ಆರ್.ಅಶೋಕ್
ರಾಮಯ್ಯ ಅಶೋಕ[೨] (ಜನನ ೧ ಜುಲೈ ೧೯೫೭) ಕರ್ನಾಟಕದ ೬ ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ರಾಜಕಾರಣಿ. ಅವರು ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ (೨೦೧೩-) ಸೇವೆ ಸಲ್ಲಿಸುತ್ತಿದ್ದಾರೆ.[೩][೪] ಈ ಹಿಂದೆ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾಗಿ (೨೦೧೪-೨೦೧೮), ಕಂದಾಯ ಸಚಿವರಾಗಿ, ಗೃಹ ಸಚಿವರಾಗಿ ಮತ್ತು ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ..[೫] ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.[೬] ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ (ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಡಿಲಿಮಿಟೇಶನ್ ಮೊದಲು) ಏಳು ಬಾರಿ ಶಾಸಕರಾಗಿದ್ದಾರೆ.
ಆರ್.ಅಶೋಕ್ | |
---|---|
೨೦೨೦ ರಲ್ಲಿ ಆರ್.ಅಶೋಕ್ | |
ಹಾಲಿ | |
ಅಧಿಕಾರ ಸ್ವೀಕಾರ ೧೭ ನವೆಂಬರ್ ೨೦೨೩ | |
ಮುಖ್ಯಮಂತ್ರಿ | ಸಿದ್ದರಾಮಯ್ಯ |
ಪೂರ್ವಾಧಿಕಾರಿ | ಬಿ.ಎಸ್. ಬೊಮ್ಮಾಯಿ |
ಕಂದಾಯ ಸಚಿವರು
ಕರ್ನಾಟಕ ಸರ್ಕಾರ | |
ಅಧಿಕಾರ ಅವಧಿ ೨೦ ಆಗಸ್ಟ್ ೨೦೧೯ – ೧೩ ಮೇ ೨೦೨೩ | |
ಮುಖ್ಯಮಂತ್ರಿ | ಬಿ.ಎಸ್. ಯಡಿಯೂರಪ್ಪ ಬಸವರಾಜ ಬೊಮ್ಮಾಯಿ |
ಪೂರ್ವಾಧಿಕಾರಿ | ಆರ್.ವಿ. ದೇಶಪಾಂಡೆ |
ಪೌರಾಡಳಿತ ಸಚಿವರು
ಕರ್ನಾಟಕ ಸರ್ಕಾರ | |
ಅಧಿಕಾರ ಅವಧಿ ೨೭ ಸೆಪ್ಟೆಂಬರ್ ೨೦೧೯ – ೧೦ ಫೆಬ್ರುವರಿ ೨೦೨೦ | |
ಮುಖ್ಯಮಂತ್ರಿ | ಬಿ.ಎಸ್. ಯಡಿಯೂರಪ್ಪ |
ಪೂರ್ವಾಧಿಕಾರಿ | ಆರ್.ಶಂಕರ್ |
ಉತ್ತರಾಧಿಕಾರಿ | ನಾರಾಯಣ ಗೌಡ |
ಅಧಿಕಾರ ಅವಧಿ ೧೨ ಜುಲೈ ೨೦೧೨ – ೧೩ ಮೇ ೨೦೧೩ Serving with ಕೆ.ಎಸ್. ಈಶ್ವರಪ್ಪ | |
ಪೂರ್ವಾಧಿಕಾರಿ | ಬಿ.ಎಸ್. ಯಡಿಯೂರಪ್ಪ |
ಉತ್ತರಾಧಿಕಾರಿ | ಜಿ. ಪರಮೇಶ್ವರ |
ಗೃಹ ಸಚಿವರು
ಕರ್ನಾಟಕ ಸರ್ಕಾರ | |
ಅಧಿಕಾರ ಅವಧಿ ೨೭ ಸೆಪ್ಟೆಂಬರ್ ೨೦೧೦ – ೧೩ ಮೇ ೨೦೧೩ | |
ಮುಖ್ಯಮಂತ್ರಿ ೨೦೨೪ | ಬಿ.ಎಸ್. ಯಡಿಯೂರಪ್ಪ ಸದಾನಂದ ಗೌಡ< ಜಗದೀಶ್ ಶೆಟ್ಟರ್ |
ಪೂರ್ವಾಧಿಕಾರಿ | ವಿ.ಎಸ್. ಆಚಾರ್ಯ |
ಉತ್ತರಾಧಿಕಾರಿ | ಕೆ.ಜೆ. ಜಾರ್ಜ್ |
ಸಾರಿಗೆ ಸಚಿವರು
ಕರ್ನಾಟಕ ಸರ್ಕಾರ | |
ಅಧಿಕಾರ ಅವಧಿ ೩೦ ಮೇ ೨೦೦೮ – ೧೩ ಮೇ ೨೦೧೩ | |
ಮುಖ್ಯಮಂತ್ರಿ | ಬಿ.ಎಸ್. ಯಡಿಯೂರಪ್ಪ ಸದಾನಂದ ಗೌಡ< ಜಗದೀಶ್ ಶೆಟ್ಟರ್ |
ಪೂರ್ವಾಧಿಕಾರಿ | ಎನ್. ಚಲುವರಾಯ ಸ್ವಾಮಿ |
ಉತ್ತರಾಧಿಕಾರಿ | ರಾಮಲಿಂಗಾ ರೆಡ್ಡಿ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು
ಕರ್ನಾಟಕ ಸರ್ಕಾರ | |
ಅಧಿಕಾರ ಅವಧಿ ೧೮ ಫೆಬ್ರವರಿ ೨೦೦೬ – ೮ ಅಕ್ಟೋಬರ್ ೨೦೦೭ | |
ಮುಖ್ಯಮಂತ್ರಿ | ಎಚ್.ಡಿ. ಕುಮಾರಸ್ವಾಮಿ |
ಪೂರ್ವಾಧಿಕಾರಿ | ಎನ್. ಚಲುವರಾಯ ಸ್ವಾಮಿ |
ಉತ್ತರಾಧಿಕಾರಿ | ಬಿ. ಶ್ರೀರಾಮುಲು |
ಕರ್ನಾಟಕ ವಿಧಾನಸಭೆಯ ಸದಸ್ಯ
| |
ಹಾಲಿ | |
ಅಧಿಕಾರ ಸ್ವೀಕಾರ ಮೇ ೨೦೦೮ | |
ಪೂರ್ವಾಧಿಕಾರಿ | ಸೀಟು ಸ್ಥಾಪಿಸಲಾಗಿದೆ |
ಮತಕ್ಷೇತ್ರ | ಪದ್ಮನಾಭ ನಗರ |
ಅಧಿಕಾರ ಅವಧಿ ೧೯೯೮ – ೨೦೦೮ | |
ಪೂರ್ವಾಧಿಕಾರಿ | ಎಂ.ಶ್ರೀನಿವಾಸ್ |
ಉತ್ತರಾಧಿಕಾರಿ | ಸೀಟು ಸ್ಥಾಪಿತವಾಗಿಲ್ಲ |
ಮತಕ್ಷೇತ್ರ | ಉತ್ತರಹಳ್ಳಿ |
ವೈಯಕ್ತಿಕ ಮಾಹಿತಿ | |
ಜನನ | [೧] ಜಾಲಹಳ್ಳಿ, ಮೈಸೂರು ರಾಜ್ಯ, ಭಾರತ | ೧ ಜುಲೈ ೧೯೫೭
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ವಾಸಸ್ಥಾನ | ಬೆಂಗಳೂರು |
ಜಾಲತಾಣ | rashoka |
ಆರಂಭಿಕ ರಾಜಕೀಯ ವೃತ್ತಿಜೀವನ
ಬದಲಾಯಿಸಿತುರ್ತು ಪರಿಸ್ಥಿತಿಯ ಸಮಯದಲ್ಲಿ (೧೯೭೫-೭೭) ಅವರನ್ನು ಎಲ್.ಕೆ.ಅಡ್ವಾಣಿಯಂತಹ ಹಿರಿಯ ನಾಯಕರೊಂದಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂಧಿಸಲಾಯಿತು. ೧೯೯೭ ರ ಉಪಚುನಾವಣೆಯಲ್ಲಿ ಅವರು ಮೊದಲ ಬಾರಿಗೆ ಉತ್ತರಹಳ್ಳಿಯಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ಇದು ಮೊದಲು ಭಾರತದ ಅತಿದೊಡ್ಡ ರಾಜ್ಯ ಶಾಸಕಾಂಗ ಕ್ಷೇತ್ರವಾಗಿತ್ತು. ೧೯೯೯ ಮತ್ತು ೨೦೦೪ ರ ವಿಧಾನಸಭಾ ಚುನಾವಣೆಗಳಲ್ಲಿ ಅವರು ಅದೇ ಕ್ಷೇತ್ರದಿಂದ ಗಮನಾರ್ಹ ಅಂತರದಿಂದ ಮರು ಆಯ್ಕೆಯಾದರು. ೨೦೦೪ ರ ಚುನಾವಣೆಯಲ್ಲಿ ಅವರು ೮೪,೦೦೧ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.[೭]
ನಿರ್ವಹಿಸಿದ ಸ್ಥಾನಗಳು
ಬದಲಾಯಿಸಿ೨೦೦೮ ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ಸಚಿವರಾಗಿ ಅವರು ಹೊಸ ಯೋಜನೆಗಳನ್ನು ಜಾರಿಗೆ ತಂದರು ಮತ್ತು ಇಲಾಖೆಯ ಆಡಳಿತವನ್ನು ಸುವ್ಯವಸ್ಥಿತಗೊಳಿಸಿದರು.[೮]
೨೦೦೮ ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಸಾರಿಗೆ ಇಲಾಖೆಯನ್ನು ಆಧುನೀಕರಿಸುವಲ್ಲಿ ಮತ್ತು ಇಲಾಖೆಯ ಕಾರ್ಯವನ್ನು ಸ್ವಯಂಚಾಲಿತಗೊಳಿಸಲು ನವೀನ ವಿಧಾನಗಳನ್ನು ಬಳಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.[೯]
ಜೂನ್ ೨೦೧೨ ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ್ದಾಗ ಅಶೋಕ್ ಅವರನ್ನು ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರನ್ನಾಗಿ ನೇಮಿಸಲಾಯಿತು ಮತ್ತು ಕರ್ನಾಟಕ ಸರ್ಕಾರದಲ್ಲಿ ಗೃಹ ಮತ್ತು ಸಾರಿಗೆ ಸಚಿವಾಲಯಗಳನ್ನು ವಹಿಸಲಾಯಿತು.[೧೦][೧೧][೧೨]
೨೦೧೦ ಮತ್ತು ೨೦೧೫ರ ಬಿಬಿಎಂಪಿ ಚುನಾವಣೆಗಳಲ್ಲಿ ಬಿಜೆಪಿಯನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ಅಶೋಕ ಅವರು ಬೆಂಗಳೂರು ನಗರದ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.[೧೩][೧೪][೧೫]
೨೬ ಆಗಸ್ಟ್ ೨೦೧೯ ರಂದು ಅಶೋಕ ಅವರನ್ನು ಕರ್ನಾಟಕ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ನೇಮಿಸಲಾಯಿತು.[೧೬][೧೭]
ಉಲ್ಲೇಖಗಳು
ಬದಲಾಯಿಸಿ- ↑ S, Rajashekara (2 ಜುಲೈ 2020). "Revenue Minister R Ashoka tests negative, celebrates birthday in Chikkamagaluru". Bangalore Mirror (in ಇಂಗ್ಲಿಷ್). Retrieved 9 ಆಗಸ್ಟ್ 2020.
- ↑ BJP MLA KS Eshwarappa takes oath as minister – NEWS9 (in ಇಂಗ್ಲಿಷ್), retrieved 30 ಜುಲೈ 2021
- ↑ "2 Deputy CMs for Karnataka". The Hindu. 10 ಜುಲೈ 2012. Retrieved 7 ಜನವರಿ 2020 – via www.thehindu.com.
- ↑ Balasubramanyam, K. R. (2 ಮೇ 2018). "This former dy CM is a step closer to the top job". The Economic Times. Retrieved 7 ಜನವರಿ 2020.
- ↑ "Ashoka: My election as LoP result of consensus". The Times of India. 21 ನವೆಂಬರ್ 2023. ISSN 0971-8257. Retrieved 20 ಜನವರಿ 2024.
- ↑ A, Naina J. "Karnataka LoP R Ashoka says Congress scared of losing Lok Sabha polls". Deccan Herald (in ಇಂಗ್ಲಿಷ್). Retrieved 20 ಜನವರಿ 2024.
- ↑ "Karnataka Elections 2018: Election Trivia". News18. Retrieved 7 ಜನವರಿ 2020.
- ↑ "State keen to maintain record, says Ashok". The Hindu. 8 ಜನವರಿ 2007. Archived from the original on 5 ಜೂನ್ 2008.
- ↑ "KSRTC to add 3,000 new buses this year". The Hindu.
- ↑ "Jagdish Shettar will have 2 deputies as he takes oath as Karnataka CM today". India Today. 11 ಜುಲೈ 2012. Retrieved 26 ಜೂನ್ 2016.
- ↑ "Cabinet Reshuffle: Ashoka gets Home, Palemar gets Muzrai". Daijiworld.
- ↑ "The Rise & Rise Of Ashoka". The Times of India. Archived from the original on 15 ಆಗಸ್ಟ್ 2016.
- ↑ "BJP Wins Bangalore Municipal Elections For The First Time". DNA India. 5 ಏಪ್ರಿಲ್ 2010. Retrieved 26 ಜೂನ್ 2016.
- ↑ "For BBMP Polls, BJP Puts R Ashok At Helm". The New Indian Express. 2 ಆಗಸ್ಟ್ 2015. Archived from the original on 3 ಆಗಸ್ಟ್ 2015. Retrieved 26 ಜೂನ್ 2016.
- ↑ "BBMP results: BJP sweeps Bangalore civic body's poll". India Today. 25 ಆಗಸ್ಟ್ 2015. Retrieved 26 ಜೂನ್ 2016.
- ↑ Bharadwaj, K. V. Aditya (26 ಆಗಸ್ಟ್ 2019). "In a first, Karnataka to have 3 Deputy Chief Ministers". The Hindu (in Indian English). Retrieved 27 ಆಗಸ್ಟ್ 2019.
- ↑ "Karnataka CM Yediyurappa announces names of three Deputy Chief Ministers". www.thenewsminute.com. 26 ಆಗಸ್ಟ್ 2019. Retrieved 27 ಆಗಸ್ಟ್ 2019.