ಹಿಂದೂಸ್ಥಾನ್ ಪೆಟ್ರೋಲಿಯಂ
ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್ ) (ಬಿಎಸ್‌ಇ: 500104, ಎನ್‌ಎಸ್‌ಇ: HINDPETRO), ಭಾರತದ ಮುಂಬಯಿ ನಗರದಲ್ಲಿರುವ ಭಾರತದ ಸರ್ಕಾರದ ಒಡೆತನದ ತೈಲ ಕಂಪನಿಯಾಗಿದೆ ಹಾಗೂ ವಿಶ್ವ ದರ್ಜೆಯ 500 ಕಂಪನಿಗಳ ಭಾರತದ ಫಾರ್ಚೂನ್ 500 ಕಂಪನಿಗಳಲ್ಲಿ 311[೩] ನೆಯ ಸ್ಥಾನ ಗಳಿಸಿದೆ, ಹಣಕಾಸು ವರ್ಷ 2008-09ರಂತೆ ವಾರ್ಷಿಕ ವಹಿವಾಟು ₹ 1,16,428 ಕೋಟಿಗಳಷ್ಟಿದೆ ಹಾಗೂ ಮಾರಾಟ/ಆದಾಯ 1,31,802 ಕೋಟಿ ರೂಗಳು (ಯುಎಸ್$ 25,618 ಮಿಲಿಯನ್‌ಗಳು), ಭಾರತದಲ್ಲಿ 20% ಮಾರುಕಟ್ಟೆಯ ಶೇರುಗಳು ಇವೆ ಹಾಗೂ ಮಾರುಕಟ್ಟೆಯಲ್ಲಿ ಪ್ರಭಾವಿ ಅಡಿಗಟ್ಟನ್ನು ಹೊಂದಿದೆ. ಕ್ರಮವಾಗಿ ಹಣಕಾಸು ವರ್ಷ 2007-08ರಲ್ಲಿ: ವಹಿವಾಟು- ರೂ 1,03,837 ಕೋಟಿಗಳು, ಹಾಗೂ ಮಾರಾಟ/ಆದಾಯ- ₹ 1,12,098 ಕೋಟಿಗಳು (ಯುಎಸ್$ 25,142 ಮಿಲಿಯನ್).
ಚಿತ್ರ:Hindustan Petroleum Logo.svg | |
ಸಂಸ್ಥೆಯ ಪ್ರಕಾರ | State-owned enterprise Public (ಬಿಎಸ್‌ಇ: 500104, ಎನ್‌ಎಸ್‌ಇ: HINDPETRO) |
---|---|
ಸ್ಥಾಪನೆ | 1974 |
ಮುಖ್ಯ ಕಾರ್ಯಾಲಯ | ಮುಂಬೈ, ಮಹಾರಾಷ್ಟ್ರ, India |
ಪ್ರಮುಖ ವ್ಯಕ್ತಿ(ಗಳು) | S Roy Choudhury (Chairman & MD) |
ಉದ್ಯಮ | Oil |
ಉತ್ಪನ್ನ | Fuels Oils LPG |
ಆದಾಯ | ₹೧,೧೨,೫೧೬.೮೮ ಕೋಟಿ (ಯುಎಸ್$೨೪.೯೮ ಶತಕೋಟಿ) (2010) [೧] |
ನಿವ್ವಳ ಆದಾಯ | ₹೧,೪೭೫.೧೫ ಕೋಟಿ (ಯುಎಸ್$೩೨೭.೪೮ ದಶಲಕ್ಷ) (2010) [೧] |
ಒಟ್ಟು ಆಸ್ತಿ | $12.689 billion (2010)[೨] |
ಒಟ್ಟು ಪಾಲು ಬಂಡವಾಳ | $2.734 billion (2010) [೨] |
ಉದ್ಯೋಗಿಗಳು | ~11,245 (2009) |
ಜಾಲತಾಣ | www.hindustanpetroleum.com |
ಎಚ್‌ಪಿಸಿಎಲ್ ಕಂಪನಿಯು ಪೆಟ್ರೋಲಿಯಂ ಇಂಧನ & ವಿಶೇಷ ಉತ್ಪನ್ನಗಳನ್ನು ತಯಾರಿಸುವಂತಹ 2 ಪ್ರಮುಖ ಸಂಸ್ಕರಣಾಗಾರಗಳನ್ನು ಹೊಂದಿದೆ[೪], ವಾರ್ಷಿಕ 6.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯವಿರುವ (ಎಮ್‌ಎಮ್‌ಪಿಟಿಎ) ಒಂದು ಮುಂಬಯಿ (ಪಶ್ಚಿಮ ಕರಾವಳಿ)ಯಲ್ಲಿ ಹಾಗೂ 8.3 ಎಮ್‌ಎಮ್‌ಪಿಟಿಎ ಸಾಮರ್ಥ್ಯವಿರುವ ಇನ್ನೊಂದು ವಿಶಾಖಪಟ್ಟಣಂ (ಪೂರ್ವ ಕರಾವಳಿ)ನಲ್ಲಿ ಇವೆ.[೫] ಮಂಗಳೂರಿನಲ್ಲಿರುವ ರಾಜ್ಯ ಸರ್ಕಾರದ ಒಡೆತನದ 9 ಎಮ್‌ಎಮ್‌ಪಿಟಿಎ ಸಾಮರ್ಥ್ಯದ ಮಂಗಳೂರು ರೀಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಮ್‌ಆರ್‌ಪಿಎಲ್) ಕಂಪನಿಯಲ್ಲಿ 16.95% ಷೇರುಗಳನ್ನು ಹೊಂದಿದೆ. ಎಚ್‌ಎಮ್‌ಇಎಲ್ Archived 2020-11-01 ವೇಬ್ಯಾಕ್ ಮೆಷಿನ್ ನಲ್ಲಿ. ಸ್ವಾಮ್ಯದಲ್ಲಿ ಪಂಜಾಬ್‌ನ ಬಟಿಂಡಾದಲ್ಲಿ 9 ಎಮ್‌ಎಮ್‌ಪಿಟಿಎ ಸಾಮರ್ಥ್ಯದ ಇನ್ನೊಂದು ಸಂಸ್ಕರಣಾಗಾರವು ನಿರ್ಮಾಣವಾಗುತ್ತಿದೆ, ಇದು ಮಿತ್ತಲ್ ಎನರ್ಜಿ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿದೆ.
ಅಂತರರಾಷ್ಟ್ರೀಯ ಗುಣಮಟ್ಟದ ಲ್ಯೂಬ್ ಆಧಾರದ ತೈಲಗಳನ್ನು ಉತ್ಪಾದಿಸುವ ಭಾರತದ ಅತಿ ದೊಡ್ಡ ಲ್ಯೂಬ್ ಸಂಸ್ಕರಣಾಗಾರವನ್ನು ಎಚ್‌ಪಿಸಿಎಲ್ ಹೊಂದಿದ್ದು ಅದನ್ನು ನಿರ್ವಹಿಸುತ್ತಿದೆ.[೬] 335 ಟಿಎಮ್‌ಟಿ ಸಾಮರ್ಥ್ಯವುಳ್ಳ ಈ ಲ್ಯೂಬ್ ರೀಫೈನರಿಯು ಭಾರತದ ಒಟ್ಟು ಲ್ಯೂಬ್ ತೈಲ ಉತ್ಪಾದನೆಯ 40% ರಷ್ಟು ಉತ್ಪಾದಿಸುತ್ತದೆ. ಪ್ರಸ್ತುತ ಎಚ್‌ಪಿಸಿಎಲ್ ಸುಮಾರು 300+ ಗ್ರೇಡ್‌ಗಳ ಲ್ಯೂಬ್‌ಗಳನ್ನು, ವಿಶೇಷತೈಲಗಳು ಹಾಗೂ ಗ್ರೀಸ್‌ಗಳನ್ನು ತಯಾರಿಸುತ್ತದೆ.
ಎಚ್‌ಪಿಸಿಎಲ್‌ನ ಮಾರುಕಟ್ಟೆ ವಿಭಾಗವು 13 ಝೋನಲ್ ಆಫೀಸ್‌ಗಳನ್ನು ಪ್ರಮುಖ ನಗರಗಳಲ್ಲಿ ಹಾಗೂ 101 ಪ್ರಾದೇಶಿಕ ಕಛೇರಿಗಳನ್ನು[೭] ಹೊಂದಿದ್ದು ಸಪ್ಲೈ & ಡಿಸ್ಟ್ರಿಬ್ಯೂಶನ್ ಇನ್ಫ್ರಾಸ್ಟ್ರಕ್ಚರ್ ಕಾಂಪ್ರೈಸಿಂಗ್ ಟರ್ಮಿನಲ್ಸ್, ಏವಿಯೇಶನ್ ಸರ್ವಿಸ್ ಫೆಸಿಲಿಟೀಸ್, ಎಲ್‍ಪಿಜಿ ಬಾಟ್ಲಿಂಗ್ ಪ್ಲ್ಯಾಂಟ್ಸ್, ಲ್ಯೂಬ್ ಫಿಲ್ಲಿಂಗ್ ಪ್ಲ್ಯಾಂಟ್ಸ್, ಇನ್ಲ್ಯಾಂಡ್ ರಿಲೇ ಡಿಪೋಸ್, ರೀಟೈಲ್ ಔಟ್‌ಲೆಟ್‌ಗಳು (ಪೆಟ್ರೋಲ್ ಪಂಪು) ಹಾಗೂ ಎಲ್‌ಪಿಜಿ & ಲ್ಯೂಬ್ ಡಿಸ್ಟ್ರಿಬ್ಯೂಟರ್ಷಿಪ್‌ಗಳಿಂದ ಮನ್ನಣೆ ಪಡೆದಿದೆ.
ಎಲ್ಲಾ ಕ್ಷೇತ್ರಗಳಲ್ಲೂ ವರ್ಷಕಳೆದಂತೆ ಎಚ್‌ಪಿಸಿಎಲ್‌ನ ಸಾಮರ್ಥ್ಯ ಹೆಚ್ಚಾಗುತ್ತಿದೆ. 1984/85 ರಲ್ಲಿ ಸಂಸ್ಕರಣಾ ಸಾಮರ್ಥ್ಯವು 5.5 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟಿದ್ದು ಈಗ 13.00 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟಾಗಿದೆ. 1984-85ರಲ್ಲಿ ವಾರ್ಷಿಕ ಹಣಕಾಸು ವಹಿವಾಟು ₹ 2687 ಕೋಟಿಗಳಷ್ಟಿದ್ದು 2008-09ರ ಹಣಕಾಸು ವರ್ಷದಲ್ಲಿ ರೂ 1,31,802 ಕೋಟಿಗಳಷ್ಟಕ್ಕೆ ಹೆಚ್ಚಾಯಿತು.
ಉತ್ಪನ್ನಗಳು
ಬದಲಾಯಿಸಿ- ತೈಲ ಉದ್ಯಮದಲ್ಲಿ ಪೆಟ್ರೋಲ್ ಅನ್ನು ಮೋಟಾರ್ ಸ್ಪಿರಿಟ್ (ಎಮ್‌ಎಸ್) ಎಂದು ಕರೆಯುತ್ತಾರೆ. ಭಾರತದೆಲ್ಲೆಡೆ ಇರುವ ಚಿಲ್ಲರೆ ವ್ಯಾಪರದ ಪಂಪುಗಳಿಂದ ಎಚ್‌ಪಿಸಿಎಲ್ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತದೆ. ಇದನ್ನು ಹೆಚ್ಚಾಗಿ ಖರೀದಿಸುವ ಗ್ರಾಹಕರೆಂದರೆ ದಿನನಿತ್ಯ ತಮ್ಮ ಸ್ವಂತ ವಾಹನಗಳನ್ನು ಬಳಸುವವರು.
- ತೈಲ ಉದ್ಯಮದಲ್ಲಿ ಡೀಸಲ್ ಅನ್ನು ಹೈ ಸ್ಪಿರಿಟ್ ಡೀಸಲ್(ಎಚ್‌ಎಸ್‌ಡಿ) ಎಂದು ಕರೆಯುತ್ತಾರೆ. ತಮ್ಮ ಚಿಲ್ಲರೆ ವ್ಯಾಪಾರದ ಪಂಪುಗಳು ಅಲ್ಲದೆ ಟರ್ಮಿನಲ್ಲುಗಳು ಹಾಗೂ ಡಿಪೋಗಳಲ್ಲಿ ಎಚ್‌ಪಿಸಿಎಲ್ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದನ್ನು ಬಳಸುವ ಗ್ರಾಹಕರಲ್ಲಿ ದಿನನಿತ್ಯದ ಆಟೋ ಮಾಲೀಕರೂ ಸೇರಿದಂತೆ ಟ್ರಾನ್ಸ್‌ಪೋರ್ಟ್ ಏಜೆನ್ಸಿಗಳು, ಹಾಗೂ ಕೈಗಾರಿಕೆಗಳು ಮುಂತಾದವು ಸೇರಿವೆ.
- ಲುಬ್ರಿಕೆಂಟ್ಸ್ [೮] ಎಚ್‌ಪಿಸಿಎಲ್ ಕಂಪನಿಯು ಲುಬ್ರಿಕೆಂಟ್ ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಗಳಿಸಿದೆ. ಈ ಕ್ಷೇತ್ರದಲ್ಲಿ ಸುಮಾರು 30% ನಷ್ಟು ಮಾರುಕಟ್ಟೆಯ ಷೇರುಗಳನ್ನು ಹೊಂದಿದೆ. ಎಚ್‌ಪಿ ಲ್ಯೂಬ್ಸ್‌ನ ಜನಪ್ರಿಯ ಬ್ರ್ಯಾಂಡುಗಳೆಂದರೆ ಲಾಲ್ ಘೋಡಾ, ಮಿಲ್ಸೀ, ಥಂಡಾ ರಾಜಾ, ಕೂಲ್ಗರ್ದ್ ಮುಂತಾದವು.
- ಎಲ್‌ಪಿಜಿ [೯] ನಗರ ಪ್ರದೇಶಗಳಲ್ಲಿರುವ ಒಂದು ಜನಪ್ರಿಯ ಬ್ರ್ಯಾಂದ್.
- ಭಾರತದ ಎಲ್ಲಾ ಪ್ರಮುಖ ಏರ್‌ಪೋರ್ಟ್‌ಗಳಲ್ಲಿರುವ ಎಎಸ್‌ಎಫ್ (ಏಸ್ ಸರ್ವೀಸ್ ಫೆಸಿಲಿಟಿ) ಜೊತೆಗೆಏವಿಯೇಷನ್ ಟರ್ಬೈನ್ ಫ್ಯುಯಲ್ [೧೦], ಪ್ರಮುಖ ಏರ್‌ಲೈನ್ಸ್‌ಗಳಿಗೆ ಈ ಎಟಿಎಫ್ ಪೂರೈಸುವಲ್ಲಿ ಎಚ್‌ಪಿಸಿಎಲ್ ಪ್ರಮುಖ ಪಾತ್ರ ವಹಿಸುತ್ತದೆ. ಯುಎಸ್ ಏರ್ ಫೋರ್ಸ್ 1ಗೆ ಇಂಧನ ಪೂರೈಸುವುದಕ್ಕೆ ವಿವಿಧ ಬಗೆಯ ಬೇಡಿಕೆಗಳನ್ನು ಹೊಂದಿದೆ.
- ಬಿಟುಮೆನ್
- ಫರ್ನೇಸ್ ಆಯಿಲ್
ಸಂಸ್ಕರಣಾಗಾರಗಳು
ಬದಲಾಯಿಸಿಎಚ್ಪಿಸಿಎಲ್ ಕಂಪನಿಯು ಭಾರತದಲ್ಲಿ ಹಲವಾರು ಸಂಸ್ಕರಣಾಗಾರಗಳನ್ನು ಹೊಂದಿದೆ. ಕೆಲವು ಕೆಳಗಿನ ಪಟ್ಟಿಯಲ್ಲಿವೆ:
- ಮುಂಬಯಿ ರೀಫೈನರಿ - 5.5 ಮಿಲಿಯನ್ ಮೆಟ್ರಿಕ್ ಟನ್‌ಗಳ (ಎಮ್‌ಎಮ್‌ಟಿ) ಸಾಮರ್ಥ್ಯ
- ವಿಶಾಖಪಟ್ಟಣಂ ನಲ್ಲಿರುವ ವಿಶಾಖಪಟ್ಟಣಂ ರೀಫೈನರಿ - 7.5 ಎಮ್‌ಎಮ್‌ಟಿ
- ಕರ್ನಾಟಕದ ಮಂಗಳೂರಿನಲ್ಲಿರುವ ಮಂಗಳೂರು ರೀಫೈನರಿ ಪ್ರೈವೇಟ್ ಲಿಮಿಟೆಡ್ - 9.69 ಎಮ್‌ಎಮ್‌ಟಿ (ಎಚ್‌ಪಿಸಿಎಲ್ ಇದರಲ್ಲಿ 16.65 % ಷೇರುಗಳನ್ನು ಹೊಂದಿದೆ).
- ಪಂಜಾಬ್‌ನ ಭಟಿಂಡಾದಲ್ಲಿ ಗುರು ಗೋವಿಂದ್ ಸಿಂಗ್ ರೀಫೈನರಿ ಪ್ರಾಜೆಕ್ಟ್ - 9 ಎಮ್‌ಎಮ್‌ಟಿ (ಎಚ್‌ಪಿಸಿಎಲ್ & ಮಿತ್ತಲ್ ಎನರ್ಜಿ ಎರಡೂ ಕಂಪನಿಗಳು ತಲಾ 49% ಷೇರುಗಳನ್ನು ಹೊಂದಿವೆ).
ಅಂತರರಾಷ್ಟ್ರೀಯ ಶ್ರೇಯಾಂಕಗಳು
ಬದಲಾಯಿಸಿ- 2009ರಲ್ಲಿ ಎಚ್‌ಪಿಸಿಎಲ್ ಫಾರ್ಚೂನ್ ಗ್ಲೋಬಲ್ 500 ಕಂಪನಿ ಪಟ್ಟಿಯಲ್ಲಿ ದರ್ಜೆ ಪಡೆಯಿತು ಹಾಗೂ ಇದು 311 ನೇ ಶ್ರೇಯಾಂಕದಲ್ಲಿತ್ತು.
- 2009ರಲ್ಲಿ 1002 ನೇ ಸ್ಥಾನ ಪಡೆದು ಎಚ್‌ಪಿಸಿಎಲ್ ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿ ಸೇರಿತು
- 2010ರಲ್ಲಿ ಬ್ರ್ಯಾಂಡ್ ಫೈನಾನ್ಸ್ ಮತ್ತು ದಿ ಎಕನಾಮಿಕ್ಸ್ ಟೈಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಇದು 10ನೆಯ ಅತಿ ಬೆಲೆಬಾಳುವ ಬ್ರ್ಯಾಂಡ್ ಆಗಿದೆ.[೧೧]
ಗೌರವಗಳು ಹಾಗೂ ಪ್ರಶಸ್ತಿಗಳು 2008
ಬದಲಾಯಿಸಿ- ಎನ್‌ಡಿಟಿವಿ ಪಾಫಿಟ್ ಬ್ಯುಸಿನೆಸ್ ಲೀಡರ್‌ಶಿಪ್ ಪ್ರಶಸ್ತಿ
- ರೀಡರ್ಸ್ ಡೈಜೆಸ್ಟ್ ‘ಟ್ರಸ್ಟೆಡ್ ಬ್ರ್ಯಾಂಡ್ ಏಷಿಯಾ ಪ್ಲಾಟಿನಂ’ ಪ್ರಶಸ್ತಿ
- ಗೋಲ್ಡನ್ ಪೀಕಾಕ್ ಕಾರ್ಪೊರೇಟ್ ಗವರ್ನೆನ್ಸ್ ಪ್ರಶಸ್ತಿ 2008
- ಸಿಐಒ 100 ಪ್ರಶಸ್ತಿ 2008
- ಇಂಡಿಯಾ ಸ್ಟಾರ್ ಪ್ರಶಸ್ತಿ
- ಒಐಎಸ್‌ಡಿ ಸೇಫ್ಟಿ ಪ್ರಶಸ್ತಿ
- ಹಣಕಾಸು ನಿರ್ವಹಣೇಯಲ್ಲಿ ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್
- ಗ್ರೀನ್‌ಟೆಕ್ ಎನ್ವಿರಾನ್ಮೆಂಟ್ ಎಕ್ಸಲೆನ್ಸ್ ಪ್ರಶಸ್ತಿ 2008
- ‘ಪೀಪಲ್ ಮ್ಯಾನೇಜ್‌ಮೆಂಟ್’ ನಲ್ಲಿ ಅತ್ಯುತ್ತಮ ಎಚ್‌ಆರ್ ಪ್ರಾಕ್ಟೀಸಸ್
ಪ್ರಗತಿಯಲ್ಲಿರುವ ಪ್ರಮುಖ ಯೋಜನೆಗಳು
ಬದಲಾಯಿಸಿ- ಮುಂಬಯಿ ರಿಫೈನರಿಯಲ್ಲಿ ಹೊಸ ಎಫ್‌ಸಿಸಿಯು
- ಮುಂಬಯಿ ರಿಫೈನರಿಯಲ್ಲಿ ಲ್ಯೂಬ್ ಆಯಿಲ್ ಬೇಸ್ ಸ್ಟಾಕ್ (ಎಲ್‌ಒಬಿಎಸ್) ಅಪ್ ಗ್ರಡೇಶನ್ ಪ್ರಾಜೆಕ್ಟ್
- ಮುಂಬಯಿ & ವಿಶಾಖಪಟ್ಟಣಂ ಸಂಸ್ಕರಣಾಗಾರಗಳಲ್ಲಿ ಡೀಸೆಲ್ ಹೈಡ್ರೊ ಟ್ರೀಟಿಂಗ್ (ಡಿಎಚ್‌ಟಿ)
- ಮುಂಬಯಿ ಸಂಸ್ಕರಣಾಗಾರದಲ್ಲಿ ಹೊಸ ಇಂಟಿಗ್ರೇಟೆಡ್ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲ್ಯಾಂಟ್
- ಸಿಲ್ವೇಸಿಯಾದಲ್ಲಿ ನ್ಯೂ ಗ್ರೀಸ್ & ಸ್ಪೆಶಾಲಿಟಿ ಪ್ರಾಡಕ್ಟ್ಸ್ ಪ್ಲ್ಯಾಂಟ್ ಗ್ರೀಸ್, ಕೂಲೆಂಟ್‌ಗಳು & ಬ್ರೇಕ್ ಫ್ಲುಯಿಡ್‌ಗಳನ್ನು ಉತ್ಪಾದಿಸುವ ಉತ್ತಮ ಮಟ್ಟದ ಕಾರ್ಖಾನೆ. ಸೆಪ್ಟೆಂಬರ್, 2010ರ ಹೊತ್ತಿಗೆ ಕಾರ್ಯಾಚರಣೆ ಪ್ರಾರಂಭ.
- ಪಂಜಾಬ್‌ನ ಭಟಿಂಡಾದ ಗುರು ಗೋವಿಂದ ರಿಫೈನರಿ ಪ್ರಾಜೆಕ್ಟ್. ಉತ್ಪಾದನೆ - 9 ಎಮ್‌ಎಮ್‌ಪಿಟಿಎ. 2012ರ ಹೊತ್ತಿಗೆ ಕಾರ್ಯಾಚರಣೆ ಪ್ರಾರಂಭವಾಗುತ್ತದೆ.
- ವಿಶಾಖಪಟ್ಟಣಂನಲ್ಲಿ ವ್ಹೈಟ್ ಆಯಿಲ್ ಟರ್ಮಿನಲ್.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "BSE 2010 Data". www.bseindia.com. Retrieved 2010-07-26.
- ↑ ೨.೦ ೨.೧ Fortune Global 500 2010 Rankings - State Bank of India
- ↑ ಸಿಎನ್‌ಎನ್ ಮನಿ
- ↑ "Hindustan Petroleum Corporation Limited Relies on Oracle Database Security Solutions" (PDF). /www.indiaprwire.com. Archived from the original (PDF) on 2016-03-04. Retrieved 2010-07-26.
- ↑ http://www-03.ibm.com/press/us/en/pressrelease/25041.wss
- ↑ "HPCL - Company Profile". Companyin.com. Retrieved 2010-07-26.
- ↑ "Buy HPCL With Target Of Rs 490 | TopNews". Topnews.in. 2010-05-07. Retrieved 2010-07-26.
- ↑ http://www.hplubes.com HP Lubes
- ↑ http://www.hpgas.com HP GAS
- ↑ http://www.hpaviation.in Archived 2019-04-23 ವೇಬ್ಯಾಕ್ ಮೆಷಿನ್ ನಲ್ಲಿ. HP Aviation
- ↑ "India's top 10 brands". business.rediff.com. Retrieved 26 Oct 2010.