ಆಸ್ವಾನ್ ಈಜಿಪ್ಟ್ ದೇಶದ ಆಸ್ವಾನ್ ಪ್ರಾಂತ್ಯದ ಮುಖ್ಯಪಟ್ಟಣ. ಉತ್ತರದ ಕೈರೋವಿನಿಂದ ಇಲ್ಲಿಗೆ ರೈಲುಮಾರ್ಗದ ಮೇಲೆ ಐನೂರೈವತ್ತು ಮೈಲಿ (893 ಕಿ.ಮೀ.), ನೈಲ್ ನದಿಯ ಪೂರ್ವದಂಡೆಯ ಮೇಲಿರುವ ಈ ಪಟ್ಟಣವಿದೆ.

ಆಸ್ವಾನ್
ಆಸ್ವಾನ್‍ನಲ್ಲಿ ನೈಲ್ ನದಿ
ಆಸ್ವಾನ್‍ನಲ್ಲಿ ನೈಲ್ ನದಿ
Country ಈಜಿಪ್ಟ್
GovernorateAswan
Elevation
೧೯೪ m (೬೩೬ ft)
Population
 (2012)
 • Total೨,೯೦,೩೨೭
Time zoneUTC+2 (EST)
Area code(+20) 97

ಜನಸಂಖ್ಯೆ

ಬದಲಾಯಿಸಿ

ಇಲ್ಲಿಯ ಜನಸಂಖ್ಯೆ ೨,೯೦,೩೨೭ (೨೦೧೨), ಸರಹದ್ದಿನ ಅಯಕಟ್ಟಿನ ಸ್ಥಳವಾದ್ದರಿಂದ ಇತಿಹಾಸ ಪ್ರಸಿದ್ಧ, ಗಡಿಸೇನೆಯ ಠಾಣೆ, ನೆರೆಯ ಸುಡಾನ್, ಅಬಿಸೀನಿಯಗಳೊಂದಿಗೆ ವ್ಯಾಪಾರಕ್ಕೆ ಮುಖ್ಯದ್ವಾರ.

ಸಂಪರ್ಕ

ಬದಲಾಯಿಸಿ

ಆಸ್ವಾನಿನ ದಕ್ಷಣಕ್ಕೆ ಕೆಲವು ಮೈಲಿಗಳ ದೂರದಲ್ಲಿರುವ ಜಲಪಾತದ ತಲೆಯ ಬಳಿ ಇರುವ ಷೆಲ್ಲಾಲ್‍ವರೆಗೂ ರೈಲುಮಾರ್ಗ ಮುಂದುವರಿಯುತ್ತದೆ. ಅಲ್ಲಿಂದಾಚೆಗೆ ಸೂಡಾನಿನೊಂದಿಗೆ ಜಲಮಾರ್ಗ ಸಂಪರ್ಕ, ಪೂರ್ವಕ್ಕೆ ಮೂವತ್ತು ಮೈಲಿ ದೂರದಲ್ಲಿ ದೊರಕುವ ಕಬ್ಬಿಣದ ಅದುರು ಕೈರೋ ವಿಭಾಗದ ಕಬ್ಬಿಣ ಉಕ್ಕಿನ ಕಾರ್ಖಾನೆಗೆ ಸಾಗುತ್ತದೆ.

ವಾಣಿಜ್ಯ

ಬದಲಾಯಿಸಿ

ಆಸ್ವಾನ್ ಒಂದು ಆರೋಗ್ಯಧಾಮ, ಪ್ರವಾಸಿಕೇಂದ್ರ; ಆಫ್ರಿಕದಲ್ಲೇ ಸುಂದರವಾದ ನಗರ. ನಗರದ ಎದುರಿಗಿರುವ ಎಲಿಫಾಂಟೈನ್ ನಡುಗಡ್ಡೆಯ ಮೇಲೆ ಬಲು ಹಿಂದೆಯೇ ಜನ ವಾಸಿಸಲಾರಂಭಿಸಿದರು. ನೈಲ್ ನದಿಯ ಪ್ರವಾಹವನ್ನಳೆಯಲು ಆಗ ನಿಲ್ಲಿಸಿದ ಸ್ತಂಭವೊಂದು ಈಗಲೂ ಉಂಟು. ಮುಂದೆ ನಗರ ಬೆಳೆಯಿತು. ಪುರಾತನ ಈಜಿಪ್ಟಿನ ದೇವಮಂದಿರಗಳನ್ನು ಕಟ್ಟಲು ಬೇಕಾದ ಕಲ್ಲುಗಳನ್ನು ಸಮೀಪದ ಬಂಡೆಗಳಿಂದ ಎಬ್ಬಿ ತೆಗೆಯಲಾರಂಬಿಸಿದ ಮೇಲೆ ನಗರದ ಪ್ರಾಮುಖ್ಯ ಹೆಚ್ಚಿತು.

ಹವಾಮಾನ

ಬದಲಾಯಿಸಿ

ಇಲ್ಲಿಯ ಹವಾಮಾನ ಮರುಭೂಮಿಯ ಒಣ ಹವೆಯಿದ್ದು ಮಳೆ ಬಹು ಅಪರೂಪವಾಗಿದೆ.ಚಳಿಗಾಲವು ಹಿತಕರವಾಗಿದ್ದು, ಬೇಸಗೆಯ ಸಹಿಸಲಸಾದ್ಯವಾಗಿರುತ್ತದೆ.

ಅಸ್ವಾನ್, ಈಜಿಫ್ಟ್ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 33.3
(91.9)
39.0
(102.2)
44.0
(111.2)
45.3
(113.5)
48.4
(119.1)
49.5
(121.1)
46.8
(116.2)
48.3
(118.9)
46.7
(116.1)
44.8
(112.6)
39.3
(102.7)
35.4
(95.7)
49.5
(121.1)
ಅಧಿಕ ಸರಾಸರಿ °C (°F) 22.9
(73.2)
25.2
(77.4)
29.5
(85.1)
34.9
(94.8)
38.9
(102)
41.4
(106.5)
41.1
(106)
40.9
(105.6)
39.3
(102.7)
35.9
(96.6)
29.1
(84.4)
24.3
(75.7)
33.6
(92.5)
Daily mean °C (°F) 15.3
(59.5)
17.5
(63.5)
21.8
(71.2)
27
(81)
31.4
(88.5)
33.5
(92.3)
33.6
(92.5)
33.2
(91.8)
32.8
(91)
27.7
(81.9)
21.5
(70.7)
16.9
(62.4)
25.9
(78.6)
ಕಡಮೆ ಸರಾಸರಿ °C (°F) 8.7
(47.7)
10.2
(50.4)
13.8
(56.8)
18.9
(66)
23
(73)
25.2
(77.4)
26
(79)
25.8
(78.4)
24
(75)
20.6
(69.1)
15.0
(59)
10.5
(50.9)
18.5
(65.3)
Record low °C (°F) −2
(28)
1.0
(33.8)
4.6
(40.3)
7.5
(45.5)
13.6
(56.5)
16.4
(61.5)
20.2
(68.4)
19.8
(67.6)
15.8
(60.4)
11.8
(53.2)
6.5
(43.7)
3.2
(37.8)
−2
(28)
ಸರಾಸರಿ ಮಳೆ mm (inches) 0
(0)
0
(0)
0
(0)
0
(0)
0.1
(0.004)
0
(0)
0
(0)
0.7
(0.028)
0
(0)
0.6
(0.024)
0
(0)
0
(0)
1.4
(0.055)
Average rainy days (≥ 0.01 mm) 0.0 0.0 0.0 0.0 0.1 0.0 0.0 0.5 0.0 0.25 0.0 0.0 0.85
Average relative humidity (%) 40 32 24 19 17 16 18 21 22 27 36 42 26.2
Mean sunshine hours 298.2 281.1 321.6 316.1 346.8 363.2 374.6 359.6 298.3 314.6 299.6 289.1 ೩,೮೬೨.೮
Source #1: World Meteorological Organization,[]
Source #2: NOAA for mean temperatures, record temperatures, humidity, and sun[]

ಆಣೆಕಟ್ಟುಗಳು

ಬದಲಾಯಿಸಿ

ನೈಲ್ ನದಿಯ ಪಶ್ಚಿಮಕ್ಕಿರುವ ಕಡಿದಾದ ದಂಡೆಯ ಮೇಲೆ ಬಂಡೆಗಳಲ್ಲೇ ಕೊರೆದ ಅನೇಕ ಗೋರಿಗಳಿವೆ. ನಗರದ ಬಳಿಯಲ್ಲೇ ಆಸ್ವಾನ್ ಆಣೆಕಟ್ಟೆಯಿದೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Weather Information for Asswan". Archived from the original on ಡಿಸೆಂಬರ್ 24, 2018. Retrieved August 31, 2012.
  2. "Asswan Climate Normals 1961–1990". National Oceanic and Atmospheric Administration. Retrieved January 30, 2015.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಆಸ್ವಾನ್&oldid=1214604" ಇಂದ ಪಡೆಯಲ್ಪಟ್ಟಿದೆ