ಅಲ್ಲಾ ಜಿಲಾಯ್ ಬಾಯಿ

 

ಅಲ್ಲಾ ಜಿಲಾಯ್ ಬಾಯಿ
೨೦೦೩ ರ ಭಾರತೀಯ ಅಂಚೆಚೀಟಿಯಲ್ಲಿ ಅಲ್ಲಾ ಜಿಲಾಯ್ ಬಾಯಿ
ಹಿನ್ನೆಲೆ ಮಾಹಿತಿ
ಜನನ(೧೯೦೨-೦೨-೦೧)೧ ಫೆಬ್ರವರಿ ೧೯೦೨
ಜೈಸಿಂಗ್ ದೇಸರ್ ಮಗ್ರಾ, ಬಿಕಾನೇರ್, ಬಿಕಾನೇರ್ ರಾಜ್ಯ, ಬ್ರಿಟಿಷ್ ಭಾರತ
ಮರಣ3 November 1992(1992-11-03) (aged 90)
ಸಂಗೀತ ಶೈಲಿಜಾನಪದ

ಅಲ್ಲಾ ಜಿಲಾಯ್ ಬಾಯಿ (೧ ಫೆಬ್ರವರಿ ೧೯೦೨ [] - ೩ ನವೆಂಬರ್ ೧೯೯೨) [] ಭಾರತದ ರಾಜಸ್ಥಾನದ ಜಾನಪದ ಗಾಯಕಿ. []

ಇವರು ಬಿಕಾನೆರ್‌ನಲ್ಲಿ ಗಾಯಕರ ಕುಟುಂಬದಲ್ಲಿ ಜನಿಸಿದರು. [] ಅವರು ತಮ್ಮ ೧೦ ನೇ ವಯಸ್ಸಿನಲ್ಲಿ ಮಹಾರಾಜ ಗಂಗಾ ಸಿಂಗ್ ಅವರ ದರ್ಬಾರ್‌ನಲ್ಲಿ ಹಾಡುತ್ತಿದ್ದರು. ಅವರು ಉಸ್ತಾದ್ ಹುಸೇನ್ ಬಕ್ಷ್ ಖಾನ್ ಅವರಿಂದ ಮತ್ತು ನಂತರ ಅಚ್ಚನ್ ಮಹಾರಾಜ್ ಅವರಿಂದ ಗಾಯನ ಪಾಠಗಳನ್ನು ಪಡೆದರು. ಒಂದು ಕಾಲದಲ್ಲಿ ಅವರು ಬಿಕಾನೇರ್‌ನ ಮಹಾರಾಜ ಗಂಗಾ ಸಿಂಗ್‌ನ ಆಸ್ಥಾನದಲ್ಲಿ ಹಾಡಿದ್ದರು. []

ಅವರು ಮಾಂಡ್, ಠುಮ್ರಿ, ಖಯಾಲ್ ಮತ್ತು ದಾದ್ರಾಗಳಲ್ಲಿ ಚೆನ್ನಾಗಿ ಪಾರಂಗತಳಾಗಿದ್ದರು . [] ಅವರ ಅತ್ಯಂತ ಪ್ರಸಿದ್ಧ ಕೃತಿ ಕೇಸರಿಯಾ ಬಾಲಮ್ . [] ಇವರಿಗೆ ೧೯೮೨ ರಲ್ಲಿ, ಭಾರತ ಸರ್ಕಾರವು ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು.[] []ಇದು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದೆ. ಅವರಿಗೆ ೧೯೮೮ ರಲ್ಲಿ ಜಾನಪದ ಸಂಗೀತಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಮರಣೋತ್ತರವಾಗಿ ೨೦೧೨ ರಲ್ಲಿ ರಾಜಸ್ಥಾನ ರತ್ನ ಪ್ರಶಸ್ತಿಯನ್ನು ನೀಡಲಾಯಿತು. []

ಉಲ್ಲೇಖಗಳು

ಬದಲಾಯಿಸಿ
  1. "Allah Jilai Bai". www.mapsofindia.com. Retrieved 2020-03-08.
  2. ೨.೦ ೨.೧ ೨.೨ ೨.೩ ೨.೪ ೨.೫ "Allah Jilai Bai". www.mapsofindia.com. Retrieved 2020-03-08."Allah Jilai Bai". www.mapsofindia.com. Retrieved 8 March 2020.
  3. "Govt names seven for Rajasthan Ratna award". The Times of India (in ಇಂಗ್ಲಿಷ್). 2012-03-31. Retrieved 2023-01-12.
  4. Padma Shri Awardees. india.gov.in
  5. "Govt names seven for Rajasthan Ratna award". The Times of India (in ಇಂಗ್ಲಿಷ್). 2012-03-31. Retrieved 2023-01-12."Govt names seven for Rajasthan Ratna award". The Times of India. 31 March 2012. Retrieved 12 January 2023.


ಬಾಹ್ಯ ಕೊಂಡಿಗಳು

ಬದಲಾಯಿಸಿ