ಹೆಚ್.ಆರ್.ಶಾಸ್ತ್ರಿ
ಕನ್ನಡ ಚಿತ್ರರಂಗದಲ್ಲಿ ಪೋಷಕನಟನ ಪಾತ್ರದಲ್ಲಿ ಮಿಂಚಿದ ಹೆಚ್.ಆರ್.ಶಾಸ್ತ್ರಿ ಅಥವಾ ಹೆಚ್.ರಾಮಚಂದ್ರ ಶಾಸ್ತ್ರಿಯವರದು ನೆನಪಿನಲ್ಲುಳಿಯುವ ಹೆಸರು.(ಜನನ: ನವೆಂಬರ್ ೨,೧೯೦೫ - ಮರಣ: ಡಿಸೆಂಬರ್ ೧೨,೧೯೭೬). ಜನ್ಮಸ್ಥಳ ಮೇಲುಕೋಟೆ ಸಮೀಪದ ಹಳೇಬೀಡು.ಚಿಕ್ಕಂದಿನಿಂದಲೇ ಓದಿಗಿಂತ ಸಾಹಿತ್ಯ-ಸಂಗೀತದಲ್ಲಿ ಹೆಚ್ಚು ಆಸಕ್ತಿ.ಓದು ಅರ್ಧಕ್ಕೆ ನಿಲ್ಲಿಸಿ,ರೈಲ್ವೆ ವರ್ಕ್‌ಶಾಪ್‌ನಲ್ಲಿ ಕೂಲಿಯಾಗಿ ಸೇರಿದ್ದ ಇವರನ್ನು ಅಭಿನಯದ ಸೆಳೆತ ವರದಾಚಾರ್ಯರ "ರತ್ನಾವಳಿ ಥಿಯೇಟ್ರಿಕಲ್ ಕಂಪೆನಿ"ಗೆ ಎಳೆದು ತಂದಿತು.ಮುಂದೆ 'ಭಾರತ ಜನ ಮನೋಲ್ಲಾಸಿನಿ ಸಭಾ',ಪೀರ್‌ರವರ ಕಂಪೆನಿ...ಮೊದಲಾದ ಕಡೆ ಕೆಲಸ ಮಾಡಿ,ಆರ್.ನಾಗೇಂದ್ರರಾಯರ ಭಕ್ತ ಅಂಬರೀಷ ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೆಶಿಸಿದರು.
ಇವರ ಅಭಿನಯದ ಕೆಲವು ಕನ್ನಡ ಚಿತ್ರಗಳು
ಬದಲಾಯಿಸಿ- ಸುಭದ್ರಾ - ೧೯೪೧ -ಗುಬ್ಬಿವೀರಣ್ಣನವರ ಈ ಚಿತ್ರದಲ್ಲಿ ಧರ್ಮರಾಯನ ಪಾತ್ರ.
- ಬೇಡರ ಕಣ್ಣಪ್ಪ - ಶಿವನ ಪಾತ್ರ ಹೆಸರು ತಂದುಕೊಟ್ಟಿತು.
- ನಟಶೇಖರ
- ಭಕ್ತ ಕನಕದಾಸ
- ಮೂರೂವರೆ ವಜ್ರಗಳು