ಹರಿಶ್ಚಂದ್ರ (ಚಲನಚಿತ್ರ)
೧೯೬೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಸತ್ಯ ಹರಿಶ್ಚಂದ್ರ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ.
"ಹರಿಶ್ಚಂದ್ರ" ೧೯೪೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಸರಸ್ವತಿ ಸಿನಿ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ಆರ್.ನಾಗೇಂದ್ರ ರಾಯರು ನಿರ್ಮಿಸಿ, ನಿರ್ದೇಶಿಸಿದರು.
ಹರಿಶ್ಚಂದ್ರ (ಚಲನಚಿತ್ರ) | |
---|---|
ಹರಿಶ್ಚಂದ್ರ | |
ನಿರ್ದೇಶನ | ಆರ್.ನಾಗೇಂದ್ರರಾಯ |
ಚಿತ್ರಕಥೆ | ಆರ್. ನಾಗೇಂದ್ರ ರಾವ್ |
ಕಥೆ | ಪೌರಾಣಿಕ ಕತೆ |
ಸಂಭಾಷಣೆ | ಆರ್. ನಾಗೇಂದ್ರ ರಾವ್ |
ಪಾತ್ರವರ್ಗ | ಸುಬ್ಬಯ್ಯ ನಾಯ್ಡು ಲಕ್ಷ್ಮೀಬಾಯಿ ಆರ್.ನಾಗೇಂದ್ರರಾವ್, ಜೆ.ವಿ.ಕೃಷ್ಣಮೂರ್ತಿ ರಾವ್, ಎಂ.ಜಿ.ಮರಿರಾವ್ |
ಸಂಗೀತ | ಸರಸ್ವತಿ ಆರ್ಕೇಸ್ಟ್ರಾ, ಮದರಾಸು |
ಛಾಯಾಗ್ರಹಣ | ಜೆ.ವಿ.ಕೃಷ್ಣಮೂರ್ತಿ ರಾವ್ |
ಸಂಕಲನ | ಎಂ.ವಿ.ರಾಮನ್ |
ಬಿಡುಗಡೆಯಾಗಿದ್ದು | ೧೯೪೩ |
ನೃತ್ಯ | ಬಿ.ರಮಣಪಿಳ್ಳೈ, (ಜಾನಪದ ನರ್ತನ: ಜಯಲಕ್ಷ್ಮಿ ಮತ್ತು ಜಯ) |
ಚಿತ್ರ ನಿರ್ಮಾಣ ಸಂಸ್ಥೆ | ಸರಸ್ವತಿ ಸಿನಿ ಫಿಲಂಸ್ ಲಿ., ಮೈಲಾಪುರ |
ಸಾಹಿತ್ಯ | ಆರ್. ನಾಗೇಂದ್ರ ರಾವ್ |
ಹಿನ್ನೆಲೆ ಗಾಯನ | ಆಯಾ ಪಾತ್ರಧಾರಿಗಳು |
ಕಥಾ ಸಾರಂಶ
ಬದಲಾಯಿಸಿಹರಿಶ್ಚಂದ್ರ ಸತ್ಯಕ್ಕಾಗಿ ರಾಜ್ಯ,ಕೋಶ,ಹೆಂಡತಿ,ಮಕ್ಕಳನ್ನು ಬಿಟ್ಟು ಕಷ್ಟಪಡುವ ಪೌರಾಣಿಕ ಕಥಾನಕವೇ ಈ ಚಿತ್ರದ ಕಥಾ ಸಾರಾಂಶ.ವಿಶ್ವಾಮಿತ್ರನನನ್ನು ಖಳನಾಯಕನಂತೆ ಚಿತ್ರಿಸದೇ ತಮ್ಮಲ್ಲಿನ ತಪಃಶಕ್ತಿ ಧಾರರೆಯೆರುವ ಸಲುವಾಗಿ ಈ ಕಠಿಣ ಪರಿಕ್ಷೆಗಳನ್ನು ಒಡ್ಡುವಂತೆ ಚಿತ್ರನಾಟಕ ರಚಿಸಲಾಗಿತ್ತು.
ವಿಶೇಷತೆ
ಬದಲಾಯಿಸಿಆರ್. ನಾಗೇಂದ್ರ ನಿರ್ದೇಶನದ ಮೊದಲ ಚಿತ್ರ ಇದಾಗಿದೆ.[೧]ರಾಜಯ್ಯಂಗಾರ್ ನಟಿಸಿರುವ ಮೊದಲ ಚಿತ್ರ ಕೂಡ. ಬೇರೆ ಭಾಷೆಗೆ ಡಬ್ ಆದ ಭಾರತದ ಮೊದಲ ಚಿತ್ರವಾಗಿದೆ.[೨] ತಮಿಳು ಭಾಷೆಗೆ ಡಬ್ ಆದ ಈ ಚಿತ್ರಕ್ಕೆ ಕನ್ನಡ ಕಲಾವಿದರೇ ಸಂಭಾಷಣೆ ಹೇಳಿದರು. ೧೧,೦೦೦ ಅಡಿಗಿಂತಲೂ ಯಾವುದೇ ಚಲಚಿತ್ರ ಉದ್ದವಿರಬಾರದೆಂಬ ಸರ್ಕಾರದ ನಿಷೇಧಾಜ್ಞೆಯಂತೆ ಆ ಮಿತಿಯೊಳಗೆ ಚಿತ್ರನ್ನು ತಯಾರಿಸಲಾಯಿತು.
ನಿರ್ಮಾಣ ಮತ್ತು ಬಿಡುಗಡೆ
ಬದಲಾಯಿಸಿಸೆನ್ಸಾರ್ ಆದ ಬಳಿಕ ೧೦,೯೯೦ ಅಡಿ ಉದ್ದವಿದ್ದ ಈ ಚಲನಚಿತ್ರ, ಏಪ್ರಿಲ್ ೧೯೪೩ರಲ್ಲಿ ಬಿಡುಗಡೆಯಾಯಿತು. ಧಾರವಾಡದಲ್ಲಿ ಶತದಿನೋತ್ಸವ ಆಚರಿಸಿದ್ದಷ್ಟೇ ಅಲ್ಲ, ಹುಬ್ಬಳ್ಳಿಯಲ್ಲಿ ೨೯ ವಾರಗಳ ಕಾಲ ಪ್ರದರ್ಶಿತವಾದ ಮೊದಲ ಚಿತ್ರ ಇದು.[೩]
ಪಾತ್ರ ವರ್ಗ
ಬದಲಾಯಿಸಿ- ಎಂ.ವಿ. ಸುಬ್ಬಯ್ಯ ನಾಯ್ಡು (ಹರಿಶ್ಚಂದ್ರ)
- ಆರ್. ನಾಗೇಂದ್ರ ರಾವ್ (ವಿಶ್ವಾಮಿತ್ರ)
- ಜಿ.ವಿ.ಕೃಷ್ಣಮೂರ್ತಿ ರಾವ್ (ನಕ್ಷತ್ರಿಕ)
- ಬಿ.ಎಸ್. ರಾಜಯ್ಯಂಗಾರ್ (ನಾರದ)
- ಎಂ.ಜಿ.ಮರಿ ರಾವ್ (ಮೈತ್ರೇಯ)
- ಲಕ್ಷ್ಮಿ ಬಾಯಿ (ಚಂದ್ರಮತಿ)
- ಮಾ| ನರಸಿಂಹನ್ (ಲೋಹಿತ)
ಉಲ್ಲೇಖ
ಬದಲಾಯಿಸಿ- ↑ Pillai, Swarnavel Eswaran (2015). Madras Studios: Narrative, Genre, and Ideology in Tamil Cinema. India: SAGE Publications. pp. 107–108. ISBN 978-93-5150-121-3.
- ↑ R, Shilpa Sebastian (19 December 2019). "2019: The year when Kannada cinema went national". The Hindu.
- ↑ "Satya Harischandra 100 days in Dharwad". Chitraloka. 14 August 2013. Archived from the original on 7 October 2013. Retrieved 5 October 2013.