ಆದಮ್ ಅಥವಾ ಅದಾಮ್ (ಆಂಗ್ಲ: Adam - ಅರಬ್ಬಿ آدم - ಹೀಬ್ರೂ אָדָם - ಆರಾಮೆಯಿಕ್ ܐܕܡ - ಗ್ರೀಕ್ Αδάμ) ಇಸ್ಲಾಮಿ, ಕ್ರೈಸ್ತ ಮತ್ತು ಯಹೂದಿ ನಂಬಿಕೆಯ ಪ್ರಕಾರ ಪ್ರಪ್ರಥಮ ಮಾನವ. ಮಾನಕುಲದ ಪಿತಾಮಹ. ದೇವರು ಪ್ರಪ್ರಥಮವಾಗಿ ಸೃಷ್ಟಿಸಿದ ಮನುಷ್ಯ. ತೋರಾ, ಬೈಬಲ್ ಹಳೆಯ ಒಡಂಬಡಿಕೆ ಮತ್ತು ಕುರ್‌ಆನ್‌ನಲ್ಲಿ ಇವರ ಬಗ್ಗೆ ಉಲ್ಲೇಖಗಳಿವೆ. ಅದೇ ರೀತಿ ಮೊರ್ಮೋನಿಯರು ಮತ್ತು ಬಹಾಯಿಗಳ ಪುಸ್ತಕಗಳಲ್ಲೂ ಉಲ್ಲೇಖಗಳಿವೆ.

ಆದಮ್
ಜನನ
ಸ್ವರ್ಗ
ಸಂಗಾತಿಹವ್ವಾ (ಈವ್)
ಪೋಷಕಇಲ್ಲ

ಆದಮ್ / ಆಡಮ್(ಅ) ಪ್ರಥಮ ಮಾನವರಾಗಿರುವರು. ಅವರು ಮಾನವ ಕುಲದ ಪಿತರಾಗಿರುತ್ತಾರೆ. ಹವ್ವಾ(ರ) ಮೊದಲ ಮಾತೆಯಾಗಿರುವರು. ಅವರಿಬ್ಬರನ್ನು ಅಲ್ಲಹನೂ ಸ್ರಷ್ಟಿಸಿ, ಸ್ವರ್ಗದಲ್ಲಿ ವಾಸಗೊಳಿಸಿದನು. ಅಲ್ಲಿ ಅವರು ಸುಖವಾಗಿ ಜೀವಿಸುತ್ತಿದ್ದರು. ಉತ್ತಮವಾದ ಹಣ್ಣು ಮತ್ತು ಪಾನೀಯಗಳನ್ನು ಅಲ್ಲಾಹನು ಅವರಿಗೆ ನೀಡಿದನು.ಆದರೂ ಒಂದು ವಿಶೇಷ ಮರವನ್ನು ತೋರಿಸುತ್ತಾ, ಅದರ ಹಣ್ಣನ್ನು ತಿನ್ನಬಾರದೆಂದು ಅಲ್ಲಾಹನು ಅವರಿಗೆ ಎಚ್ಚರಿಕೆ ನೀಡಿದ. ಇಬ್ಲೀಸನು ಮನುಷ್ಯನ ವೈರಿಯಾಗಿದ್ದಾನೆ. ಅವನು ಆದಮ್ ಮತ್ತು ಹವ್ವಾರನ್ನು ಬೇಟಿಯಾಗಿ "ನೀವು ಆ ಮರದ ಹಣ್ಣನ್ನು ತಿಂದರೆ ಸದಕಾಲ ಇಲ್ಲೇ ಆರಾಮವಾಗಿರಬಹುದು" ಎಂದು ಹೇಳಿದನು. ಅವರು ಇಬ್ಲೀಸನನ್ನು ಅನುಸರಿಸಿದರು. ಆತನ ಮೋಸಕ್ಕೆ ಒಳಗಾದರು. ಅಲ್ಲಾಹನು ನಿಷೇದಿಸಿದ ಹಣ್ಣನ್ನು ಅವರು ಕಿತ್ತು ತಿಂದರು. ನಂತರ ತಾವು ಮಾಡಿದ್ದು ತಪ್ಪೆಂದು ಮನವರಿಕೆಯಾಯಿತು. ಇದಕ್ಕಾಗಿ ಅವರು ಅಲ್ಲಾಹನೊಂದಿಗೆ ಕ್ಷಮೆ ಯಾಚಿಸಿದರು. ಅಲ್ಲಾಹನು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿದನು.

  • ‘‘ಇನ್ನು, ಓ ಆದಮ್, ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ನೆಲೆಸಿರಿ ಮತ್ತು ನೀವಿಬ್ಬರೂ (ಇಲ್ಲಿ) ನಿಮಗೆ ಇಷ್ಟವಾದುದನ್ನೆಲ್ಲಾ ತಿನ್ನಿರಿ. ಆದರೆ, ಆ ಮರದ ಹತ್ತಿರ ಹೋಗದಿರಿ – (ಹೋದರೆ) ನೀವಿಬ್ಬರೂ ಅಕ್ರಮಿಗಳಾಗುವಿರಿ.’’
  • ಕೊನೆಗೆ ಅವರ ಪಾಲಿಗೆ ಗುಪ್ತವಾಗಿದ್ದ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಲೆಂದು ಶೈತಾನನು ಅವರಿಬ್ಬರ ಮನದಲ್ಲಿ ಸಂಶಯವನ್ನು ಬಿತ್ತಿದ ನು.‘‘ನಿಮ್ಮ ಒಡೆಯನು ಆ ಮರದಿಂದ ನಿಮ್ಮಿಬ್ಬರನ್ನು ತಡೆದಿರುವುದು ನೀವಿಬ್ಬರೂ ಮಲಕ್‌ಗಳಾಗಬಾರದು ಅಥವಾ ಚಿರಂಜೀವಿಗಳಾಗಿ ಬಿಡಬಾರದು ಎಂಬ ಕಾರಣ ಕ್ಕಾಗಿ ಮಾತ್ರ’’ ಎಂದು ಅವನು (ಅವರೊಡನೆ) ಹೇಳಿದನು.ಹಾಗೆಯೇ ಅವನು, ‘‘ಖಂಡಿತವಾಗಿಯೂ ನಾನು ನಿಮ್ಮ ಹಿತೈಷಿ’’ ಎಂದು ಅವರ ಮುಂದೆ ಆಣೆ ಹಾಕಿದನು.

ಕೊನೆಗೆ ಅವನು ಮೋಸದಿಂದ ಅವರನ್ನು ಒಲಿಸಿಕೊಂಡನು ಮತ್ತು ಅವರಿಬ್ಬರೂ ಆ ಮರದ ಫಲವನ್ನು ಸವಿದಾಗ ಅವರ ಗುಪ್ತಾಂಗಗಳು ಅವರ (ಪರಸ್ಪರರ) ಮುಂದೆ ಪ್ರಕಟವಾಗಿ ಬಿಟ್ಟವು ಮತ್ತು ಅವರಿಬ್ಬರೂ ಸ್ವರ್ಗದ ಎಲೆಗಳಿಂದ ತಮ್ಮನ್ನು ಮುಚ್ಚಿಕೊಳ್ಳ ತೊಡಗಿದರು. (ಆಗ) ಅವರ ಒಡೆಯನು ಅವರನ್ನು ಕರೆದು ಹೇಳಿದನು; ನಾನು ನಿಮ್ಮನ್ನು ಆ ಮರದಿಂದ ತಡೆದಿರಲಿಲ್ಲವೇ? ಅಥವಾ ಸೈತಾನನು ನಿಮ್ಮಿಬ್ಬರ ಪಾಲಿಗೂ ಸ್ಪಷ್ಟ ಶತ್ರುವಾಗಿದ್ದಾನೆಂದು ನಾನು ನಿಮಗೆ ಹೇಳಿರಲಿಲ್ಲವೇ?

  • ಅವರಿಬ್ಬರೂ ಹೇಳಿದರು; ನಮ್ಮೊಡೆಯಾ! ನಾವು ನಮ್ಮ ಮೇಲೆಯೇ ಅಕ್ರಮವೆಸಗಿದೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮ್ಮ ಮೇಲೆ ಕರುಣೆ ತೋರದಿದ್ದರೆ ನಾವು ಖಂಡಿತ ನಷ್ಟಕ್ಕೊಳಗಾದವರ ಸಾಲಿಗೆ ಸೇರುವೆವು.
  • ಅವನು (ಅಲ್ಲಾಹನು) ಹೇಳಿದನು; ಇಳಿದು ಹೋಗಿರಿ. ನೀವು ಪರಸ್ಪರರ ಪಾಲಿಗೆ ಶತ್ರುಗಳು. ಒಂದು ನಿರ್ದಿಷ್ಟ ಕಾಲದ ತನಕ ನಿಮಗೆ ಭೂಮಿಯಲ್ಲಿ ನೆಲೆ ಇದೆ ಮತ್ತು ಸಾಧನಗಳಿವೆ. ಅದರಲ್ಲೇ ನೀವು ಬದುಕುವಿರಿ, ಅದರಲ್ಲೇ ನೀವು ಸಾಯುವಿರಿ ಮತ್ತು ಅದರೊಳಗಿಂದಲೇ ನಿಮ್ಮನ್ನು ಹೊರತೆಗೆಯಲಾಗುವುದು.ಆದಮ್ರ ಸಂತತಿಗಳೇ, ನಿಮಗೆ ನಾವು, ನಿಮ್ಮ ಮಾನದ ಭಾಗಗಳನ್ನು ಮುಚ್ಚುವ ಮತ್ತು ಅಲಂಕಾರವಾಗುವ ಉಡುಗೆಯನ್ನು ಇಳಿಸಿಕೊಟ್ಟಿರುವೆವು.ನಿಜವಾಗಿ ಧರ್ಮ ನಿಷ್ಠೆಯ ಉಡುಪೇ ಅತ್ಯುತ್ತಮ. ಇದು ಅವರು ಸ್ಮರಿಸುತ್ತಿರಲಿಕ್ಕಾಗಿ ಅಲ್ಲಾಹನು ಒದಗಿಸಿರುವ ಒಂದು ನಿದರ್ಶನ.
  • ಆದಮ್ರ ಸಂತತಿಗಳೇ, ಶೈತಾನನು ನಿಮ್ಮ ತಂದೆ ತಾಯಿಯನ್ನು ಸ್ವರ್ಗದಿಂದ ಹೊರ ಹಾಕಿಸಿದಂತೆ (ಹಾಗೂ) ಅವರ ಮೇಲಿಂದ ಅವರ ಉಡುಗೆ ಗಳನ್ನು ಕಳಚಿಸಿ ಅವರ ಮಾನದ ಭಾಗಗಳನ್ನು ಅವರ ಮುಂದೆ ಪ್ರಕಟಪಡಿಸಿದಂತೆ ಅವನು ನಿಮ್ಮನ್ನು ದಾರಿಗೆಡಿಸದಿರಲಿ. ಖಂಡಿತವಾಗಿಯೂ, ಅವನು ಮತ್ತು ಅವನ ಪಂಗಡದವರು, ನಿಮಗೆ ಅವರನ್ನು ನೋಡಲಾಗದ ಕಡೆಯಿಂದ, ನಿಮ್ಮನ್ನು ನೋಡುತ್ತಿರುತ್ತಾರೆ.ನಾವಂತುಸೈತಾನರನ್ನು,ವಿಶ್ವಾಸಿಗಳಲ್ಲದವರ ಪೋಷಕರಾಗಿಸಿದ್ದೇವೆ.

[ಕುರಾನ್, 7: 19-28]

"https://kn.wikipedia.org/w/index.php?title=ಆದಮ್&oldid=1221491" ಇಂದ ಪಡೆಯಲ್ಪಟ್ಟಿದೆ