ಹೆಲೆನ್ ಬೈಲಿ
ಇವರ ಸಾಧನೆಗಳು ಎಲ್ಲರ ಜೀವನವನ್ನು ಬದಲಾಯಿಸಿ, ಸಮಾಜಕ್ಕೆ ಪ್ರೇರಣೆಯಾಗಿದೆ.ಬರೆಯುವಿಕೆ,ಸಂಗೀತ,ನೃತ್ಯ,ಕಲೆ ಹೀಗೆ ಹಲವು ಕ್ಷೇತ್ರದಲ್ಲಿ ತಮ್ಮ ಕೌಶಲ್ಯ ಜಗತ್ತಿಗೆ ತೋರಿದ್ದಾರೆ.ಹೆಲೆನ್ ಕೆಲರ್, ಪ್ರಿಯಾ ಬಾಲಚಂದ್ರನ್,ಮೇರಿ ಕೋಮ್ , ಅರುಂಧತಿ ರಾಯ್, ಅನುಷ್ಕ ಶರ್ಮಾ, ಪ್ರಿಯಾಂಕ ಛೋಪ್ರ, ಅನ್ಜೆಲ ಮೆರ್ಕಲ್, ಅರುಂಧತಿ ಭಟ್ಟಾಚಾರ್ಯ, ಒಫ್ರ ವಿನ್ಫ್ರೇ ಮುಂತಾದವರು ಇಡೀ ಜಗತ್ತಿಗೇ ಆದರ್ಶರಾಗಿದ್ದಾರೆ.ಇವರಲ್ಲಿ ಒಬ್ಬರು ಹೆಲೆನ್ ಬೈಲಿ. ಹೆಲೆನ್ ಬೈಲಿ(೧೯೬೪-೨೦೧೬)ಯವರು ಒಬ್ಬ ಬ್ರಿಟಿಷ್ ಬರಹಗಾರ್ತಿ.ಇವರು ಹದಿಹರೆಯದವರಿಗಾಗಿ ಎಲೆಕ್ಟ್ರ ಬ್ರೌನ್ ಸೀರೀಸ್ ಪುಸ್ತಕಗಳನ್ನು ಬರೆದ್ದಿದ್ದಾರೆ.ಇವರು ಏಪ್ರಿಲ್ ೨೦೧೬ರಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು.ಮೂರು ತಿಂಗಳ ನಂತರ, ಜುಲೈ ೧೫ ರಂದು ಇವರ ಶರೀರದ ಅವಶೇಷಗಳು ಸಿಕ್ಕಿತು.ಇವರ ಹತ್ಯೆಯನ್ನು ಇವರ ಸಂಗಾತಿ ಇಯನ್ ಸ್ಟಿವರ್ಟ್‌ರವರೇ ಮಾಡಿದ್ದಾರೆಂದು ೨೦೧೭ರಲ್ಲಿ ನ್ಯಾಯಾಲಯದಲ್ಲಿ ಸಾಬೀತಾಯಿತು.
ಜೀವನ ಹಾಗು ವೃತ್ತಿ
ಬದಲಾಯಿಸಿಬೈಲಿಯವರು ಪೊಂಟೆಲ್ಯಾಂಡ್‌ನಲ್ಲಿ ಹುಟ್ಟಿ ಬೆಳೆದರು.ಇವರು ತಮ್ಮ ಪೊಂಟೆಲ್ಯಾಂಡ್ ಶಾಲೆಯಲ್ಲಿನ ಅನುಭವವನ್ನು ಹೀಗೆ ವಿವರಿಸಿದ್ದಾರೆ- "ನಾನು ಶಾಲೆಯಲ್ಲಿ ಕಿಟಕಿಯ ಪಕ್ಕ ಕುಳಿತುಕೊಂಡು ಅದರಾಚೆ ನೋಡುತ್ತಾ ಓದೊಂದನ್ನು ಬಿಟ್ಟು ಬೇರೆಯಲ್ಲದರ ಬಗ್ಗೆಯೂ ಕನಸು ಕಾಣುತ್ತಿದ್ದೆ.ಮನೆಗೆ ತೆರಳಿದ ನಂತರ ಡೈರಿಯಲ್ಲಿ ಯಾರು ಯಾರು ಏನೇನು ಮಾಡಿದರು. ನಾನು ಅದರ ಭಾಗಿ ಯಾಕಾಗಿರಲ್ಲಿಲ್ಲ ಎಂದು ಬರೆಯುತ್ತಿದೆ". ಬೈಲಿಯವರು ಥೇಮ್ಸ್ ಪೊಲಿಟೆಕ್ನಿಕ್ ಎಂಬ ಲಂಡನ್‌ನಿನ ವಿಶ್ವವಿದ್ಯಾಲಯದ ಶರೀರಶಾಸ್ತ್ರ ಪದವೀಧರರು.ಮೊದಲಿಗೆ ಫೋರೆನ್ಸಿಕ್ ವಿಜ್ಞಾನಿಯಾಗುವ ಹಂಬಲ ಹೊಂದಿದ್ದ ಬೈಲಿ ನಂತರ ಮೀಡಿಯಾದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದರು.ಮೀಡಿಯಾ ಕ್ಷೇತ್ರದಲ್ಲಿ 'ರುಗ್ರಟ್ಸ್' ಮತ್ತು 'ಗಾರ್ಫೀಲ್ಡ್' ಎಂಬ ವ್ಯಂಗ್ಯ ಪಾತ್ರಗಳಿಗೆ ಪರವಾನಗಿ ಮತ್ತು ಮಾರುಕಟ್ಟೆ ಪ್ರಚಾರವನ್ನು ಮಾಡುತ್ತಿದ್ದರು.೧೯೯೬ರಲ್ಲಿ ಜಾನ್ ಸಿನ್ಫೀಲ್ಡ್‌ರವರನ್ನು ವಿವಾಹವಾದರು.ಬೈಲಿಯವರು "ಲೈಫ್ ಅಟ್ ದಿ ಶಾಲೊ ಎನ್ಡ್"(೨೦೦೮),"ಔಟ್ ಆಫ್ ಮೈ ದೆಪ್ಥ್"(೨೦೦೮),"ಸ್ವಿಮ್ಮಿಂಗ್ ಅಗ್ಯನ್ಸ್ಟ್ ದಿ ಟೈಡ್"(೨೦೦೯),"ಟೇಕಿಂಗ್ ದಿ ಪ್ಲನ್ಜ್"(೨೦೦೯) ಮತ್ತು "ಫಾಲಿಂಗ್ ಹೂಕ್, ಲೈನ್ ಅನ್ಡ್ ದಿ ಸಿಂಕರ್"(೨೦೧೦) ಎಂಬ ಪುಸ್ತಕಗಳನ್ನು ಬರೆದ್ದಿದ್ದಾರೆ.ಇವರು ೨೦೧೦ರ "ಕ್ವೀನ್ ಆಫ್ ಟೀನ್" ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.ಚಿಕ್ಕ ಮಕ್ಕಳಿಗಾಗಿ ಇವರು "ವಿಲ್ಲೊ ದಿ ವುಡ್‌ಸ್ಪ್ರೈಟ್" ಸೀರೀಸ್,"ಟೊಪಾಜ಼್" ಸೀರೀಸ್ ಮತ್ತು "ಫೆಲಿಸಿಟಿ ವಿಷಸ್" ಸೀರೀಸ್ ಬರೆದ್ದಿದ್ದಾರೆ.ಒಟ್ಟಾರೆ ಇವರ ೨೨ ಪುಸ್ತಕಗಳು ಪ್ರಕಟಗೊಂಡಿವೆ. ಫೆಬ್ರವರಿ ೨೦೧೧,ಬಾರ್ಬಡೋಸ್‌ನಲ್ಲಿ ಬೈಲಿಯ ಗಂಡ ನೀರಿನಲ್ಲಿ ಮುಳುಗಿ ನಿಧನರಾದರು.ಇದಾದನಂತರ ಬೈಲಿ ಮೊದಲಬಾರಿಗೆ ವಯಸ್ಕರಿಗಾಗಿ "ವೆನ್ ಬ್ಯಾಡ್ ಥಿಂಗ್ಸ್ ಹ್ಯಾಪೆನ್ ಇನ್ ಗುಡ್ ಬಿಕಿನಿಸ್"(೨೦೧೫-ಪ್ಲಾನೆಟ್ ಗ್ರೀಫ್ ಬ್ಲಾಗ್)ಎಂಬ ಪುಸ್ತಕವನ್ನು ಪ್ರಕಟಿಸಿದರು.'ದಿ ಗಾರ್ಡಿಯನ್' ದಿನ ಪತ್ರಿಕೆಯು ಇದನ್ನು"ಗಂಡ ಸತ್ತ ನಂತರದ ದುಃಖ ಹಾಗು ಸಂಕಟ ತುಂಬಿರುವ ದುರಂತ ಕಥೆಯ ವಿವರಣೆ"ಎಂದು ವಿವರಿಸಿತು.ಈ ಪುಸ್ತಕವು, ಬೈಲಿಯ ಗಂಡ ಸತ್ತ ೮ ತಿಂಗಳ ನಂತರ ಅವಳ ಹಾಗು ಇಬ್ಬರು ವಯಸ್ಕರ ಅಪ್ಪನಾದ ಇಯನ್ ಸ್ಟಿವರ್ಟ್ ನಡುವೆ ಬೆಳೆದ ನವ ಸಂಬಂಧದ ಬಗ್ಗೆಯೂ ವಿವರಣೆ ನೀಡುತ್ತದೆ.ಬಿಬಿಸಿ ರೇಡಿಯೋವಿನ 'ವುಮೆನ್ಸ್ ಆವರ್'ನಲ್ಲಿ ಬೈಲಿ ಈ ಪುಸ್ತಕ ಹಾಗು ಅವರ ಅನುಭವಗಳ ಬಗ್ಗೆ ಮಾತನಾಡಿದರು.[೧]
ಕಣ್ಮರೆ ಮತ್ತು ಮರಣ
ಬದಲಾಯಿಸಿಏಪ್ರಿಲ್ ೧೧,೨೦೧೬ರಲ್ಲಿ ಇಯನ್, ಬೈಲಿಯ ಸಂಗಾತಿ, ಬೈಲಿ ನಾಪತ್ತೆಯಾಗಿದ್ದಾರೆ ಎಂದು ವರದಿ ನೀಡಿದರು.ವಿಚಾರಣೆಯ ನಂತರ ಬೈಲಿ ತನ್ನ ಕುಟುಂಬದ ಜೊತೆ ಕಾಲ ಕಳೆಯಲು ಬ್ರಾಡ್‌ಸ್ಟೇರ್ಸ್‌ಗೆ ತೆರಳುತ್ತಿದ್ದೇನೆ ಎಂದು ಚೀಟಿ ಬರೆದಿಟ್ಟಿದ್ದ ವಿಷಯ ಬೆಳಕಿಗೆ ಬಂತು.ಆದರೆ ಬೈಲಿಯ ತಾಯಿ ಹಾಗು ತಮ್ಮ ಅವರು ಇಲ್ಲಿಗೆ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.ಹೀಗಾಗಿ ಹೆಲೆನ್‌ನ ಕೇಸ್ ಪೋಲಿಸರನ್ನು ಸಹ ಕಂಗೆಡಿಸಿತು. ಜುಲೈ ೧೧ರಂದು ಪೋಲಿಸರು ೫೫ ವರುಷದ ವಯಸ್ಕನನ್ನು ಸಂಶಯದ ಆಧಾರದ ಮೇಲೆ ಬಂಧಿಸಿದರು.ನಂತರ ಅವನನ್ನು ಜಾಮೀನಿನಿಂದ ಬಿಡಿಸಿಕೊಳ್ಳಲಾಯಿತು. ಜುಲೈ ೧೫ ರಂದು ಬೈಲಿಯ ಹಾಗು ಅವರ ನಾಯಿಯ ಶರೀರದ ಅವಶೇಷಗಳು ಅವರ ಮನೆಯ ಸೆಸ್ ಪಿಟ್‌ನಲ್ಲಿ ಸಿಕ್ಕಿತು.ಜುಲೈ ೧೬ರಂದು ಇಯನ್‌ನನ್ನು ಬೈಲಿಯ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಯಿತು.
ಕೊಲೆ ವಿಚಾರಣೆ
ಬದಲಾಯಿಸಿಜನವರಿ ೨೦೧೭,ಕಾನೂನು ಪರ ವಕೀಲರು ಇಯನ್ ಬೈಲಿಯನ್ನು ಉಸಿರುಕಟ್ಟಿ ಸಾಯಿಸುವ ಕೆಲ ತಿಂಗಳ ಮೊದಲಿನಿಂದಲೂ ಅವಳಿಗೆ ನಿದ್ದೆಯ ಮಂಪರಿಗೆ ತಳ್ಳುವ ಮಾದಕ ದ್ರವ್ಯವನ್ನು ಗುಟ್ಟಾಗಿ ಕೊಡುತ್ತಿದ್ದ ಎಂದು ಹೇಳಿದರು. ಹಾಗೂ ಆತ ಬೈಲಿಯನ್ನು ಜೀವಂತವಾಗಿಯೇ ಮನೆಯ ಸೆಸ್ ಪಿಟ್‌ನಲ್ಲಿ ಹಾಕಿದ ಎಂದು ದೂರಿದರು.ಬೈಲಿಯ ಸಾವಿನಿಂದ ಇಯನ್‌ಗೆ ಹೆಚ್ಚು ಲಾಭ ಲಭಿಸಿತು. ಬೈಲಿ ಯಾವುದೇ ಕೆಲಸವಿಲ್ಲದೆ ದುಡಿಮೆ ಮಾಡದ ಇಯನ್‌ನ ಪ್ರೀತಿಯಲ್ಲಿ ಕುರುಡಾಗಿ ತನ್ನ ಇಡೀ ಆಸ್ತಿಯನ್ನೆಲ್ಲಾ ಮುಂದೆ ತನ್ನನ್ನು ಮದುವೆಯಾಗಲಿರುವ ಇಯನ್‌ನ ಹೆಸರಿಗೆ ವಿಲ್ ಮಾಡಿದ್ದಳು.ಹಲವು ಬಾರಿ ಬೈಲಿ ಜೀವಂತವಾಗಿರುವಾಗಲೇ ಇಯನ್ ಪವರ್ ಆಫ್ ಅಟಾರ್ನಿ ಬಳಸಿ ಬೈಲಿಯ ಮನೆಯೊಂದನ್ನು ಮಾರಲು ಪ್ರಯತ್ನ ಮಾಡಿದ್ದರು.ಅಕ್ಕ ಪಕ್ಕದ ಮನೆಯವರು ಇಯನ್ ಗುಮ್ಮನುಸುಗ, ಯಾರ ಹತ್ತಿರವೂ ಮಾತನಾಡುತ್ತಿರಲಿಲ್ಲ ಆದರೆ ಬೈಲಿ ತುಂಬಾ ಸಂತೋಷದಿಂದ ಎಲ್ಲರ ಜೊತೆ ಬೆರೆತು ಮಾತನಾಡುತ್ತಿದ್ದರು. ಆದರೆ ಕೆಲವೊಮ್ಮೆ ಇಯನ್ ತುಂಬಾ ಕ್ರೋಧಕ್ಕೆ ಒಳಗಾಗಿ ವರ್ತಿಸುತ್ತಿದ್ದರು ಎಂದು ನ್ಯಾಯಾಲಯಕ್ಕೆ ಹೇಳಿದರು.ಇಯನ್ ಅವರನ್ನು ಪ್ರಶ್ನಿಸಿದಾಗ ಅವರಿಗೆ ಬೈಲಿಯ ಕಣ್ಣು ಗುಡ್ಡೆಯ ಬಣ್ಣವಾಗಲಿ, ಅವಳ ದೂರವಾಣಿ ಸಂಖ್ಯೆ, ಹುಟ್ಟಿದ ದಿನಾಂಕ ಯಾವುದು ಸಹ ಅವರಿಗೆ ಗೊತ್ತಿರಲ್ಲಿಲ್ಲ.ಬೈಲಿಯ ತಾಯಿಯು ಸಹ ಬೈಲಿ ನಾಪತ್ತೆಯಾಗುವುದಕ್ಕಿಂತ ಸ್ವಲ್ಪ ದಿನದ ಕೆಳಗೆ ಆಕೆ ಅತಿ ನಿದ್ದೆ,ಮಂಪರು ಎನ್ನುತ್ತಿದ್ದಳು ಎಂದು ಸಾಕ್ಷಿ ನೀಡಿದರು. ಬೈಲಿಯ ಶರೀರದಲ್ಲಿ ವಿರೋಧಿ ನಿದ್ರಾಹೀನತೆಯ ಔಷಧಿಯ ಕುರುಹುಗಳು ಸಹಾ ಸಿಕ್ಕಿತು.ಕೊನೆಗೆ ಬಹಳಷ್ಟು ವಾದ ವಿವಾದಗಳ ನಂತರ ಫೆಬ್ರುವರಿ ೨೨, ೨೦೧೭ರಂದು ನ್ಯಾಯಾಲಯ ಇಯನ್ ಅಪರಾಧಿ ಎಂದು ಘೋಷಿಸಿ ೩೪ ವರುಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿತು. ಬೈಲಿಯ ಈ ಕೃತ್ಯ ಕಂಡ ಪೋಲಿಸರು ಇಯನ್‌ನ ಮೊದಲನೆಯ ಹೆಂಡತಿಯ ಸಾವನ್ನು ಪರಿಶೀಲಿಸಲು ಮುಂದಾದರು.[೨]
ಒಟ್ಟಿನಲ್ಲಿ ಪ್ರತಿಭಾವಂತ ಬರಹಗಾರ್ತಿ ಬೈಲಿ ಕುರುಡು ಪ್ರೇಮಕ್ಕೆ ಒಳಗಾಗಿ ದುರಂತ ಅಂತ್ಯವನ್ನು ಕಂಡರು.ಬ್ರಿಟನ್ ದೇಶದ ಹಲವರು ಇಂದು ಸಹಾ ಬೈಲಿಯ ಮಾತು,ಬರಹ ಹಾಗು ಪುಸ್ತಕಗಳನ್ನು ಓದಿ ಅವರನ್ನು ನೆನೆಯುತ್ತಾರೆ.
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/Helen_Bailey
- ↑ https://www.theguardian.com › World › UK News › Crime