ಸ್ನೊಕಾಲ್ಮಿ ಫಾಲ್ಸ್

ಅದೇಹೆಸರಿನ 'ಸ್ನೊಕಾಲ್ಮಿನದಿ' ಯಪಾತ್ರದ ಬಳಿ ಜಲರಾಶಿ, ಮೇಲಿನಿಂದ ೨೬೮ ಅಡಿ (೮೨.ಮೀ) ಕೆಳಗೆ ಧುಮುಕಿದಾಗ ಆಗಿರುವ ಅದ್ಭುತ ದೃಷ್ಯ. ಇದು ಅಮೆರಿಕದ 'ಸ್ನೊಕಾಲ್ಮಿ ನದಿ' ಮತ್ತು ಅದರ ಜಲಪಾತ, 'ಸಿಯಾಟಲ್ ನಗರ'ದ ಅತಿ ಮುಖ್ಯ ಆಕರ್ಷಣೆಯ ಕೇಂದ್ರವಾಗಿದೆ. ’ಕಲ್ಟ್ ಟೆಲಿವಿಶನ್ ಧಾರಾವಾಹಿ,' ’ಟ್ವಿನ್ ಪೀಕ್ಸ್’ ನಲ್ಲಿ ಕಾಣಿಸಿಕೊಂಡಮೇಲೆ ಜನರ ಗಮನ ಈ ಜಲಪಾತದ ಮೇಲೆ ಕೇಂದ್ರೀಕೃತವಾಯಿತು. ಪ್ರತಿವರ್ಷ ಇಲ್ಲಿಗೆ ಸುಮಾರು ೧.೫ ಮಿಲಿಯನ್ ಜನ ಪರ್ಯಟಕರು ಬರುತ್ತಾರೆ. ೨ ಎಕರೆ [೮,೦೦೦ ಚ.ಮೀ] ವೀಕ್ಷಣಾಪ್ರದೇಶಸ್ಥಳವನ್ನು ಆಕ್ರಮಿಸಿದೆ. ಒಂದು ಸುಸಜ್ಜಿತವಾದ, 'ಗಿಫ್ಟ್ ಶಾಪ್,' ಇದೆ. ವರ್ಷದ ನವೆಂಬರ್-ಮಾರ್ಚ್ ತಿಂಗಳುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ. ಮಳೆ, ಅಥವಾ ಹಿಮದ ಕರಗುವಿಕೆಯಿಂದ,ಜಲಪಾತದ ಜಲರಾಶಿಯ ಭೋರ್ಗರಿತ ಕಾಣಬರುತ್ತದೆ. ಸಹಸ್ರಾರು ವರ್ಷಗಳಿಂದ ಅಲ್ಲಿನ ಸ್ಥಳೀಯ ಬುಡಕಟ್ಟಿನ ಜನರ,ಸಂಸ್ಕೃತಿ,ನಂಬಿಕೆ,ಆಧ್ಯಾತ್ಮಿಕಪರಂಪರೆಗಳು ನದಿಯನೀರಿನೊಡನೆ ಸಂಬಂಧಹೊಂದಿವೆ.

ಅಮೆರಿಕದ ಸಿಯಾಟಲ್ ಅಡವಿಯಲ್ಲಿ ಹರಿಯುವ ಚಿಕ್ಕ ಜಲಪಾತ ಬಹಳ ಹಿಂದಿನಿಂದ ವಿದ್ಯುಚ್ಛಕ್ತಿ ಉತ್ಪಾದಿಸುತ್ತಿತ್ತು
ಸ್ನೊಕಾಲ್ಮಿ ಜಲಪಾತ
ನಿರ್ದೇಶಾಂಕಗಳ47°32′31″N 121°50′13″W / 47.54192°N 121.83685°W / 47.54192; -121.83685
ಬಗೆCurtain
ಒಟ್ಟು ಉದ್ದ268ft (82m)
ಒಟ್ಟು ಪ್ರಪಾತಗಳು1
ಸೇರುವ ನದಿSnoqualmie River

ಐತಿಹ್ಯ

ಬದಲಾಯಿಸಿ

೧೮೯೦ ರಲ್ಲಿ ಸಿವಿಲ್ ಎಂಜಿನಿಯರ್, 'ಚಾರ್ಲ್ಸ್.ಎಚ್.ಬೇಕರ್', ಈ ಭೋರ್ಗರೆಯುವ ಜಲಪಾತದ ದೃಷ್ಯವನ್ನು ಕಂಡು ಆಕರ್ಷಿತರಾದರು. ಪೋಲಾಗುತ್ತಿದ್ದ ಹೆಚ್ಚಿನ ನೀರಿನ್ನು ಅರ್ಥಪೂರ್ಣವಾಗಿ ಉಪಯೋಗಿಸಿ ವಿದ್ಯುತ್ ಉತ್ಪಾದಿಸುವ ಅವರ ಸಾಹಸಕಾರ್ಯ, ೧೮೯೮ ರಲ್ಲಿ ಆರಂಭವಾಯಿತು. ಅಲ್ಲಿನ ಗಟ್ಟಿ-ಮುಟ್ಟಾದ ಬಂಡೆಗಳನ್ನು ಒಡೆದು ಕೊರೆದು, ಮಾಡಿದ ಕಾರ್ಯ ಅದ್ಭುತ. 'ಫಾಲ್ಸ್' ಹತ್ತಿರದಲ್ಲೇ ಒಂದು 'ಸ್ಮಶಾನ'ವಿದೆ. ಇಲ್ಲೇ ಮೊದಲನೆಯ ಮಾನವ ಜಾತಿಯ ಸ್ತ್ರೀ-ಪುರುಷರು ಜನ್ಮವೆತ್ತಿ ಚಂದ್ರನ ಸಹಾಯದಿಂದ ಇಲ್ಲಿಗೆ ಬಂದಿಳಿದು, ಇಲ್ಲೇ ವಾಸ್ಥವ್ಯ ಹೂಡಿದರು. ಅವರ ಪ್ರಾರ್ಥನೆ ಸ್ವರ್ಗವನ್ನು ಮುಟ್ಟಿತಂತೆ. ಕಂದಕದ ಕೆಳಗಿನಿಂದ ಮೇಲೇಳುವ ತುಂತುರುಹನಿಗಳು ಸ್ವರ್ಗ ಹಾಗೂ ಭೂಮಿಯನ್ನು ಜೊತೆಗೂಡಿಸುವ ಮಾಂತ್ರಿಕತೆಯನ್ನು ಹೊಂದಿವೆ.

 
'ಪ್ಯೂಜೆಟ್ ಸೌಂಡ್ ಎನರ್ಜಿ ಕಂಪೆನಿ'

ಸ್ನೊಕಾಲ್ಮಿ ಗ್ರಾಮ

ಬದಲಾಯಿಸಿ

ಜಲಪಾತದ ಹತ್ತಿರದಲ್ಲೇ ಇದೆ. 'ವೇಯರ್ ಹಾಸರ್' ಎಂಬುವರು ಅಲ್ಲಿ 'ಮಿಲ್' ಒಂದನ್ನು ಶುರುಮಾಡಿದ್ದರು. ಆ ಮಿಲ್ ನಲ್ಲಿ ಅನೇಕ ಶಾಖೆಗಳಿದ್ದವು. ಆಸ್ಪತ್ರೆ, ಶಾಲೆ, ಕಮ್ಯೂನಿಟಿ ಕೇಂದ್ರ, ಹಾಗೂ ಅನೇಕ ವಾಸದ ಮನೆಗಳು. ಮುಂದೆ ಪೂರ್ತಿಯಾಗಿ 'ಸ್ನೊಕಾಲ್ಮಿ ಗ್ರಾಮ'ಕ್ಕೆ ಸ್ಥಾನಾಂತರಗೊಂಡವು.

ಜಲವಿದ್ಯುತ್ ಕಾರ್ಯಾಗಾರ

ಬದಲಾಯಿಸಿ

ಇಲ್ಲಿ 'ಪ್ಯೂಜೆಟ್ ಸೌಂಡ್ ಎನರ್ಜಿ ಕಂಪೆನಿ'ಯವರು ನಿರ್ಮಿಸಿ ಸಂಭಾಳಿಸುತ್ತಿರುವ 'ಜಲ-ವಿದ್ಯುತ್ ತಯಾರಿಕೆಯ ೨ ಘಟಕ'ಗಳಿವೆ.'(Puget Sound Energy)'. ಸನ್, ೧೮೯೮ ರಲ್ಲಿ ವಿಶ್ವದ ಪ್ರಥಮ ಭೂಮಿಯ ಒಳಗೆ ಸುರಂಗ ನಿರ್ಮಿಸಿ, ಕಟ್ಟಲಾದ ಜಲವಿದ್ಯುತ್ ಕಾರ್ಯಾಗಾರದ ಸ್ಥಾಪನೆಯಾಯಿತು. ಮೊದಲನೆಯ ಸ್ಥಾವರ,೨೭೨ ಅಡಿ (೮೨ ಮೀ) ಸ್ಥಾವರದ ಬುಡದಲ್ಲಿ ನಿರ್ಮಿಸಲಾಗಿದ್ದು, ವಿಶ್ವದಲ್ಲೇ ಪ್ರಪ್ರಥಮ ಭೂಮಿಯ ಒಳಭಾಗದಲ್ಲಿ ನಿರ್ಮಿಸಲಾದ ವಿದ್ಯುತ್ ಸ್ಥಾವರವೆಂದು ಹೆಸರಾಗಿದೆ. ೧೯೧೦ ರಲ್ಲಿ ಇದರಜೊತೆಗೆ ಎರಡನೆಯ ಘಟಕವನ್ನು ಸೇರಿಸಲಾಯಿತು.ಸನ್, ೧೯೫೭ ರಲ್ಲಿ ಇದರ ಗಾತ್ರವನ್ನು ಮತ್ತಷ್ಟು ಹೆಚ್ಚಿಸಿದರು. ಇದು ವಿದ್ಯುತ್ ಘಟಕದ ಅತಿ ಸಮೀಪದಲ್ಲಿನ ಕೆಳಭಾಗದ ನದಿಯನೀರಿನ ಹರಿಯುವ ದಾರಿಯಲ್ಲಿದೆ. 'ಪ್ಯೂಜೆಟ್ ಸೌಂಡ್ ಎನರ್ಜಿ ಕಂಪೆನಿ'ಯವರು ಉತ್ಪಾದಿಸುವ ವಿದ್ಯುತ್ ಪ್ರಮಾಣದಿಂದ ಬರುವ ಹಣ ಸುಆರು ೧% ನಷ್ಟು. ಎರಡು ಘಟಕಗಳು ಸೇರಿ ಒಟ್ಟಾರೆ, ೪೧,೯೯೦ ಕಿ.ವ್ಯಾಟ್ ವಿದ್ಯುತ್ ತಯಾರಿಸುವ ಕ್ಷಮತೆಯನ್ನು ಹೊಂದಿವೆ. ಸರಾಸರಿ ಸುಮಾರು ೧೬,೦೦೦ ಮನೆಗಳಿಗೆ ವಿದ್ಯುತ್ ಪೂರೈಕೆಯಾಗುವ ಸಂಭವವಿದೆ. 'ಆಶ್ಛೇ ಸಿವಿಲ್ ಎಂಜಿನಿಯರಿಂಗ್' ನಿರ್ಮಿಸಿದ ಈ ಸ್ಥಾವರಗಳು ಉತ್ತಮವಾಗಿ ಕೆಲಸಮಾಡುತ್ತಿವೆ.ಇದೊಂದು ದಾಖಲೆ.

ಚಾರಿತ್ರಿಕ

ಬದಲಾಯಿಸಿ

ಚಾರಿತ್ರಿಕ, ಸಲೀಶ್ ಲಾಡ್ಜ್, ಮತ್ತು ಸ್ಪಾ ಜಲಪಾತದ ಎದುರಿಗೇ ೧೯೧೯ ರಲ್ಲಿ ಸ್ಥಾಪನೆಮಾಡಲಾಯಿತು. ೧೮೯೮ ರಲ್ಲಿ ಸ್ಥಾಪಿತವಾದ ಈ ಜಲವಿದ್ಯುತ್ ಉತ್ಪಾದನಾ ಕೇಂದ್ರ, ಎ.ಎಸ್.ಸಿ.ಇ. ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯು ಸಾಧಿಸಿದ ಅತಿ ಮಹತ್ವದ ಸಾಧನೆಯೆಂದು ೧೯೮೧ ರಲ್ಲಿ ಘೋಶಿಸಲಾಯಿತು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ