ಎಂ.ವಿ. ಸುಬ್ಬಯ್ಯ ನಾಯ್ಡು
ಎಂ.ವಿ. ಸುಬ್ಬಯ್ಯ ನಾಯ್ಡ ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ಜನಿಸಿದ (೧೮೯೬) ಸುಬ್ಬಯ್ಯನಾಯ್ಡು ಕನ್ನಡದ ಮೊದಲ ನಾಯಕ ನಟ.‘ಸತಿ ಸುಲೋಚನಾ’ ಚಿತ್ರದಲ್ಲಿ (ಪ್ರತಿ)ನಾಯಕ ಇಂದ್ರಜಿತುವಿನ ಪಾತ್ರ ವಹಿಸಿದ ದಿವಂಗತ ಎಂ.ವಿ. ಸುಬ್ಬಯ್ಯ ನಾಯ್ಡುರವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಅಭಿಜಾತ ಕಲಾವಿದರಲ್ಲೊಬ್ಬರು.[೧] ರಂಗಭೂಮಿಯಲ್ಲಿ ಅನೇಕ ಪ್ರಯೋಗ ನಡೆಸಿದವರು. ರಂಗಭೂಮಿಗೆ ಶಿಸ್ತು ಮತ್ತು ಗ್ಲಾಮರ್ ತಂದವರು. ರಂಗಭೂಮಿಯ ಸೆಳೆತದಿಂದಾಗಿ ಅವರಿಗೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ಚಲನಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಆಗಲಿಲ್ಲ. ಆದರೆ ಇರುವ ದಿನವೂ ಚಿತ್ರರಂಗದಲ್ಲಿ ಅಭಿನಯದ ಶೈಲಿಯೊಂದನ್ನು ರೂಪಿಸಿದರು. ಅವರು ಪುರಾಣ ಪಾತ್ರಗಳ ಅಭಿನಯಕ್ಕೆ ನೀಡಿದ ಹೊಸ ಬಗೆಯ ಶೈಲಿಯು ಮುಂದೆ ಅನೇಕ ನಟರ ಮೇಲೆ ಪ್ರಭಾವ ಬೀರಿತೆಂದು ಹೇಳಲಾಗುತ್ತದೆ.
ಎಂ.ವಿ. ಸುಬ್ಬಯ್ಯ ನಾಯ್ಡು M. V. Subbaiah Naidu | |
---|---|
Born | ೧೮೯೬ ಮದಲಾಪುರ, ಮೈಸೂರ್ ರಾಜ್ಯ |
Died | 21 July 1962 | (aged 65–66)
Occupation(s) | ನಟ, ಚಿತ್ರ ನಿರ್ದೇಶಕ |
Spouse(s) | ವೆಂಕಟಮ್ಮ ಲಕ್ಷಿ ಬಾಯಿ |
Children | ಲೋಕೇಶ್ ಸೇರಿ ೪ ಜನ |
ವೃತ್ತಿ
ಬದಲಾಯಿಸಿಅವರ ಬದುಕು ಅನೇಕ ನಾಟಕೀಯ ತಿರುವುಗಳ ಕಥಾ ಹಂದರದ ಸಿನಿಮಾದಂತಿದೆ. ಬಾಲ್ಯದಲ್ಲೇ ಪಿತೃವಿಯೋಗ. ಬಳಿಕ ಹೆಗ್ಗಡದೇವನಕೋಟೆಯ ಸೋದರಮಾನವ ಮನೆಯಲ್ಲಿ ಎಮ್ಮೆ ಕಾಯುವ ಕೆಲಸ. ಅಲ್ಲಿನ ಸಂಕ ತಾಳಲಾರದೆ ಮೈಸೂರಿಗೆ ಬಂದು ವದ ಸಂಬಳದ ಲೆಕ್ಕದಲ್ಲಿ ಹಲವಾರು ಕಡೆ ದುಡಿಮೆ. ಮಂಡಿಯಲ್ಲಿ ಕೂಲಿ, ಮರಕೊಯ್ಯುವ ಕೆಲಸ. ಇರ ನಡುವೆ ಗರಡಿ ಮನೆ ಸೇರಿ ಅಂಗಸಾಧನೆ. ಅನೇಕ ಕುಸ್ತಿಗಳಲ್ಲಿ ಪಾರಿತೋಕ ಗಳಿಕೆ. ಮೈಸೂರಿನ ನಟ-ಸಂಗೀತದ ಮೇ ಎಂ.ವಿ. ಮಾದಪ್ಪನವರ ಬಳಿ ಸಂಗೀತ ಮತ್ತು ಅಭಿನಯದಲ್ಲಿ ತರಬೇತಿ. ಅಲ್ಲಿಂದಾಚೆಗೆ ಕಲಾಸೇವೆಗೆ ಬದುಕು ಮುಡಿಪು. ಮೈಸೂರಿನ ಶಾಕುಂತಲಾ ಕಂಪನಿ, ತುಮಕೂರಿನ ಮನೋಹರ ನಾಟಕ ಮಂಡಳಿ, ಜನಮನೋಲ್ಲಾಸಿನಿ ಕಂಪನಿ, ಗುಬ್ಬಿ ಕಂಪನಿಗಳಲ್ಲಿ ನಟರಾಗಿ ಪ್ರವರ್ಧಮಾನಕ್ಕೆ ಬಂದರು. ೧೯೩೨ರಲ್ಲಿ ತಮ್ಮ ಸ್ವಂತ ಕಂಪನಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸ್ಥಾಪನೆ. ಪ್ರಯೋಗಶೀಲ ಆರ್. ನಾಗೇಂದ್ರರಾಯರು ನಾಯ್ಡು ಅವರನ್ನು ಕೂಡಿಕೊಂಡ ನಂತರ ಇಬ್ಬರ ಸಂಗಮದಿಂದ ‘ಭೂಕೈಲಾಸ’, ‘ವಸಂತಸೇನಾ’, ‘ನಿರುಪಮಾ’, ‘ಕೀಚಕವಧೆ’ ಮೊದಲಾದ ನಾಟಕಗಳು ದಕ್ಷಿಣ ಭಾರತದಾದ್ಯಂತ ಜನಮನ್ನಣೆ ಪಡೆದವು.
ಗುಬ್ಬಿ ವೀರಣ್ಣನವರು ತಯಾರಿಸಿದ ‘ಹಿಸ್ ಲವ್ ಅಫೇರ್’ ಮೂಕಿ ಚಿತ್ರದಲ್ಲಿ ಪಾತ್ರವಹಿಸಿದ್ದ ಸುಬ್ಬಯ್ಯನಾಯ್ಡುರವರು ‘ಸತಿ ಸುಲೋಚನಾ’ ಚಿತ್ರಕ್ಕೆ ಆಯ್ಕೆಯಾದರು. ಜೊತೆಗೆ ಆರೆನ್ನಾರ್ ಸಂಗೀತ ನಿರ್ದೇಶಕ-ನಟರಾಗಿ ಜೊತೆಯಲ್ಲಿದ್ದರು. ಚಿತ್ರದಲ್ಲಿ ಮಂಡೋದರಿಯ ಪಾತ್ರ ನಟಿ ಲಕ್ಷ್ಮೀ ಬಾಯಿ ಯವಹಿಸಿದವರನ್ನೇ ಮುಂದೆ ನಾಯ್ಡುರವರು ವರಿಸಿದರು. ಅದೇ ಚಿತ್ರದಲ್ಲಿ ನಟಿಸಿದ್ದ ಆಕೆಯ ಸೋದರಿ ಕಮಲಾಬಾಯಿಯವರನ್ನು ಆರೆನ್ನಾರ್ ವಿವಾಹವಾದರು. ನಾಯ್ಡು-ರಾಯರು ಅಣ್ಣ ತಮ್ಮಂದಿರಂತೆ ಶ್ರೀ ಸಾಹಿತ್ಯ ಸಾಮ್ರಾಜ್ಯ ಮಂಡಳಿಯನ್ನು ಹದಿನೇಳು ಕಾಲ ಮುನ್ನಡೆಸಿ ಕೊನೆಗೆ ಬೇರೆಯಾದರು. ನಾಯ್ಡು-ರಾಯರ ಜೋಡಿ ಚಲನಚಿತ್ರ ರಂಗದಲ್ಲಿ ಉತ್ತಮ ಪ್ರಯೋಗಗಳನ್ನು ನಡೆಸಿತು. ತಮಿಳು ಚಿತ್ರನಿರ್ಮಾಪಕರ ಪರಿಚಯವಿದ್ದ ಆರೆನ್ನಾರ್ ಅವರೊಡನೆ ಹಾಗೂ ಗೆಳೆಯ ನಾಯ್ಡು ಅವರ ಪಾಲುದಾರಿಕೆಯಲ್ಲಿ ಚಿತ್ರ ನಿರ್ಮಾಣಕ್ಕಿಳಿದರು. ೧೯೪೧ರಲ್ಲಿ ತಯಾರಾದ ‘ವಸಂತಸೇನಾ’ ಚಿತ್ರದಲ್ಲಿ ನಾಯ್ಡುರವರು ಚಾರುದತ್ತನ ಪಾತ್ರ ವಹಿಸಿದರೆ ಆರೆನ್ನಾರ್ ‘ಶ’ಕಾರನ ಪಾತ್ರಕ್ಕೆ ಹೊಸದೊಂದು ತಿರುವು ನೀಡಿದರು. ಬಳಿಕ ಎಂ.ವಿ.ಎಸ್-ಆರೆನ್ನಾರ್ ಜೋಡಿಯು ಎವಿಎಂ ಸಂಸ್ಥೆಯ ನೆರವಿನೊಡನೆ ತಯಾರಿಸಿದ ‘ಸತ್ಯ ಹರಿಶ್ಚಂದ್ರ’ ಹೊಸದೊಂದು ಇತಿಹಾಸವನ್ನೇ ಬರೆಯಿತು. (ಏಳನೇ ಅಧ್ಯಾಯ ನೋಡಿ) ಇಲ್ಲೂ ಸುಬ್ಬಯ್ಯನಾಯ್ಡು (ಹರಿಶ್ಚಂದ್ರ)[೨] ಮತ್ತು ರಾಯರ (ವಿಶ್ವಾಮಿತ್ರ) ಅಭಿನಯ ಜನರ ಮೇಲೆ ಮೋಡಿ ಹಾಕಿತ್ತು. ಇದು ರಾಯರು ಮೊದಲ ಅಧಿಕೃತ ನಿರ್ದೇಶನದ ಚಿತ್ರ. ಕೊನೆಯದಾಗಿ ಅವರಿಬ್ಬರೂ ಒಟ್ಟಾಗಿ ದುಡಿದ ಚಿತ್ರ ‘ಮಹಾತ್ಮ ಕಬೀರ್’ (೧೯೪೭). ರಾಯರ ನಿರ್ದೇಶನದಲ್ಲಿ ಕಬೀರ್ ಪಾತ್ರದಲ್ಲಿ ನಾಯ್ಡು ಅವರು ಅಭಿನಯಿಸಿದ್ದರು. ಎಂ.ವಿ.ಎಸ್-ಆರೆನ್ನಾರ್ ಜೋಡಿ ಬೇರೆಯಾದ ನಂತರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಲಾಂಛನದಡಿ ಎಂ.ಎಸ್. ಸುಬ್ಬಯ್ಯನಾಯ್ಡುರವರು ಎಚ್.ಎಸ್. ಕೃಸ್ವಾಮಿ ಅವರ ಜೊತೆಯಲ್ಲಿ ನಿರ್ದೇಶಿಸಿದ ‘ಭಕ್ತ ಪ್ರಹ್ಲಾದ’ (೧೯೫೮) ಚಿತ್ರವು ಅವರ ಅಭಿನಯದ ಕೊನೆಯ ಚಿತ್ರ. ಆ ಚಿತ್ರದಲ್ಲಿ ಅವರ ಮಗ ಲೋಕೇಶ್ ಪ್ರಹ್ಲಾದನ ಪಾತ್ರ ವಹಿಸಿದ್ದರು. ಅದು ನಿರ್ದೇಶಕ ವಿ. ಸೋಮಶೇಖರ್ ಅವರು ಚಿತ್ರರಂಗಕ್ಕೆ ಪ್ರವೇಶ ಪಡೆದ ಚಿತ್ರವೂ ಹೌದು. ನಾಯ್ಡು ಅವರು ನಾಗೇಂದ್ರರಾಯರು ರಚಿಸಿದ್ದ ‘ಭೂಕೈಲಾಸ’ದ ರಾವಣನ ಪಾತ್ರಕ್ಕೆ ವಿಶಿವಾದ ತಿರುವು ನೀಡಿದ್ದರು. ರಾವಣನ ಪಾತ್ರಕ್ಕೆ ಅಬ್ಬರದ ಅಭಿನಯವಿರಬೇಕೆಂಬುದು ಅಂದಿನ ಸ್ವೀಕೃತ ನೀತಿ. ಆದರೆ ನಾಯ್ಡು-ರಾಯರ ಜೋಡಿಯಲ್ಲಿ ರಾವಣ ಒಬ್ಬ ಮಾನವೀಯ ಗುಣದ ಚಕ್ರವರ್ತಿಯಾಗಿ, ತಾಯಿಗಾಗಿ ಆತ್ಮಲಿಂಗವನ್ನು ಹುಡುಕಿ ತರುವ ಭಾವುಕ ಮಗನಾಗಿ ಪರಿವರ್ತನೆಗೊಂಡಿದ್ದ. ಮುಂದೆ ತೆಲುಗಿನಲ್ಲಿ ಈ ಚಿತ್ರ ತಯಾರಾದಾಗ ಸುಬ್ಬಯ್ಯನಾಯ್ಡುರವರೇ ಪಾತ್ರ ವಹಿಸಿದ್ದರು. ರಾಜ್ ಅಭಿನಯದ ‘ಭೂಕೈಲಾಸ’ದ ರಾವಣನೂ, ನಾಯ್ಡು ಅವರ ಎರಕದಲ್ಲಿ ಮೂಡಿಬಂದವನೇ ಆಗಿದ್ದಾನೆ. ಆ ಚಿತ್ರದಲ್ಲಿ ರಾಜ್ರವರ ಅಭಿನಯ ಮನಮುಟ್ಟುತ್ತದೆ. ಆದರೂ ರಾಜ್ರವರು ಸುಬ್ಬಯ್ಯನಾಯ್ಡುರವರ ರಾವಣನ ಪಾತ್ರ ‘ಅಮೋಘ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹಾಗೆ ನೋಡಿದರೆ ರಾಜ್ರವರಿಗೆ ರಂಗಭೂಮಿಯಲ್ಲಿ ದೊಡ್ಡ ಪಾತ್ರಗಳನ್ನು ನೀಡಿ ಅವರ ಪ್ರತಿಭೆಗೆ ಕನ್ನಡಿ ಹಿಡಿದವರು ಸುಬಯ್ಯನಾಯ್ಡು ಅವರು.[೩]
ಪ್ರಯೋಗಶೀಲ
ಬದಲಾಯಿಸಿಚಿತ್ರರಂಗದ ನಂಟನ್ನು ಬಿಟ್ಟರೂ ರಂಗಭೂಮಿಯಲ್ಲಿ ಸದಾ ಪ್ರಯೋಗಶೀಲರಾಗಿದ್ದ ನಾಯ್ಡುರವರು ಬೆಂಗಳೂರಿನಲ್ಲಿ ಅಪಾರ ಹಣ ಹೂಡಿ ‘ಶ್ರೀರಾಮ ಜನನ’ ನಾಟಕಕ್ಕಾಗಿ ‘ಚಲಿಸುವ ರಂಗ ವೇದಿಕೆ’ಯನ್ನು ನಿರ್ಮಿಸಿದ್ದರು. ಆದರೆ ಆರ್ಥಿಕವಾಗಿ ಮುಗ್ಗರಿಸಿದರು. ಮಂಡ್ಯದಲ್ಲಿ ಕಂಪನಿ ಮೊಕ್ಕಾಂ ಮಾಡಿದ್ದಾಗ ಹೃದಯಾಘಾತದಿಂದ ಜುಲೈ ೨೧, ೧೯೬೨ರಂದು ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ
- (ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ೧೩ ಮತ್ತು ೧೪ ನೇಪುಟದಿಂದ ಪುಟದಿಂದ.'ನಮನ" )