ಇಂಫಾಲ
ಇಂಫಾಲ ಮಣಿಪುರ ರಾಜ್ಯದ ರಾಜಧಾನಿ. ಭಾರತ ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಿರುವ ಮಣಿಪುರ ರಾಜ್ಯದ ಆಡಳಿತ ಕೇಂದ್ರ. ಕಲ್ಕತ್ತದ ಈಶಾನ್ಯ ದಿಕ್ಕಿಗೆ 640 ಕಿ.ಮೀ. ದೂರದಲ್ಲಿ ಮಣಿಪುರ ನದಿಕಣಿವೆ ಭಾಗದಲ್ಲಿದೆ. ಸಮುದ್ರಮಟ್ಟಕ್ಕಿಂತ 2,500' ಎತ್ತರದಲ್ಲಿದೆ. ಜನಸಂಖ್ಯೆ 67,717 (1961). ಇಲ್ಲಿ ಟಿಬೆಟನ್ನರು ಮತ್ತು ಬರ್ಮೀಯರನ್ನೊಳಗೊಂಡ ಮಿಶ್ರ ಜನಾಂಗವಿದೆ. ಇವರೆಲ್ಲ ವೈಷ್ಣವ ಪಂಥಕ್ಕೆ ಸೇರಿದ ಹಿಂದೂಗಳು. ಇವರು ಪ್ರೌಢಪ್ರಾಚೀನ ಸಂಗೀತ ನೃತ್ಯಗಳಲ್ಲಿ ತಮ್ಮದೇ ಆದ ಸಂಸ್ಕೃತಿ ಹಾಗೂ ಶೈಲಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇಂಫಾಲ್ ಕಾಲೇಜು, ಇಂಫಾಲ್ ಬೋಧಶಿಕ್ಷಣ ಪ್ರೌಢಶಾಲೆ, ಧನಮಂಜರಿ ಪ್ರೌಢಶಾಲೆ-ಇವೆಲ್ಲ ಅಸ್ಸಾಮಿನ ಗೌಹಾತಿ ವಿಶ್ವವಿದ್ಯಾನಿಲಯದ ಆಡಳಿತಕ್ಕೆ ಸೇರಿವೆ. ನೇಯ್ಗೆ, ಹಿತ್ತಾಳೆ ಮತ್ತು ಕಂಚಿನ ಪದಾರ್ಥಗಳ ತಯಾರಿಕೆ ಮುಂತಾದ ಗ್ರಾಮೋದ್ಯೋಗಗಳಿಗೆ ಇಂಫಾಲ್ ಹೆಸರು ಪಡೆದಿದೆ.
ಇಂಫಾಲ ನಗರ
ꯏꯝꯐꯥꯜ | |
---|---|
ರಾಜಧಾನಿ | |
ಕಾಂಗ್ಲಾ ಗೇಟ್, ಇಂಫಾಲ | |
ದೇಶ | ![]() |
ರಾಜ್ಯ | ಮಣಿಪುರ |
ಜಿಲ್ಲೆ | ಇಂಫಾಲ ಪಶ್ಚಿಮ, ಇಂಫಾಲ ಪೂರ್ವ |
ಎತ್ತರ | ೭೮೬ m (೨,೫೭೯ ft) |
ಜನಸಂಖ್ಯೆ (೨೦೧೧ ಸೆನ್ಸಸ್) | |
• ಒಟ್ಟು | ೨,೬೪,೯೮೬ |
ಭಾಷೆಗಳು | |
• ಅಧಿಕೃತ | ಮೆಥೆ ಭಾಷೆ (ಮಣಿಪುರಿ) |
ಸಮಯ ವಲಯ | UTC+5:30 (IST) |
PIN | 795xxx |
ದೂರವಾಣಿ ಕೋಡ್ | 3852 |
Website | www |
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ್ | ಶ್ರೀನಗರ | ಸಿಲ್ವಾಸ | ಹೈದರಾಬಾದ್