ಜಾವಾದ ಭಾಷೆ ಇಂಡೊನೇಷ್ಯಾಜಾವ ದ್ವೀಪದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಪ್ರಮುಖವಾಗಿ ಉಪಯೋಗದಲ್ಲಿರುವ ಒಂದು ಭಾಷೆ.[೧] ಆಸ್ಟ್ರೊನೇಸ್ಯ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯನ್ನು ಸುಮಾರು ೮೦ ಮಿಲಿಯನ್ ಜನರು ಮಾತನಾಡುತ್ತಾರೆ.

ಜಾವನೀಸ್ ಭಾಷೆಯನ್ನು ಮಾತನಾಡುವವರ ಅಂಕಿಅಂಶ
ಜಾವಾದ ಭಾಷೆ
Basa Jawa, Basa Jawi
(ಬಾಸ ಜಾವ, ಬಾಸ ಜಾವಿ)
ಬಳಕೆಯಲ್ಲಿರುವ 
ಪ್ರದೇಶಗಳು:
ಜಾವ (ಇಂಡೊನೇಷ್ಯಾ), ಮಲೇಷ್ಯಾ, ಸುರಿನಾಮ್, ಹೊಸ ಕ್ಯಾಲೆಡೊನಿಯ
ಒಟ್ಟು 
ಮಾತನಾಡುವವರು:
ಸು. ೮೦ ಮಿಲಿಯನ್ 
ಶ್ರೇಯಾಂಕ: ೧೨
ಭಾಷಾ ಕುಟುಂಬ: ಆಸ್ಟ್ರೊನೇಸ್ಯನ್
 ಮಲಯೊ-ಪಾಲಿನೇಷ್ಯನ್
  ಸುಂದ-ಸುಲವೇಸಿ
   ಜಾವಾದ ಭಾಷೆ 
ಬರವಣಿಗೆ: ಜಾವ ಲಿಪಿ, ಲ್ಯಾಟಿನ್ ಅಕ್ಷರಮಾಲೆ
ಭಾಷೆಯ ಸಂಕೇತಗಳು
ISO 639-1: jv
ISO 639-2: jav
ISO/FDIS 639-3: jav — [[]]
ಜಾವ ಭಾಷೆಗಳು

ಜಾವನೀಸ್ ಭಾಷೆ ಹಿನ್ನೆಲೆಸಂಪಾದಿಸಿ

ಮಲಯೋ-ಪಾಲಿನೇಷಿಯನ್ ಪರಿವಾರದ ಭಾಷೆ; ಜಾವ ಮತ್ತು ಸುಮಾತ್ರಗಳಲ್ಲಿನ ನಿಕಟ ಸಂಬಂಧವುಳ್ಳ ಭಾಷೆಗಳ ವರ್ಗಕ್ಕೆ ಸೇರಿದೆ. ಜಾವದ ಇತರ ಭಾಷೆಗಳು ಹಾಗೂ ಮಲಯ, ಮಿನಂಗ್‍ಕಬೌ ಅಛಿನೀಸ್ ಮತ್ತು ಲ್ಯಾಂಪುಂಗ್‍ನಂಥ ಸುಮಾತ್ರದವೇ ಆದ ಅನೇಕ ಭಾಷೆಗಳು ಈ ವರ್ಗಕ್ಕೆ ಸೇರಿವೆ. 35 ದಶಲಕ್ಷಕ್ಕೂ ಮೀರಿದಷ್ಟು ಜನ ಈ ಭಾಷೆಯನ್ನು ಆಡುತ್ತಿರುವುದರಿಂದ, ಇದು ಅತ್ಯಂತ ಹೆಚ್ಚುಸಂಖ್ಯೆಯ ಭಾಷಿಗರನ್ನು ಹೊಂದಿರುವಂಥ ಮಲಯೊ-ಪಾಲಿನೇಷಿಯನ್ ಭಾಷೆಯಾಗಿ ಪರಿಣಮಿಸಿದೆ. ಈ ಭಾಷೆಯಲ್ಲಿ ಮಾತನಾಡುವ ಜನ ಮುಖ್ಯವಾಗಿ ಮಧ್ಯ ಮತ್ತು ಪೂರ್ವ ಜಾವದಲ್ಲಿ ಕಾಣಬರುತ್ತಾರಾದರೂ ಜಾವದ ಹೊರಗೂ-ಅಂದರೆ, ಪಶ್ಚಿಮ ಇಂಡೋನೇಷ್ಯದ ಬೃಹನ್ನಗರಗಳಲ್ಲಿ ಹಾಗೂ ಸುಮಾತ್ರದ ದೊಡ್ಡ ತೋಟಗಳು ಮತ್ತು ತೈಲಕ್ಷೇತ್ರಗಳಲ್ಲಿ-ಇದನ್ನು ಬಳಸುವ ಜನ ಕಾಣದೊರೆಯುತ್ತಾರೆ.

ದಿಸಅ ಮತ್ತು ನಿಕೆನ ಮಾತನಾಡುವ ಜಾವನೀಸ್ ಭಾಷೆ

ಉಪಭಾಷೆಗಳುಸಂಪಾದಿಸಿ

ಸೋಲೋ (ಸುರಕರ್ತ) ಮತ್ತು ಜಾಗ್ಯಕಾರ್ತಗಳಲ್ಲಿನ ಆಡುಭಾಷೆಯಾಗಿರುವ ಮಧ್ಯ ಅಥವಾ ಕೇಂದ್ರೀಯ ಜಾವನೀಸ್ ಅತ್ಯಂತ ಹೆಚ್ಚಿನ ಸಾಮಾಜಿಕ ಪ್ರತಿಷ್ಠೆಯ ಉಪಭಾಷೆಯಾಗಿದೆ. ಪಶ್ಚಿಮ ಜಾವನೀಸ್ ಮತ್ತು ಪೂರ್ವ ಜಾವನೀಸ್ ಇತರ ಉಪಭಾಷೆಗಳು. ತೆಗಲ್‍ನಲ್ಲಿ ಪಶ್ಚಿಮ ಜಾವನೀಸ್ ಹಾಗೂ ಸರಬಜದಲ್ಲಿ ಪೂರ್ವ ಜಾವನೀಸ್ ಕೇಂದ್ರಿತವಾಗಿವೆ.

ಭಾಷಾ ಶೈಲಿಸಂಪಾದಿಸಿ

ಜಾವದ ಎಲ್ಲ ಬಾಷೆಗಳೂ ಸ್ತರ-ಶೈಲಿಗಳನ್ನು (ಸ್ಟೇಟಸ್ ಸ್ಟೈಲ್ಸ್) ಒಳಗೊಂಡಿರುತ್ತದೆ. ಅವುಗಳಲ್ಲಿ ಜಾವನೀಸ್ ಅತ್ಯಂತ ವ್ಯಾಪಕವಾದ ಸ್ತರಶೈಲಿಯನ್ನು ಹೊಂದಿದೆ. ಸ್ತರಶೈಲಿಯೆಂದರೆ ಮಾತನಾಡುವ ವ್ಯಕ್ತಿಯ ವಯಸ್ಸು, ಸ್ಥಾನಮಾನಗಳು ಹಾಗೂ ಕೌಟುಂಬಿಕ ಸಂಬಂಧಗಳಿಗೆ ಅನುಗುಣವಾಗಿ ಏರ್ಪಡುವ ವಿಶಿಷ್ಟ ಶಬ್ದಕೋಶ. ಸ್ತರಶೈಲಿಗಳಲ್ಲಿನ ಅತ್ಯಂತ ಸಮಗ್ರವೂ ವ್ಯಾಪಕವೂ ಆದ ವ್ಯತ್ಯಾಸ ಕಾಣಬರುವುದು ನ್ಗೋಕೊ (ಅನೌಪಚಾರಿಕ) ಮತ್ತು ಕ್ರಮಗಳ (ಮನ್ನಣೆಯ) ನಡುವೆ, ಮಧ್ಯ (ಮಧ್ಯಮ), ಕ್ರಮ ಇಂಗಗಿಲ್ (ಅತ್ಯಂತ ಹೆಚ್ಚು ಮನ್ನಣೆಯ) ಮತ್ತು ಬಸಕೆದತೋನ್ (ಅರಮನೆಯ ಭಾಷೆ)-ಇವು ಇತರ ಸ್ತರಶೈಲಿಗಳು.

ಲಿಖಿತ ದಾಖಲೆಗಳುಸಂಪಾದಿಸಿ

ಜಾವನೀಸ್ ಭಾಷೆಯಲ್ಲಿ ಲಿಖಿತ ದಾಖಲೆಗಳು ದೊರೆಯುವುದು ಮೊದಲನೆಯ ಸಹಸ್ರಾಬ್ದದ ನಡುವಣ ಅವಧಿಯಿಂದ ಈಚೆಗೆ. ಇಂಡೋನೇಷ್ಯದ ಭಾಷೆಗಳಲ್ಲಿಯೇ ಅತ್ಯಂತ ವ್ಯಾಪಕವಾದ ಹಾಗೂ ವೈವಿಧ್ಯಮಯವಾದ ಸಾಹಿತ್ಯ ಕಾಣದೊರೆಯುವುದು ಇದರಲ್ಲಿಯೇ, ಪ್ರಾಚೀನ ಜಾವನೀಸ್ ಕಾಲದಲ್ಲಿ (ಸುಮಾರು 750ರಿಂದ 1400ರವರೆಗೆ) ಭಾರತೀಯ ಪ್ರಭಾವ ಅತ್ಯಧಿಕವಾಗಿತ್ತು. ಈ ಕಾಲದಿಂದ ಈಚೆಗೆ ರಾಮಾಯಣ ಮತ್ತು ಮಹಾಭಾರತಗಳ ಅನುವಾದಗಳು ದೊರೆಯುತ್ತವೆ. ಈ ಕೃತಿಗಳಲ್ಲಿ ಹಾಗೂ ಇತರ ಭಾಷಾಂತರಗಳಲ್ಲಿ ಬಳಸಲಾಗಿರುವ ಪ್ರಾಚೀನ ಜಾವನೀಸ್ ಭಾಷೆಯಲ್ಲಿ ಭಾರತೀಯ ಪ್ರಭಾವ ಅತಿಯಾಗಿ ಕಾಣುತ್ತದೆ. ಇದನ್ನು ಬಹುತೇಕವಾಗಿ ಕವಿಭಾಷೆಯೆಂದೂ ಕರೆಯುತ್ತಾರೆ. ಈ ಕಾಲದ ಬಳಿಕ ಭಾಷೆ ಮತ್ತು ಸಾಹಿತ್ಯಗಳೆರಡರಲ್ಲೂ ಆಗತಾನೇ ಅಡಿ ಇರಿಸುತ್ತ್ತಿದ್ದ ಇಸ್ಲಾಮಿನ ಹಾಗೂ ಅನಂತರದಲ್ಲಿ ಐರೋಪ್ಯರ ಪ್ರಭಾವ ಗೋಚರಿಸುತ್ತದೆ. ನೆರೆಹೊರೆಯ ಭಾಷೆಗಳ ಸಾಹಿತ್ಯದ ಮೇಲೆ ಉದಾಹರಣೆಗೆ, ಬಲಿನೀಸ್, ಸುಡಾನೀಸ್, ಮದುರೀಸ್, ಮತ್ತು ಮಲಯ್ ಸಾಹಿತ್ಯದ ಮೇಲೆ ಜಾವನೀಸ್ ಸಾಹಿತ್ಯ ತುಂಬ ಪ್ರಭಾವ ಬೀರಿದೆ.

ಉಲ್ಲೇಖಸಂಪಾದಿಸಿ

  1. https://kanaja.karnataka.gov.in/ಭಾಷಾ-ವಂಶಗಳು/
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: