುತ್ತಾನೆ.
ಪರಿಹಾರವಾಗಿ, ವಿಭೀಷಣನು ಸ್ನಾನ ಮಾಡುವಾಗ ದೇವರ ವಿಗ್ರಹವನ್ನು ಹಿಡಿದುಕೊಳ್ಳಲು ಯಾರನ್ನಾದರೂ ಹುಡುಕಲು ಪ್ರಯತ್ನಿಸುತ್ತಾನೆ. ಅವನು ಗೋಪಾಲಕನ ವೇಷದಲ್ಲಿ ವಿನಾಯಕನನ್ನು ಕಾಣುತ್ತಾನೆ. ಯೋಜನೆಯ ಪ್ರಕಾರ, ವಿಭೀಷಣ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದಾಗ, ವಿನಾಯಕನು ದೇವರನ್ನು ತೆಗೆದುಕೊಂಡು ಮರಳಿನಲ್ಲಿ, ಕಾವೇರಿ ತೀರದಲ್ಲಿ ಭದ್ರವಾಗಿ ಇಡುತ್ತಾನೆ. ಇದನ್ನು ನೋಡಿ ಕೋಪಗೊಂಡ ವಿಭೀಷಣನು ಅವನನ್ನು ಶಿಕ್ಷಿಸಲು ಹುಡುಗನನ್ನು ಬೆನ್ನಟ್ಟುತ್ತಾನೆ ಮತ್ತು ಹುಡುಗ ಓಡಿಹೋಗಿ ಕಾವೇರಿ ದಂಡೆಯ ಬಳಿಯ ಬಂಡೆಯ ಮೇಲೆ ಏರುತ್ತಾನೆ. ವಿಭೀಷಣ ಅಂತಿಮವಾಗಿ ಹುಡುಗನನ್ನು ತಲುಪಿ ಅವನ ಹಣೆಯ ಮೇಲೆ ಹೊಡೆಯುತ್ತಾನೆ. ಇಂದಿಗೂ ದೇವಾಲಯದ ವಿಗ್ರಹದ ಹಣೆಯಲ್ಲಿ ಒಂದು ಹೊಂಡವನ್ನು ಕಾಣಬಹುದು. [೨] ಚಿಕ್ಕ ಹುಡುಗ ತನ್ನನ್ನು ತಾನು ವಿನಾಯಕ ಎಂದು ಬಹಿರಂಗಪಡಿಸುತ್ತಾನೆ. ವಿಭೀಷಣನು ತಕ್ಷಣವೇ ಕ್ಷಮೆಯಾಚಿಸುತ್ತಾನೆ ಮತ್ತು ಭಗವಂತ ಅವನಿಗೆ ಆಶೀರ್ವಾದವನ್ನು ನೀಡುತ್ತಾನೆ. ವಿಗ್ರಹವು ಶ್ರೀರಂಗಂನಲ್ಲಿ ಉಳಿಯಲು ಉದ್ದೇಶಿಸಿದೆ ಎಂದು ಬಹಿರಂಗಪಡಿಸುತ್ತಾನೆ ಮತ್ತು ಅವನನ್ನು ಲಂಕೆಗೆ ಕಳುಹಿಸುತ್ತಾನೆ. ಇದು ರಾಮಾಯಣ ಕಾಲದಲ್ಲಿ ರಾವಣನೊಂದಿಗೆ ಗೋಕರ್ಣದಲ್ಲಿ ನಡೆದ ಗಣೇಶನ ಪ್ರಸಂಗವನ್ನು ಅನೇಕ ವಿಷಯಗಳಲ್ಲಿ ಹೋಲುತ್ತದೆ.[೩]
ರಂಗನಾಥ ದೇವರನ್ನು ಇರಿಸಲಾಗಿದ್ದ ಸ್ಥಳವು ನಂತರ ದಟ್ಟವಾದ ಅರಣ್ಯದಲ್ಲಿ ಆವರಿಸಲ್ಪಟ್ಟಿತು. ಬಳಕೆಯಾಗದ ಕಾರಣ ಮತ್ತು ಬಹಳ ಸಮಯದ ನಂತರ, ಚೋಳ ರಾಜನು ಗಿಳಿಯನ್ನು ಹಿಂಬಾಲಿಸಿದಾಗ ಆಕಸ್ಮಿಕವಾಗಿ ದೇವತೆಯನ್ನು ಕಂಡುಕೊಂಡಾಗ ಅದು ಪತ್ತೆಯಾಯಿತು. ನಂತರ ಅವರು ಶ್ರೀರಂಗಂನ ರಂಗನಾಥಸ್ವಾಮಿ ದೇವಾಲಯವನ್ನು ವಿಶ್ವದ ಅತಿದೊಡ್ಡ ದೇವಾಲಯ ಸಂಕೀರ್ಣಗಳಾಗಿ ಸ್ಥಾಪಿಸಿದರು. ವಿಭೀಷಣನಿಂದ ತಪ್ಪಿಸಿಕೊಳ್ಳಲು ವಿನಾಯಕ ಬಳಸಿದ ಬಂಡೆಯಲ್ಲಿ ಪಲ್ಲವರು ವಿನಾಯಕ ದೇವಾಲಯ ಮತ್ತು ತಾಯುಮನಸ್ವಾಮಿ ದೇವಾಲಯವನ್ನು ನಿರ್ಮಿಸಿದರು.
ಉಚ್ಚಿ ಪಿಳ್ಳ್ಯಾರ್ ದೇವಾಲಯವು ಮಾಣಿಕ್ಕ ವಿನಯಗರ್ ಜೊತೆಗೆ ಬೆಟ್ಟದ ತಪ್ಪಲಿನಲ್ಲಿ ಸಂಬಂಧವನ್ನು ಹೊಂದಿದೆ. ಉಚ್ಚಿ ಪಿಳ್ಳ್ಯಾರ್‌ಗೆ ಭೇಟಿ ನೀಡುವ ಮೊದಲು ಮಾಣಿಕ್ಕ ವಿನಯಗರ್‌ಗೆ ನಮನ ಸಲ್ಲಿಸುವುದು ಸಾಮಾನ್ಯ ಆರಾಧನಾ ಪದ್ಧತಿಯಾಗಿದೆ. [೪]
ಈ ದೇವಾಲಯವನ್ನು ತಮಿಳುನಾಡು ಸರ್ಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ನಿರ್ವಹಿಸುತ್ತದೆ. [೫]
ಗ್ಯಾಲರಿ
ಬದಲಾಯಿಸಿ-
ಟ್ರಿಚಿನೋಪೊಲಿ ಬಂಡೆಯ ಮೇಲಿನ ದೇವಾಲಯದ ಒಳಭಾಗ (೧೮೪೭)
-
ರಾಕ್‌ಫೋರ್ಟ್ ಅನ್ನು ಲೌರ್ಡ್ಸ್ ಚರ್ಚ್ನಿಂದ ನೋಡಲಾಗಿದೆ
-
ದೇವಾಲಯದ ಮುಖ್ಯ ದ್ವಾರ
-
ದೇವಾಲಯದ ಪೂರ್ವ ಭಾಗದಿಂದ ನೋಟ
-
ದೇವಾಲಯದ ಮೇಲಿನ ನೋಟ
-
ದೇವಾಲಯದ ಗೋಪುರ
-
ರಾತ್ರಿಯಲ್ಲಿ , ರಾಕ್‌ಫೋರ್ಟ್‌ನ ಉಚ್ಚಿ ಪಿಳ್ಳ್ಯಾರ್ ದೇವಸ್ಥಾನದಿಂದ ನೋಡಲಾದ ದೃಶ್ಯ.
ಸಹ ನೋಡಿ
ಬದಲಾಯಿಸಿ- ತಿರುಚ್ಚಿರಾಪಳ್ಳಿ
- ಶ್ರೀರಂಗಂ
- ಶ್ರೀರಂಗಂನಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ
ಉಲ್ಲೇಖಗಳು
ಬದಲಾಯಿಸಿ- ↑ India By Sarina Singh, Joe Bindloss, Paul Clammer, Janine Eberle
- ↑ "Uchi Pillayar kovil".
- ↑ Mahabaleshwar Temple, Gokarna
- ↑ V., Meena (1974). Temples in South India (1st ed.). Kanniyakumari: Harikumar Arts. p. 21.
- ↑ "Hindu Religious and Charitable Endowments Act, 1959". Archived from the original on 2018-12-06. Retrieved 2023-01-07.