ಅಬ್ದುಲ್ ಮ್ಯಾಟಿನ್ ಚೌಧರಿ (ವಿದ್ವಾಂಸ)


ಅಬ್ದುಲ್ ಮ್ಯಾಟಿನ್ ಚೌಧರಿ (ಬಂಗಾಳಿ:আব্দুল মতিন চৌধুরী; ೧೯೧೫ – ೧೯ ಫೆಬ್ರವರಿ ೧೯೯೦), ಜನಪ್ರಿಯವಾಗಿ ಶೇಖ್-ಇ-ಫುಲ್ಬರಿ (ಬಂಗಾಳಿ:শায়খে ফুলবাড়ী, 'ಫುಲ್ಬರಿಯ ಶೇಖ್'), ಎಂದು ಕರೆಯಲ್ಪಡುವ ಇವರು ಬಂಗಾಳಿ ಧಾರ್ಮಿಕ ವಿದ್ವಾಂಸ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದರು. ಹುಸೇನ್ ಅಹ್ಮದ್ ಮದನಿಯವರ ಶಿಷ್ಯರಾಗಿದ್ದ ಅವರು ನಂತರ ತಮ್ಮದೇ ಆದ ಅನುಯಾಯಿಗಳನ್ನು ಗಳಿಸಿದರು. ಹಾಗೂ ಅವರು ತಮ್ಮನ್ನು ಭಾರತದ ವಿಭಜನೆ ಮತ್ತು ಬಾಂಗ್ಲಾದೇಶದ ಸ್ವಾತಂತ್ರ್ಯದ ಸಮಯದಲ್ಲಿ ರಾಜಕೀಯವಾಗಿ ತೊಡಗಿಸಿಕೊಂಡಿದ್ದರು.

ಅಬ್ದುಲ್ ಮ್ಯಾಟಿನ್ ಚೌಧರಿ
ಶೀರ್ಷಿಕೆಮೌಲಾನಾ, ಅಲ್ಲಾಮಾ, ಶೇಖ್-ಇ-ಫುಲ್ಬರಿ
ವೈಯಕ್ತಿಕ
ಜನನ೧೯೧೫
ಗೋಲಪ್‌ಗಂಜ್‌, ಅಸ್ಸಾಂ ಪ್ರಾಂತ್ಯ, ಬ್ರಿಟಿಷ್ ಭಾರತ
ಮರಣ19 February 1990(1990-02-19) (aged 74–75)
ಸಿಲ್ಹೆಟ್ ವಿಭಾಗ, ಬಾಂಗ್ಲಾದೇಶ
Resting placeಮೀರ್ ಹಜಾರಾ ಸ್ಮಶಾನ, ಫುಲ್ಬರಿ, ಸಿಲ್ಹೆಟ್ ವಿಭಾಗ, ಬಾಂಗ್ಲಾದೇಶ
ಧರ್ಮಇಸ್ಲಾಂ ಧರ್ಮ
Eraಆಧುನಿಕ
ಪಂಗಡಸುನ್ನಿ ಇಸ್ಲಾಂ
ನ್ಯಾಯಶಾಸ್ತ್ರಹನಫಿ
ನಂಬಿಕೆಮಾತುರಿಡಿ
ಚಳುವಳಿದೇವಬಂದಿ
Alma materದಾರುಲ್ ಉಲೂಮ್ ದೇವಬಂದ್
ತರೀಕಾಚಿಸ್ತಿ (ಸಬಿರಿ-ಇಮ್ದಾದಿ)
ನಕ್ಷಬಂದಿ
ಖಾದ್ರಿ
ಸುಹ್ರವರ್ದಿ
ವೃತ್ತಿಇಸ್ಲಾಮಿಕ್ ವಿದ್ವಾಂಸ, ರಾಜಕೀಯ ಕಾರ್ಯಕರ್ತ
Relativesಎಜಾಜ್ ಅಹ್ಮದ್ ಚೌಧರಿ[]
ಹಿರಿಯ ಪೋಸ್ಟಿಂಗ್
Teacherಹುಸೇನ್ ಅಹ್ಮದ್ ಮದನಿ
Disciples
  • ಜಿಯಾ ಉದ್ದೀನ್
Influenced
  • ನೂರ್ ಉದ್ದೀನ್ ಗೊಹೋರ್ಪುರಿ
    ಎಮ್ದಾದುಲ್ ಹಕ್
    ಅಮೀನ್ ಉದ್ದೀನ್ ಶೇಖ್-ಎ-ಕೇಟಿಯಾ
ವೃತ್ತಿಇಸ್ಲಾಮಿಕ್ ವಿದ್ವಾಂಸ, ರಾಜಕೀಯ ಕಾರ್ಯಕರ್ತ

ಆರಂಭಿಕ ಜೀವನ ಮತ್ತು ಹಿನ್ನೆಲೆ

ಬದಲಾಯಿಸಿ

ಅಬ್ದುಲ್ ಮ್ಯಾಟಿನ್ ಚೌಧರಿ ಅವರು ೧೯೧೫ ರಲ್ಲಿ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಗೋಲಪ್‌ಗಂಜ್‌ನ ಫುಲ್ಬರಿ ಗ್ರಾಮದಲ್ಲಿ ಜಮೀನ್ದಾರ ಕುಟುಂಬದಲ್ಲಿ ಜನಿಸಿದರು.[] ಅವರು ತಮ್ಮ ಪೋಷಕರಾದ ರಿಜ್ವಾನ್ ಉದ್ದೀನ್ ಮತ್ತು ಖೈರ್-ಉನ್-ನೆಸ್ಸಾ ಚೌಧರಿಯವರ ಆರು ಮಕ್ಕಳಲ್ಲಿ ಕಿರಿಯರಾಗಿದ್ದರು. ಅವರ ತಂದೆಯ ಮೂಲಕ, ಅವರು ನಾಲ್ಕನೇ ರಶೀದುನ್ ಖಲೀಫ್, ಅಲಿ ಇಬ್ನ್ ಅಬಿ ತಾಲಿಬ್ ಅವರ ಸೋದರಳಿಯ ಅಬ್ದುಲ್ಲಾ ಇಬ್ನ್ ಜಾಫರ್ ಅವರ ವಂಶಸ್ಥರು ಎಂದು ಹೇಳಿಕೊಂಡರು.[] ಚೌಧರಿ ಅವರ ವಂಶಾವಳಿಯು ಕೆಳಕಂಡಂತಿದೆ: ಅಬ್ದುಲ್ ಮ್ಯಾಟಿನ್ ಚೌಧರಿ, ರಿಜ್ವಾನ್ ಉದ್ದೀನ್ ಚೌಧರಿ ಅವರ ಮಗ, ಹೈದರ್ ಅಲಿ ಅವರ ಮಗ, ಮುಹಮ್ಮದ್ ಅಬ್ದುಲ್ ಲತೀಫ್ ಅವರ ಮಗ, ಮುಹಮ್ಮದ್ ನಾಝಿಮ್ ಅವರ ಮಗ, ಮುಹಮ್ಮದ್ ಜಮಾ ಅವರ ಮಗ, ತಾಹಿರ್ ಮುಹಮ್ಮದ್ ಅವರ ಮಗ, ಮುಹಮ್ಮದ್ ಡ್ಯಾನಿಶ್ ಅವರ ಮಗ, ಅಹ್ಮದ್ ಖಾನ್ ಅವರ ಮಗ, ಕರೀಂ ಖಾನ್ ಅವರ ಮಗ, ಮುಮಿನ್ ಖಾನ್ ಅವರ ಮಗ, ದುವಾ ಖಾನ್ ಅವರ ಮಗ, ಖಲಂದರ್ ಹಜಾರ ಅವರ ಮಗ, ಬೊಲ್ಲಿ ಹಜಾರ ಅವರ ಮಗ, ಮೀರ್ ಹಜಾರ ಅವರ ಮಗ. ಅಫ್ಘಾನಿಸ್ತಾನದಿಂದ ವಲಸೆ ಬಂದ ನಂತರ ಮತ್ತು ಗೌರ್‌ನ ಅಮಿಲ್‌ನ (ಆಡಳಿತಾಧಿಕಾರಿಯ) ಮಗಳನ್ನು ಮದುವೆಯಾದ ನಂತರ ಮೊಘಲರು ಫುಲ್ಬರಿಯ ಜಾಗೀರ್‌ಗಳನ್ನು ಇವರಿಗೆ ನೀಡಿದರು.[]

ಎಂಟನೇ ವಯಸ್ಸಿನಲ್ಲಿ ಅನಾಥರಾದ ನಂತರ, ಚೌಧರಿ ಆರಂಭದಲ್ಲಿ ತನ್ನ ಅಕ್ಕನೊಂದಿಗೆ ವಾಸಿಸುತ್ತಿದ್ದರು, ನಂತರ ರೊನೊಕಾಲಿ ಗ್ರಾಮದಲ್ಲಿರುವ ತನ್ನ ಸೋದರ ಮಾವನ ಆರೈಕೆಯಲ್ಲಿ ಬೆಳೆದರು.[] ೧೯೨೮ ರಲ್ಲಿ, ಅವರ ದಿವಂಗತ ತಂದೆಯೊಂದಿಗೆ ಪರಿಚಿತರಾಗಿದ್ದ ಹುಸೇನ್ ಅಹ್ಮದ್ ಮದನಿಗೆ ಅವರನ್ನು ಪರಿಚಯಿಸಲಾಯಿತು. ಮದನಿಯವರ ಧಾರ್ಮಿಕ ಭಕ್ತಿ ಮತ್ತು ಉತ್ಸಾಹದಿಂದ ಪ್ರಭಾವಿತರಾದ ಚೌಧರಿ, ಅವರೊಂದಿಗೆ ಉತ್ತರ ಪ್ರದೇಶಕ್ಕೆ ಮರಳಿದರು. ಮತ್ತು ಅಲ್ಲಿ ಅವರು ಪ್ರಮುಖ ಇಸ್ಲಾಮಿಕ್ ವಿಶ್ವವಿದ್ಯಾಲಯವಾದ ದಾರುಲ್ ಉಲೂಮ್ ದೇವಬಂದ್‌ಗೆ ದಾಖಲಾದರು. ಈ ಸಮಯದಲ್ಲಿ ಅವರು ಮದನಿಯೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡರು. ಅವರು ತಮ್ಮ ಶಿಕ್ಷಣದ ಸಮಯದಲ್ಲಿ ಮದನಿಯವರ ಮನೆಯಲ್ಲಿಯೇ ಇದ್ದರು. ನಂತರ ಅವರ ಧಾರ್ಮಿಕ ಶಿಷ್ಯರಾದರು. ಚೌಧರಿ ಅವರು ಒಂಬತ್ತು ವರ್ಷಗಳ ನಂತರ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ಇವರು ಹದೀಸ್, ತಫ್ಸಿರ್ ಮತ್ತು ಅರೇಬಿಕ್ ಸಾಹಿತ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. []

ರಾಜಕೀಯ ಮತ್ತು ಧಾರ್ಮಿಕ ವೃತ್ತಿ

ಬದಲಾಯಿಸಿ

ಮದನಿಯ ಸೂಚನೆಯ ಮೇರೆಗೆ ಅವರು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು ಮತ್ತು ನಾಯಕರಾದರು. ೧೯೪೭ ರಲ್ಲಿ ಭಾರತದ ವಿಭಜನೆಯ ನಂತರ, ಚೌಧರಿ ಹೊಸದಾಗಿ ರಚಿಸಲಾದ ಪಾಕಿಸ್ತಾನದ ಅಭಿವೃದ್ಧಿಯನ್ನು ಬೆಂಬಲಿಸಿದರು. ಇವರು ಜಮಿಯತ್ ಉಲೇಮಾ-ಎ-ಹಿಂದ್ ಸಂಘಟನೆಯ ನಾಯಕತ್ವ ವಹಿಸಿ ಕೆಲಸ ಮಾಡಿದರು. ೧೯೭೧ ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯವನ್ನು ಘೋಷಿಸಿದ ನಂತರ, ಅವರು ಪಾಕಿಸ್ತಾನಿ ಮಿಲಿಟರಿಯಿಂದ ಜನರ ವಿರುದ್ಧ ನಡೆದ ಹಿಂಸಾಚಾರದ ಘಟನೆಗಳನ್ನು ತಡೆಯಲು ಪ್ರಯತ್ನಿಸಿದರು. ರೊನೊಕಾಲಿಯಲ್ಲಿ ತಮ್ಮ ಐವತ್ತು ಸಂಬಂಧಿಕರನ್ನು ಸೈನ್ಯವು ಮೂಲೆಗುಂಪು ಮಾಡಿದಾಗ, ಚೌಧರಿ ಅವರನ್ನು ರಕ್ಷಿಸಲು ಸೈನಿಕರಿಗೆ ಯಶಸ್ವಿಯಾಗಿ ಮನವಿ ಮಾಡಿದರು. ಮತ್ತೊಂದು ಸಂದರ್ಭದಲ್ಲಿ, ಇದೇ ರೀತಿಯ ಪರಿಸ್ಥಿತಿಯಲ್ಲಿ ಅವರು ಮಧ್ಯಪ್ರವೇಶಿಸಿ ಏಳು ಹಿಂದೂಗಳ ಜೀವಗಳನ್ನು ಉಳಿಸಿದರು. ನಂತರ ಚೌಧರಿ ಅವರು ಬಾಂಗ್ಲಾದೇಶ ಖಿಲಾಫತ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಹಫೀಝಿ ಹುಜೂರ್ ಅವರ ನೇತೃತ್ವದಲ್ಲಿ ಕೆಲಸ ಮಾಡಿದರು ಮತ್ತು ಅದರ ಅನೇಕ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದರು. []

೧೯೬೬ ಮತ್ತು ೧೯೬೭ ರಲ್ಲಿ, ಚೌಧರಿ ಅವರು ತಬ್ಲೀಘಿ ಜಮಾತ್ ಸಂಘಟನೆಯ ಭಾಗವಾಗಿ ವ್ಯಾಪಕವಾದ ಮಿಷನರಿ ಕೆಲಸವನ್ನು ಕೈಗೊಂಡರು. ಅವರ ಪ್ರವಾಸಗಳಲ್ಲಿ ಟರ್ಕಿ, ಯುನೈಟೆಡ್ ಕಿಂಗ್‌ಡಂ, ಯುಗೊಸ್ಲಾವಿಯ, ಇರಾನ್, ಸೌದಿ ಅರೇಬಿಯಾ ಮತ್ತು ಜಪಾನ್ ಸೇರಿದ್ದವು.[] ಅವರು ಬಂಗಾಳಿ, ಉರ್ದು, ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉಪನ್ಯಾಸಗಳನ್ನು ನೀಡುವ ಗಮನಾರ್ಹ ವಾಗ್ಮಿಯಾಗಿದ್ದರು. ಚೌಧರಿ ಅವರು ಬಡವರ ಬೆಂಬಲದಿಂದಾಗಿ ಲೋಕೋಪಕಾರಿಯಾಗಿ ಗುರುತಿಸಲ್ಪಟ್ಟರು. ಮತ್ತು ಅವರ ಪ್ರಕಟಣೆಯಾದ ಶಟರ್ ಮಾಪ್ಕಟಿ (ಸತ್ಯದ ಪ್ರಮಾಣ) ಯಿಂದ ಬರಹಗಾರರಾಗಿ ಪ್ರಶಂಸೆಯನ್ನು ಪಡೆದರು. [] ಅವರು ಅಂತಿಮವಾಗಿ ಎಮ್ದಾದುಲ್ ಹಕ್, ನೂರ್ ಉದ್ದೀನ್ ಗೊಹೋರ್ಪುರಿ ಮತ್ತು ಅಮೀನ್ ಉದ್ದೀನ್ ಶೇಖ್-ಎ-ಕೇಟಿಯಾ ಸೇರಿದಂತೆ ಅವರ ಶಿಷ್ಯರು ಮತ್ತು ವಿದ್ಯಾರ್ಥಿಗಳೊಂದಿಗೆ ವ್ಯಾಪಕವಾದ ಧಾರ್ಮಿಕ ಅನುಸರಣೆಯನ್ನು ನಿರ್ಮಿಸಿದರು.

ಮರಣ ಮತ್ತು ಪರಂಪರೆ

ಬದಲಾಯಿಸಿ

ಚೌಧರಿ ೧೯ ಫೆಬ್ರವರಿ ೧೯೯೦ ರಂದು ನಿಧನರಾದರು ಮತ್ತು ಅವರ ಪತ್ನಿ ಮತ್ತು ಏಳು ಮಕ್ಕಳನ್ನು ಅಗಲಿದ್ದರು. ಫುಲ್ಬರಿಯಲ್ಲಿರುವ ಅವರ ಪೂರ್ವಜರ ಸ್ಮಶಾನದಲ್ಲಿರುವ ಅವರ ಸಮಾಧಿಗೆ, ಗೊಹೋರ್ಪುರಿ ನೇತೃತ್ವದಲ್ಲಿ ಅವರ ಸಾವಿರಾರು ಅನುಯಾಯಿಗಳು ಅಂತ್ಯಕ್ರಿಯೆಯ ಪ್ರಾರ್ಥನೆಯೊಂದಿಗೆ ಹೋಗಿದ್ದರು. [] [] ನಂತರ ಅಲ್ಲಮಾ ಅಬ್ದುಲ್ ಮೋತಿನ್ ಚೌಧರಿ ಶೇಖ್-ಎ-ಫುಲ್ಬರಿ ಫೌಂಡೇಶನ್ ಅನ್ನು ಅವರ ಗೌರವಾರ್ಥವಾಗಿ ಹಲವಾರು ಮಾಜಿ ಶಿಷ್ಯರಿಂದ ಸ್ಥಾಪಿಸಲಾಯಿತು. []

ಉಲ್ಲೇಖಗಳು

ಬದಲಾಯಿಸಿ
  1. al-Mahmud & Hasan (2008, p. 74) harvtxt error: multiple targets (2×): CITEREFal-MahmudHasan2008 (help)
  2. al-Mahmud, A.H.; Hasan, Syed Mahmudul (2008). সুন্নাতে নববীর মূর্ত প্রতীক: মাওলানা আব্দুল মতিন চৌধুরী শায়খে ফুলবাড়ী রাহ (in Bengali). Sylhet: al-Medina Offset Press. pp. 78–81.
  3. ೩.೦ ೩.೧ ೩.೨ ೩.೩ al-Mahmud & Hasan (2008) harvtxt error: multiple targets (2×): CITEREFal-MahmudHasan2008 (help)
  4. ೪.೦ ೪.೧ ೪.೨ ೪.೩ al-Mahmud, A.H.; Hasan, Syed Mahmudul (2008). সুন্নাতে নববীর মূর্ত প্রতীক: মাওলানা আব্দুল মতিন চৌধুরী শায়খে ফুলবাড়ী রাহ (in Bengali). Sylhet: al-Medina Offset Press. pp. 78–81.al-Mahmud, A.H.; Hasan, Syed Mahmudul (2008). সুন্নাতে নববীর মূর্ত প্রতীক: মাওলানা আব্দুল মতিন চৌধুরী শায়খে ফুলবাড়ী রাহ (in Bengali). Sylhet: al-Medina Offset Press. pp. 78–81.
  5. Chowdhury, Mustansirur Rahman; Chowdhury, Fakhrul Islam (1992). ফুলবাড়ী: ইতিহাস খ্যাত একটি গ্রাম (in Bengali).
  6. Shaikh-e Fulbari Foundation.