ಹಳದಿ ಎದೆಯ ಹರಟೆಮಲ್ಲ

Mixornis gularis
Calls of rubicapilla (southern India)
Conservation status
Scientific classification e
Unrecognized taxon (fix): Mixornis
ಪ್ರಜಾತಿ:
M. gularis
Binomial name
Mixornis gularis
(Horsfield, 1822)
Distribution of Mixornis gularis
Synonyms

Macronus gularis

Pin-striped tit-babbler
Calls of rubicapilla (southern India)
Scientific classification Edit this classification
Kingdom: Animalia
Phylum: Chordata
Class: Aves
Order: Passeriformes
Family: Timaliidae
Genus: Mixornis
Species:
M. gularis
Binomial name
Mixornis gularis

(Horsfield, 1822)
Distribution of Mixornis gularis
Synonyms

Macronus gularis

ಪಿನ್-ಸ್ಟ್ರೈಪ್ಡ್ ಟಿಟ್-ಬ್ಯಾಬ್ಲರ್ ( ಮಿಕ್ಸರ್ನಿಸ್ ಗುಲಾರಿಸ್ ), ಇವನ್ನು ಹಳದಿ-ಎದೆಯ ಹರಟೆಮಲ್ಲ ಎಂದೂ ಕರೆಯುತ್ತಾರೆ, ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಓಲ್ಡ್ ವರ್ಲ್ಡ್ ಬಾಬ್ಲರ್ ಕುಟುಂಬ ಟಿಮಾಲಿಡೆಯಲ್ಲಿನ ಒಂದು ಜಾತಿಯ ಪಕ್ಷಿ.

ವ್ಯವಸ್ಥಾಶಾಸ್ತ್ರ ಮತ್ತು ವರ್ಗೀಕರಣಶಾಸ್ತ್ರ ಬದಲಾಯಿಸಿ

ಹಳದಿ-ಎದೆಯ ಹರಟೆಮಲ್ಲ ಹಕ್ಕಿಯನ್ನು 1822 ರಲ್ಲಿ ಅಮೇರಿಕಾದ ನಿಸರ್ಗತಜ್ಞ ಥಾಮಸ್ ಹಾರ್ಸ್ಫೀಲ್ಡ್ ಅವರು ಸುಮಾತ್ರಾದಲ್ಲಿ ಸಂಗ್ರಹಿಸಿದ ಮಾದರಿಯನ್ನು ಆಧರಿಸಿ, ಟಿಮಾಲಿಯಾ ಗುಲಾರಿಸ್ ಎಂಬ ವೈಜ್ಞಾನಿಕ ಹೆಸರಿನಿಂದ ವಿಜ್ಞಾನಪ್ರಪಂಚಕ್ಕೆ ಪರಿಚಯಿಸಿದರು. [೨] [೩] ಹಳದಿ-ಎದೆಯ ಹರಟೆಮಲ್ಲ ಹಕ್ಕಿಗಳನ್ನು ಮೊದಲು ಮ್ಯಾಕ್ರೋನಸ್ ಕುಲದಲ್ಲಿ ಗುರುತಿಸಲಾಗಿತ್ತು ಆದರೆ 2019 ರಲ್ಲಿ ಪ್ರಕಟವಾದ ಆಣ್ವಿಕ ವಂಶೋತ್ಪತ್ತಿ (molecular phylogenetic‌‌)ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ, [೪] ಇಂಗ್ಲೆಂಡಿನ ಪ್ರಾಣಿಶಾಸ್ತ್ರಜ್ಞ ಎಡ್ವರ್ಡ್ ಬ್ಲೈತ್ ರು 1842 ರಲ್ಲಿ ಮಿಕ್ಸರ್ನಿಸ್ ಕುಲಕ್ಕೆ ಸ್ಥಳಾಂತರಿಸಿದರು. [೫] [೬] ಕುಲದ ವೈಜ್ಞಾನಿಕ ಹೆಸರನ್ನು ಹೀಗೆ ಅರ್ಥೈಸಬಹುದು, ಪ್ರಾಚೀನ ಗ್ರೀಕ್ನ - ಮಿಕ್ಸಿಸ್ ಅಂದರೆ "ಮಿಶ್ರ" ಅಥವಾ "ಜೊತೆಯಾಗಿರುವುದು", ಮತ್ತು ಓರ್ನಿಸ್ ಅಂದರೆ "ಪಕ್ಷಿ" . ಹಕ್ಕಿಯ ನಿರ್ದಿಷ್ಟ ವಿಶೇಷಣ - ಗುಲಾರಿಸ್, ಆಧುನಿಕ ಲ್ಯಾಟಿನ್ ನಲ್ಲಿ "ಗಂಟಲು". [೭] ಹಳದಿ-ಎದೆಯ ಹರಟೆಮಲ್ಲ ಹಕ್ಕಿಗಳು ಡ್ಯುಮೆಟಿಯಾ ಮತ್ತು ಟಿಮಾಲಿಯಾ ಕುಲಗಳನ್ನು ಒಳಗೊಂಡಿರುವ ಗುಂಪಿಗೆ ಸೇರಿದೆ. [೪]

ವಿಶಿಷ್ಟವಾದ ಬೋರ್ನಿಯ ಮತ್ತು ಜಾವಾದ ಜೀವಸಂದಣಿಯನ್ನು ನಿಗೆಲ್ ಕಾಲರ್ ನಡೆಸಿದ ರೂಪಶಾಸ್ತ್ರದ ಅಧ್ಯಯನದ ಆಧಾರದ ನಂತರ ಈ ಜಾತಿಗಳನ್ನು ಪ್ರತ್ಯೇಕಿಸಿ, ಬೋಲ್ಡ್-ಸ್ಟ್ರೈಪ್ಡ್ ಟಿಟ್-ಬ್ಯಾಬ್ಲರ್ ( ಮಿಕ್ಸಾರ್ನಿಸ್ ಬೋರ್ನೆನ್ಸಿಸ್ ) ಎಂದು ಮರುನಾಮಕರಣ ಮಾಡಲಾಗಿದೆ. [೮]

ಈ ಹಕ್ಕಿಯ ಜೀವಸಂದಣಿಯಲ್ಲಿ, ಈವರೆಗೆ 13 ಉಪಜಾತಿಗಳನ್ನು ಗುರುತಿಸಲಾಗಿದ್ದು ಅವುಗಳ ನೆಲೆಯ ಪ್ರದೇಶ ಕೆಳಗಿನಂತಿವೆ: [೬]

  • M. g. rubicapilla (Tickell, 1833) - ನೇಪಾಳ, ಭೂತಾನ್ ಮತ್ತು ಈಶಾನ್ಯ ಭಾರತದಿಂದ ಬಾಂಗ್ಲಾದೇಶ ಮತ್ತು ಪೂರ್ವ-ಮಧ್ಯ ಭಾರತ
  • M. g. ticehursti Stresemann, 1940 - ಪಶ್ಚಿಮ ಮ್ಯಾನ್ಮಾರ್
  • M. g. sulphureus (Rippon, 1900) - ಪೂರ್ವ ಮ್ಯಾನ್ಮಾರ್, ಪಶ್ಚಿಮ ಥೈಲ್ಯಾಂಡ್ ಮತ್ತು ನೈಋತ್ಯ ಯುನ್ನಾನ್ (ದಕ್ಷಿಣ ಚೀನಾ)
  • M. g. lutescens Delacour, 1926 - ಆಗ್ನೇಯ ಯುನ್ನಾನ್ (ದಕ್ಷಿಣ ಚೀನಾ), ಉತ್ತರ, ಈಶಾನ್ಯ ಥೈಲ್ಯಾಂಡ್ ಮತ್ತು ಉತ್ತರ ಇಂಡೋಚೈನಾ
  • M. g. kinneari Delacour & Jabouille, 1924 - ಮಧ್ಯ ವಿಯೆಟ್ನಾಂ
  • M. g. saraburiensis (Deignan, 1956) - ಪೂರ್ವ-ಮಧ್ಯ ಥೈಲ್ಯಾಂಡ್ ಮತ್ತು ಪಶ್ಚಿಮ ಕಾಂಬೋಡಿಯಾ
  • M. g. versuricola Oberholser, 1922 - ಪೂರ್ವ ಕಾಂಬೋಡಿಯಾ ಮತ್ತು ದಕ್ಷಿಣ ವಿಯೆಟ್ನಾಂ
  • M. g. condorensis Robinson, 1921 - ಕಾನ್ ಸನ್ ದ್ವೀಪ (ದಕ್ಷಿಣ ವಿಯೆಟ್ನಾಂನಿಂದ)
  • M. g. connectens (Kloss, 1918) – ಟೆನಾಸ್ಸೆರಿಮ್ (ಆಗ್ನೇಯ ಮ್ಯಾನ್ಮಾರ್), ಥೈಲ್ಯಾಂಡ್‌ನ ಕರಾವಳಿ ಕೊಲ್ಲಿಯಿಂದ ಮಧ್ಯ ಮಲಯ ಪರ್ಯಾಯ ದ್ವೀಪಕ್ಕೆ ( ಚೆರ್ಸೋನೆಸೊಫಿಲಸ್ ಅನ್ನು ಒಳಗೊಂಡಿದೆ) [೯]
  • M. g. archipelagicus Oberholser, 1922 - ಮೆರ್ಗುಯಿ ದ್ವೀಪಸಮೂಹ (ನೈಋತ್ಯ ಮ್ಯಾನ್ಮಾರ್)
  • M. g. inveteratus Oberholser, 1922 - ಆಗ್ನೇಯ ಥೈಲ್ಯಾಂಡ್ ಮತ್ತು ಕಾಂಬೋಡಿಯಾದ ಕರಾವಳಿ ದ್ವೀಪಗಳು
  • M. g. gularis (Horsfield, 1822) - ದಕ್ಷಿಣ ಮಲಯ ಪೆನಿನ್ಸುಲಾ, ಸುಮಾತ್ರಾ, ಬನ್ಯಾಕ್ ದ್ವೀಪಗಳು (ಉತ್ತರ ಸುಮಾತ್ರದ ಪಶ್ಚಿಮ) ಮತ್ತು ಬಟು ದ್ವೀಪಗಳು (ಮಧ್ಯ ಸುಮಾತ್ರದ ಪಶ್ಚಿಮ)
  • M. g. woodi Sharpe, 1877 - ಪಲವಾನ್ ಗುಂಪು (ನೈಋತ್ಯ ಫಿಲಿಪೈನ್ಸ್)

ವಿವರಣೆ ಬದಲಾಯಿಸಿ

ಈ ಜಾತಿಯು ಹಳದಿ ಹುಬ್ಬು ಮತ್ತು ಕೆಂಗಂದು ಕಿರೀಟವನ್ನು ಹೊಂದಿದೆ. ಹಳದಿ ಬಣ್ಣದ ಗಂಟಲ ಮೇಲೆ ಕಂದು ಬಣ್ಣದ ಗೆರೆಗಳಿರುತ್ತವೆ. ಹಕ್ಕಿಯ ಧ್ವನಿ ಜೋರಾಗಿ ಪುನರಾವರ್ತಿತವಾದ ಚಾಂಕ್-ಚಾಂಕ್-ಚಾಂಕ್-ಚಾಂಕ್-ಚಾಂಕ್ ನಂತಿದ್ದು, ಸಿಂಪಿಗ (ಸಾಮಾನ್ಯ ಟೈಲರ್ ಬರ್ಡ್) ವನ್ನು ನೆನಪಿಸುತ್ತದೆ.

ನೆಲಮಟ್ಟದ ಗಿಡ ಪೊದೆಗಳಲ್ಲಿ, ಸಣ್ಣ ಗುಂಪುಗಳಲ್ಲಿ ಆಹಾರವನ್ನರಸುತ್ತವೆ. ಫೆಬ್ರವರಿಯಿಂದ ಜುಲೈವರೆಗೆ ಪೂರ್ವಮುಂಗಾರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹುಲ್ಲು ಮತ್ತು ಎಲೆಗಳಿಂದ ಮಾಡಿದ ಸಡಿಲವಾದ ಚೆಂಡಿನ ಆಕಾರದ ಗೂಡನ್ನು ನಿರ್ಮಿಸುತ್ತವೆ.

ಪ್ರಸರಣ ಬದಲಾಯಿಸಿ

 
ಇಂಡೋನೇಷ್ಯಾದ ಬಿಂಟಾನ್‌ನಲ್ಲಿ

ಬಾಂಗ್ಲಾದೇಶ, ಭೂತಾನ್, ಬ್ರೂನಿಯೆ, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ವ್ಯಾಪಕವಾಗಿ ಹರಡಿವೆ.

ಭಾರತದಲ್ಲಿ, ಉತ್ತರ ಪೂರ್ವ ಘಟ್ಟ ಮತ್ತು ದಕ್ಷಿಣ ಭಾರತದಲ್ಲಿ ‍ (ಕೇವಲ ಕಬಿನಿ ಜಲಾಶಯ -ಮುದುಮಲೈನಲ್ಲಿ ಮಾತ್ರ) ವಿಂಗಡಿತ ಜೀವಸಂದಣಿ ದಾಖಲಾಗಿದೆ, ಈ ಎರಡು ಪ್ರದೇಶಗಳ ವಿಶಾಲ ಅಂತರದ ನಡುವೆ ಈ ಹಕ್ಕಿಗಳ ಸುಳಿವಿಲ್ಲ . 1939ರಲ್ಲಿ ಕಬಿನಿ ಜಲಾಯದ ಬಳಿ ಇರುವ ಅಂತರಸಂತೆಯಿಂದ ಸಲೀಂ ಅಲಿ ಈ ಹಕ್ಕಿಯನ್ನು ದಾಖಲಿಸಿದ್ದರು. ಈ ಆರಂಭಿಕ ಸಂಗ್ರಹಣೆಯ ನಂತರ ಇಲ್ಲಿಂದ ಮತ್ತೆ ಈ ಹರಟೆಮಲ್ಲ ಹಕ್ಕಿಗಳನ್ನು ಕಂಡ ಯಾವುದೇ ದಾಖಲೆಗಳಿಲ್ಲ. 2004 ರಲ್ಲಿ ಮುದುಮಲೈನ ಮಾಸಿನಗುಡಿ ಪ್ರದೇಶದಿಂದ ಮರುದಾಖಲಾತಿಯ ನಂತರ ಮತ್ತೆ ಕಾಣಿಸಿಕೊಂಡಿಲ್ಲ [೧೦]

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ BirdLife International (2016). "Mixornis gularis". IUCN Red List of Threatened Species. 2016: e.T22735162A95104150. doi:10.2305/IUCN.UK.2016-3.RLTS.T22735162A95104150.en. Retrieved 12 November 2021. ಉಲ್ಲೇಖ ದೋಷ: Invalid <ref> tag; name "iucn status 12 November 2021" defined multiple times with different content
  2. Horsfield, Thomas (1822). Zoological researches in Java, and the neighbouring islands. London: Printed for Kingsbury, Parbury, & Allen. Part 3. Plate [43], fig. 2, text.
  3. Mayr, Ernst; Paynter, Raymond A. Jr, eds. (1964). Check-List of Birds of the World. Vol. 10. Cambridge, Massachusetts: Museum of Comparative Zoology. p. 321.
  4. ೪.೦ ೪.೧ Cai, T.; Cibois, A.; Alström, P.; Moyle, R.G.; Kennedy, J.D.; Shao, S.; Zhang, R.; Irestedt, M.; Ericson, P.G.P. (2019). "Near-complete phylogeny and taxonomic revision of the world's babblers (Aves: Passeriformes)". Molecular Phylogenetics and Evolution. 130: 346–356. doi:10.1016/j.ympev.2018.10.010. PMID 30321696.
  5. Blyth, Edward (1842). "Report from the curator". Journal of the Asiatic Society of Bengal. 11, Part 2 (128): 788-799 [794, note].
  6. ೬.೦ ೬.೧ Gill, Frank; Donsker, David; Rasmussen, Pamela, eds. (August 2022). "Babblers & fulvettas". IOC World Bird List Version 12.2. International Ornithologists' Union. Retrieved 22 September 2022.
  7. Jobling, James A. (2010). The Helm Dictionary of Scientific Bird Names. London: Christopher Helm. pp. 257, 181. ISBN 978-1-4081-2501-4.
  8. Collar, N.J. (2006). "A partial revision of the Asian babblers ( Timaliidae )". Forktail. 22: 85–112.
  9. Cros, E.; Rheindt, F.E. (2017). "Massive bioacoustic analysis suggests introgression across Pleistocene land bridges in Mixornis tit-babblers". Journal of Ornithology. 158 (2): 407–419. doi:10.1007/s10336-016-1411-x.
  10. Praveen J., Job K. Joseph & Nick Lethaby (2004) Sighting of Yellow-breasted Babbler Macronous gularis in South India.