ಅಪೊಪ್ಟೋಸಿಸ್‌ (pronounced /ˌæp.ə.ˈtoʊ.sɪs/[] ăpˈə-tō'sĭs[] ˌæpəpˈtoʊsɨs,[] ăpˈəp-tō'sĭs) ಎಂಬುದು ಬಹುಕೋಶೀಯ ಜೀವಿಗಳಲ್ಲಿ ಸಂಭವಿಸಬಹುದಾದ ಜೀವಕೋಶದ ಯೋಜಿತ ಸಾವಿನ (ಪ್ರೋಗ್ರಾಮ್ಡ್‌ ಸೆಲ್‌ ಡೆತ್‌-PCD) ಪ್ರಕ್ರಿಯೆಯಾಗಿದೆ. ವಿಶಿಷ್ಟವಾದ ಜೀವಕೋಶ ಸ್ವರೂಪ ಮತ್ತು ಸಾವಿಗೆ ಕಾರಣವಾಗುವ ಜೀವರಾಸಾಯನಿಕ ವಿದ್ಯಮಾನಗಳ ಒಂದು ಸರಣಿಯನ್ನು ಜೀವಕೋಶದ ಯೋಜಿತ ಸಾವು ಒಳಗೊಳ್ಳುತ್ತದೆ. ಇನ್ನೂ ಹೆಚ್ಚು ನಿರ್ದಿಷ್ಟವಾದ ಪದಗಳಲ್ಲಿ ಹೇಳುವುದಾದರೆ, ಹೊಪ್ಪಳೆಯೇಳುವಿಕೆಯೂ ಸೇರಿದಂತೆ ಸ್ವರೂಪದಲ್ಲಿನ ಬದಲಾವಣೆಗಳ ಒಂದು ವೈವಿಧ್ಯತೆಗೆ ಕಾರಣವಾಗುವ ವಿದ್ಯಮಾನಗಳು, ಪೊರೆಯ ಅಸಮ ಪಾರ್ಶ್ವತೆ ಮತ್ತು ಜೋಡಣೆಯ ನಷ್ಟ, ಜೀವಕೋಶ ಕುಗ್ಗುವಿಕೆ, ಪರಮಾಣು ವಿಘಟನೆ, ವರ್ಣಗ್ರಾಹಿ ಸಾಂದ್ರೀಕರಣ, ಮತ್ತು ಕ್ರೋಮೋಸೋಮಿನ DNA ವಿಘಟನೆಯಂಥ (1-4) ಕೋಶಪೊರೆಗಾಗುವ ಬದಲಾವಣೆಗಳನ್ನು ಜೀವರಾಸಾಯನಿಕ ವಿದ್ಯಮಾನಗಳ ಒಂದು ಸರಣಿಯನ್ನೇ ಜೀವಕೋಶದ ಯೋಜಿತ ಸಾವು ಒಳಗೊಳ್ಳುತ್ತದೆ. ಜೀವಿಗೆ ಯಾವುದೇ ರೀತಿಯಲ್ಲಿ ಹಾನಿಯನ್ನುಂಟುಮಾಡದ ಫಲಿತಾಂಶಗಳನ್ನು ಹೊಂದಿರುವ ಜೀವಕೋಶೀಯ ಅವಶೇಷಗಳ ವಿಲೇವಾರಿ ಪ್ರಕ್ರಿಯೆಗಳು ಊತಕದ ಸಾವಿನಿಂದ ಅಪೊಪ್ಟೋಸಿಸ್‌ನ್ನು ಭಿನ್ನವಾಗಿಸುತ್ತವೆ.

ಇಲಿಯ ಭ್ರೂಣೀಯ ಅಥವಾ ಮೂಲಾವಸ್ಥೆಯ ಪಾದದ (ಮ್ಯೂಸ್‌ ಮಸ್ಕ್ಯುಲಸ್‌) ಬೆಳವಣಿಗೆಯಲ್ಲಿನ 15.5 ದಿನದ ಊತಕಸ್ಥಿತಿಯ ಅಡ್ಡಛೇದ. ಬೆರಳುಗಳ ಮಧ್ಯೆ ಜೀವಕೋಶಗಳು ಇನ್ನೂ ಇವೆ.(ಇಲಿಯ ಸಂಫೂರ್ಣ ಬೆಳವಣಿಗೆಗೆ 27 ದಿನಗಳು ತಗಲುತ್ತವೆ.) (ಈ ಚಿತ್ರವನ್ನು ಇಲಿಯ ಕಾಲಿನ ಚಿತ್ರದೊಂದಿಗೆ ಹೋಲಿಸಿ.)

ಉಲ್ಬಣಗೊಂಡ ಜೀವಕೋಶೀಯ ಹಾನಿಯಿಂದ ಉಂಟಾಗುವ ಜೀವಕೋಶದ ಆಘಾತಕಾರಿ ಸಾವಿನ ಒಂದು ಸ್ವರೂಪವಾದ ಊತಕದ ಸಾವಿಗೆ ಪ್ರತಿಯಾಗಿ, ಜೀವಿಯೊಂದರ ಜೀವನಚಕ್ರದ ಅವಧಿಯಲ್ಲಿ ಸರ್ವೇಸಾಮಾನ್ಯವಾಗಿ‌ ಪ್ರಯೋಜನಗಳನ್ನು ಅಪೊಪ್ಟೋಸಿಸ್ ನೀಡುತ್ತದೆ. ಉದಾಹರಣೆಗೆ, ಬೆಳೆಯುತ್ತಿರುವ ಮಾನವ ಭ್ರೂಣವೊಂದರಲ್ಲಿನ ಕೈಬೆರಳುಗಳು ಮತ್ತು ಕಾಲ್ಬೆರಳುಗಳ ಪ್ರಭೇದ ಕಲ್ಪಿಸುವಿಕೆ ಅಥವಾ ವಿಶೇಷಿಸುವಿಕೆಯು ಬೆರಳುಗಳ ನಡುವಿನ ಜೀವಕೋಶಗಳು ಅಪೊಪ್ಟೋಸಿಸ್‌ಗೆ ಈಡಾಗುವುದರಿಂದ ಸಂಭವಿಸುತ್ತದೆ; ಇದರ ಪರಿಣಾಮವಾಗಿ ಬೆರಳುಗಳು ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತವೆ. ಸಾಧಾರಣ ಮಾನವ ವಯಸ್ಕನಲ್ಲಿ ಅಪೊಪ್ಟೋಸಿಸ್‌ ಕಾರಣದಿಂದಾಗಿ ಪ್ರತಿದಿನವೂ 50ರಿಂದ 70 ಶತಕೋಟಿಯಷ್ಟರ ನಡುವಿನ ಜೀವಕೋಶಗಳು ಸಾಯುತ್ತವೆ. 8 ಮತ್ತು 14 ವರ್ಷ ವಯಸ್ಸುಗಳ ನಡುವಿನ ಒಂದು ಸಾಧಾರಣ ಮಗುವಿಗೆ ಸಂಬಂಧಿಸಿ ಹೇಳುವುದಾದರೆ, ದಿನವೊಂದಕ್ಕೆ ಸರಿಸುಮಾರು 20 ಶತಕೋಟಿಯಿಂದ 30 ಶತಕೋಟಿಯವರೆಗಿನ ಜೀವಕೋಶಗಳು ಸಾಯುತ್ತವೆ. ವರ್ಷವೊಂದರಲ್ಲಿ, ಓರ್ವ ವ್ಯಕ್ತಿಯ ದೇಹದ ತೂಕಕ್ಕೆ ಸಮನಾಗುವ ಜೀವಕೋಶಗಳ ಒಂದು ರಾಶಿಯ ತ್ವರಿತ ವೃದ್ಧಿ ಮತ್ತು ತದನಂತರದ ನಾಶವಾಗುವಿಕೆಗೆ ಇದು ಸಮನಾಗಿರುತ್ತದೆ. ಅಪೊಪ್ಟೋಸಿಸ್‌ ಕುರಿತಾದ ಸಂಶೋಧನೆಯು 1990ರ ಆರಂಭಿಕ ದಶಕದಿಂದ ಗಣನೀಯವಾಗಿ ಹೆಚ್ಚಳಗೊಂಡಿದೆ. ಒಂದು ಜೈವಿಕ ವಿದ್ಯಮಾನವಾಗಿರುವ ಇದರ ಪ್ರಾಮುಖ್ಯತೆಯ ಜೊತೆಗೆ, ದೋಷಯುಕ್ತ ಅಪೊಪ್ಟೋಟಿಕ್‌ ಪ್ರಕ್ರಿಯೆಗಳು ಕಾಯಿಲೆಗಳ ಒಂದು ವ್ಯಾಪಕ ವೈವಿಧ್ಯತೆಯಲ್ಲಿ ಸೂಚಿಸಲ್ಪಟ್ಟಿವೆ. ಹೆಚ್ಚುವರಿ ಅಪೊಪ್ಟೋಸಿಸ್‌ ಪ್ರಕ್ರಿಯೆಯು ರಕ್ತಕೊರತೆಯ ಹಾನಿಯಲ್ಲಿರುವಂತೆ ಹೈಪೊಟ್ರೋಫಿಯನ್ನುಂಟುಮಾಡಿದರೆ, ಸಾಕಷ್ಟು ಪ್ರಮಾಣದಲ್ಲಿಲ್ಲದಿದ್ದಾಗ ಇದು ಕ್ಯಾನ್ಸರ್‌ನಂಥ ಅನಿಯಂತ್ರಿತ ಜೀವಕೋಶ ತ್ವರಿತ ವೃದ್ಧಿಯನ್ನುಂಟುಮಾಡುತ್ತದೆ.

ಆವಿಷ್ಕಾರ ಮತ್ತು ವ್ಯುತ್ಪತ್ತಿ

ಬದಲಾಯಿಸಿ

ಜೀವಕೋಶದ ಸಾವೆಂಬುದು ಜೀವಂತ ಜೀವಿಗಳಲ್ಲಿನ ಒಂದು ಸಂಪೂರ್ಣವಾದ ಸಾಮಾನ್ಯ ಪ್ರಕ್ರಿಯೆಯಾಗಿದ್ದು, 100 ವರ್ಷಗಳ ಹಿಂದೆಯೇ ವಿಜ್ಞಾನಿಗಳಿಂದ ಇದು ಮೊಟ್ಟಮೊದಲ ಬಾರಿಗೆ ಆವಿಷ್ಕರಿಸಲ್ಪಟ್ಟಿತು. ಕಾರ್ಲ್‌ ವೋಗ್ಟ್‌ ಎಂಬ ಓರ್ವ ಜರ್ಮನ್‌ ವಿಜ್ಞಾನಿ ಅಪೊಪ್ಟೋಸಿಸ್‌ನ ಮೂಲತತ್ವವನ್ನು 1842ರಲ್ಲಿ ಮೊಟ್ಟಮೊದಲ ಬಾರಿಗೆ ವಿವರಿಸಿದ. 1885ರಲ್ಲಿ, ವಾಲ್ಥರ್‌ ಫ್ಲೆಮಿಂಗ್‌ ಎಂಬ ಓರ್ವ ಅಂಗರಚನಾ ಶಾಸ್ತ್ರಜ್ಞ ಜೀವಕೋಶದ ಯೋಜಿತ ಸಾವಿನ ಪ್ರಕ್ರಿಯೆಯ ಒಂದು ಹೆಚ್ಚು ಕರಾರುವಾಕ್ಕಾದ ವಿವರಣೆಯನ್ನು ನೀಡಿದ. ಆದಾಗ್ಯೂ, 1965ರವರೆಗೆ ಈ ವಿಷಯವು ಜಾಗೃತಗೊಂಡಿರಲಿಲ್ಲ. ಇಲೆಕ್ಟ್ರಾನ್‌ ಸೂಕ್ಷ್ಮದರ್ಶನ ವಿಧಾನವನ್ನು ಬಳಸಿ ಅಂಗಾಂಶಗಳನ್ನು ಅಧ್ಯಯನ ಮಾಡುತ್ತಿರುವಾಗ, ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾನ್‌ ಫಾಕ್ಸ್‌ಟನ್‌ ರಾಸ್‌ ಕೆರ್‌ ಎಂಬಾತ ಅಪೊಪ್ಟೋಸಿಸ್‌ನ್ನು (ಗ್ರೀಕ್‌: ಅಪೊ‌ - ಇಂದ, ಪ್ಟೋಸಿಸ್‌ - ಬೀಳುವಿಕೆ) ಆಘಾತಕಾರಿಯಾದ ಜೀವಕೋಶ ಸಾವು ಎಂಬ ಪರಿಕಲ್ಪನೆಯಿಂದ ಪ್ರತ್ಯೇಕಿಸುವಲ್ಲಿ ಸಮರ್ಥನಾದ.[] ಈ ವಿದ್ಯಮಾನವನ್ನು ವಿವರಿಸುವ ಒಂದು ಅಧ್ಯಯನ ಲೇಖನದ ಪ್ರಕಟಣೆಯ ನಂತರ, ಅಲಾಸ್ಟೇರ್‌ ರ. ಕ್ಯೂರಿ ಹಾಗೂ ಅಬರ್‌ದೀನ್‌ ವಿಶ್ವವಿದ್ಯಾಲಯದಲ್ಲಿ ಕ್ಯೂರಿಯ ಪದವೀಧರ ವಿದ್ಯಾರ್ಥಿಯಾಗಿದ್ದ[] ಆಂಡ್ರೂ ವೈಲ್‌‌ರನ್ನು ಸೇರಿಕೊಳ್ಳಲು ಕೆರ್‌ಗೆ ಆಹ್ವಾನ ಬಂದಿತು. 1972ರಲ್ಲಿ, ಬ್ರಿಟಿಷ್‌ ಜರ್ನಲ್ ಆಫ್ ಕ್ಯಾನ್ಸರ್‌ ನಿಯತಕಾಲಿಕದಲ್ಲಿ ಈ ಮೂವರೂ ಒಂದು ಮೂಲಭೂತ ಲೇಖನವನ್ನು ಪ್ರಕಟಿಸಿದರು.[] ಕೆರ್‌ ಆರಂಭದಲ್ಲಿ ಯೋಜಿತ ಜೀವಕೋಶ ಊತಕದ ಸಾವು ಎಂಬ ಪದವನ್ನು ಬಳಸಿದ್ದ, ಆದರೆ ಲೇಖನದಲ್ಲಿ ಜೀವಕೋಶದ ಸ್ವಾಭಾವಿಕ ಸಾವಿನ ಪ್ರಕ್ರಿಯೆಯನ್ನು ಅಪೊಪ್ಟೋಸಿಸ್‌ ಎಂದು ಕರೆಯಲಾಯಿತು. ಅಬರ್‌ದೀನ್‌ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೇಮ್ಸ್‌ ಕಾರ್ಮಾಕ್ ಎಂಬ ಗ್ರೀಕ್‌ ಭಾಷೆಯ ಓರ್ವ ಪ್ರಾಧ್ಯಾಪಕನಿಗೆ ಅಪೊಪ್ಟೋಸಿಸ್‌ ಎಂಬ ಪದವನ್ನು ಸೂಚಿಸಿದ ಕೀರ್ತಿಯನ್ನು ಕೆರ್‌, ವೈಲಿ ಮತ್ತು ಕ್ಯೂರಿ ಸಲ್ಲಿಸಿದರು. ಅಪೊಪ್ಟೋಸಿಸ್‌ ಎಂಬ ಪದಕ್ಕೆ ತಾನು ನೀಡಿದ ವಿವರಣೆಗಾಗಿ 2000ರ ಮಾರ್ಚ್‌ 14ರಂದು ಪಾಲ್‌ ಎರ್ಲಿಚ್‌ ಮತ್ತು ಲುಡ್‌ವಿಗ್‌ ಡರ್ಮ್‌‌ಸ್ಟೀಡ್‌ಟರ್‌ ಬಹುಮಾನವನ್ನು ಕೆರ್‌ ಸ್ವೀಕರಿಸಿದ. ಬಾಸ್ಟನ್‌ ಜೀವವಿಜ್ಞಾನಿಯಾದ ರಾಬರ್ಟ್‌ ಹೋರ್ವಿಟ್ಜ್‌ ಎಂಬಾತನೊಂದಿಗೆ ಆತ ತನ್ನ ಬಹುಮಾನವನ್ನು ಹಂಚಿಕೊಂಡ.[] ಗ್ರೀಕ್‌ನಲ್ಲಿ, ಅಪೊಪ್ಟೋಸಿಸ್‌ ಎಂಬ ಪದವನ್ನು ಭಾಷಾಂತರಿಸಿದರೆ ಸಸ್ಯಗಳಿಂದ ಅಥವಾ ಮರಗಳಿಂದ ಹೂವಿನ ದಳಗಳು ಅಥವಾ ಎಲೆಗಳ "ಬೀಳುವಿಕೆ" ಎಂಬ ಅರ್ಥಬರುತ್ತದೆ. ಈ ಪದವು ಎರಡು ಸಾವಿರ ವರ್ಷಗಳ ಮುಂಚಿನಿಂದಲೂ ಗ್ರೀಕರಿಗಾಗಿ ಒಂದು ವೈದ್ಯಕೀಯ ಅರ್ಥವನ್ನೇ ಹೊಂದಿದ್ದರಿಂದ, ಗ್ರೀಕ್‌ ಭಾಷೆಯ ಪ್ರಾಧ್ಯಾಪಕನಾದ ಕಾರ್ಮಾಕ್‌ ಸದರಿ ಪದವನ್ನು ವೈದ್ಯಕೀಯ ಬಳಕೆಗಾಗಿ ಮರುಪರಿಚಯಿಸಿದ. "ಮೂಳೆಗಳ ಕ್ಷಯಿಸುವಿಕೆಯನ್ನು" ಅರ್ಥೈಸಲು ಹಿಪೋಕ್ರೇಟ್ಸ್‌ ಈ ಪದವನ್ನು ಬಳಸಿದ. ಗೇಲನ್‌ ಎಂಬಾತ ಇದರ ಅರ್ಥವನ್ನು "ಹಕ್ಕಳೆಗಳ ಬೀಳುವಿಕೆಗೆ" ವಿಸ್ತರಿಸಿದ. ಕಾರ್ಮಾಕ್‌ ತಾನು ಹೆಸರನ್ನು ಸೂಚಿಸಿದಾಗ ಈ ಬಳಕೆಯ ಕುರಿತು ಅವನಿಗೆ ನಿಸ್ಸಂದೇಹವಾಗಿ ಅರಿವಿತ್ತು. ಸರಿಯಾದ ಉಚ್ಚರಣೆಯ ಕುರಿತಾದ ಚರ್ಚೆಗಳು ಮುಂದುವರೆಯುತ್ತಲೇ ಇವೆ. ಎರಡನೇ p ಯ ಉಚ್ಚರಣೆಯು ಉಚ್ಚಾರಣಾರಹಿತವಾಗಿರಬೇಕು (pronounced /æpəˈtoʊsɨs/ "ap-a-tow'-sis"[][]) ಮತ್ತು ಎರಡನೇ p ಯನ್ನು ಮೂಲ ಗ್ರೀಕ್‌ನಲ್ಲಿರುವಂತೆ ಉಚ್ಚರಿಸಬೇಕು (pronounced /æpəpˈtoʊsɨs/),[][] ಎಂಬುದರ ನಡುವೆ ಅಭಿಪ್ರಾಯಭೇದಗಳಿವೆ.[ಸೂಕ್ತ ಉಲ್ಲೇಖನ ಬೇಕು] ಇಂಗ್ಲಿಷ್‌ನಲ್ಲಿ, ಗ್ರೀಕ್‌ -pt- ವ್ಯಂಜನ ಗುಚ್ಛp ಎಂಬುದು ಪದವೊಂದರ ಪ್ರಾರಂಭದಲ್ಲಿ ವಿಶಿಷ್ಟರೀತಿಯಲ್ಲಿ ಉಚ್ಚಾರಣಾರಹಿತವಾಗಿದೆ (ಉದಾಹರಣೆಗೆ, ಪ್ಟೆರೋಡಾಕ್ಟಿl, ಪ್ಟೊಲೆಮಿ), ಆದರೆ, ಹೆಲಿಕಾಪ್ಟರ್‌ ಅಥವಾ ಕೀಟಗಳ ಗಣಗಳಾದ: ಡಿಪ್ಟೆರಾ, ಲೆಪಿಡೊಪ್ಟೆರಾ, ಇತ್ಯಾದಿ ಪದಗಳಲ್ಲಿರುವಂತೆ ಸ್ವರವೊಂದು ಮುಂಚಿತವಾಗಿ ಬರುವ ರೀತಿಯಲ್ಲಿರುವ ಸಂಯೋಜಿತ ಸ್ವರೂಪಗಳಲ್ಲಿ ಬಳಸಿದಾಗ ಸ್ಪಷ್ಟವಾಗಿ ಜೋಡಿಸಿಕೊಂಡು ಉಚ್ಚರಿಸಲ್ಪಡುತ್ತವೆ. ಬ್ರಿಟಿಷ್‌ ಜರ್ನಲ್ ಆಫ್ ಕ್ಯಾನ್ಸರ್ ನಿಯತಕಾಲಿಕದ 1972ರ ಆಗಸ್ಟ್‌;26(4):239-57 ಸಂಚಿಕೆಯಲ್ಲಿ ಬಂದ ಕೆರ್‌ ವೈಲಿ ಮತ್ತು ಕ್ಯೂರಿಯವರ ಮೂಲಸ್ವರೂಪದ ಅಧ್ಯಯನ ಲೇಖನದಲ್ಲಿ ಉಚ್ಚರಣೆಯ ಕುರಿತಾಗಿ ಒಂದು ಅಡಿಟಿಪ್ಪಣಿಯ ಉಲ್ಲೇಖವಿರುವುದನ್ನು ಗಮನಿಸಬೇಕು. "ಈ ಪದವನ್ನು ಸೂಚಿಸಿರುವುದಕ್ಕಾಗಿ ಅಬರ್‌ದೀನ್‌ ವಿಶ್ವವಿದ್ಯಾಲಯದ ಗ್ರೀಕ್‌ ವಿಭಾಗದ ಪ್ರಾಧ್ಯಾಪಕ ಜೇಮ್ಸ್‌ ಕಾರ್ಮಾಕ್‌ಗೆ ನಾವು ಅತ್ಯಂತ ಕೃತಜ್ಞರಾಗಿರಬೇಕು. ಹೂವುಗಳಿಂದ ದಳಗಳು, ಅಥವಾ ಮರಗಳಿಂದ ಎಲೆಗಳು "ಉದುರಿಹೋಗುವುದು" ಅಥವಾ "ಬಿದ್ದು ಹೋಗುವುದನ್ನು" ವಿವರಿಸಲು, "ಅಪೊಪ್ಟೋಸಿಸ್‌" ಎಂಬ ಪದವನ್ನು (ಅಪೊಪ್ಟೋಸಿಸ್‌ನ ಗ್ರೀಕ್‌ ಕಾಗುಣಿತ‌) ಗ್ರೀಕ್‌ ಭಾಷೆಯಲ್ಲಿ ಬಳಸಲಾಗುತ್ತದೆ. ಪದದ ನಿಷ್ಪತ್ತಿಯನ್ನು ಸ್ಪಷ್ಟವಾಗಿ ತೋರಿಸಲು, ಉಪಾಂತವಾದ ಅಕ್ಷರದ ಮೇಲೆ ಒತ್ತನ್ನು ನೀಡಬೇಕು ಎಂಬುದು ನಮ್ಮ ಸಲಹೆ. "ಪ್ಟೋಸಿಸ್‌"ನ ರೀತಿಯಲ್ಲಿ ಉಚ್ಚರಿಸಲ್ಪಡುತ್ತಿರುವ ("p" ಉಚ್ಚಾರಣಾರಹಿತವಾಗಿರುವಂತೆ) ಪದದ ಎರಡನೇ ಅರ್ಧಭಾಗವು "ಬೀಳುವುದು" ಎಂಬ ಅದೇ ಮೂಲದಿಂದ ಬರುವಂಥಾದ್ದಾಗಿದೆ, ಮತ್ತು ಮೇಲ್ಭಾಗದ ಕಣ್ಣಿನ ರೆಪ್ಪೆಯ ಇಳಿಬೀಳುವಿಕೆಯನ್ನು ವಿವರಿಸಲು ಈಗಾಗಲೇ ಬಳಸಲಾಗಿದೆ."

ಕಾರ್ಯಚಟುವಟಿಕೆಗಳು

ಬದಲಾಯಿಸಿ

ಜೀವಕೋಶದ ಅಂತ್ಯ

ಬದಲಾಯಿಸಿ

ಜೀವಕೋಶವೊಂದು ದುರಸ್ತಿ ಮಾಡಲಾಗದಷ್ಟು ಹಾನಿಗೊಳಗಾಗಿದ್ದಾಗ, ವೈರಾಣುವೊಂದರಿಂದ ಸೋಂಕಿಗೆ ಒಳಗಾಗಿದ್ದಾಗ, ಅಥವಾ ಬಳಲಿಕೆಯಂಥ ಒತ್ತಡಯುಕ್ತ ಸ್ಥಿತಿಗಳಿಗೆ ಈಡಾದಾಗ ಅಪೊಪ್ಟೋಸಿಸ್‌ ಕಂಡುಬರುತ್ತದೆ. ಅಯಾನುಕಾರಿ ವಿಕಿರಣ ಅಥವಾ ವಿಷಯುಕ್ತ ರಾಸಾಯನಿಕಗಳಿಂದ DNAಗೆ ಆಗುವ ಹಾನಿಯೂ ಸಹ ಗಡ್ಡೆಯನ್ನು ದಮನಮಾಡುವ p53 ಎಂಬ ಜೀನಿನ ಚಟುವಟಿಕೆಗಳ ಮೂಲಕ ಅಪೊಪ್ಟೋಸಿಸ್‌ನ್ನುಂಟುಮಾಡುತ್ತದೆ. ಅಪೊಪ್ಟೋಸಿಸ್‌ಗಾಗಿರುವ "ನಿಷ್ಕರ್ಷೆ"ಯು ಸ್ವತಝ ಜೀವಕೋಶದಿಂದ, ಸುತ್ತುವರೆದಿರುವ ಅಂಗಾಂಶದಿಂದ, ಅಥವಾ ಪ್ರತಿರಕ್ಷಣಾ ವ್ಯವಸ್ಥೆಯ ಭಾಗವಾಗಿರುವ ಒಂದು ಜೀವಕೋಶದಿಂದ ಬರಬಹುದು. ಈ ರೀತಿಯ ನಿದರ್ಶನಗಳಲ್ಲಿ ಹಾನಿಗೊಳಗಾದ ಜೀವಕೋಶವನ್ನು ನಿರ್ಮೂಲಮಾಡುವಲ್ಲಿ ಅಪೊಪ್ಟೋಸಿಸ್‌ ಕಾರ್ಯವೆಸಗುತ್ತದೆ. ತನ್ಮೂಲಕ ಜೀವಿಯಿಂದ ಮತ್ತಷ್ಟು ಪೋಷಕಾಂಶಗಳು ಬತ್ತಿಹೋಗದಂತೆ, ಅಥವಾ ವೈರಾಣುವಿನ ಸೋಂಕು ಮತ್ತಷ್ಟು ಹರಡದಂತೆ ತಡೆಯುತ್ತದೆ. ಕ್ಯಾನ್ಸರ್‌ ತಡೆಗಟ್ಟುವಲ್ಲಿಯೂ ಸಹ ಅಪೊಪ್ಟೋಸಿಸ್‌ ಒಂದು ಪ್ರಮುಖ ಪಾತ್ರವಹಿಸುತ್ತದೆ. ನವವಿಕೃತಿ ಅಥವಾ ಜೀವರಾಸಾಯನಿಕ ಪ್ರತಿಬಂಧದ ಕಾರಣದಿಂದಾಗಿ ಜೀವಕೋಶವೊಂದು ಅಪೊಪ್ಟೋಸಿಸ್‌ಗೆ ಒಳಗಾಗಲು ಅಸಮರ್ಥವಾದಾಗ, ಅದು ವಿಭಜನೆಯನ್ನು ಮುಂದುವರೆಸಿ, ಒಂದು ಗಡ್ಡೆಯಾಗಿ ಬೆಳೆಯುತ್ತದೆ. ಉದಾಹರಣೆಗೆ, ಪ್ಯಾಪಿಲ್ಲೋಮಾ ವೈರಾಣುಗಳಿಂದ ಉಂಟಾಗುವ ಸೋಂಕು, ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಯ ಒಂದು ಪ್ರಮುಖ ಸದಸ್ಯನಾದ ಜೀವಕೋಶದ p53 ಪ್ರೊಟೀನಿನ ಮೇಲೆ ಆಕ್ರಮಣ ಮಾಡಲು ಒಂದು ವೈರಲ್‌ ಜೀನನ್ನು ಉಂಟುಮಾಡುತ್ತದೆ. ಜೀವಕೋಶದ ಅಪೊಪ್ಟೋಟಿಕ್‌ ಸಾಮರ್ಥ್ಯದಲ್ಲಿ ಕಂಡುಬರುವ ಈ ತೆರನಾದ ಆಕ್ರಮಣ ಅಥವಾ ಮಧ್ಯಪ್ರವೇಶವು ಗರ್ಭಕೊರಳಿನ ಕ್ಯಾನ್ಸರ್‌‌ನ ಬೆಳವಣಿಗೆಯಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ.

ಸಂತುಲನ

ಬದಲಾಯಿಸಿ

ಪ್ರಾಪ್ತವಯಸ್ಸಿನ ಜೀವಿಯಲ್ಲಿ, ಜೀವಕೋಶಗಳ ಸಂಖ್ಯೆಯು ಜೀವಕೋಶದ ಸಾವು ಮತ್ತು ವಿಭಜನೆಯ ಮೂಲಕ ತುಲನಾತ್ಮಕವಾಗಿ ಸ್ಥಿರವಾಗಿರಿಸಲ್ಪಟ್ಟಿರುತ್ತದೆ. ಜೀವಕೋಶಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸಿದಾಗ ಅಥವಾ ರೋಗಗ್ರಸ್ತವಾದಾಗ ಅವುಗಳನ್ನು ಬದಲಿಸಬೇಕಾಗುತ್ತದೆ, ಆದರೆ ಜೀವಕೋಶದ ಸಾವಿನಿಂದ ತ್ವರಿತ ವೃದ್ಧಿಯನ್ನು ಸರಿದೂಗಿಸಬೇಕಾಗುತ್ತದೆ.[] ಈ ನಿಯಂತ್ರಣಾ ವಿಧಾನವು ಸಂತುಲನದ ಒಂದು ಭಾಗವಾಗಿದ್ದು, ಬದುಕಿರುವ ಜೀವಿಗಳು ಕೆಲವೊಂದು ಮಿತಿಗಳೊಳಗೆ ತಮ್ಮ ಆಂತರಿಕ ಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಅವುಗಳಿಗೆ ಆ ಸಂತುಲನವು ಅತ್ಯಗತ್ಯವಾಗಿರುತ್ತದೆ. ಕೆಲವೊಂದು ವಿಜ್ಞಾನಿಗಳು ಹೀಮೋಡೈನಮಿಕ್ಸ್ ಎಂಬ ಪದವನ್ನು ಒಂದು ಹೆಚ್ಚು ಕರಾರುವಾಕ್ಕಾದ ಪದವಾಗಿ ಸೂಚಿಸಿದ್ದಾರೆ.[೧೦] ಅಲ್ಲೊಸ್ಟಾಸಿಸ್ ಎಂಬ ಸಂಬಂಧಿಸಿದ ಪದವು ದೇಹವು ವ್ಯಕ್ತಪಡಿಸುವ ಒಂದು ಹೆಚ್ಚು ಸಂಕೀರ್ಣ ಸ್ವಭಾವದ ಸಮತೋಲನವೊಂದನ್ನು ಸೂಚಿಸುತ್ತದೆ. ಅಂಗಾಂಶದಲ್ಲಿನ ಕೋಶ ವಿಭಜನೆಯ (ಜೀವಕೋಶದ ಸಂಖ್ಯಾ ಹೆಚ್ಚಳಕ್ಕೆ ಕಾರಣವಾಗುವ ಜೀವಕೋಶ ವಿಭಜನೆ) ಪ್ರಮಾಣವು ಜೀವಕೋಶಗಳ ಸಾವಿನ ಪ್ರಮಾಣದಿಂದ ಸಮತೋಲನಗೊಳಿಸಲ್ಪಟ್ಟಾಗ, ಸಂತುಲನವನ್ನು ಸಾಧಿಸಿದಂತಾಗುತ್ತದೆ. ಒಂದು ವೇಳೆ ಈ ಸಮತೋಲನ ಸ್ಥಿತಿಗೆ ಧಕ್ಕೆಯಾದಲ್ಲಿ, ಎರಡು ಸಮರ್ಥವಾಗಿ ಮಾರಕವಾಗಿರುವ ಅಸ್ವಸ್ಥತೆಗಳಲ್ಲೊಂದು ಕಾಣಿಸಿಕೊಳ್ಳುತ್ತದೆ:

  • ಜೀವಕೋಶಗಳು ತಾವು ಸಾಯುವುದಕ್ಕಿಂತ ವೇಗವಾಗಿ ವಿಭಜನೆಗೊಳ್ಳುವ ಮೂಲಕ ಗಡ್ಡೆಯೊಂದರ ಬೆಳವಣಿಗೆಗೆ ಕಾರಣವಾಗುತ್ತವೆ.
  • ಜೀವಕೋಶಗಳು ತಾವು ಸಾಯುವುದಕ್ಕಿಂತ ನಿಧಾನವಾಗಿ ವಿಭಜನೆಗೊಳ್ಳುವ ಮೂಲಕ ಜೀವಕೋಶದ ನಷ್ಟವನ್ನು ಉಂಟುಮಾಡುತ್ತವೆ.

ಸಂತುಲನವು ಪ್ರತಿಕ್ರಿಯೆಗಳ ಒಂದು ಸಂಕೀರ್ಣ ಸರಣಿಯನ್ನು ಒಳಗೊಳ್ಳುತ್ತದೆ. ಇದು ಜೀವಕೋಶದ ಸನ್ನೆಮಾಡುವಿಕೆಯ ವಿವಿಧ ಬಗೆಗಳನ್ನು ಅಪೇಕ್ಷಿಸುವ ಜೀವಿಯೊಂದರೊಳಗಿನ ಒಂದು ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಯಾವುದೇ ತೆರನಾದ ದುರ್ಬಲಗೊಳಿಸುವಿಕೆಯು ಕಾಯಿಲೆಯೊಂದನ್ನು ಉಂಟುಮಾಡಬಲ್ಲದು. ಉದಾಹರಣೆಗೆ, ಸನ್ನೆಮಾಡುವಿಕೆಯ ಪ್ರತಿಕ್ರಿಯಾ ಸರಣಿಯ ಅಪಸಾಮಾನ್ಯ ನಿಯಂತ್ರಣವು ಕ್ಯಾನ್ಸರ್‌ನ ಹಲವಾರು ಸ್ವರೂಪಗಳಲ್ಲಿ ಸೂಚಿಸಲ್ಪಟ್ಟಿದೆ. ಅಪೊಪ್ಟೋಟಿಕ್‌-ನಿರೋಧಕ ಸನ್ನೆಯೊಂದನ್ನು ರವಾನಿಸುವ ಪ್ರತಿಕ್ರಿಯಾ ಸರಣಿಯು, ಮೇದೋಜೀರಕ ಗ್ರಂಥಿಯ ಅಡಿನೋಕಾರ್ಸಿನೋಮಾ ಅಂಗಾಂಶಗಳಲ್ಲಿ ಸಕ್ರಿಯಕೃತ ಗೊಳಿಸಲ್ಪಟ್ಟಿರುವುದು ಕಂಡುಬಂದಿದೆ.

ಬೆಳವಣಿಗೆ

ಬದಲಾಯಿಸಿ
 
ಅಪೊಪ್ಟೋಸಿಸ್‌ನ ಕೊರತೆಯ ಕಾರಣದಿಂದಾಗಿ ಎರಡು ಕಾಲ್ಬೆರಳುಗಳಲ್ಲಿನ ಅಪೂರ್ಣ ವ್ಯತ್ಯಾಸಾತ್ಮಕತೆ (ಸಿಂಡ್ಯಾಕ್ಟೈಲಿ)

ಜೀವಕೋಶದ ಯೋಜಿತ ಸಾವು ಎಂಬುದು ಸಸ್ಯ ಮತ್ತು ಪ್ರಾಣಿಗಳೆರಡರ ಅಂಗಾಂಶ ಬೆಳವಣಿಗೆಯ ಒಂದು ಅವಿಭಾಜ್ಯ ಅಂಗವಾಗಿದೆ. ಅನೇಕ ವೇಳೆ, ಒಂದು ಅಂಗ ಅಥವಾ ಅಂಗಾಂಶದ ಬೆಳವಣಿಗೆಗಿಂತ ಮುಂಚಿತವಾಗಿ ನಿರ್ದಿಷ್ಟ ಜೀವಕೋಶವೊಂದರ ವ್ಯಾಪಕ ವಿಭಜನೆ ಮತ್ತು ಪ್ರತ್ಯೇಕವಾಗುವಿಕೆಯು ಕಂಡುಬರುತ್ತದೆ. ಇದರಿಂದ ರೂಪುಗೊಳ್ಳುವ ರಾಶಿಯು ಆಗ ಅಪೊಪ್ಟೋಸಿಸ್‌ನಿಂದಾಗಿ "ಕತ್ತರಿಸಲ್ಪಟ್ಟು" ಸರಿಯಾದ ಸ್ವರೂಪವನ್ನು ತಳೆಯುತ್ತದೆ. ಊತಕದ ಸಾವಿಗಿಂತ ಭಿನ್ನವಾಗಿ, ಗಾಯ, ಅಪೊಪ್ಟೋಸಿಸ್‌ನಿಂದ ಸಂಭವಿಸುವ ಜೀವಕೋಶೀಯ ಸಾವು ಜೀವಕೋಶ ಕುಗ್ಗುವಿಕೆ ಮತ್ತು ವಿಘಟನೆಗೆ ಕಾರಣವಾಗುತ್ತದೆ. ಜೀವಕೋಶಗಳು ಭಕ್ಷಿಸಿ ನಾಶಪಡಿಸುವಿಕೆಗೀಡಾಗಿರಲು ಮತ್ತು ಅವುಗಳ ಘಟಕಗಳು ಸಮರ್ಥವಾಗಿ ಹಾನಿಕಾರಕವಾಗಿರುವ ಜಲವಿಚ್ಛೇದನಾ ಕಿಣ್ವಗಳಂಥ ಅಂತರಕೋಶೀಯ ವಸ್ತುಗಳನ್ನು ಸುತ್ತಲಿನ ಅಂಗಾಂಶಕ್ಕೆ ಬಿಡುಗಡೆ ಮಾಡದೆಯೇ ಮರುಬಳಕೆಗೆ ಈಡಾಗಲು ಇಂಥ ಕುಗ್ಗುವಿಕೆ ಮತ್ತು ವಿಘಟನೆಯು ಅನುವುಮಾಡಿಕೊಡುತ್ತದೆ. ಆಯ್ಕೆಸಾಧ್ಯ ಅಪೊಪ್ಟೋಸಿಸ್‌ನೊಂದಿಗೆ ಸಂಯೋಜಿಸಲ್ಪಟ್ಟ ಜೀವಕೋಶದ ಆಯ್ಕೆಸಾಧ್ಯ ತ್ವರಿತ ವೃದ್ಧಿಯು ಕಶೇರುಕಗಳಲ್ಲಿ ಅಂಗಾಂಶಗಳ ಬೆಳವಣಿಗೆಯಾಗುವುದನ್ನು ರೂಪಿಸುತ್ತದೆ ಎಂಬುದನ್ನು ಕೋಳಿಮರಿಯ ಭ್ರೂಣಗಳ ಕುರಿತಾದ ಸಂಶೋಧನೆಯು ಸೂಚಿಸಿದೆ. ಕಶೇರುಕದ ಭ್ರೂಣ ಬೆಳವಣಿಗೆಯ ಸಮಯದಲ್ಲಿ, ಬೆನ್ನುಹುರಿಯ ಪೂರ್ವರೂಪ ಮತ್ತು ತಳದ ಬಿಲ್ಲೆಯೆಂದು ಕರೆಯಲಾಗುವ ಸಂರಚನೆಗಳು ಸನ್ನೆಮಾಡುವಿಕೆಯ ಕಣದ (Shh) ಒಂದು ವಾಟವನ್ನು ಸೂಸುತ್ತವೆ, ಮತ್ತು ಇದೇ ವಾಟವು ಭ್ರೂಣೀಯ ನರಕೊಳವೆಯಲ್ಲಿ ಮಾದರಿಗಳನ್ನು ರೂಪಿಸಲು ಜೀವಕೋಶಗಳನ್ನು ನಿರ್ದೇಶಿಸುತ್ತದೆ. ಪ್ಯಾಚ್‌ಡ್‌1 (Ptc1) ಎಂದು ಕರೆಯಲಾಗುವ ತಮ್ಮ ಪೊರೆಗಳಲ್ಲಿನ ಗ್ರಾಹಿಯೊಂದರಲ್ಲಿ Shhನ್ನು ಸ್ವೀಕರಿಸುವ ಜೀವಕೋಶಗಳು ಬದುಕುತ್ತವೆ ಮತ್ತು ವೃದ್ಧಿಯಾಗುತ್ತವೆ. Shhನ ಅನುಪಸ್ಥಿತಿಯಲ್ಲಿ, ಇದೇ Ptc1 ಗ್ರಾಹಿಯ ತುದಿಗಳಲ್ಲೊಂದು (ಪೊರೆಯೊಳಗಿನ ಕಾರ್ಬಾಕ್ಸಿಲ್‌-ತುದಿ) ಕ್ಯಾಸ್ಪೇಸ್‌-3ನಿಂದ ಬಿರಿಯುವಿಕೆಗೆ ಒಳಗಾಗುತ್ತದೆ. ಈ ಕ್ರಿಯೆಯಿಂದಾಗಿ ಅಪೊಪ್ಟೋಸಿಸ್‌-ಉಂಟುಮಾಡುವ ತಾಣವು ಕಾಣಿಸಿಕೊಳ್ಳುತ್ತದೆ.[೧೧][೧೨] ಬೆಳವಣಿಗೆಯ ಅವಧಿಯಲ್ಲಿ, ಅಪೊಪ್ಟೋಸಿಸ್‌ ಬಿಗಿಯಾಗಿ ನಿಯಂತ್ರಿಸಲ್ಪಡುತ್ತದೆ ಮತ್ತು ಅಪೊಪ್ಟೋಸಿಸ್‌ನ್ನು ಪ್ರಚೋದಿಸಲು ವಿವಿಧ ಅಂಗಗಳ ವಿಭಿನ್ನ ಸಂಕೇತಗಳನ್ನು ಬಳಸುತ್ತವೆ. ಹಕ್ಕಿಗಳಲ್ಲಿ, ಬೆರಳುಗಳ ನಡುವಿನ ಅಂಗಾಂಶದಲ್ಲಿ ಅಪೊಪ್ಟೋಸಿಸ್‌ನ್ನು ಪ್ರಚೋದಿಸಲು, ಮೂಳೆಯ ರೂಪೋತ್ಪತ್ತಿಯ ಪ್ರೊಟೀನುಗಳ (ಬೋನ್‌ ಮಾರ್ಫೋಜೆನೆಟಿಕ್‌ ಪ್ರೊಟೀನು-BMP) ಸನ್ನೆಮಾಡುವಿಕೆಯು ಬಳಸಲ್ಪಡುತ್ತದೆ. ಡ್ರಸಾಫಿಲ ನೊಣಗಳಲ್ಲಿ, ಸ್ಟೆರಾಯ್ಡ್‌ ಹಾರ್ಮೋನುಗಳು ಜೀವಕೋಶದ ಸಾವನ್ನು ನಿಯಂತ್ರಿಸುತ್ತವೆ. ಬೆಳವಣಿಗೆಯ ಆರಂಭ-ಸಂಕೇತಗಳೂ ಸಹ ಅಪೊಪ್ಟೋಸಿಸ್‌ನ್ನು ಪ್ರಚೋದಿಸಬಲ್ಲವು‌. ಕಡಿಮೆ ಪ್ರಮಾಣದ TRA-1 ನಕಲು ಅಂಶದ ಕ್ರಿಯಾಶೀಲತೆಯ ಮೂಲಕ (ಜೀವಕೋಶದ ಸಾವನ್ನು TRA-1 ತಡೆಯುತ್ತದೆ) C. ಎಲಿಗನ್ಸ್‌ ಗಂಡು ಪ್ರಭೇದಗಳಲ್ಲಿನ ಉಭಯಲಿಂಗಿ ಉದ್ದೇಶಿತ ನರಕೋಶಗಳ ಲಿಂಗ-ನಿಶ್ಚಿತ ಜೀವಕೋಶದ ಸಾವು ಇದಕ್ಕೊಂದು ಉದಾಹರಣೆ.

ದುಗ್ಧಕೋಶ ಪ್ರಭಾವಗಳು

ಬದಲಾಯಿಸಿ

ಮಾನವ ಶರೀರವೊಂದರಲ್ಲಿನ T ದುಗ್ಧಕೋಶಗಳು ಮತ್ತು B ದುಗ್ಧಕೋಶಗಳ ಬೆಳವಣಿಗೆಯು ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ವೈವಿಧ್ಯಮಯ ಜೀವಕೋಶಗಳ ಒಂದು ಬೃಹತ್ ರಾಶಿಯನ್ನೇ ಅದು ಸೃಷ್ಟಿಸುತ್ತದೆ. ಇಷ್ಟೇ ಅಲ್ಲ, ನಂತರದಲ್ಲಿ ಶರೀರಕ್ಕೆ ಹಾನಿಯುಂಟುಮಾಡುವಂಥವುಗಳನ್ನು ಹೊರಹಾಕುತ್ತದೆ. ಅಪೊಪ್ಟೋಸಿಸ್‌ ಎಂಬುದು ಒಂದು ಕಾರ್ಯವಿಧಾನವಾಗಿದ್ದು, ಇದರ ಮೂಲಕ ಶರೀರವು ಪರಿಣಾಮಕಾರಿಯಲ್ಲದ ಮತ್ತು ಹಾನಿಯುಂಟುಮಾಡುವ ಸಾಮರ್ಥ್ಯವುಳ್ಳ ಬೆಳೆದಿಲ್ಲದ ಜೀವಕೋಶಗಳೆರಡನ್ನೂ ಹೊರಹಾಕುತ್ತದೆ. T ಜೀವಕೋಶಗಳಲ್ಲಿ, ಉಳಿಯುವಿಕೆಯ ಸಂಕೇತಗಳನ್ನು ಹಿಂತೆಗೆದುಕೊಳ್ಳುವುದರ ಮೂಲಕ ಅಪೊಪ್ಟೋಸಿಸ್‌ ಪ್ರಾರಂಭವಾಗುತ್ತದೆ (ಕೆಳಗೆ ನೀಡಿರುವ ಕಾರ್ಯವಿಧಾನವನ್ನು ನೋಡಿ).[೧೩] ಸೈಟೋಟಾಕ್ಸಿಕ್‌ T ಜೀವಕೋಶಗಳು ಅಪೊಪ್ಟೋಸಿಸ್‌ನ್ನು ನೇರವಾಗಿ ಉಂಟುಮಾಡುವ ಸಾಮರ್ಥ್ಯ ಹೊಂದಿವೆ. ಉದ್ದೇಶಿತ ತಾಣದ ಪೊರೆಯಲ್ಲಿನ ರಂಧ್ರಗಳನ್ನು ತೆರೆಯುವ ಮೂಲಕ ಮತ್ತು ಎಂದಿನ ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಯನ್ನು ದಾಟಿಕೊಂಡು ಅಥವಾ ತಪ್ಪಿಸಿಕೊಂಡು ಹೋಗುವ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಮೂಲಕ ಅವು ಅಪೊಪ್ಟೋಸಿಸ್‌ನ್ನು ಉಂಟುಮಾಡುತ್ತವೆ. ಸ್ರವಿಸಲ್ಪಟ್ಟ ಪರ್ಫೊರಿನ್‌ನ ಕ್ರಿಯೆಯಿಂದಾಗಿ ಸದರಿ ರಂಧ್ರಗಳು ಸೃಷ್ಟಿಯಾಗುತ್ತವೆ, ಮತ್ತು ಸಣ್ಣಕಣಗಳು ಗ್ರಾನ್‌ಝೈಮ್‌ Bಯನ್ನು ಹೊಂದಿರುತ್ತವೆ. ಇದು ಒಂದು ಸೆರೈನ್‌ ಪ್ರೊಟಿಯೇಸ್‌ ಆಗಿದ್ದು ಆಸ್ಪಾರ್ಟೇಟ್‌ ಉಳಿಕೆಗಳನ್ನು ಒಡೆಯುವ ಮೂಲಕ ವೈವಿಧ್ಯಮಯ ಕ್ಯಾಸ್ಟೇಸ್‌ಗಳನ್ನು ಸಕ್ರಿಯಗೊಳಿಸುತ್ತದೆ.[೧೪]

ಕಾರ್ಯವಿಧಾನ

ಬದಲಾಯಿಸಿ
 

ಅಪೊಪ್ಟೋಸಿಸ್‌ನ ಕಾರ್ಯವಿಧಾನವು ಜೀವಕೋಶದ ಸಂಕೇತಗಳ ಒಂದು ವೈವಿಧ್ಯಮಯ ಶ್ರೇಣಿಯಿಂದ ನಿಯಂತ್ರಿಸಲ್ಪಡುತ್ತದೆ. ಈ ಸಂಕೇತಗಳು ಜೀವಕೋಶದ ಹೊರಗಿನಿಂದ (ಬಾಹ್ಯ ಪ್ರೇರಕಗಳು ) ಅಥವಾ ಜೀವಕೋಶದ ಒಳಗಡೆಯಿಂದ (ಆಂತರಿಕ ಪ್ರೇರಕಗಳು ) ಹುಟ್ಟಿಕೊಳ್ಳಬಹುದು. ಬಾಹ್ಯಕೋಶೀಯ ಸಂಕೇತಗಳಲ್ಲಿ ಜೀವಾಣು ವಿಷಗಳು[೧೫], ಹಾರ್ಮೋನುಗಳು, ವರ್ಧಕ ಅಂಶಗಳು, ನೈಟ್ರಿಕ್ ಆಕ್ಸೈಡು[೧೬] ಅಥವಾ ಸೈಟೋಕೈನ್‌‌ಗಳು ಸೇರಿರಬಹುದು, ಮತ್ತು ಈ ಕಾರಣದಿಂದಾಗಿಯೇ ಒಂದು ಪ್ರತಿಸ್ಪಂದನೆಯನ್ನು ಉಂಟುಮಾಡಲು ಅವು ಪ್ಲಾಸ್ಮ ಒಳಪೊರೆಯನ್ನು ಹಾದುಹೋಗಬೇಕಾಗುತ್ತದೆ ಇಲ್ಲವೇ ಅಡ್ಡಹಾಯ್ಕೆ ಪ್ರಚೋದನೆಯನ್ನು ಉಂಟುಮಾಡುಬೇಕಾಗುತ್ತದೆ. ಈ ಸಂಕೇತಗಳು ಅಪೊಪ್ಟೋಸಿಸ್‌ನ ಮೇಲೆ ಧನಾತ್ಮಕ (ಅಂದರೆ, ಪ್ರಚೋದಿಸಬಹುದು) ಅಥವಾ ಋಣಾತ್ಮಕ (ಅಂದರೆ, ದಮನಮಾಡಬಹುದು, ಪ್ರತಿಬಂಧಿಸಬಹುದು, ಅಥವಾ ನಿಲ್ಲಿಸಬಹುದು) ಪ್ರಭಾವವನ್ನು ಬೀರಬಹುದು. (ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್‌ನ ಬಂಧಕತೆ ಮತ್ತು ತದನಂತರದ ಪ್ರಾರಂಭವಾಗುವಿಕೆಯು ಧನಾತ್ಮಕ ಚೋದನೆ ಎನಿಸಿಕೊಂಡರೆ, ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್‌ನ ಸಕ್ರಿಯ ದಮನ ಮಾಡುವಿಕೆ ಅಥವಾ ಪ್ರತಿಬಂಧವು ಋಣಾತ್ಮಕ ಚೋದನೆ ಎನಿಸಿಕೊಳ್ಳುತ್ತದೆ.) ಒತ್ತಡವೊಂದಕ್ಕೆ ಪ್ರತಿಸ್ಪಂದನೆಯಾಗಿ ಅಂತರ್ಜೀವಕೋಶದ ಅಪೊಪ್ಟೋಟಿಕ್‌ ಸಂಕೇತಿಸುವಿಕೆಯನ್ನು ಜೀವಕೋಶವೊಂದು ಹುಟ್ಟುಹಾಕುತ್ತದೆ. ಇದು ಜೀವಕೋಶದ ಆತ್ಮಹತ್ಯೆಗೆ ಕಾರಣವಾಗಬಹುದು. ಗ್ಲೂಕೋಕಾರ್ಟಿಕಾಯ್ಡ್‌ಗಳು[೧೪], ಬಿಸಿ[೧೪], ವಿಕಿರಣ[೧೪], ಪೋಷಕಾಂಶ ಕೊರತೆ[೧೪], ವೈರಾಣುವಿನ ಸೋಂಕು[೧೪], ಆಮ್ಲಜನಕದ ಕೊರತೆ[೧೪] ಯಿಂದ ಮತ್ತು ಹೆಚ್ಚಳಗೊಂಡ ಅಂತರ್ಜೀವಕೋಶದ ಕ್ಯಾಲ್ಷಿಯಂ ಸಾಂದ್ರತೆ[೧೭] ಯಿಂದ (ಉದಾಹರಣೆಗೆ ಒಳಪೊರೆಗೆ ಉಂಟಾಗುವ ಹಾನಿಯಿಂದ) ಉಂಟಾಗುವ ಪರಮಾಣು ಗ್ರಾಹಿಗಳ ಬಂಧಕತೆ ಇವೇ ಮೊದಲಾದವು ಹಾನಿಗೊಳಗಾದ ಜೀವಕೋಶವೊಂದರಿಂದ ಅಂತರ್ಜೀವಕೋಶದ ಅಪೊಪ್ಟೋಟಿಕ್‌ ಸಂಕೇತಗಳ ಬಿಡುಗಡೆಯನ್ನು ಪ್ರಚೋದಿಸಬಲ್ಲವಾಗಿರುತ್ತವೆ. ಪಾಲಿ ADP ರೈಬೋಸ್‌ ಪಾಲಿಮರೇಸ್‌ನಂಥ ಅನೇಕ ಜೀವಕೋಶೀಯ ಘಟಕಗಳು, ಅಪೊಪ್ಟೋಸಿಸ್‌ನ್ನು ನಿಯಂತ್ರಿಸುವಲ್ಲಿ ನೆರವಾಗಬಹುದು.[೧೮] ಜೀವಕೋಶದ ಸಾವಿನ ವಾಸ್ತವಿಕ ಪ್ರಕ್ರಿಯೆಯು ಕಿಣ್ವಗಳಿಂದ ತ್ವರಿತಗೊಳ್ಳುವುದಕ್ಕೆ ಮುಂಚೆಯೇ, ಅಪೊಪ್ಟೋಸಿಸ್‌ ಪ್ರತಿಕ್ರಿಯಾ ಸರಣಿಯನ್ನು ಶುರುಮಾಡಲು ಅಪೊಪ್ಟೋಟಿಕ್‌ ಸಂಕೇತಗಳು ನಿಯಂತ್ರಕ ಪ್ರೊಟೀನುಗಳನ್ನು ಉಂಟುಮಾಡಬೇಕಾಗುತ್ತದೆ. ಈ ಹಂತವು ಜೀವಕೋಶದ ಸಾವನ್ನುಂಟುಮಾಡುವಲ್ಲಿ ಅಪೊಪ್ಟೋಟಿಕ್‌ ಸಂಕೇತಗಳಿಗೆ ಅನುವುಮಾಡಿಕೊಡುತ್ತದೆ, ಅಥವಾ ಸದರಿ ಪ್ರಕ್ರಿಯೆಯು ನಿಲ್ಲುವಂತಾಗಲು, ಜೀವಕೋಶವು ಸಾಯವ ಅಗತ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ. ಹಲವಾರು ಪ್ರೊಟೀನುಗಳ ಪಾಲ್ಗೊಳ್ಳುವಿಕೆಯು ಕಂಡುಬಂದಿದೆಯಾದರೂ, ನಿಯಂತ್ರಣದ ಎರಡು ಮುಖ್ಯ ವಿಧಾನಗಳನ್ನು ಪತ್ತೆಮಾಡಲಾಗಿದೆ ಮೈಟೋಕಾಂಡ್ರಿಯಾದ ನಿರ್ದಿಷ್ಟ ಕಾರ್ಯೋದ್ದೇಶವನ್ನು ಗುರಿಯಾಗಿರಿಸಿಕೊಂಡಿರುವುದು, ಅಥವಾ ಸಂಕೇತವನ್ನು ಸಂಯೋಜಕ ಪ್ರೊಟೀನುಗಳ ಮೂಲಕ ಅಪೊಪ್ಟೋಟಿಕ್‌ ಕಾರ್ಯವಿಧಾನಗಳಿಗೆ ನೇರವಾಗಿ ಅಡ್ಡಹಾಯ್ಕೆ ಪ್ರಚೋದನೆಯುಂಟುಮಾಡುವುದು. ಪ್ರಕ್ರಿಯೆಯನ್ನು ಶುರುಮಾಡುವುದಕ್ಕಾಗಿರುವ ಮತ್ತೊಂದು ಬಾಹ್ಯ ಪ್ರತಿಕ್ರಿಯಾ ಸರಣಿಯನ್ನು ಹಲವಾರು ಜೀವಾಣು ವಿಷ ಅಧ್ಯಯನಗಳಲ್ಲಿ ಪತ್ತೆಹಚ್ಚಲಾಗಿದೆ. ಔಷಧವಸ್ತುವಿನ ಕಾರ್ಯಚಟುವಟಿಕೆಯಿಂದ ಒಂದು ಜೀವಕೋಶದೊಳಗಡೆಯೇ ಕ್ಯಾಲ್ಷಿಯಂ ಸಾಂದ್ರತೆಯಲ್ಲಿನ ಒಂದು ಹೆಚ್ಚಳವು ಉಂಟಾಗುವುದು ಇಂಥ ಒಂದು ಉದಾಹರಣೆಯಾಗಿದ್ದು, ಕ್ಯಾಲ್ಷಿಯಂ ಬಂಧಕವಾದ ಪ್ರೋಟಿಯೇಸ್‌ ಕ್ಯಾಲ್ಪೈನ್‌ ಓಂದರ ಮೂಲಕ ಅಪೊಪ್ಟೋಸಿಸ್‌ನ್ನು ಉಂಟುಮಾಡಬಲ್ಲುದಾಗಿದೆ.

ಮೈಟೋಕಾಂಡ್ರಿಯಾದ ನಿಯಂತ್ರಣ

ಬದಲಾಯಿಸಿ

ಬಹುಕೋಶೀಯ ಜೀವಕ್ಕೆ ಮೈಟೋಕಾಂಡ್ರಿಯಾಗಳು ಅತ್ಯಗತ್ಯ. ಅವುಗಳಿಲ್ಲದಿದ್ದರೆ, ಆಮ್ಲಜನಕದ ನೆರವಿನೊಂದಿಗೆ ಉಸಿರಾಡುವುದನ್ನು ನಿಲ್ಲಿಸುತ್ತವೆ ಮತ್ತು ತಕ್ಷಣವೇ ಸಾಯುತ್ತವೆ. ಈ ಅಂಶವನ್ನು ಕೆಲವೊಂದು ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳು ಬಳಸಿಕೊಳ್ಳುತ್ತವೆ. ಮೈಟೋಕಾಂಡ್ರಿಯಾವನ್ನು ಗುರಿಯಾಗಿಟ್ಟುಕೊಂಡಿರುವ ಅಪೊಪ್ಟೋಟಿಕ್‌ ಪ್ರೊಟೀನುಗಳು ವಿವಿಧ ರೀತಿಯಲ್ಲಿ ಅವುಗಳ ಮೇಲೆ ಪ್ರಭಾವ ಬೀರುತ್ತವೆ. ಒಳಪೊರೆಯ ರಂಧ್ರಗಳನ್ನು ರೂಪಿಸುವ ಮೂಲಕ ಅವು ಮೈಟೋಕಾಂಡ್ರಿಯಾದ ಊತವನ್ನು ಉಂಟುಮಾಡಬಹುದು, ಅಥವಾ ಮೈಟೋಕಾಂಡ್ರಿಯಾದ ಒಳಪೊರೆಯ ಅಂತಃಪ್ರವೇಶ್ಯತೆಯನ್ನು ಅವು ಹೆಚ್ಚಿಸಬಹುದು ಮತ್ತು ಅಪೊಪ್ಟೋಟಿಕ್‌ ಪ್ರಭಾವಕಾರಕಗಳು ಹೊರಗಡೆ ಸೋರಿಹೋಗುವಿಕೆಗೆ ಕಾರಣವಾಗಬಹುದು.[೧೪] ಮೈಟೋಕಾಂಡ್ರಿಯಾದ ಒಳಪೊರೆಯ ಸಾಮರ್ಥ್ಯವನ್ನು ನಾಶಗೊಳಿಸಲು ಸಹಾಯಮಾಡುವ ಮೂಲಕ ನೈಟ್ರಿಕ್ ಆಕ್ಸೈಡು ಅಪೊಪ್ಟೋಸಿಸ್‌ನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸೂಚಿಸುವ ಹೆಚ್ಚಿನ ಪ್ರಮಾಣದ ಸಾಕ್ಷ್ಯವೂ ಲಭ್ಯವಿದೆ.[೧೬] ಅಂತಃಪ್ರವೇಶ್ಯತೆಯಲ್ಲಿ ಕಂಡುಬರುವ ಹೆಚ್ಚಳದಿಂದಾಗಿ SMACಗಳು (ಸೆಕಂಡ್‌ ಮೈಟೋಕಾಂಡ್ರಿಯಾ-ಡಿರೈವ್ಡ್‌ ಆಕ್ಟಿವೇಟರ್‌ ಆಫ್‌ ಕ್ಯಾಸ್ಪೇಸಸ್‌) ಎಂದು ಕರೆಯಲ್ಪಡುವ ಮೈಟೋಕಾಂಡ್ರಿಯಾದ ಪ್ರೊಟೀನುಗಳು ಸೈಟೋಸಾಲ್‌ನೊಳಗೆ ಬಿಡುಗಡೆಯಾಗುತ್ತವೆ. SMAC ಅಪೊಪ್ಟೋಸಿಸ್‌ ಪ್ರೊಟೀನುಗಳ ಪ್ರತಿಬಂಧಕ ಗಳಿಗೆ (IAPಗಳಿಗೆ) ಅಂಟಿಕೊಳ್ಳುತ್ತದೆ ಮತ್ತು ಅವುಗಳ ಕ್ರಿಯಾಶೀಲತೆಯನ್ನು ನಿಲ್ಲಿಸುತ್ತದೆ. ಇದರಿಂದಾಗಿ ಅಪೊಪ್ಟೋಟಿಕ್‌ ಕಾರ್ಯವಿಧಾನವನ್ನು IAPಗಳು ಅಡ್ಡಿಪಡಿಸದಂತೆ ಅವುಗಳನ್ನು ತಡೆಗಟ್ಟುತ್ತವೆ ಮತ್ತು ತತ್ಫಲವಾಗಿ ಅಪೊಪ್ಟೋಸಿಸ್‌ ಪ್ರಕ್ರಿಯೆಯು ಮುಂದುವರಿಯಲು ಅನುವುಮಾಡಿಕೊಟ್ಟಂತಾಗುತ್ತದೆ. ಕ್ಯಾಸ್ಪೇಸ್‌‌ಗಳೆಂದು[೧೯] ಕರೆಯಲಾಗುವ ಮತ್ತು ಜೀವಕೋಶದ ಅವನತಿಯನ್ನು ಕೈಗೊಳ್ಳುವ ಸಿಸ್ಟೀನ್‌ ಪ್ರೋಟಿಯೇಸ್‌ಗಳ ಒಂದು ಗುಂಪಿನ ಚಟುವಟಿಕೆಯನ್ನು ಕೂಡಾ IAPಯು ಸಾಮಾನ್ಯವಾಗಿ ಕುಗ್ಗಿಸುತ್ತದೆ. ಆದ್ದರಿಂದ ವಾಸ್ತವಿಕ ಅವನತಿಕಾರಕ ಕಿಣ್ವಗಳು ಪರೋಕ್ಷವಾಗಿ ಮೈಟೋಕಾಂಡ್ರಿಯಾದ ಅಂತಃಪ್ರವೇಶ್ಯತೆಯಿಂದ ನಿಯಂತ್ರಿಸಲ್ಪಡುವುದನ್ನು ಕಾಣಬಹುದು. ಹೊರಭಾಗದ ಮೈಟೋಕಾಂಡ್ರಿಯಾದ ಪೊರೆಯಲ್ಲಿ[೨೦] MAC ಎಂದು ಕರೆಯಲಾಗುವ ಒಂದು ಸಂಪರ್ಕವಾಹಕದ ರೂಪುಗೊಳ್ಳುವಿಕೆಯ ಕಾರಣದಿಂದಾಗಿ, ಸೈಟೋಕ್ರೋಮ್‌ c ಕೂಡಾ ಮೈಟೋಕಾಂಡ್ರಿಯಾದಿಂದ ಬಿಡುಗಡೆಯಾಗುತ್ತದೆ ಮತ್ತು ಅಪೊಪ್ಟೋಸಿಸ್‌ನೊಂದಿಗೆ ಸಂಬಂಧಹೊಂದಿರುವ ಸ್ವರೂಪದಲ್ಲಿನ ಬದಲಾವಣೆಗೆ ಮುಂಚಿತವಾಗಿ ಇದು ಬರುವುದರಿಂದ, ಒಂದು ನಿಯಂತ್ರಕ ಕಾರ್ಯವಿಧಾನವಾಗಿ ಇದು ಕೆಲಸ ಮಾಡುತ್ತದೆ.[೧೪] ಸೈಟೋಕ್ರೋಮ್‌ c ಒಮ್ಮೆ ಬಿಡುಗಡೆಯಾಯಿತೆಂದರೆ, ಅದು ಅಪಾಫ್‌-1 ಮತ್ತು ATPಯೊಂದಿಗೆ ಅಂಟಿಕೊಳ್ಳುತ್ತದೆ, ನಂತರ ಅದು ಪ್ರೋ-ಕ್ಯಾಸ್ಪೇಸ್‌-9 ನೊಂದಿಗೆ ಅಂಟಿಕೊಂಡು ಅಪೊಪ್ಟೋಸೋಮ್‌ ಎಂದು ಕರೆಯಲ್ಪಡುವ ಪ್ರೊಟೀನು ಸಂಕೀರ್ಣವೊಂದನ್ನು ಸೃಷ್ಟಿಸುತ್ತದೆ. ಅಪೊಪ್ಟೋಸೋಮ್‌ ಪ್ರೋ-ಕ್ಯಾಸ್ಪೇಸ್‌ನ್ನು ಅದರ ಕ್ಯಾಸ್ಪೇಸ್‌-9ರ ಕ್ರಿಯಾಶೀಲ ಸ್ವರೂಪಕ್ಕೆ ಒಡೆಯುತ್ತದೆ, ಅದು ಪ್ರತಿಯಾಗಿ ಕ್ಯಾಸ್ಪೇಸ್‌-3 ಪ್ರಭಾವಕಾರಕವನ್ನು ಸಕ್ರಿಯಗೊಳಿಸುತ್ತದೆ. MACಯು ಸ್ವತಃ ಹಲವಾರು ಪ್ರೊಟೀನುಗಳಿಂದ ನಿಯಂತ್ರಣಕ್ಕೆ ಒಳಗಾಗುತ್ತದೆ. ಅಪೊಪ್ಟೋಪಿಕ್‌-ಪ್ರತಿರೋಧಕ ಜೀನುಗಳ ಸಸ್ತಿನಿ ಜಾತಿಯ Bcl-2 ಕುಟುಂಬದಿಂದ ಸಂಕೇತಭಾಷೆಗೆ ಪರಿರ್ತಿಸಲ್ಪಟ್ಟ ಪ್ರೊಟೀನುಗಳು, C. ಎಲಿಗನ್ಸ್‌ ನಲ್ಲಿ ಕಂಡುಬಂದ ced-9 ಜೀನಿನ ಸಮಾನರೂಪಿಗಳು ಇದರಲ್ಲಿ ಸೇರಿವೆ.[೨೧][೨೨] Bcl-2 ಪ್ರೊಟೀನುಗಳು, MACನ ಮೇಲಿನ ನೇರ ಕ್ರಿಯೆಯ ಮೂಲಕ ಇಲ್ಲವೇ ಇತರ ಪ್ರೊಟೀನುಗಳ ಮೂಲಕ ಪರೋಕ್ಷವಾಗಿ ಅಪೊಪ್ಟೋಸಿಸ್‌ನ್ನು ಉತ್ತೇಜಿಸಲು ಅಥವಾ ಪ್ರತಿಬಂಧಿಸಲು ಸಮರ್ಥವಾಗಿರುತ್ತವೆ. ಒಂದು ವೇಳೆ, ಮೈಟೋಕಾಂಡ್ರಿಯಾದಿಂದ ಸೈಟೋಕ್ರೋಮ್‌ c ಬಿಡುಗಡೆಯಾಗಿದ್ದರೂ ಸಹ, ಕೆಲವೊಂದು Bcl-2 ಪ್ರೊಟೀನುಗಳ ಕ್ರಿಯೆಗಳು ಅಪೊಪ್ಟೋಸಿಸ್‌ನ್ನು ತಡೆದು ನಿಲ್ಲಿಸುವಷ್ಟು ಸಮರ್ಥವಾಗಿರುತ್ತವೆ.[೧೪]

ನೇರ ಸಂಕೇತದ ಅಡ್ಡಹಾಯ್ಕೆ ಪ್ರಚೋದನೆ

ಬದಲಾಯಿಸಿ
 
ಸಂಕೇತ ಅಡ್ಡಸಾಗಿಸುವಿಕೆಯ ಪ್ರತಿಕ್ರಿಯಾ ಸರಣಿಗಳ ಸ್ಥೂಲನೋಟ.
 
ಅಪೊಪ್ಟೋಸಿಸ್‌ನಲ್ಲಿನ TNF ಸಂಕೇತಿಸುವಿಕೆಯ ಒಂದು ಸ್ಥೂಲನೋಟ; ನೇರ ಸಂಕೇತ ಅಡ್ಡಸಾಗಿಸುವಿಕೆಯ ಒಂದು ಉದಾಹರಣೆ.
 
ಅಪೊಪ್ಟೋಸಿಸ್‌ನಲ್ಲಿನ ಫಾಸ್‌ ಸಂಕೇತಿಸುವಿಕೆಯ ಒಂದು ಸ್ಥೂಲನೋಟ; ನೇರ ಸಂಕೇತ ಅಡ್ಡಸಾಗಿಸುವಿಕೆಯ ಒಂದು ಉದಾಹರಣೆ

ಸಸ್ತನಿಗಳಲ್ಲಿನ ಅಪೊಪ್ಟೋಟಿಕ್‌ ಕಾರ್ಯವಿಧಾನಗಳ ನೇರ ಹುಟ್ಟುಹಾಕುವಿಕೆಯ ಎರಡು ಸಿದ್ಧಾಂತಗಳು ಪ್ರಸ್ತಾವಿಸಲ್ಪಟ್ಟಿವೆ: TNF-ಪ್ರಚೋದಿತ (ಗಡ್ಡೆಯ ಊತಕದ ಸಾವಿನ ಅಂಶ) ಮಾದರಿ ಮತ್ತು Fas-Fas ಲಿಗಂಡ್‌-ಮಧ್ಯಸ್ತಿಕೆಯ ಮಾದರಿ. ಬಾಹ್ಯ ಸಂಕೇತಗಳಿಗೆ ಸಂಬಂಧಿಸಿದ TNF ಗ್ರಾಹಿ (TNFR) ಕುಟುಂಬದ[೨೩] ಗ್ರಾಹಿಗಳನ್ನು ಎರಡೂ ಮಾದರಿಗಳು ಒಳಗೊಂಡಿರುತ್ತವೆ. TNF ಎಂಬುದು ಒಂದು ಸೈಟೋಕೈನ್‌ ಆಗಿದ್ದು, ಸಕ್ರಿಯಗೊಳಿಸಿದ ಬೃಹತ್ಕಣಗಳಿಂದ ಮುಖ್ಯವಾಗಿ ಉತ್ಪತ್ತಿಯಾಗಿದೆ, ಮತ್ತು ಇದು ಜೋಡಿ ಹಿಪಲೋಪ್ಟಿಕ್‌ ಅಪೊಪ್ಟೋಸಿಸ್‌ನ ಪ್ರಮುಖ ಬಾಹ್ಯ ಮಧ್ಯವರ್ತಿಯಾಗಿದೆ. ಮಾನವ ಶರೀರದಲ್ಲಿನ ಬಹುತೇಕ ಜೀವಕೋಶಗಳು TNFಗಾಗಿ ಎರಡು ಗ್ರಾಹಿಗಳನ್ನು ಹೊಂದಿವೆ: ಅವೆಂದರೆ, TNF-R1 ಮತ್ತು TNF-R2 . TNF-R1 ನೊಂದಿಗಿನ TNFನ ಬಂಧಕತೆಯು ಪ್ರತಿಕ್ರಿಯಾ ಸರಣಿಯನ್ನು ಹುಟ್ಟುಹಾಕುತ್ತದೆ ಎಂದು ಕಂಡುಬಂದಿದೆ. ಮಧ್ಯವರ್ತಿ ಸ್ವರೂಪದ ಒಳಪೊರೆ ಪ್ರೊಟೀನುಗಳಾದ TNF ರಿಸೆಪ್ಟಾರ‍್-ಅಸೋಸಿಯೇಟೆಡ್‌ ಡೆತ್‌ ಡೊಮೈನ್‌ (TRADD) ಮತ್ತು Fas-ಅಸೋಸಿಯೇಟೆಡ್‌ ಡೆತ್ ಡೊಮೈನ್‌ ಪ್ರೊಟೀನಿನ (FADD) ಮೂಲಕ ಸದರಿ ಪ್ರತಿಕ್ರಿಯಾ ಸರಣಿಯು ಕ್ಯಾಸ್ಪೇಸ್‌ ಚುರುಕುಗೊಳಿಸುವಿಕೆಗೆ ಕಾರಣವಾಗುತ್ತದೆ.[೨೪] ಈ ಗ್ರಾಹಿಯ ಬಂಧಕತೆಯು ಜೀವಕೋಶದ ಉಳಿಯುವಿಕೆ ಮತ್ತು ಉರಿಯೂತಕಾರಕ ಪ್ರತಿಸ್ಪಂದನೆಗಳಲ್ಲಿ ಭಾಗಿಯಾಗಿರುವ ನಕಲು ಅಂಶಗಳ ಚುರುಕುಗೊಳಿಸುವಿಕೆಗೂ ಇದು ಪರೋಕ್ಷವಾಗಿ ಕಾರಣವಾಗುತ್ತದೆ.[೨೫] ಮನುಷ್ಯರಲ್ಲಿ ಕಂಡುಬರುವ ಹಲವಾರು ಕಾಯಿಲೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಸ್ವರಕ್ಷಿತ ಕಾಯಿಲೆಗಳಲ್ಲಿ TNFನ ಒಂದು ಅಪಸಾಮಾನ್ಯ ಉತ್ಪಾದನೆಯು ಒಂದು ಮೂಲಭೂತ ಪಾತ್ರವನ್ನು ಏಕೆ ವಹಿಸುತ್ತದೆ ಎಂಬುದನ್ನು TNF ಮತ್ತು ಅಪೊಪ್ಟೋಸಿಸ್‌ ನಡುವಿನ ಕೊಂಡಿಯು ತೋರಿಸುತ್ತದೆ. Fas ಗ್ರಾಹಿಯು (ಗ್ರೀಕ್‌-1 ಅಥವಾ CD95 ಎಂದೂ ಸಹ ಇದು ಹೆಸರಾಗಿದೆ), TNF ಕುಟುಂಬದ ಒಂದು ಅಂತರಪೊರೆಯ ಪ್ರೊಟೀನು ಭಾಗವಾದ Fas ಲಿಗಂಡ್‌‌‌ನ್ನು (FasL) ಬಂಧಿಸುತ್ತದೆ.[೨೩] Fas ಮತ್ತು FasL ನಡುವಿನ ಪ್ರಭಾವವು ಸಾವನ್ನು-ಪ್ರಚೋದಿಸುವ ಸನ್ನೆಮಾಡುವಿಕೆಯ ಸಂಕೀರ್ಣ ದ (ಡೆತ್‌ ಇಂಡ್ಯೂಸಿಂಗ್‌ ಸಿಗ್ನಲಿಂಗ್ ಕಾಂಪ್ಲೆಕ್ಸ್‌-DISC) ರೂಪುಗೊಳ್ಳುವಿಕೆಗೆ ಕಾರಣವಾಗುತ್ತದೆ. ಇದು FADD, ಕ್ಯಾಸ್ಪೇಸ್‌-8 ಮತ್ತು ಕ್ಯಾಸ್ಪೇಸ್‌-10ನ್ನು ಒಳಗೊಂಡಿರುತ್ತದೆ. ಜೀವಕೋಶಗಳ ಕೆಲವೊಂದು ವಿಧಗಳಲ್ಲಿ (Iನೇ ವಿಧ), ಕ್ಯಾಸ್ಪೇಸ್‌ ಕುಟುಂಬದ ಇತರ ಸದಸ್ಯರನ್ನು ಸಂಸ್ಕರಿತ ಕ್ಯಾಸ್ಪೇಸ್‌-8 ಅಂಶವು ನೇರವಾಗಿ ಸಕ್ರಿಯಗೊಳಿಸುತ್ತದೆ, ಮತ್ತು ಜೀವಕೋಶದ ಅಪೊಪ್ಟೋಸಿಸ್‌ನ ಅನುಷ್ಠಾನವನ್ನು ಪ್ರಚೋದಿಸುತ್ತದೆ. ಜೀವಕೋಶಗಳ ಇತರ ಬಗೆಗಳಲ್ಲಿ (IIನೇ ಬಗೆ), ಒಂದು ಪ್ರತಿಕ್ರಿಯೆಯ ಕುಣಿಕೆಯನ್ನು Fas -DISC ಪ್ರಾರಂಭಿಸುತ್ತದೆ. ಈ ಕುಣಿಕೆಯು ಮೈಟೋಕಾಂಡ್ರಿಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುವ ಅಪೊಪ್ಟೋಟಿಕ್‌-ಪರವಾದ ಅಂಶಗಳಿಗೆ ಮತ್ತು ಕ್ಯಾಸ್ಪೇಸ್‌-8ರ ವರ್ಧಿತ ಚುರುಕುಗೊಳಿಸುವಿಕೆಗೆ ಸುತ್ತಿಕೊಳ್ಳುತ್ತದೆ.[೨೬] ಸಸ್ತನಿ ಜಾತಿಯ ಜೀವಕೋಶಗಳಲ್ಲಿನ TNF-R1 ಮತ್ತು Fas ಚುರುಕುಗೊಳಿಸುವಿಕೆಯನ್ನು ಅನುಸರಿಸಿ, Bcl-2 ಕುಟುಂಬದ ಅಪೊಪ್ಟೋಟಿಕ್‌-ಪರವಾದ (BAX,[೨೭] BID, BAK, ಅಥವಾ ಅಪೊಪ್ಟೋಟಿಕ್‌-ವಿರೋಧಿ (Bcl-Xl ಮತ್ತು Bcl-2 ) ಸದಸ್ಯರ ನಡುವಿನ ಒಂದು ಸಮತೋಲನವು ಸ್ಥಾಪನೆಗೊಳ್ಳುತ್ತದೆ. ಈ ಸಮತೋಲನವು ಅಪೊಪ್ಟೋಟಿಕ್‌-ಪರವಾದ ಹೋಮೋಡೈಮರ್‌ಗಳ ಪ್ರಮಾಣ ಅಥವಾ ಅನುಪಾತವಾಗಿದ್ದು, ಮೈಟೋಕಾಂಡ್ರಿಯಾದ ಹೊರ-ಪೊರೆಯಲ್ಲಿ ಅದು ರೂಪುಗೊಳ್ಳುತ್ತದೆ. ಸೈಟೋಕ್ರೋಮ್‌ c ಮತ್ತು SMACನಂಥ ಕ್ಯಾಸ್ಪೇಸ್‌ ಸಕ್ರಿಯಕಾರಿಗಳ ಬಿಡುಗಡೆಗಾಗಿ ಮೈಟೋಕಾಂಡ್ರಿಯಾದ ಪೊರೆಯನ್ನು ಪ್ರವೇಶಸಾಧ್ಯವನ್ನಾಗಿಸುವುದು ಅಪೊಪ್ಟೋಟಿಕ್‌-ಪರವಾದ ಹೋಮೋಡೈಮರ್‌ಗಳಿಗೆ ಅಗತ್ಯವಾಗಿರುತ್ತದೆ. ಅಪೊಪ್ಟೋಟಿಕ್‌ ಸ್ವರೂಪದ್ದಲ್ಲದ್ದ ಜೀವಕೋಶಗಳ ಸಾಮಾನ್ಯ ಜೀವಕೋಶಗಳ ಸ್ಥಿತಿಗಳ ಅಡಿಯಲ್ಲಿನ ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳ ನಿಯಂತ್ರಣವು ಅಪೂರ್ಣವಾಗಿ ಅರ್ಥೈಸಲ್ಪಟ್ಟಿದೆ. ಆದರೆ, VDAC2 ಎಂದು ಹೇಳಲಾಗುವ ಮೈಟೋಕಾಂಡ್ರಿಯಾದ ಹೊರ-ಪೊರೆಯ ಒಂದು ಪ್ರೊಟೀನು BAKಯೊಂದಿಗೆ ಪರಸ್ಪರ ಕ್ರಿಯೆ ನಡೆಸಿ, ಮಾರಕವಾಗಬಲ್ಲ-ಸಾಮರ್ಥ್ಯ ಹೊಂದಿರುವ ಈ ಅಪೊಪ್ಟೋಟಿಕ್‌ ಕಾರ್ಯನಿರ್ವಾಹಕವನ್ನು ನಿಯಂತ್ರಣದಲ್ಲಿರಿಸುತ್ತದೆ ಎಂದು ಕಂಡುಬಂದಿದೆ.[೨೮] ಸಾವಿನ ಸಂಕೇತವು ಸ್ವೀಕರಿಸಲ್ಪಟ್ಟಾಗ, ಚುರುಕುಗೊಳಿಸುವಿಕೆಯ ಸರಣಿಕ್ರಮದ ಉತ್ಪನ್ನಗಳು VDAC2ಯನ್ನು ಸ್ಥಾನಪಲ್ಲಟಗೊಳಿಸುತ್ತದೆ ಮತ್ತು BAKಯು ಸಕ್ರಿಯಗೊಳ್ಳುವಷ್ಟು ಸಮರ್ಥವಾಗುತ್ತದೆ. ಕ್ಯಾಸ್ಪೇಸ್‌-ಅಧೀನವಲ್ಲದ ಒಂದು ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಯೂ ಅಸ್ತಿತ್ವದಲ್ಲಿದ್ದು, ಅದಕ್ಕೆ AIFನ (ಅಪೊಪ್ಟೋಸಿಸ್‌-ಪ್ರಚೋದಕ ಅಂಶದ) ಮಧ್ಯಸ್ಥಿಕೆಯಿರುತ್ತದೆ.[೨೯]

ನಿರ್ವಹಣೆ

ಬದಲಾಯಿಸಿ

ಅನೇಕ ಪ್ರತಿಕ್ರಿಯಾ ಸರಣಿಗಳು ಮತ್ತು ಸಂಕೇತಗಳು ಅಪೊಪ್ಟೋಸಿಸ್‌ಗೆ ಕಾರಣವಾಗುತ್ತವೆಯಾದರೂ‌, ವಾಸ್ತವವಾಗಿ ಜೀವಕೋಶವೊಂದರ ಸಾವಿಗೆ ಕಾರಣವಾಗುವುದು ಕೇವಲ ಒಂದೇ ಒಂದು ಕಾರ್ಯವಿಧಾನ.[ಸೂಕ್ತ ಉಲ್ಲೇಖನ ಬೇಕು] ಜೀವಕೋಶವೊಂದು ಪ್ರಚೋದನೆಯನ್ನು ಸ್ವೀಕರಿಸಿದ ನಂತರ, ಸಕ್ರಿಯಗೊಳಿಸಿದ ಪ್ರೊಟೀನ್‌ ವಿಭಜಕ ಕ್ಯಾಸ್ಪೇಸ್‌‌ಗಳಿಂದ ಅದರ ಜೀವಕೋಶೀಯ ಅಂಗಕಗಳ ಕ್ರಮಬದ್ಧ ಅವನತಿಯು ಶುರುವಾಗುತ್ತದೆ. ಅಪೊಪ್ಟೋಸಿದ್‌ಗೆ ಈಡಾಗುತ್ತಿರುವ ಜೀವಕೋಶವೊಂದು ಈ ಮುಂದೆ ವಿವರಿಸಿರುವ ವಿಶಿಷ್ಟ ಸ್ವರೂಪವನ್ನು ತೋರಿಸುತ್ತದೆ:

  1. ಕ್ಯಾಸ್ಪೇಸ್‌ಗಳಿಂದ ಪ್ರೊಟೀನಿನ ಗುಣದ ಸೈಟೋಸ್ಕೆಲಿಟನ್‌ನ ವಿಘಟನೆಯಾಗುವುದರಿಂದ ಜೀವಕೋಶ ಕುಗ್ಗುವಿಕೆ ಮತ್ತು ದುಂಡಗಾಗುವಿಕೆ ಕಂಡುಬರುತ್ತದೆ.
  2. ಕೋಶದ್ರವ್ಯವು ದಟ್ಟವಾಗಿ ಕಾಣಿಸಿಕೊಳ್ಳುತ್ತದೆ, ಮತ್ತು ಅಂಗಕಗಳು ಬಿಗಿಯಾಗಿ ಕಟ್ಟಲ್ಪಟ್ಟಿರುವಂತೆ ಕಾಣಿಸಿಕೊಳ್ಳುತ್ತವೆ.
  3. ಪೈಕ್ನೋಸಿಸ್‌ ಎಂದು ಕರೆಯಲಾಗುವ, ಅಪೊಪ್ಟೋಸಿಸ್‌ನ ಒಂದು ಹೆಗ್ಗುರುತು ಪ್ರಕ್ರಿಯೆಯಲ್ಲಿ ಪರಮಾಣು ಹೊದಿಕೆಗೆ ಪ್ರತಿಯಾಗಿ ವರ್ಣಗ್ರಾಹಿಯು ದಟ್ಟವಾದ ಪಟ್ಟೆಯಂತೆ ಸಾಂದ್ರೀಕರಣಗೊಳ್ಳುತ್ತದೆ.[೩೦][೩೧]
  4. ಪರಮಾಣು ಹೊದಿಕೆಯ ಅವಿಚ್ಛಿನ್ನತೆ ಇಲ್ಲವಾಗುತ್ತದೆ ಮತ್ತು ಅದರೊಳಗಿನ DNAಯು ಕ್ಯಾರಿಯೋರೆಕ್ಸಿಸ್‌ ಎಂದು ಉಲ್ಲೇಖಿಸಲ್ಪಡುವ ಒಂದು ಪ್ರಕ್ರಿಯೆಯಲ್ಲಿ ಚೂರುಗಳಾಗಿ ಒಡೆಯುತ್ತದೆ. DNAಯ ಅವನತಿಯ ಕಾರಣದಿಂದಾಗಿ, ಕೋಶಕೇಂದ್ರವು ಬಿಡಿಬಿಡಿಯಾದ ಹಲವಾರು ವರ್ಣಗ್ರಾಹಿ ಘಟಕಗಳಾಗಿ ಅಥವಾ ನ್ಯೂಕ್ಲಿಯೋಸೋಮಿನ ಘಟಕಗಳಾಗಿ ಒಡೆಯುತ್ತದೆ.[೩೨]
  5. ಬೊಬ್ಬೆಗಳು ಎಂದು ಕರೆಯಲಾಗುವ ಅಸಹಜ ಉಬ್ಬಿಕೆ ಅಥವಾ ಮೊಳಕೆಗಳನ್ನು ಕೋಶಪೊರೆಯು ತೋರಿಸುತ್ತದೆ.
  6. ಅಪೊಪ್ಟೋಟಿಕ್‌ ಘಟಕಗಳು ಎಂದು ಕರೆಯಲಾಗುವ ಹಲವಾರು ಚಿಕ್ಕ ಕುಹರಗಳಾಗಿ ಜೀವಕೋಶವು ಒಡೆಯುತ್ತದೆ, ಇವೇ ನಂತರದಲ್ಲಿ ಭಕ್ಷಿಸಿ ನಾಶಪಡಿಸುವಿಕೆಗೆ ಈಡಾಗುತ್ತವೆ.

ಅಪೊಪ್ಟೋಸಿಸ್‌ ಪ್ರಕ್ರಿಯೆಯು ಕ್ಷಿಪ್ರವಾಗಿ ಮುಂದುವರೆಯುತ್ತದೆ ಮತ್ತು ಅದರ ಉತ್ಪನ್ನಗಳು ಶೀಘ್ರವಾಗಿ ತೆಗೆದುಹಾಕಲ್ಪಡುವುದರಿಂದ ಅದನ್ನು ಪತ್ತೆಹಚ್ಚುವುದು ಅಥವಾ ದೃಶ್ಯೀಕರಿಸುವುದು ಕಷ್ಟವಾಗಿ ಪರಿಣಮಿಸುತ್ತದೆ. ಕ್ಯಾರಿಯೋರೆಕ್ಸಿಸ್‌ನ ಅವಧಿಯಲ್ಲಿ, ಎಂಡೋನ್ಯೂಕ್ಲಿಯೇಸ್‌ ಚುರುಕುಗೊಳಿಸುವಿಕೆಯು ಪುಟ್ಟದಾದ, ಗಾತ್ರದಲ್ಲಿ ಅಂತರವಿರುವ ಕ್ರಮಬದ್ಧ DNA ತುಣುಕುಗಳನ್ನು ಉಳಿಸಿಹೋಗುತ್ತದೆ. ಈ ಪ್ರಕ್ರಿಯೆಯು ವಿದ್ಯುತ್ಸರಣದ ನಂತರ ಅಗರ್‌ ಲೋಳೆದ್ರವ್ಯದ ಮೇಲೆ "ಏಣಿತೆರಪಿನಂಥ" ಒಂದು ವಿಶಿಷ್ಟ ನೋಟಕ್ಕೆ ಕಾರಣವಾಗುತ್ತದೆ. DNA ಏಣಿತೆರಪಿಗೆ ಮೀಸಲಾದ ಪರೀಕ್ಷೆಗಳು ಅಪೊಪ್ಟೋಸಿಸ್‌ನ್ನು ರಕ್ತಕೊರತೆಯ ಅಥವಾ ವಿಷಕಾರಿ ಜೀವಕೋಶ ಸಾವಿನಿಂದ ಪ್ರತ್ಯೇಕಿಸುತ್ತವೆ.[೩೩]

ಸತ್ತ ಜೀವಕೋಶಗಳನ್ನು ತೆಗೆದುಹಾಕುವುದು

ಬದಲಾಯಿಸಿ

ಸತ್ತ ಜೀವಕೋಶಗಳನ್ನು ಅಕ್ಕಪಕ್ಕದಲ್ಲಿರುವ ಭಕ್ಷಿಸಿ ನಾಶಪಡಿಸುವ ಜೀವಕೋಶಗಳಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಎಫೆರೋಸೈಟೋಸಿಸ್‌ ಎಂದು ಕರೆಯಲಾಗಿದೆ.[೩೪] ಅಪೊಪ್ಟೋಸಿಸ್‌ನ ಅಂತಿಮ ಹಂತಕ್ಕೆ ಈಡಾಗುವ ಸಾಯುತ್ತಿರುವ ಜೀವಕೋಶಗಳು, ಭಕ್ಷಿಸಿ ನಾಶಪಡಿಸುವ ಲಕ್ಷಣ ಹೊಂದಿರುವ ಫಾಸ್ಫಾಟಿಡೈಲ್‌ಸೆರೀನ್‌‌ನಂಥ ಕಣಗಳನ್ನು ತಮ್ಮ ಜೀವಕೋಶದ ಮೇಲ್ಮೈ ಮೇಲೆ ಪ್ರದರ್ಶಿಸುತ್ತವೆ.[೩೫] ಫಾಸ್ಫಾಟಿಡೈಲ್‌ಸೆರೀನ್‌ ಕಣವು ಸಾಮಾನ್ಯವಾಗಿ ಪ್ಲಾಸ್ಮ ಒಳಪೊರೆಯ ಸೈಟೋಸಾಲಿಕ್‌ ಮೇಲ್ಮೈ ಮೇಲೆ ಕಂಡುಬರುತ್ತದೆ. ಆದರೆ, ಅಪೊಪ್ಟೋಸಿಸ್‌ನ ಅವಧಿಯಲ್ಲಿ ಸ್ಕ್ರಾಂಬ್ಲೇಸ್‌ ಎಂದು ಕರೆಯಲಾಗುವ ಒಂದು ಕಾಲ್ಪನಿಕ ಪ್ರೊಟೀನಿನಿಂದ ಇದು ಬಾಹ್ಯಕೋಶೀಯ ಮೇಲ್ಮೈಗೆ ಪುನರ್ವಿತರಣೆ ಮಾಡಲ್ಪಡುತ್ತದೆ.[೩೬] ಬೃಹತ್ಕಣಗಳಂಥ ಸೂಕ್ತ ಗ್ರಾಹಿಗಳನ್ನು ಒಳಗೊಂಡಿರುವ ಜೀವಕೋಶಗಳಿಂದ ಭಕ್ಷಕೋಶೀಯ ಭಕ್ಷಣಕ್ಕೆ ಒಳಗಾಗಲು ಈ ಕಣಗಳು ಜೀವಕೋಶವನ್ನು ಗುರುತುಮಾಡುತ್ತವೆ.[೩೭] ಗುರುತು ಮಾಡಲ್ಪಟ್ಟ ನಂತರ, ಜೀವಕೋಶದ ನುಂಗುವಿಕೆಗಾಗಿ ತನ್ನ ಸೈಟೋಸ್ಕೆಲಿಟನ್‌ನ್ನು ಭಕ್ಷಕ ಕೋಶವು ಮರುಸಂಘಟನೆಗೊಳಿಸುತ್ತದೆ. ಭಕ್ಷಕ ಕೋಶಗಳಿಂದಾಗುವ ಸಾಯುತ್ತಿರುವ ಜೀವಕೋಶಗಳ ತೆಗೆದುಹಾಕುವಿಕೆಯು ಉರಿಯೂತಕಾರಕ ಪ್ರತಿಸ್ಪಂದನೆಯೊಂದನ್ನು ಹೊರಸೆಳೆಯದೆಯೇ ಒಂದು ಕ್ರಮಬದ್ಧ ವಿಧಾನದಲ್ಲಿ ನಡೆಯುತ್ತದೆ.

ಕಾಯಿಲೆಯಲ್ಲಿನ ಸೂಚ್ಯಾರ್ಥ

ಬದಲಾಯಿಸಿ
 
ಹಲವಾರು ಅಪೊಪ್ಟೋಟಿಕ್‌ ಜೀವಕೋಶಗಳನ್ನು ತೋರಿಸುತ್ತಿರುವ, ಬಾಣಗಳ ಗುರುತಿನಿಂದ ಸೂಚಿಸಲ್ಪಟ್ಟಿರುವ ಇಲಿಯ ಪಿತ್ತಜನಕಾಂಗದ ಒಂದು ಛೇದನ.
 
ಅಪೊಪ್ಟೋಸಿಸ್‌ಗೆ ಒಳಗಾಗುತ್ತಿರುವ ಜೀವಕೋಶಗಳನ್ನು ತೋರಿಸಲು ಇಲಿಯ ಪಿತ್ತಜನಕಾಂಗದ ಒಂದು ಛೇದನಕ್ಕೆ (ಕಿತ್ತಳೆ) ಬಣ್ಣ ಹಾಕಿರುವುದು

ದೋಷಯುಕ್ತ ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳು

ಬದಲಾಯಿಸಿ

ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳ ಅನೇಕ ವೈವಿಧ್ಯಮಯ ಬಗೆಗಳು ವಿಭಿನ್ನ ಜೀವರಾಸಾಯನಿಕ ಘಟಕಗಳ ಒಂದು ಬಾಹುಳ್ಯವನ್ನು ಹೊಂದಿರುತ್ತದೆ. ಅವುಗಳ ಪೈಕಿ ಅನೇಕವು ಇನ್ನೂ ಅರ್ಥದ ವ್ಯಾಪ್ತಿಗೆ ಸಿಕ್ಕಿಲ್ಲ.[] ಪ್ರತಿಕ್ರಿಯಾ ಸರಣಿಯೊಂದು ಹೆಚ್ಚೂ ಕಮ್ಮಿ ಶ್ರೇಣಿಯನ್ನು ರಚಿಸುವ ಸ್ವಭಾವವನ್ನು ಹೊಂದಿರುವುದರಿಂದ, ಅದು ಕಾರ್ಯಕಾರಣ ಸಂಬಂಧದ ಒಂದು ಬಲಿಪಶುವಾಗಿರುತ್ತದೆ; ಒಂದು ಘಟಕವನ್ನು ತೆಗೆದುಹಾಕುವುದು ಇಲ್ಲವೇ ಮಾರ್ಪಡಿಸುವುದು ಮತ್ತೊಂದರ ಮೇಲಿನ ಪರಿಣಾಮಕ್ಕೆ ಕಾರಣವಾಗುತ್ತದೆ. ಜೀವಂತ ಜೀವಿಯೊಂದರಲ್ಲಿ ಇದು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಅನೇಕ ವೇಳೆ ಇದು ಕಾಯಿಲೆ ಅಥವಾ ಒಂದು ಅಸ್ತವ್ಯಸ್ತತೆಯ ರೂಪದಲ್ಲಿ ಸಂಭವಿಸುತ್ತದೆ. ನಾನಾಬಗೆಯ ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳ ಮಾರ್ಪಾಡು ಮಾಡುವುದರಿಂದ ಉಂಟಾಗುವ ಪ್ರತಿ ಕಾಯಿಲೆಯ ಒಂದು ಚರ್ಚೆಯು ಕಾರ್ಯಸಾಧ್ಯವಲ್ಲದ್ದಾಗಿ ಪರಿಣಮಿಸುತ್ತದೆಯಾದರೂ, ಪ್ರತಿಯೊಂದರ ಮೇಲೆ ಆವರಿಸಿರುವ ಪರಿಕಲ್ಪನೆಯು ಒಂದೇ ಆಗಿರುತ್ತದೆ: ಪ್ರತಿಕ್ರಿಯಾ ಸರಣಿಯ ಎಂದಿನ ಶೈಲಿಯ ಕಾರ್ಯಶೈಲಿಯು, ಸಾಮಾನ್ಯ ಅಪೊಪ್ಟೋಸಿಸ್‌ಗೆ ಈಡಾಗುವ ಜೀವಕೋಶದ ಸಾಮರ್ಥ್ಯವನ್ನು ಕುಗ್ಗಿಸುವ ರೀತಿಯಲ್ಲಿ ಅಡ್ಡಿಪಡಿಸಲ್ಪಟ್ಟಿರುತ್ತದೆ. ಇದರಿಂದಾಗಿ "ನಿಶ್ಚಿತ ಅವಧಿಯೊಳಗೆ" ಬಳಸಬೇಕೆನ್ನುವ ತನ್ನ ಸ್ಥಿತಿಯ ಹಿಂದಕ್ಕೆ ಜೀವಕೋಶವು ತಲುಪುವಂತಾಗುತ್ತದೆ ಮತ್ತು ನಕಲಿಸಲು ಹಾಗೂ ಯಾವುದೇ ದೋಷಯುಕ್ತ ಘಟಕವನ್ನು ತನ್ನ ಸಂತತಿಗೆ ವರ್ಗಾಯಿಸುವಷ್ಟು ಸಮರ್ಥವಾಗುತ್ತದೆ. ತನ್ಮೂಲಕ ಜೀವಕೋಶವು ಕ್ಯಾನ್ಸರ್‌ಯುಕ್ತ ಅಥವಾ ರೋಗಗ್ರಸ್ತವಾಗುವ ಸಾಧ್ಯತೆಯು ಹೆಚ್ಚಾಗುತ್ತದೆ. ಚಾಲ್ತಿಯಲ್ಲಿರುವ ಈ ಪರಿಕಲ್ಪನೆಯ ತೀರಾ ಇತ್ತೀಚೆಗೆ ವಿವರಿಸಲ್ಪಟ್ಟ ಒಂದು ಉದಾಹರಣೆಯನ್ನು NCI-H460 ಎಂಬ ಶ್ವಾಸಕೋಶದ ಕ್ಯಾನ್ಸರ್‌ ಒಂದರ ಬೆಳವಣಿಗೆಯಲ್ಲಿ ಕಾಣಬಹುದು.[೩೮] ಅಪೊಪ್ಟೋಸಿಸ್‌ ಪ್ರೊಟೀನಿನ X-ಸಂಪರ್ಕಿತ ಪ್ರತಿಬಂಧಕ ವು (X-ಲಿಂಕ್ಡ್‌ ಇನ್ಹಿಬಿಟರ‍್ ಆಫ್ ಅಪೊಪ್ಟೋಸಿಸ್‌ ಪ್ರೊಟೀನ್‌-XIAP‌), H460 ಜೀವಕೋಶ ಸರಣಿಯ ಜೀವಕೋಶಗಳಲ್ಲಿ ಅತಿಯಾಗಿ ವ್ಯಕ್ತವಾಗಿರುತ್ತದೆ. XIAPಗಳು ಕ್ಯಾಸ್ಪೇಸ್‌-9ನ ಸಂಸ್ಕರಿತ ಸ್ವರೂಪಕ್ಕೆ ಬಂಧಿಸಲ್ಪಡುತ್ತವೆ, ಮತ್ತು ಅಪೊಪ್ಟೋಟಿಕ್‌ ಸಕ್ರಿಯಕಾರಿ ಸೈಟೋಕ್ರೋಮ್‌ cಯ ಕ್ರಿಯಾಶೀಲತೆಯನ್ನು ತಗ್ಗಿಸುತ್ತವೆ. ಆದ್ದರಿಂದ ಇದು ಅತಿಯಾದ ಅಭಿವ್ಯಕ್ತಿಯು ಅಪೊಪ್ಟೋಟಿಕ್‌-ಪರವಾದ ಸಂಘರ್ಷಕದ ಪ್ರಮಾಣದಲ್ಲಿನ ಒಂದು ಇಳಿಕೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ಅಪೊಪ್ಟೋಟಿಕ್‌-ವಿರೋಧಿ ಮತ್ತು ಅಪೊಪ್ಟೋಟಿಕ್‌-ಪರವಾದ ಕಾರ್ಯನಿರ್ವಾಹಕಗಳ ಸಮತೋಲನವು ಅಪೊಪ್ಟೋಟಿಕ್‌-ವಿರೋಧಿಯ ಪರವಾಗಿ ಪಲ್ಲಟಗೊಳ್ಳುತ್ತದೆ, ಮತ್ತು ಹಾನಿಗೊಳಗಾದ ಜೀವಕೋಶಗಳು ಸಾವಿನೆಡೆಗೆ ನಿರ್ದೇಶಿಸಲ್ಪಟ್ಟಿದ್ದರೂ ಸಹ ನಕಲುಗೊಳ್ಳುವುದನ್ನು ಮುಂದುವರಿಸುತ್ತವೆ. p53ಯ ಅಪಸಾಮಾನ್ಯ ನಿಯಂತ್ರಣ ಜೀವರಾಸಾಯನಿಕ ಅಂಶಗಳ ಒಂದು ಸರಣಿಯ ಕಾರಣದಿಂದಾಗಿ DNAಯು ಹಾನಿಗೊಳಗಾದಾಗ ಗಡ್ಡೆ-ದಮನಕಾರ ಪ್ರೊಟೀನಾಗಿರುವ p53 ಸಂಗ್ರಹಗೊಳ್ಳುತ್ತದೆ. ಈ ಪ್ರತಿಕ್ರಿಯಾ ಸರಣಿಯ ಒಂದು ಭಾಗವು ಆಲ್ಫಾ-ಇಂಟರ್‌ಫೆರಾನ್‌ ಮತ್ತು ಬೀಟಾ-ಇಂಟರ್‌ಫೆರಾನ್‌ನ್ನು ಒಳಗೊಳ್ಳುತ್ತದೆ. ಇವು p53 ಜೀನಿನ ಪ್ರತಿಲಿಪಿಯನ್ನು ಚೋದಿಸುತ್ತವೆ ಮತ್ತು p53 ಪ್ರೊಟೀನು ಮಟ್ಟದ ಹೆಚ್ಚಳ ಹಾಗೂ ಕ್ಯಾನ್ಸರ್‌ ಜೀವಕೋಶದ-ಅಪೊಪ್ಟೋಸಿಸ್‌ಗೆ ಕಾರಣವಾಗುತ್ತವೆ.[೩೯] G1ನಲ್ಲಿ, ಅಥವಾ ಇಂಟರ್‌ಫೇಸ್‌ನಲ್ಲಿ ಜೀವಕೋಶದ ಚಕ್ರವನ್ನು ನಿಲ್ಲಿಸುವ ಮೂಲಕ, ಜೀವಕೋಶವು ನಕಲಿಸಲ್ಪಡದಂತೆ p53ಯು ತಡೆಗಟ್ಟುತ್ತದೆ. ಇದು ದುರಸ್ತಿಗೊಳಗಾಗಲು ಜೀವಕೋಶಕ್ಕೆ ನೀಡಲಾಗುವ ಸಮಯವಾಗಿರುತ್ತದೆ. ಆದಾಗ್ಯೂ, ಹಾನಿಯು ವ್ಯಾಪಕವಾಗಿದ್ದರೆ ಮತ್ತು ದುರಸ್ತಿಯ ಪ್ರಯತ್ನಗಳು ವಿಫಲಗೊಂಡರೆ, ಇದು ಅಪೊಪ್ಟೋಸಿಸ್‌ನ್ನು ಚೋದಿಸುತ್ತದೆ. p53 ಅಥವಾ ಇಂಟರ್‌ಫೆರಾನ್‌ ಜೀನುಗಳ ನಿಯಂತ್ರಣಕ್ಕೆ ಮಾಡಲಾದ ಯಾವುದೇ ಅಡೆತಡೆಯು ದುರ್ಬಲಗೊಂಡ ಅಪೊಪ್ಟೋಸಿಸ್‌ ಮತ್ತು ಗಡ್ಡೆಗಳ ಸಂಭವನೀಯ ರೂಪುಗೊಳ್ಳುವಿಕೆಗೆ ಕಾರಣವಾಗುತ್ತದೆ.

HIVಯ ಮುಂದುವರಿಯುವಿಕೆ

ಬದಲಾಯಿಸಿ

AIDSಗೆ ಹ್ಯೂಮನ್‌ ಇಮ್ಯುನೋಡಿಫಿಷಿಯೆನ್ಸಿ ವೈರಸ್‌ ಸೋಂಕಿನ ಮುಂದುವರಿಕೆಯು ಮುಖ್ಯವಾಗಿ CD4+ T-ಸಹಾಯಕ ದುಗ್ಧಕೋಶಗಳ ಖಾಲಿಯಾಗುವಿಕೆಯಿಂದ ಕಂಡುಬರುತ್ತದೆ; ಇದು ಒಂದು ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆಯೊಂದಕ್ಕೆ ಕಾರಣವಾಗುತ್ತದೆ. T-ಸಹಾಯಕ ಜೀವಕೋಶಗಳು ಖಾಲಿಯಾಗುವಲ್ಲಿನ ಕಾರ್ಯವಿಧಾನಗಳಲ್ಲೊಂದು ಅಪೊಪ್ಟೋಸಿಸ್‌ ಆಗಿದೆ. ಇದು ಜೀವರಾಸಾಯನಿಕ ಪ್ರತಿಕ್ರಿಯಾ ಸರಣಿಗಳ ಒಂದು ಸರಣಿಯಿಂದ ಉಂಟಾಗುತ್ತದೆ:[೪೦]

  1. HIV ಕಿಣ್ವಗಳು ಅಪೊಪ್ಟೋಟಿಕ್‌-ವಿರೋಧಿ Bcl-2 ನ್ನು ನಿಷ್ಕ್ರಿಯಗೊಳಿಸುತ್ತವೆ. ಇದು ಜೀವಕೋಶದ ಸಾವನ್ನು ನೇರವಾಗಿ ಉಂಟುಮಾಡುವುದಿಲ್ಲ. ಆದರೆ ಅಪೊಪ್ಟೋಸಿಸ್‌ಗಾಗಿರುವ ಸೂಕ್ತ ಸಂಕೇತವನ್ನು ಸ್ವೀಕರಿಸಲು ಅನುವಾಗುವಂತೆ ಜೀವಕೋಶವನ್ನು ಸಿದ್ಧಗೊಳಿಸುತ್ತದೆ. ಇದಕ್ಕೆ ಪರ್ಯಾಯವಾಗಿ, ಈ ಕಿಣ್ವಗಳು ಅಪೊಪ್ಟೋಟಿಕ್‌-ಪರವಾದ ಪ್ರೋಕ್ಯಾಸ್ಪೇಸ್‌-8 ನ್ನು ಸಕ್ರಿಯಗೊಳಿಸುತ್ತವೆ. ಇದು ಅಪೊಪ್ಟೋಸಿಸ್‌ನ ಮೈಟೋಕಾಂಡ್ರಿಯಾದ ವಿದ್ಯಮಾನಗಳನ್ನು ನೇರವಾಗಿ ಸಕ್ರಿಯಗೊಳಿಸುತ್ತದೆ.
  2. Fas-ಮಧ್ಯಸ್ಥಿಕೆಯ ಅಪೊಪ್ಟೋಸಿಸ್‌ನ್ನು ಪ್ರಚೋದಿಸುವ ಜೀವಕೋಶೀಯ ಪ್ರೊಟೀನುಗಳ ಮಟ್ಟವನ್ನು HIVಯು ಹೆಚ್ಚಿಸಬಹುದು.
  3. ಕೋಶಪೊರೆಯ ಮೇಲೆ ಹಾಜರಿರುವ CD4 ಗ್ಲೈಕೋಪ್ರೊಟೀನು ಗುರುತುಕಾರಕದ ಪ್ರಮಾಣವನ್ನು HIV ಪ್ರೊಟೀನುಗಳು ತಗ್ಗಿಸುತ್ತವೆ.
  4. ಬಿಡುಗಡೆಯಾದ ವೈರಾಣುವಿನ ಕಣಗಳು ಮತ್ತು ಬಾಹ್ಯಕೋಶೀಯ ದ್ರವಪದಾರ್ಥದಲ್ಲಿರುವ ಪ್ರೊಟೀನುಗಳು ಹತ್ತಿರವಿರುವ "ಬರಿಯ ಪ್ರೇಕ್ಷಕ" T ಸಹಾಯಕ ಜೀವಕೋಶಗಳಲ್ಲಿ ಅಪೊಪ್ಟೋಸಿಸ್‌ನ್ನು ಪ್ರಚೋದಿಸಬಲ್ಲವಾಗಿರುತ್ತವೆ.
  5. ಅಪೊಪ್ಟೋಸಿಸ್‌ಗಾಗಿರುವ ಜೀವಕೋಶವನ್ನು ಗುರುತುಮಾಡುವಲ್ಲಿ ತೊಡಗಿಸಿಕೊಂಡಿರುವ ಕಣಗಳ ಉತ್ಪಾದನೆಯನ್ನು HIVಯು ತಗ್ಗಿಸುತ್ತದೆ. ಇದರಿಂದಾಗಿ ವೈರಾಣುವಿಗೆ ನಕಲುಗೊಳ್ಳಲು ಸಮಯ ಸಿಕ್ಕಂತಾಗುತ್ತದೆ ಮತ್ತು ಸುತ್ತಮುತ್ತಲಿನ ಅಂಗಾಂಶಕ್ಕೆ ಅಪೊಪ್ಟೋಟಿಕ್‌ ಮಧ್ಯವರ್ತಿಗಳನ್ನು ಹಾಗೂ ವಿರಿಯಾನ್‌ಗಳನ್ನು ಬಿಡುಗಡೆ ಮಾಡುವುದನ್ನು ಮುಂದುವರೆಸುವುದಕ್ಕೂ ಅದಕ್ಕೆ ಅವಕಾಶ ಸಿಕ್ಕಂತಾಗುತ್ತದೆ.
  6. ಸೋಂಕು ತಗುಲಿದ CD4+ ಜೀವಕೋಶವು ಸೈಟೋಟಾಕ್ಸಿಕ್‌ T ಜೀವಕೋಶವೊಂದರಿಂದ ಸಾವಿನ ಸಂಕೇತವನ್ನೂ ಸ್ವೀಕರಿಸಬಹುದು.

ವೈರಾಣುವಿನ ಸೋಂಕಿನ ಒಂದು ನೇರ ಪರಿಣಾಮದ ರೂಪದಲ್ಲಿ ಜೀವಕೋಶಗಳು ಸಾಯಲೂಬಹುದು.

ವೈರಾಣುವಿನ ಸೋಂಕು

ಬದಲಾಯಿಸಿ

ಸೋಂಕು ತಗುಲಿದ ಜೀವಕೋಶಗಳ ಅಪೊಪ್ಟೋಸಿಸ್‌ನ್ನು ವೈರಾಣುಗಳು ಶೀಘ್ರವಾಗಿ ಪ್ರಚೋದಿಸಬಲ್ಲವು. ಇದಕ್ಕೆ ಸಂಬಂಧಿಸಿದ ಕಾರ್ಯವಿಧಾನದ ಶ್ರೇಣಿಯಲ್ಲಿ ಈ ಕೆಳಗಿನ ಹಂತಗಳು ಸೇರಿವೆ:

  • ಗ್ರಾಹಿಯ ಬಂಧಕತೆ.
  • ಕೈನೇಸ್‌ R ಪ್ರೊಟೀನಿನ (PKR) ಚುರುಕುಗೊಳಿಸುವಿಕೆ.
  • p53ಯೊಂದಿಗಿನ ಪಾರಸ್ಪರಿಕ ಕ್ರಿಯೆ ಅಥವಾ ಪ್ರಭಾವ.
  • ಸೋಂಕು ತಗುಲಿದ ಜೀವಕೋಶದ ಮೇಲ್ಮೈ ಮೇಲಿನ MHC ಪ್ರೊಟೀನುಗಳೊಂದಿಗೆ ಸೇರಿಕೊಂಡ ವೈರಾಣುವಿನ ಪ್ರೊಟೀನುಗಳ ಅಭಿವ್ಯಕ್ತಿ. ಅಪೊಪ್ಟೋಸಿಸ್‌ಗೆ ಒಳಗಾಗಲು ಸೋಂಕುತಗುಲಿದ ಜೀವಕೋಶವನ್ನು ಆಗ ಪ್ರಚೋದಿಸುವ ಪ್ರತಿರಕ್ಷಣಾ ವ್ಯವಸ್ಥೆಯ (ನೈಸರ್ಗಿಕ ಹಂತಕ ಮತ್ತು ಸೈಟೋಟಾಕ್ಸಿಕ್ T ಜೀವಕೋಶಗಳು) ಜೀವಕೋಶಗಳಿಂದ ಗುರುತಿಸುವಿಕೆಯಾಗಲು ಇದು ಅವಕಾಶ ಮಾಡಿಕೊಡುತ್ತದೆ.[೪೧]

ಬಹುತೇಕ ವೈರಾಣುಗಳು ಅಪೊಪ್ಟೋಸಿಸ್‌ನ್ನು ಪ್ರತಿಬಂಧಿಸಬಲ್ಲ ಪ್ರೊಟೀನುಗಳನ್ನು ಸಂಕೇತಿಸುತ್ತವೆ.[೪೨] Bcl-2ನ ಸಮಾನರೂಪಿಗಳನ್ನು ಹಲವಾರು ವೈರಾಣುಗಳು ಸಂಕೇತಿಸುತ್ತವೆ. ಈ ಸಮಾನರೂಪಿಗಳು ಅಪೊಪ್ಟೋಸಿಸ್‌ನ ಚುರುಕುಗೊಳಿಸುವಿಕೆಗಾಗಿ ಅತ್ಯಂತ ಅವಶ್ಯಕವಾಗಿರುವ BAX ಮತ್ತು BAKನಂಥ ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳನ್ನು ಪ್ರತಿಬಂಧಿಸಬಲ್ಲವಾಗಿರುತ್ತವೆ. ವೈರಾಣುವಿನ Bcl-2 ಪ್ರೊಟೀನುಗಳ ಉದಾಹರಣೆಗಳಲ್ಲಿ ಎಪ್‌ಸ್ಟೀನ್‌-ಬಾರ್‌ ವೈರಾಣು BHRF1 ಪ್ರೊಟೀನು ಮತ್ತು ಅಡಿನೋವೈರಸ್‌ E1B 19K ಪ್ರೊಟೀನು ಸೇರಿವೆ.[೪೩] ಕೆಲವೊಂದು ವೈರಾಣುಗಳು ಕ್ಯಾಸ್ಪೇಸ್‌ ಚಟುವಟಿಕೆಯನ್ನು ಪ್ರತಿಬಂಧಿಸುವ ಕ್ಯಾಸ್ಪೇಸ್‌ ಪ್ರತಿಬಂಧಕಗಳನ್ನು ಅಭಿವ್ಯಕ್ತಿಸುತ್ತವೆ ಮತ್ತು ದನದ ಸಿಡುಬಿನ ವೈರಾಣುಗಳ CrmA ಪ್ರೊಟೀನು ಇದಕ್ಕೊಂದು ಉದಾಹರಣೆಯಾಗಿದೆ. ಅದೇ ಸಮಯಕ್ಕೆ ಅನೇಕ ಸಂಖ್ಯೆಯ ವೈರಾಣುಗಳು TNF ಮತ್ತು Fasನ ಪ್ರಭಾವಗಳನ್ನು ತಡೆಗಟ್ಟಬಲ್ಲವಾಗಿರುತ್ತವೆ. ಉದಾಹರಣೆಗೆ ಲೋಳೆಗಡ್ಡೆ (ಮಿಕ್ಸೋಮಾ) ವೈರಾಣುಗಳ M-T2 ಪ್ರೊಟೀನು, TNF ಗ್ರಾಹಿಗೆ ಬಂಧಕತೆಯನ್ನು ಏರ್ಪಡಿಸಿಕೊಳ್ಳದಂತೆ ಮತ್ತು ಒಂದು ಪ್ರತಿಸ್ಪಂದನೆಯನ್ನು ಹುಟ್ಟುಹಾಕದಂತೆ TNFನ್ನು ಕಟ್ಟಿಹಾಕಿ ತಡೆಯುತ್ತದೆ.[೪೪] ಇಷ್ಟೇ ಅಲ್ಲದೇ, ಅನೇಕ ವೈರಾಣುಗಳು p53ಯನ್ನು ಬಂಧಿಸಬಲ್ಲ p53 ಪ್ರತಿಬಂಧಕಗಳನ್ನು ಅಭಿವ್ಯಕ್ತಿಸುತ್ತವೆ ಮತ್ತು ಇದರ ಪ್ರತಿಲಿಪಿ ಮಾಡುವ ಅಡ್ಡಚುರುಕುಗೊಳಿಸುವಿಕೆಯ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ. ಇದರ ಪರಿಣಾಮವಾಗಿ ಅಪೊಪ್ಟೋಸಿಸ್‌ನ್ನು p53ಯು ಚೋದಿಸದಂತಾಗುತ್ತದೆ. ಏಕೆಂದರೆ ಅದು ಅಪೊಪ್ಟೋಟಿಕ್‌-ಪರವಾದ ಪ್ರೊಟೀನುಗಳ ಅಭಿವ್ಯಕ್ತಿಯನ್ನು ಚೋದಿಸಲು ಅಸಮರ್ಥವಾಗಿರುತ್ತದೆ. ಅಡಿನೋವೈರಾಣು E1B-55K ಪ್ರೊಟೀನು ಮತ್ತು ಹೆಪಟೈಟಿಸ್‌ B ವೈರಾಣು HBx ಪ್ರೊಟೀನು- ಇವು ಇಂಥದೊಂದು ಕಾರ್ಯವನ್ನು ನಿರ್ವಹಿಸಬಲ್ಲ ವೈರಾಣುವಿನ ಪ್ರೊಟೀನುಗಳ ಉದಾಹರಣೆಗಳಾಗಿವೆ.[೪೫] ಕುತೂಹಲಕರ ವಿಷಯವೆಂದರೆ, ನಿರ್ದಿಷ್ಟವಾಗಿ ಸೋಂಕಿನ ಕೊನೆಯಲ್ಲಿ ಸೂಚಿಸಿದ ಹಂತಗಳಲ್ಲಿ ವೈರಾಣುಗಳು ಅಪೊಪ್ಟೋಸಿಸ್‌ನಿಂದ ದೂರವುಳಿಯಬಲ್ಲವು. ಸಾಯುತ್ತಿರುವ ಜೀವಕೋಶದ ಮೇಲ್ಮೈಯಿಂದ ಹೊರವಾಗಿ ಬೆಳೆಯುವ ಅಪೊಪ್ಟೋಟಿಕ್‌ ಕಾಯಗಳಲ್ಲಿ ಅವುಗಳನ್ನು ಹೊರಸಾಗಿಸಬಹುದು ಮತ್ತು ಭಕ್ಷಕ ಕೋಶಗಳಿಂದ ಅವು ತಿನ್ನಲ್ಪಡುತ್ತವೆ ಎಂಬ ಅಂಶವು ಹೆಚ್ಚು ಪ್ರಮಾಣದ ಒಂದು ಪ್ರತಿಸ್ಪಂದನೆಯ ಹುಟ್ಟುಹಾಕುವಿಕೆಯನ್ನು ತಡೆಯುತ್ತದೆ. ಇದು ವೈರಾಣುವಿನ ಹರಡುವಿಕೆಯನ್ನು ಬೆಂಬಲಿಸುತ್ತದೆ.[೪೪]

ಸಸ್ಯಗಳಲ್ಲಿ ಅಪೊಪ್ಟೋಸಿಸ್‌

ಬದಲಾಯಿಸಿ

ಸಸ್ಯಗಳಲ್ಲಿನ ಜೀವಕೋಶದ ಯೋಜಿತ ಸಾವು ಎಂಬುದು ಪ್ರಾಣಿಯ ಅಪೊಪ್ಟೋಸಿಸ್‌ನೊಂದಿಗೆ ಹಲವಾರಿ ಆಣ್ವಿಕ ಹೋಲಿಕೆಗಳನ್ನು ಹೊಂದಿದೆ. ಅವುಗಳ ಪೈಕಿ, ಜೀವಕೋಶ ಗೋಡೆಯ ಉಪಸ್ಥಿತಿ ಮತ್ತು ಸತ್ತ ಜೀವಕೋಶದ ತುಣುಕುಗಳನ್ನು ತೆಗೆದುಹಾಕುವ ಪ್ರತಿರಕ್ಷಣಾ ವ್ಯವಸ್ಥೆಯೊಂದರ ಕೊರತೆ ಇವು ಗಮನಾರ್ಹವಾಗಿವೆ. ಪ್ರತಿರಕ್ಷಿತ ಪ್ರತಿಸ್ಪಂದನೆಯೊಂದರ ಬದಲಿಗೆ, ಸಾಯುತ್ತಿರುವ ಜೀವಕೋಶವು ತನ್ನನ್ನು ತಾನು ಒಡೆದುಕೊಳ್ಳಲು ಅನುವಾಗುವಂತೆ ವಸ್ತುಗಳನ್ನು ಸಂಶ್ಲೇಷಿಸುತ್ತದೆ ಮತ್ತು ಅವುಗಳನ್ನು ಒಂದು ಕುಹರದೊಳಗೆ ಇರಿಸುತ್ತದೆ ಹಾಗೂ ಜೀವಕೋಶವು ಸಾಯುತ್ತಿರುವಂತೆ ಈ ಕುಹರವು ಒಡೆದುಕೊಳ್ಳುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಪ್ರಾಣಿಗಳಲ್ಲಿನ ಅಪೊಪ್ಟೋಸಿಸ್‌ನ್ನು ಹೋಲುತ್ತದೆಯೇ ಮತ್ತು ಅಪೊಪ್ಟೋಸಿಸ್‌ (ಜೀವಕೋಶದ ಯೋಜಿತ ಸಾವು ಎಂಬ ಹೆಚ್ಚು ಸಾರ್ವತ್ರಿಕವಾದ ಹೆಸರಿಗೆ ಪ್ರತಿಯಾಗಿರುವಂತೆ) ಎಂಬ ಹೆಸರಿನ ಬಳಕೆಯನ್ನು ಸಮರ್ಥಿಸುವಷ್ಟು ಸಾಕಾಗುವಷ್ಟು ಹತ್ತಿರದಲ್ಲಿದೆಯೇ ಎಂಬುದಿನ್ನೂ ಅಸ್ಪಷ್ಟವಾಗಿದೆ.[೪೬] ಕ್ಯಾಸ್ಪೇಸ್‌ ಅಧೀನವಲ್ಲದ ಅಪೊಪ್ಟೋಸಿಸ್‌ ವಿಷಶಾಸ್ತ್ರಕ್ಕೆ ಅಥವಾ ವಿಷಕ್ಕೆ ಸಂಬಂಧಿಸಿದ ಹಲವಾರು ಅಧ್ಯಯನಗಳಲ್ಲಿ ಬಾಹ್ಯ ಪ್ರತಿಕ್ರಿಯಾ ಸರಣಿಯೊಂದು ಗಮನಕ್ಕೆ ಬಂದಿದ್ದು, ಔಷಧವಸ್ತುವೊಂದರ ಚಟುವಟಿಕೆಯಿಂದ ಉಂಟಾಗುವ ಜೀವಕೋಶದೊಳಗಡೆ ಕ್ಯಾಲ್ಷಿಯಂ ಸಾಂದ್ರತೆಯಲ್ಲಿ ಕಂಡುಬರುವ ಒಂದು ಹೆಚ್ಚಳವು ಕೂಡಾ ಕ್ಯಾಲ್ಷಿಯಂ ಬಂಧಿಸುವ ಪ್ರೋಟಿಯೇಸ್‌ ಕ್ಯಾಲ್ಪೇನ್‌ ಒಂದರ ಮೂಲಕ ಅಪೊಪ್ಟೋಸಿಸ್‌ನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಈ ಅಧ್ಯಯನಗಳು ತಿಳಿಸಿವೆ.

ಇದನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. "About Apoptosis". Archived from the original on 2006-12-28. Retrieved November 2009. Apoptosis Interest Group, prefered pronunciation of National Institute of Health {{cite web}}: Check date values in: |accessdate= (help)
  2. ೨.೦ ೨.೧ ೨.೨ "ಅಮೆರಿಕನ್‌ ಹೆರಿಟೇಜ್‌ ಡಿಕ್ಷ್‌ನರಿ ನಮೂದು". Archived from the original on 2008-06-30. Retrieved 2010-01-29.
  3. ೩.೦ ೩.೧ "Webster.com ಡಿಕ್ಷ್‌ನರಿ ನಮೂದು". Archived from the original on 2007-07-03. Retrieved 2010-01-29.
  4. Kerr, JF. (1965). "A histochemical study of hypertrophy and ischaemic injury of rat liver with special reference to changes in lysosomes". Journal of Pathology and Bacteriology. 90 (90): 419–35. doi:10.1002/path.1700900210.
  5. Agency for Science, Technology and Research. "Prof Andrew H. Wyllie - Lecture Abstract". Retrieved 2007-03-30.
  6. Kerr JF, Wyllie AH, Currie AR (1972). "Apoptosis: a basic biological phenomenon with wide-ranging implications in tissue kinetics". Br. J. Cancer. 26 (4): 239–57. PMC 2008650. PMID 4561027. {{cite journal}}: Unknown parameter |month= ignored (help)CS1 maint: multiple names: authors list (link)
  7. O'Rourke MG, Ellem KA (2000). "John Kerr and apoptosis". Med. J. Aust. 173 (11–12): 616–7. PMID 11379508.
  8. Apoptosis Interest Group (1999). "About apoptosis". Archived from the original on 2006-12-28. Retrieved 2006-12-15.
  9. ೯.೦ ೯.೧ Thompson, CB (1995). "Apoptosis in the pathogenesis and treatment of disease". Science. 267 (5203): 1456–62. doi:10.1126/science.7878464. PMID 7878464. Archived from the original on 2020-05-29. Retrieved 2010-01-29.
  10. Damasio, Antonio. The Feeling of What Happens. New York: Harcourt Brace & Co. {{cite book}}: Unknown parameter |coauthors= ignored (|author= suggested) (help)
  11. Guerrero I, Ruiz i Altaba A (2003). "Development. Longing for ligand: hedgehog, patched, and cell death". Science (journal). 301 (5634): 774–6. doi:10.1126/science.1088625. PMID 12907783. {{cite journal}}: Unknown parameter |month= ignored (help)
  12. Thibert C, Teillet MA, Lapointe F, Mazelin L, Le Douarin NM, Mehlen P (2003). "Inhibition of neuroepithelial patched-induced apoptosis by sonic hedgehog". Science (journal). 301 (5634): 843–6. doi:10.1126/science.1085405. PMID 12907805. {{cite journal}}: Unknown parameter |month= ignored (help)CS1 maint: multiple names: authors list (link)
  13. Werlen G; Hausmann, B; Naeher, D; Palmer, E (2003). "Signaling life and death in the thymus: timing is everything". Science. 299 (5614): 1859–63. doi:10.1126/science.1067833. PMID 12649474.
  14. ೧೪.೦೦ ೧೪.೦೧ ೧೪.೦೨ ೧೪.೦೩ ೧೪.೦೪ ೧೪.೦೫ ೧೪.೦೬ ೧೪.೦೭ ೧೪.೦೮ ೧೪.೦೯ Cotran (1998). Robbins Pathologic Basis of Disease. Philadelphia: W.B Saunders Company. ISBN 0-7216-7335-X. {{cite book}}: More than one of |author= and |last= specified (help); Unknown parameter |coauthors= ignored (|author= suggested) (help)
  15. Popov SG, Villasmil R, Bernardi J (2002). "Lethal toxin of Bacillus anthracis causes apoptosis of macrophages". Biochem. Biophys. Res. Commun. 293 (1): 349–55. doi:10.1016/S0006-291X(02)00227-9. PMID 12054607. {{cite journal}}: Unknown parameter |month= ignored (help)CS1 maint: multiple names: authors list (link)
  16. ೧೬.೦ ೧೬.೧ Brüne B (2003). "Nitric oxide: NO apoptosis or turning it ON?". Cell Death Differ. 10 (8): 864–9. doi:10.1038/sj.cdd.4401261. PMID 12867993. {{cite journal}}: Unknown parameter |month= ignored (help)
  17. ಕ್ಯಾಲ್ಷಿಯಂ ಆರ್ಕೇಸ್ಟ್ರೇಟ್ಸ್‌ ಅಪೊಪ್ಟೋಸಿಸ್‌. ಮಾರ್ಕ್‌ P. ಮ್ಯಾಟ್ಸನ್‌ & ಸಿಕ್‌ L. ಚಾನ್‌. ನೇಚರ‍್ ಸೆಲ್ ಬಯಾಲಜಿ 5, 1041 - 1043 (2003). doi:10.1038/ncb1203-1041
  18. Chiarugi A, Moskowitz MA (2002). "PARP-1—a perpetrator of apoptotic cell death?". Science. 297 (5579): 259–63. doi:10.1126/science.1074592. PMID 12114611.
  19. Fesik SW, Shi Y. (2001). "Controlling the caspases". Science. 294 (5546): 1477–8. doi:10.1126/science.1062236. PMID 11711663.
  20. Laurent M. Dejean, Sonia Martinez-Caballero, Kathleen W. Kinnally (2006). "Is MAC the knife that cuts cytochrome c from mitochondria during apoptosis?". Cell Death and Differentiation. 13: 1387–5. doi:10.1038/sj.cdd.4401949.{{cite journal}}: CS1 maint: multiple names: authors list (link)
  21. Dejean LM, Martinez-Caballero S, Manon S, Kinnally KW (2006). "Regulation of the mitochondrial apoptosis-induced channel, MAC, by BCL-2 family proteins". Biochim. Biophys. Acta. 1762 (2): 191–201. doi:10.1016/j.bbadis.2005.07.002. PMID 16055309. {{cite journal}}: Unknown parameter |month= ignored (help)CS1 maint: multiple names: authors list (link)
  22. Lodish, Harvey (2004). Molecular Cell Biology. New York: W.H. Freedman and Company. ISBN 0-7167-4366-3. {{cite book}}: Unknown parameter |coauthors= ignored (|author= suggested) (help)
  23. ೨೩.೦ ೨೩.೧ Wajant H (2002). "The Fas signaling pathway: more than a paradigm". Science. 296 (5573): 1635–6. doi:10.1126/science.1071553. PMID 12040174.
  24. Chen G, Goeddel DV (2002). "TNF-R1 signaling: a beautiful pathway". Science. 296 (5573): 1634–5. doi:10.1126/science.1071924. PMID 12040173.
  25. Goeddel, DV. "Connection Map for Tumor Necrosis Factor Pathway". Science. doi:10.1126/stke.3822007tw132]. Archived from the original on 2009-07-10. Retrieved 2010-01-29. {{cite journal}}: Unknown parameter |doi_brokendate= ignored (help)
  26. Wajant, H. "Connection Map for Fas Signaling Pathway". Science. doi:10.1126/stke.3802007tr1]. Archived from the original on 2009-05-03. Retrieved 2010-01-29. {{cite journal}}: Unknown parameter |doi_brokendate= ignored (help)
  27. Murphy KM, Ranganathan V, Farnsworth ML, Kavallaris M, Lock RB (2000). "Bcl-2 inhibits Bax translocation from cytosol to mitochondria during drug-induced apoptosis of human tumor cells". Cell Death Differ. 7 (1): 102–11. doi:10.1038/sj.cdd.4400597. PMID 10713725. {{cite journal}}: Unknown parameter |month= ignored (help)CS1 maint: multiple names: authors list (link)
  28. Cheng EH; Sheiko, TV; Fisher, JK; Craigen, WJ; Korsmeyer, SJ (2003). "VDAC2 inhibits BAK activation and mitochondrial apoptosis". Science. 301 (5632): 513–7. doi:10.1126/science.1083995. PMID 12881569.
  29. Susin SA, Lorenzo HK, Zamzami N (1999). "Molecular characterization of mitochondrial apoptosis-inducing factor". Nature. 397 (6718): 441–6. doi:10.1038/17135. PMID 9989411. {{cite journal}}: Unknown parameter |month= ignored (help)CS1 maint: multiple names: authors list (link)
  30. Santos A. Susin; Daugas, E; Ravagnan, L; Samejima, K; Zamzami, N; Loeffler, M; Costantini, P; Ferri, KF; Irinopoulou, T (2000). "Two Distinct Pathways Leading to Nuclear Apoptosis". Journal of Experimental Medicine. 192 (4): 571–80. doi:10.1073/pnas.191208598v1. PMC 2193229. PMID 10952727. {{cite journal}}: Unknown parameter |doi_brokendate= ignored (help)
  31. Madeleine Kihlmark; Imreh, G; Hallberg, E (15 October 2001). "Sequential degradation of proteins from the nuclear envelope during apoptosis". Journal of Cell Science. 114 (20): 3643–53. PMID 11707516.
  32. Nagata S (2000). "Apoptotic DNA fragmentation". Exp. Cell Res. 256 (1): 12–8. doi:10.1006/excr.2000.4834. PMID 10739646. {{cite journal}}: Unknown parameter |month= ignored (help)
  33. M Iwata, D Myerson, B Torok-Storb and RA Zager (1996). "An evaluation of renal tubular DNA laddering in response to oxygen deprivation and oxidant injury". Retrieved 2006-04-17.{{cite web}}: CS1 maint: multiple names: authors list (link)
  34. Vandivier RW, Henson PM, Douglas IS (2006). "Burying the dead: the impact of failed apoptotic cell removal (efferocytosis) on chronic inflammatory lung disease". Chest. 129 (6): 1673–82. doi:10.1378/chest.129.6.1673. PMID 16778289. {{cite journal}}: Unknown parameter |month= ignored (help)CS1 maint: multiple names: authors list (link)
  35. Li MO; Sarkisian, MR; Mehal, WZ; Rakic, P; Flavell, RA (2003). "Phosphatidylserine receptor is required for clearance of apoptotic cells". Science. 302 (5650): 1560–3. doi:10.1126/science.1087621. PMID 14645847.
  36. Wang X; Wu, YC; Fadok, VA; Lee, MC; Gengyo-Ando, K; Cheng, LC; Ledwich, D; Hsu, PK; Chen, JY (2003). "Cell corpse engulfment mediated by C. elegans phosphatidylserine receptor through CED-5 and CED-12". Science. 302 (5650): 1563–1566. doi:10.1126/science.1087641. PMID 14645848.
  37. Savill J, Gregory C, Haslett C. (2003). "Eat me or die". Science. 302 (5650): 1516–7. doi:10.1126/science.1092533. PMID 14645835.{{cite journal}}: CS1 maint: multiple names: authors list (link)
  38. Yang L, Mashima T, Sato S (2003). "Predominant suppression of apoptosome by inhibitor of apoptosis protein in non-small cell lung cancer H460 cells: therapeutic effect of a novel polyarginine-conjugated Smac peptide". Cancer Res. 63 (4): 831–7. PMID 12591734. {{cite journal}}: Unknown parameter |month= ignored (help)CS1 maint: multiple names: authors list (link)
  39. Takaoka A; Hayakawa, S; Yanai, H; Stoiber, D; Negishi, H; Kikuchi, H; Sasaki, S; Imai, K; Shibue, T (2003). "Integration of interferon-alpha/beta signalling to p53 responses in tumour suppression and antiviral defence". Nature. 424 (6948): 516–23. doi:10.1038/nature01850. PMID 12872134.
  40. Judie B. Alimonti, T. Blake Ball, Keith R. Fowke (2003). "Mechanisms of CD4+ T lymphocyte cell death in human immunodeficiency virus infection and AIDS". J Gen Virology. 84 (84): 1649–61. doi:10.1099/vir.0.19110-0. PMID 12810858.{{cite journal}}: CS1 maint: multiple names: authors list (link)
  41. Everett, H. and McFadden, G. (1999). "Apoptosis: an innate immune response to virus infection". Trends Microbiol. 7 (4): 160–5. doi:10.1016/S0966-842X(99)01487-0. PMID 10217831.{{cite journal}}: CS1 maint: multiple names: authors list (link)
  42. Teodoro, J.G. Branton, P.E. (1997). "Regulation of apoptosis by viral gene products". J Virol. 71 (3): 1739–46. PMC 191242. PMID 9032302.{{cite journal}}: CS1 maint: multiple names: authors list (link)
  43. Polster, B.M. Pevsner, J. and Hardwick, J.M. (2004). "Viral Bcl-2 homologs and their role in virus replication and associated diseases". Biochim Biophys Acta. 1644 (2–3): 211–27. doi:10.1016/j.bbamcr.2003.11.001. PMID 14996505.{{cite journal}}: CS1 maint: multiple names: authors list (link)
  44. ೪೪.೦ ೪೪.೧ Hay, S. and Kannourakis, G. (2002). "A time to kill: viral manipulation of the cell death program". J Gen Virol. 83 (Pt 7): 1547–64. PMID 12075073.{{cite journal}}: CS1 maint: multiple names: authors list (link)
  45. Wang, X.W. Gibson, M.K. Vermeulen, W. Yeh, H. Forrester, K. Sturzbecher, H.W. Hoeijmakers, J.H. and Harris, C.C. (1995). "Abrogation of p53-induced Apoptosis by the Hepatitis B Virus X Gene". Cancer Res. 55 (24): 6012–6. PMID 8521383.{{cite journal}}: CS1 maint: multiple names: authors list (link)
  46. Cyrelys Collazo, Osmani Chacón, Orlando Borrás (2006). "Programmed cell death in plants resembles apoptosis of animals" (PDF). Biotecnología Aplicada. 23: 1–10. Archived from the original (PDF) on 2012-03-14. Retrieved 2010-01-29.{{cite journal}}: CS1 maint: multiple names: authors list (link)


ಬಾಹ್ಯ ಕೊಂಡಿಗಳು

ಬದಲಾಯಿಸಿ