ಅರಬ್ಬೀ ಸಾಹಿತ್ಯ
ಅರಬ್ಬೀ ಸಾಹಿತ್ಯ : ಪ್ರಪಂಚದ ಎಲ್ಲ ಶೇಷ್ಠ ಸಾಹಿತ್ಯಗಳಂತೆ, ಇಸ್ಲಾಮಿಗೆ ಹಿಂದಿನ ಅರಬ್ಬರ ಬೌದ್ಧಿಕ ಜೀವನ ಕಾವ್ಯರೂಪದಲ್ಲಿ ಪ್ರಕಟವಾಯಿತು. ಧರ್ಮಬಾಹಿರರು ತಮ್ಮ ಆವೇಶಕಾಲದಲ್ಲಿ ಉಚ್ಚರಿಸುತ್ತಿದ್ದ ಅಶರೀರವಾಣಿಗಳ ಪ್ರಾಸಬದ್ಧ ಗದ್ಯದಲ್ಲಿ ಅರಬೀ ಕಾವ್ಯ ಪ್ರಾರಂಭವಾಯಿತು. ಕಾಲಕ್ರಮದಲ್ಲಿ ಅದು ಹೆಚ್ಚು ಛಂದೋಬದ್ಧ ರೂಪ ಪಡೆಯಿತು. ತದನಂತರ ಅದು 16 ಮುಖ್ಯ ಛಂದಸ್ಸುಗಳಾಗಿವರ್ಗೀಕೃತವಾಯಿತು. ಅರಬ್ಬರ ಪ್ರತಿಭಾಸಂಪನ್ನ ಸಾಹಿತ್ಯ ಈ ಛಂದಸ್ಸುಗಳ ಚೌಕಟ್ಟಿನಲ್ಲಿ ಮೈದೋರಿತು. ಕಾಲಕ್ಕೆ ವಶವಾಗಿ ನಾಶಹೊಂದದೆ ಉಳಿದಿರುವ ಈ ಕಾವ್ಯದ ತುಣುಕುಗಳು ಪ್ರ.ಶ. 5ನೆಯ ಶತಮಾನಕ್ಕೆ ಈಚಿನವು . ನಮಗೆ ದೊರೆತಿರುವ ಅತ್ಯಂತ ಪ್ರಾಚೀನ ಪದ್ಯ ಗಳು ಆ ಕವಿಗಳಿಗಿದ್ದ ಭಾಷಾಪ್ರಭುತ್ವ ಮತ್ತು ಉಕ್ತಿಕೌಶಲವನ್ನು ತೋರುತ್ತವೆ. ಉಕಾಜ್ ಮತ್ತು ಮೆಕ್ಕ ಪಟ್ಟಣಗಳಲ್ಲಿ ಜರುಗುತ್ತಿದ್ದ ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗಳು ಕಲೆತು ಕವಿತ್ವದಲ್ಲಿ ಒಬ್ಬರೊಡನೊಬ್ಬರು ಸ್ಪರ್ಧಿಸುತ್ತಿದ್ದುದೂ ಇದಕ್ಕೆ ಕಾರಣವಾಗಿರಬಹುದು. ಆದರೆ ಸ್ಥಳೀಯವಾದ ಅನೇಕ ಉಪಬಾಷೆಗಳಿದ್ದರೂ ಅರೇಬಿಯದ ಎಲ್ಲ ಭಾಗಗಳ ಕವಿಗಳೂ ತಮ್ಮ ಕವಿತ್ವಕ್ಕೆ ಒಂದೇ ವಿಧವಾದ ಭಾಷೆಯನ್ನು ಉಪಯೋಗಿಸಿರುವ ಅಂಶ ಒಂದು ಒಗಟಾಗಿಯೇ ಉಳಿದಿದೆ. ಇವರು ರಚಿಸಿದ ಕವಿತೆಗಳಿಗೆ ಕಾಸಿಡ (ಪ್ರಗಾಥ) ಗಳೆಂದು ಹೆಸರು. ಅವುಗಳ ಪ್ರಮಾಣ 60 ಸಾಲುಗಳಿಂದ ಹಿಡಿದು 100 ಸಾಲುಗಳವರೆಗೆ, ಅತ್ಯಂತ ಪ್ರಾಚೀನ ಕಾಲದಿಂದಲೂ ಪ್ರಗಾಥಕ್ಕೆ ಒಂದು ಸಾಂಪ್ರದಾಯಿಕವಾದ ಕವಿತಾ ತಂತ್ರವಿದೆ. ಅದು ಸಾಮಾನ್ಯವಾಗಿ, ಪಾಂಥನೊಬ್ಬ ತನ್ನ ಮಿತ್ರರೂಂದಿಗೆ ಸುಖಜೀವನ ನಡೆಸಿ ಸ್ವಗ್ರಾಮಕ್ಕೆ ಹಿಂದಿರುಗಿ ಬಂದು, ಅದು ಪಾಳು ಬಿದ್ದಿರುವುದನ್ನೂ, ಮಿತ್ರರಿಂದ ತಾನು ಅಗಲಿದುದನ್ನೂ ನೆನೆದುಕೊಂಡು ಪರಿತಪಿಸುವುದರ ವರ್ಣನೆಯಿಂದ ಪ್ರಾರಂಭವಾಗುತ್ತದೆ. ಬಳಿಕ ಆತ ಅದರ ಹಿಂದಿನ ನಿರ್ಮಲ ಸೌಂದರ್ಯವನ್ನು ಈಗಣ ಅದರ ಉಳಿಕೆಯ ಹಾಳುತನ ದೊಂದಿಗೆ ಹೋಲಿಸುತ್ತಾನೆ; ಅಂದಿನ ಸುಖಗಳನ್ನು ನೆನೆಯುತ್ತಾನೆ, ಕಾಸಿಡದಲ್ಲಿ ಮರಳು ಗಾಡಿನ ಮತ್ತು ಬೆದೂಯಿನ್ ಸಮಾಜದ ವಿವಿಧ ಮುಖಗಳು, ಪಾಂಥನ ಒಂಟೆ ಅಥವಾ ಕುದುರೆ, ಇತರ ಪ್ರಾಣಗಳ ಜೀವೋಲ್ಲಾಸ, ಮೃಗಯಾವಿನೋದ, ಇಲ್ಲದಿದ್ದರೆ ಚಂಡಮಾರುತದ ಕುಶಲವರ್ಣನೆಇತ್ಯಾದಿ ಚಿತ್ರಗಳು ಸಾಲುಸಾಲಾಗಿ ಬರುತ್ತವೆ. ಕಥೆಯ ಮುಖ್ಯ ವಿಷಯವೇನೇ ಇರಲಿ ಈ ನಿಯತಪ್ರಸಂಗಗಳನ್ನು (ಅಥವಾ ಪ್ರಣಯ ಪೀಠಿಕೆಯನ್ನು) ಬಿಡದೆ ಹೇಳುತ್ತಾನೆ. ಈ ಕಾಸಿಡಗಳಲ್ಲಿ ಕೆಲವು (ಅವುಗಳ ಸಂಖ್ಯೆ 7 ಅಥವಾ 10) ಅವುಗಳ ಆಂತರಿಕ ಸೌಂದರ್ಯಕ್ಕಾಗಿಯೂ ಕ¯ಗಾಗಿಯೂ ಸಾಹಿತ್ಯ ಸಮ್ಮೇಳನಗಳಲ್ಲಿ ಬಹುಮಾನಿತವಾದವೆಂದು ಊಹಿಸಲಾಗಿದೆ. ಅವನ್ನು ಮು ಅಲ್ಲಾಕತ್ (ಎಂದರೆ ತಮ್ಮ ಅಮೋಘವಾದ ಗುಣದ ದೆಸೆಯಿಂದ ಕಾಬಾದ ಮೇಲೆ ನೇತು ಹಾಕಿದ ಪದ್ಯಗಳು) ಎಂದು ಕರೆಯಲಾಗಿದೆ. ಇಸ್ಲಾಮಿಗೆ ಪೂರ್ವಭಾವಿಯಾಗಿ ಅರೇಬಿಯದ ಕೆಲವು ಆದರ್ಶಕವಿಗಳಲ್ಲಿ ಪ್ರಥಮ ಸ್ಥಾನ ಇಮ್-ರಉಲ್-ಕೈಸ್‍ಗೆ (560) ದೊರೆತಿದೆ. ಆತ ದೇಶಭ್ರಷ್ಟನಾದ ದೊರೆಯೊಬ್ಬನ ಮಗ; ಜೀವಮಾನದ ಕೊನೆಯ ವರ್ಷಗಳನ್ನು ತಂದೆಯ ಮರಣಕ್ಕೆ ಮುಯ್ಯಿ ತೀರಿಸುವ ಉದ್ಯಮದಲ್ಲಿ ಕಳೆದ ಅವನ ಮು ಅಲ್ಲಾಕತ್ (ಪ್ರಗಾಥ) ಮರಳುಗಾಡಿನ ವರ್ಣನೆಗಾಗಿಯೂ ಮುಚ್ಚುಮರೆಯಿಲ್ಲದ ಪ್ರಣಯ ಪೀಠಿಕೆಗಾಗಿಯೂ ಪ್ರಸಿದ್ಧವಾಗಿದೆ. ಇವರಂತೆ ಲಬೀದ್ (675), ತರಾಫ (550), ತ’ಅಬ್ಬತ ಷರ್ರ (530), ಅಷ್-ಷನ್ಫಾರ (510) ಅನರ (615), ಮೊದಲಾದ ದರೋಡೆಕಾರ (ರಾಬರ್) ಕವಿಗಳು ಮರಳುಗಾಡಿನ ಜೀವನದ ಚಿತ್ರಗಳನ್ನು ಕಳಕಳಿಸುವಂತೆ ವರ್ಣಿಸಿದ್ದಾರೆ. ಅಮ್ರ್-ಬ್-ಕುಲ್‍ತುಮ್ (600), ಹರಿತ್-ಬ್-ಹಿಲ್ಲಿಜ್ಜ (580) ಎಂಬುವರು ತಮ್ಮ ಕುಲದವರ ಮಹತ್ ಕಾರ್ಯಗಳನ್ನು ಕುರಿತು ಹಾಡುಗಳನ್ನು ಕಟ್ಟಿದ್ದಾರೆ. ಜುಹೇರ್‍ನಿಗೆ (631) ಉಪದೇಶ ಮಾಡುವುದರಲ್ಲೂ ಧರ್ಮವನ್ನು ಕುರಿತು ಹೇಳುವುದರಲ್ಲೂ ಇಷ್ಟ. ಆತ ತನ್ನ ಪದ್ಯಗಳನ್ನು ತಮ್ಮ ಭ್ರಾತೃಘಾತಕ ವೈರವನ್ನು ಬಗೆಹರಿಸಿಕೊಂಡ ಇಬ್ಬರು ಕುಲನಾಯಕರ ಪ್ರಶಂಸೆಗೆ ಮೀಸಲಿಟ್ಟಿದ್ದಾನೆ. ಇಸ್ಲಾಮಿಗೆ ಪೂರ್ವದ ಅರೇಬಿಯದಲ್ಲಿ ಅರಬ್ಬರ ಎರಡು ರಾಜಾಸ್ಥಾನಗಳಿದ್ದುವು. ಫಸ್ಸನಿದ್ ವಂಶದವರು ಆಳುತ್ತಿದ್ದ ಪ್ರದೇಶ ಅರೇಬಿಯದ ಈಶಾನ್ಯ ಭಾಗಗಳಲ್ಲಿ ಹಬ್ಬಿತ್ತು. ಲಖ್ಮಿದ್ ವಂಶದವರು ಆಳುತ್ತಿದ್ದ ಪ್ರದೇಶ ಯೂಫಟೀಸ್ ನದಿಯ ಪಶ್ಚಿಮಕ್ಕೆ ಹರಡಿತ್ತು. ಫಸ್ಸನಿದ್ ಭಾಗದ ಸಂಸ್ಕೃತಿಯಿಂದ ಪ್ರಭಾವಿತವಾಯಿತು. ಎರಡು ದರ್ಬಾರುಗಳೂ ರೋಮ್ ಮತ್ತು ಪರ್ಷಿಯಗಳ ನಡುವೆ ಜರುಗಿದ ಯುದ್ಧದಲ್ಲಿ ಮುಖ್ಯ ಪಾತ್ರವನ್ನು ವಹಿಸಿದವು . ಈ ರಾಜ್ಯಗಳು ತಮ್ಮ ರಾಜಸಭೆಗೆ ಬರುತ್ತಿದ್ದ ಅನೇಕ ಕವಿಗಳನ್ನು ಪೋತ್ಸಾಹಿಸು ತ್ತಿದ್ದುವು. ಈ ರೀತಿಯಲ್ಲಿ ಪ್ರಗಾಥ ಬೆದೂಯಿನ್ ಜನಾಂಗದ ಉತ್ತಮ ಕಾವ್ಯವಾಗಿ ಬೆಳೆದುದಲ್ಲದೆ ರಾಜಸಭೆಗೆ ಯೋಗ್ಯವಾದ ರಚನೆಯೂ ಆಯಿತು. ಈ ಕಾರಣದಿಂದ ಮೆಸಪೊಟೇಮಿಯ ಅರಸರ ಪ್ರಭಾವಕ್ಕೊಳಗಾದ ಕವಿಗಳ ಒಂದು ಪಂಗಡವೂ ಕ್ರೈಸ್ತರಾದ ಸಿರಿಯ ದೇಶದ ಫಸ್ಸನಿದ್ ದೊರೆಗಳ ಆಶಯಕ್ಕೆ ಸೇರಿದ ಕವಿಗಳ ಮತೊಂದು ಪಂಗಡವೂ ಏರ್ಪಟ್ಟುವು. ಈ ಕವಿಗಳ ಪ್ರಭಾವದಿಂದ ಬೈಜಾಂಟೈನ್ ಮತ್ತು ಅರಾಮೇಯಿಕ್ ಸಂಸ್ಕೃತಿ ದ£ಗಾಹಿ ಅಲೆಮಾರಿ ಜನರ ಕೈಸೇರಿತು. ಈ ಕವಿಗಳ ಪೈಕಿ ಜುಬ್ಬಿಯನ್ನರ ಆನ್-ನಬಿಘ (604), ಅಲ್‍ಅಷ (629) ಮುಖ್ಯರು. ಆನ್-ನಬಿಘನ ಕವಿತೆಯಲ್ಲಿ ಆತನಿದ್ದ ರಾಜಾಸ್ಥಾನದ ಪ್ರಭಾವಗಳು ಎದ್ದು ಕಾಣುತ್ತವೆ. ಅವುಗಳಲ್ಲಿ ಕಂಡುಬರುವ ನೀತಿ ಮತ್ತು ಉಪದೇಶಗಳ ಧ್ವನಿಗಾಗಿ ಆತ ತುಂಬ ಪ್ರಸಿದ್ಧನಾಗಿದ್ದಾನೆ. ಗಾಯಕ ವೃತ್ತಿಯ ಅಲ್’ಅಷನ ಯಶಸ್ಸು ಆತನ ವಿಡಂಬನ ಮತ್ತು ವಿಲಾಸ ಗೀತಗಳನ್ನವಲಂಬಿಸಿದೆ. ಇಸ್ಲಾಮಿಗೆ ಪೂರ್ವದ ಪದ್ಯಗಳಲ್ಲಿ ಕಂಡುಬರುವ ಹಾಗೆ, ಈ ಮರಳುಗಾಡಿನ ಮಕ್ಕಳು ತಾವು ತಂಗಲು ಅನುಕೂಲವಾದ ಹುಲ್ಲುಗಾವಲುಗಳನ್ನೂ ಫಲವತ್ತಾದ ಭೂಮಿಗಳನ್ನು ಹುಡುಕುತ್ತಾ ಅಲೆಯುತ್ತಿದ್ದರು. ಅವರು ಪ್ರಕೃತಿಯನ್ನು ಬಹಳ ಸೂಕ್ಷ್ಮ ದೃಷ್ಟಿಯಿಂದ ನೋಡತಕ್ಕವರು ಮತ್ತು ಇದ್ದುದನ್ನು ಇದ್ದ ಹಾಗೆ ಗ್ರಹಿಸುವುದು ಅವರ ಸಹಜ ಮನೋಧರ್ಮ. ಮರಳುಗಾಡಿನ ಏಕಪ್ರಕಾರದ ಜೀವನವನ್ನು ಮುಚ್ಚುಮರೆಯಿಲ್ಲದೆ ಹೇಳಿ, ಮನುಷ್ಯ ಮತ್ತು ಪ್ರಾಣಿಗಳ ಸಹಜ ಪ್ರವೃತ್ತಿಗಳನ್ನು ವರ್ಣಿಸುವುದರಲ್ಲಿ ಬಹಳ ಆಸಕ್ತಿಯನ್ನು ತೋರಿದ ಬೆದೂಯಿನ್ ಕವಿಗಳ ಬಗೆಗೆ ಅವರದೆಲ್ಲ ಒಂದೇ ರಾಗವೆಂದೂ ಭಾಷಾಪಂಡಿತರಿಗೆ ಮಾತ್ರ ರುಚಿಸಬಲ್ಲ ಶಬ್ದಪ್ರಯೋಗಗಳಿಂದ ತುಂಬಿವೆ ಎಂದೂ ಮುಂದಿನ ತಲೆಮಾರಿನವರು ಭಾವಿಸಿದರು. ಇಸ್ಲಾಮಿಗೆ ಹಿಂದಿನ ಕವಿತೆಗಳಲ್ಲಿ ಯಾವ ತಾತ್ತ್ವಿಕ ವಿಚಾರವಾಗಲಿ ದೈವನಿಷ್ಠೆಯಾಗಲಿ ಇಲ್ಲವೆಂಬುದು ನಿಜ. ಬೆದೂಯಿನ್ ಅರಬ್ಬರು ನೀತಿಯಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ತಮ್ಮ ಕುಲಾಚಾರಕ್ಕೆ ತುಂಬ ಮರ್ಯಾದೆ ಕೊಡುತ್ತಿದ್ದರು. ಅವರನ್ನು ಆಕರ್ಷಿಸಿದ ಕೆಲವು ಜನಪ್ರಿಯ ವಿಷಯಗಳೆಂದರೆ ಶೌರ್ಯ, ಪ್ರಣಯ, ಶೋಕ, ಅವಮಾನ, ಪ್ರತಿಷ್ಠಾ ವೈಭವ, ಆತಿಥ್ಯ - ಮೊದಲಾದುವು. ಅವರು ಧಾರ್ಮಿಕ ಕ್ರಿಯಾವಿಧಿಗಳನ್ನು ಆಚರಿಸುತ್ತಿದ್ದುದು ಶೃದ್ಧಾಸಕ್ತಿಯಿಂದಲ್ಲ; ಬರಿಯ ಕುಲಾಚಾರವೆಂದು. ಯಾವ ದೇವರೇ ಆಗಲಿ ಅವನಿದಿರು ದೀನಬಾವವನ್ನು ತೋರುವುದು ಅವರ ಸಹಜಪ್ರವೃತ್ತಿಗೆ ಸರಿಹೊಂದುತ್ತಿರಲಿಲ್ಲ. ಆದರೆ ದಕ್ಷಿಣ ಅರಬ್ಬರ ವರ್ತನೆ ತದ್ವಿರುದ್ಧವಾದುದು. ಅವರ ಜೀವನದ ಸ್ಥಿತಿಗತಿಗಳು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕುಲದೇವತೆಗಳಿಗೆ ಅಂಟಿಕೊಂಡಿದ್ದವು. ಉತ್ತರ ಅರಬ್ಬರು ಸ್ವೇಚ್ಛಾಪ್ರವೃತ್ತಿಯುಳ್ಳವರು, ಚಪಲರು, ತಿಂದು ಕುಡಿದು ವಿಲಾಸಮಗ್ನರಾಗುವುದೇ ಅವರ ಜೀವನದ ಗುರಿ. ಸದ್ಧರ್ಮ ಮಾರ್ಗದಿಂದ ತಮ್ಮ ನಡತೆಯನ್ನು ತಿದ್ದಿಕೊಳ್ಳುವುದು ಅವರಿಗೆಷ್ಟರಮಟ್ಟಿಗೂ ಸೇರುತ್ತಿರಲಿಲ್ಲವೆಂಬುದು ಪ್ರವಾದಿಗಳಾದ ಮಹಮ್ಮದರ ಉಪದೇಶಗಳನ್ನು ಪರಿಗ್ರಹಿಸುವುದರಲ್ಲಿಅವರು ತೋರಿದ ಶುದ್ಧ ಮೂರ್ಖಪ್ರತಿಭಟನೆಯಲ್ಲಿ ವ್ಯಕ್ತವಾಯಿತು. ಒಂದು ಮಾತಿನಲ್ಲಿ ಹೇಳಬೇಕಾದರೆ, ಪ್ರಾಚೀನ ಅರೇಬಿಯದ ಕವಿತೆ ಅರಬ್ಬರ ಎಲ್ಲ ರಾಗೋದ್ರೇಕಗಳನ್ನೂ ಕುಲಾಚಾರಗಳನ್ನೂ ಒಳಗೊಂಡ ಅವರ ಕುಲಜೀವನವನ್ನು ಪ್ರತಿಫಲಿಸುತ್ತ್ತದೆ. ಕುದುರೆ ಜೂಜಿನ ಯಾವುದೋ ಒಂದು ಸಣ್ಣ ನಿಯಮಭಂಗದಂಥ ಅಲ್ಪ ವಿಷಯಗಳು ಹೇಗೆ ಕುಲಗಳಲ್ಲಿ ತಳಮಳ ಎಬ್ಬಿಸಿ ವರ್ಷಗಟ್ಟಲೆ ನಡೆಯುವ ಯುದ್ಧಗಳನ್ನು ಪ್ರೇರಿಸುತ್ತಿದ್ದವು , ಅವು ಹೇಗೆ ಕಾವ್ಯ ವಸ್ತುಗಳಾಗುತ್ತಿದ್ದವು ಎಂಬುದವನ್ನು ಈ ಕವಿತೆ ತಿಳಿಸಿಕೊಡುತ್ತದೆ. ಆದರೂ ಇಸ್ಲಾಂ ಪೂರ್ವದ ಕವಿತೆಗಳಲ್ಲಿ ಕುಲಗಳೊಳಗಿನ ಯುದ್ಧ ಸಾಹಸಗಳು, ಆತಿಥ್ಯಕ್ಕೆ ಹೆಸರಾದ ಮನುಷ್ಯರ ಪ್ರಶಂಸೆಗಳು, ಲೋಭಿಗಳು ಮತ್ತು ಹೇಡಿಗಳನ್ನು ಕುರಿತ ನಿಂದೆಗಳುಇವುಗಳ ವರ್ಣನೆಗಳಿವೆ. ಹೀಗೆ ಅವು ಅರಬ್ಬರ ಕುಲಜೀವನ, ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿಯಲು ಆಕರಗ್ರಂಥಳಾಗಿವೆ. ಯುದ್ಧಕಾಲದಲ್ಲಿ ಆತ್ಮಗೌರವ ಸಂರಕ್ಷಕರಾಗಿರುತ್ತ ಶಾಂತಿಸಮಯದಲ್ಲಿ ಜ್ಞಾನಿಗಳಂತೆ ಇದ್ದ ಈ ಕವಿಗಳ ಸುತ್ತಲೂ ಕುಲಗಳ ಮಹತ್ಕಾರ್ಯಗಳ ಚರಿತ್ರೆ ಹಬ್ಬಿಕೊಂಡಿತು. ಮುಂದೆ ಇದು ಕುಲದೊಳಗಿನ ಕಾಳUಗಳ ಇತಿಹಾಸವಾಗಿ ಬೆಳೆಯಿತು. ಜನಜನಿತವಾಗಿ, ಜನರ ಕಲ್ಪನೆಯಲ್ಲಿ ಅದ್ಭುತ ನಾಟಕೀಯ ಪ್ರಸಂಗಗಳೆನಿಸಿದ ಈ ಕಥಾನಕಗಳು, ಅವುಗಳಲ್ಲಿನ ಕೆಲವು ಭಾಷಣಗಳು, ಕಣಿ ಹೇಳುವವರ ಪ್ರಾಸಬದ್ಧ ರಚನೆಗಳು - ಇವು ಹೊರತು ಇಸ್ಲಾಮಿಗೆ ಹಿಂದಿನ ಕಾಲದಲ್ಲಿ ಗದ್ಯ ಸಾಹಿತ್ಯವಿದ್ದುದರ ಕುರುಹು ಕಂಡುಬರುವುದಿಲ್ಲ. ಆದರೆ ಖಗೋಳ, ವಾಯುಗುಣ, ಸಾಮುದ್ರಿಕ ವಂಶಾನುಕ್ರಮಣಿಕೆ - ಇವುಗಳ ತಿಳಿವಳಿಕೆ ಇಸ್ಲಾಮಿಗೆ ಹಿಂದಿನ ಅರೇಬಿಯದಲ್ಲಿ ಇದ್ದಿತೆಂಬುದು ತಿಳಿದು ಬಂದಿದೆ. ಲೇಖನಕಲೆ ಅರೇಬಿಯದ ಜನಕ್ಕೆ ತಿಳಿದೇ ಇರದಿರಲಿಲ್ಲವೆಂದು ಹೇಳಲಾಗದಿದ್ದರೂ ಅಷ್ಟಾಗಿ ಜನರಲ್ಲಿ ಹರಡದಿದ್ದುದು ಅಲ್ಲಿನ ಗದ್ಯ ಸಾಹಿತ್ಯದ ಕ್ಷಾಮಕ್ಕೆ ಕಾರಣವಿರಬಹುದು. ಇದು ಹೇಗಾದರೂ ಇರಲಿ, ಅರೇಬಿಯದ ಸಾಹಿತ್ಯದಲ್ಲಿ ನಮ್ಮ ಕಣ್ಣಿಗೆ ಬೀಳುವ ಪ್ರಥಮ ಪುಸಕ ಯಾವುದೆಂದರೆ - ಜೀವನವನ್ನು ಶೃದ್ಧಾಸಕ್ತಿಗಳಿಂದ ಋಜುಮಾರ್ಗದಲ್ಲಿ ನಡೆಸಿಕೊಳ್ಳಲು ಅನುಕೂಲವಾಗುವಂತೆ ಧಾರ್ಮಿಕ ನೀತಿಗಳನ್ನೂ ಸಾಮಾಜಿಕ ನಿಯಮಗಳನ್ನೂ ವಿಧಿಸಿರುವ ಕುರಾನು-ಇಸ್ಲಾಂ ಮತದ ಪವಿತ್ರಶಾಸನ, ಸಮಸ್ತ ಜನಕ್ಕೂ ಉಪದೇಶಿಸಲೆಂದು ಪ್ರವಾದಿ ಮಹಮ್ಮದನಿಗೆ ದೇವರೇ ವಿಶದಗೊಳಿಸಿದ ಶಾಶ್ವತ ವಚನವಿದೆಂದು ಮುಸ್ಲಿಮರು ಭಾವಿಸುತ್ತಾರೆ ಅದನ್ನು ಸಾಹಿತ್ಯದ ಮಹಾಕೃತಿಯೆಂದು ಪರಿಭಾವಿಸುವುದಾದರೆ ಅದೊಂದು ಅಸದೃಶಗ್ರಂಥ; ಶೈಲಿಯೊಂದರಲ್ಲೇ ಅಲ್ಲದೆ ವಿಷಯದಲ್ಲೂ ಅದು ಅನುಕರಣೀಯವೆಂದು ಎಲ್ಲ ಕಾಲದ ಅರಬ್ಬರೂ ಏಕಕಂಠದಿಂದ ಸಾರಿದ್ದಾರೆ. ಅರಬ್ಬೀ ಸಾಹಿತ್ಯದ ಬೆಳವಣಿಗೆಯ ಮೇಲೆ ಅದು ಬೀರಿರುವ ಪ್ರಭಾವ ಬಹುವಿಸ್ತೃತವೂ ಬಹುಮುಖವೂ ಆದದ್ದು, ಕುರಾನು ಆವಿರ್ಭವಿಸುವುದಕ್ಕೆ ಬಹಳ ಹಿಂದೆಯೇ ಇಸ್ಲಾಮ್ ಪೂರ್ವದ ಕವಿಗಳು ಅರಬೀ ಸಾಹಿತ್ಯಕ್ಕೇ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದ ರೂ ಮುಸ್ಲಿಮರಿಗೆ ದಿವ್ಯ ಹಾಗೂ ಪ್ರಥಮ ಧರ್ಮಶಾಸ್ರ್ತವೆನಿಸಿದ್ದ ಕುರಾನಿನ ಸ್ಥಾನಮಾನದ ದೆಸೆಯಿಂದ ಅರಬ್ಬೀ ವಿಶ್ವಭಾಷೆಯಾಯಿತು; ಅಲ್ಲದೆ ಎಲ್ಲರೂ ಬಳಸುವಂಥ ಸಾಹಿತ್ಯಮಾಧ್ಯಮವಾಯಿತು. ತಾನು ಹುಟ್ಟಿ ಹರಡಿದ ನೂರು ವರ್ಷಗಳೂಳಗೆ ಪಶ್ಚಿಮಕ್ಕೆ ಬೈಜಾಂಟೈನ್ ಸಾಮ್ರಾಜ್ಯದ ಪ್ರಾಂತ್ಯಗಳನ್ನೂ ಪೂರ್ವಕ್ಕೆ ಸಸ್ಸೇನಿಯನ್ ಚಕ್ರಾದಿಪತ್ಯವನ್ನೂ ಒಳಗೊಂಡು ಪಿರನೀಸಿನಿಂದ ಪಾಮಿರ್ ವರೆಗೆ ಹಬ್ಬಿದ ಇಸ್ಲಾಮಿನ ಹರಹು ಮುಸ್ಲಿಮರ ದೈವ ಜ್ಞಾನವನ್ನೂ ಸಂಸ್ಕೃತಿಯನ್ನೂ ಆಶ್ಚರ್ಯಕರವಾದ ರೀತಿಯಲ್ಲಿ ಪ್ರವರ್ಧಮಾನಕ್ಕೆ ತಂದಿತು. ಅರಬ್ಬರ ವಿಜಯಗಳ ಸಾರತಮಪರಿಣಾಮ ಯಾವುದೆಂದರೆ, ತಾವು ಗೆದ್ದ ಜನಗಳನ್ನು ಕ್ರಮೇಣ ಇಸ್ಲಾಮಿನ ಭ್ರಾತೃವರ್ಗದಲ್ಲಿ ಸೇರಿಹೋಗುವಂತೆ ಮಾಡುವುದು. ಅವರು ತಮ್ಮೊಂದಿಗೆ ತಮ್ಮ ವಿಶಿಷ್ಟ ಸಂಸ್ಕೃತಿಗಳ ಅನುಭವಗಳನ್ನೂ ನಡವಳಿಕೆಗಳನ್ನೂ ತಂದರು. ಆ ಕಾರಣದಿಂದ ಸಾಹಿತ್ಯವನ್ನು ಮೇಲುಮಟ್ಟಕ್ಕೇರಿಸಿ ಅಭಿವೃದ್ಧಿಗೊಳಿಸಿದರು; ಜೊತೆಗೆ ಅರಬ್ಬರೂ ಅರಬ್ಬರಲ್ಲದವರೂ ಅರಬ್ಬೀ ಜ್ಞಾನಭಂಡಾರವನ್ನು ಬೆಳೆಸಲು ಕಲಿತರು. ಪ್ರವಾದಿಗಳ ಜೀವಿತಕಾಲದಲ್ಲಿ ಇಸ್ಲಾಮಿನ ಪವಿತ್ರ ಗ್ರಂಥದ ರಚನೆಯಾಗುತ್ತಿರುವಾಗ ಅರಬೀ ಅಕ್ಷರಮಾಲಿಕೆ ಅಸಮಗ್ರವಾಗಿತ್ತು. ಸಮಗ್ರವಾದ ಅಕ್ಷರಮಾಲಿಕೆಯನ್ನೂ ವ್ಯಾಕರಣ ಸೂತ್ರಗಳನ್ನೂ ರಚಿಸಿ ಗ್ರಂಥವನ್ನು ಅದರ ಪಾಠ ಕೆಡದ ಹಾಗೆ ಸಂರಕ್ಷಿಸುವುದು ಕ್ಷಿಪ್ರವಾಗಿ ನಡೆಯಬೇಕಾದ ಕೆಲಸª£ಸಿತು. ಕುರಾನನ್ನು ವಾಖ್ಯಾನಿಸುವುದಕ್ಕೆ ಶಬ್ದಕೋಶ ಮತ್ತು ವ್ಯಾಕರಣಗಳನ್ನು ಎಚ್ಚರಿಕೆಯಿಂದ ಕಲಿಯುವುದು ಅಗತ್ಯ ವಾಯಿತು. ಇಸ್ಲಾಮಿಗೆ ಪೂರ್ವದ ಕವಿಗಳ ಪ್ರಯೋಗಗಳನ್ನು ನೋಡಿಕೊಂಡು ಶಬ್ದಗಳಿಗೆ ಖಚಿತವಾದ ಅರ್ಥಗಳು ನಿರ್ಣೀತ ವಾದವು. ಈ ಕೆಲಸದ ನಿಮಿತವಾಗಿ ಇಸ್ಲಾನ್ ಪೂರ್ವದ ಕವಿಗಳ ಕೃತಿಗಳ ಸಂಗ್ರಹಣೆ ಅವಶ್ಯಕವಾಯಿತು. ಈ ರೀತಿಯಲ್ಲಿ ಭಾಷಾವಿಜ್ಞಾನ ಮತ್ತು ಶಬ್ದಕೋಶ ರಚನೆವಿಧಾನಗಳು ಪರಿಷ್ಕೃತವಾದವು. ಪ್ರವಾದಿಗಳ ಸದಾಚಾರಗಳನ್ನೂ ಸೂಕ್ತಿಗಳನ್ನೂ ಕ್ರೋಢೀಕರಿಸುವುದರ ಮೂಲಕ ಕುರಾನಿನ ತತ್ತ್ವಗಳ ಅನುಸಂಧಾನ ಸ್ಥಿರೀಕೃತವಾಯಿತು. ಈ ಮೇರೆಗೆ ಪವಿತ್ರ ಸಂಪ್ರದಾಯ ಶಾಸ್ರ್ತ (ಹಾಡಿತ್) ಜನ್ಮ ತಾಳಿತು. ಕುರಾನ್ ಮತ್ತು ಸಂಪ್ರದಾಯಗಳ ಕಲಿಕೆ ದೈವ ಮತ್ತು ಧರ್ಮಶಾಸ್ರ್ತ ಗಳ ನಿರ್ಮಾಣಕ್ಕೆ ಒಳ್ಳೆ ತ¼ಪಾಯವನ್ನು ಒದಗಿಸಿತು. ಭಾಷಾವಿಜ್ಞಾನದ ವ್ಯಾಸಂಗಗಳು ಇಸ್ಲಾಮ್ ಪೂರ್ವದ ಅರೇಬಿಯದ ಚರಿತ್ರೆಯ ವಿಷಯ ದಲ್ಲೂ ಕುಲಗಳ ವಂಶಾನುಕ್ರಮಣಿಕೆಗಳ ವಿಚಾರದಲ್ಲೂ ಸಂಶೋಧನೆ ನಡೆಸಲು ದಾರಿ ತೋರಿದವು. ಇಸ್ಲಾಮ್ ಪೂರ್ವದ ಅರೇಬಿಯದ ಪೌರಾಣಿಕ ಕxಗಳನ್ನು ಸಂಗ್ರಹಿಸುವಲ್ಲಿ ಬೈಬಲ್ ಮತ್ತು ಜೂಡೋ ಕ್ರಿಶಿಯನ್ ಮೂಲಗಳಿಂದ ಅನೇಕ ವಿಷಯಗಳನ್ನು ಎರವಲು ತಂದುಕೊಳ್ಳಲಾಗಿದೆ. ಅಂದಿನ ಎಳೆಯ ಗದ್ಯ , ಮುಂದಿನ ಎಲ್ಲ ಗದ್ಯ ದ ಬರೆಹಳಿಗೂ ಒಳ್ಳೆ ಮಾದರಿಯ ಮೇಲುಪಂಕ್ತಿಯನ್ನು ಹಾಕಿಕೊಟ್ಟ ಕುರಾನಿನ ಶೈಲಿಯನ್ನು ಅವಲಂಬಿಸಿ ಬೆಳೆಯತೊಡಗಿತು. ದೇವನೊಬ್ಬ, ಜನಾಂಗವೊಂದು, ಮನಸ್ಸೂ ಗೆಯ್ಮೆಯೂ ಭಿನ್ನ ವಾಗಿರಕೂಡದು - ಹೀಗೆ ಐಕ್ಯವನ್ನೇ ಒತ್ತಿ ಒತ್ತಿ ಹೇಳುತ್ತಿದ್ದ ಇಸ್ಲಾಂ ಧರ್ಮ, ಕುಲ ಕುಲಗಳಲ್ಲಿಯೂ ಕಲಹವನ್ನು ಹಬ್ಬಿಸುವುದರಲ್ಲಿಯೇ ತನ್ನ ಮೇಲ್ಮೆಯನ್ನು ಕಾಣುತ್ತಿದ್ದ ಕಾಲಿಕ ಧ್ಯೇಯಕ್ಕೆ ಭಾರಿ ಪೆಟ್ಟು ಕೊಟ್ಟಿತು. ದೈವವನ್ನು ಕುರಿತ ಚರ್ಚೆ, ಧರ್ಮವನ್ನು ಕುರಿತ ಉಪನ್ಯಾಸಗಳಿಗೆ ಪದ್ಯ ಕ್ಕಿಂತ ಗದ್ಯವೇ ತಕ್ಕುದಾಗಿತ್ತು. ಆದ್ದರಿಂದ ಪ್ರವಾದಿಗಳ ಜೀವಿತಕಾಲದಲ್ಲೂ ನಿಷ್ಠಾವಂತ ರಾದ ಕಲೀಫರ ಕಾಲದಲ್ಲೂ ಪದ್ಯ ದ ಬೆಳವಣಿಗೆಗೆ ಸದವಕಾಶವಿರಲಿಲ್ಲ. ಆ ಕಾಲದಲ್ಲಿ ಮುಸ್ಲಿಂ ಕವಿಗಳೂ ಮುಸ್ಲಿಮೀತರ ಕವಿಗಳೂ ಇದ್ದರು, ಕಾಅಬ್ಬ ಜುಹೇರ್ ಮತ್ತು ಹಸನ್ ಬ್-ಢಬ್ಬಿತ್ ಮುಂತಾದ ಮತೋತ್ಸಾಹವುಳ್ಳ ಕವಿಗಳಿಗೆ ಮಾತ್ರ ಹೆಚ್ಚು ಪ್ರೋತ್ಸಾಹ ಆದರಗಳು ದೊರೆಯುತ್ತಿದ್ದುವು. ಹಿಂದಿನ ನಾಲ್ವರು ಕಲೀಫರ ಕಾಲ ಮುಗಿದ ಬಳಿಕ ಇಸ್ಲಾಮಿನ ವಿದ್ಯಾಕೇಂದ್ರ ಆ ಶ್ರದ್ಧಾಳುಗಳ ರಾಜಧಾನಿಯಾದ ಮದೀನದಿಂದ ದಮಾಸ್ಕಸ್‍ಗೆ ಸ್ಥಳಾಂತರಿಸಲ್ಪಟ್ಟಿತು. ಅಲ್ಲಿ ಮೆಕ್ಕದ ಒಂದು ಮನೆತನವಾದ ಉಮಾಯಿದ್‍ರು ಹಿಂದಿನ ಗಣತಂತ್ರದ ಆಡಳಿತವನ್ನು ತಪ್ಪಿಸಿ ದೊರೆಮನೆತನದ ಆಳಿಕೆಯ ಕ್ರಮವನ್ನು ಜಾರಿಗೆ ತಂದಿದ್ದರು. ಅವರೆಲ್ಲ ಲೌಕಿಕರು. ಉಮಾಯಿದ್ ಮನೆತನದವರು ಪಟ್ಟಕ್ಕೇರಲು ಇಸ್ಲಾಂ ಪೂರ್ವದ ಆಚಾರಗಳು ಮತ್ತು ಧ್ಯೇಯಗಳು ಮತ್ತೆ ಹರಡಲಾರಂಭಿಸಿದುವು. ಪೂರ್ವದ ಶೃದ್ಧಾಜೀವನ ಭೋಗವಿಲಾಸಕ್ಕೆಡೆ ಗೊಟ್ಟಿತು. ಗೆದ್ದ ರಾಜ್ಯಗಳಿಂದ ಅರೇಬಿಯಕ್ಕೆ ಹೊಳೆಯಂತೆ ಹರಿಯುತ್ತಿದ್ದ ಐಶ್ವರ್ಯ, ಒಂದು ಕಡೆ ಬಿಜಾಂಟೀಯನ್ ಸಂಸ್ಕೃತಿಯೊಂದಿಗೂ ಮತೊಂದು ಕಡೆ ಇರಾನಿ ನಾಗರಿಕತೆ ಯೊಂದಿಗೂ ಅವರಿಗಿದ್ದ ಸಂಪರ್ಕ, ಇವುಗಳ ದೆಸೆಯಿಂದ ಅವರಿಗೆ ಭೋಗರಾಗಗಳ ವಿಷಯಲಂಪಟತನದ ರೂಢಿ ಬೆಳೆಯಿತು. ಶ್ರದ್ಧಾಳುವಾದ ಮೂರನೆಯ ಕಲೀಫನ ಕೊಲೆಯಾದ ಬಳಿಕ ತಲೆದೋರಿದ ರಾಜಕೀಯ ಕ್ರಾಂತಿ ಮತ್ತು ಅಂತರ್ಯುದ್ಧಗಳ ವಾತಾವರಣದಲ್ಲಿ ಹಳೆಗಾಲದ ಪಂಥಾಭಿಮಾನಗಳು ಹುಲುಸಾಗಿ ಬೆಳೆಯಲು ಪ್ರಾರಂಭಿಸಿ ದುವು. ಈ ಆಳ್ವಿಕೆಯಲ್ಲಿ ಕುಲಕಲಹಗಳಿಗೆ ರಾಜಕೀಯ ಬಣ್ಣ ಬಂದು ಅರಬ್ಬರ ಸಮಾಜ ರಾಜಕೀಯ ಬಣಗಳಾಗಿ ಒಡೆದು ಹೋಯಿತು. ಕಿಲಾಫತ್ತಿಗೆ ವಾರಸುದಾರಾದ ಬನುಹಷೀಂ ಮತ್ತು ಬನು ಉಮಯ್ಯ ಎಂಬುವರು ಪರಸ್ಪರ ಯುದ್ಧದಲ್ಲಿ ತೊಡಗಿದ್ದರು. ಉತ್ತರದ ಮತ್ತು ದಕ್ಷಿಣದ ಕುಲಗಳಲ್ಲಿ ಅಲ್ಲದೆ, ಅರಬ್ಬರು ಮತ್ತು ಅರಬ್ಬರಲ್ಲದವರು ಹಾಗೂ ಷಿಯ, ಜುಬೈರಿದ್ ಮತ್ತು ಖವಾರಿಜ್ ಮುಂತಾದ ರಾಜಕೀಯ ಮತ್ತು ಧಾರ್ಮಿಕ ಪ್ರತಿಪಕ್ಷಗಳಲ್ಲೂ ಪರಸ್ಪರರ ವೈಷಮ್ಯ ಬಹಳ ತೀವ್ರವಾಯಿತು. ಬನು ಹಷೀಂನ ಕಡೆಯವರು ಷಿಯ ಪಂಥದವರು. ಅಬ್ದುಲ-ಬ್-ಜುಬೈರ್‍ನ ಕಡೆಯವರು ಜುಬೈರಿದ್ ಎಂಬ ಪಕ್ಷದವರು. ಇಸ್ಲಾಮಿನ ವೀರನಿಷ್ಠೆಯನ್ನು ಉತ್ಸಾಹದಿಂದ ಎತ್ತಿ ಹಿಡಿಯುವ ಪಂಥದವರಾದ ಖವಾರಿಜ್ ಪಕ್ಷದವರು ಮತೊಂದು ಪಂಗಡದವರು, ಕುರಾನು ಮತ್ತು ಸಂಪ್ರದಾಯಗಳಿಗೆ ತಮ್ಮದೇ ಆದ ಒಂದು ವಿಶಿಷ್ಟಾರ್ಥವನ್ನು ಕೊಡುತ್ತಿದ್ದ ಈ ಪಂಥದವರಿಗೆ ಈ ಲೋಕದಲ್ಲೂ ಇದರ ಸುಖಗಳ ವಿಷಯದಲೂ ಆಸಕ್ತಿಯಿರಲಿಲ್ಲ. ಇವರ ಪ್ರಕಾರ ಕೌಲಿಕ ಸಂಬಂಧವೊಂದೂ ಇಲ್ಲದೆ ಜನ ಮತದಿಂದ ಆರಿಸಿಬಂದ ಕಲೀಫರ ದೈವನಿಷ್ಠವಾದ ಆಳ್ವಿಕೆಯನ್ನು ಸ್ಥಾಪಿಸುವ ಒಂದೇ ಗುರಿಗಾಗಿ ಅವರು ಬಾಳಿದರು ಮತ್ತು ಮಡಿದರು. ಹೀಗೆ ಹುರುಡುಗಟ್ಟಿ ನಿಂತ ರಾಜಕೀಯ ಪಕ್ಷಗಳ ಒಳಜಗಳಗಳು ಬೆದೂಯಿನ್ ಅರಬರಿಗೆ ನಾಗರಿಕ ಜನರ ಸಂಪರ್ಕವನ್ನು ತಂದವು. ಅವರೊಂದಿಗೆ ಬೆದೂಯಿನ್ ಕಾವ್ಯದ ಹಳೆಯ ಪ್ರವೃತ್ತಿಗಳೂ ಪಟ್ಟಣಕ್ಕೆ ಬಂದವು. ಆವೇಗ ಮತ್ತು ಉದ್ರೇಕಗಳನ್ನು ಉದ್ದೀಪನಗೊಳಿಸುವುದೇ ಈ ಕಾವ್ಯಗಳ ಉದ್ದೇಶವಾದುದರಿಂದ ಅವು ಸಂವರ್ದಿಸಲು ಅಲ್ಲಿ ಅನುಕೂಲ ವಾತಾವರಣ ಸಿಕ್ಕಿತು. ಆದರೆ ಆ ವಿಧರ್ಮಿಗಳ ವ್ಯಂಗ್ಯ (ಹಿಜ) ಮತ್ತು ಸ್ತುತಿ ವಚನಗಳು (ಮಧ್) ರಾಜಕೀಯ ವಿಷಯಗಳಿಗೆ ಎಡೆಕೊಟ್ಟವು. ಈ ಕಾಲದಲ್ಲಿ ರಾಜಕೀಯ ಕವಿತೆಗಳೂ ವಿಡಂಬನೆಗಳೂ ಹುಟ್ಟಿಕೊಂಡವು. ಪ್ರತಿಯೊಂದು ಪಕ್ಷವೂ ಧ್ಯೇಯ ಧೋರಣೆಗಳನ್ನು ಪ್ರಚುರಪಡಿಸಲು ತನ್ನದೇ ಆದ ಕವಿಗಳನ್ನು ಹೊಂದಿತ್ತು. ಈ ಧ್ಯೇಯಗಳಿಗನುಸಾರವಾಗಿ ಅರೇಬಿಯ, ಸಿರಿಯ, ಕೂಫ, ಇರಾಕ್ ಮತ್ತು ಮೆಕ್ಕ ಮುಂತಾದವುಗಳ ರಾಜಕೀಯ ಪಂಗಡಗಳಲ್ಲಿ ಹಂಚಿಹೋಯಿತು. ಭೋಗಜೀವನ ರಹಸ್ಯಪ್ರಣಯದ ಮತ್ತು ಶೃಂಗಾರರಸದ ಕವಿಗಳನ್ನು ಹುಟ್ಟು ಹಾಕಿತು. ಮುಖ್ಯವಾಗಿ ಮರಳುಕಾಡಿನ ವಸತಿಗಳಲ್ಲಿ (ವಸಾಹತುಗಳಲ್ಲಿ) ಕೇವಲ ನಿಷ್ಕಾಮ ಪ್ರೇಮಕ್ಕೆ ಹತ್ತಿರ ಬರುವ ಶುದ್ಧ ಪ್ರಣಯ ಕವಿತೆಗಳ ಬೆಳಸು ಬೆಳೆಯುತ್ತಿತ್ತು. ನಾಗರಿಕರ ಪ್ರಣಯದ ರೀತಿಗಳಿಗೆ ಇದಿರಾಗಿ ಮರಳುಕಾಡಿನ ಕವಿಯ ಪ್ರಣಯಾನುಭವವನ್ನು ಅದು ವಿವರವಾಗಿ ನಿರೂಪಿಸುತ್ತದೆ. ಬೂಥೈನ್ ಎಂಬುವಳ ಪ್ರಿಯ, ಜಾಮಿಲ್-ಬ್-ಮಾ ಮಾರ್ (ಸ್ವರ್ಗಸ್ಥ 701) ಲುಬ್ನ ಎಂಬುವಳ ಪ್ರಿಯ ಕೈಯಸ್-ಬ್-ಜಾರಿಹ್, ಲೈಲಾ ಎಂಬುವಳ ಪ್ರಿಯ ಮಜ್ನನ್ ಇವರು ಶುದ್ಧ ಪ್ರೇಮಕವಿತೆಗಳ ಕೆಲವು ಪತಿನಿಧಿಗಳು. ಈ ಕವಿಗಳ ಪ್ರಣಯ ಪ್ರಸಂಗಗಳು ಗಾದೆಯ ಮಾತಾಗಿವೆ ಮತ್ತು ಅರಬ್ಬೀ ಕವಿತೆಯನ್ನಲ್ಲದೆ, ಪರ್ಷಿಯನ್ ಮತ್ತು ತುರ್ಕಿ ಕವಿತೆಗಳನ್ನೂ ಎಲ್ಲ ಮುಸ್ಲಿಮರ ಪುರಾತನ ಆಖ್ಯಾಯಿಕೆಗಳನ್ನೂ ಪ್ರಭಾವಿಸಿವೆ. ಅನೈತಿಕವಾದ ಪ್ರಣಯಕವಿತೆಯನ್ನು ಬರೆವವರಲ್ಲಿ ಅಗ್ರಗಣ್ಯರೆಂದರೆ ಕುರೈಷಿ ಕುಲದ ಉಮರ್-ಬ್-ಅಬ ರಬಿಯ (8ನೆಯ ಶತಮಾನ). ಇವನ ಪ್ರಣಯಗೀತೆಗಳನ್ನು ದಿವಾನ್ ಒಂದರಲ್ಲಿ ಸಂಗ್ರಹಿಸಲಾಗಿದೆ. ಶುದ್ಧ ಮತ್ತು ಅನೈತಿಕ ಪ್ರಣಯಗೀತೆಗಳೆಂಬ ಎರಡು ಪ್ರಕಾರಗಳೂ ವಿಧರ್ಮಿಗಳ ಪ್ರಣಯ ಪದ್ಯಗಳಿಗಿಂತ ಮುಂದುವರಿದವೆಂದು ಹೇಳಬೇಕು. ಇಸ್ಲಾಂ ಮತ ಉದಿಸುವುದಕ್ಕೂ ಮುಂಚಿನ ದಿನಗಳಲ್ಲಿ ಘಜಲ್ (ಅಷ್ಟಷಟ್ಪದಿ) ಎಂಬ ಕವಿತಾಪ್ರಕಾರ ಪ್ರಗಾಥದ ಒಂದು ಸಾಂಪ್ರದಾಯಿಕ ಅಂಗವಾಗಿತ್ತು. ಅದಕ್ಕೆ ಪ್ರತ್ಯೇಕವಾದ ಅಸ್ತಿತ್ವ ಇರಲಿಲ್ಲ. ಆದರೆ ಉಮಯಿದ್ ಕಾಲದಲ್ಲಿ ಪ್ರತ್ಯೇಕ ಪ್ರಕಾರವಾಗಿ ನಿಂತಿತು. ಮೇಲೆ ಹೇಳಿದ ಹಾಗೆ, ಈ ಕಾಲದ ಹಿರಿಯ ಕವಿಗಳು ಶೋಕಗೀತೆ ಮತ್ತು ಪ್ರಶಂಸಾಪದ್ಯಗಳನ್ನು ಕೈಬಿಡದೆ ಅಭಿರುಚಿಯಂತೆ ವಿಡಂಬನೆಗಳನ್ನೂ (ಹಿಜ) ರಚಿಸುತ್ತಿದ್ದರು. ವಿಡಂಬನಾತ್ಮಕವಾದ ಕಾವ್ಯರಚನೆಯಲ್ಲಿ ಅತ್ಯಂತ ಪ್ರಸಿದ್ಧರಾದವರೆಂದರೆ ಡಾರಿಂ ಕುಲದ ಅಲ್-ಫರಾಜದಕ್ (ಸ್ವ 728), ಕುಲಾಯಬ್ ಕುಲದ ಜಾರಿರ್ (728) ಮತ್ತು ತಘಿಬ್ ಎಂಬ ಕ್ರಿಶಿಯನ್ ಕುಲದ ಅಲ್-ಅರ್‍ತಲ್, ಕೊನೆಯವ. ಉಮಾಯಿದ್ ಕಲೀಫರನ್ನು ಕುರಿತು ಆಸ್ಥಾನದಲ್ಲಿ ಹೇಳಿದ ಪ್ರಶಂಸಾಪದ್ಯಗಳು ಈಗಲೂ ಪ್ರಸಿದ್ಧವಾಗಿವೆ. ಜರೀರ್ ಮತ್ತು ಅಲ್ಫರಾಜ್‍ದಕ್ ಎಂಬುವರ ನಡುವೆ ಜರುಗಿದ ಕವಿತಾ ಸರ್zಗಳಿಗೆ ನಕಾಯಿದ್ ಎಂದು ಹೆಸರು. ಇವು ಉಮಾಯಿದ್ ಕಾಲದ ಸ್ವರೂಪವನ್ನು ಬಹಳ ನೈಜವಾಗಿ ತೋರಿಕೊಡುತ್ತವೆಯೆಂದು ಹೇಳುತ್ತಾರೆ. ಉಮಾಯಿದ್ ಕವಿತೆ ಆ ಕಾಲದ ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಕ್ಕನುಸಾರ ವಾಗಿ ಬದಲಾವಣೆ ಹೊಂದಿದ್ದರೂ ಸಾಮಾನ್ಯವಾಗಿ ಅದರ ರೂಪ ಮತ್ತು ಭಾವಗಳೆರಡರ ಮೇಲೂ ವಿಧರ್ಮಿಗಳ ಒತ್ತಡ ಬಿದ್ದಿದೆ. ಇದರಲ್ಲಿ ಪ್ರಾಚೀನ ಕವಿತೆಯ ಶೈಲಿ ಉಳಿದುಕೊಂಡು ಬಂದಿರುವುದಕ್ಕೆ ಕಾರಣವೆಂದರೆ, ಉಮಾಯಿದ್ ಕಲೀಫರು ಈ ತೆರದ ಕವಿತೆಯಲ್ಲಿ ಹೊಂದಿದ್ದ ಆಸಕ್ತಿ , ಕೊಟ್ಟ ಪೋತ್ಸಾಹ. ಇಸ್ಲಾಂ ಪೂರ್ವದ ಕವಿತದಲ್ಲಿ ಜನಗಳ ಆಸಕ್ತಿಗೆ ಮತೊಂದು ಕಾರಣವುಂಟು. ದಾರ್ಶನಿಕ ವ್ಯಾಸಂಗ, ಕೆಲವು ಕುರಾನಿನ ಶಬ್ದಗಳಿಗಿರುವ ಅರ್ಥಛಾಯೆಗಳ ವಿಶದೀಕರಣಗಳಿಗೆ ಅವು ಬೇಕಾದವು. ಸಾಹಿತ್ಯ, ಸಂಸ್ಕೃತಿಗಳ ಅಭಿವೃದ್ಧಿಗೆ ಇಸ್ಲಾಂ ಕೊಟ್ಟ ಪೋತ್ಸಾಹದ ಪರಿಣಾಮವಾಗಿ ವಿದ್ವಾಂಸರು ಪ್ರಾಚೀನ ಕಾವ್ಯಗಳ ಸಂಗ್ರಹಣೆಗೆ ತೊಡಗಿದರು. ಕವಿತೆಗಳನ್ನು ಕಲಿತು ಹಾಡುವುದನ್ನೇ ಕಸುಬಾಗಿಟ್ಟುಕೊಂಡಿದ್ದ ರೂವಾತ್ ಎಂಬ ಗಮಕಿಗಳು ಈ ಕಾರ್ಯವನ್ನು ತಮ್ಮ ಕೈಗೆ ತೆಗೆದುಕೊಂಡರು. ಪ್ರಾಚೀನ ಕಾವ್ಯಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಪ್ರಮುಖರಾದವರ ಪೈಕಿ ಅತ್ಯಂತ ಪ್ರಸಿದ್ಧರಾದವರು ಹಮ್ಮದ್ - ಅರ್-ರವಿಯಾ ಮತ್ತು ಕಲಾಫ್-ಅಲ್-ಅಹ್‍ಮರ್(800) ಎಂಬುವರು. ಈ ಜನಪದ ಸಾಹಿತ್ಯ ಪ್ರಚಾರಕರು ಈ ಹಳೆ ಕವನಗಳನ್ನು ಪ್ರೇರಿಸಿದ ಕದನಗಳನ್ನು ಸಹ ವರ್ಣಿಸುತ್ತಿದ್ದರು. ಈ ಐತಿಹ್ಯಗಳು ಆ ಬಳಿಕ ಆಯಾ ಕುಲಗಳ ಸಾಂಪ್ರದಾಯಿಕ ಇತಿಹಾಸಗಳಾಗಿ ಪರಿಣಮಿಸಿದ ಸವು. ಬೆದೂಯಿನ್ ಕುಲಗಳಲ್ಲಿ ಬಳಕೆಯಲ್ಲಿದ್ದ ಗಾದೆಗಳನ್ನು ಕೂಡ ಅವರು ಸಂಗ್ರಹಿಸಿದರು. ಪ್ರಾಚೀನ ಅರಬೀ ಕಾವ್ಯಗಳನ್ನು ವ್ಯಾಖ್ಯಾನಿಸುವುದರಲ್ಲಿ ನೆರವಾದರು. ಇದೇ ಕಾಲದಲ್ಲಿಯೆ ಧರ್ಮಪ್ರವರ್ತಕರ ಆಚಾರವಿಚಾರಗಳ ಸಂಗ್ರಹಣ, ಸಂಪಾದನ ಆಗಿ ಅವನ್ನು ಬರಹಕ್ಕೆ ಇಳಿಸುವ ಕಾರ್ಯ ಇನ್ನೂ ಹೆಚ್ಚಿನ ಹುರುಪಿನಿಂದ ಜರುಗಿತು. 750ರಿಂದ 1258ರ ವgಗಿನ ಅರಬ್ಬೀ ಸಾಹಿತ್ಯದ ಲಕ್ಷಣ: ಅರಬ್ಬರ ರಾಷ್ಟ್ರಾಭಿಮಾನದ ಪುನರುಜ್ಜೀವನ,ಸಾಮಾನ್ಯವಾಗಿ ಎಲ್ಲೆಡೆಯೂ ಹಬ್ಬಿದ್ದ ಅಶಾಂತಿಗಳ ದೆಸೆಯಿಂದ ಮುಸ್ಲಿಂ ಚಕ್ರಾಧಿಪತ್ಯದಲ್ಲಿ ಉಮಾಯಿದ್ ವಂಶದವರಿಗೆ ವಿರುದ್ಧವಾಗಿದ್ದ ಶಕ್ತಿಗಳು ಪ್ರಬಲವಾಗಿ ಕ್ರಮೇಣ ಆ ವಂಶದವರನ್ನು ಪದಚ್ಯುತರನ್ನಾಗಿ ಮಾಡಿದವು. 750ರಿಂದ ಪ್ರವಾದಿಗಳ ಚಿಕ್ಕಪ್ಪ ಅಬ್ಬಾಸನ ಪೀಳಿಗೆ ಪರ್ಷಿಯನ್ ಜನರ ಮತ್ತು ಅರಬ್ಬರಲ್ಲದ ಇತರರ ನೆರವಿನಿಂದ ಪಟ್ಟಕ್ಕೆ ಬಂತು. ಅಬ್ಬಾಸನ ವಂಶದವರು ದೊರೆಗಳಾದ ಮೇಲೆ ಅರಬ್ಬರ ರಾಜಕೀಯ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಮೂಲಭೂತವಾದ ಬದಲಾವಣೆಗಳು ಉಂಟಾದವು. ಕಲೀಫರ ರಾಜಧಾನಿ ಡಮಾಸ್ಕಸಿನಿಂದ ಬಾಗ್ದಾದಿಗೆ ಹೋಯಿತು. ಅಲ್ಲಿ ಆಡಳಿತ ಕ್ರಮದಲ್ಲೂ ಸಾಂಸ್ಕೃತಿಕ ನಡವಳಿಕೆಯಲ್ಲೂ ಪರ್ಷಿಯನ್ನರ ಪ್ರಭಾವ ಮೇಲುಗೈಯಾಗಲು ಪ್ರಾರಂಭಿಸಿತು. ಹೀಗೆ ಹೊಸ ಬಗೆಯ ಸಾಹಿತ್ಯದ ಬೆಳವಣಿಗೆಗೆ ಒಂದು ಸ್ಥಾನ ಸಿದ್ಧವಾಯಿತು. ಅಬ್ಬಾಸನ ಪೀಳಿಗೆಯವರು ಅರಬ್ಬರ ರಾಜ್ಯಭಾರದ ಹಳೆ ಸಂಪ್ರದಾಯಗಳನ್ನು ಎತ್ತಿ ಹಿಡಿಯುವುದಕ್ಕೆ ಬದಲಾಗಿ ಗದ್ಯಪದ್ಯಗಳೆರಡಕ್ಕೂ ಆಶ್ರಯಕೊಟ್ಟುದಲ್ಲದೆ ಅಪಾರವಾದ ವೈಜ್ಞಾನಿಕ ಸಾಹಿತ್ಯವನ್ನೂ ಬೆಳೆಸಿ ಸಂಸ್ಕೃತಿಯ ವಿಕಾಸಕ್ಕೆ ಬಹಳ ಪೋತ್ಸಾಹ ಕೊಟ್ಟರು. ಈ ಕಾಲದ ಸಾಹಿತ್ಯವನ್ನು ಆಧ್ಯಾತ್ಮಿಕ ಶಾಸ್ರ್ತ, ಶಬ್ದವಿಜ್ಞಾನ, ಗದ್ಯ ಮತ್ತು ಪದ್ಯ , ಚರಿತ್ರೆ ಮತ್ತು ಭೂಗೋಳವಿಜ್ಞಾನಗಳು, ದರ್ಶನ ಮತ್ತು ಪ್ರಕೃತಿ ವಿಜ್ಞಾನಗಳುಈ ರೀತಿಯಾಗಿ ವಿಂಗಡಿಸಬಹುದು. ಕುರಾನಿನ ಜೊತೆಗೆ ಮುಸ್ಲಿಮರ ಮುಖ್ಯ ಆಸಕ್ತಿ ಪ್ರವಾದಿಗಳ ಎಲ್ಲ ಮಾತುಗಳನ್ನೂ ನಡವಳಿಕೆಗಳನ್ನೂ ಸಂಗ್ರಹಿಸುವುದರಲ್ಲಿತ್ತು. ಏಕೆಂದರೆ ಶ್ರದ್ಧೆ ಮತ್ತು ನಿಷ್ಠೆಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಯಾವುದು ಸಾಧು ಯಾವುದನ್ನು ಮಾಡಲೇಬೇಕು ಎಂಬುದನ್ನು ತಿಳಿಯಲು ಈ ಸಂಪ್ರದಾಯಗಳೇ ಆಧಾರ. ದೈನಂದಿನ ಜೀವನಕ್ಕೆ ಕುರಾನಿನ ತತ್ವವನ್ನು ಅನ್ವಯಗೊಳಿಸು ವುದು ಹೇಗೆಂಬುದನ್ನು ಈ ಸಂಪ್ರದಾಯಗಳು ಮಾತ್ರ ನಿರ್ಧರಿಸತಕ್ಕವು. ಕಾಲ ಕಳೆದಂತೆ, ಹಾದಿತ್ತಿನ (ಸತ್ಸಂಪ್ರದಾಯದ) ವಸ್ತು ದೊಡ್ಡದಾಗುತ್ತ ಬಂದಿತು. ಅನಧಿಕೃತವಾದ ಎಷ್ಟೋ ಅಂಶಗಳು ಅದರೂಳಕ್ಕೆ ತೂರಿಕೊಂಡುವು. ಆದ್ದರಿಂದ ಅವುಗಳನ್ನೆಲ್ಲ ಬಹು ಸೂಕ್ಮವಾದ ಪರಿಶೀಲನೆಗೆ ಒಳಪಡಿಸಿ ಯಾವುದನ್ನು ಪ್ರಮಾಣವೆಂದು ನಂಬಬಹುದು ಯಾವುದನ್ನ ಲ್ಲ ಎಂಬುದನ್ನು ವಿಂಗಡಿಸಬೇಕಾಯಿತು. ಇದರಲ್ಲಿಯಾರ ಮಾತು ನಂಬಿಕೆಗೆ ಅರ್ಹ ಯಾರದು ಅಲ್ಲ ಎಂಬುದನ್ನು ಗೊತ್ತು ಮಾಡುವುದಕ್ಕಾಗಿ ಸಂಪ್ರದಾಯವಾಹಕರೆಲ್ಲರ ಜೀವನಚರಿತ್ರೆಯನ್ನು ಪರಾಮರ್ಶಿಸಲು ಈ ವಿಮರ್ಶಾತ್ಮಕ ಸಂಶೋಧನೆಗಳು ಹಾದಿ ಹಾಕಿ ಕೊಟ್ಟವು. 1. ಅಲ್-ಬುಖಾರಿ (870). 2. ಮುಸ್ಲಿಂ (878). 3. ಅಬು ದಾವುದ್ (885), 4. ಅಬು ಈಸ ತಿರ್ ಮಿಧಿ (892), 5. ನಸಾಯಿ, 6. ಇಬ್ನ್-ಮಜ (896)-ಈ ವ್ಯಕ್ತಿಗಳು ಮಾಡಿರುವ ಸಂಗ್ರಹಗಳು ಬಹು ಪ್ರಾಮಾಣಿಕವೆನಿಸಿವೆ. ಇನ್ನೂ ಮುಂದಿನ ಕಾಲದಲ್ಲಿ ಪ್ರಮಾಣವಾಕ್ಯಗಳು ಸುಲಭವಾಗಿ ದೊರೆಯುವ ಸೌಕರ್ಯವನ್ನು ಒದಗಿಸುವುದಕ್ಕಾಗಿಯೂ ನ್ಯಾಯಕ್ಕೆ ಸಂಬಂಧಪಟ್ಟ ಸಂಪ್ರದಾಯಗಳನ್ನು ನೀತಿಗೆ ಸಂಬಂಧಪಟ್ಟವುಗಳಿಂದ ಪ್ರಮಾಣ ವಾಕ್ಯಗಳನ್ನು ಅಪ್ರಾಮಾಣಿಕವಾದುವುಗಳಿಂದ ಪ್ರತ್ಯೇಕಿಸುವುದಕ್ಕಾಗಿಯೂ ಕೆಲವು ಸಂಕಲನ ಗಳನ್ನು ರಚಿಸಲಾಯಿತು. ಇದೇ ರೀತಿ ಸಂಪ್ರದಾಯಗಳು ಯಾರಿಂದ ಲಬ್ಧವಾದವೋ ಅವರ ಜೀವನಚರಿತ್ರೆಯ ಪರಾಮರ್ಶೆಯೂ ನಡೆಯುತ್ತಲೇ ಇತ್ತು. ಅಂಥ ಸಂಶೋಧನೆಗಳ ಫಲಿತಾಂಶಗಳನ್ನೆಲ್ಲ 1. ಅಬ್ದುಲ್ ಬರ್ರ್ ಅನ್-ನಮಾರಿಯ (1070), ಕಿತಾಬ್-ಅಲ್ ಇಸ್‍ತಿಅಬ್, 2. ಇಬ್ನ್-ಅಲ್-ಅಧೀರ್ ಅಲ್‍ಜ ಅಜ್ರಿಯ (1232), ಉಸದಲ್-ಘಬ (5 ಸಂಪುಟಗಳು), 3. ಅಲ್-ಧಹಬಿಯ (1374), ತಜಿದ್, 4. ಇಬ್ನ್ ಹಜರ್ ಅಲ್ ಅಸ್ಕಲಾನಿಯ (1448), ಅಲ್ ಇಸಾಬಾ ಎಂಬ ಸುದೀರ್ಘಕೃತಿಗಳಲ್ಲಿ ಅಳವಡಿಸಲಾಗಿದೆ. ಇಂಥ ದೇವತಾಶಾಸ್ರ್ತ ಸಾಹಿತ್ಯದ ವರ್ಗಕ್ಕೆ ಕುರಾನಿನ ಭಾಷ್ಯ ಸೇರಿದೆ. ಗ್ರಂಥದಲ್ಲಿ ಬರುವ ಐತಿಹಾಸಿಕ ಮತ್ತು ಇತರ ವಿಷಯಗಳ ಸಂದರ್ಭ ವಿವರಣೆ , ಅದರ ವ್ಯಾಕರಣ ವ್ಯಾಖ್ಯೆಗಳು, ಅಲಂಕಾರಗಳ ಗುಣವಿಮರ್ಶೆ, ಮತತತ್ವ ಸಿದ್ಧಾಂತ ಮತ್ತು ನ್ಯಾಯವ್ಯವಹಾರದ ಶ್ರೇಷ್ಠತೆ ಅಲ್ಲಿನ ಬೋಧನೆಗಳ ದೈವಿಕvಯ ಬಗ್ಗೆ ವ್ಯಾಖ್ಯೆಗಳು - ಇವೇ ಕುರಾನಿನ ಅಭ್ಯಾಸದಲ್ಲಿ ಮುಖ್ಯ ವಿಷಯಗಳು. ಪ್ರಾರಂಭದಲ್ಲಿ ಅದು ಹಾದಿತ್ತನ (ಸತ್ಸಂಪ್ರದಾಯ) ಸಾಹಿತ್ಯದ ಒಂದು ಅಂಗವಾಗಿದ್ದು ಆಮೇಲೆ ಸ್ವತಂತ್ರವೂ ಕ್ರಮಬದ್ಧವೂ ಆದ ಶಾಸ್ರ್ತವಾಗಿ ಬೆಳೆಯಿತು. ಹಿಂದಿನ ಸಂಶೋಧನೆಗಳನ್ನೆಲ್ಲ ಒಂದು ದೊಡ್ಡ ಸಂಕಲನದಲ್ಲಿ ಶೇಖರಿಸಿದ ಬಹುಪ್ರಖ್ಯಾತ ಪಂಡಿತನಾರೆಂದರೆ ಇಬ್ನ್ ಜರೀರ್ ಅಲ್-ತಬಾರಿ (922). ಆ ಬಳಿಕ ಭಾಷ್ಯಸಾಹಿತ್ಯ ಗಾತ್ರದಲ್ಲಿ ಬೆಳೆಯಿತು. ಬೇರೆ ಬೇರೆ ದೃಷ್ಟಿಕೋನಗಳಿಂದ ಈ ವ್ಯಾಖ್ಯಾನಗಳು ಸಂಕಲಿತವಾ ದುವು. ಉದಾಹರಣೆಗೆ ಫಕ್ರುದ್ದೀನರ್ ರಜಿ (1209) ಕುರಾನಿನ ದೈವಿಕತೆ ಮತ್ತು ದಾರ್ಶನಿಕ ತತ್ತ್ವಗಳ ಹಿನ್ನೆಲೆಯಲ್ಲಿ ಖುರಾನಿನ ವಾಕ್ಯಗಳನ್ನು ವಿವರಿಸುತ್ತ ಮುಫತೀಹ್-ಅಲ್‍ಘಯಿಬ್ ಎಂಬ ಗ್ರಂಥ ಬರೆದರು. ಹಾಗೆಯೇ ಅಜ್‍ಜಮಕರಿ (1143) ಮತ್ತು ಅಲ್‍ಬೈದಾವಿ (1288) ದಾರ್ಶನಿಕದೃಷ್ಟಿಯಿಂದಲೂ ಇಬ್ನ್ ಅರಾಬಿ ಅತೀಂದ್ರಿಯನುಭೂತಿಯ (ಸೂಫಿ) ದೃಷ್ಟಿಯಿಂದಲೂ ಕುರಾನಿನ ವ್ಯಾಖ್ಯಾನಗಳನ್ನು ಬರೆದರು. ಇಸ್ಲಾಮಿನ ಪಶ್ಚಿಮ ಭಾಗದಲ್ಲಿ ಧಾರ್ಮಿಕ ಸಾಹಿತ್ಯವನ್ನು ಪತಿನಿಧಿಸಿದವರು ಅಲ್ ಸುಹೈಲಿ (1185), ಅಲ್-ಕುರ್‍ತುಬಿ (1272), ಅನ್-ನವಾವಿ, ಕುರಾನಿನ ಆಧಾರದ ಮೇಲೆ ಕರ್ತವ್ಯಕರ್ಮಗಳ ನಿಯಮಗಳು ರಚಿತವಾದುವು. ತತ್ಪರಿಣಾಮವಾಗಿ ನ್ಯಾಯತತ್ವಶಾಸ್ರ್ತ ಬೆಳೆಯಿತು. ಇದರ ಫಲವಾಗಿ ಷಿಯ ಪಂಥದ ಜೊತೆಗೆ ನಾಲ್ಕು ಬೇರೆ ಬೇರೆ ನ್ಯಾಯಶಾಸ್ರ್ತ ಪಂಥಗಳು ಕವಲೊಡೆದವು; 1. ಅಬು ಹನೀಫನಿಂದ ಪ್ರವೃತ್ತವಾದ ಹನಾಫೈಟ್ ಪಂಥ, 2. ಮಲಿಕ್-ಬ್-ಅನಾಸ್‍ನ ಮುಖಂಡತ್ವದಲ್ಲಿ ಪ್ರಾರಂಭವಾದ ಮಲಿಕೈಟ್ ಪಂಥ, 3. ಆಷ್-ಷಫೆನ ಮುಂದಾಳುತನದಲ್ಲಿ ಷಫೈಟ್ ಪಂಥ, 4. ಇಬ್ ಹನ್‍ಬಲ್‍ನ ಯಾಜಮಾನ್ಯದಲ್ಲಿ ಬೆಳೆದ ಹನಾಫೈಟ್ ಪಂಥ ಇವು ಎಲ್ಲ ಮುಸ್ಲಿಂ ದೇಶಗಳ ಹರಹಿನಲ್ಲಿ ಭೌಗೋಲಿಕವಾಗಿ ವಿಂಗಡಗೊಂಡಿವೆ. ತಮ್ಮ ತಮ್ಮ ಪರಿಚಿಂತನ ರೀತಿಗಳಲ್ಲೂ ಮತ್ತು ನ್ಯಾಯದ ಮೂಲಗಳನ್ನು ಕುರಿತ ವ್ಯಾಖ್ಯಾನ ಕ್ರಮಗಳಲ್ಲೂ ಈ ನಾಲ್ಕು ಪಂಥಗಳೂ ಭಿನ್ನ ಭಿನ್ನ ವಾಗಿವೆ. ಪರಿಣಾಮವಾಗಿ ಇಸ್ಲಾಮಿನ ನ್ಯಾಯ ಮೂಲಗಳು ಕುರಾನು ಮತ್ತು ಸಂಪ್ರದಾಯಗಳಿಗೇ ಮಿತಿಗೊಳ್ಳಲಿಲ್ಲ. ಆದರೆ ಕಿಯಾಸ್ (ಸಾಮ್ಯ) ಮತ್ತು ಇಜ್ಮ (ಒಟ್ಟಭಿಪ್ರಾಯ) ಇವೇ ಮೊದಲಾದ ಆತ್ಮಪ್ರೇರಣೆ ಮತ್ತು ಪರಿಚಿಂತನೆಯ ಕ್ರಮಗಳನ್ನು ಕೂಡ ನ್ಯಾಯನಿಯಮದ ರಚನೆಗಳಿಗೆ ಅಳವಡಿಸಿ ಕೊಳ್ಳಲಾಯಿತು. ನ್ಯಾಯತತ್ವಕ್ಕೆ ಸಂಬಂಧಿಸಿದ ಸಾಹಿತ್ಯದಂತೆ ಧರ್ಮಶಾಸ್ರ್ತಕ್ಕೆ ಹಾಕಬೇಕಾದ ತಾತ್ತ್ವಿಕ ತಳಹದಿ ಕೂಡ ವಿಸ್ತಾರವಾದ ಸಾಹಿತ್ಯವನ್ನು ಉತ್ಪಾದಿಸಿದೆ. ಉಸುಲ್ ಫಿಖ್ (ನ್ಯಾಯತತ್ತ್ವ ಸೂತ್ರಗಳು) ಎಂಬುದರ ಮೇಲೆ ಅನೇಕ ಗ್ರಂಥಗಳನ್ನು ಷಫೈ ಮತ್ತು ಹನಾಫಿ ಪಂಥಗಳು ರಚಿಸಿವೆ. ನ್ಯಾಯತತ್ವ ಸೂತ್ರಗಳ ಜೊತೆಗೆ, ಮತಕ್ಕೆ ಸಂಬಂಧಪಟ್ಟ್ಟ ಧರ್ಮಶಾಸ್ತ್ರವೂ ಉದ್ಭವಿಸಿತು. ಅಬ್ಬಾಸಿದ್ ಕಾಲದ ಪ್ರಾರಂಭದಿಂದಲೂ ಅತೀಂದ್ರಿಯಜ್ಞಾನ (ರೆವೆಲೇಷನ್) ಪ್ರಾಪ್ತಿ, ಸ್ವಪ್ರೇರಣೆ , ದಿವ್ಯ ಕಲ್ಯಾಣಗುಣಸಂಪತ್ತಿ ಇತ್ಯಾದಿ ಮತ ಸಿದ್ಧಾಂತಗಳು ಕ್ರಿಶಿಯನ್ನರ ದೇವತಾಶಾಸ್ರ್ತ ಮತ್ತು ಬೃಹದ್ದರ್ಶನದೂಡನೆ ಚರ್ಚೆಗೂ ವಾದ ವಿವಾದಕ್ಕೂ ಒಳಗಾಗಿ ತನ್ಮೂಲಕ ಸಾಂಪ್ರದಾಯಿಕತೆಗೆ ವಿರೋಧವಾದ ಮುತಾಜಿಲಿಸಂ ಎಂಬ ತರ್ಕಪಾರಮ್ಯವಾದದ ಬೆಳವಣಿಗೆಗೆ ಎಡೆಗೊಟ್ಟವು. ಮೇಲೆ ಹೇಳಿದ ಎರಡು ಗುಂಪುಗಳೊಳಗಿನ ವಿವಾದಗಳು ಅಬುಲ್ ಹಸನ್ ಅಲ್ ಅಷಾರಿ (953), ಅಬು ಮನ್ ಸೂರ್ ಅಲ್-ಮತುರಿದಿ (944) ಎಂಬಿಬ್ಬರು ವಿದ್ವಾಂಸರ ನೇತೃತ್ವದಲ್ಲಿ ರೂಪುಗೊಂಡ ಹೊಸದೊಂದು ತಾತ್ವಿಕ ಪಂಥಕ್ಕೆ ದಾರಿ ಮಾಡಿಕೊಟ್ಟವು. ಈ ವಿದ್ವಾಂಸರು ಮುತಜಿಲೈಟರ ತರ್ಕಪಾರಮ್ಯವಾದಕ್ಕೂ ಸಂಪ್ರದಾಯನಿಷ್ಠೆಗೂ ನಡುವೆ ಮಧ್ಯ ಸ್ಥಿಕೆವಹಿಸಿ ಜಯಶೀಲರಾದರು. ಇದು ಕಲಾಂ (ತಾರ್ಕಿಕ ಪದ್ಧತಿ) ಎಂಬ ದಾರ್ಶನಿಕ ಜಿಜ್ಞಾಸಾಕ್ರಮದ ಬೆಳವಣಿಗೆಗೆ ಕಾರಣವಾಯಿತು. ಅದರ ಉದ್ದೇಶ ಮತ ಸಿದ್ಧಾಂತಗಳಿಗೆ ದಾರ್ಶನಿಕ ರೂಪರೇಖೆಗಳನ್ನು ಕೊಡುವುದು ಕಲಾಮಿನ. ಸಾಹಿತ್ಯ ಪತಿನಿಧಿಗಳು ಯಾರೆಂದರೆ. ಅಬುಬಕರ್ ಅಲ್-ಬಾಕಿಲ್ಲಾನಿ (1085) ಮತ್ತು ಅಬುಲ್ ಮ ಅಲಿ ಮತ್ತು ಆ ಕಾಲದ ದೈವಶಾಸ್ರವೇತ್ತರಲ್ಲಿ ಶ್ರೇಷ್ಠತಮನೆಂದು ಪರಿಗಣಿತನಾಗಿ ಅಲ್‍ಗಜ್ಜಾಲಿಯ ಗುರುವಾಗಿದ್ದ ಇಮಾಂ ಅಲ್- ಹರ್‍ಮಾಯನ್ ಅಲ್-ಜುವೈನಿ (1085). ಇವರಲ್ಲದೆ, ಆ ಕಾಲದಲ್ಲಿ ಪ್ರಚಲಿತವಾಗಿದ್ದ ಎಲ್ಲ ಮತ ಮತ್ತು ದರ್ಶನ ಪ್ರಕಾರಗಳನ್ನೂ ಇಸ್ಲಾಮಿನ ಸಮಸ್ತ ಪಂಥಗಳನ್ನೂ ತಮ್ಮ ಕಿತಾಬ್ ಅಲ್-ಮಿಲಾಲ್‍ವಾನ್‍ನಿಹಾಲ್ ಎಂಬ ಮಹಾಗ್ರಂಥದಲ್ಲಿ ವಿವರಿಸಿರುವ ಅಬುಲ್ ಫಾತ್ ಅಷ್ ಷರಸ್ತಾನಿ (1153) ಬಾಗ್ದಾದಿಗೆ ಬಂದ ವಿದ್ವಾಂಸರ ಪೈಕಿ ಅತ್ಯಂತ ಪ್ರಭಾವಶಾಲಿ. ಇದೇ ಕಾಲದಲ್ಲಿ ಅತೀಂದ್ರಿಯ ಜ್ಞಾನದಲ್ಲಿ (ಅನುಭಾವ) ಶ್ರದ್ಧೆಯುಳ್ಳ ಅಲ್‍ಹಾರೀತ್ ಅಲ್-ಮುಹಾಸಿಬಿ(828), ಧುನ್ ನನ್ ಅಲ್-ಮಿಸ್ರಿ (859), ಅಲ್ ಜುನೈದ್ (900) ಮುಂತಾದವರು ಕಲಾಂ ಅನ್ನೂ ಮತಾಚರಣೆಯ ಬಾಹ್ಯನಿಷ್ಠೆಯನ್ನೂ ಖಂಡಿಸಲು ತೊಡಗಿದ್ದರು. ಇವರು ನೀತಿಗಳ ವಿಷಯದಲ್ಲಿ ಸಣ್ಣ ಸಣ್ಣ ಪ್ರಬಂಧಗಳನ್ನು ರಚಿಸಿದುದಲ್ಲದೆ ತಪಸ್ವೀಜೀವನವನ್ನು ನಡೆಸಿ ತಮ್ಮ ಆತ್ಮಗಳನ್ನು ಪರಿಪಕ್ವಗೊಳಿಸಲು ಪ್ರಯತ್ನಿಸಿದರು. ಅಲ್-ಕುಷೈರಿ (1072) ಬರೆದ ಪ್ರಸಿದ್ಧವಾದ ರಿಸಾಲ ಎಂಬ ಗ್ರಂಥ ಈ ಪ್ರವೃತ್ತಿಗಳ ಸಾರಾಂಶವನ್ನೂ ಕೊಡುತ್ತದೆ. ಈ ಕಾಲದ ಅಲ್-ತಸವ್ವುಫ್ ನ (ಅನುಭಾವ) ಪ್ರತಿನಿಧಿಗಳಲ್ಲಿ ಅತಿ ಪ್ರಮುಖರಾರೆಂದರೆ, ಅಲ್-ಕದರಿಯ ಎಂಬ ವರ್ಗವೊಂದನ್ನು ಸ್ಥಾಪಿಸಿದ ಷೇಕ್ ಅಬ್ದುಲ್ ಖಾದರ್ ಅಲ್-ಗಿಲನಿ, ಷಿಹಾಬುದ್ದೀನ್ ಉಮರ್ ಅಸ್-ಸಹ್ರವರ್ದಿ (1234) ಮತ್ತು ಮುಹಿಯುದ್ದೀನ್ ಇಬ್ನ್ ಅರಾಬಿ (1240). ಷೇಕ್ ಅಬ್ದುಲ್ ಖಾದರ್ ಮತ ನಿಷ್ಠೆಗಳ ತಳಹದಿಯ ಮೇಲೆ ತನ್ನ ಪಂಥವನ್ನು ರೂಪಿಸಿರುವ ತಪಸ್ವಿ. ಆದರೆ ಈ ಕಾಲದ ಸೂಫೀ ದಾರ್ಶನಿಕರಲ್ಲಿ ಅತ್ಯಂತ ಶ್ರೇಷ್ಠನಾದ ಅಲ್-ಗಜ್ಜಾಲಿ (1111) ಎಂಬಾತ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಅನೇಕ ಪಂಥಗಳಲ್ಲಿನ ಪರಸ್ಪರ ವಿರೋಧವನ್ನು ತೀವ್ರವಾಗಿ ವ್ಯಾಸಂಗಮಾಡಿ, ಬಹಳ ಕೌಶಲದಿಂದ ಅಧ್ಯಾತ್ಮ ಜೀವನ ನಡೆಸುವುದೇ ಎಲ್ಲ ದೈವಶಾಸ್ರ್ತಗಳ ಅಂತಿಮ ಫಲವೆಂಬುದನ್ನು ಕಂಡುಕೊಂಡ, ಈತನ ಪ್ರಖ್ಯಾತವಾದ ಇಹ್ಯ ಅಲ್‍ಉಲೂಮುದ್ದೀನ್ ಎಂಬ ಗ್ರಂಥ ಆತನ ಸಿದ್ಧಾಂತದ ಸಾರವನ್ನು ಸಮಗ್ರವಾಗಿ ಕೊಡುತ್ತದೆ. ಅದರಲ್ಲಿ ಇಸ್ಲಾಮಿನ ಧ್ಯೇಯಕ್ಕೆ ಸೂಫೀತತ್ವದ ಆಧ್ಯಾತ್ಮಿಕತೆ ವ್ಯಾಪಿಸಿದೆ. ಈ ಶಾಖೆಯ ಪಶ್ಚಿಮ ಭಾಗದ ಪತಿನಿಧಿ ಇಬ್ನ್ ಹಜಮ್ (1063) ಆಲ್ ಮಿಲಾಲ್ ಅಲ್ ನಿಹಾಲ್ ಎಂಬ ಗ್ರಂಥದಲ್ಲಿ ಮುಸಲ್ಮಾನ ಮತ್ತು ಇತರ ಮತ ಪಂಥಗಳ ವಿಷಯದಲ್ಲಿ ಆತ ತೋರಿಸಿರುವ ತೀವ್ರ ಅಸಹನೆ ಅನೇಕರಿಗೆ ಅಸಮಾಧಾನ ತಂದಿದೆ. ಭಾಷಾವಿಜ್ಞಾನ : ಅರಬ್ಬರಲ್ಲದವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದಾಗ, ಮುಸ್ಲಿಮ್ ರಾಷ್ಟ್ರಗಳ ದೂರಪ್ರಾಂತ್ಯಗಳಲ್ಲಿ ಅರಬ್ಬರು ನೆಲೆಸಲು ಮೊದಲು ಮಾಡಿದಾಗ, ಭಾಷೆ ಬಾರದ ಜನ ಕುರಾನನ್ನು ತಪ್ಪಿಲದಂತೆತೆ ಓದಲು ಬೇಕಾದ ಶಾಸ್ರ್ತ ಸಹಾಯವನ್ನೊದಗಿಸುವ ಕೆಲಸ ಮೊದಲಾಯಿತು. ಸ್ಪೇನಿನಂಥ ಪಾಶ್ಚಾತ್ಯ ಇಸ್ಲಾಮ್ ಪ್ರದೇಶಗಳಲ್ಲಿ ಅಲ್-ದನಿ ಮತ್ತು ಅಲ್-ಷಾತಿಬಿ ಎಂಬುವರು ಧ್ವನಿ ಜ್ಞಾನ, ಕುರಾನಿನ ಓದುಗಾರಿಕೆಗಳ ಮೇಲೆ ಗ್ರಂಥಗಳನ್ನು ಬರೆದರು. ಅಲಿ ಎಂಬ ಕಲೀಫನ ನಿರ್ದೇಶನದಂತೆ ಅಬುಲ್ ಅಸವಾದ್ ಅದ್ ದು ಅಲಿ (685) ವ್ಯಾಕರಣದ ಮೂಲತತ್ವಗಳನ್ನು ಮೊದಲು ವಿಮರ್ಶಿಸಿದ. ಕೂಫ ಮತ್ತು ಬಸ್ರ ಎಂಬ ಇರಾಕಿನ ಎರಡು ಪಟ್ಟಣಗಳಲ್ಲಿ ಅರಬ್ಬೀ ಭಾಷೆಯ ವ್ಯಾಕರಣಶಾಸ್ರ್ತದ ವ್ಯಾಸಂಗ ನಡೆಯುತ್ತಿತ್ತು. ಭಾಷೆಯ ಸೂತ್ರ, ಜಾಯಮಾನಗಳ ವಿಚಾರದಲ್ಲಿದ್ದ ದೃಷ್ಟಿಭೇದದ ದೆಸೆಯಿಂದ ಅಲ್ಲಿ ಎರಡು ವ್ಯಾಕರಣ ಪಂಥಗಳು ಏರ್ಪಟ್ಟವು. ವೈಯಾಕರಣರಲ್ಲಿ ಅತ್ಯಂತ ಪ್ರಸಿದ್ಧರಾದವರು; ಛಂದಶ್ಶಾಸ್ತ್ರ ಪ್ರವರ್ತಕ ಖಲೀಲ್-ಬ್-ಅಹಮದ್(786), ಅಲ್ ಕಿತಾಬ್‍ನ ಕರ್ತೃ ಅಬು ಬಿಷ್ರ್ ಅಮ್ರ್ ಉ ಥ್‍ಮನ್ ಸಿಬ್‍ವೈಯ (796). ಭಾಷೆಗೂ ನಿಘಂಟಿಗೂ ಸಂಬಂಧಪಟ್ಟ್ಟ ವಿಷಯಗಳನ್ನು ಬೆದೂಯಿನ್ ಜನರಿಂದ ಶೇಖರಿಸಲಾಯಿತು. ಕಾಡುಮೃಗಗಳು, ಕುದುರೆಗಳು, ಒಂಟೆಗಳು, ಮಳೆ ಮತ್ತು ಮನುಷ್ಯನ ವಾಸಸ್ಥಾನಗಳು-ಇತ್ಯಾದಿ ವಿಷಯಗಳ ಮೇಲಿನ ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಲಾಯಿತು. ಈ ಪುಸ್ತಕಗಳನ್ನು ಅವಕ್ಕಿಂತಲೂ ದೊಡ್ಡವೂ ಕ್ರಮಬದ್ಧವೂ ಆದ ನಿಘಂಟುಗಳಲ್ಲಿ ಸೇರಿಸಿಕೊಳ್ಳಲಾಯಿತು. ಬಸ್ರ ಪಂಥಕ್ಕೆ ಸೇರಿದ ಅಬುಬಕರ್ ಇಬ್ನ್ ದುರೈದನು ಜಂಹರ ಎಂಬ ದೊಡ್ಡ ಪ್ರಮಾಣದ ನಿಘಂಟನ್ನೂ ಶಬ್ದಗಳ ಮೂಲರೂಪ, ನಿಷ್ಪನ್ನ ರೂಪಗಳನ್ನು ವಿವರಿಸುವ ಕಿತಾಬ್-ಅಲ್-ಇಷ್ತಿಕಾಕ್ ಎಂಬ ಗ್ರಂಥವನ್ನು ರಚಿಸಿದ ಈ ವರ್ಗಕ್ಕೆ ಸೇರಿದವನಾದ ಅಲ್ ಮುಬರ್ರಾದ್ (898) ಭಾಷೆ ಮತ್ತು ಸಾಹಿತ್ಯಗಳನ್ನಲ್ಲದೆ ಪ್ರಾಚೀನ ಇತಿಹಾಸ ಮತ್ತು ಸಂಪ್ರದಾಯಗಳನ್ನೂ ಒಳಗೊಂಡಿರುವ ಕಿತಾಬ್-ಅಲ್-ಕಮೀಲ್ ಎಂಬ ವಿಶ್ವಕೋಶವನ್ನು ರಚಿಸಿದ. ಮತೊಂದು ಕಡೆಯಲ್ಲಿ ಕೂಫ ನಗರದ ಪಂಥವನ್ನು ಪ್ರತಿನಿಧಿಸುವ ಕಿಸಾಯಿ, ಫರ್ರ ಇಬ್ನ್ ಅಸ್ ಸಿಕ್ಕಿತ್ ಶಾಸ್ರ್ತಜರ ಇಸ್‍ಲಾಹ್ ಅಲ್ ಮನ್ತಿಕ್, ಕಿತಬ್ ಅಲ್ ಅಲ್ಫಿಜ್ ಕೃತಿಗಳು ಮುಖ್ಯವಾಗಿವೆ. ಅಲ್-ಮುಬರ್ರಾದ್‍ನಷ್ಟೇ ಮುಖ್ಯನಾದ ಥ ಅಲಬ್ (903) ತನ್ನ ಕಿತಾಬ್-ಅಲ್-ಫನೀಷ್ ಗ್ರಂಥದಿಂದ ಪ್ರಸಿದ್ಧನಾದ. ಈತನ ಶಿಷ್ಯ ಇಬ್ನ್ ಅಲ್-ಅನ್‍ಬರಿ ವಿರೋಧಾರ್ಥಕ ಶಬ್ದಗಳ ಮೇಲೆ ಒಂದು ಪುಸ್ತಕವನ್ನು ಬರೆದ. ದಿವಾನಗಳನ್ನು ಸಂಗ್ರಹಿಸಿದ; ಅವುಗಳ ಮೇಲೆ ವ್ಯಾಖ್ಯಾನ ಬರೆದ. ಬಾಗ್ದಾದಿನಲ್ಲಿ ಇಬ್ನ್-ಖಲವೈಯ, ಇಬ್ನ್‍ಅಬ್ಬಾದ್, ಇಬ್ನ್ ಫಾರಿಸ್ ಎಂಬುವರು ಗಣ್ಯರಾಗಿದ್ದರು. ಸ್ಪೇನಿನಲ್ಲಿ ಭಾಷಾಶಾಸ್ರ್ತ ವನ್ನು ಪ್ರಾರಂಭಗೊಳಿಸಿದವ ಅಬು ಅಲಿ ಅಲ್-ಕಾಲಿ (966). ಆತನ ಅಮಾಲಿ ಎಂಬ ಪುಸ್ತಕ ವಿಷಯದಲ್ಲೂ ಉದ್ದೇಶದಲ್ಲೂ ಅಲ್-ಮುಬರ್ರಾದಾನ ಕಾಮಿಲ್ ಎಂಬ ಗ್ರಂಥವನ್ನು ಹೋಲುತ್ತದೆ. ಇಬ್ನ್‍ಸಿದ (1065) ಎಂಬಾತ ಬರೆದ ಅಲ್-ಮುಖಸ್ಸಾಸ್ ಎಂಬ ಗ್ರಂಥ ಸ್ಪೇನ್ ದೇಶದಲ್ಲಿ ಬರೆದ ಭಾಷಾಶಾಸ್ತ್ರ ಗ್ರಂಥದಲ್ಲಿ ಬಹಳ ದೊಡ್ಡದು. ನಿಘಂಟುಗಳ ರಚನೆಯಲ್ಲಿ ಇಂಥ ಪಯತ್ನಗಳಿಗೆ ಕಿರೀಟಪ್ರಾಯವಾಗಿರು ವುದು ಅಲ್-ಚೌಹರಿಯ ಸಹಾಹ್ (1002) ಎಂಬ ಪುಸ್ತಕ. ಈಜಿಪ್ಟಿನ ವಿದ್ವಾಂಸ ಇಬ್ನ್ ಮನ್‍ಜುರ್ (1311) ಈ ಗ್ರಂಥಕ್ಕೆ ಇತರ ನಿಘಂಟುಗಳ ವಿಷಯಗಳನ್ನು ಅಳವಡಿಸಿ ನಿಸಾನ್ ಅಲ್ ಅರಬ್ ಎಂಬ ಹೆಸರಿನಲ್ಲಿ 20 ಸಂಪುಟಗಳಿಗೆ ವಿಸ್ತರಿಸಿದ. ವ್ಯಾಕರಣ ಮತ್ತು ಭಾಷಾಶಾಸ್ರ್ತಗಳಲ್ಲಿ ಮತೊಬ್ಬ ಗಣ್ಯವ್ಯಕ್ತಿ ಜಮಕರಿ. ಈತ ಬರೆದ ಫೈಖ್ ನಿಘಂಟು, ವ್ಯಾಕರಣಕ್ಕೆ ಕೈಪಿಡಿಯೆನಿಸಿರುವ ಅಲ್-ಮುಫಾಸಲ್‍ಗಳು ಈಗಲೂ ಜನಪ್ರಿಯವಾಗಿವೆ. ಆದರೆ ಇಬ್ನ್‍ಮಾಲಿಕ್ಕ್‍ನ ಅಲ್ಫಿಯ ಎಂಬುದು ಅರಬೀ ಭಾಷೆಯನ್ನು ಕಲಿಸುವೆಡೆಯಲ್ಲೆಲ್ಲ ವ್ಯಾಕರಣಕ್ಕೆ ಪಠ್ಯ ಪುಸ್ತಕವಾಗಿದೆ.
ಗದ್ಯ ಮತ್ತು ಪದ್ಯ ಸಾಹಿತ್ಯ
ಬದಲಾಯಿಸಿಅಬ್ಬಾಸಿದ್ ವಂಶದವರು ಬೌದ್ಧಿಕ ಕಾರ್ಯ ಕಲಾಪಗಳಿಗೆ ಕೊಡುತ್ತಿದ್ದ ಪೋತ್ಸಾಹ ಪದ್ಯಕ್ಕೂ ದೊರೆಯಿತು. ವಿಧರ್ಮಿಗಳ ಕೈಸಿದನ ಮಾದರಿಯ ಒಂದೇ ಪಡಿಯಚ್ಚಿನ ರೂಪಗಳ ಶೈಲಿಯನ್ನು ಮುಂದುವರಿಸಿಕೊಂಡು ಬಂದುದರ ಜೊತೆಗೆ ಹೊಸ ಅಂಶಗಳನ್ನೂ ಪದ್ಯ ಕ್ಕೆ ಅಳವಡಿಸಲಾಯಿತು. ಕವಿತಾಶೈಲಿ ಇರಾನಿನವರ ಸಂಪರ್ಕದಿಂದುಂಟಾದ ಹೊಸ ಪರಿಸ್ಥಿತಿಯಲ್ಲಿ ಲಾಲಿತ್ಯದ ಕಡೆಗೆ ತಿರುಗಿ ಮೃದುವಾಗಿದ್ದರೂ ಪದಗಳ ಜೋಡಣೆ, ಪದ್ಯ ದ ಶೈಲಿ ಪ್ರಾಚೀನ ಪ್ರೌಢಮಾರ್ಗವನ್ನೇ ಹಿಡಿದಿತ್ತು. ಪರಕೀಯರ ಪ್ರಭಾವಗಳಿಂದ ಪ್ರವೃತ್ತವಾಗಿದ್ದ ಮತವಿರುದ್ಧ ಚಟುವಟಿಕೆಗಳು ಅನೇಕ ಕವಿಗಳ ಮೇಲೆ ತಮ್ಮ ಪ್ರಭಾವವನ್ನು ಬಹಳವಾಗಿ ಬೀರಿದವು. ಅವgಲ್ಲಿ ಅನೇಕರು ಜಿಂಡಿಕ್ (ಪಾಷಂಡಿ) ಎನ್ನಿಸಿಕೊಂಡಿದ್ದರು. ಇರಾನಿನ ದ್ವೈತಸಿದ್ಧಾಂತದಿಂದ ಪ್ರಭಾವಿತರಾದ ಕವಿಗಳೆಂದರೆ, ಬಾಷ್ಷಾರ್ ಇಬ್ನ್ ಬುರ್ದ್ (783) ಮತ್ತು ಸಲೀಹ್ ಇಬ್ನ್ ಅಬ್ದುಲ್ ಕುದ್ದುಸ್(813), ಕೆಲವು ಹಿಂದಿನ ಕವಿಗಳ ಜೊತೆಗೆ, ಆ ಕಾಲದಲ್ಲಿ ಬಹು ಪ್ರಖ್ಯಾತರಾದ ಕವಿಗಳೆಂದರೆ, ಅಬು ನುವಾಸ್, ಅಬುಲ್ ಅತಾಹಿಯ, ಅಬು ತಮ್ಮಮ್ ಮತ್ತು ಅಲ್-ಬಹ್‍ತೂರಿ. ಅಬು ನುವಾಸ್(810) ಬಹು ಚಪಲ ಮತ್ತು ಸ್ವೇಚ್ಛಾಪ್ರವೃತ್ತಿಯುಳ್ಳ ಕವಿಯಾದರೂ ವೃದ್ಧಾಪ್ಯದಲ್ಲಿ ಸಾರವತ್ತಾದ ವಿಷಯಗಳ ಕಡೆಗೆ ತನ್ನ ಮನಸ್ಸನ್ನು ತಿರುಗಿಸಿದ. ಆತನ ಪಾನಗೀತೆಗಳೂ ಪ್ರಣಯ ಪದ್ಯ ಗಳೂ ಅತ್ಯಂತ ಖ್ಯಾತಿಗಳಿಸಿವೆ. ಮತೊಂದು ಕqಯಲ್ಲಿ ಅಬುಲ್-ಅತಾಹಿಯ (828) ಜುಹ್ದ್‍ಗಳನ್ನು (ದೈವಭಕ್ತಿ ಮತ್ತು ಸದಾಚಾರ) ಕುರಿತ ಪದ್ಯ ರಚನೆಯಲ್ಲಿ ನಿರತನಾಗಿ ಸರಳವೂ ಬೋಧಕವೂ ಆದ ಶೈಲಿಯಲ್ಲಿ ನೀತಿಪದಗಳನ್ನು ರಚಿಸಿದ. ಪ್ರಾಚೀನ ಸಂಪ್ರದಾಯವನ್ನು ವಿರೋಧಿಸಿದ ಸ್ವೈರ ಪ್ರವೃತ್ತಿ ಅಬ್ದುಲ್ಲ ಇಬ್ನ್ ಅಲ್ ಮುತಾಜ್ಜ್ ಎಂಬ ಸುಸಂಸ್ಕೃತ ರಾಜಪುತ್ರನ ಕವಿತಾ ಕೌಶಲದ ವಿಶಿಷ್ಟಗುಣ. ಆತನೇ ಬರೆದಿರುವ ಅಲ್-ಮುತದಾದ್ ಎಂಬ ಕಲೀಫ£ನ್ನು ಕುರಿತ 419 ಪದ್ಯ ಗಳ ದೀರ್ಘಕವಿತೆ ಪರ್ಷಿಯನ್ ಮುತ್‍ನವಿಯ ಮಾದರಿಯಲ್ಲಿದೆ. ಪ್ರಾಚೀನ ಕಸೀದ ಶೈಲಿಯನ್ನು ಉಳಿಸಿಕೊಂಡು ಬಂದ ಕವಿಗಳ ಪೈಕಿ ಅಬು ತಮ್ಮಮ್, ಅಲ್-ಬುಹ್‍ತರಿ ಗಣ್ಯರು. ಇಬ್ಬರೂ ಸಿರಿಯದವರು. ಬಾಗದಾದಿಗೆ ಬಂದು ನೆಲೆಸಿ ಆಸ್ಥಾನಕವಿಗಳಾಗಿ ಬಾಳಿದರು. ಒಳ್ಳೆಯ ಶೈಲಿಯ ಪ್ರಶಂಸಾ ಪದ್ಯಗಳನ್ನು ಬರೆಯುವುದರೂಂದಿಗೆ ಇಬ್ಬರೂ ಬೇರೆ ಬೇರೆಯಾಗಿ ಅರೇಬಿಯದ ಪ್ರಾಚೀನ ಕವಿಗಳ ಪದ್ಯಸಂಗ್ರಹವೊಂದನ್ನು ಸಂಕಲಿಸಿದರು. ಅದಕ್ಕೆ ಅಲ್-ಹಮಾಸ ಎಂದು ಹೆಸರು. ಅಬು- ತಮ್ಮಮ್‍ನ ಸಂಗ್ರಹವೇ ಮಿಕ್ಕೆಲ್ಲ ಸಂಗ್ರಹಗಳಿಗಿಂತಲೂ ಸರ್ವಶ್ರೇಷ್ಠವಾದುದೆಂದು ಪರಿಗಣಿತವಾಗಿದೆ. ಸ್ಪೇನ್ ದೇಶದಲ್ಲಿ ಹೊಸ ಕವಿತಾ ಪ್ರಕಾರಗಳು ಹುಟ್ಟಿದವು. ಅರಬ್ಬರ ಹಾಡುಗಬ್ಬದ ಸಾಹಿತ್ಯ ಸ್ಪೇನ್ ಒಂದರಲ್ಲೇ ಅಲ್ಲದೆ ಉತರ ಆಫ್ರಿಕದಲ್ಲೂ ಸಿಸಿಲಿಯಲ್ಲೂ ಅಭಿವೃದ್ಧಿ ಹೊಂದಿತು. ಅಬ್ಬಾಸಿದ್ ವಂಶದವರ ಕಿಲಾಫತ್ತು ಒಡೆದು ಹೋದ ಮೇಲೆ, ಇಸ್ಲಾಂ ಸಾಮ್ರಾಜ್ಯದ ಪ್ರಾಂತ್ಯಗಳಲ್ಲಿ ಬೇರೂರಿದ್ದ ಸಣ್ಣ ಸಣ್ಣ ರಾಜಕುಲಗಳ ಆಸ್ಥಾನಗಳು ಬೌದ್ಧಿಕ ಕಾರ್ಯಕಲಾಪಗ ಳಿಗೆ ಕೇಂದ್ರವಾದವು. ಅಲೆಪೋನಲ್ಲಿ ಕುದುರೆ ಎಂಬಾತನ ಹಮ್ ದೋಸಿದ್ ಆಸ್ಥಾನ ಸಾಹಿತ್ಯಕ್ಕೆ ಅತ್ಯಂತ ಶೇಷ್ಠ ಕೇಂದ್ರವಾಗಿತ್ತು. ಅಲ್ಲಿ ಇದ್ದ ಅಲ್-ಮುತನಬ್ಬಿ (965) ಎಂಬ ಖ್ಯಾತ ಕವಿಯ ಕವಿತೆಗಳಿಗೆ ಸತತವಾಗಿ ಮೆಚ್ಚುಗೆ, ಮನ್ನಣೆ ದೊರೆತಿದೆ. ಅವುಗಳನ್ನು ಅಭ್ಯಾಸ ಮಾಡುವುದೂ ಟೀಕೆ ಟಿಪ್ಪಣಿಗಳನ್ನು ಬರೆಯುವುದೂ ಎಲ್ಲ ಕಾಲದಲ್ಲೂ ನಡೆದಿದೆ. ಗ್ರೀಕರೊಡನೆ ನಲವತ್ತು ಸಲ ಕಾದಿದ್ದ ಅಲೆಪೊನ ದೊರೆ ಸೈಫುದ್ದೌಲನ ಕದನಗಳನ್ನು ಕುರಿತು ಅನೇಕ ಹಾಡುಗಳನ್ನು ಈತ ತನ್ನ ಗೆಳೆಯನೊಂದಿಗೆ ರಚಿಸಿದ್ದಾನೆ. ಕುರುಡನಾದ ಅಲ್ ಮಅರ್ರಿ (1054) ಎಂಬ ಕವಿಯ (ನೋಡಿ- ಅಬುಲ್‍ಅಲಾ-ಅಲ್--ಮ-ಅರ್ರಿ) ತಲೆಮಾರಿಗೆ ಪ್ರೌಢಶೈಲಿಯ ಕವಿತಾ ಪ್ರಕಾರ ಕೊನೆಗೊಂಡಿತು. ಈ ಕವಿ ಇಸ್ಲಾಮ್ ಸಾಹಿತ್ಯದಲ್ಲಿನ ವೈಜ್ಞಾನಿಕ ವಿಚಾರಗಳನ್ನರಿತಿದ್ದನಲ್ಲದೆ ಸಿರಿಯ ಬಾಗದಾದ್‍ಗಳಲ್ಲಿ ಗ್ರೀಕ್ ಮತ್ತು ಭಾರತದ ದರ್ಶನಗಳ ವಿಸ್ತಾರವಾದ ಪಾಂಡಿತ್ಯ ಸಂಪಾದಿಸಿಕೊಂಡಿದ್ದ. ಆತ ತನ್ನ ರಸೈಲ್ ಎಂಬ ಸಾಹಿತ್ಯಕ ಪತ್ರ-ವ್ಯವಹಾರಗಳಿಗಾಗಲ್ಲದೆ ಸಖ್ತ್ ಅಲ್-ಜಂಡ್ ಮತ್ತು ಲುಜುಂ ಮ ಲ ಯಲ್‍ಜಂ ಎಂಬ ಎರಡು ಕವಿತಾಗ್ರಂಥಗಳಿಗಾಗಿಯೂ ಪ್ರಖ್ಯಾತನಾಗಿದ್ದಾನೆ. ಈತನ ವಿಚಾರಸರಣಿಯಲ್ಲಿ ಬೌದ್ಧಮತದ ಪ್ರಭಾವಗಳೂ ಸಹ ಗೋಚರಿಸುತ್ತದೆ. ಅಬ್ಬಾಸಿದ್ ಕಲೀಫರ ಪರ್ಷಿಯನ್, ಗ್ರೀಕ್ ಮತ್ತು ಸಿರಿಯನ್ ಭಾಷೆಗಳಿಂದ ಅರಬ್ಬೀ ಭಾಷೆಗೆ ಗ್ರಂಥಗಳನ್ನು ತರ್ಜುಮೆ ಮಾಡಲು ಕೊಟ್ಟ ಪೋತ್ಸಾಹದ ಫಲವಾಗಿ ಸಾಹಿತ್ಯದಲ್ಲಿ ಉತಮ ಗದ್ಯ ದ ವ್ಯವಸಾಯಕ್ಕೆ ಹೆಚ್ಚಾಗಿ ಅನುವು ದೊರೆಯಿತು. ಪರ್ಷಿಯನ್ನರ ದಾರ್ಶನಿಕ ಗ್ರಂಥಗಳಿಂದ ಹಗುರವಾದ ಸಾಹಿತ್ಯ ಭಾಗವನ್ನೂ ಗ್ರೀಕಿನಿಂದ ನಿಸರ್ಗ ವಿಜ್ಞಾನವಿಷಯಗಳನ್ನೂ ಭಾರತದಿಂದ ಗಣಿತವನ್ನೂ ಭಾಷಾಂತರ ಮಾಡುವ ಕೆಲಸ ಚುರುಕಾಯಿತು. ಸಂಸ್ಕೃತಭಾಷೆಯ ಪಂಚತಂತ್ರವೆಂಬ ಪುಸ್ತಕದ ಪಹ್ಲವೀಭಾಷೆಯ ಪಾಠವನ್ನು ಕಲೀಲ ವಾ ದಿಮ್ಮ ಎಂಬ ಶಿರೋನಾಮೆಯಲ್ಲಿ ಇಬ್ನ್ ಅಲ್-ಮುಕಪ್ಪ (757) ಅನುವಾದ ಮಾಡಿದ. ಆತ ಕುದೈನಾಮ ಎಂಬ ಪರ್ಷಿಯಾದ ಇತಿಹಾಸ ಗ್ರಂಥವನ್ನು ಭಾಷಾಂತರಿಸಿದ್ದಾನೆ. ಕಲಾತ್ಮಕ ಗದ್ಯಕ್ಕೆ ನೈಜತಮ ಪ್ರತಿನಿಧಿಯಾದ ಬಸ್ರ ನಗರದ ಅಲ್- ಜಹೀಜ್‍ನ (862) ಕಿತಾಬ್-ಅಲ್-ಹಯವಾನ್, ಕಿತಾಬ್-ಅಲ್ ಬಯನ್-ವಲ್‍ತ್ಯಾಬಿನ್, ಕಿತಾಬ್-ಅಲ್-ಬುಖಾಲ ಎಂಬ ಗ್ರಂಥಗಳು ದೇಸೀ ನುಡಿಗಟ್ಟುಗಳಿಗೂ ಸಂಸ್ಕೃತಿ, ಸಾಹಿತ್ಯಗಳ ಇತಿಹಾಸಕ್ಕೂ ಭಂಡಾರವೆನಿಸಿವೆ. ಆತ ಒಳ್ಳೆ ಚುರುಕುಬುದ್ಧಿಯ ಬರೆಹಗಾರನಲ್ಲದೆ ಮುಂದಿನ ತಲೆಮಾರುಗಳ ಮೇಲೆ ತುಂಬ ಪ್ರಭಾವ ಬೀರಿರುವ ಗದ್ಯಶೈಲಿಯ ಅಧಿನಾಯಕನೂ ಆಗಿದ್ದಾನೆ. ಅಲ್-ಜಹೀಜ್‍ಗೆ ಕಿರಿಯ ಸಮಕಾಲೀನನಾದ ಇಬ್ನ್ ಕುತೈಬ (883) ಭಾಷಾಶಾಸ್ರ್ತಜ್ಞ ಮತ್ತು ಚರಿತೆಯನ್ನು ತಿಳಿದವ. ಅದಬ್-ಅಲ್-ಕಲಿಬ್ ಎಂಬ ಪುಸ್ತಕದಲ್ಲಿ ಆತ ಭಾಷೆ ಮತ್ತು ವ್ಯಾಕರಣಗಳ ಮುಖ್ಯ ಸಮಸ್ಯೆಗಳನ್ನು ಸಂಗ್ರಹಿಸಿದ್ದಾನೆ. ಯಾವ ಬರೆಹಗಾರನಿಗಾದರೂ ಇದರ ತಿಳಿವಳಿಕೆ ಅವಶ್ಯ . ಆತನ ಕಿತಾಬ್-ಅಲ್-ಮಾಅರಿಫ್ ಮತ್ತು ಉಯುನ್ ಅಲ್-ಅಕಬರ್ ಎಂಬ ಗ್ರಂಥಗಳಲ್ಲಿ ಐತಿಹಾಸಿಕ, ರಾಜಕೀಯ ಮತ್ತು ಸಾಹಿತ್ಯಕ ವಿಷಯಗಳನ್ನು ಕುರಿತು ಬರೆದಿದ್ದಾನೆ. ಇವನ ತರುವಾಯ ಕಲಾತ್ಮಕ ಗದ್ಯ ದ ಬರೆವಣಿಗೆಯಲ್ಲಿ ನಿಪುಣನಾಗಿ ದೊಡ್ಡವನೆನಿಸಿದವನೆಂದರೆ ಅಬುಲ್ ಅಲಾ ಅಲ್‍ಮಅರ್ರಿ. ಕಲಾತ್ಮಕ ಗದ್ಯ ದಲ್ಲಿ ವಿಧವಿಧವಾದ ವಿಷಯಗಳ ಮೇಲೆ ಬರೆದ ಅನೇಕ ಕೃತಿಗಳ ಜೊತೆಗೆ ಸಾಮಾನ್ಯ ವಿದ್ಯಾಬ್ಯಾಸಕ್ಕೆ ತಕ್ಕ ವಿಷಯಗಳನ್ನು ಒದಗಿಸುವ ವಿಶ್ವಕೋಶದಂಥ ಕೃತಿಗಳೂ ಬಳಕೆಗೆ ಬಂದುವು. ಅಂಥ ಕೃತಿಗಳ ಪೈಕಿ ಸೇನ್ ದೇಶದವನಾದ ಇಬ್ನ್ ಅಬ್ದಾ ರಬ್ಬಿಹಿ (929) ಬರೆದ ಇಕ್ದ್-ಅಲ್-ಫರೀದ್ ಎಂಬುದೊಂದು. ಅದರಲ್ಲಿಇಸ್ಲಾಮಿಗೆ ಹಿಂದಿನ ಚರಿತ್ರೆ ಮತ್ತು ಇಸ್ಲಾಮಿನ ಚರಿತ್ರೆ, ಕವಿತೆ, ಛಂದಸ್ಸು, ಗಾದೆಗಳು, ಸಾಹಿತ್ಯಕ ಮತ್ತು ಐತಿಹಾಸಿಕ ಪ್ರಸಂಗಗಳು ಇತ್ಯಾದಿಗಳನ್ನು ಕುರಿತ ಇಪ್ಪತೈದು ಅಧ್ಯಾಯಗಳಿವೆ. ಅದೇ ಮಾದರಿಯ ಆದರೆ ಆ ಕಾಲಕ್ಕೀಚಿನ ಗ್ರಂಥಗಳಾವುವೆಂದರೆ ರಫೀಬ್-ಅಲ್‍ಇಸಫ್‍ಹಾನಿ (1108) ಎಂಬುವನ ಮುಹದರತ್-ಅಲ್-ಉದಾಬ ಮತ್ತು ಅಜ್‍ಜಮಾಕರಿಯ (1193) ರಬಿ-ಅಲ್-ಅಬ್ರಾರ್ ಎಂಬುವು. ರಾಜ್ಯದ ಸರ್ಕಾರಿ ಪತ್ರಗಳು ಮತ್ತು ರಾಜಕೀಯ ವಿಚಾರಗಳಿಗೆ ಸಂಬಂಧಪಟ್ಟ ಪತ್ರವ್ಯವಹಾರಗಳು ಮುಂತಾದುವುಗಳಿಗೆ ಕಲಾತ್ಮಕ ಗದ್ಯ ಅವಶ್ಯವೆನಿಸಿ ಅದರ ಬೆಳೆವಣಿಗೆ ಹೆಚ್ಚಿತು. ಹಿಂದಿನ ಕಾಲದ ಸರಳಶೈಲಿಗೆ ಬದಲಾಗಿ ಆಲಂಕಾರಿಕ ಕಲ್ಪನೆಗಳು, ಸಾಜಗಳನ್ನು (ಪ್ರಾಸಬದ್ಧ ಗದ್ಯ ) ಹೇರಳವಾಗಿ ಬಳಸುವುದು ಬಳಕೆಗೆ ಬಂತು. ಇಂಥ ಸರ್ಕಾರಿ ಬರೆವಣಿಗೆ ಗಳನ್ನು ಪ್ರತಿನಿಧಿಸುವವರಲ್ಲಿ ಮುಖ್ಯರಾದವರು. ಹಿಲಾಲ್-ಅಸ್ಸ್‍ಸಬಿ(994), ಅಲ್‍ಖವರಾಜ್‍ಮಿ(ಸು.1000), ಅಲ್-ಮ-ಅರ್ರಿ, ಅಲ್-ಕಾದಿ ಅಲ್ ಫದಿಲ್(1199), ಇಬ್ನ್ ಅಲ್ -ಅಥಿರ್ (1239). ಈ ಕಲಾಪೂರ್ಣ ಲೇಖನಗಳು (ಮಾಕಮಾ) ವಿಚಿತ್ರರೂಪದ ಸಾಹಿತ್ಯ ಪ್ರಕಾರದ ಉಗಮಕ್ಕೆ ಕಾರಣವಾದವು. ಮಾಕಮಾ ಏಕಾಂಕ ನಾಟಕದಂತಿದೆ. ಇದರಲ್ಲಿಕಥೆ ಹೇಳುವವನೆ ಮರೆಸಿಕೊಂಡಿರುವ ಕಥಾನಾಯಕನನ್ನು ತಪ್ಪದೆ ಓದುಗರ ಮುಂದೆ ತರುತ್ತಾನೆ. ಈ ಕಥಾನಾಯಕ ಯಾವಾಗಲೂ ಒಬ್ಬ ಘಾಟಿ ಮುದುಕ: ಇವನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಪಯಾಣ ಮಾಡುತ್ತ ಅನೇಕ ಹೂಟಗಳನ್ನು ಹೂಡಿ ತನ್ನ ದೇಹ ಪೋಷಣೆಯನ್ನು ಮಾಡಿಕೊಳ್ಳುತ್ತಾನೆ. ಇವನ ಹೂಟಗಳು ಜನಗಳ ಮೆಚ್ಚಿಗೆಯನ್ನು ಪಡೆಯದಿರುವುದು ಅಪೂರ್ವ. ಈ ಉಕ್ತಿ ವೈಚಿತ್ರ್ಯಗಳೆಲ್ಲವನ್ನೂ ಪ್ರಾಸಬದ್ಧಗದ್ಯದಲ್ಲಿ ಹೇಳಲಾಗಿದೆ. ಈ ಸಾಹಿತ್ಯಪ್ರಕಾರವನ್ನು ಮೊದಲು ಪ್ರಾರಂಭಿಸಿದವ ಅಹಮದ್-ಅಲ್- ಹಮ್ ದಾನಿ. ಅಡ್ಡ ಹೆಸರು ಬಡ್ಡಿ ಉಜ್ಜಮಾನ್(1007). ಆದರೆ ಮಾಕಮಾದ ಶೈಲಿ ತನ್ನ ಪರಿಪೂರ್ಣ ಸೌಂದರ್ಯವನ್ನು ಅಲ್-ಹರೀರಿಯ (1121) ಕೈಯಲ್ಲಿ ಪಡೆಯಿತು. ಮಾಕಾಮಾ ಕತೆಗಾರಿಕೆಯ ಒಂದು ವಿಕಸಿತ ರೂಪವೆಂದು ತೋರುತ್ತದೆ. ಅರಬ್ಬೀ ಮಾತನಾಡುವ ದೇಶಗಳಲ್ಲೆಲ್ಲ ಇಂಥವನ್ನು ರಚಿಸಲು ಜನರು ಬಹು ಇಷ್ಟಪಡುತ್ತಾರೆ. ಇಸ್ಲಾಮಿಗೆ ಪೂರ್ವದ ಕುಲಯುದ್ಧಗಳ ಪುರಾತನ ಕತೆಗಳಂತೆ, ಈ ಸಾಹಸಗಳು ಸೈಫ್- ಇಬ್ನ್‍ಧಿ ಯಜನ್ ಎಂಬ ದಕ್ಷಿಣ ಅರೇಬಿಯದ ದೊರೆಯ ಪ್ರಣಯಪ್ರಸಂಗ, ಬಾನು ಹಿಲಾಲನ ಕಾಲ್ಪನಿಕ ಕಥನಗಳು ವಿಸ್ತಾರವಾಗಿ ಹಬ್ಬಿ ಜನರು ಅವನ್ನು ಬಹಳ ಉತ್ಸಾಹದಿಂದ ಓದುತ್ತಿದ್ದರು. ಅರಬ್ಬೀ ಸಾಹಿತ್ಯದಲ್ಲೊಂದರಲ್ಲದೆ ಪ್ರಪಂಚದ ಸಾಹಿತ್ಯದಲ್ಲೇ ಪ್ರಖ್ಯಾತವಾದ ಅರೇಬಿಯನ್ ನೈಟ್ಸ್ ಇದೇ ವರ್ಗದಲ್ಲಿ ಬರುತ್ತದೆ. ಇವು ಹಜಾರ ಅಫಸಾನೆ ಎಂಬ ಹೆಸರಿನ ಭಾರತೀಯ ಮೂಲವಾದ ಪರ್ಷಿಯನ್ ಕಥೆಗಳೆಂದು ಹೇಳುತ್ತಾರೆ (ನೋಡಿ - ಸಾವಿರದೂಂದು ರಾತ್ರಿಗಳು).
ದರ್ಶನ ಮತ್ತು ಪ್ರಕೃತಿ ವಿಜ್ಞಾನ
ಬದಲಾಯಿಸಿಗದ್ಯದಂತೆ, ವೈಜ್ಞಾನಿಕ ಸಾಹಿತ್ಯವೂ ಗ್ರೀಕ್ ಕೃತಿಗಳ ಭಾಷಾಂತರದಿಂದ ಪ್ರಾರಂಭವಾಯಿತು. ಬೈತ್-ಅಲ್-ಹಿಕ್ಮಹ್ ಎಂಬ ಸಂಸ್ಥೆ ಹಾರೂನ್- ಅಲ್-ರಷೀದ್ ಎಂಬ ಕಲೀಫನಿಂದ ಸ್ಥಾಪಿಸಲಟ್ಟು ಮಗ ಅಲ್-ಮಾಮೂನನಿಂದ ಬೆಳೆದು ಭಾಷಾಂತರ ಕಾರ್ಯವನ್ನು ಮುಂದುವರಿಸಿತು. ಖುಸ-ಬ್-ಲೂಕ (835) ಅರಿಸ್ಟಾಟಲ್‍ನ ಕೃತಿಗಳನ್ನಲ್ಲದೆ ಗಣಿತ ಮತ್ತು ಖಗೋಳ ವಿಜ್ಞಾನದ ಮೇಲಿನ ಕೃತಿಗಳನ್ನು, ಮುಖ್ಯವಾಗಿ ಯೂಕ್ಲಿಡ್ಡನ ಕೃತಿಗಳನ್ನು ಭಾಷಾಂತರಿಸಿದ. ಹುನೈನ್-ಇಬ್ನ್-ಇಷಾಕ್ (973) ವೈದ್ಯ ಗ್ರಂಥಗಳ ಜೊತೆಗೆ ಪ್ಲೇಟೋನ ಬರೆಹಗಳನ್ನೂ ಹುಬಾಯಸ್ ವನಸ್ಪತಿ ಮತ್ತು ವೈದ್ಯ ಗ್ರಂಥಗಳನ್ನೂ ಭಾಷಾಂತರಿಸಿದರು. ಥಬಿತ್ ಇಬ್ನ್‍ಕುರ್ರ ಮುಖ್ಯವಾಗಿ ವೈಜ್ಞಾನಿಕ ಪುಸ್ತಕಗಳಲ್ಲಿ ಮಾತ್ರ ಆಸಕ್ತನಾದ. ಆ ಕಾಲದಲ್ಲಿ ರಚನೆಗೊಂಡ ಶಾಸ್ರ್ತ ಗ್ರಂಥಗಳ ಪ್ರಮಾಣವೆಂಬುದು ಇಬ್ನ್ ನಾದಿಮ್‍ನ (995) ಕಿತಾಬ್-ಅಲ್-ಫಿಹಿಸ್ತ್‍ನಿಂದ (ಪುಸ್ತಕಗಳ ಪಟ್ಟಿ) ತಿಳಿಯುತ್ತದೆ. ಆತ ಸಾಹಿತ್ಯ ಮತ್ತು ವಿಜ್ಞಾನಗ್ರಂಥಗಳ ವಿಷಯದಲ್ಲಿ ತನಗೆ ದೊರೆತ ವಿವರಗಳನ್ನೆಲ್ಲ ತನ್ನ ಅಮೂಲ್ಯ ಗ್ರಂಥದಲ್ಲಿ ಕಲೆಹಾಕಿದ್ದಾನೆ. ಅರಿಸ್ಟಾಟಲನ ಕೃತಿಗಳ ಜೊತೆಗೆ ಪ್ಲೇಟೊವಿನ ಅನೇಕ ಕೃತಿಗಳೂ ಭಾಷಾಂತರ ಗೊಂಡವು. ನವ್ಯ ಪ್ಲೇಟೊ ಸಿದ್ಧಾಂತ ಇಸ್ಲಾಮಿನ ವಿವೇಚನಾಪರರ ಮೇಲೆ ಹಿರಿಯ ಪ್ರಭಾವವನ್ನು ಬೀರಿತು. ಅವರ ಭಾವನಾವಿಚಾರ ನಾಲ್ಕನೆಯ ಶತಮಾನದಲ್ಲಿ ಇಖ್‍ವಾನ್ - ಅಸ್-ಸಾಫ ಎಂಬ ಸಂಘದಲ್ಲಿ ಬಹು ವಿಸ್ತೃತದರ್ಶನವಾಗಿ ಬೆಳೆಯಿತು. ಈ ಸಂಘದ ಗುರಿ ಯಾವುದೆಂದರೆ, ಇಸ್ಲಾಂ ತತ್ತ್ವವನ್ನು ನವ್ಯ ಪ್ಲೇಟೋ ಸಿದ್ಧಾಂತದ ತಳಹದಿಯ ಮೇಲೆ ನಿಲ್ಲಿಸಬೇಕೆಂಬುದು. ಅವರ ಅಭಿಪ್ರಾಯಗಳು ಅಜ್ಞಾತನೊಬ್ಬನಿಂದ ಸಂಪಾದಿತವಾದ ರಸೈಲ್ ಇಖ್‍ವಾನಸ್ ಸಾಫ ಎಂಬ ಕೃತಿಯಲ್ಲಿ ಸಂಗ್ರಹಗೊಂಡಿದೆ. ದರ್ಶನವನ್ನು ಕುರಿತು ಬರೆದ ಅಚ್ಚ ಅರಬೀ ಲೇಖಕ ಅಬು ಯೂಸುಫ್ ಯಾಕುಬ್ ಅಲ್-ಕಿಂದಿ (862). ಆತ ದರ್ಶನ, ವೈದ್ಯ, ಖಗೋಳ, ಗಣತ ಮತ್ತು ಸಂಗೀತಶಾಸ್ರ್ತಗಳ ಮೇಲೆ ಸುಮಾರು ಇನ್ನೂರು ಪುಸ್ತಕಗಳನ್ನು ಬರೆದಿದ್ದಾನೆ. ಆ ಕಾಲದ ಪ್ರಮುಖ ದಾರ್ಶನಿಕ ಅಬು ನಾಸ್ತ್ ಅಲ್-ಫರಾಬಿ (950). ಈತ ಅರಿಸ್ಟಾಟಲನ ಮೇಲೂ ಗಣಿತ ವಿಜ್ಞಾನ ಮತ್ತು ಸಂಗೀತ ಶಾಸ್ರ್ತಗ್ರಂಥಗಳ ಮೇಲೂ ವ್ಯಾಖ್ಯಾನಗಳನ್ನು ಬರೆದಿದ್ದಾನೆ. ಅಬು ಅಲಿ ಇಬ್ನ್ ಸಿನ ದೇವತಾಶಾಸ್ತ್ರ, ದರ್ಶನ, ವೈದ್ಯ. ಖಗೋಳ ಮತ್ತು ನಿಸರ್ಗ ವಿಜ್ಞಾನಗಳು ಇತ್ಯಾದಿ ಸಮಸ್ತಜ್ಞಾನ ಶಾಖೆಗಳಲ್ಲೂ ಕೃತಿರಚನೆ ಮಾಡಿದ್ದಾನೆ. ಆತನ ದಾರ್ಶನಿಕ ಗ್ರಂಥವಾದ ಕಿತಾಬ್-ಅಷ್-ಷಿಫ್ ಎಂಬುದೂ ವೈದ್ಯ ಗ್ರಂಥವಾದ ಅಲ್-ಕನೂನ್-ಪಿತ್-ತಿಬ್ ಎಂಬುದೂ ಪಖ್ಯಾತ. ಇವು ತಮ್ಮ ಲ್ಯಾಟಿನ್ ಭಾಷಾಂತರಗಳಲ್ಲಿ ಮಧ್ಯ ಯುಗದ ಯುರೋಪಿ ನಲ್ಲೂ ಅತ್ಯಂತ ಶೇಷ್ಠ ಪ್ರಮಾಣ ಗ್ರಂಥಗಳಾಗಿಉಳಿದಿವೆ. ದಾರ್ಶನಿಕರಿಗೆ ವಿರುದ್ಧವಾಗಿ ಅಲ್-ಘಜ್ಜಾಲಿ ಮಕಾಸಿದ್-ಅಲ್-ಫಲಾಸಪs ಎಂಬ ಸುಪ್ರಸಿದ್ಧ ಕೃತಿಯನ್ನು ಬರೆದ. ಅವರ ವಾದಗಳನ್ನು ನಿರಾಕರಿಸುತ್ತ ಆತ ತಫತ್ ಅಲ್-ಫಲಾಸಫ ಎಂಬ ಗ್ರಂಥ ಬರೆದನಲ್ಲದೆ ಮತ ತತ್ತ್ವಗಳ ಸಮಸ್ಯೆಗಳನ್ನು ದರ್ಶನ ಬಿಡಿಸಲಾರದೆಂಬುದನ್ನು ತೋರಿಸಿಕೊಟ್ಟ. ಆದರೆ ಸ್ಪೇನ್ ದೇಶದಲ್ಲೂ ಉತ್ತರ ಆಫ್ರಿಕದಲ್ಲೂ ದರ್ಶನ ಒಂದು ಹೊಸ ಮಾರ್ಗ ಹಿಡಿಯಿತು. ಇಬ್ನ್ ರಷ್ದ್ (1198), ಅಲ್ ಘಜ್ಜಾಲಿ ಎಂಬಾತನ ವಾದಗಳಿಗೆ ವಿರುದ್ಧವಾಗಿ ಒಂದು ದರ್ಶನವನ್ನು ಎತ್ತಿ ಹಿಡಿದ. ಇಬ್ನ್ ಬಜ್ಜ (1138), ಸಯ್ನ್ ಇಬ್ನ್ ಯಕ್‍ಜಾನ್ ಎಂಬ ಅನ್ಯೋಕ್ತಿ ಕಥಾನಕವನ್ನು ಬರೆದು ಪ್ರಸಿದ್ಧನಾದ. ಇಬ್ನ್ ತುಫೈಲ್ (1185) ಮೊದಲಾದ ಶೇಷ್ಠ ದಾರ್ಶನಿಕರು ಪಶ್ಚಿಮ ಇಸ್ಲಾಂ ಪ್ರದೇಶಗಳಲ್ಲಿ ಉದಿಸಿದರು. ಇಫಾಲ್ ಖವಾರ್ ಜಾಮಿ (820), ಧಬೀತ್-ಇಬ್ನ್-ಕುರ, ಅಲ್-ಕರ್ಖಿ ಎಂಬುವರು ಗಣಿತವಿಜ್ಞಾನದ ಮೇಲೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಇಬ್ರಾಹಿಂ ಅಲ್ಫಜಾರಿ ಖಗೋಳವಿಜ್ಞಾನಕ್ಕೆ ಸಂಬಂಧಪಟ್ಟ ಕೋಷ್ಟಕಗಳನ್ನು ತಯಾರಿಸಿದ. ಅಲ್ ಮನ್‍ಸೂರ್ ಎಂಬ ಕಲೀಫನ ಆಜ್ಞೆಯ ಮೇರೆಗೆ ಭಾರತೀಯ ಗಣಿತ ಗ್ರಂಥಗಳು ಪರಿವರ್ತಗೊಂಡವು. ಅದರದೊಂದು ಸಾರಾಂಶವನ್ನು ಅಲ್ ಖವಾರಿಜ್‍ಮೆ ಎಂಬಾತ ಬರೆಸ. ಅಲೆಕ್ಸಾಂಡ್ರಿಯದ ಟಾಲೆಮಿಯ ಅಲ್ ಮಜೆಸ್ತ್ ಎಂಬ ಪುಸ್ತಕವನ್ನು ಇಬ್ನ್ ಮತರ್ (829) ಎಂಬಾತ ಭಾಷಾಂತರಿಸಿದ್ದರಿಂದ ಖಗೋಳವಿಜ್ಞಾನ ಸಾಹಿತ್ಯ ಇನ್ನೂ ಹೆಚ್ಚಾಗಿ ಪುಷ್ಟಿ ಹೊಂದಿತು. ಅರಬೀ ಖಗೋಳವಿಜ್ಞಾನದ ಪ್ರಖ್ಯಾತ ಪತಿನಿಧಿಗಳಾರೆಂದg, ಅಲ್-ಫರ್‍ಘನಿ, ಅಲ್-ಬತ್ತಾನಿ, ಇಬ್ನ್ ಯೂನಸ್, ಇಬ್ನ್ ಅಲ್ ಹೈಥಂ ಮತ್ತು ಜಬರ್ ಇಬ್ನ್ ಅಫ್‍ಲ ಎಂಬುವರು. ಬಾಗ್ದಾದ್, ಡಮಾಸ್ಕಸ್ ಮತ್ತು ಕೈರೋ ಪಟ್ಟಣಗಳಲ್ಲಿ ಪತಿಷ್ಠಾಪಿತವಾದ ವೀಕಣಕೇಂದಗಳಿಂದ ಈ ವ್ಯಾಸಂಗಗಳಿಗೆ ಬಹಳ ನೆರವು ಸಿಕ್ಕಿತು. ಇತರ ನಿಸರ್ಗವಿಜ್ಞಾನಗಳಂತೆ, ಅರಬ್ಬರ ವೈದ್ಯವಿಜ್ಞಾನವೂ ಗ್ರೀಕ್ ವೈದ್ಯಗ್ರಂಥಗಳ ವ್ಯಾಸಂಗ, ಭಾಷಾಂತರಗಳಿಂದ ಪ್ರಾರಂಭವಾಯಿತು. ಆದರೆ ಅರೇಬಿಯದ ವಿದ್ವಾಂಸರ ಪ್ರತ್ಯಕ್ಷ ಪರೀಕ್ಷೆ ಮತ್ತು ಸ್ವಾನುಭವಗಳು ವೈದ್ಯಜ್ಞಾನದ ಮೊತ್ತವನ್ನು ಇನ್ನೂ ಹೆಚ್ಚಿಸಿದುವು; ಅದಕ್ಕೆ ವಿಸ್ತೃತವೂ ಸ್ವತಂತ್ರವೂ ಆದ ಕೊಡುಗೆಯನ್ನಿತ್ತವು. ಆ ಕಾಲದ ವೈದ್ಯರಲ್ಲಿ ಬಹುಪ್ರಖ್ಯಾತರು - ಅಬು ಜಕಾರಿಯ ಅರ್-ರಜಿ (932), ಅಜ್ಜಹ್ ರವಿ (1009), ಇಬ್ನ್ ಸಿನ (1036), ಇಬ್ನ್ ಮಸಾವಯಹ್ (1015), ಇಬ್ನ್ ಬೂತನ್ (1052), ಇಬ್ನ್ ಮೈಮುನ್ (1204), ಇಬ್ನ್ ನಾಫಿಜ್ (1290). ಅರೇಬಿಯದ ವೈದ್ಯರು ಔಷಧಜ್ಞಾನದಲ್ಲೂ ಮತ್ತು ರೋಗನಿದಾನದಲ್ಲೂ ಬೆರಗುಪಡಿಸುವಂಥ ಮುನ್ನಡೆಯನ್ನು ತೋರಿದರು. ಅವರ ಆಸ್ಪತ್ರೆಗಳೂ ವೈದ್ಯ ಸಂಸ್ಥೆಗಳೂ ಪಾಶ್ಚಾತ್ಯರಿಗೆ ಮಾದರಿಯೆನಿಸಿದುವು. ಜಬರ್ ಇಬ್ನ್ ಹಯ್ಯಾನ್ ಎಂಬುವನಿಂದ ಪ್ರಾರಂಭವಾದ ರಸಾಯನವಿಜ್ಞಾನ ಬೆಳೆದು ಆಶ್ಚರ್ಯಕರವಾದ ವಿಷಯಗಳು ಸಂಶೋಧನೆಗೊಂಡುವು. ಆಧುನಿಕ ರಸಾಯನವಿಜ್ಞಾನದ ಅನೇಕ ಯಂತ್ರೋಪ ಕರಣಗಳೂ ಪಾರಿಭಾಷಿಕ ಶಬ್ದಗಳೂ ಅರಬ್ಬರ ಕೊಡುಗೆಯಾಗಿವೆ. ಇದೇ ರೀತಿಯಲ್ಲಿ ಪ್ರಕೃತಿಚರಿತ್ರೆ, ಸಸ್ಯವಿಜ್ಞಾನ, ಕೃಷಿವಿಜ್ಞಾನಗಳೂ ಮುಂದುವರೆದುವು. ಅಲ್‍ಖಫ್‍ತಿಯಿಂದ ಪ್ರಣೀತವಾದ ತರೀಖ್-ಅಲ್-ಹುಕುಮ, ಇಬ್ನ್ ಅಬಿ ಉಸೈಬಿಯನ ಕಿತಾಬ್ ಅಲ್- ಉಯುನ್-ಅಲ್-ಅನ್‍ಬ ಮುಂತಾದ ದಾರ್ಶನಿಕರ ಮತ್ತು ವೈದ್ಯರ ಜೀವನಚರಿತ್ರೆಗಳು ಸಂಕಲಿತವಾದುವು.
ಭೂಗೋಳ ಮತ್ತು ಚರಿತ್ರೆ
ಬದಲಾಯಿಸಿಯಾತ್ರಿಕರು ತಾವು ಸಂಚರಿಸುವ ದೇಶಗಳ ಪರಿಚಯವವನ್ನು ಮಾಡಿಕೊಳ್ಳಬೇಕಾದ ಆವಶ್ಯಕತೆಯ ಜೊತೆಗೆ, ಅಂಚೆಯ ವ್ಯವಸ್ಥೆ ಮತ್ತು ಕಲೀಫರ ಕಾಲದ ದಕ್ಷ ಆಡಳಿತ - ಇವುಗಳು ಭೌಗೋಳಿಕ ವಿಷಯಗಳನ್ನು ಕುರಿತ ಲೇಖನಗಳಿಗೆ ಉತ್ತೇಜನ ಕೊಟ್ಟವು. ಭೌಗೋಳಿಕ ಲೇಖನಗಳು ಬರಿಯ ದಾರಿಗಳನ್ನೂ ವಾಣಿಜ್ಯ ವ್ಯಾಪಾರಗಳು ಮತ್ತು ಅವುಗಳಿಗೆ ಸಂಬಂಧಪಟ್ಟ್ಟ ಸಂಸ್ಥೆಗಳನ್ನು ಕುರಿತು ವಿವರಿಸಿರುವುದಲ್ಲದೆ ಜೊತೆಗೆ ಆಯಾ ದೇಶದ ಜನರ ಧಾರ್ಮಿಕ, ಸಾಮಾಜಿಕ, ಹಾಗೂ ಸಾಂಸ್ಕೃತಿಕ ಜೀವನಕ್ರಮವನ್ನೂ ಕುರಿತು ವಿಷಯಗಳನ್ನು ನಿರೂಪಿಸಿವೆ. ಯಾತ್ರಿಕರು ಪೂರ್ವ ಮತ್ತು ಪಶ್ಚಿಮ ದೇಶಗಳಿಗೆ ಸಂಬಂಧಪಟ್ಟ್ಟ ಉಪಯುಕವಾದ ಸಂಗತಿಗಳನ್ನೂ ಇಲ್ಲಿ ಸೇರಿಸಿದ್ದಾರೆ. ಭೌಗೋಳಿಕ ಕೃತಿಗಳಲ್ಲಿ ಮುಖ್ಯವಾದುವು ಯಾವುವೆಂದರೆ: ಇಬ್ನ್ ಖುರ್‍ದಾಧ್‍ಭಿಯ ಕಿತಾಬ್-ಅಲ್-ಮಸಾಲಿಕ್ ವಾಲ್ ಮಮಾಲಿಕ್, ಯಾಕೂಬಿಯ ಕಿತಾಬ್-ಅಲ್‍ಬಲ್‍ದನ್, ಇಬ್ನ್ ರುಸ್ತಾನ ಅಲ್-ಅಲಾಖ್ ಅನ್ ನಪಿ¸, ಅಲ್ ಇಸಖ್ರಿ ಮತ್ತು ಇಬ್ನ್ ಹೌಕಲ್ ಎಂಬುವರ ಕಿತಾಬ್-ಅಲ್-ಮಸಾಲಿಕ್ ವಾಲ್ ಮಮಾಲಿಕ್, ಅಲ್-ಮಕ್ ದಸಿ ಎಂಬವನ ಅಹ್‍ಸಾನ್ ಅಲ್-ತಕಾಸಿಂ ಫಿಮಾರೀಫತ್ ಅಲ್-ಅಕಾಲಿಂ, ಇದ್ರಿಸಿ ಎಂಬವನ ನುಜûತ್ ಅಲ್-ಮುಷ್‍ಟಕ್, ತಾರೀಖ್-ಅಲ್-ಹಿಂದ್ ಎಂಬ ಗ್ರಂಥದಿಂದ ಪ್ರಸಿದ್ಧನಾದ ಅಲ್-ಬರೂನಿಯ ಅಲ್-ಅಥಾರ್ ಅಲ್ ಬಕಿಯ ಅನ್ ಅಲ್ ಕುರನ್ ಅಲ್-ಖಲಿಯಾ. ಇಬ್ನ್ ಫದ್ಲಾನ್, ಅಬು ದುಲಾಫ್, ಖಜ್ರಾಜಿ, ಇಬ್ನ್ ಜುಹೈರ್, ಇಬ್ನ್ ಬತೂತ (ನೋಡಿ-) ಮುಂತಾದ ಪ್ರವಾಸಿಗರ ಕೃತಿಗಳೂ ಅರಬ್ಬರ ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನೂ ಅವರು ಸಂಚರಿಸಿದ ದೇಶಗಳ ಜನರ ರೂಢಿಗಳನ್ನೂ ಸಂಸ್ಥೆಗಳನ್ನೂ ಕುರಿತು ವಿವgವಾದ ಸಂಗತಿಗಳನ್ನು ಒದಗಿಸುತ್ತವೆ. ಭೌಗೋಳಿಕ ಹೆಸರುಗಳನ್ನು ಅಕಾರಾದಿಯಾಗಿ ಉಲ್ಲೇಖಿಸಿರುವ ಬಕ್ರಿಯ ಮುಜಂ-ಮ-ಎಸ್ತಾಜಂ ಮತ್ತು ಯಾಕುತ್ ನ ಮುಜಂ ಅಲ್-ಬುಲ್ ದಾನ್ ಮೊದಲಾದ ಭೌಗೋಳಿಕ ನಿಘಂಟುಗಳೂ ಸಂಗ್ರಹ ರೂಪದಲ್ಲಿವೆ. ಪ್ರಾಚೀನ ಕವಿತೆ ಮತ್ತು ಕುಲಗಳ ವಂಶಾವಳಿಯ ಕತೆಗಳು ಚರಿತೆಯ ವ್ಯಾಸಂಗಗಳನ್ನು ಬೆಳೆಸಿದುವು. ಇಸ್ಲಾಮಿನ ಪ್ರಾರಂಭಕಾಲದ ತಿಳಿವಳಿಕೆಯನ್ನು ಪಡೆಯುವ ಸಲುವಾಗಿ ಪ್ರವಾದಿಗಳ ಸುಸಂಗತವಾದ ಜೀವನಚರಿತ್ರೆಯನ್ನು ಮೊಟ್ಟಮೊದಲು ಬರೆದವ ಮಹಮದ್ ಇಬ್ನ್ ಇಷಾಕ್. ಈತನ ಗ್ರಂಥ ನಮಗೆ ಇಬ್ನ್ ಹಿಷಾಂನ ಪರಿಷ್ಕೃತ ಪಾಠದಲ್ಲಿ ದೊರೆತಿದೆ. ಅಲ್ ವಕೀದಿ (822) ಮೊದಲು ಕೂಡುಹಾಕಿದ್ದ ಪ್ರವಾದಿಗಳ ಜೀವನಚರಿತ್ರೆಗೆ ಸಂಬಂಧಿಸಿದ ಸಾಹಿತ್ಯವನ್ನು ಆತನ ಶಿಷ್ಯ ಮತ್ತು ಕಾರ್ಯದರ್ಶಿಯಾಗಿದ್ದ ಇಬ್ನ್‍ಸಾದ್(844) ಸಂಗ್ರಹಿಸಿದ್ದಾನೆ. ಅದರ ಹೆಸರು ತಬಕತ್-ಇಬ್ನ್-ಸಾದ್ ಎಂದು. ಅರಬ್ಬರ ಐತಿಹಾಸಿಕ ಲೇಖನಗಳು ಅಸಾಧಾರಣ ಶಾಸ್ತ್ರವಾಗಿ ಬೆಳೆದಿವೆ. ಸ್ಥಳಚರಿತ್ರೆ, ಜೀವನಚರಿತ್ರೆ, ಲೋಕೇತಿಹಾಸಗಳು ಮುಂತಾದವುಗಳನ್ನು ಪರಿಶೀಲಿಸಿ, ಸಂವಾಹಕರ ಮಾತುಗಳನ್ನು ಎತ್ತಿ ಹೇಳುವುದು, ಕಾಲಾನುಕ್ರಮವಾಗಿ ನಿರೂಪಿಸುವುದು ಮುಂತಾದ ಅನೇಕ ವಿಧಾನಗಳನ್ನು ಇತಿಹಾಸಕಾರರು ಅವಲಂಬಿಸಿದ್ದಾರೆ. ಇತಿಹಾಸಕಾರರಲ್ಲಿ ಅತ್ಯಂತ ಗಣ್ಯರಾದವರು: ಇನ್ ಜರೀರ್ ಅಲ್- ತಬರಿ(922), ಅಲ್ ಬಲಾಧುರಿ (892). ಅಲ್-ಮಸ್‍ಊದಿ (956). ಅಲ್-ಅಜ್ರ್‍ಕಿ (885), ಅಲ್-ಖತಿಬ್-ಅಲ್-ಬಾಗ್‍ದಾದಿ (1070), ಇಬ್ನ್ ಅಸPರ್ (1175), ಇಬ್ನ್ ಅಥಿರ್ (1232). ಜೀವನಚರಿತ್ರೆಗಳ ಕರ್ತೃಗಳಲ್ಲಿ ಮುಖ್ಯರು: ಅಲ್-ಉತ್‍ಬಿ (1035), ಇಮಾಮುದ್ದಿನ್ ಅಲ್-ಇಸ್ಫಹಾನಿ (1200), ಇಬ್ನ್ ಅಬು ಉಸಾಯ್‍ಬಿಯ, ಅಲ್- ಕುಫೀತಿ ಮತ್ತು ಇಬ್ನ್ ಕಲ್ಲೀಕಾನ್. ಸ್ಪೇನ್ ದೇಶದ ಇತಿಹಾಸಕಾರರಲ್ಲಿ ಅತ್ಯಂತ ಶ್ರೇಷ್ಠನೆಂದರೆ ಹಿಸಾಮುದ್ದೀನ್ ಇಬ್ನ್ಪ್ ಅಲ್-ಖತೀಬ್(1374). ಈತ ಬರೆದ ಚರಿತ್ರೆ ಅಲ್-ಇಹಾತ ಫೀ ತಾರೀಖ್-ಐ-ಘರ್‍ನಕ ಪ್ರಖ್ಯಾತವಾಗಿದೆ. ಆದರೆ ಸ್ಪೇನ್ ದೇಶದ ಅರಬ್ಬರ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ವೈಜ್ಞಾನಿಕ ಜೀವನವನ್ನು ವಿವರವಾಗಿ ತನ್ನ ಪ್ರಸಿದ್ಧವಾದ ನಾಫ್-ಅಲ್-ತಿಬ್-ಮಿನ್-ಘಸ್ನ್-ಅಲ್- ಅಂಡಾಲಸ್-ಅರ್-ರತೀಬ್ ಎಂಬ ಕೃತಿಯಲ್ಲಿ ವಿವರವಾಗಿ ನಿರೂಪಿಸಿರುವವ ಉತರ ಆಪ್ರಿಕದ ಇತಿಹಾಸಕಾರ ಅಲ್-ಮುಕ್ಕಾರಿ. ಮಂಗೋಲರ ಆಕ್ರಮಣದಿಂದ ಬಾಗ್ದಾದ್ ಪಟ್ಟಣ ಧ್ವಂಸವಾದ ಬಳಿಕ (1258), ಸಾಂಸ್ಕೃತಿಕ ಕೇಂದ್ರ ಮತ್ತೆ ಸಿರಿಯ ಮತ್ತು ಈಜಿಪ್ಟಿಗೆ ಮರಳಿತಲ್ಲದೆ ಸಾಹಿತ್ಯದ ಸಾಮಾನ್ಯ ಲಕ್ಷಣವನ್ನು ಬದಲಾಯಿಸಿತು. ರಾಜಕೀಯದಲ್ಲಿ ವಿಪ್ಲವವೆದ್ದು ಅಶಾಂತಿ ಎಲ್ಲೆಲ್ಲೂ ಹರಡಿದ್ದರೂ ಸಹ, ವಿದ್ವಾಂಸರು ಪ್ರಾಚೀನ ಗ್ರಂಥಕಾರರ ಕೃತಿಗಳನ್ನು ಅವಲೋಕಿಸುವುದರಲ್ಲೂ ಅವುಗಳಿಗೆ ವ್ಯಾಖ್ಯಾನಗಳನ್ನು ಬರೆಯುವುದರಲ್ಲೂ ನಿರತರಾಗಿದ್ದರು. ಈ ಅವಧಿಯಲ್ಲಿ ಸಂಕಲನ ಕಾರ್ಯದಷ್ಟು ಸೃಜನ ಸಾಹಿತ್ಯ ಕಾರ್ಯ ಜರುಗಿರುವುದು ಕಂಡುಬರುವುದಿಲ್ಲ. ಸಾಂಪ್ರದಾಯಿಕ ಸಾಹಿತ್ಯ ಮತ್ತು ಭಾಷ್ಯಗಳಲ್ಲಿ ಈ ಕಾಲದ ದೊಡ್ಡ ಪಂಡಿತರೆನಿಸಿದವರು- ಇಬ್ನ್ ಹಜಾರ್ ಅಲ್-ಅಸ್‍ಕಲಾನಿ (1448), ಆಲಾಲುದ್ದೀನ್ ಅಲ್ ಮಹಲ್ಲಿ (1459), ಜಲಾಲುದ್ದೀನ್ ಅಸ್-ಸುಯುತಿ (1505), ಷಹಾಬುದ್ದೀನ್ ಅಲ್ ಕಾಸಲಾನಿ (1517), ಮುಸ್ಲಿಂ ದೈವಶಾಸ್ರ್ತ ಮತ್ತು ಮತತತ್ವಗಳಲ್ಲಿ ಇಬ್ನ್ ತೈಮಿಯ್ಯ (1327), ಇಬ್ನ್-ಅಲ್- ಜಾಉಜಿಯ (1350) ಮತ್ತು ತಾಕಿಯುದ್ದೀನ ಅಸ್ ಸುಬ್‍ಕಿ (1369) ಎಂಬುವರು ಮುಖ್ಯರು. ಅಲ್-ಷರಾನಿ (1565) ಎಂಬಾತ ಷಿಯಾ ಮತಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಅರ್ಪಿಸಿದ್ದಾನೆ. ಇಬ್ನ್ ಸಯ್ಯಿದ್ ಅನ್-ನಸ್(1333), ಬದುದ್ದೀನ್ ಅಲ್- ಹಲಾಬಿ (1034), ಜೈನಿ ದಹ್ಲಾನ್ (1886) ಎಂಬುವರು ಪ್ರವಾದಿಗಳ ಜೀವನ ಚರಿತ್ರೆಯ ಮೇಲಣ ಕೃತಿಗಳನ್ನು ಸಂಗ್ರಹಿಸಿದರು. ಚರಿತ್ರೆ ಮತ್ತು ಜೀವನಚರಿತ್ರೆಗಳಿಗೆ ಸಂಬಂಧಪಟ್ಟ್ಟ ಸಾಹಿತ್ಯಕ್ಕೆ ಇಬ್ನ್ ಟಿಕ್‍ಟಿಕ (1301). ಅಬುಲ್ ಫಿದ ಇಸ್‍ಮಾಯಿಲ್(1331), ಅಬು ಅಬ್‍ಮಲ್ಲ ಅಧ್ ಧಬಿ (1347), ಇಬ್ನ್ ಕಥೀರ್ (1372), ತಕೀಉದೀನ್ ಅಲ್-ಮಕ್ರಿಜಿ (1441), ಅಬುಲ್ ಮಹಸಿನ್ ಅಲ್-ತಘಿಬಿದಿ (1469) ಎಂಬುವರು ಅಮೂಲ್ಯವಾದ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಅರಬ್ಬರ ಐತಿಹಾಸಿಕ ಲೇಖನಕ್ಕೆ ಹೊಸ ಆಲೋಚನಾ ಮಾರ್ಗಗಳನ್ನೂ ಕ್ರಮಗಳನ್ನೂ ತಂದವನು ಅತ್ಯಂತ ಶೇಷ್ಠ ಇತಿಹಾಸಕಾರನಾದ ಇಬ್ನ್ ಖುಲ್‍ದುನ್ (1406). ಈತ ಐತಿಹಾಸಿಕ ಸಂಗತಿಗಳ ಅವಲೋಕನಕ್ಕೆ ನಿಯಮಗಳನ್ನು ರಚಿಸಿದುದಲ್ಲದೆ ಸಮಾಜಶಾಸ್ರ್ತ ದ ಮೂಲತತ್ವಗಳಿಗೆ ತಳಹದಿಯನ್ನು ಹಾಕಿಕೊಟ್ಟ. ಈ ಮೂಲತತ್ವಗಳನ್ನು ಪ್ರಾಚ್ಯರಲ್ಲದೆ ಪಾಶ್ಚಾತ್ಯ ಇತಿಹಾಸಕಾರರೂ ಅನುಸರಿಸಿದ್ದಾರೆ. ಅರಬ್ಬೀ ಸಾಹಿತ್ಯದ ಅತ್ಯಂತ ಸಮಗ್ರವಾದ ಸಮೀಕ್ಷೆಯನ್ನು ತುರ್ಕಿ ವಿದ್ವಾಂಸ ಹಾಜ್ಜಿ ಖಲ್‍ಫಾ (1057) ತನ್ನ ಕಷ್‍ಫಾಜ್ ಜುನುಂ ಎಂಬ ಕೃತಿಯಲ್ಲಿ ಮಾಡಿದ್ದಾನೆ. ಈ ಪುಸ್ತಕ ಅರಬ್ಬೀ ಸಾಹಿತ್ಯ ಸಂಶೋಧನೆಗಳಿಗೆಲ್ಲ ಇಂದಿಗೂ ಬಿಡಲಾಗದ ಆಕರ ಗ್ರಂಥವಾಗಿದೆ. ಈ ಕಾಲದಲ್ಲಿ ನಿಜವಾದ ಕವಿತೆ ಹುಟ್ಟದಿದ್ದರೂ ಕವಿತಾಭ್ಯಾಸ ನಡೆಯದೆ ಇರಲಿಲ್ಲ. ಈ ಅವದಿಯ ಪ್ರಖ್ಯಾತ ಕವಿಗಳೆಂದರೆ, ಸಫಿ ಉದ್ದೀನ್-ಅಲ್-ಹಿಲ್ಲಿ (1344), ಅಲ್- ಬುಸೀರಿ (1295) ಮತ್ತು ಸಲಾಹುದ್ದೀನ್ ಅಲ್-ಸಪಾದಿ (1362). ಶಬ್ದವಿಜ್ಞಾನ ಮತ್ತು ನಿಘಂಟುಗಳ ಮೇಲಿನ ಕೆಲವು ಸಣ್ಣ ಪುಟ್ಟ ಕೃತಿಗಳ ಜೊತೆಗೆ, ಈ ವ್ಯಾಸಂಗಕ್ಕೆ ಉತ್ಕೃಷ್ಟವಾದ ಕಾಣಿಕೆಯನ್ನು ಸಲ್ಲಿಸಿದವರು-ಅಲ್-ಫಿರೋಜಬಾದಿ (1414), ಇಬ್ನ್ ಮನ್‍ಜೂರ್ (1311) ಮತ್ತು ಮುರ್‍ತಾದ ಅಜ್-ಜ ಬೀದಿ (1790). ಈ ಕಾಲದಲ್ಲಿ ಪಕೃತಿ ಚರಿತ್ರೆ ಮತ್ತು ಜೀವವಿಜ್ಞಾನಗಳಲ್ಲಿ ರಚಿತವಾದ ಶೇಷ್ಠತಮ ಕೃತಿ ಕಮಾಲುದ್ದೀನ್ ಅದ್-ದಮಿರಿಯ ಹಯತ್ ಅಲ್-ಹೈವಾನ್.
ಭಾರತದಲ್ಲಿ ಹುಟ್ಟಿದ ಅರಬ್ಬೀ ಸಾಹಿತ್ಯದ ಸ್ವರೂಪ
ಬದಲಾಯಿಸಿಭಾರತ ದೇಶದ ದಕ್ಷಿಣ ತೀರಪ್ರದೇಶಗಳು ಅರೇಬಿಯ ದೇಶದೂಂದಿಗೆ ವಾಣಿಜ್ಯ ಸಂಬಂಧಗಳನ್ನು ಇಸ್ಲಾಮಿಗೆ ಹಿಂದಿನಕಾಲದಿಂದ ಹೊಂದಿದ್ದರೂ ಸಿಂಧ್, ಮುಲ್‍ತಾನ್ ಮತ್ತು ಬಲೂಚಿಸ್ತಾನಗಳನ್ನು ಬಿಟ್ಟರೆ. ಮಿಕ್ಕಾವ ಪ್ರದೇಶವೂ ಅರಬ್ಬೀ ಭಾಷೆಯನ್ನಾಡುವ ಜನರ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಆದ್ದರಿಂದ ಅರಬ್ಬೀ ಭಾಷೆಗೆ ಪಾರ್ಸಿ ಭಾಷೆಯನ್ನಾಡುವ ದೊರೆಗಳ ಆಶಯ ದೊರೆಯಲಿಲ್ಲ. 7ನೆಯ ಶತಮಾನದಷ್ಟು ಹಿಂದಿನಿಂದಲೂ ಅರಬ್ಬರ ಸಾಮ್ರಾಜ್ಯಕ್ಕೆ ಒಳಪಟ್ಟ ಭಾರತದ ಉತ್ತರಪ್ರದೇಶಗಳು ಹಿಂದಿನಿಂದಲೂ ಅರಬ್ಬರ ಆಳ್ವಿಕೆಯಲ್ಲಿ ಬಹಳ ಕಾಲ ಉಳಿಯಲಿಲ್ಲ. ಈ ಕಾರಣದಿಂದಲೂ ಮತ್ತು ದಕ್ಷಿಣ ಭಾರತಕ್ಕೆ ವಲಸೆ ಬಂದ ಅರಬ್ಬರು ತಮ್ಮ ತಮ್ಮ ವ್ಯವಹಾರಗಳನ್ನು ವಾಣಿಜ್ಯ ಮತ್ತು ವ್ಯಾಪಾರಗಳಿಗೆ ಮಾತ್ರ ಮಿತಿಗೊಳಿಸಿದ್ದರಿಂದಲೂ ಕೆಲವು ದೇಶ್ಯ ಶಬ್ದಗಳನ್ನು ಸ್ಥಳೀಯರಿಂದ ಸ್ವೀಕರಿಸಿ ಅರಬ್ಬೀ ಭಾಷೆಗೆ ಸೇರಿಸಿಕೊಂಡಿರುವು ದನ್ನು ಬಿಟ್ಟರೆ, ಅರಬ್ಬರ ಅಂದಿನ ಮಿಕ್ಕಾವ ಬೌದ್ಧಿಕಕಾರ್ಯಕಲಾಪಗಳೂ ನಮಗೆ ತಿಳಿದುಬಂದಿಲ್ಲ. ಭೌಗೋಳಿಕವಾಗಿಯೂ ರಾಜಕೀಯವಾಗಿಯೂ ಕೆಲವು ಅಡಚಣೆಗಳಿ ದ್ದರೂ ಭಾರತೀಯ ಮುಸ್ಲಿಮರಿಗೆ ಅರಬ್ಬೀ ಭಾಷೆಯೇ ಮತೀಯ ಸಂಸ್ಥೆಗಳ ಮತ್ತು ವ್ಯಾಸಂಗಗಳ ಭಾಷೆಯಾಗಿ ಉಳಿಯಿತು. ಭಾರತೀಯ ಮುಸ್ಲಿಮರಲ್ಲಿ ಕೆಲವರು ಉಮಾಯಿದ್ ಮತ್ತು ಅಬ್ಬಾಸಿದ್ ಕಾಲದಲ್ಲಿ ಅಲ್-ಹಿಜಾಸ್ ಮತ್ತು ಇರಾಕಿಗೆ ವಲಸೆ ಹೋಗಿ ಅಲ್ಲೇ ನಿಂತರು. ದೊಡ್ಡ ಕವಿಗಳೆಂದೂ ಲೇಖಕರೆಂದೂ ಪ್ರಖ್ಯಾತರಾದರು. ಅವರ ಪೈಕಿ ಅಬು ಅತಾ ಅಲ್-ಸಿಂಧಿ ಎಂಬ ಕವಿ, ಅಸನ್ ಅಲ್-ಸಘಾನಿ (1252) ಎಂಬ ಭಾಷಾವಿಜ್ಞಾನಿ, ಸಫಿ ಉದ್ದೀನ್-ಅಲ್-ಹಿಂದಿ (1315) ಎಂಬ ನ್ಯಾಯಶಾಸ್ರ್ತಜ-ಇವರೇ ಮೊದಲಾದವರಿ ದ್ದರು. ಹಾಗೆಯೇ ಅರಬ್ಬೀ ವಿದ್ವಾಂಸರೂ ಭಾರತಕ್ಕೆ ಬಂದು ಮೌಲ್ಯಯುತವಾದ ಅನೇಕ ಗ್ರಂಥಗಳನ್ನು ಅರಬ್ಬೀ ಭಾಷೆಯಲ್ಲಿ ರಚಿಸಿದರು. ಹಿಂದುಗಳ ಸಂಸ್ಕೃತಿ ಮತ್ತು ಶಾಸ್ರ್ತಗಳನ್ನು ಅಭ್ಯಾಸ ಮಾಡಿ ತನ್ನ ಪ್ರಖ್ಯಾತ ಗ್ರಂಥವಾದ ಕಿತಾಬ್-ಅಲ್-ಹಿಂದ್ ಎಂಬುದಕ್ಕೆ ವಿಷಯವವನ್ನು ಸಂಗ್ರಹಿಸಲು ಆಲೆರೂನಿ (ನೋಡಿ) ಭಾರತಕ್ಕೆ ಬಂದ. ಹಾಡಿತ್ತಿನ ವ್ಯಾಸಂಗಗಳನ್ನು ಭಾರತದಲ್ಲಿ ಹgqಲು ಈಜಪ್ಟಿನಿಂದ ಮುಲ್ತಾನಿಗೆ ಷಂಷುದ್ದೀನ್ ಬಂದ. ಆದರೆ ಘಜ್ನವಿದ್ (998) ಕಾಲದಿಂದ ಮೊಗಲ್ ವಂಶದವರ (1539) ಕಾಲದವರೆಗಿನ ಮುಸ್ಲಿಮರ ಆಳ್ವಿಕೆಯಲ್ಲಿ, ಭಾರತೀಯ ಮುಸ್ಲಿಮರಿಂದ ಅರಬ್ಬೀ ಸಾಹಿತ್ಯಕ್ಕೆ ಉತಮ ದರ್ಜೆಯ ಯಾವ ಸಂಶೋಧನೆ ಗಳೂ ಲಭಿಸಲಿಲ್ಲ. ಅರಬ್ಬೀ ಸಾಹಿತ್ಯದ ಗದ್ಯ , ದರ್ಶನ ಮತ್ತು ಪ್ರಕೃತಿ ವಿಜ್ಞಾನ ಇತ್ಯಾದಿ ಶಾಖೆಗಳಲ್ಲಿ ಭಾರತೀಯ ಮುಸ್ಲಿಮರ ಸ್ವಂತಗಳಿಕೆ ಬಹಳ ಸ್ವಲ್ಪ. ಈ ಶಾಸ್ತ್ರಶಾಖೆಗಳ ವ್ಯಾಖ್ಯಾನಗಳನ್ನು ಸಂಗ್ರಹಿಸುವುದರಲ್ಲಿಅವರು ನಿರತರಾದರು. ಆದರೆ ಭಾರತೀಯ ಮುಸ್ಲಿಮರ ಮನಸ್ಸಿಗೆ ತುಂಬ ಹಿಡಿದ ಶಾಸ್ತ್ರವೆಂದರೆ ತರ್ಕಶಾಸ್ತ್ರ. ಮುಹಿಬ್ಲುಲ್ಲ ಬಿಹಾರಿ (1707) ಬರೆದ ಸುಲ್ಲಂ ಅಲ್ ಉಲುಂ ಎಂಬ ಗ್ರಂಥ ಈಗಲೂ ತರ್ಕಶಾಸ್ತ್ರದ ಮಾದರಿ ಕೃತಿ ಎನಿಸಿದೆ. ಸದ್-ಬ್-ಸುಲ್‍ಮನ್, ನಿಜಾಮುದ್ದೀನ್ ಔಲಿಯಾ, ನಾಸಿರುದ್ದೀನ್ ಚಿರಾಗ್ ದಿಹ್ಲೆವಿ ಮತ್ತು ಷಹಬುದ್ದೀನ್ ಹಾಗೂ ಅಮೀರ್ ಖುಸ್ರು ಇವರೇ ಮೊದಲಾದವರು ಬರೆದ ಅರಬ್ಬೀ ಕವಿತೆಗಳ ತುಣುಕುಗಳು ನಮಗೆ ದೊರೆತಿವೆ. ತಮ್ಮ ಕವಿತೆಗಳ ಸಮಗ್ರವಾದ ದಿವಾನಿಗಳನ್ನು ತಮ್ಮ ಹಿಂದೆ ಉಳಿಸಿಹೋಗಿರುವ ಕವಿಗಳೂ ಇದ್ದಾರೆ. ಅಂತಹವರೆಂದರೆ- ಮಲಬಾರಿನ ಮಹಮದ್-ಬ್-ಅಬ್ದುಲ್ ಅಜೀಜ್ (10ನೆಯ ಶತಮಾನ), ಸೈಯ್ಯಿದ್ ಅಲಿ ಖಾನ್ ಇಬ್ನ್ ಮಾ ಸುಂ (1705), ಸೈಯಿದ್ ಅಬ್ದುಲ್ ಜಲೀಲ್ ಬಿಲ್‍ಗ್ರಾಮಿ (1715) ಮತ್ತು ಸಯಿದ್ ಗುಲಾಂ ಅಲಿ ಅಜಾದ್, (1785). ಈ ಕವಿಗಳೆಲ್ಲ ಪರ್ಷಿಯನ್ ಕವಿತೆಯಿಂದ ತುಂಬ ಪ್ರಭಾವಿತರಾದರು. ಇವರಿಗೆ ಅಲಂಕಾರಗಳಲ್ಲೂ ಪರ್ಷಿಯನ್ ಕವಿತೆಗಳ ರೂಪದಲ್ಲೂ ತುಂಬ ಪ್ರೀತಿ. ಮಹಮದ್ ಇಬ್ನ್ ಅಬ್ದುಲ್ ಅಜೀಜ್ ಅರಬಿಯಲ್ಲಿ ಸು. 500 ಪದ್ಯ ಗಳ ಮತ್‍ನವಿಯೊಂದನ್ನು (ಮಸ್ನವಿ) ಬರೆದ. ಅದರಲ್ಲಿ ಕಲ್ಲೀಕೋಟೆ ಜಾಮೋರಿನ್ ಪೋರ್ಚುಗೀಸರೂಡನೆ ನಡೆಸಿದ ಕಾಳಗವನ್ನೂ ಆತ ಇಸ್ಲಾಂ ಧರ್ಮದ ವಿಷಯದಲ್ಲಿ ತೋರುತ್ತಿದ್ದ ಅಭಿಮಾನವನ್ನೂ ವರ್ಣಿಸಲಾಗಿದೆ. ಇಬ್ನ್ ಮಾಂಸುಂ ತನ್ನ ಅಲ್-ಬದೀಯ ಗ್ರಂಥದಲ್ಲಿ ಆಲಂಕಾರಿಕ ಕಲ£ಗಳ ಉದಾಹಣೆಗಳನ್ನು ಸಂಗ್ರಹಿಸಿದ್ದಾನೆ. ಭಾರತದ ಇತರ ಕವಿಗಳಂತೆ ಅಜಾದ್ ಎಂಬವನಿಗೂ ಆಲಂಕಾರಿಕ ಕಲ್ಪನೆಗಳಲ್ಲಿ ತುಂಬ ವಿಶ್ವಾಸ. ಆತ ತನ್ನ ಕವಿತೆಗಳಲ್ಲಿ ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಉಪಮಾನಾದಿ ಅಲಂಕಾರಗಳನ್ನು ಉಪಯೋಗಿಸಿದ್ದಾನೆ. ಧರ್ಮಕ್ಕೆ ಸಂಬಂಧಪಟ್ಟ್ಟ ವ್ಯಾಸಂಗಗಳಿಗೆ ಭಾರತದ ಮುಸ್ಲಿಮರು ನಿಜವಾಗಿ ತುಂಬ ಬೆಲೆಯುಳ್ಳ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಮುಸ್ಲಿಂ ನ್ಯಾಯತತ್ತ್ವ ಶಾಸ್ತ್ರದಲ್ಲಿ ಫತ್‍ವೈ ಅಲಮ್‍ಗಿರಿ ಎಂಬ ಗ್ರಂಥ, ಮುಹಿಬ್ಲುಲ್ಲ ಬಿಹಾರಿಯ (1707) ಮೂಲ ನಿಯಮಗಳನ್ನು ಕುರಿತ ಮುಸಲಂ-ಅಲ್ ಥೂಬೂತ್ ಎಂಬುದು, ಬರ್‍ಹಾಂಪುರದ ಅಲಿ ಮುತ್ತಾಕಿಯ (1557) ಕಾನ್ ಜುಲ್ ಉಮ್ಮಾಲ್, ದಿಲ್ಲಿಯ ಷಾ ವಾಲಿ ಉಲ್ಲನ (1762) ಮಸಾವವ ಎಂಬ ಸಂಪ್ರದಾಯದ ಮೇಲಣ ಕೃತಿ, ಅಲ್-ಫಯ್‍ದಿಯ (1595) ಸವಾತಿಉಲ್- ಇಲ್‍ಹಾಂ ಎಂಬ ಕುರಾನಿನ ಭಾಷ್ಯ, ಷಾ ವಾಲಿ ಉಲ್ಲನ ಹುಜ್ಜತ್ ಉಲ್ಲಹಿಲ್ ಬಲಿಘ ಎಂಬ ಮತಪಂಥೀಯ ದೇವತಾಶಾಸ್ರ್ತದ ಮೇಲಣ ಕೃತಿ ಮತ್ತು ಸಘಾನಿಯ ಉಬಾಬ್ ಹಾಗೂ ಜಬೀದಿಯ ತಾಜ್ ಎಂಬ ದಾರ್ಶನಿಕಗ್ರಂಥ - ಇವು ಅರಬ್ಬೀ ಭಾಷೆಯನ್ನಾಡುವ ದೇಶಗಳಲ್ಲೂ ಚಿರಸ್ಮರಣೀಯವಾದ ಕೃತಿಗಳೆಂದು ಪರಿಗಣಿತವಾಗಿವೆ.
ನವೀನ ಅರಬ್ಬೀ ಸಾಹಿತ್ಯ : (1798-1960)
ಬದಲಾಯಿಸಿ1798ರಲ್ಲಿ ಅರಬರು ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕವನ್ನು ಪುನಃ ಹೊಂದಿದಾಗ ಅರಬ್ಬೀ ಸಾಹಿತ್ಯದ ನವೀಕರಣ ಪ್ರಾರಂಭವಾಯಿತು. ಈಗ ಪ್ರವೃತ್ತವಾಗಿರುವ ಈ ನವೀಕರಣಕ್ಕೆ ರಂಗಸ್ಥಳ ಈಜಿಪ್ಟ್. ಈ ಪಾಶ್ಚಾತ್ಯೀಕರಣಕ್ಕೆ ಕಾರಣಭೂತವಾದ ಅಂಶಗಳು ಯಾವುವೆಂದರೆ ಯುರೋಪಿನ ಮಾದರಿಯ ಶಾಲೆಗಳನ್ನು ತೆರೆದುದು, ಅರಬ್ಬೀ ಅಚ್ಚುಕೂಟಗಳ ಸ್ಥಾಪನೆ, ಪತ್ರಿಕೋದ್ಯಮ ಬೇಗ ಹಬ್ಬಿದುದು, ಯುರೋಪಿನ ಆಧುನಿಕ ಕೃತಿಗಳನ್ನು ಅರಬ್ಬಿಗೆ ಭಾಷಾಂತರ ಮಾಡಿದುದು. ಹಳೆ ಪ್ರಾಸಬದ್ಧ ಗದ್ಯವನ್ನು ವಿಸರ್ಜಿಸಲಾಯಿತು; ಅದರ ಸ್ಥಾನವನ್ನು ಈಗಿನ ಔದ್ಯೋಗಿಕ ಯುಗಕ್ಕೆ ಒದಗುವಂಥ ಸರಳ ಸ್ಪಷ್ಟ ಗದ್ಯ ಪಡೆಯಿತು. ಷೇಕ್ ಮಹಮದ್ ಅಬ್‍ದುಹ್ ಅಜ್‍ಹರ್‍ನಲ್ಲಿ ಮಾಡಿದ ಉಪ್ರದೇಶದ ಫಲವಾಗಿ ಕುರಾನ್, ನ್ಯಾಯ, ತತ್ವಶಾಸ್ರ್ತ ಮತ್ತು ಇಸ್ಲಾಂದರ್ಶನ-ಇವಕ್ಕೆ ಹೊಸತರದ ವ್ಯಾಖ್ಯಾನಗಳು ಹುಟ್ಟಿದುವು. ಪ್ರವಾದಿಗಳು, ಕವಿಗಳು ಮತ್ತು ವಿದ್ವಾಂಸರು ಮೊದಲಾದವರ ವಿಷಯಕವಾದ ತುಲನಾತ್ಮಕ ಹಾಗೂ ವಿಶೇಷಣಾತ್ಮಕ ವ್ಯಾಸಂಗಗಳು ವೈಜ್ಞಾನಿಕ ಸಂಶೋಧನೆ ಮತ್ತು ಆಧುನಿಕರೀತಿಯ ವಿಮರ್ಶನಪದ್ಧತಿಗಳಿಗೆ ದಾರಿ ಹಾಕಿಕೊಟ್ಟುವು. ಯೂರೋಪಿನ ಪ್ರಭಾವ ಕಥಾಕ್ಷೇತ್ರದಲ್ಲಿ ಎದ್ದು ಕಾಣುತ್ತದೆ. ಐತಿಹಾಸಿಕ ಕಾದಂಬರಿಗಳ ಮೂಲಕ ಕಥೆ ಹೇಳುವುದು ಒಂದು ಕಲೆಯಾಗಿ ಪರಿಣಮಿಸಿತು. ಯುರೋಪಿನ ದೇಶಗಳಲ್ಲಿ ವ್ಯಾಸಂಗ ಮಾಡಿದ ಅರಬ್ಬೀ ವಿದ್ವಾಂಸರು ಫಂಚ್, ಇಂಗ್ಲಿಷ್, ಜರ್ಮನ್, ಇಟಾಲಿಯನ್ ಮತ್ತು ಸೇನಿನ ಭಾಷೆಗಳ ಪುಸ್ತಕಗಳನ್ನು ತರ್ಜುಮೆ ಮಾಡಲು ಪ್ರಾರಂಭಿಸಿದರು. ಅಲ್-ಮನ್ ಫಲೂತಿ ಅಜ್ಜಯ್ಯತ್ ಮತ್ತು ಅಲ್-ಮಜಿನಿ ಎಂಬುವರು ಯುರೋಪಿನ ಕಾಲ್ಪನಿಕ ಕಾದಂಬರಿಗಳನ್ನು ತಮ್ಮ ಅಭಿರುಚಿಗೆ ತಕ್ಕಂತೆ ಅಳವಡಿಸಿಕೊಳ್ಳುವ ದಾರಿಯನ್ನು ತೋರಿಕೊಟ್ಟರು. ಆ ಬಳಿಕ, ತೌಫಿಕ್ ಅಲ್ ಹಕೀಂ, ಅಲ್-ಮಜಿನಿ ಮತ್ತು ಅಹ್ಮದ್ ತೈಮೂರ್ ಎಂಬುವರು ಶುದ್ಧ ಈಜಿಪ್ಷಿಯನ್ ಮೂಲದ ಕಾಲ್ಪನಿಕ ಕಥೆಗಳನ್ನು ಬರೆದರು. ಈಜಿಪ್ಷಿಯನ್ ರಂಗಸ್ಥಳಗಳೂ ಸಿನೆಮಾ ಕಂಪನಿಗಳೂ ಮತ್ತು ರೇಡಿಯೋ ಕೇಂದ್ರಗಳೂ ಪ್ರತಿಷ್ಠಾಪಿತವಾದ ಮೇಲೆ ನಾಟಕ, ಏಕಾಂಕ ರೂಪಕಗಳು ಮತ್ತು ಚಲನಚಿತ್ರ ಗೀತೆಗಳು - ಮುಂತಾದ ಸಾಹಿತ್ಯ ಪ್ರಕಾರಗಳು ಸಾಕಷ್ಟು ಹುಟ್ಟಿವೆ. ಗದ್ಯದಂತೆಯೇ ಆಧುನಿಕ ಕವಿತೆ ಫ್ರೆಂಚ್ ಕವಿಗಳ ಕೃತಿಗಳನ್ನು ಜಾನಪದಗೀತೆಗಳ ರೂಪದಲ್ಲಿ ಭಾಷಾಂತರಿಸುವುದರ ಮೂಲಕ ಉದಿಸಿತು. ಕಾಸಿಡಾದ ವಿನಾ ಸಾಂಪ್ರದಾಯಿಕ ರೂಪವನ್ನು ಪ್ರಾಸ ಮತ್ತು ಛಂದಸ್ಸುಗಳೊಂದಿಗೆ ಇಟ್ಟುಕೊಂಡೂ ಆಧುನಿಕ ರೀತಿಗಳನ್ನೂ ಮತ್ತು ಒಂದು ರೀತಿಯ ಪಾಶ್ಚಾತ್ಯ ಮತ್ತು ಇಸ್ಲಾಂ ದರ್ಶನಗಳ ಸಂಮಿಳಿತವನ್ನೂ ಕವಿತೆಯೊಳಕ್ಕೆ ತರಲಾಗಿದೆ. ಪ್ರಗಾಥ, ಶೋಕಗೀತೆಗಳು, ಸ್ತುತಿಗಳು, ಸುನೀತಗಳು ಇಂಥ ಹಳೆಯ ರೂಪಗಳ ಜೊತೆಗೆ ದೇಶಭಕ್ತಿ, ಸ್ವಭಾವೋಕ್ತಿ, ರಾಜಕೀಯ ಮತ್ತು ಸಾಮಾಜಿಕ ಪ್ರಸಂಗಗಳೂ-ಜನಪ್ರಿಯ ಕವಿತಾ ವಿಷಯಗಳಾದುವು. ಅಲ್‍ಬರೂದಿ (1839- 1904), ಹಾಫೀಜ್ ಮತ್ತು ಕಾಕಿ ಇವರೇ ಮೊದಲಾದ ಈ ಕಾಲದ ಮುಖ್ಯ ಕವಿಗಳು ಅರಬ್ಬೀ ದೇಶದ ಪ್ರೇಮಗೀತೆಗಳನ್ನು ಕಟ್ಟಿ ಹಾಡಿ ಅರಬ್ಬರಿಗೆ ಆ ದೇಶದ ಪ್ರಾಚೀನ ಸಂಸ್ಕೃತಿಯ ಹಿರಿಮೆಯನ್ನು ನೆನಪು ಮಾಡಿಕೊಟ್ಟರು. (ಎಂ.ಎ.ಎಂ.)