ಬೊಬ್ಬೆ
ಬೊಬ್ಬೆ ಎಂದರೆ ರಸಿಕೆ, ವಸೆ ಅಥವಾ ರಕ್ತದ ಕಲೆಗಳುಳ್ಳ ದ್ರವ ತುಂಬಿಕೊಂಡು ಚರ್ಮದ ಮೇಲೆ ಉಬ್ಬಿದ ಹಾಗೆ ಕಾಣುವ ಗುಳ್ಳೆ (ಬ್ಲಿಸ್ಟರ್). ಇದು ಮೇಲು ಮೇಲಿನದಾಗಿರಬಹುದು ಅಥವಾ ಆಳವಾದುದಾಗಿರಬಹುದು. ವಿವಿಧ ಆಕಾರ ಗಾತ್ರ ಒಂದೇ ಇಲ್ಲವೆ ಕೆಲವು ಕೋಣೆ ಹೊಂದಿರಬಹುದು. ಸೂಕ್ಷ್ಮತೆಯಿಂದಾಗಿ ಇದು ತಾನೇ ತಾನಾಗಿ ಇಲ್ಲವೇ ಸ್ವಲ್ಪ ತಗುಲಿದಾಗ ಒಡೆಯುವುದು. ಚರ್ಮ ಸುಟ್ಟಾಗ ಅಥವಾ ಒರಟು ಪ್ರದೇಶದ ಮೇಲೆ ಉಜ್ಜಿದಾಗ ಬೊಬ್ಬೆ ಏಳಬಹುದು. ಇದನ್ನು ಸಾಸಿವೆ ಎಣ್ಣೆ ಅಥವಾ ಕ್ಯಾಂತರೇಡ್ಸ್ ಎಂಬ ಹುಣ್ಣುನೊಣಗಳಿಂದ ಕೃತಕವಾಗಿ ಉಂಟಾಗಿಸುತ್ತಾರೆ. ಈ ರೀತಿಯ ಹುಣ್ಣುಗಳನ್ನು ಪೆಂಫೈಗಸ್ ಎರಿಸಿಪೆಲಾಸ್ ಮುಂತಾದ ರೋಗಗಳಲ್ಲಿ ಕಾಣಬಹುದು.
ಸರಿಯಾಗಿ ಗುಣವಾಗಲು, ವೈದ್ಯಕೀಯವಾಗಿ ಅಗತ್ಯವಿಲ್ಲದಿದ್ದರೆ ಬೊಬ್ಬೆಯನ್ನು ಒಡೆಯಬಾರದು. ಒಡೆದರೆ, ಹೆಚ್ಚುವರಿ ಚರ್ಮವನ್ನು ತೆಗೆಯಬಾರದು ಏಕೆಂದರೆ ಸರಿಯಾಗಿ ಗುಣವಾಗಲು ಕೆಳಗಿನ ಚರ್ಮಕ್ಕೆ ಆ ಮೇಲಿನ ಪದರವು ಬೇಕಾಗುತ್ತದೆ.[೧]
ಉಲ್ಲೇಖಗಳು
ಬದಲಾಯಿಸಿ- ↑ "Blister Treatments and Prevention". WebMD (in ಅಮೆರಿಕನ್ ಇಂಗ್ಲಿಷ್). Retrieved 2017-03-04.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: