ಅಕ್ಕಿಹೆಬ್ಬಾಳು

ಭಾರತ ದೇಶದ ಗ್ರಾಮಗಳು

ಅಕ್ಕಿಹೆಬ್ಬಾಳು ಗ್ರಾಮದ ಮಹತ್ವ ಪೂರ್ಣ ವಿಷಯಸಂಪಾದಿಸಿ

ಭಾರತ ದೇಶ ಸ್ವಾತಂತ್ರ್ಯ ಪಡೆಯುವ ಹಿಂದೆ ಅಂದಿನ ಮೈಸೂರು ಪ್ರಾಂತ್ಯ. ಈಗ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಮೈಸೂರು-ಅರಸೀಕೆರೆ ರೈಲು ಮಾರ್ಗ ದಲ್ಲಿರುವ ಅಕ್ಕಿಹೆಬ್ಬಾಳಿನಲ್ಲಿ ಪ್ರಗತಿಯತ್ತ ಕೊಂಡೊಯ್ಯುವ ಎಲ್ಲಾ ಕೆಲಸಗಳು ನಡೆದಿದ್ದವು. ಹರಿಹರಪುರ ಮತ್ತು ಅಕ್ಕಿಹೆಬ್ಬಾಳಿನ ನಡುವೆ ಸುಗಮ ಸಂಚಾರಕ್ಕಾಗಿ ಹೇಮಾವತಿ ನದಿಗೆ ಸೇತುವೆ ನಿರ್ಮಾಣವಾಗಿ ಅದನ್ನು ಉದ್ಘಾಟಿಸಲು ಅಂದಿನ ಮಹಾರಾಜರು ನಾಲ್ವಡಿ ಕೃಷ್ಣರಾಜ ಒಡೆಯರು ಬಂದಿದ್ದರು. ಅಕ್ಕಿಹೆಬ್ಬಾಳಿಗೆ ರೈಲಿನ ಸೌಲಭ್ಯವೂ ಭಾರತ ಸ್ವಾತಂತ್ರ್ಯಕ್ಕಿಂತ ಮೊದಲೇ ಬಂದಿರುವ ಕೊಡುಗೆ ಗಾಂಧೀಜಿ ಕಸ್ತೂರಿಬಾ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅಕ್ಕಿಹೆಬ್ಬಾಳಿಗೆ ಬಂದಾಗ ಅಲ್ಲಿ ರೈಲು ನಿಲ್ಲಿಸಿ ನಿಲ್ದಾಣಗಳಲ್ಲಿ ಸೇರಿರುವ ಜನರನ್ನು ಉದ್ದೇಶಿಸಿ ಸ್ವತಂತ್ರ ಚಳುವಳಿ ಬಗ್ಗೆ ಅವರಿಗೆಲ್ಲ ತಿಳುವಳಿಕೆ ಮತ್ತೆ ರೈಲು ಪ್ರಯಾಣ ಮುಂದುವರಿಸುತ್ತಿದ್ದರಂತೆ ಎಂಬ ಮಾಹಿತಿ ತಿಳಿದ ಮೇಲೆ ಅಕ್ಕಿಹೆಬ್ಬಾಳಿನ ಜನತೆಯ ಅನುಭವಗಳ ಬಗ್ಗೆ ಅಚ್ಚರಿ ಎನಿಸಿತು.

ಮತ್ತೊಂದು ಮಹತ್ವಪೂರ್ಣವಾದ ವಿಷಯವೇನೆಂದರೆ ಅಕ್ಕಿಹೆಬ್ಬಾಳಿನ ಸಮೀಪದ ಹೇಮಾವತಿ ನದಿಯ ಮಧ್ಯೆ ಇರುವ ಹೊಸ ಪಟ್ಟಣದಲ್ಲಿ ತನ್ನ ಶಸ್ತ್ರಾಗಾರವನ್ನು ನಿರ್ಮಿಸಲು ಟಿಪ್ಪುಸುಲ್ತಾನ್ ಉದ್ದೇಶಿಸಿದ್ದ, ಆದರೆ ರಕ್ಷಣಾ ಹಿತದೃಷ್ಟಿಯಿಂದ ಈ ಸ್ಥಳವು ಸುರಕ್ಷಿತವಲ್ಲ ಎಂದು ಮನಗಂಡು ಆ ಯೋಜನೆಯನ್ನು ಕೈಬಿಟ್ಟ ಎಂದು ಹೇಳಲಾಗುತ್ತದೆ. ಇಂದಿಗೂ ಅಲ್ಲಿ ಕಟ್ಟಡದ ಗುರುತುಗಳನ್ನು ನಾವು ಕಾಣಬಹುದು.

ಅಕ್ಕಿಹೆಬ್ಬಾಳಿನ ಭೌಗೋಳಿಕ ಲಕ್ಷಣಸಂಪಾದಿಸಿ

ಕೆ ಆರ್ ಪೇಟೆ ತಾಲ್ಲೂಕು ಒಳಪಡುವ ಪ್ರಮುಖ ಹೋಬಳಿಗಳಲ್ಲಿ ಅಕ್ಕಿಹೆಬ್ಬಾಳು ಒಂದು. ಇದು ತನ್ನದೇ ಆದ ಭೋಗಳಿಕ ವಿಸ್ತೀರ್ಣವನ್ನು ಹೊಂದಿದೆ. ಅಕ್ಕಿಹೆಬ್ಬಾಳು ಸಾಮಾನ್ಯವಾಗಿ ಅನೇಕರಿಗೆ ಪರಿಚಯವಾದವರು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ನಿಂದ ಸ್ವಲ್ಪ ದೂರ 14 ಕಿಲೋಮೀಟರ್ ದೂರದಲ್ಲಿದೆ. ಅಲ್ಲದೆ ಮೈಸೂರು ಹಾಸನ ರಾಜ್ಯ ಹೆದ್ದಾರಿಯಲ್ಲಿ ಬೇರಿಯ ಸಿಗುತ್ತದೆ ಪೂರ್ವಕ್ಕೆ 9 ಕಿಲೋಮೀಟರ್ ದೂರದಲ್ಲಿ ಕಂಡುಬರುತ್ತದೆ. ಮೈಸೂರು ಅರಸೀಕೆರೆ ರೈಲು ಮಾರ್ಗದಲ್ಲಿ ಅಕ್ಕಿಹೆಬ್ಬಾಳು ರೈಲ್ವೆ ನಿಲ್ದಾಣ ಸಿಗುತ್ತದೆ. ರೈಲ್ವೆ ನಿಲ್ದಾಣದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದೆ.

ಡಾ. ಎ. ಎನ್. ಮೂರ್ತಿರಾಯರ ವಿವರಣೆ ಹೀಗಿದೆಸಂಪಾದಿಸಿ

ಹಾಸನದ ರಸ್ತೆಯಲ್ಲಿ ಹೊರಟು, 'ಭೇರ್ಯ,' ದ ಬಳಿ ತಿರುಗುವ ಹಳ್ಳಿಯ ರಸ್ತೆಯನ್ನು ಹಿಡಿದು ನಾಲ್ಕು ಮೈಲಿ ನಡೆಯಬೇಕು. "ಹೊಸ ಅಗ್ರಹಾರ." ರೈಲ್ವೆ ಸ್ಟೇಶನ್ ಗೆ ಹತ್ತಿರ. ಕೃಷ್ಣರಾಜಪೇಟೆ ಕಡೆಯಿಂದಲೂ ಅಲ್ಲಿಗೆ ಹೋಗಬಹುದು. ಮಲೇರಿಯ ರೋಗದಿಂದ ಊರಿನ ಅರ್ಧದಷ್ಟು ಜನ ಮರಣಹೊಂದಿದ ತರುವಾಯ, ಆ ಹಳ್ಳಿಯನ್ನು ಅಲ್ಲಿಂದ ವರ್ಗಾಯಿಸುವುದು ಅನಿವಾರ್ಯವಾಯಿತಂತೆ. ಅದೇ ಊರಿನಿಂದ ಸ್ವಲ್ಪಹತ್ತಿರದಲ್ಲೇ ಒಂದೂವರೆ ಮೈಲಿದೂರದಲ್ಲಿರುವ ಬೋರೆಯಮೇಲೆ ಹೊಸಊರು ಅಸ್ತಿತ್ವಕ್ಕೆ ಬಂತಂತೆ. ಇದು ಅವರಿಗೆ ಯಾರೋ ಹೇಳಿರುವ ವಿಚಾರ.

ಇದು ಮೂರ್ತಿರಾಯರ ಕಾಲದ ವರ್ಣನೆಸಂಪಾದಿಸಿ

ಊರಿಗೆ ಕಾಲಿಟ್ಟಕೂಡಲೇ ಮೊದಲು ಕಾಣಿಸುವುದು, ಚೆನ್ನಿಗರಾಯಸ್ವಾಮಿಯ ಪಾಳುಗುಡಿ. ಊರಿನ ಚಾವಡಿ, ಹನುಮಂತರಾಯನ ಗುಡಿ, ತೆಂಗಿನಮರಗಳು, ಸಿಹಿನೀರಿನ ಬಾವಿ, ಅದರ ಬಳಿ ತೊಳೆದಿಟ್ಟಿರುವ ಬಿಂದಿಗೆಗಳು, ನೀರೆಳೆಯುವ ಹೆಂಗೆಳೆಯರು, ಎಲ್ಲರ ಮನೆಯಮುಂದೆಯೂ ಹಾಕಿದ ವೈವಿಧ್ಯಮಯ ರಂಗವಲ್ಲಿ ಚಿತ್ತಾರ, ದೇವಾಲಯದ ಗೋಪುರಗಳು, ಮತ್ತು ಒಡನಾಡಿಗಳ ತಂಡ. ಅವರಲ್ಲಿ ಕೆಲವರು ಮೂರ್ತಿರಾಯರ ಸಂಗಡ ಕೊಪ್ಪರಿಗೆ ಮಡುವಿನಲ್ಲಿ ಈಜಿದವರು, ತೋಟದಲ್ಲಿ ಎಳನೀರುಕದ್ದವರು, ಕಂಡವರ ತೋಟದಲ್ಲಿ ಸೌತೆಕಾಯಿಕದ್ದವರು, ಇತ್ಯಾದಿ. ಅಕ್ಕಿಹೆಬ್ಬಾಳಿನ ದಾರಿಯಲ್ಲಿ ಯಾವದಿನವಾದರೂ ಹೋಗಲಿ, ಬೆಳಗಿನ ಹೊತ್ತು ತಲೆಯ ಮೆಲೊಂದು ನೀರುತುಂಬಿದ ಕೊಡ, ಅದರಮೇಲೊಂದು ಚೆಂಬು, ಎಡಸೊಂಟದಮೇಲೆ ಮತ್ತೊಂದು ಕೊಡ, ಬಲಗೈಯಲ್ಲೊಂದು ತಾಲಿ- ಇಷ್ಟನ್ನೂ ಹೊತ್ತು, ಸ್ತೋತ್ರಗಳನ್ನು ಹಾಡುತ್ತಾಬರುವ ಹೆಂಗಸರ ಸಾಲನ್ನು ನೋಡುವುದು ಕಣ್ಣಿಗೊಂದು ಹಬ್ಬ. ಆ ನಡಗೆಯ ಲಯದಲ್ಲಿ, ಯಾವ ನಾಟ್ಯರಾಣಿಯ ಕಲೆಯಲ್ಲೂ ಕಾಣದ ಸೊಬಗಿತ್ತು. ನಾಟ್ಯರಾಣಿ ಪ್ರದರ್ಶನಕ್ಕಾಗಿ ಸೌಂದರ್ಯಸೃಷ್ಟಿ ಮಾಡುತ್ತಾಳೆ. ಇವರ ಸೊಬಗು ಅಪ್ರಯತ್ನತಃ ದೇಹದ ಸೌಷ್ಠವದಿಂದ, ಮನಸ್ಸಿನ ಅನುದ್ರಿಕ್ತ ಗೆಲುವಿನಿಂದ ತಾನಾಗಿ ಹೊರಹೊಮ್ಮುತ್ತಿತ್ತು.

ಬಾಲ್ಯದ ನಂಟುಸಂಪಾದಿಸಿ

೩೦ ವರ್ಷಗಳಕಾಲ, ಮೂರ್ತಿರಾಯರಿಗೆ ಅಕ್ಕಿಹೆಬ್ಬಾಳಿನ ನಂಟು. ಅಕ್ಕಿಹೆಬ್ಬಾಳಿನ ಬಳಿಯಲ್ಲೇ, ಹೇಮಗಿರಿ, ಹೇಮಾವತಿ ನದಿ, ಮತ್ತು ಅಲ್ಲಿನ ದೇವರು ನರಸಿಂಹ. ಪ್ರಸನ್ನಮೂರ್ತಿ,ಲಕ್ಷ್ಮೀ ನರಸಿಂಹ. ಲಕ್ಷ್ಮೀ ನರಸಿಂಹಸ್ವಾಮಿಯ ಕೃಪೆಯಿಂದ ಅವರ ವಂಶದ ಎಲ್ಲರೂ ಕಷ್ಟ, ಕೋಟಲೆಗಳಿಂದ ಉಳಿದು ಬದುಕಿದರಂತೆ. ಅಕ್ಕಿಹೆಬ್ಬಾಳಿನಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ತೇರು/ರಥೋತ್ಸವಕ್ಕೆ ಪ್ರಾಶಸ್ತ್ಯ ಹೆಚ್ಚು. ಒಮ್ಮೆ, ತಂದೆಯವರು, ಖಾಯಿಲೆಯಿಂದ ನರಳುತ್ತಿದ್ದಾಗ, ಕಾಣಲು ಅಕ್ಕಿಹೆಬ್ಬಾಳಿಗೆ ಹೋಗುತ್ತಾರೆ. ಅವರಿಗೆ ಲಭ್ಯವಾದದ್ದು ತಂದೆಯವರ ನೆನಪು ಮಾತ್ರ ! ಅವರು ಅಲ್ಲಿಗೆ ತಲುಪುವ ವೇಳೆಗೆ, ತಂದೆಯವರು ಮೃತರಾಗಿದ್ದು "ಅಂತ್ಯಕ್ರಿಯೆ" ಗಳೆಲ್ಲಾ ನಡೆದುಹೋಗಿರುತ್ತದೆ. ರಾಯರು ಬಹಳವಾಗಿ ನೊಂದುಕೊಳ್ಳುತ್ತಾರೆ. ಅಕ್ಕಿಹೆಬ್ಬಾಳಿಗೆ ಅವರ ಮುಂದಿನ ಭೇಟಿ, ಸುಮಾರು ೧೫ ವರ್ಷಗಳ ನಂತರದ್ದು. ಆ ಹೊತ್ತಿಗೆ, ಬಾಲ್ಯದಲ್ಲಿ ನೋಡಿದ್ದ ಅಕ್ಕಿಹೆಬ್ಬಾಳು ಅವರಿಗೆ ಮತ್ತೆ, ಗೋಚರಿಸಲೇಯಿಲ್ಲ. ಆಗಿನ ಅಕ್ಕಿಹೆಬ್ಬಾಳಿಗೂ, ಅವರ ಬಾಲ್ಯದ ಅಕ್ಕಿಹೆಬ್ಬಾಳಿಗೂ, ಅಜ- ಗಜಾಂತರ ವ್ಯತ್ಯಾಸ. ಇವುಗಳನ್ನು ವಿಶ್ಲೇಶಿಸಿ ತಮ್ಮ "ಲಲಿತ ಪ್ರಬಂಧ," ಗಳಲ್ಲಿ ಅದರ ಬಗ್ಗೆ ಒಂದು "ಪುಟಾಣಿ ಪರಿಚ್ಛೇದ" ವನ್ನೇ ಬರೆದಿದ್ದಾರೆ.