ಅಜಿತ್ ಕೆಂಭಾವಿ
ಅಜಿತ್ ಕೆಂಭಾವಿ (ಜನನ ೧೬ ಆಗಸ್ಟ್ ೧೯೫೦)ರವರೊಬ್ಬ ಭಾರತೀಯ ಖಗೋಳ ಭೌತಶಾಸ್ತ್ರಜ್ಞ . ಅವರು ಪ್ರಸ್ತುತ ಭಾರತದ ಪುಣೆಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾಲಯ ಕೇಂದ್ರ ದಲ್ಲಿ (ಐಯುಸಿಎಎ)[೧] ಪ್ರೊಫೆಸರ್ ಎಮೆರಿಟಸ್ ಆಗಿದ್ದಾರೆ, ಅದರಲ್ಲಿ ಅವರು ಸಂಸ್ಥಾಪಕ ಸದಸ್ಯರೂ ಆಗಿದ್ದರು . ಅವರು ಅಂತರರಾಷ್ಟ್ರೀಯ ಖಗೋಳ ಒಕ್ಕೂಟದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಾರೆ.[೨]
ಅಜಿತ್ ಕೆಂಭಾವಿ | |
---|---|
ಜನನ | ೧೬ ಆಗಸ್ಟ್ ೧೯೫೦ ಹುಬ್ಬಳ್ಳಿ, ಕರ್ನಾಟಕ |
ವಾಸಸ್ಥಳ | ಪುಣೆ, ಮಹಾರಾಷ್ಟ್ರ, ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಭೌತಶಾಸ್ತ್ರ, ಖಗೋಳವಿಜ್ಞಾನ, ಕಂಪ್ಯೂಟರ್ ವಿಜ್ಞಾನ |
ಸಂಸ್ಥೆಗಳು | ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ-ವಿಶ್ವವಿದ್ಯಾಲಯ ಕೇಂದ್ರ |
ಅಭ್ಯಸಿಸಿದ ವಿದ್ಯಾಪೀಠ | ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ |
ಡಾಕ್ಟರೇಟ್ ಸಲಹೆಗಾರರು | ಜಯಂತ್ ನರ್ಲಿಕರ್ |
ಜನನ ಮತ್ತು ಜೀವನ
ಬದಲಾಯಿಸಿಅಜಿತ್ ಕೆಂಭಾವಿ ಯವರು ೧೬ ಆಗಸ್ಟ್ ೧೯೫೦ ರಂದು ಕರ್ನಾಟಕದ ಹುಬ್ಬಳ್ಳಿ ಯಲ್ಲಿ ಜನಿಸಿದರು.[೩] ಇವರು ಬಯೋ - ಟೆಕ್ನಾಲಜಿಸ್ಟ್ ಆಶಾ ಕೆಂಭಾವಿ ಯವರನ್ನು ವಿವಾಹವಾದರು . ಅವರಿಗೆ ಅಲೆನ್ ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಕೆಲಸ ಮಾಡುವ ಅನಿರುಧ್ ಕೆಂಭಾವಿ ಎಂಬ ಮಗನಿದ್ದಾರೆ .[೪]
ಗೌರವಗಳು , ಪ್ರಶಸ್ತಿಗಳು ಮತ್ತು ಸದಸ್ಯತ್ವಗಳು
ಬದಲಾಯಿಸಿ- ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನ ಫೇಲೋ.[೫]
- ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ನ ಫೆಲೋ.
- ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾ ದ ಮಾಜಿ ಅಧ್ಯಕ್ಷ .[೬]
- ಭಾರತೀಯ ಸಾಪೇಕ್ಷತಾ ಮತ್ತು ಗುರುತ್ವಾಕರ್ಷಣೆಯ ಸಂಘದ ಮಾಜಿ ಅಧ್ಯಕ್ಷ .
- ಅಂತರರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟದ ಉಪಾಧ್ಯಕ್ಷ (೨೦೧೬ - ಇಂದಿನವರೆಗೆ) .
- ೨೦೦೪ ರಲ್ಲಿ ಯುಜಿಸಿ ಹರಿ ಓಮ್ ವ್ಯಾಟ್ಸ್ ಪ್ರಶಸ್ತಿ .[೭]
- ರಾಜಾ ರಮಣ ಫೆಲೋಶಿಪ್ - ೨೦೧೭.[೮]
- ನವದೆಹಲಿಯ ಕನ್ಸೋರ್ಟಿಯಂ ಫಾರ್ ಎಜುಕೇಷನಲ್ ಕಮ್ಯುನಿಕೇಷನ್ (ಸಿಇಸಿ)ನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ.
- ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಮತ್ತು ನ್ಯಾಯಾಲಯದ ಸದಸ್ಯ.
- ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ನ ಆಡಳಿತ ಮಂಡಳಿಯ ಅಧ್ಯಕ್ಷ.[೯]
- ಭಾರತದ ಬಾಹ್ಯಾಕಾಶ ಆಯೋಗದ ಸದಸ್ಯ .[೧೦]
ಭಾರತೀಯ ಖಗೋಳಶಾಸ್ತ್ರಕ್ಕೆ ಕೆಂಭಾವಿಯವರ ಕೊಡುಗೆಗಳು
ಬದಲಾಯಿಸಿಭಾರತದಲ್ಲಿ ಸಂಶೋಧನಾ ಕ್ಷೇತ್ರವಾಗಿ ಖಗೋಳವಿಜ್ಞಾನದ ಅಭಿವೃದ್ಧಿಯಲ್ಲಿ ಕೆಂಭಾವಿ ಯವರು ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ. ಐಯುಸಿಎಎ ನಲ್ಲಿ ವಿಸಿಟರ್ ಪ್ರೋಗ್ರಾಂಗಳ ಡೀನ್ ಆಗಿ , ಖಗೋಳ ಸಂಶೋಧನೆಯ ಉತ್ತೇಜನಕ್ಕಾಗಿ ಐಯುಸಿಎಎ ಮತ್ತು ಭಾರತದಾದ್ಯಂತ ನಡೆದ ಹಲವಾರು ಕಾರ್ಯಕ್ರಮಗಳ ಬೆಳವಣಿಗೆಗೆ ಮತ್ತು ಪೋಷಣೆಗೆ ಅವರು ಕಾರಣರಾಗಿದ್ದರು.[೧೧] ಐಯುಸಿಎಎ ನಿರ್ದೇಶಕರಾಗಿ, ಸಧರ್ನ್ ಆಫ್ರಿಕನ್ ಲಾರ್ಜ್ ಟೆಲಿಸ್ಕೋಪ್ (ಎಸ್ಎಎಲ್ಟಿ), ಥರ್ಟಿ ಮೀಟರ್ ಟೆಲಿಸ್ಕೋಪ್ (ಟಿ.ಎಮ್.ಟಿ), ಮತ್ತು ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಶನಲ್ - ವೇವ್ ಅಬ್ಸರ್ವೇಟರಿ (ಎಲ್ಐಜಿಒ) ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಯೋಜನೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಗಟ್ಟಿಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಭಾರತ) ಅಡಿಯಲ್ಲಿ ಇನ್ಫೋನೆಟ್ ಯೋಜನೆಯನ್ನು ಕಲ್ಪಿಸಿಕೊಂಡು ಕಾರ್ಯಾಗತಗೊಳಿಸಿದರು , ಇದು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪ್ರಯೋಜನಗಳನ್ನು ಭಾರತದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ತಂದಿತು .[೧೨]ಕೆಂಭಾವಿ ಯವರು ಜನಸಾಮಾನ್ಯರಲ್ಲಿ ಖಗೋಳಶಾಸ್ತ್ರದ ಮಾಹಿತಿಯನ್ನು ಉತ್ತೇಜಿಸಲು ಹಲವಾರು ಸಾರ್ವಜನಿಕ ಮಾತುಕತೆ ಮತ್ತು ಪ್ರಸ್ತುತಿಗಳನ್ನು ನೀಡಿದ್ದಾರೆ. ಜಯಂತ್ ಮತ್ತು ಮಂಗಳಾ ನರ್ಲಿಕರ್ ಸಹ-ಲೇಖನದ 'ನಭಾತ್ ಹಸ್ರೆ ತಾರೆ' ಎಂಬ ಮರಾಠಿ ಪುಸ್ತಕವನ್ನೂ ಕೆಂಭಾವಿ ಯವರು ಬರೆದಿದ್ದಾರೆ.
ಸಂಶೋಧನಾ ಕ್ಷೇತ್ರಗಳು
ಬದಲಾಯಿಸಿಕೆಂಭಾವಿಯವರು ಪರಿಣತಿಯ ಕ್ಷೇತ್ರಗಳಲ್ಲಿ ಹೆಚ್ಚಾಗಿ ಗುರುತ್ವದ ಸಿದ್ಧಾಂತ ಎಕ್ಸ್‌ಟ್ರಾಗ್ಯಾಲಾಕ್ಟಿಕ್ ಆಸ್ಟ್ರೋನಮಿ ಮತ್ತು ಖಗೋಳವಿಜ್ಞಾನದ ದತ್ತಸಂಚಯ ನಿವರ್ಹಣೆ ಸೇರಿವೆ .[೧೩]
ಉಲ್ಲೇಖಗಳು
ಬದಲಾಯಿಸಿ- ↑ ಐಯುಸಿಎಎ
- ↑ ಐಎಯು ಸಂಸ್ಥೆ
- ↑ ಕೆಂಭಾವಿ ಯವರ ಜನನ
- ↑ revolvy
- ↑ "ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ನ ಫೆಲೋ". Archived from the original on 2016-03-15. Retrieved 2019-07-02.
- ↑ ಅಧ್ಯಕ್ಷ
- ↑ "ಹರಿ ಓಮ್ ವ್ಯಾಟ್ಸ್ ಪ್ರಶಸ್ತಿ" (PDF). Archived from the original (PDF) on 2019-07-02. Retrieved 2019-07-02.
- ↑ ರಾಜಾ ರಮಣ ಫೆಲೋಶಿಪ್
- ↑ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್
- ↑ ಸದಸ್ಯ
- ↑ ಐಯುಸಿಎಎ
- ↑ economic times
- ↑ ಸಂಶೋಧನಾ ಕ್ಷೇತ್ರಗಳು