ಅನಾ ಅಸ್ಲಾನ್
ಅನಾ ಅಸ್ಲಾನ್ ರವರು ರೊಮೇನಿಯಾದ ಜೀವಶಾಸ್ತ್ರಜ್ಞ ಮತ್ತು ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಜಿರೋವಿಟಲ್ ಎಚ್ 3 ಮತ್ತು ಅಸ್ಲಾವಿಟಲ್ ಎಂಬ ಮಾದಕವಸ್ತುಗಳ ಅಧಾರದ ಮೇಲೆ ಪ್ರೋಕೈನ್ ವಿರೋಧಿ ವಯಸ್ಸಾದ ಪರಿಣಾಮಗಳನ್ನು ಪತ್ತೆ ಮಾಡಿದ್ದಾರೆ. ಅನಾ ಅವರು ರೋಮೇನಿಯಾದಲ್ಲಿ ಜೆರೊಂಟೊಲಜಿ ಮತ್ತು ಜೆರಿಯಾಟ್ರಿಕ್ಸನ ಪ್ರವರ್ತಕರಾಗಿದ್ದರು.ಅವರು ಸ್ಥಾಪಿಸಿದ ಸಂಸ್ಥೆಯು ಜಗತ್ತಿನಲ್ಲೇ ಮೊದಲನೇಯ ಮತ್ತು ಉತ್ತಮ ಸಂಸ್ಥೆಯೆಂದು ಹೆಸರುವಾಸಿಯಾಗಿತ್ತು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟಿತ್ತು.ಇವರ ಕೆಲಸವು ವಿವಾದಾತ್ಮಕವಾಗಿದ್ದರೂ ಸಹ ಇವರು ಅಂತಾರಾಷ್ಟ್ರಿಯ ಗಮನವನ್ನು ಸೆಳೆದರು. ಅನಾ ಅವರು ಬ್ಯೂಕ್ಯಾರೆಸ್ಟ್ ವಿಶ್ವ ವಿದ್ಯಾನಿಲಯದಲ್ಲಿ ವೈದ್ಯಕೀಯ ಸಂಶೋಧನೆ ಮಾಡಿ, ಹೃದಯಶಾಸ್ತ್ರ, ಜೆರೋಂಟೊಲಜಿ ಮತ್ತು ಜೆರಿಯಾಟ್ರಿಕ್ಸನಲ್ಲಿ ಪರಿಣಿತಿ ಹೊಂದಿದ್ದರು.
ಆರಂಭಿಕ ಜೀವನ
ಬದಲಾಯಿಸಿಅನಾ ಅಸ್ಲಾನ್ ಅವರು ೧ ಜನವರಿ ೧೮೯೭ ರಲ್ಲಿ ರೊಮೇನಿಯಾ ಸಾಮ್ರಾಜ್ಯದಲ್ಲಿ ಜನಿಸಿದ್ದರು. ಅಸ್ಲಾನ ರವರು ಮಾರ್ಗರಿಟ್ ಮತ್ತು ಸೋಫಿಯಾ ಅಸ್ಲಾನ್ ದಂಪತಿಗಳ ಕೊನೆಯ ಮಗಳು. ಇವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು. ಅಸ್ಲಾನರವರು ಬೌದ್ಧಿಕ ಮಗು ಏಕೆಂದರೆ ಅವರು ನಾಲ್ಕು ವರ್ಷದ ವಯಸ್ಸಿನಲ್ಲಿಯೇ ಓದಲು ಮತ್ತು ಬರೆಯಲು ಕಲಿತ್ತಿದ್ದರು. ಇವರು ೧೩ ವರ್ಷದಲ್ಲಿರುವಾಗ ಇವರ ತಂದೆ ಮರಣ ಹೊಂದಿದರು ನಂತರ ಇವರ ಕುಟುಂಬವು ಬುಚಾರೆಸ್ಟ್, ರೊಮೇನಿಯಾದಲ್ಲಿ ಸ್ಥಳಾಂತರಗೊಂಡರು. ಅಸ್ಲಾನ್ ಅವರು ತಮ್ಮ ವಿದ್ಯಾಭ್ಯಾಸವನ್ನು ೧೯೧೫ ರಲ್ಲಿ ಬುಚಾರೆಸ್ಟ್ ಸೆಂಟ್ರಲ್ ಸ್ಕೂಲ್ ನಲ್ಲಿ ಮುಗಿಸಿದ್ದರು. ಅಸ್ಲಾನ್ ಅವರು ವೈದ್ಯರಾಗಲು ಅವರ ತಂದೆಯ ಆಕಾಲಿಕ ಮರಣವೆ ಕಾರಣವೆಂದು ಹೇಳುತ್ತಾರೆ. ವೈದ್ಯಕೀಯ ಕ್ಷೇತ್ರವು ಮಹಿಳೆಯರಿಗೆ ಪ್ರವೇಶಿಸಲು ಅಪೇಕ್ಷಣಿಯ ಕ್ಷೇತ್ರವಲ್ಲವಾದರು ಅಸ್ಲಾನ್ ಅವರು ಆಯ್ಕೆಮಾಡಿಕೊಂಡ ಮಾರ್ಗದಂತೆ ೧೯೧೫ ರಿಂದ ೧೯೨೨ವರೆಗೆ ಮೆಡಿಸಿನ್ ಫ್ಯಾಕಲ್ಟಿಯಾಗಿ ಹಾಜರಾಗಲು ನಿರ್ಧರಿಸಿದರು. ಅವರ ತಂದೆಯ ಆಕಾಲಿಕ ಮರಣದಿಂದ ಅವರ ಕುಟುಂಬವು ಆರ್ಥಿಕವಾಗಿ ಸ್ಥಿರವಾಗಿರಲ್ಲಿಲ್ಲಾ ಅದರಿಂದ ಅವರ ತಾಯಿ ಅಸ್ಲಾನ್ ಅವರ ನಿರ್ಧಾರವನ್ನು ಪ್ರಾರಂಭದಲ್ಲಿ ಬೆಂಬಲಿಸಲಿಲ್ಲ. ಆಕೆಯ ತಾಯಿ ವೈದ್ಯಕಿಯ ವೃತ್ತಿ ಜೀವನವನ್ನು ಆಂಗೀಕರಿಸುವವರೆಗೂ ಅಸ್ಲಾನ್ ಊಟ ಬಿಟ್ಟು ಹಸಿವಿನಿಂದ ಹೊರಟ ಮಾಡಿದರು, ನಂತರ ಅವರ ತಾಯಿ ಅಸ್ಲಾನಿನ ಅಸಕ್ತಿಯನ್ನು ಕಂಡು ಅವರ ವೈದ್ಯಕೀಯ ವೃತ್ತಿಜೀವನ ನಿರ್ಧಾರವನ್ನು ಪ್ರೋತ್ಸಾಹಿಸಿದರು. ಆನಂತರ ಅಸ್ಲಾನ್ ಅವರು ಪ್ರಥಮ ವಿಶ್ವ ಯುದ್ಧದ ಸಮಯದಲ್ಲಿ ನರ್ಸಾಗಿ ಸೈನಿಕರಿಗೆ ಸೇವೆ ಸಲಿಸಲು ಹೋಗಿದ್ದರು.[೧]
ಸಂಶೋಧನೆ
ಬದಲಾಯಿಸಿಅಸ್ಲಾನ್ ಅವರು ಮೆಡಿಸಿನ್ ಫ್ಯಾಕಲ್ಟಿ ಪದವಿಯನ್ನು ೧೯೨೨ ರಲ್ಲಿ ಪಡೆದ ನಂತರ ಅವರು ಡಾಕ್ಟರೇಟ್ ಪ್ರಬಂಧದ ಮೇಲ್ವಿಚಾರಕರಾದ ಡೇನಿಯಲ್ ಡೇನಿಯೊಪೊಲೊರೊಂದಿಗೆ ಕೆಲಸ ಮಾಡಲು ಪ್ರಾರಂಭ ಮಾಡಿದರು . ನಂತರ ೧೯೨೪ ರಲ್ಲಿ ಇವರು ಶರೀರ ವಿಜ್ಞಾನ ಮತ್ತು ಹೃದಯ ಸ್ನಾಯುವಿನ ವಿಷಯದಲ್ಲಿ ಎಂ.ಡಿ ಪದವಿಯನ್ನು ಪಡೆದುಕೊಂಡರು.ಅವರ ಗಮನವು ಶರೀರವಿಜ್ಞಾನ ಮತ್ತು ವಯಸ್ಸಾದ ಪ್ರಕ್ರಿಯೆಲ್ಲಿದ್ದು ಅವರು ಪೊಕೈನ್ ಸಂಧಿವಾತದ ಮೇಲೆ ಪರಿಣಾಮ ಬೀರುವ ಪ್ರಯೋಗಗಳ ಮೇಲೆ ಈ ಔಷಧದ ಇತರ ಪ್ರಯೋಜನಕಾರಿ ಪರಿಣಾಮಗಳನ್ನು ಅಸ್ಲಾನ್ ಕಂಡು ಹಿಡಿದರು. ಈ ಸಂಶೋದನೆಯ ಅಧ್ಯಯನವು ಸುಮಾರು ೩೦ವರ್ಷಗಳ ಆವಿಷ್ಕಾರಕ್ಕೆ ಅಂತಿಮವಾಗಿ ಕಾರಣಾವಾಯಿತ್ತು. ಈ ಆವಿಷ್ಕಾರಕ್ಕೆ ಗೆರೋವಿಟಲ್ ಎಚ್ ೩ ಎಂದು ಕರೆಯಲಾಗುತಿತ್ತು. ವಯಸ್ಸಾದ ಹಿರಿಯರು ಹೆದರಿಸುತ್ತಿದ್ದ ತೊಂದರೆಗಳಿಗೆ ಅಸ್ಲಾನ್ ರವರು ಗೆರೋವಿಟಲನ್ನು ಉಪಯೋಗಿಸಲು ಸೂಚಿಸುತ್ತಿದ್ದರು. ಗೆರೋವಿಟಲನ್ನು"ಯುವಕರ ಕಾರಂಜಿ" ಎಂದು ವಿಜ್ಞಾನಿಗಳು ಹೇಳಲು ಹಿಂಜರಿಯುತ್ತಿದರು ಆದ್ದರಿಂದ ಅಸ್ಲಾನ್ ರವರು ಫಲಿತಾಂಶವನ್ನು ಸಾಬೀತು ಪಡಿಸಲು ಸಂಶೋಧನಾ ಅಧ್ಯಯನವನ್ನು ಪ್ರಾರಂಭಿಸಿದರು. ಕೇವಲ ಎರಡು ವರ್ಷದ ಅವಧಿಯಲ್ಲಿ ಅಸ್ಲಾನ್ ರವರು ಹದಿನೈದು ಸಾವಿರ ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿದರು. ಹದಿನೈದು ಸಾವಿರ ಜನರಲ್ಲಿ ಕೆಲವರು ಗೆರೋವಿಟಲನ್ನು ಸ್ವೀಕರಿಸಿದರು ಇನ್ನೂ ಕೆಲವರು ಪ್ಲೇಸ್ಬೊವನ್ನು ಸ್ವೀಕರಿಸಿದರು. ಗೆರೋವಿಟಲ್ ಸೇವಿಸಿದ ಜನರಲ್ಲಿ ಶೇಕಡ ೪೦% ರೋಗಗಳು ಕಡಿಮೆಯಾಯಿತು, ಪ್ಲೇಸ್ಬೊ ಸೇವಿಸಿದ ಜನರಲ್ಲಿ ಶೇಕಡ ೧೩% ಕಡಿಮೆಯಾಯಿತು. ಆದರೆ ಔಷದವನ್ನು ಸೇವಿಸಿದ ಜನರಿಗೆ ಕೇವಲ ೨.೭% ರಷ್ಟು ಮಾತ್ರ ರೋಗಗಳು ಕಡಿಮೆಯಾಯಿತು.
ಅಸ್ಲಾನ್ ರವರು ೧೯೭೬ರಲ್ಲಿ ಎಲೆನಾ ಪೋಲೋವ್ರಜೆನ್ ಎಂಬ ಮತ್ತೊಬ್ಬ ಪ್ರಸಿದ್ದ ಔಷದಿಕಾರನೊಂದಿಗೆ ಸೇರಿ ಅಸ್ಲಾವಿಟಲ್ ಎಂಬ ಹೆಸರಿನ ಮತ್ತೊಂದು ಹೊಸ ಮಾದಕವನ್ನು ಕಂಡುಹಿಡಿದರು. ಇದು ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಗುರಿಯನ್ನು ಹೊಂದಿತ್ತು. ಅಸ್ಲಾವಿಟಲ್ ಎಂಬ ಮಾದಕವು ಗೆರೋವಿಟಲ್ ಎಂಬ ಮಾದಕವನ್ನು ಹೋಲುವ ಔಷದಿಯಾಗಿತ್ತು.
ಗೆರೋವಿಟಲ್
ಬದಲಾಯಿಸಿರೋಗಿಗಳೊಂದಿಗೆ ಪ್ರೋಕೈನ್ ನೋವು ನಿವಾರಿಸುವ ಪರಿಣಾಮಗಳ ಬಗ್ಗೆ ತನಿಖೆ ಮಾಡುವಾಗ ಅನಾ ಅಸ್ಲಾನ್ ಈ ಔಷಧವು ಚರ್ಮ ಮತ್ತು ಕೂದಲಿನ ಅಂಶ ಹಾಗೂ ಉತ್ತಮ ಸ್ಮರಣೆ ಮತ್ತು ಯೋಗ ಕ್ಷೇಮದ ಪ್ರಯೋಜನಕಾರಿ ಪರಿಣಾಮಗಳನ್ನು ಸಹ ಪ್ರೋಕೈನ್ ಉಂಟು ಮಾಡುತ್ತದೆ ಎಂದು ಅಸ್ಲಾನ್ ರವರು ಕಂಡುಹಿಡಿದರು. ಈ ಆವಿಷ್ಕಾರದ ಆಧಾರದ ಮೇಲೆ, ಅವರು ವಿರೋಧಿ ವಯಸ್ಸಾದ ಔಷಧಿ ಗೆರೋವಿಟಲ್ ಎಚ್ ೩ಯನ್ನು ೧೯೫೨ರಲ್ಲಿ ಅಭಿವೃದ್ಧಿ ಪಡಿಸಿದರು. ನಂತರ ಎಲೆನಾ ಪ್ರೋಲೋವ್ರಜೆನ್ ಎಂಬ ಪ್ರಸಿದ್ಧಿ ಔಷಧಿಕಾರರ ಜೊತೆಯಲ್ಲಿ ಸೇರಿ ಅಸ್ಲಾನ್ ರವರು ಅಸ್ಟಾವಿಟಲ್ ಎಂಬ ಮಾದಕವನ್ನು ೧೯೬೧ ರಲ್ಲಿ ಮಾರುಕಟ್ಟೆಯಲ್ಲಿ ಸುಧಾರಿತ ಸೂತ್ರವನ್ನು ರಚಿಸಿದರು.
ಗೆರೋವಿಟಲ್ ಪ್ರಯೋಜನಕಾರಿ ಪರಿಣಾಮಗಳನ್ನು ವೈಜ್ಞಾನಿಕವಾಗಿ ಗುರುತಿಸಲಾಯಿತು, ಆದರೆ ಕೆಲವು ವಯಸ್ಸಾದ ವಿರೋಧಿ ಪರಿಣಾಮಗಳನ್ನು ಪುನರ್ವರ್ತಿಸಲು ಅಸ್ಲಾನ್ ರವರು ವಿಫಲರಾದರು. ಗೆರೋವಿಟಲನ್ನು ಅಮೇರಿಕಾದಲ್ಲಿ ಪ್ರಸ್ತುತವಾಗಿ "ಅನುಮೋಧಿಸದ ಹೊಸ ಔಷಧ" ಎಂದು ನಿಷೇದಿಸಲಾಗಿದೆ.
ಸೌಂದರ್ಯವರ್ಧಕಗಳು
ಬದಲಾಯಿಸಿಅನಾ ಅವರು ಕೂದಲು ಲೋಶನ್ ಮತ್ತು ಕ್ರೀಮ್, ಗೆರೋವಿಟಲ್ ಎಚ್ ೩ ಎಂಬ ಎರಡು ಕಾಸ್ಮೆಟಿಕ್ ಉತ್ಪಾನವನ್ನು ಪೇಟೆಂಟ್ ಮಾಡಿ ತಮ್ಮ ಉತ್ಪಾದನೆಯನ್ನು ಫಾರ್ಮೆಕ್ ಕಂಪನಿ ಮತ್ತು ಮಿರಾಜ್ ಎಂಬ ಕಂಪನಿಗೆ ನೀಡಿದರು. ಈ ಎರಡು ಕಂಪನಿಗಳು ತಮ್ಮ ವ್ಯಾಪ್ತಿಯ ಸೌಂದರ್ಯವರ್ಧಕಗಳನ್ನು ವೈವಿಧ್ಯಗೊಳಿಸಿ ಮತ್ತು ಸಾಂಪ್ರದಾಯಿಕ ಫ್ರೋಕೈನ್ ಹೈಡ್ರೋಕ್ಲೋರೈಡನ್ನು ಸೂತ್ರದಿಂದ ತೆಗೆದುಹಾಕಿದರು.
ಪ್ರಶಸ್ತಿಗಳು
ಬದಲಾಯಿಸಿಅನಾ ಆಸ್ಲಾನ್ ರವರು ತಮ್ಮ ಸಂಶೋಧನಾ ಚಟುವಟಿಕೆಯಲ್ಲಿ ಅನೇಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲನೇಯ ಸ್ಥಾನವನ್ನು ಪಡೆದಿದ್ದಾರೆ.ಆಸ್ಲಾನರವರಿಗೆ ಆನೇಕ ಗೌರವಗಳು ಮತ್ತು ಅನೇಕ ಪ್ರಶಸ್ತಿಗಳು ದೊರಕಿವೆ. ೧೯೭೧ ರಲ್ಲಿ "ಕ್ರಾಸ್ ಮೆರಿಟ್" ಎಂಬ ಜರ್ಮನಿಯ ಆರ್ಡರ್ ಆಫ್ ಮೆರಿಟನ ಪ್ರಥಮ ದರ್ಜೆ, ೧೯೭೩ ರಲ್ಲಿ "ಕ್ಯಾವಲಿಯರ್ ಲಾ ನೌವೆಲ್ಲೆ ಯುರೋಪ್" ಎಂಬ ಆಸ್ಕರ್ ಪ್ರಶಸ್ತಿಯು ಇಟಲಿಯಲ್ಲಿ ದೊರೆತಿದೆ, ೧೯೭೪ ರಲ್ಲಿ ಲೆಸ್ ಪಾಲ್ಮ್ಸ್ ಅಕಾಡೆಮಿಕ್ಸ್ ಎಂಬ ಪ್ರಶಸ್ತಿ, ೧೯೭೮ ರಲ್ಲಿ ಗೌರವ ವಿದೇಶಿ ನಾಗರಿಕ ಮತ್ತು ವಿಜ್ಞಾನದ ಗೌರವ ಪ್ರಾಧ್ಯಾಪಕ ಎಂಬ ಪ್ರಶಸ್ತಿ, ೧೯೮೧ ರಲ್ಲಿ ಬೊಹೆಮೊ-ಸ್ಲೊವಾಕಿಯಾ ಸೊಸೈಟಿ ಆಫ್ ಜೆರೋಂಟೊಲಜಿ ಡಿಪ್ಲೊಮಾ ಹಾಗೂ ೧೯೮೨ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಜೆರಿಯಾಟ್ರಿಕ್ಸನ ಅಭಿವೃದ್ಧಿಗೆ ಕೊಡುಗೆ ನೀಡಿದ ಅಸ್ಲಾನ್ ಅವರಿಗೆ "ಲಿಯೊನ್ ಬರ್ನಾರ್ಡ್" ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.
ಪರಂಪರೆ
ಬದಲಾಯಿಸಿಅನಾ ಅಸ್ಲಾನರನ್ನು ಸಾಮಾಜಿಕ ಔಷಧಿಯ ಪರಿವರ್ತಕಿ ಎಂದು ಪರಿಗಣಿಸಲಾಗಿತ್ತು. ಬುಚಾರೆಸ್ಟನ ಎಂಡೋಕ್ರೈನಾಲಾಜಿ ಸಂಸ್ಥೆಯಲ್ಲಿ ಶರೀರ ವಿಜ್ಞಾನ ಇಲಾಖೆಯಲ್ಲಿ ಮುಖ್ಯಸ್ಥರಾಗಿದ್ದ ಅವರು ಬುಚಾರೆಸ್ಟ್ ಜೆರಿಯಾಟ್ರಿಕ್ಸ ಸಂಸ್ಥೆಯನ್ನು ಸ್ಥಾಪಿಸಿದರು. ಅನಾ ಅಸ್ಲಾನ್ ಎಂಬ ಪದವು ಜೆರೋಂಟೊಲಜಿ ಎಂಬ ಪದವನ್ನು ಸೃಷ್ಟಿಸಲು ಹೆಸರುವಾಸಿಯಾಯಿತು, ಹಾಗೂ ೧೯೫೯ ರಲ್ಲಿ ರೊಮೇನಿಯನ್ ಸೊಸೈಟಿ ಆಫ್ ಜೆರೋಂಟೊಲಜಿ ಮತ್ತು ಜೆರಿಯಾಟ್ರಿಕ್ಸನ್ನು ಆಯೋಜಿಸಲಾಯಿತು. ರೊಮೇನಿಯನ್ ಸೊಸೈಟಿ ಆಫ್ ಜೆರೋಂಟೋಲಜಿ ತನ್ನ ಸಂಶೋಧನೆಗಳಾದ ಕ್ಲಿನಿಕ್, ಪ್ರಾಯೋಗಿಕ ಮತ್ತು ಸಾಮಾಜಿಕ ಸಂಶೋಧನೆಗಳಲ್ಲಿ ಚಾಲನೆ ಮಾಡಲು ಮೊದಲನೆಯ ಪ್ರಪಂಚ ಎಂದು ಅಸ್ಲಾನ್ ರವರು ಹೇಳುತ್ತಾರೆ.ವಯಸ್ಸಾದ ಪ್ರಕ್ರಿಯೆಯನ್ನು ತಡೆಗಟ್ಟಲು ಚಿಕಿತ್ಸೆ ರೂಪಿಸುವುದರಲ್ಲಿ ಹಾಗೂ ಸಂಘಟನೆ ಮಾಡುವುದರಲ್ಲೂ ಕೂಡ ಕಾರ್ಯ ನಿರ್ವಹಿಸಿದ್ದಾರೆ.ಅವರ ಔಷಧಿಗಳನ್ನು ಜಾನ್ ಎಫ್ ಕೆನಡಿ ಸೇರಿದಂತೆ ವಿಶ್ವದ ಅನೇಕ ಪ್ರಸಿದ್ದರು ಹಾಗೂ ಪ್ರಸಿದ್ದ ರಾಜಕಾರಣಿಗಳು ವಯಸ್ಸಿನಿಂದ ಆಗುವ ಪರಿಣಾಮಗಳನ್ನು ತಡೆಗಟ್ಟಲು ಬಳಸುತ್ತಿದ್ದರು.
ಮರಣ
ಬದಲಾಯಿಸಿಅನಾ ಅಸ್ಲಾನ್ ರವರ ವಿವಾದಾತ್ಮಕ ವಿಸರಣಶಾಸ್ತ್ರಜ್ಞ ಎಂದು ರೊಮೇನಿಯಾದಲ್ಲಿರುವ ಚಿಕಿತ್ಸಾಲಯವು ವಿಶ್ವದಾದ್ಯಂತ ಪ್ರಚಾರಿಸಿ ಸಾವಿರಾರು ಜನರನ್ನು ಆಕರ್ಷಿಸಿತು. ಅವರು ೯೦ರ ದಶಕದ ಆರಂಭದಲ್ಲಿದ್ದರು ಆ ಸಮಯದಲ್ಲಿ ಫ್ರಾನ್ಸ್ ಪ್ರೆಸ್ ಬುಚಾರೆಸ್ಟ್ ವೃತ್ತಪತ್ರಿಕೆಯ ಅಂಕಣದಲ್ಲಿ ಸಣ್ಣ ಐಟಂ ಗುರುವಾರದಂದು ಪ್ರಕಟವಾಗುವವರೆಗೂ ಅವಳ ಸಾವು ಸುಮಾರು ಒಂದು ವಾರದ ವರೆಗೂ ರೊಮೇನಿಯಾದಲ್ಲಿ ಗಮನಿಸಲಿಲ್ಲ ಎಂದು ವರದಿ ಮಾಡಲಾಗಿದೆ.ಅನಾ ಅಸ್ಲಾನ್ ಅವರು ಮೇ ೨೦, ೧೯೯೦ ರಂದು ಮರಣ ಹೊಂದಿದರು. ಅಸ್ಲಾನ್ ರವರು ತಾವು ಸಾಯುವ ಮೊದಲು ಗೆರೋವಿಟಲ್ ಎಚ್ ೩ ಎಂಬ ಮಾದಕ ಪದಾರ್ಥವನ್ನು ಅಭಿವೃದ್ಧಿಪಡಿಸಿದರು, ನೊವೊಕಿನ್ ಎಂಬ ಹೆಸರಿನ ಬ್ರಾಂಡನ್ನು ನೋವು ನಿವಾರಿಸಲು ದಂತವೈಧ್ಯರು ವ್ಯಾಪಕವಾಗಿ ಬಳಸುತ್ತಾರೆ ಮತ್ತು ಹಳೆಯ ಜನರು ವಿರೋಧಿ ಖಿನ್ನತೆಗೆ ಒಳಪಡುತ್ತಾರೆ, ಆದರೆ ವಿರೋಧಿಗಳ ಪ್ರಕಾರ ಪ್ರೊಕೈನ್ ಕೇವಲ ಪರಿಹಾರವಾಗಿತ್ತು. ಜನರಲ್ ಚಾರ್ಲ್ಸ್ ಡಿ ಗೌಲೆ, ನಿಕಿತಾ ಎಸ್, ಇಂದಿರಾಗಾಂಧಿ, ಮಾರ್ಷಲ್, ಟಿಟೊ ಮತ್ತು ಪಶ್ಚಿಮ ಜರ್ಮನಿಯ ಚಾನ್ಸೆಲರ್ ಕೊನ್ರಾಡ್ ಅಡೆನೌರ್ ಹಾಗೂ ನಟಿಯರಾದ ಲಿಲಿಯನ್ ಗಿಶ್, ಮಾರ್ಲೀನ್ ಡೈಬ್ರಿಚ್ ಅನೇಕ ಪ್ರಸಿದ್ಧ ವ್ಯಕ್ತಿಗಳು ಡಾ.ಅಸ್ಲಾನ್ ರವರ ಹತ್ತಿರ ಚಿಕಿತ್ಸೆ ಪಡೆದಿದ್ದಾರೆ.[೨]
ಡಾ.ಅಸ್ಲಾನ್ ರವರು ನಿರ್ಧಿಷ್ಟ ಪ್ರಸಿದ್ದಿಯನ್ನು ಪುನರ್ಯೌವನಗೊಳಿಸುವುದಕ್ಕಾಗಿ ಕ್ರೆಡಿಟ್ ಪಡೆಯಲು ನಿರಾಕರಿಸಿದರು, ಆದರೆ ಆಕೆ ತನ್ನ ಬೆಂಬಲಿಗರಿಂದ ಹಕ್ಕುಗಳನ್ನು ಪಡೆಯಲು ನಿರಾಕರಿಸಲಿಲ್ಲ.
ಉಲೇಖಗಳು
ಬದಲಾಯಿಸಿ