ಆಸ್ಟ್ರೋನೇಸ್ಯದ ಭಾಷೆಗಳು

(ಆಸ್ಟ್ರೋನೇಷ್ಯನ್ ಭಾಷೆಗಳು ಇಂದ ಪುನರ್ನಿರ್ದೇಶಿತ)

ಆಸ್ಟ್ರೋನೇಸ್ಯದ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಮಹಾಸಾಗರದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ ಭಾಷಾ ಕುಟುಂಬ. ಆಸ್ಟ್ರೋನೇಸ್ಯನ್ ಎಂಬ ಪದ ಲ್ಯಾಟಿನ್ ಭಾಷೆಯ ಆಸ್ಟರ್ (ಅಂದರೆ ದಕ್ಷಿಣದ ಗಾಳಿ ) ಮತ್ತು ಗ್ರೀಕ್ ಭಾಷೆನೇಸೊ (ಅಂದರೆ ದ್ವೀಪ ) ಪದಗಳಿಂದ ಬಂದಿದೆ. ಫಾರ್ಮೋಸ ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತೆಂದು ತಜ್ಞರ ನಂಬಿಕೆ. ಅಲ್ಲಿಂದ ಪೆಸಿಫಿಕ್ ಮಹಾಸಾಗರದ ಅನೇಕ ದ್ವೀಪ ಪ್ರದೇಶಗಳಿಗೆ ಈ ಭಾಷೆಗಳು ಹರಡಿವೆ.

ಆಸ್ಟ್ರೋನೇಸ್ಯದ ಭಾಷೆಗಳು
ಭೌಗೋಳಿಕ
ವ್ಯಾಪಕತೆ:
ಆಗ್ನೇಯ ಏಷ್ಯಾದ ಕಡಲ ಸಮೀಪ ಭಾಗಗಳು, ಓಷ್ಯಾನಿಯ, ಮಡಗಾಸ್ಕರ್, ತೈವಾನ್
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:

 

ಗುಲಾಬಿ ಬಣ್ಣದಲಿರುವ ಪ್ರದೇಶಗಳು ಈ ಭಾಷಾ ಕುಟುಂಬದ ವಿಸ್ತೀರ್ಣ

ವಿಭಾಗಗಳು

ಬದಲಾಯಿಸಿ

ಈ ಭಾಷೆಗಳ ವಿಭಾಗೀಕರಣ ಸ್ವಲ್ಪ ವಿವಾದಾತ್ಮಕವಾಗಿದೆ. ಮುಖ್ಯವಾಗಿ ಈ ಭಾಷೆಗಳು ೧೦ ಕುಟುಂಬಗಳಾಗಿ ವಿಂಗಡಿತವಾಗುತ್ತವೆ. ಆದರೆ ಅದರ ಮೊದಲ ೯ ಕುಟುಂಬಗಳು ಭೌಗೋಳಿಕವಾಗಿ ಸೀಮಿತವಾಗಿರುವುದರಿಂದ ಅವನ್ನು

  1. ಫಾರ್ಮೊಸಾದ ಭಾಷೆಗಳು ಎಂದು ಒಟ್ಟಾಗಿಸಲ್ಪಡುತ್ತವೆ.
  2. ಮಲಯೊ-ಪಾಲಿನೇಸ್ಯದ ಭಾಷೆಗಳು ೧೦ನೇ ಕುಟುಂಬವೆಂದಾಗಿ ಪರಿಗಣಿಸಲ್ಪಡುತ್ತದೆ.

ಪ್ರಮುಖ ಭಾಷೆಗಳು

ಬದಲಾಯಿಸಿ
ಕನಿಷ್ಟ ೪ ಮಿಲಿಯನ್ ಮಾತುಗಾರರಿರುವ ಭಾಷೆಗಳು
ಅಧಿಕೃತ ಭಾಷೆಗಳು