ಆರ್ ವಿ ದೇಶಪಾಂಡೆ ಉತ್ತರ ಕನ್ನಡ ಜಿಲ್ಲೆಹಳಿಯಾಳ ಕ್ಷೇತ್ರದ ಶಾಸಕ. ಸತತ ೧೦ ವರ್ಷ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿದ್ದುದು ಇವರ ಹೆಗ್ಗಳಿಕೆ .

ಬಾಲ್ಯ ಮತ್ತು ಕುಟುಂಬ ಬದಲಾಯಿಸಿ

ರಾಧಾ ದೇಶಪಾಂಡೆ ಇವರ ಪತ್ನಿ. ಪ್ರಸಾದ್ ಮತ್ತು ಪ್ರಶಾಂತ್ ಇವರ ಮಕ್ಕಳು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭೆ ಕ್ಷೇತ್ರವನ್ನು ಸತತ ೫ ಬಾರಿ ಪ್ರತಿನಿಧಿಸಿದ್ದಾರೆ. ೧೯೯೪-೯೯ರವರೆಗೆ ಜನತಾ ದಳದಿಂದ ಮತ್ತು ೧೯೯೯-೨೦೦೪ರವರೆಗೆ ಕಾಂಗ್ರೆಸ್ ಪಕ್ಷದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿದ್ದರು. ಪ್ರಸಕ್ತ ೨೦೧೩ರ ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾಗಿದ್ದಾರೆ.

ರಾಜಕೀಯ ಬದುಕು ಬದಲಾಯಿಸಿ

  • ೧೯೯೪ರಲ್ಲಿ ದೇವೇಗೌಡರ ಸರ್ಕಾರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿ, ಬೆಂಗಳೂರು ಐ ಟಿ ಪಿ ಎಲ್, ಬೆಂಗಳೂರು ಐ ಐ ಐ ಟಿ, ಮೈಸೂರಿನ ಇನ್ಫ಼ೋಸಿಸ್ ತರಬೇತಿ ಕೇಂದ್ರ ಸ್ಥಾಪನೆಗೆ ಶೀಘ್ರ ಅನುಮತಿ ಕೊಡಿಸಿದ್ದು ಇವರ ಹೆಗ್ಗಳಿಕೆ.
  • ೧೯೯೯ರಲ್ಲಿ ಜನತಾದಳ ಪಕ್ಷ ಹೋಳಾದಾಗ, ರೋಷನ್ ಬೇಗ್ ರೊಂದಿಗೆ ಭಾರತೀಯ ಕಾಂಗ್ರೆಸ್ ಪಕ್ಷ ಸೇರಿದರು. ಎಸ್ ಎಂ ಕೃಷ್ಣರ ಸಚಿವ ಸಂಪುಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾದರು.
  • [೧]

[೨]

References ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-03-05. Retrieved 2015-06-08.
  2. http://www.deccanherald.com/content/161413/deshpande-hailed-promoting-it.html

External links ಬದಲಾಯಿಸಿ