೨ಜಿ ತರಂಗಾಂತರ ಹಗರಣ

ಸೆಲ್ ಫೋನ್‌ಗೆ ೨ಜಿ ಚಂದಾ ಕಲ್ಪಿಸಬಹುದಾದ ಕಂಪನ ಹಂಚಿಕೆ ಮಾಡುವ ಮೊಬೈಲ್ ದೂರವಾಣಿ ಕಂಪನಿಗಳಿಗೆ ಅನುಮತಿ ನೀಡುವಾಗ ಅಕ್ರಮವಾಗಿ ಕಡಿಮೆ ಶುಲ್ಕ ವಿಧಿಸುವ ಮೂಲಕ ಸರ್ಕಾರಿ ಅಧಿಕಾರಿಗಳು ೨ಜಿ ಸ್ಪೆಕ್ಟ್ರಮ್ (ವಿದ್ಯುತ್ಕಾಂತೀಯ ತರಂಗಗಳ) ಹಗರಣ ದಲ್ಲಿ ಭಾಗಿಯಾಗಿದ್ದಾರೆ. ೩ಜಿ ಅನುಮತಿ ಮೂಲಕ ಪಡೆದ ಹಣದ ಆಧಾರದ ಮೇಲೆ ಲೆಕ್ಕಿಗ ಮತ್ತು ಸಾಮಾನ್ಯ ಲೆಕ್ಕ ತಪಾಸಣಾಧಿಕಾರಿ ಸಲ್ಲಿಸಿದ ವರದಿಯ ಪ್ರಕಾರ ದೇಶದ ಬೊಕ್ಕಸಕ್ಕಾದ ನಷ್ಟ ೧,೭೬,೩೭೯ ಕೋಟಿ (ಯುಎಸ್$೩೯.೧೬ ಶತಕೋಟಿ). ೨೦೦೮ ರಲ್ಲಿ ೨ಜಿ ಅನುಮತಿಯ ವಿವಾದವು ಆರಂಭವಾಯಿತು, ಆದರೆ ಸಾರ್ವಜನಿಕರ ಗಮನಕ್ಕೆ ಬಂದಿದ್ದು ಮಾತ್ರ ಭಾರತೀಯ ವರಮಾನ ತೆರಿಗೆ ಇಲಾಖೆಯು ರಾಜಕೀಯ ಲಾಬಿಗಾರ್ತಿ ನೀರಾ ರಾಡಿಯಾ ಅವರನ್ನು ತನಿಖೆಗೊಳಪಡಿಸಿದಾಗ ಹಾಗೂ ಭಾರತೀಯ ಸರ್ವೋಚ್ಛ ನ್ಯಾಯಾಲಯವು ಸುಬ್ರಮಣಿಯಮ್ ಸ್ವಾಮಿ ಅವರ ದೂರನ್ನು ದಾಖಲೆಗೆ ತೆಗೆದುಕೊಂಡಾಗಲೇ.

೨೦೦೮ ರಲ್ಲಿ ವರಮಾನ ತೆರಿಗೆ ಇಲಾಖೆಯು ಗೃಹ ಸಚಿವಾಲಯ ಹಾಗೂ ಪ್ರಧಾನಮಂತ್ರಿ ಕಚೇರಿಯಿಂದ ಆದೇಶ ನೀಡಲ್ಪಟ್ಟ ನಂತರ ನೀರಾ ರಾಡಿಯಾ ಅವರ ದೂರವಾಣಿ ಕರೆಗಳನ್ನು ಟ್ಯಾಪ್ ಮಾಡಲು ಆರಂಭಿಸಿತು. ನೀರಾ ರಾಡಿಯಾ ಓರ್ವ ಬೇಹುಗಾರ್ತಿ ಎಂಬ ಆರೋಪದ ಕುರಿತು ಆಗಲೇ ನಡೆಯುತ್ತಿದ್ದ ಪ್ರಕರಣದ ತನಿಖೆಗೆ ಸಹಕಾರಿಯಾಗಲೆಂಬಂತೆ ಹೀಗೆ ಮಾಡಲಾಗಿತ್ತು.[]..

ಸುಮಾರು ೩೦೦ಕ್ಕಿಂತಲೂ ಹೆಚ್ಚು ದಿನಗಳ ಕಾಲ ಧ್ವನಿಮುದ್ರಿಸಿಕೊಳ್ಳಲಾಗಿದ್ದ ಅನೇಕ ದೂರವಾಣಿ ಮಾತುಕತೆಗಳು ಮಾಧ್ಯಮಗಳಿಗೆ ಬಹಿರಂಗಗೊಂಡವು. ಬಹಿರಂಗಗೊಂಡ ಅತಿ ವಿವಾದ ಪಡೆದ ಧ್ವನಿಮುದ್ರಿಕೆಯು ಮಾಧ್ಯಮಗಳಲ್ಲಿ ರಾಡಿಯಾ ಟೇಪ್ ವಿವಾದ ಎಂದು ಪ್ರಚಾರ ಪಡೆಯಿತು. ದಾಖಲೆಯು ರಾಜಕಾರಣಿಗಳು, ಪತ್ರಕರ್ತರು ಮತ್ತು ಕಾರ್ಪೋರೇಟ್‌ಗಳ ಮಧ್ಯೆ ನಡೆದ ಸ್ಫೋಟಕ ಮಾತುಕತೆಗಳನ್ನು ಒಳಗೊಂಡಿತ್ತು. ರಾಜಕಾರಣಿಗಳಾದ ಕರುಣಾನಿಧಿ ಮತ್ತು ಅರುಣ್ ಜೆಟ್ಲಿ[ಸೂಕ್ತ ಉಲ್ಲೇಖನ ಬೇಕು], ಅಲ್ಲದೇ ಬರ್ಕಾ ದತ್ ಮತ್ತು ವೀರ್ ಸಾಂಘ್ವಿಯಂತಹ ಪತ್ರಕರ್ತರು ಮತ್ತು ಟಾಟಾದಂತಹ ಕೈಗಾರಿಕಾ ಗುಂಪುಗಳು ಈ ಸ್ಫೋಟಕ ಧ್ವನಿಮುದ್ರಿಕೆಯಲ್ಲಿ ಪಾಲ್ಗೊಂಡಿದ್ದರು ಅಥವಾ ಪ್ರಸ್ತುತಪಡಿಸಲ್ಪಟ್ಟಿದ್ದರು.

ಪಾಲ್ಗೊಂಡ ಪಕ್ಷಗಳು

ಬದಲಾಯಿಸಿ

ಅನುಮತಿಯ ಮಾರಾಟ ಇರುವ ನಾಲ್ಕು ಗುಂಪುಗಳ ಅಸ್ತಿತ್ವ ಕುರಿತು ಗಮನ ಸೆಳೆದವು – ಅನುಮತಿಯನ್ನು ಮಾರುವ ಅಧಿಕಾರ ಹೊಂದಿದ್ದ ರಾಜಕಾರಣಿಗಳು, ಕಾರ್ಯನೀತಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಒತ್ತಡ ಹೇರಿದ್ದ ಇಲಾಖಾಧಿಕಾರಿಗಳು, ಅನುಮತಿಗಳನ್ನು ಖರೀದಿಸುತ್ತಿದ್ದ ನಿಗಮಗಳು ಮತ್ತು ರಾಜಕಾರಣಿಗಳು ಮತ್ತು ನಿಗಮಗಳ ಮಧ್ಯೆ ಮಧ್ಯವರ್ತಿಗಳಾಗಿ ಓರ್ವ ಅಥವಾ ಇತರ ಗುಂಪಿನಂತೆ ಕೆಲಸ ಮಾಡಿದ ಪತ್ರಕರ್ತರು.

ಪಾಲ್ಗೊಂಡಿರುವ ರಾಜಕಾರಣಿಗಳು

ಬದಲಾಯಿಸಿ
  • ಎ. ರಾಜಾ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಮಾಜಿ ಸಚಿವ, ವಿವಾದಾತ್ಮಕ ದ್ವಿತೀಯ ಸುತ್ತಿನ ವಿದ್ಯುತ್ಕಾಂತೀಯ ತರಂಗಗಳ ನಿಗದಿಯು ಆರಂಭವಾದಾಗ ಮಂತ್ರಿಯಾಗಿದ್ದರು. ನೀಲಗಿರಿಸ್ ಕ್ಷೇತ್ರದಿಂದ ಆರಿಸಿ ಬಂದ ದ್ರಾವಿಡ ಮುನ್ನೆತ್ರ ಖಳಗಂ ಪಕ್ಷದ ಲೋಕಸಭಾ ಸದಸ್ಯರಾದ ಎ.ರಾಜಾ ಅವರಿಂದ ಸಾರ್ವಜನಿಕ ಒತ್ತಡದ ಮೇರೆಗೆ ರಾಜೀನಾಮೆ ಪಡೆಯಲಾಯಿತು.
  • ಸುಬ್ರಮಣಿಯಮ್ ಸ್ವಾಮಿ, ಕಾರ್ಯನಿರತ ನ್ಯಾಯವಾದಿ ಮತ್ತು ರಾಜಕಾರಣಿ, ಇವರು ಬರೆದ ಪತ್ರಗಳು ಪ್ರಧಾನ ಮಂತ್ರಿಗಳು ಕ್ರಮ ಕೈಗೊಳ್ಳಲು ಪ್ರಯತ್ನಿಸುವಂತೆ ಮತ್ತು ಪ್ರಮಾಣ ಪತ್ರ ನೀಡುವಂತೆ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿನ ಪ್ರಕರಣಗಳು ವಿವಾದದ ಮೇಲೆ ಸಾರ್ವಜನಿಕ ವಲಯದಲ್ಲಿ ಬೆಳಕು ಚೆಲ್ಲುವಂತೆ ಮಾಡಿದವು.
  • ಅರುಣ್ ಶೌರಿ, ೨೦೦೩ರಲ್ಲಿ ಬಿಜೆಪಿ ಆಡಳಿತವಿದ್ದ ಸಮಯದಲ್ಲಿ ದೂರ ಸಂಪರ್ಕ ಸಚಿವರಾಗಿದ್ದರು. ವಿವಾದಿತ ತಟಸ್ಥ ತಂತ್ರಜ್ಞಾನವಾದ “ಏಕೀಕೃತ ಅನುಮತಿಯ ಪ್ರವೇಶಾಧಿಕಾರ”ವನ್ನು ಪರಿಚಯಿಸಿದ್ದು ಅರುಣ್ ಶೌರಿ. ಇದು ಮೊಬೈಲ್ ದೂರವಾಣಿ ಸೇವೆ ಒದಗಿಸಲು ಅತ್ಯಂತ ಕಡಿಮೆ ಶುಲ್ಕದಲ್ಲಿ ಸ್ಥಿರ ದೂರವಾಣಿ ನಿರ್ವಾಹಕರಿಗೆ ನಿಗದಿತ ಡಬ್ಲ್ಯೂಎಲ್ಎಲ್ ರೀತಿಯ ಮೊದಲಿನಲ್ಲಿ (ವೈರ್ ಲೆಸ್ ಇನ್ ಲೋಕಲ್ ಲೂಪ್) ಮತ್ತು ನಂತರ ಅವಕಾಶ ಒದಗಿಸಿತು. ಇದರ ನಂತರ ಮೊಬೈಲ್ ನಿರ್ವಾಹಕರು ಮತ್ತು ಬಿಜೆಪಿ ಸರ್ಕಾರದ ಮಧ್ಯೆ ನ್ಯಾಯಾಲಯದ ಮೂಲಕ ನಡೆದ ಒಪ್ಪಂದವು ಸಂಪೂರ್ಣ ಚಲನಶೀಲವಾಗಿತ್ತು. ಇದು ಹೂಡಿಕೆದಾರರಾದ ಟಾಟಾ ಹಾಗೂ ರಿಲಯನ್ಸ್ ಕಂಪನಿಗಳಿಗೆ ಈ ಮೊದಲು ಬಿಪಿಎಲ್ ಮೊಬೈಲ್ ನಂತಹ ನಿರ್ವಾಹಕರು ಭರಿಸಿದ್ದ ಭಾರೀ ಪ್ರಮಾಣದ ಶುಲ್ಕ ಪಾವತಿಸದೆಯೇ ದೂರವಾಣಿ ವಿದ್ಯುತ್ಕಾಂತೀಯ ತರಂಗವನ್ನು ಪಡೆಯಲು ಸಹಕರಿಸಿತು.
  • ೧೯೯೯ ಮತ್ತು ೨೦೦೩ರಲ್ಲಿ ಪ್ರಮೋದ್ ಮಹಾಜನ್ ದೂರಸಂಪರ್ಕ ಸಚಿವರಾಗಿದ್ದವರು. ಬಿಜೆಪಿ ಸರ್ಕಾರವು ರಾಜಕೀಯ ಪಕ್ಷಗಳು ಮತ್ತು ಆರ್ಥಿಕ ತಜ್ಞರಿಂದ ಖಂಡಿಸಲ್ಪಟ್ಟ ಅನುಮತಿ ಆಧಾರಿತ ಪ್ರಚಲಿತ ಪದ್ಧತಿಯನ್ನು ಬದಲಾಯಿಸಿ ಆದಾಯ ಹಂಚಿಕೆಯ ಮಾದರಿಯ ವಿವಾದಿತ ನಿರ್ಧಾರ ಕೈಗೊಂಡಾಗ ಶ್ರೀಯುತ ಮಹಾಜನ್ ಅವರು ಸಚಿವರಾಗಿದ್ದರು.[] ಲೆಕ್ಕಿಗ ಹಾಗೂ ಸಾಮಾನ್ಯ ಲೆಕ್ಕ ಪರಿಶೋಧಕರು ಈ ನಿರ್ಧಾರದಿಂದ ಆದ ನಷ್ಟಕ್ಕಾಗಿ ಪ್ರತಿಕೂಲ ವರದಿಯಿಂದ ಸಮನ್ಸ್ ಜಾರಿ ಮಾಡಿತು.೬೪,೦೦೦ ಕೋಟಿ (ಯುಎಸ್$೧೪.೨೧ ಶತಕೋಟಿ) ಎ. ರಾಜಾ ಅವರು ತಾವು ಬಿಜೆಪಿಯ ಕಾರ್ಯನೀತಿಯನ್ನು ೨ಜಿ ನಿಗದಿಯಲ್ಲಿ ಪಾಲಿಸುತ್ತಿದ್ದರು ಮತ್ತು ೩ಜಿ ವಿದ್ಯುತ್ಕಾಂತೀಯ ತರಂಗದ ಆಧಾರದ ಮೇಲೆ ೨ಜಿ ಅನುಮತಿಗಾಗಿ ದರ ವಿಧಿಸುವುದು ಅನ್ಯಾಯವಾಗುತ್ತದೆ ಎಂದು ರಕ್ಷಣಾತ್ಮಕವಾಗಿ ವಾದಿಸಿದ್ದಾರೆ. ನಿರ್ಧಾರವು ಘೋಷಿಸಲ್ಪಡುವ ಕೆಲವೇ ದಿನಗಳ ಮೊದಲು ದೂರಸಂಪರ್ಕ ಖಾತೆ ಸಚಿವರಾಗಿದ್ದ ಜಗಮೋಹನ್ ಅವರನ್ನು ಬದಲಾಯಿಸಿ ವಿವಿಧ ನಿಗಮಗಳೊಂದಿಗೆ ಸ್ನೇಹ ಹೊಂದಿದ್ದ ಪ್ರಮೋದ್ ಮಹಾಜನ್ ಅವರನ್ನು ತಂದು ಕೂಡ್ರಿಸಲಾಯಿತು. ಕಾರ್ಯನೀತಿಯಲ್ಲಿನ ಈ ಹಠಾತ್ ಬದಲಾವಣೆಯ ದೊಡ್ಡ ಲಾಭವೆಂದರೆ ರಿಲಯನ್ಸ್ ಇನಫೋಕಾಮ್ ಸಾವಿರಾರು ಕೋಟಿಗಳ ವಿದ್ಯುತ್ಕಾಂತೀಯ ತರಂಗಗಳನ್ನು ಹೆಚ್ಚುವರಿ ಅನುಮತಿ ಶುಲ್ಕದಲ್ಲಿ ಒಂದು ಬಿಡಿಗಾಸನ್ನು ಪಾವತಿಸದೆ ಪಡೆಯಿತು. ಪ್ರಮೋದ್ ಮಹಾಜನ್ ಮತ್ತು ಅವರ ಆಪ್ತ ಸ್ನೇಹಿತರು ರಿಲಯನ್ಸ್ ಕೈಗಾರಿಕೆಯ ಬೇನಾಮಿ ಶೇರುಗಳ “ಕಾಣಿಕೆ” ಪಡೆದರು.[]

ಪಾಲ್ಗೊಂಡಿರುವ ಅಧಿಕಾರಿಗಳು

ಬದಲಾಯಿಸಿ
  • ಎಸ್ ಬೆಹುರಿಯಾ, ದೂರಸಂಪರ್ಕ ಇಲಾಖೆ ಮಾಜಿ ಕಾರ್ಯದರ್ಶಿ, ೨ಜಿ ನಿಗದಿಪಡಿಸುವ ಸಂದರ್ಭದಲ್ಲಿ ಡಿಓಟಿಯನ್ನು ಪೂರೈಸಿದ ವ್ಯಕ್ತಿ.
  • ಪ್ರದೀಪ್ ಬೈಜಲ್, ಇವರು ಟಿಆರ್ಎಐ ಮುಖ್ಯಸ್ಥರಾಗಿದ್ದಾಗ ಖಾತ್ರಿಯಾಗದ ದೂರಸಂಪರ್ಕ ಕಂಪನಿಗಳಿಗೆ ಕಾರ್ಯನೀತಿಯನ್ನು ರೂಪಿಸಿದ ಆರೋಪ ಹೊಂದಿರುವ ವ್ಯಕ್ತಿ,ನಿವೃತ್ತಿಯ ನಂತರ ಬೈಜಲ್ ಅವರು ನೀರಾ ರಾಡಿಯಾ ಅವರು ನಡೆಸುವ ವಾಣಿಜ್ಯ ವ್ಯವಹಾರ ಸಲಹಾ ಸಂಸ್ಥೆ ನೋಯೆಸಿಸ್‌ನ್ನು ಸೇರಿದರು.[][][] ಎ ರಾಜಾ ಅವರು 2003 ರ ಬೈಜಲ್ ಅವರ ನಿರ್ಧಾರಗಳನ್ನು ಆಧಾರವಾಗಿಟ್ಟುಕೊಂಡು ಪರಾಮರ್ಶಿಸಿ 2008 ರಲ್ಲಿ ನಿರ್ಧಾರ ಪಡೆದರು. ಇತ್ತೀಚೆಗೆ ತನಿಖೆಗಾಗಿ ಸಿಬಿಐನಿಂದ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದವು.[]

ಒಳಗೊಂಡಿರುವ ನಿಗಮಗಳು

ಬದಲಾಯಿಸಿ
  • ಯುನಿಟೆಕ್ ಗ್ರುಪ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ದೂರಸಂಪರ್ಕ ಕೈಗಾರಿಕೆಯನ್ನು ೨ಜಿ ಹರಾಜಿನ ಜೊತೆ ಪ್ರವೇಶಿಸುತ್ತಿದೆ; ಇದು ತನ್ನ ಶೇ. ೬೦ ರಷ್ಟು ಕಂಪನಿ ಹೊಣೆಯನ್ನು ದೊಡ್ಡ ಪ್ರಮಾಣದ ಲಾಭಕ್ಕೆ ಟೆಲಿನಾರ್ ಎಂಬ ಕಂಪನಿಗೆ ಅನುಮತಿಯನ್ನು ಖರೀದಿಸಿದ ನಂತರ ಮಾರಾಟ ಮಾಡಿತು. (ಟಾವರ್ ಗಳಿಗಾಗಿ ಭೂಮಿ ಬೆಲೆಯ ಆಸ್ತಿಗಳನ್ನೂ ಸೇರಿಸಿ)[]
  • ಸ್ವಾನ್ ಟೆಲಿಕಾಂ ತನ್ನ ಶೇ. ೪೫ ರಷ್ಟು ಕಂಪನಿ ಹೊಣೆಯನ್ನು ದೊಡ್ಡ ಮೊತ್ತದ ಲಾಭಕ್ಕಾಗಿ ಅನುಮತಿ ಖರೀದಿಯ ನಂತರ ಎಮಿರೇಟ್ಸ್ ಟೆಲಿಕಮ್ಯುನಿಕೇಶನ್ಸ್ ಕಾರ್ಪೋರೇಶನ್ (ಎಟಿಸಲಟ್) ಗೆ ಮಾರಾಟ ಮಾಡಿತು.[]
  • ಲೂಪ್ ಮೊಬೈಲ್
  • ವಿಡಿಯೋಕಾನ್ ಟೆಲಿಕಮ್ಯುನಿಕೇಶನ್ಸ್ ಲಿಮಿಟೆಡ್
  • ಎಸ್ ಟೆಲ್
  • ರಿಲಯನ್ಸ್ ಕಮ್ಯುನಿಕೇಶನ್ಸ್
  • ಸಿಸ್ಟೆಮಾ ಶ್ಯಾಮ್ ಮೊಬೈಲ್ (ಎಂಟಿಎಸ್) – ಸಿಸ್ಟೆನಾ ಮೊಬೈಲ್ ರಶಿಯಾ
  • ಟಾಟಾ ಕಮ್ಯುನಿಕೇಶನ್ಸ್

ಒಳಗೊಂಡಿರುವ ಮಾಧ್ಯಮ ವ್ಯಕ್ತಿಗಳು ಮತ್ತು ಲಾಬಿಗಾರರು

ಬದಲಾಯಿಸಿ
  • ನೀರಾ ರಾಡಿಯಾ, ಮಾಜಿ ವಿಮಾನ ಎಂಟ್ರೆಪ್ಯುನರ್‌ನಿಂದ ನಿಗಮ ಲಾಬಿಗಾರ್ತಿಯಾಗಿ ಬದಲಾದವರು. ಇವರು ರಾಜಕಾರಣಿಗಳು ಮತ್ತು ನಿಗಮಗಳೊಂದಿಗೆ ನಡೆಸಿದ ಮಾತುಕತೆಯು ಸರ್ಕಾರಿ ಅಧಿಕಾರಿಗಳಿಂದ ದಾಖಲಿಸಿಕೊಳ್ಳಲ್ಪಟ್ಟಿತು ಮತ್ತು ಬಹಿರಂಗಗೊಳ್ಳಲ್ಪಟ್ಟು ನೀರಾ ರಾಡಿಯಾ ಟೇಪ್ಸ್ ವಿವಾದವನ್ನು ಹುಟ್ಟುಹಾಕಿತು.
  • ಬರ್ಕಾ ದತ್, ಎ. ರಾಜಾ ಅವರು ಸಚಿವರಾಗಿ ನೇಮಕವಾಗುವಲ್ಲಿ ಲಾಬಿ ನಡೆಸಿದ ಆರೋಪ ಹೊಂದಿರುವ ಎನ್‌ಡಿಟಿವಿ ಯ ಪತ್ರಕರ್ತೆ
  • ವೀರ್ ಸಾಂಘ್ವಿ, ನೀರಾ ರಾಡಿಯಾ ಟೇಪ್ಸ್‌ನಲ್ಲಿ ಲೇಖನಗಳನ್ನು ತಿದ್ದಿ ದೋಷಾರೋಪಣೆಯನ್ನು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಲ್ಪಟ್ಟಿರುವ ಹಿಂದೂಸ್ತಾನ್ ಟೈಮ್ಸ್ ಸಂಪಾದಕರು.

ಹಣದ ಕೊರತೆ

ಬದಲಾಯಿಸಿ

ಎ. ರಾಜಾ ಅವರು ೨ಜಿ ವಿದ್ಯುತ್ಕಾಂತೀಯ ತರಂಗದ ಅನುಮತಿಗಳನ್ನು ಅದರ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮಾರಲು ವ್ಯವಸ್ಥೆ ಮಾಡಿದರು. ಸ್ವಾನ್ ಟೆಲಿಕಾಂ ಎಂಬ ಹೊಸ ಸಂಸ್ಥೆಯು ಅಲ್ಪ ಸಂಪತ್ತಿನೊಂದಿಗೆ ಅನುಮತಿಯನ್ನು ಖರೀದಿಸಿತು.೧,೫೩೭ ಕೋಟಿ (ಯುಎಸ್$೩೪೧.೨೧ ದಶಲಕ್ಷ)[] ಇದರ ನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ಮಂಡಳಿಯು ಸಂಸ್ಥೆಯ ಶೇ.೪೫ ರಷ್ಟನ್ನು ಎಟಿಸಾಲಾಟ್‌ಗೆ ಮಾರಿತು.೪,೨೦೦ ಕೋಟಿ (ಯುಎಸ್$೯೩೨.೪ ದಶಲಕ್ಷ) ಅದೇ ರೀತಿಯಲ್ಲಿ ಮೊದಲು ಬಂಡವಾಳವನ್ನು ಭೂ ವ್ಯವಹಾರದಲ್ಲಿ ತೊಡಗಿಸಿ ದೂರಸಂಪರ್ಕದಲ್ಲಿ ತೊಡಗಿಸದಿದ್ದ ಯುನಿಟೆಕ್ ಗ್ರುಪ್ ಎಂಬ ಸಂಸ್ಥೆಯು ಅನುಮತಿಯನ್ನು೧,೬೬೧ ಕೋಟಿ (ಯುಎಸ್$೩೬೮.೭೪ ದಶಲಕ್ಷ) ಖರೀದಿಸಿತು ಮತ್ತು ನಂತರ ಸಂಸ್ಥೆಯ ಮಂಡಳಿಯು ಶೀಘ್ರದಲ್ಲಿ ತನ್ನ ನಿಸ್ತಂತು ವಿಭಾಗದ೬,೨೦೦ ಕೋಟಿ (ಯುಎಸ್$೧.೩೮ ಶತಕೋಟಿ) ಶೇ. ೬೦ ರಷ್ಟು ಭಾದ್ಯತೆಯನ್ನು ಟೆಲಿನಾರ್‌ಗೆ ಮಾರಿತು.[] ಅನುಮತಿಗಳು ಮಾರುಕಟ್ಟೆ ಬೆಲೆಯಲ್ಲಿ ಮಾರಾಟವಾಗಬೇಕಿದ್ದದ್ದು ಅನುಮತಿಗಳನ್ನು ಮಾರುವ ರೀತಿಯಾಗಿತ್ತು ಮತ್ತು ನಿಜವಾಗಿ ಅನುಮತಿಗಳು ತಕ್ಷಣ ಭಾರೀ ಲಾಭಕ್ಕೆ ಪುನರ್ ಮಾರಾಟವಾಗಿರುವುದು ಮಾರಾಟದ ಕರ್ತೃವು ಅನುಮತಿಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆಯಲ್ಲಿ ಮಾರಿದ್ದಾನೆ ಎಂಬುದನ್ನು ತೋರಿಸುತ್ತದೆ.

ಒಂಬತ್ತು ಸಂಸ್ಥೆಗಳು ಅನುಮತಿಗಳನ್ನು ಖರೀದಿಸಿದವು ಮತ್ತು ಸಾಮೂಹಿಕವಾಗಿ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ದೂರಸಂಪರ್ಕ ವಿಭಾಗದ ಸಚಿವಾಲಯಕ್ಕೆ ಹಣವನ್ನು ಸಲ್ಲಿಸಿದವು.೧೦,೭೭೨ ಕೋಟಿ (ಯುಎಸ್$೨.೩೯ ಶತಕೋಟಿ).[] ಭಾರತದ ಲೆಕ್ಕಿಗ ಮತ್ತು ಸಾಮಾನ್ಯ ಲೆಕ್ಕ ಪರಿಶೋಧಕರಿಂದ ಈ ಅನುಮತಿಯ ಹಣದ ಮೊತ್ತವು ನಿರೀಕ್ಷಿಸಲ್ಪಟ್ಟಿತು೧,೭೬,೭೦೦ ಕೋಟಿ (ಯುಎಸ್$೩೯.೨೩ ಶತಕೋಟಿ).[೧೦]

ಮಾಧ್ಯಮ ಮತ್ತು ಸರ್ಕಾರದ ನಡುವಿನ ಸಂಬಂಧ

ಬದಲಾಯಿಸಿ

ಓಪನ್ ಮತ್ತು ಔಟ್‌ಲುಕ್ ನಂತಹ ಮಾಧ್ಯಮ ಮೂಲಗಳು ಬರ್ಕಾ ದತ್ ಮತ್ತು ವೀರ್ ಸಾಂಘ್ವಿ ಅವರು ನಿಗಮದ ಲಾಭಿಗಾರ್ತಿ ನೀರಾ ರಾಡಿಯಾ ಅವರು ಎ. ರಾಜಾ ಅವರ ನಿರ್ಧಾರಗಳಲ್ಲಿ ಪ್ರಭಾವ ಬೀರುತ್ತಿದ್ದರು ಎಂಬುದನ್ನು ತಿಳಿದಿದ್ದರು ಎಂದು ವರದಿ ಮಾಡಿದವು. ಟೀಕಾಕಾರರು ದತ್ ಮತ್ತು ಸಾಂಘ್ವಿ ಅವರನ್ನು ಸರ್ಕಾರ ಮತ್ತು ಮಾಧ್ಯಮ ಉದ್ಯಮಗಳ ನಡುವಿನ ಭ್ರಷ್ಟಾಚಾರವನ್ನು ಅರಿತಿರುವುದು, ಈ ಭ್ರಷ್ಟಾಚಾರದ ಚಟುವಟಿಕೆಯನ್ನು ಪ್ರೋತ್ಸಾಹಿಸಿರುವುದು ಮತ್ತು ಭ್ರಷ್ಟಾಚಾರವನ್ನು ಹೊರ ತರುವ ವರದಿಗಳನ್ನು ನಿಗ್ರಹಿಸಿದ್ದಕ್ಕಾಗಿ ದೂಷಿಸಿದರು.[೧೧]

ಬಹಿರಂಗವಾಗಿದ್ದರ ಮೇಲೆ ರತನ್ ಟಾಟಾ ಹೂಡಿದ ಅರ್ಜಿಗಳು

ಬದಲಾಯಿಸಿ

ನೀರಾ ರಾಡಿಯಾ ಮತ್ತು ರತನ್ ಟಾಟಾ ಮಧ್ಯೆ ನಡೆದ ಮಾತುಕತೆಗಳ ಧ್ವನಿಮುದ್ರಿಕೆಗಳು ಸಾರ್ವಜನಿಕ ವಲಯಕ್ಕೆ ಬಹಿರಂಗವಾಯಿತು. ಟಾಟಾ ಅವರು ಸರ್ಕಾರವು ತಮ್ಮ ಖಾಸಗಿ ಹಕ್ಕನ್ನು ಅರಿಯಬೇಕು ಮತ್ತು ಬಹಿರಂಗಗೊಂಡಿದ್ದಕ್ಕಾಗಿ ಹೊಣೆಗಾರಿಕೆ ಹೊರಬೇಕು ಎಂದು ಗೃಹ ಸಚಿವಾಲಯ, ಸಿಬಿಐ, ಭಾರತೀಯ ವರಮಾನ ತೆರಿಗೆ ಇಲಾಖೆ, ದೂರಸಂಪರ್ಕ ಇಲಾಖೆ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗಳು ಉತ್ತರದಾಯಿಗಳೆಂದು ಜವಾಬ್ದಾರಿ ಹೊರಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಿದರು.[೧೨]

ಹಗರಣಕ್ಕೆ ಪ್ರತಿಕ್ರಿಯೆ

ಬದಲಾಯಿಸಿ

ಹಿಂದಿನ ೨೦೧೦ ರ ನವೆಂಬರಿನಲ್ಲಿ ಜಯಲಲಿತಾ ಅವರು ಎ. ರಾಜಾ ಅವರನ್ನು ಭ್ರಷ್ಟಾಚಾರದ ಆರೋಪಗಳಿಂದ ರಕ್ಷಿಸುತ್ತಿರುವುದಕ್ಕೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ದೂಷಿಸಿದರು ಮತ್ತು ಎ. ರಾಜಾ ಅವರ ರಾಜಿನಾಮೆಯನ್ನು ಕೇಳಿದರು.[೧೩] ನವೆಂಬರ್ ಮಧ್ಯದಲ್ಲಿ ಎ. ರಾಜಾ ರಾಜಿನಾಮೆ ನೀಡಿದರು.[೧೪]

ನವೆಂಬರ್ ಮಧ್ಯದಲ್ಲಿ ಲೆಕ್ಕಿಗ ವಿನೋದ್ ರಾಯ್ ಅವರು ಯುನಿಟೆಕ್, ಎಸ್ ಟೆಲ್, ಲೂಪ್ ಮೊಬೈಲ್, ಡಾಟಾಕಾಮ್ (ವೀಡಿಯೋಕಾನ್) ಮತ್ತು ಎಟಿಸಾಲಟ್ ಗಳಿಗೆ ಶೋಕಾಸ್ ನೋಟೀಸನ್ನು ನೀಡಿ, ಎಲ್ಲ ೮೫ ಅನುಮತಿಗಳು ಅರ್ಜಿ ಹಾಕುವ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಇರದಿದ್ದ ಈ ಬಂಡವಾಳಶಾಹಿ ಸಂಸ್ಥೆಗಳಿಗೆ ಮತ್ತು ಇತರ ಅಕ್ರಮ ದಾರಿಗಳಲ್ಲಿ ನೀಡಲ್ಪಟ್ಟಿವೆ ಎಂಬುದನ್ನು ಸಮರ್ಥಿಸಿಕೊಂಡಿತು.[೧೫] ಈ ಸಂಸ್ಥೆಗಳು ದೊಡ್ಡ ಪ್ರಮಾಣದ ದಂಡವನ್ನು ತೆರಲಿವೆ ಆದರೆ, ಪ್ರಸ್ತುತ ಕೆಲವು ಗ್ರಾಹಕ ಸೇವೆ ಒದಗಿಸುತ್ತಿರುವುದರಿಂದ ಅವರ ಅನುಮತಿಗಳು ರದ್ದಾಗುವುದಿಲ್ಲ ಎಂದು ಕೆಲವು ಮಾಧ್ಯಮ ಮೂಲಗಳು ಚರ್ಚಿಸಿದವು.[೧೫]

ವಿವಿಧ ಆರೋಪಗಳಿಗೆ ಉತ್ತರವಾಗಿ ಭಾರತ ಸರ್ಕಾರವು ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ಜವಾಬ್ದಾರರನ್ನಾಗಿಸಿ ಬದಲಾಯಿಸಿತು, ಜೊತೆಗೆ ಮಾನವ ಸಂಪನ್ಮೂಲ ಇಲಾಖೆಯ ಕೇಂದ್ರ ಸಚಿವರಾಗಿರುವ ಕಪಿಲ್ ಸಿಬಲ್ ಅವರಿಗೆ ಈ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಿಕೊಟ್ಟಿತು.ಶ್ರೀಯುತ ಸಿಬಲ್ ಅವರು ವಾದಿಸುವುದೆಂದರೆ "ಕಾಲ್ಪನಿಕ" ನಷ್ಟವು ತಪ್ಪಾದ ಲೆಕ್ಕಾಚಾರದಿಂದ ಹೇಳಲ್ಪಟ್ಟಿದೆ ಮತ್ತು ನಿಜವಾದ ಆಗಿರುವ ನಷ್ಟ ಶೂನ್ಯ ಎಂದು ಸಮರ್ಥಿಸುತ್ತಾರೆ.[೧೬][೧೭]

ಉಲ್ಲೇಖಗಳು

ಬದಲಾಯಿಸಿ
  1. http://indiatoday.intoday.in/site/Story/123400/2G%20Scam/complaint-by-radias-staffer-led-to-her-phone-tapping.html
  2. ದ ಎಬಿಸಿ ಆಫ್ ದ ೨ಜಿ ಸ್ಕ್ಯಾಮ್, http://www.tehelka.com/story_main೪೮.asp?filename=Ne೦೧೦೧೧೧THEABCOF.asp
  3. Seeking accountability http://www.frontlineonnet.com/fl2301/stories/20060127004603000.htm
  4. http://news.worldsnap.com/india/2g-cbi-quizzes-niira-radia-97523.html
  5. http://www.taratv.com/top_story.php?task=full&newsid=2151
  6. http://www.thehindubusinessline.com/2010/12/17/stories/2010121751660900.htm
  7. ಸಿಬಿಐ ಕಂಡಕ್ಟ್ಸ್ ರೈಡ್ಸ್; ಸ್ವೂಪ್ಸ್ ಆನ್ ಡಿಎಂಕೆ ಅಸೋಶಿಯೇಟ್ಸ್, ನೀರಾ ರಾಡಿಯಾ & ಪ್ರದೀಪ್ ಬೈಜಾಲ್ http://economictimes.indiatimes.com/news/politics/nation/CBI-conducts-raids-swoops-on-DMK-associates-Niira-Radia--Pradip-Baijal/articleshow/7108883.cms
  8. ೮.೦ ೮.೧ Shafi Rahman (6 Nov 2008). "Big scam in 2G spectrum allocation: CPI-M". India Today. =. Retrieved 3 December 2010.{{cite web}}: CS1 maint: extra punctuation (link)
  9. ೯.೦ ೯.೧ ೯.೨ "What is 2G spectrum scam?". NDTV.com. =NDTV. 16 Nov 2010. Retrieved 3 December 2010.{{cite web}}: CS1 maint: extra punctuation (link)
  10. "2G scam: 'Raja to blame for losing ೧,೭೬,೦೦೦ [[ಕೋಟಿ]] ([[ಸಂಯುಕ್ತ ಸಂಸ್ಥಾನದ ಡಾಲರ್|ಯುಎಸ್$]]೩೯.೦೭ ಶತಕೋಟಿ)'". ದಿ ಟೈಮ್ಸ್ ಆಫ್‌ ಇಂಡಿಯಾ. =The Times Group. ೧೦ Nov ೨೦೧೦. Retrieved ೩ December ೨೦೧೦. {{cite web}}: Check date values in: |accessdate= and |date= (help); URL–wikilink conflict (help)CS1 maint: extra punctuation (link)
  11. ಉಲ್ಲೇಖ ದೋಷ: Invalid <ref> tag; no text was provided for refs named whatexactly
  12. "Government orders probe into leaking of Niira Radia tapes". =The Economic Times. 29 Nov 2010. Retrieved 4 December 2010.{{cite web}}: CS1 maint: extra punctuation (link)
  13. Sathyalaya Ramakrishnan (2 Nov 2010). "2G Spectrum Scam: Karunanidhi protecting union minister Raja for extraneous reasons- Jayalalithaa charges". =Asian Tribune. Retrieved 4 December 2010.{{cite web}}: CS1 maint: extra punctuation (link)
  14. "Telecom Minister A Raja resigns". =The Indian Express. 14 Nov 2010. Retrieved 4 December 2010.{{cite web}}: CS1 maint: extra punctuation (link)
  15. ೧೫.೦ ೧೫.೧ Joji Thomas Philip (18 Nov 2010). "2G scam: Govt to pull up five telcos". The Economic Times. =The Times Group. {{cite web}}: |access-date= requires |url= (help); Missing or empty |url= (help)CS1 maint: extra punctuation (link)
  16. http://europe.wsj.com/article/SB10001424052748704055204576067652193571560.html
  17. http://www.ndtv.com/article/india/2g-war-of-words-kapil-sibal-vs-murli-manohar-joshi-77888


ಬಾಹ್ಯ ಕೊಂಡಿಗಳು

ಬದಲಾಯಿಸಿ

ತೆಹಲ್ಕಾಸ್ ಜನವರಿ 2011ಇನ್‌ಫೋಗ್ರಾಫಿಕ್ ಎಕ್ಸ್‌ಪ್ಲೇನಿಂಗ್ ದ ಸ್ಕ್ಯಾಮ್ Archived 2012-09-25 ವೇಬ್ಯಾಕ್ ಮೆಷಿನ್ ನಲ್ಲಿ.