ಅರುಂಧತಿ ಭಟ್ಟಾಚಾರ್ಯ

ಅರುಂಧತಿ ಭಟ್ಟಾಚಾರ್ಯ.

Arundhati Bhattacharya - Kolkata 2015-05-22 0807

ಜನನ ಬದಲಾಯಿಸಿ

ಇವರು ೧೮-ಮಾರ್ಚ್-೧೯೫೬ ರಂದು ಕಲ್ಕತ್ತಾದಲ್ಲಿ ಹುಟ್ಟಿದರು. ಇವರು ಬೆಂಗಾಲಿ ಹಿಂದು ಕುಲಿನ್ ಬ್ರಾಹ್ಮಣ ಕುಟುಂಬದವರು. ಇವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆ. ಇವರ ತಂದೆ ಪ್ರೊದ್ಯುತ್ ಕುಮಾರ್ ಮುಖರ್ಜಿ ಹಾಗು ತಾಯಿ ಕಲ್ಯಾಣಿ ಮುಖರ್ಜಿ. ತಂದೆ ಪಟ ಉದ್ಯೋಗಿ ಹಾಗು ತಾಯಿ ಹೋಮಿಯೋಪತಿ ವೈದ್ಯರು.

ಬಾಲ್ಯ ಬದಲಾಯಿಸಿ

ಅವರು ಬೆಳೆಅದ್ದು ಬೊಕ್ಯಾರೊದಲ್ಲಿ ಮತ್ತು ತಮ್ಮ ಬಾಲ್ಯವನ್ನು ಭಿಲೈಯಲ್ಲಿ ಕಳೆದರು. ಅವರು ತಮ್ಮ ವಿಧ್ಯಾಭ್ಯಾಸವನ್ನು ಸೆಂಟ್ ‍‍ಗ್ಸೇವಿಯರ್ ಶಾಲೆಯಲ್ಲಿ ಮಾಡಿದರು. ಇವರು ತಮ್ಮ ಇಂಗ್ಲೀಷ್ ಸಾಹಿತ್ಯವನ್ನು ಕಲ್ಕತ್ತಾದ ಲೇಡಿ ಬ್ರಾಬೋರ್ನ್ ಕಾಲೇಜು ಮತ್ತು ಜದವ್ ಪುರ್ ವಿಶ್ವವಿದ್ಯಾಲಯದಲ್ಲಿ ಮಾಡಿದರು. ಅರುಂಧತಿ ಭಟ್ಟಾಚಾರ್ಯರವರ ವಿಧ್ಯಾಭ್ಯಾಸದಲ್ಲಿ ಅವರ ತಂದೆ ತಾಯಿ ಒತ್ತಾಯ ಮಾಡುತ್ತಿರಲಿಲ್ಲ.

ಹವ್ಯಾಸ ಬದಲಾಯಿಸಿ

ಇವರ ಹವ್ಯಾಸಗಳು ಹಾಡುಗಳನ್ನು ಕೇಳುವುದು ಮತ್ತು ಪುಸ್ತಕಗಳನ್ನು ಓದುವುದು.

ವಿವಾಹ ಬದಲಾಯಿಸಿ

ಇವರ ಗಂಡನ ಹೆಸರು ಪ್ರಿಟಿಮಾಯ್ ಭಟ್ಟಾಚಾರ್ಯ ಮತ್ತು ಇವರು ಇಂಜಿನಿಯರ್ ಹಾಗು ಮಗಳ ಹೆಸರು ಸುಕ್ರಿತ ಈಕೆ ೧೯೯೫ ರಲ್ಲಿ ಹುಟ್ಟಿದರು. ಅವರ ಗಂಡ ಐ.ಐ.ಟಿ ಖರಗ್ ಪುರದ ಎ‍‍ಕ್ಸ್ ಪ್ರೊಫೆಸರ್ ಆಗಿದ್ದರು. ಇವರು ಈಗಿರುವ ಸ್ಥಾನಕ್ಕೆ ಮೊದಲು ಪ್ರತಿಪ್ ಚೌದ್ರಿ ಅವರು ಅಧ್ಯಕ್ಷರಾಗಿದ್ದರು,

ವೃತ್ತಿ ಜೀವನ ಬದಲಾಯಿಸಿ

ಅರುಂಧತಿ ಭಟ್ಟಾಚಾರ್ಯ[೧] ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ(ಎಸ್.ಬಿ.ಐ) ಅಧ್ಯಕ್ಷೆ.ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ೨೪ ನೇ ಅಧ್ಯಕ್ಷೆ. ನಂತರ ೩೦-ಸೆಪ್ಟೆಂಬರ್-೨೦೧೩ ರಲ್ಲಿ ಅರುಂಧತಿ ಭಟ್ಟಾಚಾರ್ಯ, ಪ್ರತಿಪ್ ಚೌದ್ರಿಯ ಬದಲಾಗಿ ಅಧ್ಯಕ್ಷೆ ಸ್ಥಾನವನ್ನು ಪಡೆದರು. ಇವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಲು ೩ ವರ್ಷ ಕಾಲಾವಧಿಯನ್ನು ವಿಧಿಸಲಾಗಿದೆ. ಇದಲ್ಲದೆ ಇವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ(ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ) ದ ಗವರ್ನರಾಗಲು ನಾಮನಿರ್ದೇಶನರಾಗಿದ್ದಾರೆ. ಇವರು ಅಧ್ಯಕ್ಷೆಯಾಗುವ ಮುನ್ನ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಉಮೇದುವಾರಿಕೆಯ ಅಧಿಕಾರಿ (ಪ್ರೊಬಷಿನರಿ ಆಫಿಸರ್)ಯಾಗಿ ೧೯೭೭ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಆಗ ಅವರಿಗೆ ಕೇವಲ ೨೨ ವಯಸ್ಸಾಗಿತ್ತು. ನಂತರ ೨೦೦೧ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 'ಡೆಪ್ಯುಟಿ ಜನರಲ್ ಮ್ಯಾನೇಜರ್' ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಅವರಿಗೆ ಹಲವಾರು ಸ್ಥಾನಗಳು ದೊರಕಿದವು ಹಾಗು ಇವರು ವ್ಯಾಪರ ವಿಶ್ವದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಒಂದು ಹೊಸ ಗುರುತನ್ನು ತರಲು ಪ್ರಯತ್ನಿಸುತ್ತಿದ್ದರು. ಇದಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೋಸ್ಕರ ಹೊಸ ಹೊಸ ಯಶಸ್ವಿಯಾದ ಯೋಜನೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಎಸ್.ಬಿ.ಐ ಜನರಲ್ ಇನ್ಷುರೆನ್ಸ್, ಎಸ್.ಬಿ. ಎಸ್ ಜಿ ಗ್ಲೋಬಲ್ ಸೆಕ್ಯುರಿಟಿ ಸರ್ವಿಸಸ್ ಇತ್ಯಾದಿ. ಇವರು ನ್ಯೂಯಾರ್ಕ್ ಬ್ಯಾಂಕಿನಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಇವರು ೩೫ ವರ್ಷದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅರುಂಧತಿ ಭಟ್ಟಾಚಾರ್ಯ ಅವರು ಮಹಿಳೆಯರನ್ನು ಗೌರವಿಸುತ್ತಾರೆ ಹಾಗು ಮಹಿಳೆಯರು ಕೂಡ ಅಧ್ಭುತವಾದ ಸಾಧನೆಗಳನ್ನು ಹೆಚ್ಚಾಗಿ ಮಾಡಬಹುದು ಎಂಬ ನಂಬಿಕೆಯನ್ನು ಕೊಟ್ಟು ಪ್ರೋತ್ಸಾಹಿಸುತ್ತಾರೆ. ಹಾಗು ಹಲವಾರು ರೀತಿಯಲ್ಲಿ ಮಹಿಳೆಯರಿಗೆ ಸಹಾಯ ಮಾಡುತ್ತಾರೆ. ಇವರು ಲಕ್ನೋದಲ್ಲಿ ಜನರಲ್ ಮ್ಯಾನೆಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಎಮ್.ಬಿ.ಎ ಮಾಡದೆ ಬ್ಯಾಂಕಿನಲ್ಲಿ ಕೆಲಸ ಮಾಡಿದ್ದಾರೆ ಇದಲ್ಲದೆ ಹಲವಾರು ಯೋಜನೆಗಳನ್ನು , ನಿಯಮಗಳನ್ನು ಸೃಷ್ಟಿಸಿದ್ದಾರೆ. ಇವರಿಗೆ ಬೇರೆ ಬೇರೆ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ, ಇವರು ಮಾನವ ಸಂಪನ್ಮೂಲದಿಂದ ಹೂಡಿಕೆ ಬ್ಯಾಂಕಿಂಗ್ ನವರೆಗೆ ಹಲವಾರು ನಿಯಮಗಳನ್ನು ಪರಿಚಯಿಸಿದರು. ಇದಲ್ಲದೆ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಇವೆಲ್ಲವೇ ಇವರು ಈ ಮಟ್ಟಿಗೆ ಪ್ರಸಿದ್ಧಿಯಾಗಲು ಕಾರಣ. ಇವರಿಗೆ ಆರಾಮವಲಯದ ಹೊರಗೆ ಕೆಲಸ ಮಾಡಲು ಇಚ್ಚಿಸುತ್ತಾರೆ. ಇವರು ಮಹಿಳೆಯರಿಗೆ ಸ್ಪೂರ್ತಿದಾಯಕರಾಗಿದ್ದಾರೆ. ಇವರು ಒಬ್ಬ ಸಹಯೋಗದ ನಾಯಕಿ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ[೨]ದ ಡಿಜಿಟಲ್ ಬ್ರಾಂಚ್ ಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ಅರುಂಧತಿ ಭಟ್ಟಾಚಾರ್ಯ ಅವರು ಚಂದ ಕೊಚಾರ್ ಹಾಗು ಶಿಕಾ ಶರ್ಮರವರ ಲೀಗ್ ನಲ್ಲಿ ಜೊತೆಯಾಗಿದ್ದಾರೆ. ಫಾರ್ಚೂನ್ ದರ್ಪಣದ ಪ್ರಕಾರ ಇವರು ಪ್ರಪಂಚದ ಅತ್ಯಂತ ಶಕ್ತಿಶಾಲಿಯಾದ ವ್ಯಾಪರಸ್ಥ ಮಹಿಳೆಯೆಂದು ಹೆಸರು ಗಳಿಸಿದ್ದಾರೆ. ಇವರು ಹಲವಾರು ವಲಯಗಳಾದ ಬ್ಯಾಂಕಿಂಗ್, ಹಣಕಾಸು, ಫ್ಯಾಷನ್ ಮತ್ತು ಮನರಂಜನೆ, ಆರೋಗ್ಯ ಹಾಗು ಮಾಧ್ಯಮಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅರುಂಧತಿ ಭಟ್ಟಾಚಾರ್ಯ ಅವರು ಇಂಪೋರ್ಟ್-ಎಕ್ಸ್ ಪೋರ್ಟ್(ಆಮಧು-ರಫ್ತು) ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ೨-ಆಗಸ್ಟ್-೨೦೧೩ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಧನೆ ಬದಲಾಯಿಸಿ

ಅರುಂಧತಿ ಭಟ್ಟಾಚಾರ್ಯರವರು ಆಗಸ್ಟ್ ೨೦೧೩ ರಿಂದ ೭-ಅಕ್ಟೋಬರ್-೨೦೧೩ರವರೆಗೆ ಸಹಕಾರಿ ಅಭಿವೃದ್ಧಿ ಅಧಿಕಾರಿ(ಕಾರ್ಪೊರೇಟಿವ್ ಡೆವಲಪ್ಮೆಂಟ್ ಆಫಿಸರ್) ಹಾಗು ಉಪ ವ್ಯವಸ್ಥಾಪಕ ನಿರ್ದೇಶಕ(ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರನ್ನು ೨೦೧೩ ರಲ್ಲಿ ದಾರ್ಶನಿಕ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇತಿಹಾಸದಲ್ಲೇ ಮೊದಲ ಮಹಿಳಾ ಅಧ್ಯಕ್ಷೆ ಎಂದು ಪರಿಗಣಿಸಲಾಗಿದೆ. ಇವರು ವಿಧ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಕೆಲಸ ಮಾಡುವ ಆಯ್ಕೆಯಾಗಿರಲಿಲ್ಲ. ಅರುಂಧತಿ ಭಟ್ಟಾಚಾರ್ಯರವರಿಗೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಆಸೆಯಿತ್ತು. ಇವರು ಭಾರತದ ಶಕ್ತಿಶಾಲಿ ಮಹಿಳೆಯೆಂದು ಹೆಸರು ಗಳಿಸಿ ೩೬ನೇ ಸ್ಥಾನದಲ್ಲಿದ್ದಾರೆ. ಭಟ್ಟಾಚಾರ್ಯರವರು ಇಂತಹ ಉನ್ನತ ಮಟ್ಟಕ್ಕೆ ಬರಲು ಕಾರಣ ಅವರ ಕುಟುಂಬದವರು, ಅವರ ತಂದೆ-ತಾಯಿ, ಅವರ ಗಂಡ ಎಂದು ಹೇಳಿದ್ದಾರೆ. ಭಟ್ಟಾಚಾರ್ಯರವರು ವಿಧ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಬ್ಯಾಂಕಿಂಗ್ ವಲಯದ ಪ್ರವೇಶ ಪರೀಕ್ಷೆಗೆ ಬೇಕಾದ ಯಾವುದೇ ತರಬೇತಿ ಸಂಸ್ಥೆಗಳು ಇರಲಿಲ್ಲ, ಅಂತಹ ಸಂದರ್ಭದಲ್ಲಿ ಇವರೇ ತಮ್ಮ ಸ್ವಂತ ಇಚ್ಛೆಯಿಂದ ತಾವೇ ಪುಸ್ತಕಗಳನ್ನು ಓದುತ್ತಿದ್ದರು. ಇದರಿಂದ ಇವರು ತಮ್ಮ ಜೀವನದಲ್ಲಿ ಕಲಿತ ಪಾಠವೇನೆಂದರೆ ನಮ್ಮನ್ನು ಯಾರಾದರು ಪ್ರಶಂಸಿಸ ಬೇಕಾದರೆ ನಾವೇ ನಮ್ಮ ಸ್ವಂತ ಖ್ಯಾತಿಯನ್ನು ನಮಗಾಗಿ ಸೃಷ್ಟಿಸಿಕೊಳ್ಳಬೇಕು. ಇವರು ೩೦-ಸೆಪ್ಟೆಂಬರ್-೨೦೧೬ ರಂದು ನಿವೃತ್ತಿ ಹೊಂದಬಹುದು.

ಉಲ್ಲೇಖ ಬದಲಾಯಿಸಿ