ಹಟ್ಟಿಕುದ್ರು, ಕುಂದಾಪುರ
ಹಟ್ಟಿಕುದ್ರು, ಕುಂದಾಪುರ
ಹಟ್ಟಿಕುದ್ರು ಭಾರತದ ದೇಶದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಂದು ಸಣ್ಣ ಗ್ರಾಮ, ಇದು ಬಸ್ರೂರು ಪಂಚಾಯತ್ ವ್ಯಾಪ್ತಿಗೆ ಸೇರುತ್ತದೆ. ಇದರ ಜಿಲ್ಲಾ ಕೇಂದ್ರ ಉಡುಪಿಯಿಂದ ೩೯ಕಿಮೀ ದೂರದಲ್ಲಿದೆ ಮತ್ತು ಕುಂದಾಪುರದಿಂದ ೪ ಕಿ.ಮೀ ದೂರದಲ್ಲಿದೆ. ಇದು ಒಂದು ಪರ್ಯಾಯ ದ್ವೀಪ. [೧] ಹಟ್ಟಿಕುದ್ರು ದಕ್ಷಿಣಕ್ಕೆ ಉಡುಪಿ ತಾಲೂಕು, ಉತ್ತರಕ್ಕೆ ಭಟ್ಕಳ ತಾಲೂಕು, ಪೂರ್ವಕ್ಕೆ ಹೊಸನಗರ ತಾಲೂಕು, ದಕ್ಷಿಣಕ್ಕೆ ಕಾರ್ಕಳ ತಾಲೂಕು ಸುತ್ತುವರಿದಿದೆ.
ದೇವಸ್ಥಾನ
ಬದಲಾಯಿಸಿಶ್ರೀ ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನ
ಬದಲಾಯಿಸಿಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನವು ಕರ್ನಾಟಕ ಉಡುಪಿ ಜಿಲ್ಲೆಯ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ, ಇದು ಹಟ್ಟಿಯಂಗಡಿ ಗ್ರಾಮದಲ್ಲಿದೆ. ಇಲ್ಲಿ ಗಣಪತಿಯನ್ನು ಸಿದ್ದಿ ವಿನಾಯಕನ ರೂಪದಲ್ಲಿ ಕಾಣಬಹುದು. ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ದೇವಸ್ಥಾನವನ್ನು ಸುಮಾರು ಎಂಟನೇ ಶತಮಾನದ್ದಲ್ಲಿ ಕಟ್ಟಲಾಗಿದೆ. ಮೇ ೨೦ ರಿಂದ ಮೇ ೨೨ ವರೆಗೆ ವಾರ್ಷಿಕ ಮಹೋತ್ಸವ ನಡೆಯುತ್ತದೆ. [೨]
ವಿನಾಯಕ ಮೂರ್ತಿ
ಬದಲಾಯಿಸಿವಿನಾಯಕ ಮೂರ್ತಿಯು ಸುಮಾರು ೨.೫ ಅಡಿ ಎತ್ತರದಲ್ಲಿ ನಿಂತಿರುವ ಸಾಲಿಗ್ರಾಮದ ಶಿಲೆಯ ರೂಪದಲ್ಲಿ ಕೆತ್ತಲಾಗಿರುತ್ತದೆ. ವಿನಾಯಕ ಮೂರ್ತಿಯ ಬಲ ಕೈ ಅಡಿಪಾಯದಲ್ಲಿದು ಎಡ ಕೈಯಲ್ಲಿರುವ ತಟ್ಟೆಯ ತುಂಬಾ ಮೋದಕವು ಇರುತ್ತದೆ. ಗಣಪತಿಗೆ ಎರಡು ಕೈಗಳಿಂದು ಅನುಭವದವರ ಪ್ರಕಾರ ಇದು ಬಾಲ ಗಣಪತಿಯ ರೂಪವಾಗಿರುತ್ತದೆ. ಭಾರತ ದೇಶದಲ್ಲಿ ಇರುವ ವಿಶೇಷವಾಗಿರುವ ಏಕೈಕ ಜಟಧಾರಿಯಾಗಿ ಎಡ ಹಿಂಬದಿಯಲ್ಲಿ ಕೂದಲನ್ನು ಬಿಟ್ಟಿರುವ ಗಣಪತಿಯ ವಿಗ್ರಹ ಇದಾಗಿರುತ್ತದೆ. ೩೨ ವಿಶೇಷ ಭಂಗಿಯಲ್ಲಿರುವ ಗಣಪತಿಯ ವಿಗ್ರಹಗಳನ್ನು ದೇವಸ್ಥಾನದ ಪ್ರಾಂಗಾಣದಲ್ಲಿ ಇಡಲಾಗಿದೆ.
ದೇವಸ್ಥಾನದ ಸಮಯ
ಬದಲಾಯಿಸಿಸೋಮವಾರ - ಭಾನುವಾರ: ಬೆಳ್ಳಿಗೆ ೬:೦೦ - ರಾತ್ರಿ ೬:೦೦ವರಗೆ
- ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ
- ಶ್ರೀ ಶಂಕರನಾರಾಯಣ ದೇವಸ್ಥಾನ
- ಶ್ರೀ ಶಿವಮೌನೇಶ್ವರ ದೇವಸ್ಥಾನ
ಸಾರಿಗೆ ಸಂಪರ್ಕ
ಬದಲಾಯಿಸಿರೈಲ್ವೆ ನಿಲ್ದಾಣ
ಬದಲಾಯಿಸಿಕುಂದಾಪುರ ರೈಲು ನಿಲ್ದಾಣ, ಸೇನಾಪುರ ರೈಲು ಮಾರ್ಗ ನಿಲ್ದಾಣಗಳು ಹಟ್ಟಿಕುದ್ರುವಿಗೆ ಸಮೀಪದ ರೈಲು ನಿಲ್ದಾಣಗಳಾಗಿವೆ. ಬಿಜೂರ್ ರೈಲು ನಿಲ್ದಾಣ (ಕುಂದಾಪುರದ ಹತ್ತಿರ), ಶಿರೂರು ರೈಲು ನಿಲ್ದಾಣ(ಭಟ್ಕಳದ ಹತ್ತಿರ), ಭಟ್ಕಳ ರೈಲು ನಿಲ್ದಾಣ (ಭಟ್ಕಳದ ಹತ್ತಿರ) ಇವುಗಳು ಹತ್ತಿರದ ಪಟ್ಟಣಗಳಿಂದ ತಲುಪಬಹುದಾದ ರೈಲು ನಿಲ್ದಾಣಗಳಾಗಿವೆ.
ಬಸ್ ನಿಲ್ದಾಣ
ಬದಲಾಯಿಸಿ- ಹೆಮ್ಮಾಡಿ
- ಹಟ್ಟಿಅಂಗಡಿ
- ತಲ್ಲೂರು
- ಬಸ್ರೂರು
- ಮೂಡ್ಲಕಟ್ಟೆ
ಸೇತುವೆ
ಬದಲಾಯಿಸಿಹಟ್ಟಿಕುದ್ರು - ಬಸ್ರೂರು ಸೇತುವೆ
ಬದಲಾಯಿಸಿಹಟ್ಟಿಕುದ್ರು ಹಾಗೂ ಬಸ್ರೂರಿನ ನಡುವೆ ೩೬೦ಮೀ ಸೇತುವೆ ನಿರ್ಮಾಣಗೊಂಡಿದೆ.[೩]
ಸಮೀಪದ ಊರು
ಬದಲಾಯಿಸಿ- ಬಸ್ರೂರು
- ಆನಗಳ್ಳಿ
- ತಲ್ಲೂರು
- ಬಳ್ಕೂರು
ಉಲ್ಲೇಖಗಳು
ಬದಲಾಯಿಸಿ