ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನವು ಕರ್ನಾಟಕ ಉಡುಪಿ ಜಿಲ್ಲೆಯ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ. ಇಲ್ಲಿ ಗಣಪತಿಯನ್ನು ಸಿದ್ದಿ ವಿನಾಯಕನ ರೂಪದಲ್ಲಿ ಪ್ರತಿದಿನ ಭಕ್ತಾದಿಗಳು ದರ್ಶನವನ್ನು ಪಡೆಯುತ್ತಾರೆ. ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ದೇವಸ್ಥಾನವನ್ನು ಸುಮಾರು ಎಂಟ(೮)ನೇ ಶತಮಾನದ್ದಲ್ಲಿ ಕಟ್ಟಲಾಗಿದು ಕಾಲಕ್ರಮೇಣ ಬದಲಾವಣೆಯನ್ನು ಹೊಂದಿರುತ್ತದೆ.
ವಿನಾಯಕ ಮೂರ್ತಿ
ಬದಲಾಯಿಸಿವಿನಾಯಕ ಮೂರ್ತಿಯು ಸುಮಾರು ೨.೫ ಅಡಿ ಎತ್ತರವಿಂದು ನಿಂತಿರುವ ರೀತಿಯಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾಗಿರುತ್ತದೆ. ವಿನಾಯಕ ಮೂರ್ತಿಯ ಬಲ ಕೈ ಅಡಿಪಾಯದಲ್ಲಿದು ಎಡ ಕೈಯಲ್ಲಿರುವ ತಟ್ಟೆಯ ತುಂಬಾ ಮೋದಕವು ಇರುತ್ತಾದೆ. ಗಣಪತಿಗೆ ಏರಡು ಕೈಗಳಿಂದು ಅನುಭವದವರ ಪ್ರಕಾರ ಇದು ಬಾಲ ಗಣಪತಿಯ ರೂಪವಾಗಿರುತ್ತದೆ. ಭಾರತ ದೇಶದಲ್ಲಿ ಇರುವ ವಿಶೇಷವಾಗಿರುವ ಏಕೈಕ ಜಟಧಾರಿಯಾಗಿ ಎಡ ಹಿಂಬದಿಯಲ್ಲಿ ಕೂದಲನ್ನು ಬಿಟ್ಟಿರುವ ಗಣಪತಿಯ ವಿಗ್ರಹ ಇದಾಗಿರುತ್ತದೆ. ೩೨ ವಿಶೇಷ ಭಂಗಿಯಲ್ಲಿರುವ ಗಣಪತಿಯ ವಿಗ್ರಹಗಳನ್ನು ದೇವಸ್ಥಾನದ ಪ್ರಾಂಗಾಣದಲ್ಲಿ ಇಡಲಾಗಿದೆ.
ಇಲ್ಲಿಗೆ ತಲುಪುವುದು ಹೇಗೆ
ಬದಲಾಯಿಸಿರಸ್ತೆ ಮಾರ್ಗ: ಕುಂದಾಪುರದಿಂದ ಇಲ್ಲಿಗೆ ಖಾಸಗಿ ಸಾರಿಗೆ ವ್ಯವಸ್ಥೆ ಇರುತ್ತಾದೆ. ಕುಂದಾಪುರದಿಂದ ೧೪ ಕಿ.ಮೀ. ಹತ್ತಿರದ ರೈಲ್ವೆ ನಿಲ್ದಾಣ: ಕುಂದಾಪುರ (ಕೊಂಕಣ ರೈಲ್ವೆ ). ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು
ದೇವಸ್ಥಾನದ ಸಮಯ
ಬದಲಾಯಿಸಿಸೋಮವಾರದಿಂದ ಶುಕ್ರವಾರ: ಬೆ. ೬:೦೦- ಸಾ.೬:೦೦ ಶನಿವಾರ ಮತ್ತು ಭಾನುವಾರ: