ಆನೆಗಳನ್ನು ಬಳಸಿ ವಧೆ ಮಾಡುವುದು ಸಾವಿರಾರು ವರ್ಷಗಳ ಕಾಲ ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಹಾಗೂ ವಿಶೇಷತಃ ಭಾರತ{/4ದಲ್ಲಿ {1}ಮರಣ ದಂಡನೆ ವಿಧಿಸುವ ಸಾಮಾನ್ಯ ಕ್ರಮವಾಗಿತ್ತು. ಬಂಧಿಗಳನ್ನು ಸಾರ್ವಜನಿಕವಾಗಿ ತುಳಿದು ಅಪ್ಪಚ್ಚಿ ಮಾಡಲು, ಅಂಗ ವಿಹೀನಗೊಳಿಸಲು ಮತ್ತು ಹಿಂಸೆ ನೀಡಲು ಏಷ್ಯಾದ ಆನೆಗಳನ್ನು ಬಳಸಲಾಗುತ್ತಿತ್ತು. ಈ ಪ್ರಾಣಿಗಳು ತರಬೇತಿ ಪಡೆದಂತಹವೂ, ಚಾತುರ್ಯವುಳ್ಳಂತಹವೂ ಆಗಿದ್ದು, ತಕ್ಷಣ ವಧಿಸುವ ಅಥವಾ ಸುದೀರ್ಘ ಕಾಲ ಹಿಂಸಿಸಿ ಕೊಲ್ಲುವ ಸಾಮರ್ಥ್ಯ, ಪ್ರಜ್ಞೆ ಹೊಂದಿದ್ದವು. ರಾಜರು ಬಳಸುತ್ತಿದ್ದ ಈ ಆನೆಗಳು ಪ್ರಭುವಿನ ನಿರಂಕುಶತ್ವ ಮತ್ತು ವನ್ಯ ಪ್ರಾಣಿಗಳ ಮೇಲಿನ ಹತೋಟಿಗಳ ದ್ಯೋತಕವಾಗಿದ್ದವು.

ಸಿಲೋನ್ ನಲ್ಲಿ ಶಿಕ್ಷೆಗೆ ಗುರಿಪಡಿಸಲ್ಪಟ್ಟ ಅಪರಾಧಿಯೊಬ್ಬನ ಅಂಗಾಂಗಗಳನ್ನು ಕಿತ್ತುಬಿಸುಡುತ್ತಿರುವ ಆನೆ.ರಾಬರ್ಟ್ ನಾಕ್ಸ್ ರ ಎನ್ ಹಿಸ್ಟಾರಿಕಲ್ ರಿಲೇಷನ್ ಆಫ್ ದ ಐಲ್ಯಾಂಡ್ ಸಿಲೋನ್ ಪುಸ್ತಕದಲ್ಲಿರುವ ಚಿತ್ರ (1681).

ಸಾಂಸ್ಕೃತಿಕ ವಿಷಯಗಳು

ಬದಲಾಯಿಸಿ
  • ಆನೆಗಳು ಬಂಧಿಗಳನ್ನು ಕೊಲ್ಲುವಂತಹ ದೃಶ್ಯಗಳು ಸಾಮಾನ್ಯವಾಗಿ ತಲ್ಲಣಗೊಂಡ ಯೂರೋಪ್ ನಿಂದ ಬಂದ ಪ್ರವಾಸಿಗರ ಕುತೂಹಲ ಕೆರಳಿಸುತ್ತಿದ್ದವು ಹಾಗೂ ಇಂತಹ ವಿಷಯಗಳನ್ನು ಆ ಕಾಲದ ಹಲವಾರು ಸಮಕಾಲೀನ ಪತ್ರಿಕೆಗಳಲ್ಲಿ ಮತ್ತು ದಾಖಲೆಗಳಲ್ಲಿ ದಾಖಲಿಸಲಾಗಿದೆ. ನಂತರ ೧೮ ನೆಯ ಮತ್ತು ೧೯ ನೆಯ ಶತಮಾನಗಳಲ್ಲಿ ಈ ಪ್ರದೇಶಗಳಲ್ಲಿ ವಸಾಹತುಗಳನ್ನು ಹೊಂದಿದ ಐರೋಪ್ಯ ಚಕ್ರಾಧಿಪತ್ಯಗಳು ಈ ಪದ್ಧತಿಯ ಮೇಲೆ ನಿಷೇಧ ಹೂಡಿ, ತಕ್ಕಮಟ್ಟಿಗೆ ಕಡಿಮೆಗೊಳಿಸಿದವು. ಈ ಪದ್ಧತಿಯ ಹೆಚ್ಚಾಗಿ ಏಷ್ಯಾಗೇ ಸೀಮಿತವಾಗಿದ್ದಿತಾದರೂ,ಕೆಲವೊಮ್ಮೆ ರೋಂ ಮತ್ತು ಕಾರ್ಥೇಜ್ ನಂತಹ ಪಾಶ್ಚಿಮಾತ್ಯ ದೇಶಗಳಲ್ಲೂ, ಪ್ರಮುಖವಾಗಿ ದಂಗೆಯೆದ್ದ ಸೈನಿಕರನ್ನು ಶಿಕ್ಷಿಸಲು, ಜಾರಿಗೊಳಿಸಲಾಗುತ್ತಿತ್ತು.
  • ರೋಮನ್ನರು ವಧೆಗೈಯಲು ಬಳಸುತ್ತಿದ್ದ ಸಿಂಹ ಮತ್ತು ಕರಡಿಗಳಿಗಿಂತಲೂ ವನ್ಯಪ್ರಾಣಿಗಳ ಪೈಕಿ ಹೆಚ್ಚಿನ ಚಾತುರ್ಯ, ಪಳಗಿಸುವುದರ ಸುಲಭತೆ ಮತ್ತು ಬುದ್ಧಿಮತ್ತೆ ಹೊಂಡಿರುವ ಆನೆಗಳು ವಧಾಕಾರ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿರುವುದಾಗಿ ಕಂಡು ಬಂದಿತು. ಗಜಗಳು ಕುದುರೆಗಳಿಗಿಂತಲೂ ಹೆಚ್ಚು ಶಿಕ್ಷಣೀಯವಾಗಿವೆ: ಕುದುರೆಗಳನ್ನು ಸಮರದಲ್ಲಿ ಮುನ್ನುಗ್ಗಲು ಶಿಕ್ಷಣ/ತರಬೇತಿ ನೀಡಬಹುದಾದರೂ, ಶತ್ರಸೈನಿಕನನ್ನು ತುಳಿದು ಅಪ್ಪಚ್ಚಿ ಮಾಡಲು ಕುದುರೆಗಳು ಸುಲಭವಾಗಿ ಮುಂದಾಗುವುದಿಲ್ಲ.
  • ಬದಲಾಗಿ ಸೈನಿಕನನ್ನು ದಾಟಿ ಮುಂದೆ ಚಲಿಸುತ್ತವೆ. ಆನೆಗಳು ಶತ್ರುಗಳನ್ನು ತುಳಿದು ಅಪ್ಪಚ್ಚಿ ಮಾಡುತ್ತವೆ; ಆದ್ದರಿಂದಲೇ ಹ್ಯಾನಿಬಾಲ್ ನಂತಹ ದಂಡನಾಯಕರಿಗೆ ಸಮರ ಗಜಗಳೇ ಹೆಚ್ಚು ಪ್ರಿಯವಾಗಿದ್ದವು. ಆನೆಗಳಿಗೆ ಬಂಧಿಗಳನ್ನು ವಿವಿಧ ರೀತಿಗಳಲ್ಲಿ ವಧಿಸಲು ತರಬೇತಿ ನೀಡಬಹುದು; ಬಂಧಿಯು ಹಿಂಸೆಯಿಂದ ನರಳಿ ನರಳಿ ನಿಧಾನವಾಗಿ ಸಾಯುವಂತೆಯೂ, ಅಥವಾ ತಲೆಯ ಮೇಲೆ ಕಾಲಿರಿಸಿ ಅಪ್ಪಚ್ಚಿ ಮಾಡುವ ಮೂಲಕ ಒಮ್ಮೆಲೇ ಸಾಯುವಂತೆಯೂ ಶಿಕ್ಷಿಸಲು ಆನೆಗಳನ್ನು ಪಳಗಿಸಬಹುದು.

ಇತಿಹಾಸ

ಬದಲಾಯಿಸಿ

ಇತಿಹಾಸವೇ ಹೇಳುವಂತೆ, ಆನೆಗಳು ಯಾವಾಗಲೂ ಮಾವುತರ ಅಧೀನದಲ್ಲಿರುತ್ತಿದ್ದವು; ಹೀಗಾಗಿ ಅರಸನು ಕೊನೆಯ ಘಳಿಗೆಯಲ್ಲೂ ಸಹ ಬಂಧಿಗೆ ಶಿಕ್ಷೆ ಮನ್ನಾ ಮಾಡಿ, ಬದುಕಲು ಬಿಡುವುದರ ಮೂಲಕ ತನ್ನ ಕ್ಷಮಾಗುಣವನ್ನು ಮೆರೆಸಲು ಅವಕಾಶವಿರುತ್ತಿತ್ತು.[] ಹಲವಾರು ಏಷ್ಯಾದ ರಾಜರು ಈ ವಿಧವಾಗಿ ಕರುಣೆ ತೋರಿರುವಂತಹ ಪ್ರಸಂಗಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಸಯಾಮ್ ನ ದೊರೆಗಳು ಬಂಧಿಗಳನ್ನು "ಅವರಿಗೆ ಹೆಚ್ಚು ಗಾಯವಾಗದಂತೆ ನಿಧಾನವಾಗಿ ನೆಲದಲ್ಲಿ ಉರುಳಿಸಲು" ತರಬೇತಿ ನೀಡುತ್ತಿದ್ದರು.

  • ಶ್ರೇಷ್ಠ ಮೊಘಲ್ ಚಕ್ರವರ್ತಿ ಅಕ್ಬರನು "ಈ ತಂತ್ರವನ್ನು ದಂಗೆಯೆದ್ದವರನ್ನು ಶಿಕ್ಷಿಸಲು ಬಳಸುತ್ತಿದ್ದನು ಹಾಗೂ ಕಡೆಗೆ, ಪ್ರಾಯಶಃ ಸುಧಾರಿತಗೊಂಡ ಅವರನ್ನು ಪ್ರಾಣಸಹಿತ ಬಿಡುತ್ತಿದ್ದನು".[] ಒಮ್ಮೆ ಒಬ್ಬ ಅಪರಾಧಿಯನ್ನು ಹೀಗೆ ಆನೆಗಳ 'ಉರುಳಾಟ'ಕ್ಕೆ ಐದು ದಿನಗಳ ಕಾಲ ಒಳಪಡಿಸಿ ನಂತರ ಅಪರಾಧಿಗೆ ಕ್ಷಮೆ ನೀಡಿದ ಪ್ರಸಂಗವು ದಾಖಲಾಗಿದೆ.[] ಆನೆಗಳನ್ನು ಕೆಲವೊಮ್ಮೆ ಸತ್ವಪರೀಕ್ಷೆಯ ಪ್ರಯೋಗಗಳಿಗೂ ಬಳಸಲಾಗುತ್ತಿದ್ದು, ಅಂತಹ ಪರೀಕ್ಷೆಗಳಲ್ಲಿ ಬಂಧಿಯು ಆನೆಯನ್ನು ಹಿಮ್ಮೆಟ್ಟಿಸಲು ಶಕ್ತನಾದಲ್ಲಿ ಅವನನ್ನು ಬಿಡುಗಡೆ ಮಾಡಲಾಗುತ್ತಿತ್ತು.[]
  • ಅರಸನ ಅಣತಿಯಂತೆ ಪ್ರಾಣ ತೆಗೆಯಲು ಅಥವಾ ಉಳಿಸುವ ಕ್ರಮಕ್ಕಷ್ಟೇ ಅಲ್ಲದೆ ಈ ಗಜಗಳು ಮತ್ತಷ್ಟು ಪ್ರಾಮುಖ್ಯತೆಗಳನ್ನೂ ಹೊಂದಿದ್ದವು. ಆನೆಗಳನ್ನು ಗತಕಾಲದಿಂದಲೂ ಅರಸರ ಅಧಿಕಾರದ ಲಾಂಛನಗಳಾಗಿ ಬಳಸಲಾಗುತ್ತಿದೆ(ಈಗಲೂ ಥೈಲ್ಯಾಂಡ್ ನಂತಹ ಸ್ಥಳಗಳಲ್ಲಿ , ಬಿಳಿ ಆನೆಗಳು ಶ್ರೇಷ್ಠವೆಂದು ಪರಿಗಣಿಸಲಾಗಿ, ಪೂಜಿಸಲ್ಪಡುತ್ತವೆ). ರಾಜ್ಯದ ಅಧಿಕಾರದ ಅಸ್ತ್ರಗಳಂತೆ ಇವುಗಳನ್ನು ಬಳಸುವುವ ವಿಧಿಯು ಅರಸನು ತನ್ನ ಅಧೀನದಲ್ಲಿರುವ ವನ್ಯಮೃಗಗಳ ಮೇಲೆ ಸಂಪೂರ್ಣ ಹತೋಟಿ ಹೊಂದಿರುವನೆಂಬ ಸಂದೇಶವನ್ನು ಜಗಜ್ಜಾಹೀರುಗೊಳಿಸುವ ಸಾಧನ ವಾಗಿತ್ತು. ಈ ಹತೋಟಿಯನ್ನು ಜಾಹೀರುಗೊಳಿಸುವ ಮೂಲಕ ಅರಸನು ನೈತಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ವನ್ಯಮೃಗಗಳ ಮೇಲೆ ಸಂಪೂರ್ಣ ಅಧಿಕಾರವುಳ್ಳವನೆಂದೂ, ರಾಜನು ಅತೀಂದ್ರಿಯ ಶಕ್ತಿಯುಳ್ಳವನೆಂದೂ ಆತನ ಪ್ರಜೆಗಳಲ್ಲಿ ಅಭಿಪ್ರಾಯ ಮೂಡಿ ಅವನ ಆಳ್ವಿಕೆಗೆ ವಿಶೇಷ ಮೆರಗು ಬರುತ್ತಿತ್ತು.[]

ಭೌಗೋಳಿಕ ವ್ಯಾಪ್ತಿ

ಬದಲಾಯಿಸಿ
  • ಪಾಶ್ಚಿಮಾತ್ಯ ಮತ್ತು ಏಷ್ಯಾದ ಚಕ್ರಾಧಿಪತ್ಯಗಳಲ್ಲದೆ ಜಗತ್ತಿನ ಹಲವಾರು ಭಾಗಗಳಲ್ಲಿ ಆನೆಯಿಂದ ತುಳಿಸಿ ಕೊಲ್ಲುವಂತಹ ಕ್ರಮವು ಜಾರಿಯಲ್ಲಿದ್ದಿತು. ಇದರ ಮೊಟ್ಟಮೊದಲ ಉಲ್ಲೇಖವು ಶ್ರೇಷ್ಠಕೃತಿಗಳ ಕಾಲದಲ್ಲಿ ಕಂಡುಬರುತ್ತದೆ. ಆದರೆ, ಈ ಕ್ರಮವು ಆ ವೇಳೆಗಾಗಲೇ ಸುವ್ಯವಸ್ಥಿತ ವಾಗಿತ್ತು ಮತ್ತು ೧೯ ನೆಯ ಶತಮಾನಕ್ಕೂ ಈ ಕ್ರಮವು ಕಾಲಿಟ್ಟಿತು. ಆಫ್ರಿಕಾದ ಆನೆಗಳು ಏಷ್ಯಾದ ಆನೆಗಳಿಗಿಂತಲೂ ಸಾಕಷ್ಟು ದೊಡ್ಡವಾದರೂ ಆಫ್ರಿಕಾದ ಅಧಿಕಾರಿಗಳು/ಅರಸರು ಸಮರದಲ್ಲಿ ಅಥವಾ ಸಮಾರಂಭಗಳಲ್ಲಿ ಪ್ರಾಣಿಗಳನ್ನು ಹೆಚ್ಚಾಗಿ ಬಳಸುತ್ತಿರಲಿಲ್ಲ;
  • ಇದಕ್ಕೆ ಆಫ್ರಿಕಾದ ಆನೆಗಳನ್ನು ಏಷ್ಯಾದ ಆನೆಗಳನ್ನು ಪಳಗಿಸುವಷ್ಟು ಸುಲಭವಾಗಿ ಪಳಗಿಸಲಾಗದಿರುವುದೂ ಒಂದು ಕಾರಣ. ಆಫ್ರಿಕಾದ ಕೆಲವು ಪ್ರಾಚೀನ ಆಳ್ವಿಕೆಗಳು ಆನೆಗಳನ್ನು ಬಳಸಿದವಾದರೂ, ಅವುಗಳು ಈಗ ಸಂಪೂರ್ಣವಾಗಿ ವಿನಾಶಗೊಂಡಿರುವ ಉತ್ತರ ಆಫ್ರಿಕಾದ ಲೋಕ್ಸೋಡೊಂಟಾ (ಆಫ್ರಿಕಾನಾ) ಫರಾವೊಯೆನ್ಸಿಸ್ ಎಂಬ ಉಪವರ್ಗಕ್ಕೆ ಸೇರಿದ ಆನೆಗಳಾಗಿದ್ದವು (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮರ ಗಜಗಳು ಎಂಬುದರ ಬಗ್ಗೆ ಬರೆದಿರುವ ಲೇಖನವನ್ನು ಓದಿರಿ). ಆದ್ದರಿಂದ ಪಳಗಿಸಲ್ಪಟ್ಟ ಆನೆಗಳನ್ನು ಬಳಸುವಂತಹುದು ಏಷ್ಯಾದ ಆನೆಗಳು ಇರುವಂತಹ (ಅಥವಾ ಹಿಂದೆ ಇದ್ದಂತಹ) ಜಗದ ಭಾಗಗಳಿಗೆ ಹೆಚ್ಚಿನ ಮಟ್ಟಿಗೆ ಸೀಮಿತವಾಯಿತು.

ಏಷ್ಯಾದ ಆಳ್ವಿಕೆಗಳು

ಬದಲಾಯಿಸಿ

ಪಶ್ಚಿಮ ಏಷ್ಯಾ

ಬದಲಾಯಿಸಿ
  • ಮಧ್ಯಕಾಲೀನ ಯುಗದಲ್ಲಿ ಆನೆಗಳಿಂದ ವಧಿಸುವುದನ್ನು ಹಲವಾರು ಪಶ್ಚಿಮ ಏಷ್ಯಾದ ಚಕ್ರಾಧಿಪತ್ಯಗಳು ಜಾರಿಯಲ್ಲಿರಿಸಿಕೊಂಡಿದ್ದವು; ಬೈಝಾಂಟೈನ್, ಸಸ್ಸನಿಡ್, ಸೆಲ್ಜಗ್ ಮತ್ತು ತೈಮುರಿಡ್ ಚಕ್ರಾಧಿಪತ್ಯಗಳು ಈ ಪದ್ಧತಿ ಹೊಂದಿದ್ದ ಪ್ರಭುತ್ವಗಳ ಪೈಕಿ ಪ್ರಮುಖವಾದ ಆಳ್ವಿಕೆಗಳಾಗಿದ್ದವು.[] ತನ್ನ ಅಂತಃಪುರದಲ್ಲಿ ಮೂರು ಸಾವಿರ ಪತ್ನಿಯರು ಮತ್ತು ಹನ್ನೆರಡು ಸಾವಿರ ದಾಸಿಯರನ್ನು ಹೊಂದಿದ್ದ ಸಸ್ಸನಿಡ್ ನ ರಾಜ ಖೊಸ್ರಾಸು II ಕ್ರಿಶ್ಚಿಯನ್ ಅರಬ್ ನಾಮನ್ ನ ಮಗಳಾದ ಹಾದಿಖ್ಖಾಳನ್ನು ವರಿಸಲು ಇಚ್ಛಿಸಿದಾಗ ನಾಮನ್ ತನ್ನ ಮಗಳು ಒನ್ನ ಝೋರೋ ಆಸ್ಟ್ರಿಯನ್ ನ ಅಂತಃಪುರವನ್ನು ಸೇರುವುದನ್ನು ವಿರೋಧಿಸಿದುದರ ಮತ್ತು ಮಗಳನ್ನು ಕೊಡಲು ನಿರಾಕರಿಸಿದುದರ ಕಾರಣ ಅವನನ್ನು ಆನೆಯಿಂದ ತುಳಿಸಿ ಕೊಲ್ಲಿಸಲಾಯಿತು.
  • ಮುಸಲ್ಮಾನರ ಆಳ್ವಿಕೆಯ ಮಧ್ಯಪೂರ್ವ ದೇಶಗಳಲ್ಲಿಯೂ ಈ ಪದ್ಧತಿಯನ್ನು ಅನುಷ್ಠಾನಗೊಳಿಸಿದ್ದಂತೆ ಭಾಸವಾಗುತ್ತದೆ. ಹನ್ನೆರಡನೆಯ ಶತಮಾನದ ಯಹೂದಿ ಪ್ರವಾಸಿಯಾದ ರಾತಿಸ್ಬಾನ್ ನ ಪೆಟಾಷಿಯಾ ಎಂಬ ರಬ್ಬಿಯು ತಾನು ಸೆಲ್ಜಕ್ ಆಳ್ವಿಕೆಯ ಉತ್ತರ ಮೆಸೊಪೊಟಾಪಿಯಾ(ಈಗಿನ ಇರಾಕ್)ನಲ್ಲಿದ್ದಾಗ ಇಂತಹ ಒಂದು ವಧೆಯನ್ನು ಕಂಡುದಾಗಿ ವರದಿ ದಾಖಲಿಸಿದ್ದಾರೆ:[]
At Nineveh there was an elephant. Its head is not protruding. It is big, eats about two wagon loads of straw at once; its mouth is in its breast, and when it wants to eat it protrudes its lip about two cubits, takes up the straw with it, and puts it in its mouth. When the sultan condemns anyone to death, they say to the elephant, "this person is guilty." It then seizes him with its lip, casts him aloft and slays him.

ದಕ್ಷಿಣ ಏಷ್ಯಾ

ಬದಲಾಯಿಸಿ
ಶ್ರೀಲಂಕಾ
ಬದಲಾಯಿಸಿ
 
ಆನೆಗಳಿಂದ ವಧಿಸುವ ದೇಶಗಳ ಭೌಗೋಳಿಕ ವ್ಯಾಪ್ತಿ.
  • ಆನೆಗಳ ಮೂಲಕ ಕೊಲ್ಲುವಿಕೆಗೆಂದೇ ಆನೆಗಳನ್ನು ಭಾರತದ ಪರ್ಯಾಯದ್ವೀಪ ಮತ್ತು ಆಗ್ನೇಯ ಏಷ್ಯಾಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಆಂಗ್ಲ ನಾವಿಕ ರಾಬರ್ಟ್ ನಾಕ್ಸ್ ತನ್ನ ೧೬೧೮ ರ ಬರವಣಿಗೆಗಳಲ್ಲಿ ತಾನು ಶ್ರೀಲಂಕಾದಲ್ಲಿ ಬಂಧಿಯಾಗಿದ್ದಾಗ ಕಂಡ ಆನೆಯಿಂದ ನಡೆಸಿದ ವಧೆಯೊಂದನ್ನು ವರ್ಣಿಸಿದ್ದಾರೆ. ಆ ಆನೆಗಳ ದಾಡೆಗಳಿಗೆ "ಚೂಪಾದ ಕಬ್ಬಿಣ ಮತ್ತು ಮೂರು ತುದಿಗಳಿರುವ ಚೂಪಾದ ವಜ್ಜೆಗಳು" ಅಳವಡಿಸಲ್ಪಟ್ಟಿದ್ದುದನ್ನು ತಾವು ಕಂಡುದಾಗಿ ನಾಕ್ಸ್ ಹೇಳುತ್ತಾರೆ.
  • ತನ್ನ ದಂತಗಳಿಂದ ಬಲಿಯಾಗುವವನನ್ನು ಚುಚ್ಚಿ ಕೆಡವಿದ ನಂತರ ಆನೆಯು "ದೇಹವನ್ನು ಚೂರುಚೂರಾಗಿಸಿ ಅಂಗಗಳನ್ನು ಒಂದರ ನಂತರ ಒಂದರಂತೆ ಎಸೆಯುತ್ತಿತ್ತು".[]
  • ಹತ್ತೊಂಬತ್ತನೆಯ ಶತಮಾನದ ಪ್ರವಾಸಿ ಜೇಮ್ಸ್ ಎಮರ್ಸನ್ ಟೆನೆಟ್ "ಇಂತಹ ದೃಶ್ಯಗಳಿಗೆ ಪ್ರತ್ಯಕ್ಷಸಾಕ್ಷಿಯಾಗಿದ್ದ ಒಬ್ಬ ಕ್ಯಾಂಡಿಯನ್ (ಶ್ರೀಲಂಕಾದ) ಮುಖ್ಯಸ್ಥನು ಆನೆಗಳು ಎಂದೂ ತಮ್ಮ ದಾಡೆಗಳನ್ನು ಬಳಸುವುದಿಲ್ಲವೆಂದೂ, ಕೆಳಗೆ ಬಿದ್ದ ವ್ಯಕ್ತಿಯ ಮೇಲೆ ಆನೆಯು ತನ್ನ ಕಾಲನ್ನಿ ರಿಸಿ ತನ್ನ ಸೊಂಡಿಲನ್ನು ಹಠಾತ್ತನೆ ಬಳಸಿ ಬಲಿಪಶುವಿನ ಕೈಕಾಲುಗಳನ್ನು ಒಂದಾದರ ನಂತರ ಒಂದರಂತೆ ಕಿತ್ತು ಬಿಸುಡುವುದೆಂದೂ ನಮನೆ ಭರವಸೆ ಇತ್ತಿದ್ದಾರೆ" ಎಂದು ವಿವರಿಸಿದ್ದಾರೆ.[] ನಾಕ್ಸ್ ರ ಪುಸ್ತಕದಲ್ಲಿ ಇದೇ ರೀತಿಯ ವಧೆಯನ್ನು ಖ್ಯಾತವಾದ "ಆನೆಯೊಂದರಿಂದ ವಧೆ" (ಮೇಲಿನ ಚಿತ್ರ ನೋಡಿ) ಎಂಬ ಚಿತ್ರದ ಮೂಲಕ ಚಿತ್ರಿಸಲಾಗಿದೆ.
  • ೧೮೫೦ ರಲ್ಲಿ ಬ್ರಿಟಿಷ್ ರಾಯಭಾರಿ ಸರ್ ಹೆನ್ರಿ ಚಾರ್ಲ್ಸ್ ಸರ್ರ್ ತಾವು ಕ್ಯಾಂಡಿಯ ಕೊನೆಯ ಅರಸ ಶ್ರೀ ವಿಕ್ರಮ ರಾಜಸಿನ್ಹರು ಅಪರಾಧಿಗಳನ್ನು ಕೊಲ್ಲಲು ಬಳಸುತ್ತಿದ್ದ ಆನೆಗಳನ್ನು ನೋಡಲೆಂದು ಇತ್ತ ಭೇಟಿಯನ್ನು ಸವಿವರವಾಗಿ ಬರಹರೂಪಕ್ಕಿಳಿಸಿದ್ದಾರೆ. ೧೮೧೫ ರಲ್ಲಿ ಕ್ಯಾಂಡಿಯ ರಾಜ್ಯವನ್ನು ಆಕ್ರಮಿಸಿ ಅಲ್ಲಿನ ರಾಜರನ್ನು ಉಚ್ಛಾಟಿಸಿದ ನಂತರ ಬ್ರಿಟಿಷರು ಆನೆಗಳಿಂದ ತುಳಿಸಿ ಅಪ್ಪಚ್ಚಿಯಾಗಿಸಿ ಕೊಲ್ಲಿಸುವುದನ್ನು ನಿಷೇಧಿಸಿದರು. ಆದರೆ ಆ ರಾಜರ ವಧಾಗಜವು ಇನ್ನೂ ಬದುಕಿದ್ದಿತು ಹಾಗೂ ತನ್ನ ಹಿಂದಿನ ಕಾರ್ಯಗಳನ್ನು ಇನ್ನೂ ನೆನಪಿನಲ್ಲಿ ಇಟ್ಟುಕೊಂಡಿರುವುದು ಗೋಚರವಾಗುತ್ತಿತ್ತು.
  • ಸರ್ರ್ ಹೀಗೆ ವಿಮರ್ಶಿಸುತ್ತಾರೆ:[]
During the native dynasty it was the practice to train elephants to put criminals to death by trampling upon them, the creatures being taught to prolong the agony of the wretched sufferers by crushing the limbs, avoiding the vital parts. With the last tyrant king of Candy, this was a favourite mode of execution and as one of the elephant executioners was at the former capital during our sojourn there we were particularly anxious to test the creature's sagacity and memory. The animal was mottled and of enormous size, and was quietly standing there with his keeper seated upon his neck; the noble who accompanied us desired the man to dismount and stand on one side.

The chief then gave the word of command, ordering the creature to 'slay the wretch!' The elephant raised his trunk, and twined it, as if around a human being; the creature then made motions as if he were depositing the man on the earth before him, then slowly raised his back-foot, placing it alternately upon the spots where the limbs of the sufferer would have been. This he continued to do for some minutes; then, as if satisfied that the bones must be crushed, the elephant raised his trunk high upon his head and stood motionless; the chief then ordered him to 'complete his work,' and the creature immediately placed one foot, as if upon the man's abdomen, and the other upon his head, apparently using his entire strength to crush and terminate the wretch's misery.
  • ಭಾರತದಲ್ಲಿ ಹಲವಾರು ಶತಮಾನಗಳವರೆಗೆ ಆನೆಗಳನ್ನು ವಧಾ ಪ್ರಾಣಿಗಳಾಗಿ ನಿಯಮಿಸಿ ಬಳಸುತ್ತಿದ್ದರು. ತೆರಿಗೆಗಳ್ಳರು, ದಂಗೆಕೋರರು ಮತ್ತು ಶತ್ರುಸೈನಿಕರನ್ನು "ಆನೆಗಳ ಕಾಲುಗಳ ಕೆಳಗೆ" ವಧಿಸುವ ಕ್ರಮವನ್ನು ಹಿಂದೂ ಮತ್ತು ಮುಸ್ಲಿಮ್ ಪ್ರಭುಗಳು ಬಳಸುತ್ತಿದ್ದರು.[] ಕ್ರಿಸ್ತಶಕ 200ರ ಸುಮಾರಿನಲ್ಲಿ ಬರೆಯಲ್ಪಟ್ಟ ಮನುಸ್ಮೃತಿ ಅಥವಾ ಮನುವಿನ ಶಾಸ್ತ್ರವು ಹಲವಾರು ಅಪರಾಧಿಗಳಿಗೆ ಆನೆಗಳಿಂದ ಕೊಲ್ಲಿಸುವುದನ್ನು ದಂಡನೆಯಾಗಿ ವಿಧಿಸಬೇಕೆನ್ನುತ್ತದೆ.
  • ಉದಾಹರಣೆಗೆ, ಆಸ್ತಿಯು ಕಳುವಾಗಿದ್ದಲ್ಲಿ "ಆ ಕಳುವಿಗೆ ಸಂಬಂಧಿತವಾಗಿ ಸಿಕ್ಕಿಬಿದ್ದ ಎಲ್ಲಾ ಕಳ್ಳರನ್ನೂ ರಾಜನ ಆನೆಯಿಂದ ಕೊಲ್ಲಿಸಬೇಕು".[] ದೃಷ್ಟಾಂತವಾಗಿ, ೧೩೦೫ ರಲ್ಲಿ ದೆಹಲಿಯ ಸುಲ್ತಾನರು ಮಂಗೋಲದ ಬಂಧಿಗಳನ್ನು ಆನೆಗಳಿಂದ ಕೊಲ್ಲಿಸುವುದನ್ನು ಒಂದು ಸಾರ್ವಜನಿಕ ಮನರಂಜನೆಯಾಗಿ ಮಾರ್ಪಡಿಸಿದರು.[]
 
1868ರಲ್ಲಿ ಲೂಯಿಸ್ ರೂಸೆಲೆಟ್ ಈ ವಿಧವಾದ ವಧೆಯನ್ನು ತಮ್ಮ ಪುಸ್ತಕ "ಲೆ ಟೂಟ್ ಡ್ಯು ಮಾಂಡೆ"ಯಲ್ಲಿ ವರ್ಣಿಸಿದ್ದಾರೆ.
  • ಮೊಘಲ್ ಯುಗದಲ್ಲಿ "ಅಪರಾಧ ಎಸಗಿದವನನ್ನು ಆನೆಯ ಕಾಲುಗಳ ಕೆಳಗೆ ಹಾಕಿ, ತುಳಿಸಿ ಸಾಯಿಸುವುದು ಸಾಮಾನ್ಯವಾಗಿ ಚಾಲ್ತಿಯಲ್ಲಿದ್ದ ವಧಾಕ್ರಮ."[] ಕ್ಯಾಪ್ಟನ್ ಅಲೆಕ್ಸಾಂಡರ್ ಹ್ಯಾಮಿಲ್ಟನ್ ೧೭೨೭ ರಲ್ಲಿ ಹೀಗೆ ಬರೆದಿದ್ದಾರೆ; ಮೊಘಲ್ ಅರಸ ಶಹಜಹಾನನಿ ತನ್ನ ತಪ್ಪಿತಸ್ಥ ಸೇನಾನಾಯಕನನ್ನು "ಆನೆಗಳ ಉದ್ಯಾನಕ್ಕೆ ಕರೆದೊಯ್ದು, ಬಹಳ ಅವಮಾನಕರವಾದ ಮತ್ತು ಘೋರವಾದ ಸಾವಾದ, ಆನೆಗಳಿಂದ ತುಳಿಸಿಕೊಂಡು ಪಡೆಯುವ ಮರಣವನ್ನು ಶಿಕ್ಷೆಯಾಗಿ" ನೀಡಲು ಆಜ್ಞೆಯಿತ್ತರು.[೧೦]
  • ಮೊಘಲ್ ಚಕ್ರವರ್ತಿ ಹುಮಾಯೂನ್ ತನ್ನ ಆಳ್ವಿಕೆಯ ಬಗ್ಗೆ ಟೀಕೆ ಮಾಡಿದನೆಂದು ತಪ್ಪು ತಿಳಿದು ಒಬ್ಬ ಇಮಾಂರನ್ನು ಆನೆಯಿಂದ ತುಳಿಸಿ ಕೊಲ್ಲಲು ಆಜ್ಞೆಯಿತ್ತರು.[೧೧] ಕೆಲವು ದೊರೆಗಳು ತಮ್ಮ ಮನರಂಜನೆಗಾಗಿ ಈ ವಿಧವಾದ ವಧೆಯನ್ನು ಜರುಗಿ ಸುತ್ತಿದ್ದರು. ಮತ್ತೊಬ್ಬ ಮೊಘಲ್ ದೊರೆಯಾದ ಜಹಾಂಗೀರ್ ತನ್ನ ಖುಷಿಗಾಗಿ ಬೃಹತ್ ಸಂಖ್ಯೆಯಲ್ಲಿದ್ದ ಅಪರಾಧಿಗಳನ್ನು ಈ ವಿಧವಾಗಿ ಅಪ್ಪಚ್ಚಿಯಾಗಿಸಿ ಸಂತೋಷಟ್ಟರೆಂದು ಹೇಳಲಾಗಿದೆ. ಇಂತಹ ಕ್ರೂರವಧೆಗಳನ್ನು ಎಸಗಿ, ಅದರಿಂದ ಚಕ್ರವರ್ತಿಗಳು ಆನಂದ ಪಡುತ್ತಿದ್ದುದನ್ನು ಕಂಡ ಫ್ರೆಂಚ್ ಪ್ರವಾಸಿ ಫ್ರಾಂಕೋಯಿಸ್ ಬೆರ್ನಿಯರ್ ಆ ಬಗ್ಗೆ ತಾವು ದಿಗ್ಭ್ರಾಂತರಾದುದನ್ನು ದಾಖಲಿಸಿದ್ದಾರೆ.[]
  • ಮೊಘಲ್ ದೊರೆಗಳು ಆನೆಗಳನ್ನು ಕೇವಲ ತುಳಿದು ಅಪ್ಪಚ್ಚಿಯಾಗಿಸಿ ಸಾಯಿಸುವುದಕ್ಕೆ ಸೀಮಿತಗೊಳಿಸುತ್ತಿರಲಿಲ್ಲ; ದೆಹಲಿಯ ಸುಲ್ತಾನೀ ಆಳ್ವಿಕೆಯಲ್ಲಿ ಅನೆಗಳು "ತಮ್ಮ ದಾಡೆಗಳಿಗೆ ಸಿಕ್ಕಿಸಿದ ಚೂಪಾದ ಅಲಗುಗಳಿಂದ" ಬಂಧಿಗಳನ್ನು ತುಂಡು ತುಂಡಾಗಿ ಕತ್ತರಿಸುವಂತೆ ತರಬೇತಿ ನೀಡಲಾಗುತ್ತಿತ್ತು.[] ಭಾರತದ ಇತರ ರಾಜ್ಯಗಳಲ್ಲೂ ಆನೆಯಿಂದ ಕೊಲ್ಲುವ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಮರಾಠಾ ಛತ್ರಪತಿ ಸಾಂಬಾಜಿಯು ಈ ವಿಧದ ಸಾವುಗಳನ್ನು ಹಲವಾರು ಸಂಚುಗಾರರಿಗೆ ವಿಧಿಸಿದರು;
  • ಹದಿನೇಳನೆಯ ಶತಮಾನದ ಕಡೆಯ ಭಾಗದಲ್ಲಿ ಮರಾಠಾ ಅಧಿಕಾರಿ ಅಣ್ಣಾಜಿ ದತ್ತೂಗೆ ವಿಧಿಸಿದುದೂ ಇಂತಹ ಸಾವೇ.[೧೨] ಮತ್ತೊಬ್ಬ ಮರಾಠಾ ಮುಖಂಡರಾದ ದಂಡಾಧಿಕಾರಿ ಸಾಂತಾಜೀ ಸೇನೆಯಲ್ಲಿನ ಶಿಸ್ತನ್ನು ಭಂಗಪಡಿಸಿದವರಿಗೆ ಈ ಶಿಕ್ಷೆಯನ್ನು ವಿಧಿಸುತ್ತಿದ್ದರು. ಸಮಕಾಲೀನ ಇತಿಹಾಸಕಾರರಾದ ಖಾಫೀ ಖಾನ್ "ಅತಿ ಕ್ಷುಲ್ಲಕವಾದ ತಪ್ಪಿಗೆ ಅವರು (ಸಾಂತಾಜೀ) ವ್ಯಕ್ತಿಯನ್ನು ಆನೆಯ ಕಾಲಕೆಳಗೆ ಹಾಕಿಬಿಡುತ್ತಿದ್ದರು" ಎಂದು ವರದಿ ಮಾಡಿದ್ದಾರೆ.[೧೩] ೧೯ ನೆಯ ಶತಮಾನದ ಆದಿಯ ಬರಹಗಾರರಾದ ರಾಬರ್ಟ್ ಕೆರ್ರ್ ಗೋವಾದ ಅರಸರು ಹೇಗೆ "ಕೆಲವು ಆನೆಗಳನ್ನು ಅಪರಾಧಿಗಳ ವಧೆ ಮಾಡಲೆಂದೇ ಸಾಕಿದ್ದರೆಂಬುದನ್ನು ವರ್ಣಿಸುತ್ತಾರೆ.
  • "ಅಪರಾಧಿಯನ್ನು ವಧಿಸಲು ಈ ಬೃಹತ್ ಪ್ರಾಣಿಯ ಮುಂದೆ ತಂದಾಗ, ಅರಸರು ಆ ವ್ಯಕ್ತಿಯು ತಕ್ಷಣ ಸಾಯಬೇಕೆಂದು ಬಯಸಿದರೆ ಆನೆಯು ಆ ಕ್ಷಣವೇ ತನ್ನ ಪಾದತಲದಲ್ಲಿ ಅವನನ್ನು ಹಾಕಿ ನುಜ್ಜುಗುಜ್ಜುಮಾಡಿಬಿಡುತ್ತದೆ; ಆದರೆ ಅಪರಾಧಿಗೆ ಹಿಂಸೆ ನೀಡಬೇಕೆಂದು ಬಯಸಿದಲ್ಲಿ ಚಕ್ರದ ಮೇಲೆ ಮುರಿಯಲ್ಪಡುವ ಮುಜರಂತೆ, ಅಪರಾಧಿಯ ಕಾಲು, ಕೈಗಳನ್ನು ಒಂದರ ನಂತರ ಒಂದಾಗಿ ಮುರಿಯುತ್ತದೆ."[೧೪] ನಿಸರ್ಗತಜ್ಞ ಜಾರ್ಜೆಸ್-ಲೂಯಿಸ್ ಲೆಕ್ಲೆರ್ಕ್, ಕಮ್ಟೆ ಡಿ ಬಫ್ಫಾನ್ ಈ ನಮನೀಯತೆಯು ಆನೆಗಳು "ಮನುಷ್ಯನ ತಾರ್ಕಿಕ ಗುಣವನ್ನು ಅರಿತುಕೊಳ್ಳುತ್ತವೆ, ಕೇವಲ ಸ್ವಾಭಾವಿಕ ಗುಣಗಳಿಂದ ಕೊಲ್ಲುವಂತಹುದಲ್ಲ" ಎಂಬುದರ ದ್ಯೋತಕವಾಗಿದೆ ಎಂದರು.[೧೫] ಈ ರೀತಿಯ ವಧೆಗಳನ್ನು ಯಾರಾದರೂ ಅಂತಹ ಅಪರಾಧ ಎಸಗಿದರೆ ಅವರಿಗೂ ಅದೇ ಶಿಕ್ಷೆ ಕಾದಿದೆ ಎಂದು ಎಚ್ಚರಿಕೆ ನೀಡಲೆಂದು ಸಾರ್ವಜನಿಕವಾಗಿ ಹಮ್ಮಿಕೊಳ್ಳುತ್ತಿದ್ದರು. ಈ ಉದ್ದೇಶಕ್ಕಾಗಿ, ಬಳಸುವ ಆನೆಗಳು ಬೃಹತ್ ಗಾತ್ರದ್ದಾಗಿರುತ್ತಿದ್ದವು; ಕೆಲವು ಒಂಬತ್ತು ಟನ್ ಗಿಂತಲೂ ತೂಕದ್ದಾಗಿರುತ್ತಿದ್ದವು.
  • ಈ ವಧೆಗಳು ಭಯಾನಕವಾಗಿಎಬೇಕೆಂಬುದು ವಧಿಸುವವರ ಬಯಕೆಯಾಗಿರುತ್ತಿತ್ತು ಹಾಗೂ ಎಲ್ಲಾ ವಿಧದಲ್ಲೂ ಅವು ನಿಜಕ್ಕೂ ಭಯಂಕರವಾಗಿರುತ್ತಿದ್ದವು. ಕೆಲವೊಮ್ಮೆ, ಕೊಲ್ಲುವ ಮುನ್ನ ಅದೇ ಆನೆಗಳು ಆ ವ್ಯಕ್ತಿಗಳಿಗೆ ಸಾರ್ವಜನಿಕರ ಎದುರಿನಲ್ಲೇ ಸಾಕಷ್ಟು ಚಿತ್ರಹಿಂಸೆ ಕೊಡುತ್ತಿದ್ದವು. ಆ ರೀತಿಯ ಒಂದು ಚಿತ್ರಹಿಂಸೆಭರಿತ ವಧೆಯು ೧೮೧೪ ರಲ್ಲಿ ಬರೋಡಾದಲ್ಲಿ ನಡೆದಿದ್ದು, ಅದರ ವರದಿಯನ್ನು ದ ಪೆರ್ಸಿ ಅನೆಕ್ಡೋಟ್ಸ್ ನಲ್ಲಿ ಸಂರಕ್ಷಿಸಲಾಗಿದೆ:
The man was a slave, and two days before had murdered his master, brother to a native chieftain, called Ameer Sahib. About eleven o'clock the elephant was brought out, with only the driver on his back, surrounded by natives with bamboos in their hands. The criminal was placed three yards behind on the ground, his legs tied by three ropes, which were fastened to a ring on the right hind leg of the animal. At every step the elephant took, it jerked him forward, and every eight or ten steps must have dislocated another limb, for they were loose and broken when the elephant had proceeded five hundred yards. The man, though covered in mud, showed every sign of life, and seemed to be in the most excruciating torments. After having been tortured in this manner for about an hour, he was taken to the outside of the town, when the elephant, which is instructed for such purposes, was backed, and put his foot on the head of the criminal.
  • ಆನೆಗಳನ್ನು ಕೊಲ್ಲುವ ಪ್ರಾಣಿಗಳಾಗಿ ೧೯ ನೆಯ ಶತಮಾನದ ಮಧ್ಯೋತ್ತರ ಭಾಗದವರೆಗೆ ಬಳಸಲಾಗುತ್ತಿತ್ತು. ೧೮೬೮ ರಲ್ಲಿ ಮಧ್ಯಭಾರತಕ್ಕೆ ಪ್ರವಾಸ ಕೈಗೊಂಡಾಗ, ಲೂಯಿಸ್ ರೂಸೆಲೆಟ್ ಒಬ್ಬ ಅಪರಾಧಿಯನ್ನು ಅನೆಯೊಂದು ವಧಿಸಿದ ವಿಧಿಯನ್ನು ವರ್ಣಿಸಿದರು. ಶಿಕ್ಷೆಗೆ ಒಳಗಾದ ವ್ಯಕ್ತಿಯ ಶಿರವನ್ನು ಬಲಾತ್ಕಾರವಾಗಿ ಒಂದು ಪೀಠದ ಮೇಲಿರಿಸಿ, ಅಲ್ಲಿಯೇ ಅದನ್ನು ಅಲ್ಲಾಡದಂತೆ ಹಿಡಿದಿದ್ದು, ಆನೆಯೊಂದು ಆ ಶಿರದ ಮೇಲೆ ಕಾಲಿಟ್ಟು ಅಪ್ಪಚ್ಚಿ ಮಾಡಿದಂತಹ ಒಂದು ಚಿತ್ರವನ್ನು ಬರೆಯಲಾಯಿತು.
  • ಆ ಚಿತ್ರವನ್ನು ಮರದ ಕೆತ್ತನೆಯಾಗಿಸಲಾಯಿತು ಮತ್ತು "ಲೆ ಟ್ಯೂರ್ ಡ್ಯು ಮಾಂಡೆ", ಎಂಬ ವ್ಯಾಪಕವಾದ ಓದುಗರ ಸಂಖ್ಯೆ ಹೊಂದಿದ್ದ ಪ್ರವಾಸ ಮತ್ತು ಸಾಹಸದ ಫ್ರೆಂಚ್ ಪತ್ರಿಕೆಯಲ್ಲಿ ಪ್ರಕಟಗೊಂಡಿತು; ಹಾರ್ಪರ್ಸ್ ವೀಕ್ಲಿಯಂತಹ ಹಲವಾರು ವಿದೇಶಿ ಪತ್ರಿಕಗಳನ್ನು ಇದು ಮುದ್ರಣ ಗೊಂಡಿತು.[೧೭] ಬ್ರಿಟಿಷ್ ಚಕ್ರಾಧಿಪತ್ಯವು ಪ್ರಬಲಗೊಂಡಂತೆ ಭಾರತದಲ್ಲಿ ಆನೆಗಳಿಂದ ಕೊಲ್ಲುವ ವಿಧಾನವು ನಿಧಾನವಾಗಿ ಕಡಿಮೆಯಾಗುತ್ತಾ ಸಾಗಿ ಕೊನೆಗೆ ಸಂಪೂರ್ಣವಾಗಿ ಸ್ಥಗಿತವಾಯಿತು. *೧೯೧೪ ರಲ್ಲಿ ಎಲೇನರ್ ಮ್ಯಾಡ್ಡಾಕ್ ತನ್ನು ಲೇಖನವನ್ನು ಬರೆಯುತ್ತಾ ಯೂರೋಪಿಯನ್ನರ ಆಗಮನದ ಕಾಲದಿಂದಲೂ ಕಾಶ್ಮೀರದಲ್ಲಿ "ಹಲವಾರು ಪ್ರಾಚೀನ ರೀತರಿವಾಜಿಗಳು ಕಣ್ಮರೆಯಾಗುತ್ತಿವೆ - ಅವುಗಳ ಪೈಕಿ ಕೊಲ್ಲಲೆಂದೇ ತರಬೇತಿ ನೀಡಿದ ಮತ್ತು ಅನುವಂಶಿಕವಾಗಿ 'ಗುಂಗಾ ರಾವ್' ಎಂದು ಕರೆಯಲ್ಪಡುತ್ತಿದ್ದ ಆನೆಗಳಿಂದ ಭಯಾನಕವಾದ ರೀತಿಯಲ್ಲಿ ಕೊಲ್ಲುತ್ತಿದ್ದ ಹೇಯವಾದ ಆಚರಣೆಯೂ ಒಂದು" ಎಂದು ಉಲ್ಲೇಖಿಸಿದ್ದಾರೆ.[೧೮]

ಆಗ್ನೇಯ ಏಷ್ಯಾ

ಬದಲಾಯಿಸಿ
  • ಆನೆಗಳನ್ನು ಮನುಷ್ಯರನ್ನು ವಧಿಸುವ ಕಾರ್ಯಕ್ಕೆಂದೇ ವ್ಯಾಪಕವಾಗಿ ಆಗ್ನೇಯ ಏಷ್ಯಾ ಮತ್ತು ಬರ್ಮಾ ದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ವ್ಯಾಪಕವಾಗಿ ಬಳಸುತ್ತಿದ್ದರು [೧೯] ಹಾಗೋ ಇಂಡೋಚೈನಾ ಪರ್ಯಾಯದ್ವೀಪದ ಅತ್ತ ಕಡೆಯ ಭಾಗ ದಲ್ಲಿರುವ ಚಂಪಾ ರಾಜ್ಯದಲ್ಲೂ ಬಳಸುತ್ತಿದ್ದರೆಂಬುದಕ್ಕೆ ಸಾಕಷ್ಟು ದಾಖಲೆಗಳು ದೊರೆತಿವೆ.[೨೦] ಸಯಾಮ್ ನಲ್ಲಿ ಶಿಕ್ಷಿತನನ್ನು ಮೊದಲು ಗಾಳಿಯಲ್ಲಿ ತೂರಿ, ನೆಲಕ್ಕೆ ಬಿದ್ದನಂತರ ತುಳಿದು ಸಾಯಿಸಲು ಆನೆಗಳಿಗೆ ತರಬೇತಿ ನೀಡಲಾಗುತ್ತಿತ್ತು.[]
  • ಜಾನ್ ಕ್ರಾಫರ್ಡ್ ರ ದಿನಚರ್ಯಾ ಪುಟಗಳಲ್ಲಿ ಕೋಚಿಂಚಿನಾ ರಾಜ್ಯದಲ್ಲಿ ಆನೆಗಳಿಂದ ವಿಧಿಸುತ್ತಿದ್ದ ಮತ್ತೊಂದು ವಿಧವಾದ ವಧೆಯ ಉಲ್ಲೇಖವಿದೆ (ಕೋಚಿಂಚಿನಾ ಈಗ ದಕ್ಷಿಣ ವಿಯೆಟ್ನಾಂ) ಆಗಿದೆ, ಇಲ್ಲಿ ಕ್ರಾಫರ್ಡ್ 1821ರಲ್ಲಿ ಬ್ರಿಟಿಷ್ ಅಧಿಕಾರಿಯಾಗಿ ಸೇವೆ ಸಲ್ಲಿಸು ತ್ತಿದ್ದರು. ಕ್ರಾಫರ್ಡ್ ಒಂದು ಸಂದರ್ಭವನ್ನು ಹೀಗೆ ಸ್ಮರಿಸಿಕೊಳ್ಳುತ್ತಾರೆ: "ಅಪರಾಧಿಯನ್ನು ಒಂದು ಕಂಬಕ್ಕೆ ಕಟ್ಟಲಾಗುತ್ತದೆ ಮತ್ತು [ಅರಸರ ಪ್ರಿಯವಾದ] ಆನೆಯೊಂದು ರಭಸದಿಂದ ಅವನತ್ತು ಸಾಗಿ, ಅಪ್ಪಚ್ಚಿಯಾಗಿಸಿ ಸಾಯಿಸುತ್ತದೆ."[೨೧]

ಪಾಶ್ಚಿಮಾತ್ಯ ಚಕ್ರಾಧಿಪತ್ಯಗಳು

ಬದಲಾಯಿಸಿ
  • ರೋಮನ್ನರು, ಕಾರ್ಥಗಿನಿಯನ್ನರು ಮತ್ತು ಮ್ಯಾಸಿಡೋನಿಯಾದ ಗ್ರೀಕರು ಕೆಲವೊಮ್ಮೆ ಆನೆಗಳನ್ನು ವಧಿಸುವ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದರು ಹಾಗೂ ಸಮರ ಗಜಗಳಾಗಿ ಸೇನೆಯಲ್ಲಿ ಬಳಸಿಕೊಳ್ಳುತ್ತಿದ್ದರು; ಹೀಗೆ ಸಮರದಲ್ಲಿ ಆನೆಗಳನ್ನು ವಿಶೇಷವಾಗಿ ಬಳಸಿದವರು ಹ್ಯಾನಿಬಾಲ್. ದ್ರೋಹಿಗಳು, ಯುದ್ಧಖೈದಿಗಳು ಮತ್ತು ಸೇನೆಯ ಅಪರಾಧಿಗಳನ್ನು ಆನೆಯ ಪಾದಗಳ ಕೆಳಗೆ ಚಪ್ಪಾಚೂರಾಗಿಸುತ್ತಿದ್ದುದು ಪ್ರಾಚೀನ ಲಿಪಿಕಾರರ ದಾಖಲೆಗಳಲ್ಲಿ ಕಾಣಸಿಗುತ್ತವೆ. ಶ್ರೇಷ್ಠ ದೊರೆ ಅಲೆಕ್ಸಾಂಡರ್ ಕ್ರಿಸ್ತ ಪೂರ್ವ ೩೨೩ ರಲ್ಲಿ ಗತಿಸಿದ ನಂತರ ಮ್ಯಾಸೆಡಾನ್ ನ ರಿಜೆಂಟ್ ಆದ ಪೆರ್ಡಿಕಾಸ್ ಮೆಲೀಜರ್ ತುಕಡಿಯ ದಂಗೆಕೋರರನ್ನು ಬ್ಯಾಬಿಲೋನ್ ನಗರದಲ್ಲಿ ಆನೆಗಳ ಕಾಲ ಕೆಳಗೆ ಹಾಕಿ ಕೊಲ್ಲಿಸಿದರು.[೨೨]
  • ರೋಮನ್ ಲೇಖಕ ಕ್ವಿಂಟಸ್ ಕರ್ಟಿಯಸ್ ರ್ಯೂಫಸ್ ತಮ್ಮ ಹಿಸ್ಟೋರಿಯೇ ಅಲೆಕ್ಸಾಂಡ್ರಿ ಮ್ಯಾಗ್ನಿ ಯಲ್ಲಿ ಹೀಗೆ ಬರೆಯುತ್ತಾರೆ: "ದಂಗೆಕೋರರು ಹೆದರಿದ್ದುದನ್ನು ಮತ್ತು ತನ್ನ ಅಧೀನದಲ್ಲಿದ್ದುದನ್ನು ಪೆರ್ಡಿಕಾಸ್ ಗಮನಿಸಿದರು. ಅಲೆಕ್ಸಾಂಡರ್ ರ ಮರಣದ ನಂತರ ನಡೆದ ಮೊದಲ ಸಮಾವೇಶದಿಂದ ಸಿಡಿದೆದ್ದು ಹೊರಬಂದ ಕ್ಷಣದಿಂದಲೂ ಮೆಲೀಜರ್ ರನ್ನು ಹಿಂಬಾಲಿಸುತ್ತಿದ್ದ ಮುನ್ನೂರು ಜನರನ್ನು ಮುಖ್ಯ ವಿಭಾಗದಿಂದ ಹೊರಕ್ಕೆ ಎಳೆತಂದು, ಇಡೀ ಸೇನೆಯು ನೋಡುತ್ತಿದ್ದಂತೆಯೇ ಆ ಮುನ್ನೂರು ಜನರನ್ನು ಆನೆಗಳತ್ತ ಎಸೆದರು. ಅಷ್ಟೂ ಜನರು ಆನೆಗಳ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದರು..."[೨೩]
  • ಅಂತೆಯೇ, ರೋಂ ನ ಲೇಖಕ ವ್ಯಾಲೆರಿಯಸ್ ಮ್ಯಾಕ್ಸಿಮಸ್ ಹೇಗೆ ದಂಡನಾಯಕ ಲ್ಯೂಸಿಯಸ್ ಅಮಿಲಿಯಸ್ ಪಾಲಸ್ ಮ್ಯಾಸಿಡೋನಿಕಸ್ "ರಾಜ ಪೆರ್ಸಿಯೂಸ್ ರ ಪರಾಭವದ ನಂತರ [ಕ್ರಿ.ಪೂ. 167], ಅದೇ ತಪ್ಪಿಗಾಗಿ (ರಾಜದ್ರೋಹ) ಜನರನ್ನು ಆನೆಗಳ ಕಾಲ ಕೆಳಗೆ ದಬ್ಬಿ ತುಳಿಸುತ್ತಿದ್ದರು ... ನಿಜಕ್ಕೂ ಸೇನೆಯ ಶಿಸ್ತನ್ನು ಕಾಪಾಡಲು ಇಂತಹ ಕ್ರೂರ ಮತ್ತು ಹಠಾತ್ತಾದ ಶಿಕ್ಷೆಗಳನ್ನು ನೀಡಬೇಕಾಗುತ್ತದೆ, ಏಕೆಂದರೆ ಹೀಗಿದ್ದಾಗಲೇ ಶಸ್ತ್ರಾಸ್ತ್ರಗಳ ಬಲವು ಸ್ಥಿರವಾಗಿರುತ್ತದೆ; ಸರಿಯಾದ ದಾರಿಯಿಂದ ಇವೇನಾದರೂ ಜಾರಿಹೋದರೆ ಇವುಗಳು ಬುಡಮೇಲಾಗಿ ಬಿಡುತ್ತವೆ." ಎಂದು ದಾಖಲಿಸಿದ್ದಾರೆ.[೨೪]
  • ಸಾಮಾನ್ಯ ಜನರಿಗೆ ಮರಣದಂಡನೆ ವಿಧಿಸಲು ನೇರವಾಗಿ ಆನೆಗಳನ್ನು ಬಳಸಿರುವುದರ ದಾಖಲೆಗಳು ಬಹಳ ವಿರಳ. ಈ ವಿಧದ ಒಂದು ಉದಾಹರಣೆಯನ್ನು ಜೋಸೆಫಸ್ ದಾಖಲಿಸಿದ್ದಾರೆ ಮತ್ತು ಡ್ಯೂಟೆರೋಕೆನೋನಿಕಲ್ ಬುಕ್ ಆಫ್ 3 ಮೆಕ್ಕಾಬೀಸ್ ಎಂಬ ಈಜಿಪ್ತಿನ ಯಹೂದಿಗಳ ಸಂಬಂಧಿತವಾಗ ಈ ಕಥೆಯು ಪ್ರಾಯಶಃ ಕಪೋಲಕಲ್ಪಿತ. ೩ ಮೆಕ್ಕಾಬೀಸ್ ನಲ್ಲಿ ಪ್ಟೋಲೆಮಿ IV ಫಿಲೋಪ್ಯಾಟರ್ (ಆಳ್ವಿಕೆ ಕ್ರಿ.ಪೂ. 221–204 ) ಈಜಿಪ್ತಿನ ಯಹೂದಿಗಳನ್ನು ಗುಲಾಮರನ್ನಾಗಿಸಿ ಅವರ ಮೈಮೇಲೆ ಡಯೋನೈಸಸ್ ಗುರುತನ್ನು ಹಚ್ಚೆ ಹಾಕಲು ಯತ್ನಿಸಿದುದರ ವರ್ಣನೆಯಿದೆ.
  • ಬಹುಪಾಲು ಯಹೂದಿಗಳು ಇದನ್ನು ವಿರೋಧಿಸಿದಾಗ, ಅರಸರು ಅವರನ್ನೆಲ್ಲಾ ಒಟ್ಟುಹಾಕಿ, ಅವರೆಲ್ಲರನ್ನೂ ಆನೆಯ ಕಾಲ್ತುಳಿತಕ್ಕೆ ಒಳಪಡಿಸಲು ಆಜ್ಞೆ ನೀಡಿದರೆಂದು ಹೇಳಲಾಗಿದೆ.[೨೫] ಈ ಸಾಮೂಹಿಕ ಮರಣದಂಡನೆಯು ಕಡೆಗೂ ತಪ್ಪಿಸಲ್ಪಟ್ಟಿತು; ಇದಕ್ಕೆ ಕಾರಣ ಕಿನ್ನರಿಯರು ಮಧ್ಯ ಪ್ರವೇಶಿಸಿ ಆಗಗೊಡದಿದ್ದುದು ಎಂದಿದೆ ಹಾಗೂ ಈ ಸಂದರ್ಭದ ನಂತರದ ದಿನಗಳಲ್ಲಿ ಪ್ಟೋಲೆಮಿ ತನ್ನ ಯಹೂದಿ ಪ್ರಜೆಗಳ ಬಗ್ಗೆ ಕ್ಷಮಾಗುಣವನ್ನೂ, ತಾಳ್ಮೆಯನ್ನೂ ಹೊಂದಿದರೆಂದು ಹೇಳಲಾಗಿದೆ.[೨೬][೨೭]

ಆನೆಗಳಿಂದ ಆಧುನಿಕ ಕಾಲದಲ್ಲಿ ಸಂಭವಿಸಿದ ಸಾವುಗಳು

ಬದಲಾಯಿಸಿ

ಈಗ ಯಾವ ದೇಶವೂ ಆನೆಗಳನ್ನು ಬಳಸಿ ವಧೆ ಮಾಡುವುದನ್ನು ಶಿಕ್ಷೆಯಾಗಿ ನೀಡುತ್ತಿಲ್ಲ; ಆದರೆ ಆನೆಗಳಿಂದ ಆಕಸ್ಮಿಕ ಸಾವುಗಳು ಸಂಭವಿಸುತ್ತವೆ. ಇವುಗಳನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು:

  • ಕಾಡಾನೆಗಳು : ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ, ಆನೆಗಳು ಮತ್ತು ಮನುಷ್ಯರು ಒಟ್ಟಾಗಿ ಜೀವಿಸುತ್ತಿರುವ ಜಾಗಗಳಲ್ಲಿ ಆನೆಗಳಿಂದ ಸಾವು ಸಂಭವಿಸುವುದು ಅಸಾಮಾನ್ಯವೇನಲ್ಲ: ಶ್ರೀಲಂಕಾ ಒಂದರಲ್ಲೇ, ಪ್ರತಿವರ್ಷವೂ 50–100 ಜನರು ಮನುಜರು ಮತ್ತು ಕಾಡಾನೆಗಳ ನಡುವಣ ಕಾಳಗದಲ್ಲಿ ಸಾವನ್ನಪ್ಪುತ್ತ಻ರೆ.[೨೮]
  • ಪಳಿಗಿಸಿದ ಆನೆಗಳು : ಬ್ರಿಟಿಷ್ ವಸಾಹತುಶಾಹಿ ಸರ್ಕಾರದ ಪರವಾಗಿ 1926ರಲ್ಲಿ ಬರ್ಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಾರ್ಜ್ ಆರ್ವೆಲ್ ಆನೆಯೊಂದು ಮದವೇರಿದ ಕಾರಣ ಒಬ್ಬನನ್ನು ತುಳಿದು ಕೊಂದಂತಹ ಪಳಗಿಸಿದ ಆನೆಯಿಂದಾದ ವಧೆಯ ಪ್ರಸಂಗವೊಂದನ್ನು ಎದುರಿಸಬೇಕಾಯಿತು. ಆರ್ವೆಲ್ ತಮ್ಮ ಖ್ಯಾತ ಪ್ರಬಂಧವಾದ "ಷೂಟಿಂಗ್ ಎನ್ ಎಲಿಫೆಂಟ್"ನಲ್ಲಿ ಇದನ್ನು ವರ್ಣಿಸುತ್ತಾ, "ಆ ಮಹಾಪ್ರಾಣಿಯ ಕಾಲಿನಿಂದಾದ ಘರ್ಷಣೆಗೆ ಅವನ ಬೆನ್ನಿನ ಚರ್ಮವು ಮೊಲದ ಚರ್ಮವನ್ನು ಹೆರೆದು ತೆಗೆದ ರೀತಿಯಲ್ಲಿ ಕಿತ್ತುಹೊರ ಬಂದಿತ್ತು" ಎಂದಿದ್ದಾರೆ.
  • ಬಂಧಿತ ಆನೆಗಳು : ಮೃಗಾಲಯಗಳು ಮತ್ತು ಸರ್ಕಸ್ ಗಳಲ್ಲಿ ಆನೆಗಳನ್ನು ಸಾಕುವವರು ಅವುಗಳ ತುಳಿತದಿಂದ ಸಾವನ್ನಪ್ಪುವುದು ಆ ಕಾರ್ಯದಲ್ಲಿನ ಬಹು ದೊಡ್ಡ ತೊಂದರೆಯಾಗಿ ಪರಿಣಮಿಸಿದೆ[೨೯]; 1990ರ ದಶಕದಿಂದೀಚೆಗೆ, ಆನೆಗಳನ್ನು ಸಾಕುವವರು ಮತ್ತು ಆನೆಗಳ ಮಧ್ಯೆ ಇದ್ದ ಮುಕ್ತ ಸಂಪರ್ಕದ ಬದಲಿಗೆ "ಸುರಕ್ಷಿತ ಸಂಪರ್ಕ"ದ ವ್ಯವಸ್ಥೆ ಏರ್ಪಾಡಾಗಿದ್ದು, ಈಗ ಸಾಕುವವರು ಆನೆಗಳನ್ನು ಇರಿಸಿರುವ ಪ್ರದೇಶದಿಂದ, ಅವುಗಳ ಸೊಂಡಿಲಿಗೆ ಸಿಗದಷ್ಟಾದರೂ ದೂರದಲ್ಲಿ, ಇರುತ್ತಾರೆ.[೩೦]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ ೧.೭ ಆಲ್ಸೆನ್, ಪುಟ. 156.
  2. ೨.೦ ೨.೧ ಸ್ಖಿಮೆಲ್, ಪುಟ. 96.
  3. ಬೆನಿಷ್, ಎ. (ಅನುವಾದ). "ಟ್ರಾವಲ್ ಆಫ್ ಪೆಟಾಷಿಯ ಆಫ್ ರಾತಿಸ್ಬಾನ್". (ಲಂಡನ್ ) 1902.
  4. ನಾಕ್ಸ್, ರಾಬರ್ಟ್. "ಎನ್ ಹಿಸ್ಟಾರಿಕಲ್ ರಿಲೇಷನ್ ಆಫ್ ದ ಐಲ್ಯಾಂಡ್ ಸಿಲೋನ್". (ಲಂಡನ್ ) ೧೯೦೨.
  5. ಟೆನೆಟ್, ಪುಟ. 281.
  6. ಸರ್ರ್, ಸರ್ ಚಾರ್ಲ್ಸ್ ಹೆನ್ರಿ, ಬ್ಯಾರೋದಲ್ಲಿ ಉಲ್ಲೇಖಿತ, ಜಾರ್ಜ್. "ಸಿಲೋನ್: ಪಾಸ್ಟ್ ಎಂಡ್ ಪ್ರೆಸೆಂಟ್". ಜಾನ್ ಮರ್ರೇ, 1857. ಪುಟಗಳು. 135–6.
  7. ಓಲಿವೆಲ್ಲೆ, ಪುಟ. 125.
  8. ಜ್ಯಾಕ್ ವೆದರ್ಫೋರ್ಡ್-ಜೆಂಗಿಸ್ ಖಾನ್, ಪುಟ.116
  9. ನಟೇಸನ್, ಜಿ.ಎ. ದ ಇಂಡಿಯನ್ ರಿವ್ಯೂ , ಪುಟ. 160
  10. ಹ್ಯಾಮಿಲ್ಟನ್, ಪುಟ. 170.
  11. ಎರಾಲಿ, ಪುಟ. 45.
  12. ಎರಾಲಿ, ಪುಟ. 479.
  13. ಎರಾಲಿ, ಪುಟ. 498
  14. ಕೆರ್ರ್, ಪುಟ. 395.
  15. ಬಫ್ಫಾನ್, ಜಾರ್ಜೆಸ್ ಲೂಯಿಸ್ ಲೆಕ್ಲರ್ಕ್.
    • "ನ್ಯಾಚುರಲ್ ಹಿಸ್ಟರಿ ಆಫ್ ಮ್ಯಾನ್, ದ ಗ್ಲೋಬ್, ಎಂಡ್ ಆಫ್ ಕ್ವಾಡ್ರುಪೆಡ್ಸ್". ಸಂಪುಟ ೧.ಲೀವಿಟ್ & ಅಲನ್, ೧೮೫೭. ಪುಟ. 113.
  16. Ryley Scott, George. "The Percy Anecdotes vol. VIII". The History of Torture Throughout the Ages. Torchstream Books, 1940. pp. 116–7.
  17. ಹಾರ್ಪರ್ಸ್ ವೀಕ್ಲಿ , ಫೆಬ್ರವರಿ 3, 1872
  18. ಮ್ಯಾಡ್ಡಾಕ್, ಎಲೇನರ್. "ವಾಟ್ ದ ಕ್ರಿಸ್ಟಲ್ ರಿವೀಲ್ಡ್". ಅಮೆರಿಕನ್ ಥಿಯಸಾಫಿಸ್ಟ್ ಮ್ಯಾಗಝೀನ್ , ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ, ೧೯೧೪. ಪುಟ. 859.
  19. ಷೆವರ್ಸ್, ಪುಟ.೨೬೧ .
  20. ಷ್ಯಾಫರ್, ಎಡ್ವರ್ಡ್ ಹೆಚ್. "ದಿ ಗೋಲ್ಡನ್ ಪೀಚಸ್ ಆಫ್ ಸಮರ್ಕಂಡ್ : ಅ ಸ್ಟಡಿ ಆಫ್ ತಾಂಗ್ ಎಕ್ಸೋಟಿಕ್ಸ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮುದ್ರಣಾಲು, ೧೯೮೫.ಪುಟ. ೮೦. ASIN: B0000CLTET
  21. ಕ್ರಾಫರ್ಡ್, ಜಾನ್. "ಜರ್ನಲ್ ಆಫ್ ಎನ್ ಎಂಬೆಸಿ ಫ್ರಂ ದ ಗೌರ್ನರ್-ಜನರಲ್ ಆಫ್ ಇಂಡಿಯಾ ಟು ದ ಕೋರ್ಟ್ಸ್ ಆಫ್ ಸಯಾಮ್ ಎಂಡ್ ಕೊಚಿನ್-ಚೈನಾ". ಹೆಚ್. ಕೋಲ್ಬರ್ನ್ ಮತ್ತು ಆರ್. ಬೆಂಟ್ಲೀ, 1830. pg=PA419&amp ;dq= %22On%20these%20occasions%20the%20criminal%20is%20tied%20to%20a%20stake,%20and%20the%20elephant+runs+down+upon+him%20and%20crushes%20him%20to%20death%22&ei=TUotStT_DaHSkATLqPT2Bg ಪುಟ. 419.
  22. ಫಾಕ್ಸ್, ರಾಬಿನ್ ಲೇನ್. |ಅಲೆಗ್ಸಾಂಡರ್ ದಿ ಗ್ರೇಟ್ ಪೆಂಗ್ವಿನ್, 2004. ಪುಟ. 474. ISBN 0-912616-87-3.
  23. ಕರ್ಟ್. Archived 2006-01-03 ವೇಬ್ಯಾಕ್ ಮೆಷಿನ್ ನಲ್ಲಿ.10.6-10 Archived 2006-01-03 ವೇಬ್ಯಾಕ್ ಮೆಷಿನ್ ನಲ್ಲಿ. (ನೋಂದಣಿಯ ಅಗತ್ಯವಿದೆ)
  24. ಫ್ಯುಟ್ರೆಲ್, ಆಲಿಸನ್ (ಉಲ್ಲೇಖಿತ) (ಸಂ.). "ಎ ಸೋರ್ಸ್ ಬುಕ್ ಆನ್ ದ ರೋಮನ್ ಗೇಮ್ಸ್". ಬ್ಲ್ಯಾಕ್ ವೆಲ್ ಪಬ್ಲಿಷಿಂಗ್, 2006. ಪುಟ. 8.
  25. 3 ಮೆಕ್ಕಾಬೀಸ್ 5
  26. 3 ಮೆಕ್ಕಾಬೀಸ್ 6
  27. ಕಾಲಿನ್ಸ್, ಪುಟ. 122.
  28. "ಜನ-ಆನೆ ಸಮರ: ಶ್ರೀಲಂಕಾದಲ್ಲಿ ಆನೆಗಳು ಕೃಷಿಯ ಬೆಳೆಗಳನ್ನು ಹೇಗೆ ಬಳಸುತ್ತವೆ ಎಂಬುದರ ಪರಿವೀಕ್ಷಣೆ Archived 2009-04-29 ವೇಬ್ಯಾಕ್ ಮೆಷಿನ್ ನಲ್ಲಿ." ಸ್ಮಿತ್ಸೋನಿಯನ್ ನ್ಯಾಷನಲ್ ಝುಆಲಾಜಿಕಲ್ ಪಾರ್ಕ್. 2010ರ ಫೆಬ್ರುವರಿ 23ರಂದು ಮರುಸಂಪಾದಿಸಲಾಯಿತು.
  29. "ಆಕ್ಸಿಡೆಂಟ್ಸ್ ವಿತ್ ಎಲಿಫೆಂಟ್ಸ್" ಎಲಿಫೆಂಟ್ ಮ್ಯಾಗಝೀನ್ . ೨೦೧೦ ರ ಫೆಬ್ರುವರಿ ೨೩ ರಂದು ಮರುಸಂಪಾದಿಸಲಾಯಿತು.
  30. Tim Desmond and Gail Laule (1994). org/pdf/Convert_ elephant _progamPC.pdf "Converting Elephant Programs to Protected Contact" (PDF). Active Environments, Inc. Retrieved May 3, 2010. {{cite web}}: Check |url= value (help)


ಮೂಲಗಳು

ಬದಲಾಯಿಸಿ
  • ಆಲ್ಸೇನ್, ಥಾಮಸ್ T. (ದ ರಾಯಲ್ ಹಂಟ್ ಇನ್ ಯೂರೇಷಯನ್ ಹಿಸ್ಟರಿ". ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮುದ್ರಣಾಲು, ಮೇ 2006. ISBN 0-912616-87-3.
  • ಷೆರ್ವರ್ಸ್, ನಾರ್ಮನ್. "ಎ ಮ್ಯಾನುಯಲ್ ಆಫ್ ಮೆಡಿಕಲ್ ಜ್ಯೂರಿಸ್ಪ್ರುಡೆನ್ಸ್ ಫಾರ್ ಬೆಂಗಾಲ್ ಎಂಡ್ ದ ನಾರ್ಥ್ ವೆಸ್ಟ್ರನ್ ಪ್ರಾವಿನ್ಸಸ್". ಕಾರ್ಬೆರಿ, 1856.
  • ಕಾಲಿನ್ಸ್, ಜಾನ್ ಜೋಸೆಫ್. "ಬಿಟ್ವೀನ್ ಅಥೆನ್ಸ್ ಎಂಡ್ ಜೆರೂಸೆಲಮ್: ಜ್ಯೂಯಿಷ್ ಐಡೆಂಟಿಟಿ ಇನ ದ ಹೆಲೆಸ್ಟಿಕ್ ಡಯಾಸ್ಪೊರಾ". Wm.ಬಿ. ಈರ್ಡ್ಮನ್ಸ್ ಪ್ರಕಾಶನ ಕಂಪನಿ, ಅಕ್ಟೋಬರ್ 1999. ISBN 0-912616-87-3.
  • ಎರಾಲಿ, ಅಬ್ರಹಾಂ. "ಮೊಘಲ್ ಥ್ರೋನ್: ದ ಸಾಗಾ ಆಫ್ ಇಂಡಿಯಾಸ್ ಗ್ರೇಟ್ ಎಂಪರರ್ಸ್", ಫೀನಿಕ್ಸ್ ಹೌಸ್, 2005. ISBN 0-912616-87-3.
  • ಹ್ಯಾಮಿಲ್ಟನ್, ಅಲೆಕ್ಸಾಂಡರ್. "ಎ ನ್ಯೂ ಅಕೌಂಟ್ ಆಫ್ ದ ಈಸ್ಟ್ ಇಂಡೀಸ್: ಕ್ಯಾಪ್ಟನ್ ಅಲೆಕ್ಸಾಂಡರ್ ಹ್ಯಾಮಿಲ್ಟನ್ ರು ಗಮನಿಸಿದ ಅಂಶಗಳು ಮತ್ತು ಟಿಪ್ಪಣಿಗಳು, 1688 ರಿಂದ 1723ರ ವರೆಗೆ". ಸಿ. ಹಿಚ್ ಮತ್ತು ಎ. ಮಿಲ್ಲರ್, 1744.
  • ಕೆರ್ರ್, ರಾಬರ್ಟ್. "ಎ ಜನರಲ್ ಹಿಸ್ಟರಿ ಎಂಡ್ ಕಲೆಕ್ಷನ್ ಆಫ್ ವಾಯೇಜಸ್ ಎಂಡ್ ಟ್ರಾವಲ್ಸ್". ಡಬ್ಲ್ಯೂ. ಬ್ಲ್ಯಾಕ್ ವುಡ್, 1811.
  • ಓಲಿವೆಲ್ಲೆ, ಪ್ಯಾಟ್ರಿಕ್ (ಅನುವಾದ). "ದ ಲಾ ಕೋಡ್ ಆಫ್ ಮನು". ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 2007. ISBN 0-674-44301-2
  • ಸ್ಖಿಮ್ಮೆಲ್, ಆನ್ ಮೇರಿ. "ದ ಎಂಪೈರ್ ಆಫ್ ದ ಗ್ರೇಟ್ ಮೊಘಲ್ಸ್: ಹಿಸ್ಟರಿ, ಆರ್ಟ್ ಎಂಡ್ ಕಲ್ಚರ್". ರಿಯಾಕ್ಷನ್ ಬುಕ್ಸ್, ಫೆಬ್ರವರಿ 2004. ISBN 1-86064-148-2
  • ಟೆನೆಟ್, ಎಮರ್ಸನ್ ಜೇಮ್ಸ್. "ಸಿಲೋನ್: ಎನ್ ಅಕೌಂಟ್ ಆಫ್ ದ ಐಲ್ಯಾಂಡ್ ಫಿಸಿಕಲ್, ಹಿಸ್ಟಾರಿಕಲ್ ಎಂಡ್ ಟೋಪೋಗ್ರಾಫಿಕಲ್". ಲಾಂಗ್ ಮನ್, ಗ್ರೀನ್, ಲಾಂಗ್ ಮನ್, ಮತ್ತು ರಾಬರ್ಟ್ಸ್, 1860.