ಇಸಾಟಿನ್
ಇಸಾಟಿನ್ ಇಂಡೋಲಿನ ಆಕ್ಸಿಜನ್ ಪಡೆದಿರುವ ವಸ್ತುಗಳ ಗುಂಪಿಗೆ ಸೇರಿದೆ. ನೀಲಿಬಣ್ಣವನ್ನು (ಇಂಡಿಗೊ) ನೈಟ್ರಿಕ್ ಆಮ್ಲ ಅಥವಾ ಕ್ರೋಮಿಕ್ ಆಮ್ಲದಿಂದ ಉತ್ಕರ್ಷಿಸಿ ಇಸಾಟಿನನ್ನು ಮೊದಲು ತಯಾರಿಸುತ್ತಿದ್ದರು.
ಗುಣಗಳು
ಬದಲಾಯಿಸಿಇದು ಕಿತ್ತಳೆ ಬಣ್ಣದ ಸ್ಫಟಿಕಾಕೃತಿಯ ಘನ. ಇದರ ಕರಗುವ ಬಿಂದು 2000 ಸೆಂ. ಗ್ರೇ. ಟಾಟೋಮೆರಿಸಮ್ಮಿನ ಅಂಗೀಕೃತ ಉದಾಹರಣೆಗಳಲ್ಲಿ ಇಸಾಟಿನ್ ಮೊಟ್ಟ ಮೊದಲನೆಯದು. ಆದ್ದರಿಂದ ವೈಜ್ಞಾನಿಕ ಆಸಕ್ತಿಯಲ್ಲಿ ಇದೊಂದು ವಿಶಿಷ್ಟ ವಸ್ತು. ಇದು ಎರಡು ವ್ಯಕ್ತಿತ್ವವುಳ್ಳ ಒಂದೇ ರಾಸಾಯನಿಕ ವಸ್ತು. ಇದರ ಕೆಲವು ಕ್ರಿಯೆಗಳು ಲ್ಯಾಕ್ಟಾಮ್ ರಚನೆಯನ್ನೂ (I) ಮತ್ತೆ ಕೆಲವು ಲ್ಯಾಕ್ಟಿಮ್ ರಚನೆಯನ್ನೂ (II) ಸೂಚಿಸುತ್ತವೆ.
ಇಸಾಟಿನ್ ಒಂದೇ ಬಗೆಯಾದರೂ ಎರಡು ಮೀಥೈಲ್ ಈಥರುಗಳನ್ನು ಹೊಂದಿದೆ. ಡೈಬ್ರೋಮೋಮೀಥೈಲ್ ಆಕ್ಸಿಂಡೋಲಿನಿಂದ ಮಾಡಿದ ಸ್ಯೂಡೋ ಮೀಥೈಲ್ ಇಸಾಟಿನ್ (III) ಮತ್ತು ಮೀಥೈಲ್ ಅಯೊಡೈಡನ್ನು ಬೆಳ್ಳಿ ಇಸಾಟಿನ್‍ನೊಡನೆ ಸಂಯೋಗಿಸಿ ತಯಾರಿಸಿದ ಮೀಥೈಲ್ ಇಸಾಟಿನ್ (IV) ಇವೇ ಆ ಎರಡು ವಸ್ತುಗಳು.
ಇಸಾಟಿನ್‍ನ ಅತಿರಕ್ತ ಅಳತೆಗಳು ಘನಸ್ಥಿತಿಯಲ್ಲಾಗಲೀ ಅಥವಾ ದುರ್ಬಲ ಕ್ಲೊರೋಫಾರಂ ದ್ರಾವಣದಲ್ಲಾಗಲೀ ಲ್ಯಾಕ್ಟಿಮ್ ರಚನೆ ಇರುವುದರ ಬಗ್ಗೆ ಯಾವ ಬೆಂಬಲವನ್ನೂ ಸೂಚಿಸಿಲ್ಲವೆಂದೂ 1956ರಲ್ಲಿ ತಿಳಿದುಬಂತು.
ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲದೊಡನೆ ಅನಿಲೀನ್ ಕ್ಲೋರಾಲ್ ಹೈಡ್ರೇಟು, ಹೈಡ್ರಾಕ್ಸಿಲ್ ಅಮೈನು ಮತ್ತು ಸೋಡಿಯಂ ಸಲ್ಫೇಟು ದ್ರಾವಣವನ್ನು ಕಾಸಿ ಬರುವ ಐಸೊನೈಟ್ರೋಸೋ ಅಸಿಟಾನಿಲೈಡನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲದೊಡನೆ ವರ್ತಿಸಿ ಇಸಾಟಿನ್ನನ್ನು ತಯಾರಿಸುತ್ತಾರೆ.[೨]
ಗುಣಗಳು
ಬದಲಾಯಿಸಿ- ಇದು ರಂಜಕದ (ಫಾಸ್ಪರಸ್) ಪೆಂಟಾಕ್ಲೋರೈಡಿನೊಡನೆ ವರ್ತಿಸಿ ಇಸಾಟಿನ್ ಕ್ಲೋರೈಡನ್ನು ಕೊಡುತ್ತದೆ.
- ಬಿಸಿ ಸೋಡಿಯಂ ಹೈಡ್ರಾಕ್ಸೈಡಿನೊಡನೆ ಇಸಾಟಿಕ್ ಆಮ್ಲವನ್ನು ಕೊಡುತ್ತದೆ.
- ಸತು ಮತ್ತು ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಅಪಕರ್ಷಣೆ ಹೊಂದಿ ಡೈ ಆಕ್ಸಿಂಡೋಲಾಗಿ ಪರಿವರ್ತನೆ ಹೊಂದುತ್ತದೆ.
- ಆರ್ಥೋನೈಟ್ರೋ ಬೆನ್ಜಾಯಿಲ್ ಕ್ಲೋರೈಡಿನಿಂದ ಇಸಾಟಿನ್ನನ್ನು ಸಂಶ್ಲೇಷಿಸಿ ಅದರ ರಚನೆಯನ್ನು ಸ್ಥಿರೀಕರಿಸಲಾಗಿದೆ.
ಉಪಯೋಗಗಳು
ಬದಲಾಯಿಸಿವ್ಯಾಟ್ ಬಣ್ಣಗಳ ಉತ್ಪಾದನೆಯಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಉದಾಹರಣೆಗೆ, ಸೀಬಾ ಕೆಂಪು-G ಯನ್ನು (ಸೀಬಾರಡ್-G; ಥಯೋ ಇಂಡಿಗೋ ಸ್ಕಾರ್ಲೆಟ್-G) ಇಸಾಟಿನನ್ನು 2- ಹೈಡ್ರಾಕ್ಸಿಥೈಯೊನ್ಯಾಫ್ತೀನಿನೊಡನೆ ಸಂಘನಿಸಿ (ಕಂಡೆನ್ಸ್) ಬರುವ ವಸ್ತುವನ್ನು ಬ್ರೋಮಿನೇಷನ್ ಮಾಡುವುದರಿಂದ ತಯಾರಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ Hewawasam, P.; Meanwell, N. A. (1994). "A General Method for the Synthesis of Isatins". Tetrahedron Letters. 35 (40): 7303–7306. doi:10.1016/0040-4039(94)85299-5.
{{cite journal}}
: CS1 maint: multiple names: authors list (link) - ↑ Sandmeyer, T. (1919). "Über Isonitrosoacetanilide und deren Kondensation zu Isatinen". Helv. Chim. Acta. 2: 234. doi:10.1002/hlca.19190020125.
ಹೊರಗಿನ ಕೊಂಡಿಗಳು
ಬದಲಾಯಿಸಿ- . Encyclopædia Britannica. Vol. 14 (11th ed.). 1911. pp. 865–866.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)