ಟೆಂಪ್ಲೇಟು:Philosophy-sidebar

ಸೌಂದರ್ಯಶಾಸ್ತ್ರ ವು ( esthetics ಅಥವಾ æsthetics ಎಂಬ ರೀತಿಯಲ್ಲಿಯೂ ಬರೆಯಬಹುದಾಗಿದೆ) ತತ್ವಶಾಸ್ತ್ರದ ಭಾಗವಾಗಿದ್ದು ಸೌಂದರ್ಯದ ಲಕ್ಷಣ,ಕಲೆ,ಮತ್ತು ಸದಭಿರುಚಿ ಮತ್ತು ಸೃಷ್ಟಿ ಮತ್ತು ಸೌಂದರ್ಯದ ಶ್ಲಾಘನೆಯೊಂದಿಗೆ ವ್ಯವಹರಿಸುತ್ತದೆ.[] ಇದನ್ನು ವೈಜ್ಞಾನಿಕವಾಗಿ ಸಂವೇದನಾವಾಹಕ ಅಥವಾ ಸಂವೇದನೆಯ-ಭಾವನಾತ್ಮಕ ಮೌಲ್ಯಗಳ ಅಧ್ಯಯನ ಎಂದು ವ್ಯಾಖ್ಯಾನಿಸಲಾಗುತ್ತದೆ, ಕೆಲವೊಮ್ಮೆ ರಸಭಾವ ಮತ್ತು ಅಭಿರುಚಿಯ ತೀರ್ಪು ಎಂದು ಕರೆಯಲಾಗುತ್ತದೆ.[] ಹೆಚ್ಚು ವಿಶಾಲವಾಗಿ, ಕ್ಷೇತ್ರದಲ್ಲಿನ ಪರಿಣಿತರು ಸೌಂದರ್ಯಶಾಸ್ತ್ರವನ್ನು " ಕಲೆ,ಸಂಸ್ಕೃತಿ,ಮತ್ತು ನಿಸರ್ಗದ ಮೇಲಿನ ಕ್ಲಿಷ್ಟಕರ ಪ್ರತಿಫಲನ", ಎಂದು ವ್ಯಾಖ್ಯಾನಿಸುತ್ತಾರೆ.[][] ಸೌದರ್ಯಶಾಸ್ತ್ರವು ಮೌಲ್ಯಮೀಮಾಂಸೆಯ ಉಪಅಧ್ಯಯನ ವಿಭಾಗವಾಗಿದ್ದು,ತತ್ವಜ್ಞಾನದ ಒಂದು ಶಾಖೆ, ಮತ್ತು ಕಲೆಯ ತತ್ವಜ್ಞಾನದ ತುಂಬಾ ಹತ್ತಿರದ ಸಹವರ್ತಿಯಾಗಿದೆ.[] ಸೌಂದರ್ಯಶಾಸ್ತ್ರವು ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡವ ಮತ್ತು ಗ್ರಹಿಸುವಿಕೆಯನ್ನು ಅಧ್ಯಯನ ಮಾಡುತ್ತದೆ.[]

ವ್ಯುತ್ಪತ್ತಿ ಶಾಸ್ತ್ರ

ಬದಲಾಯಿಸಿ

೧೭೩೫ರಲ್ಲಿ "ಸೌಂದರ್ಯ ಶಾಸ್ತ್ರ" ಎಂಬ ಶಬ್ದವು ಜರ್ಮನಿಯಲ್ಲಿ Æsthetik (ಆಧುನಿಕ ಶಬ್ದರಚನೆ Ästhetik ) ಅಲೆಗ್ಸಾಂಡರ್ ಬೌಮ್ಗಾರ್ಟನ್‌ನಿಂದ ಸೃಷ್ಟಿಸಲ್ಪಟ್ಟಿತು. ಇದನ್ನು ಗ್ರೀಕನ αισθητικός (aisthetikos , "ಸೌಂದರ್ಯ-ವೇದನಾಶೀಲ-ಸಂವೇದಕ" ಎಂಬ ಅರ್ಥ)ನಿಂದ ವ್ಯುತ್ಪನ್ನವಾಗಿದೆ, ರೂಪಾಂತರ ಹೊಂದಿ αίσθηση-αισθάνομαι (aisthese-aisthanomai, "ಗ್ರಹಿಸು-ಅನುಭವಿಸು-ಭಾವನೆ" ಎಂಬ ಅರ್ಥ ಸೂಚಿಸುತ್ತದೆ) .[]

ಸೌಂದರ್ಯದ ತೀರ್ಪು

ಬದಲಾಯಿಸಿ

ಸೌಂದರ್ಯದ ತೀರ್ಪಿನ ಮೌಲ್ಯವು ಸಂವೇದಾನಾವಾಹಕ ಮಟ್ಟದಲ್ಲಿ ಬೇರ್ಪಡಿಸುವ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆ. ಸೌಂದರ್ಯಶಾಸ್ತ್ರವು ಸಂಗತಿ ಅಥವಾ ವಿಷಯಕ್ಕೆ ನಮ್ಮ ಪ್ರಭಾವಿ ಕ್ಷೇತ್ರದ ಪ್ರತಿಕ್ರಿಯೆಯನ್ನು ಪರಿಶೀಲಿಸುತ್ತದೆ. ಇಮ್ಯಾನ್ಯುಯೆಲ್ ಕಂಟ್, ೧೭೯೦ರಲ್ಲಿ ಬರೆಯುತ್ತಾನೆ, ಮನುಷ್ಯನನ್ನು ಗಮಸಿದಾಗ "ಕ್ಯಾನರಿ ಮದ್ಯವು ಇಷ್ಟವಾದರೇ ಅವನು ಸ್ವಲ್ಪ ಸಂತೃಪ್ತನಾಗುತ್ತಾನೆ, ಒಬ್ಬನು ಅವನ ಮಾತನ್ನು ಸರಿಪಡಿಸದಿದ್ದರೆ ಮತ್ತು ಅವನಿಗೆ ಬದಲಾಗಿ ಹೇಳಲು ನೆನಪಿಸದಿದ್ದರೆ ಅವನು ಹೇಳುತ್ತಾನೆ:ಇದು ನನಗೆ ಇಷ್ಟವಾದುದು", ಏಕೆಂದರೆ "ಪ್ರತಿಯೊಬ್ಬರು ಅವರ ಸ್ವಂತ (ಅಭಿಪ್ರಾಯ) ಅಭಿರುಚಿ ಹೊಂದಿರುತ್ತಾರೆ". "ಸೌಂದರ್ಯ"ದ ಸನ್ನಿವೇಶವು "ಹಿತವಾಗಿರುವಿಕೆ"ಗಿಂತ ಭಿನ್ನವಾಗಿದೆ ಏಕೆಂದರೆ", ಎನಾದರೂ ಸುಂದರವಾಗಿದೆ ಎಂದು ಅವನು ಸೂಚಿಸಿದರೆ, ನಂತರ ಅವನು ಇತರರಿಂದ ಅಂತಹುದನ್ನೆ ಬಯಸುತ್ತಾನೆ; ನಂತರ ತನ್ನಷ್ಟಕ್ಕೆ ತಾನೆ ಇತ್ಯರ್ಥ ಮಾಡದೇ ಪ್ರತಿಯೊಬ್ಬರಿಂದಲೂ ಬಯಸುತ್ತಾನೆ, ಮತ್ತು ಸೌಂದರ್ಯ ಅದರ ಗುಣಲಕ್ಷಣ ಎಂಬಂತೆ ಮಾತನಾಡುತ್ತಾನೆ."

ಸೌಂದರ್ಯದ ತೀರ್ಪು ಸಾಮಾನ್ಯವಾಗಿ ಸಂವೇದನಾವಾಹಕ ಭೇದಕ್ಕಿಂತಲೂ ಆಚೆಗೆ ಸಾಗುತ್ತದೆ. ಡೇವಿಡ್ ಹ್ಯೂಮ್, ಅಭಿರುಚಿಯ ಮಾರ್ದವತೆ ಕೇವಲವಾಗಿಲ್ಲದೆ "ಸಂಯೋಜನೆಯಲ್ಲಿನ ಎಲ್ಲಾ ಭಾಗಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ" ಆದರೂ ಕೂಡ ನಮ್ಮ ಭಾವಾತಿರೇಕತ್ವವು "ಸಂತೋಷದಂತೆ ನೋವು ಇರುತ್ತದೆ, ಮನುಕುಲದ ಉಳಿದ ಪಾರಾಗುವಿಕೆಯಂತೆ". (ಎಸ್ಸೆಸ್ ಮಾರಲ್ ಪೊಲಿಟಿಕಲ್ ಆ‍ಯ್‌೦ಡ್ ಲಿಟರರಿ. ಇಂಡಿಯಾನಾಪೊಲಿಸ್, ಲಿಟರರಿ ಕ್ಲಾಸಿಕ್ಸ್ ೫, ೧೯೮೭.) ಆದ್ದರಿಂದ, ಸಂವೇದನಾಶೀಲ ಭೇದವು ಸಂತೋಷದ ಗ್ರಹಣಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಕಂಟ್ "ಆನಂದಪಡುವಿಕೆ" ಅನುಭವದಿಂದ ಸಂತೋಷವು ಉದ್ಭವಿಸಿದ ಪರಿಣಾಮ, ಆದರೆ ಎನನ್ನಾದರೂ " ಸುಂದರ" ಎಂದು ತೀರ್ಮಾನಿಸುವುದು ಮೂರನೇಯ ಅಗತ್ಯವಾಗಿದೆ: ನಮ್ಮ ಪ್ರತಿಫಲಿತ ಆಲೋಚನೆಯ ಸಾಮರ್ಥ್ಯದ ಇಷ್ಟವಾಗುವಿಕೆಯಿಂದ ಅನುಭವವು ಹೆಚ್ಚಾದ ಸಂತೋಷ ಕೊಡುತ್ತದೆ. ಸುಂದರತೆಯ ತೀರ್ಪು ಸಂವೇದನಾವಾಹಕವಾಗಿದೆ, ಭಾವಾತ್ಮಕ ಮತ್ತು ಬುದ್ಧಿಶಕ್ತಿಗೆ ಸಂಬಂಧಿಸಿದೆ.

ದರ್ಶಕನ ಸುಂದರತೆಯ ಅರ್ಥವಿವರಣೆಯು ಎರಡು ಮೌಲ್ಯದ ಪರಿಕಲ್ಪನೆಯನ್ನು ಹೊಂದಿದೆ: ಸೌಂದರ್ಯಶಾಸ್ತ್ರ ಮತ್ತು ಅಭಿರುಚಿ. ಸೌಂದರ್ಯಶಾಸ್ತ್ರವು ಚೆಲುವಿನ ತತ್ವಶಾಸ್ತ್ರೀಯ ಭಾವನೆಯಾಗಿದೆ. ಅಭಿರುಚಿಯು ಶಿಕ್ಷಣ ಮತ್ತು ಉತ್ತಮ ಸಾಂಸ್ಕೃತಿಕ ಮೌಲ್ಯಗಳ ಪ್ರಜ್ಞೆಯ ಪರಿಣಾಮವಾಗಿದೆ; ಆದ್ದರಿಂದ ಅಭಿರುಚಿಯು ಪಾಂಡಿತ್ಯಪೂರ್ಣವಾಗಿರಬೇಕಾಗುತ್ತದೆ. ವಿವಿಧ ಅಭಿರುಚಿಯು ವರ್ಗ, ಸಾಂಸ್ಕೃತಿಕ ಹಿನ್ನೆಲೆ, ಮತ್ತು ಶಿಕ್ಷಣದ ಪ್ರಕಾರವಾಗಿದೆ. ಕಂಟ್ ಪ್ರಕಾರ, ಸೌಂದರ್ಯವು ವಸ್ತುನಿಷ್ಠ ಮತ್ತು ವಿಶ್ವವ್ಯಾಪಿ; ಆದ್ದರಿಂದ ಕೆಲವೊಂದು ಸಂಗತಿಗಳು ಎಲ್ಲರಿಗೂ ಸುಂದರವಾಗಿರುತ್ತದೆ. ಸಮಕಾಲೀನ ಸೌಂದರ್ಯದ ನೋಟವು ಸಹಜ ಗುಣಲಕ್ಷಣದ ಮೇಲೆ ಆಧಾರವಾಗಿಲ್ಲ, ಆದರೆ ಸಾಂಸ್ಕೃತಿಕ ನಿರ್ದಿಷ್ಟತೆ ಮತ್ತು ವಯಕ್ತಿಕ ಅರ್ಥವಿವರಣೆಗಿಂತ ಹೆಚ್ಚಿನದಾಗಿದೆ.

ಸೌಂದರ್ಯದ ತೀರ್ಪಿನಲ್ಲಿ ಅಡಕವಾಗಿರುವ ವಿಷಯಗಳು

ಬದಲಾಯಿಸಿ

ಸೌಂದರ್ಯ ಮೌಲ್ಯದ ತೀರ್ಪುಗಳಲ್ಲಿ ಹಲವಾರು ತರಹದ ವಿಷಯಗಳು ಅಡಕವಾಗಿರುವಂತೆ ಕಾಣುತ್ತದೆ. ಹೇಸಿಗೆಯಂತಹ ಪ್ರತಿಕ್ರಿಯೆಗಳು ಸಂವೇದನಾವಾಹಕ ಪತ್ತೆಯ ಮೌಖಿಕ ಅಭಿವ್ಯಕ್ತತೆಗೆ ಸಹಜ ಪ್ರೇರಣೆಯ ಮಾರ್ಗದ ಕೊಂಡಿಯಂತೆ ಮತ್ತು ಗಿಡುಗು ಪ್ರತಿಬಿಂಬದಂತೆ ವರ್ತನೆಗಳು ಕಾಣಿಸುತ್ತದೆ. ಅನೇಕ ವೇಳೆ ಒಂದು ತಿಳಿಯಲ್ಪಟ್ಟ ಅಥವಾ ಸಾಂಸ್ಕೃತಿಕ ವಿವಾದಗಳೂ ಕೂಡ ಇನ್ನೂ ಜಿಗುಪ್ಸೆಯನ್ನು ತರುವಂತಹ ಅಂಶಗಳಾಗಿರುತ್ತವೆ; ಡಾರ್ವಿನ್ ಹೇಳುವಂತೆ, ಒಬ್ಬ ವ್ಯಕ್ತಿಯ ದಾಡಿಯ ಮೇಲೆ ಸೋಪಿನ ಒಂದು ಸಣ್ಣ ಚೂರನ್ನು ಕಾಣುವುದು ಸೋಪ್ ಅಥವಾ ಆ ವ್ಯಕ್ತಿಯ ದಾಡಿ ಈ ಎರಡೂ ಅಸಹ್ಯವನ್ನು ಹುಟ್ಟಿಸುವಂತದ್ದಾಗಿರುತ್ತವೆ. ಭಾವೋದ್ವೇಗ ಅಥವಾ, ಭಾವೋದ್ವೇಗದಂತಹವುಗಳು ಬಹುಶಃ ನಮ್ಮ ದೈಹಿಕ ಪ್ರತಿಕ್ರಿಯೆಯಲ್ಲಿ ಅಡಗಿಕೊಂಡು ಸೌಂದರ್ಯದ ತೀರ್ಪಿನ ಸರಪಳಿಯಾಗಿರಬಹುದು. ಅದ್ಭುತವಾದ ಭೂದೃಶ್ಯ ವೀಕ್ಷಿಸಿದಾಗ ನಮಗೆ ಬೆರಗಿನ ಪ್ರತಿಕ್ರಿಯೆ ನೀಡಬಹುದು. ಶಾರೀರಿಕವಾಗಿ ಪ್ರಕಟವಾದ ಪೂರ್ಣಸಾಮರ್ಥ್ಯವು ಭಾವನೆಗಳ ಅಲೆಗಳನ್ನು ಹೆಚ್ಚಿಸುತ್ತದೆ ಅಥವಾ ಕಣ್ಣುಗಳು ಅರಳುತ್ತವೆ. ಈ ಅಜಾಗೃತಾವಸ್ಥೆಯ ನಮ್ಮ ಪ್ರತಿಕ್ರಿಯೆಗಳು ಒಂದು ಭೂದೃಶ್ಯವು ಅದ್ಭುತ ಎನ್ನುವ ಒಂದು ನಿರ್ಣಯವನ್ನು ತೆಗೆದುಕೊಳ್ಳುವ ಅತಿಮುಖ್ಯ ಅಂಶವಾಗಿರುತ್ತವೆ.

ಹಾಗೆಯೇ, ಒಂದು ಹಂತದವರೆಗೆ ಸೌಂದರ್ಯದ ತೀರ್ಪುನ್ನು ಸಾಂಸ್ಕೃತಿಕವಾಗಿ ರೂಪಿಸಬಹುದು. ಬ್ರಿಟನ್‌ನಲ್ಲಿ ವಿಕ್ಟೋರಿಯನ್ನರು ಆಫ್ರಿಕಾ ಶಿಲ್ಪಕಲೆಯನ್ನು ಕುರೂಪವಾಗಿ ನೋಡಿದರು, ಆದರೆ ಕೆಲವೇ ದಶಕಗಳ ನಂತರ, ಎಡ್ವರ್ಡಿಯನ್ ಶ್ರೋತೃಗಳಿಗೆ ಅದೇ ಶಿಲ್ಪಕಲೆ ಸುಂದರವಾಗಿ ಕಂಡಿತು. ಸೌಂದರ್ಯದ ನಿಂದನೆ, ಸುಂದರತೆಯನ್ನು ನಿರ್ಣಯಿಸುವುದು ಅಪೇಕ್ಷಣೆಗೆ ಸಂಬಂಧಿಸಿದುದು,ಬಹುಶಃ ಲೈಂಗಿಕ ಅಪೇಕ್ಷಣೆಯೂ ಸಹ ಆಗಿರಬಹುದು. ಆದ್ದರಿಂದ ಸೌಂದರ್ಯದ ಮೌಲ್ಯದ ತೀರ್ಪು ಆರ್ಥಿಕ,ರಾಜಕೀಯ, ಅಥವಾ ನೈತಿಕ ಮೌಲ್ಯಗಳ ತೀರ್ಪಿಗೆ ಕೊಂಡಿಯಾಗಬಹುದು.[] ನಾವು ಲ್ಯಾಂಬೊರ್ಗಿನಿಯನ್ನು ಭಾಗಶಃ ಸುಂದರ ಎನ್ನಬಹುದು ಏಕೆಂದರೆ ಇದು ಅಪೇಕ್ಷಣಿಯವಾಗಿ ಅಂತಸ್ತಿನ ಚಿಹ್ನೆಯಾಗಿದೆ ಅಥವಾ ಭಾಗಶಃ ಸುಂದರವಲ್ಲದ್ದು ಎನ್ನಬಹುದು ಏಕೆಂದರೆ ಇದು ಹೆಚ್ಚು-ಇಂಧನ ಬಳಸುತ್ತದೆ ಮತ್ತು ನಮ್ಮ ರಾಜಕೀಯ ಅಥವಾ ನೈತಿಕ ಮೌಲ್ಯಗಳನ್ನು ಅಸಂತೋಷಪಡಿಸುತ್ತದೆ.[]

"ಪಾರ್ಟ್ ಆ‍ಯ್‌೦ಡ್ ಪಾರ್ಸೆಲ್ ಇನ್ ಎನಿಮಲ್ ಆ‍ಯ್‌೦ಡ್ ಹ್ಯುಮನ್ ಸೊಸೈಟೀಸ್". ನಲ್ಲಿ ಪ್ರಾಣಿ ಮತ್ತು ಮಾನವ ವರ್ತನೆಗಳ ಅಧ್ಯಯನದಲ್ಲಿ, ಸಂಪುಟ. ೨. ಪುಪು. ೧೧೫–೧೯೫. ಕೇಂಬ್ರುಡ್ಜ್, ಮಾಸ್.ಹಾರ್ವರ್ಡ್ ಯುಪಿ, ೧೯೭೧ (ಮೂಲತಃ ಪಬ್. ೧೯೫೦.) ಸೌಂದರ್ಯದ ತೀರ್ಪು ಆಗಾಗೇ ತುಂಬಾ ಉತ್ತಮ-ವಿನ್ಯಾಸದ ಮತ್ತು ಆಂತರಿಕವಾಗಿ ಆತ್ಮವಿರೋದಿಯಾಗು ಇರಬಹುದು. ಹಾಗೆಯೇ ಸೌಂದರ್ಯದ ತೀರ್ಪು ಕನಿಷ್ಠ ಪಕ್ಷ ಸ್ವಲ್ಪಮಟ್ಟಿಗೆ ಬೌದ್ಧಿಕ ಮತ್ತು ವಿವರಣಾತ್ಮಕವಾಗಿರುವಂತೆ ಕಾಣಬಹುದು. ನಮಗೆ ಇದು ಹೆಚ್ಚಿನ ಬಾರಿ ನಾವು ತೀರ್ಮಾನಿಸಿದಂತೆ ಅರ್ಥೈಸುವ ಅಥವಾ ಸಂಕೇತಿಸುವ ವಸ್ತುವಾಗಿದೆ. ಸೌಂದರ್ಯದ ಅನುಭವದಲ್ಲಿ ಇಷ್ಟ ಮತ್ತು ಅಪೇಕ್ಷೆ ಬಹುಮಟ್ಟಿಗೆ ಸುಪ್ತವಾಗಿರುತ್ತದೆ, ಹೀಗಿದ್ದರೂ ಪ್ರಾಶಸ್ತ್ಯ ಮತ್ತು ಆಯ್ಕೆಯು ಕೆಲವು ೨೦ನೇಯ ಶತಮಾನದ ವಿಚಾರವಾದಿಗಳಿಗೆ ಪ್ರಮುಖ ಸೌಂದರ್ಯವಾಗಿ ಕಾಣುತ್ತದೆ ಎಂದು ಆಧುನಿಕ ಸೌಂದರ್ಯೊಪಾಸಕರು ವಿವರಿಸುತ್ತಾರೆ. ಈ ಅಂಶ ಈಗಾಗಲೇ ಹ್ಯೂಮ್‌ರಿಂದ ರಚಿತವಾಗಿದೆ,ಆದರೆ ಮೇರಿ ಮದರ್ಸಿಲ್ ನೋಡಿದಾಗ "ಸೌಂದರ್ಯ ಮತ್ತು ವಿಮರ್ಶಕ ತೀರ್ಪು", ಬ್ಲಾಕ್‌ವೆಲ್ ಗೈಡ್ ಟು ಅಸ್ತೆಟಿಕ್ಸ್,೨೦೦೪. ಸೌಂದರ್ಯದ ತೀರ್ಪು ಭಾವನೆಗಳು,ಭಾವಪರವಶತೆ,ಬೌದ್ಧಿಕ ಅಭಿಪ್ರಾಯ,ಇಷ್ಟ,ಅಪೇಕ್ಷೆಗಳು,ಸಂಸ್ಕೃತಿ,ಆದ್ಯತೆಗಳು,ಮೌಲ್ಯಗಳು, ಉಪಪ್ರಜ್ಞೆಯ ವರ್ತನೆ,ಪ್ರಜ್ಞಾಪೂರ್ವಕ ತೀರ್ಮಾನ,ತರಬೇತಿ, ಸಹಜಗುಣ,ಸಾಮಾಜಿಕ ಸಂಪ್ರದಾಯಗಳು ಅಥವಾ ಇವುಗಳ ಕೆಲವು ಸಂಕೀರ್ಣ ಸಂಯೋಗ,ಒಂದು ನಿರ್ದಿಷ್ಟವಾದ ಸಿದ್ಧಾಂತದ ಬಳಕೆಯನ್ನು ಅವಲಂಬಿಸಿ ಅದರ ಮೇಲೆ ಆಧಾರವಾಗಿರುವಂತೆ ಕಾಣುತ್ತದೆ.

ಮಾನವಶಾಸ್ತ್ರ, ವಿಶೇಷವಾಗಿ ಸವನ್ನ ಹೈಪೊಥೆಸಿಸ್ ಗೊರ್ಡನ್ ಓರಿಯನ್ಸ್ ಮತ್ತು ಇತರರಿಂದ ಪ್ರಸ್ತಾವಿಸಲ್ಪಟ್ಟಿದೆ,ಕೆಲವೊಂದು ರಚನಾತ್ಮಕ ಸೌಂದರ್ಯಶಾಸ್ತ್ರದ ಜನರು ಜನ್ಮಸಿದ್ಧ ಮಾನವ ಹವ್ಯಾಸದ ಲಾಭದಾಯಕ ತಿಳುವಳಿಕೆ ಮೇಲೆ ಆಧಾರ ಮಾಡಿ ಮುನ್ಸೂಚನೆ ಕೊಡುತ್ತಾರೆ. ಜನರು ಮರ ಅಥವಾ ಮರ-ಅಲ್ಲದ ;[ಸೂಕ್ತ ಉಲ್ಲೇಖನ ಬೇಕು] ಹಾಗೆಯೇ ಹೆಚ್ಚು ಹಸಿರು ಬಣ್ಣ,ಆರೋಗ್ಯಕರ ಸಸ್ಯಗಳು ಒಳ್ಳೆಯ ಪೋಷಕ ಗುಣಲಕ್ಷಣದೊಂದಿಗೆ ಸಂಬಂಧಿಸಿದೆ,ಇತರೆ ಮರದ ಬಣ್ಣಕ್ಕಿಂತ ಪ್ರಶಾಂತವಾದ,ಕಡಿಮೆ ಹೊಳೆಯುವ ಹಸಿರು ಮತ್ತು ಕಿತ್ತಳೆ ಒಳಗೊಂಡ ವಸ್ತುಗಳನ್ನು ಇತರೆ ರೂಪದಲ್ಲಿ ನೋಡುವುದಕ್ಕಿಂತಲೂ ಹೆಚ್ಚಿನದಾಗಿ ಹರಡಿರುವ ರೂಪದಲ್ಲಿ ನೋಡಿದಾಗ ಹೆಚ್ಚು ಇಷ್ಟಪಡುತ್ತಾರೆ ಮತ್ತು ತುಂಬಾ ಸಂತೋಷ ಹೊಂದುತ್ತಾರೆ ಎಂಬುದನ್ನು ಇದು ತೋರಿಸುತ್ತದೆ.

ಒಂದೇ ರೀತಿಯಲ್ಲಿ ಸುಂದರ, ಅಸಹ್ಯ ಅಥವಾ ಬೇಸರ ಹುಟ್ಟಿಸುವ ವಿವಿಧ ಕಲೆಗಳೇ ?

ಬದಲಾಯಿಸಿ

ಸೌಂದರ್ಯದ ತೀರ್ಪಿನ ಅಧ್ಯಯನದಲ್ಲಿ ಮೂರನೇಯ ಪ್ರಮುಖ ವಿಷಯ ಅವುಗಳು ಹೇಗೆ ಕಲೆಯ ರೂಪದಿಂದಾಚೆಗೆ ಏಕಿಕೃತವಾಗಿವೆ ಎಂಬುದಾಗಿದೆ. ನಾವು ಒಬ್ಬ ಮನುಷ್ಯನಿಗೆ ಕರೆ ಮಾಡಿದಾಗ, ಒಂದು ಮನೆ, ಒಂದು ಸ್ವರಮೇಳ, ಒಂದು ಪರಿಮಳ, ಮತ್ತು ಒಂದು ಖಚಿತವಾದ ಪುರಾವೆ ಸುಂದರ. ಯಾವ ಗುಣಲಕ್ಷಣಗಳು ಇದಕ್ಕೆ ಈ ಪ್ರಾಮುಖ್ಯತೆ ತಂದುಕೊಟ್ಟಿವೆ? ಯಾವ ಸಾಧ್ಯವಿರುವ ಗುಣ ಮತ್ತು ಸುವಾಸನೆಯ ಶ್ರೇಷ್ಟತೆಯು ಇವೆರಡನ್ನು ಸುಂದರವಾಗಿದೆ ಎಂದು ಎಣಿಸುವಂತೆ ಮಾಡಿದೆ? ಚಿತ್ರಕಲೆಯನ್ನು ಸುಂದರಗೊಳಿಸುವ ವಿಷಯವು ಸಂಗೀತವನ್ನು ಸುಂದರಗೊಳಿಸುವ ವಿಷಯಕ್ಕಿಂತ ಭಿನ್ನವಾಗಿದೆ, ಇದು ಸೌಂದರ್ಯದ ತೀರ್ಪು ನೀಡುವಾಗ ಪ್ರತಿಯೊಂದು ಕಲೆಯ ರೂಪವು ಅದರ ಸ್ವಂತ ಭಾಷೆ ಹೊಂದಿರುತ್ತದೆ ಎಂಬುದನ್ನು ತಿಳಿಸುತ್ತದೆ.[೧೦]

ಅದೇ ಸಮಯದಲ್ಲಿ, ಸೌಂದರ್ಯದ ತೀರ್ಪು ನೀಡುವಾಗ ತನಗೇ ಕರಾಕುವಕ್ಕಾಗಿ ಅಭಿವ್ಯಕ್ತಿಗೊಳಿಸಲು ಬಹುಶಃ ಶಬ್ದಗಳ ಕೊರತೆ ಇರುವಂತೆ ಕಾಣುತ್ತದೆ. ಸೌಂದರ್ಯದ ತೀರ್ಪು ಅನುಭವಾತ್ಮಕ ತೀರ್ಪಲ್ಲ. ಕರಾರುವಕ್ಕಾಗಿ ಸಾಧ್ಯವಿಲ್ಲದ ಕಾರಣ,ಸಾಂಸ್ಕೃತಿಕವಾಗಿ ಯಾವ ವಿವರಣೆಯನ್ನು ನೀಡಬೇಕೆಂಬುದರಲ್ಲಿ ಗೊಂದಲವಿದೆ. ಇಂಗ್ಲೀಷ್ ಭಾಷೆಯಲ್ಲಿನ ನಿಖರತೆಯ ಕೊರತೆಯಿಂದಾಗಿ ಎರಡು ವಿಭಿನ್ನ ಜನರು ತದ್ರೂಪದ ಮೌಖಿಕ ಅಭಿವ್ಯಕ್ತಿ ನಿರೂಪಣೆಯಿಂದ ಎರಡು ಸಂಪೂರ್ಣ ಭಿನ್ನವಾದ ಭಾವನೆಗಳನ್ನು ಅನುಭವಿಸಬಹುದು. ವಿಟ್‌ಗೆನ್ಸ್ಟೇನ್ ಇದನ್ನು ತನ್ನ ಸೌಂದರ್ಯಶಾಸ್ತ್ರ ಮತ್ತು ಭಾಷೆಯ ಗೇಮ್ಸ್‌ನಲ್ಲಿ ಹೇಳಿದ್ದಾನೆ.

ಸೌಂದರ್ಯದ ಸಾಮೂಹಿಕ ಗುರುತಿಸುವಿಕೆ, ಸಾಮಾಜಿಕ ವೈವಿಧ್ಯತೆಯಲ್ಲಿ ಒಪ್ಪಿ ಭಾಗವಹಿಸಿರುವವರು, ಸಂಸ್ಕೃತಿ ಅಥವ ಸನ್ನಿವೇಶದಲ್ಲಿ ಚರ್ಚಿಸಲಾದ, ಸಾಮಾಜಿಕವಾಗಿ ತೀರ್ಮಾನಿಸಿದ ವಿದ್ಯಮಾನವಾಗಿರಬಹುದು. ಸೌಂದರ್ಯದ ತೀರ್ಮಾನಕ್ಕೆ ಮತ್ತು ಸ್ಪಷ್ಟಮಾತುಗಳಲ್ಲಿ ಸುಂದರ ಮನೆ,ಸುಂದರ ಮೇಲ್ಛಾವಣಿ ಮತ್ತು ಸುಂದರ ಸೂರ್ಯಾಸ್ತಮಾನಗಳ ಹೋಲಿಕೆಗೆ ಯಾವುದಾದರೂ ಆಧಾರ ವಿಷಯವಿದೆಯೇ?[೧೧] ಇದನ್ನು ವ್ಯಾಖ್ಯಾನಿಸಲು ಸಂಪೂರ್ಣವಾದ ವಿದ್ಯಮಾನದ ವಿವರಣೆ ಅಗತ್ಯವಿದೆ ಎಂದು ವಿಟ್‌ಗೆನ್ಸ್ಟೇನ್ ಸೌಂದರ್ಯದ ಮೇಲಿನ ಭಾಷಣದಲ್ಲಿ ವಾದಿಸಿದ್ದಾನೆ. ಇದೇ ರೀತಿ ಸ್ವಾಭಾವಿಕ ಜಗತ್ತಿನಲ್ಲಿ ಹೇಗೆ ಸೌಂದರ್ಯದ ನಿಖರತೆಯ ಬಗೆಗೆ ದೀರ್ಘವಾದ ಚರ್ಚೆ ನಡೆಯುತ್ತಿದೆ, ಮುಖ್ಯವಾಗಿ ಮಾನವ ಸ್ವರೂಪದ ಸೌಂದರ್ಯದ ನಿಖರತೆ, ಕಲೆ ಅಥವಾ ವಸ್ತುವಿನಲ್ಲಿ ಸೌಂದರ್ಯ ಗ್ರಹಿಸುವಿಕೆಗೆ ಸಂಬಂಧಿಸಿದೆ ಎಂದು ಊಹಿಸಲಾಗಿದೆ. ಕೆಲವು ಪುನರುಚ್ಚರಿಸುವಿಕೆ ಕನಿಷ್ಠ ಕಂಟ್‌ರೊಂದಿಗೆ ಸೇಂಟ್.ಬೊನಾವೆಂಚುರ್ವರೆಗೂ ಹಿಂದೆ ಹೋಗ ಬಹುದು. [ಸೂಕ್ತ ಉಲ್ಲೇಖನ ಬೇಕು]

ಸೌಂದರ್ಯಶಾಸ್ತ್ರ ಮತ್ತು ಕಲೆಯ ತತ್ವಶಾಸ್ತ್ರ

ಬದಲಾಯಿಸಿ
Aesthetics is for painting as Ornithology is for the birds.
 

ಸೌಂದರ್ಯಶಾಸ್ತ್ರವು ಹೆಗೆಲ್‌ನ ನಂತರದಿಂದ ಕೆಲವರಿಂದ ಕಲೆಯ ತತ್ವಶಾಸ್ತ್ರದ ಸಮಾನಾರ್ಥಕ ಪದವಾಗಿ ಬಳಸಲ್ಪಡುತ್ತದೆ, ಹಾಗೆಯೇ ಇತರರು ಈ ಪರಸ್ಪರ ಸನಿಹವಾಗಿ ಸಂಬಂಧಿತವಾದ ವಿಭಾಗಗಳ ನಡುವೆ ಒಂದು ಭಿನ್ನತೆಯ ಅಂಶವನ್ನು ಒತ್ತಿ ಹೇಳುತ್ತಾರೆ. ಆಚರಣೆಯಲ್ಲಿ, ಸೌಂದರ್ಯಶಾಸ್ತ್ರದ ನಿರ್ಣಯವು ಸಂವೇದನದ ಅವಲೋಕನ (ಚಿಂತನೆ) ಅಥವಾ ಒಂದು ವಸ್ತುವಿನ ಶ್ಲಾಘನೆ ಎಂದು ಉಲ್ಲೇಖಿಸಲ್ಪಡುತ್ತದೆ (ಅದು ಅವಶ್ಯಕವಾಗಿ ಒಂದು ಕಲೆಯ ವಸ್ತು ಆಗಿರಬೇಕೆಂದೇನಿಲ್ಲ), ಹಾಗೆಯೇ ಸೌಂದರ್ಯಶಾಸ್ತ್ರದ ನಿರ್ಣಯವು ಕಲೆ ಅಥವಾ ಕಲೆಯ ಕಾರ್ಯದ ಬಗೆಗಿನ ಅಂಗೀಕಾರ, ಶ್ಲಾಘನೆ ಅಥವಾ ವಿಮರ್ಶೆ ಎಂದು ಉಲ್ಲೇಖಿಸಲ್ಪಡುತ್ತದೆ.

ತತ್ವಶಾಸ್ತ್ರೀಯ ಸೌಂದರ್ಯಶಾಸ್ತ್ರವು ಕೇವಲ ಕಲೆಯ ಬಗ್ಗೆ ಮಾತನಾಡುವುದಕ್ಕೆ ಮತ್ತು ಕಲೆಯ ಕಾರ್ಯಗಳ ಬಗ್ಗೆ ನಿರ್ಣಯಗಳನ್ನು ನೀಡುವುದಕ್ಕೆ ಸೀಮಿತವಾಗಿಲ್ಲ, ಆದರೆ ಕಲೆ ಅಂದರೆ ಏನು ಎಂಬುದರ ಬಗ್ಗೆ ವ್ಯಾಖ್ಯಾನವನ್ನೂ ಕೂಡ ಇದು ನೀಡಬೇಕಾಗಿದೆ. ಕಲೆಯು ತತ್ವಶಾಸ್ತ್ರಕ್ಕೆ ಒಂದು ಸ್ವತಂತ್ರವಾದ ವಿಭಾಗವಾಗಿದೆ, ಏಕೆಂದರೆ ಕಲೆಯು ಸಂವೇದನೆಗಳ ಜೊತೆ ವ್ಯವಹರಿಸುತ್ತದೆ (ಅಂದರೆ ಸೌಂದರ್ಯಶಾಸ್ತ್ರದ ವ್ಯುತ್ಪತ್ತಿ ಶಾಸ್ತ್ರ) ಮತ್ತು ಕಲೆಯು ಯಾವುದೇ ನೈತಿಕ ಅಥವಾ ರಾಜಕೀಯ ಉದ್ದೇಶಗಳಿಂದ ಸ್ವತಂತ್ರವಾಗಿದೆ. ಆದ್ದರಿಂದ, ಸೌಂದರ್ಯಶಾಸ್ತ್ರದಲ್ಲಿ ಕಲೆಯು ಎರಡು ವಿಭಿನ್ನವಾದ ಕಲ್ಪನೆಗಳನ್ನು ಹೊಂದಿದೆ: ಕಲೆಯು ಜ್ಞಾನವಾಗಿ ಅಥವಾ ಕಲೆಯು ಒಂದು ಕ್ರಿಯೆಯಾಗಿ ಕಲ್ಪಿಸಲ್ಪಡುತ್ತದೆ, ಆದರೆ ಸೌಂದರ್ಯಶಾಸ್ತ್ರವು ಜ್ಞಾನಮೀಮಾಂಸೆಯೂ ಅಲ್ಲ ಅಥವಾ ನೀತಿಶಾಸ್ತ್ರವೂ ಕೂಡ ಅಲ್ಲ.[೧೩]

"ಕಲೆ" ಅಂದರೆ ಏನು?

ಬದಲಾಯಿಸಿ

"ಕಲೆ"ಯು ಸ್ಥಿರವಾದ ಹೋರಾಟದ ಒಂದು ವಿಷಯ ಎಂದು ವ್ಯಾಖ್ಯಾನಿಸುವುದು ಎಷ್ಟು ಉತ್ತಮ; "ಕಲೆ" ಎಂಬ ಶಬ್ದದ ನಾವು ತಿಳಿದಿರುವ ಅರ್ಥದ ಮೂಲಗಳ ಮೇಲೆ ವಾದವನ್ನು ಮಾಡುವ ಹಲವಾರು ಪುಸ್ತಕಗಳು ಮತ್ತು ನಿಯತಕಾಲಿಕಗಳ ಲೇಖನಗಳು ಪ್ರಕಟಿಸಲ್ಪಟ್ಟಿವೆ.[೧೪] ಥಿಯೋಡರ್ ಅಡೊರ್ನೊ‍ನು ೧೯೬೯ ರಲ್ಲಿ "ಕಲೆಯನ್ನು ಸ್ವಯಂ-ಸಾಕ್ಷ್ಯಪೂರ್ಣ ಎಂದು ಪರಿಗಣಿಸುವ ಯಾವುದೂ ಕೂಡ ಸ್ವಯಂ-ಸಾಕ್ಷ್ಯಪೂರ್ಣ ಅಲ್ಲ" ಎಂದು ಹೇಳಿಕೆ ನೀಡಿದನು.[೧೫][೧೬] ಕಲಾಕಾರರು, ತತ್ವಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಮತ್ತು ಪ್ರೋಗ್ರಾಮರ‍್ಗಳು ಎಲ್ಲರೂ ತಮ್ಮ ತಮ್ಮ ವಿಭಾಗಗಳಲ್ಲಿ ಕಲೆಯ ಕಲ್ಪನೆಯನ್ನು ಬಳಸುತ್ತಾರೆ, ಮತ್ತು ಗಣನೀಯವಾಗಿ ಬದಲಾಗುವ ಕಾರ್ಯಾತ್ಮಕ ವ್ಯಾಖ್ಯಾನವನ್ನು ನೀಡುತ್ತಾರೆ. ಅದಕ್ಕೂ ಹೆಚ್ಚಾಗಿ, ಶತಮಾನಗಳು ಕಳೆದಂತೆ "ಕಲೆ" ಎಂಬ ಶಬ್ದದ ಮೂಲ ಅರ್ಥವೂ ಕೂಡ ಬದಲಾಗಿದೆ ಎಂಬುದು ಸರಳವಾಗಿ ತಿಳಿದುಬರುತ್ತದೆ, ಮತ್ತು ಅದೇ ರೀತಿಯಾಗಿ ೨೦ ನೆಯ ಶತಮಾನದ ಸಮಯದಲ್ಲೂ ಕೂಡ ಬದಲಾಗುವುದನ್ನು ಮುಂದುವರೆಸಿಕೊಂಡು ಹೋಗುತ್ತಿದೆ.

"ಕಲೆ" ಶಬ್ದದ ಇತ್ತೀಚಿನ ಪರಿಷ್ಕರಿಸದ ಪ್ರಮುಖ ಅರ್ಥವೆಂದರೆ ಸೃಜನಶೀಲತೆ ಯ (ಕ್ರಿಯಾತ್ಮಕ ಕಲೆ) ಅಥವಾ "ಲಲಿತ ಕಲೆ"ಯ (ಉತ್ಕೃಷ್ಟವಾದ ಕಲೆ) ಒಂದು ಅವಲೋಕನ ಎಂಬುದಾಗಿದೆ. ಲಲಿತ ಕಲೆಯೆಂದರೆ (ಫೈನ್ ಆರ್ಟ್) ಒಬ್ಬ ಕಲಾವಿದನ ಸೃಜನಶೀಲತೆಯನ್ನು (ಕ್ರಿಯೇಟಿವಿಟಿ) ವ್ಯಕ್ತಪಡಿಸಲು ಕಲಾನೈಪುಣ್ಯವನ್ನು ಬಳಸಲಾಗುತ್ತಿದೆ, ಅಥವಾ ಸಭಿಕರ (ವೀಕ್ಷಕರು/ವೀಕ್ಷಕರು) ಸೌಂದರ್ಯ ಪ್ರಜ್ಞೆಯನ್ನು ಆಕರ್ಷಿಸುವುದು, ಅಥವಾ ಸಭಿಕರ ಗಮನವನ್ನು ಸೂಕ್ಷ್ಮವಾದ ವಿಷಯಗಳ ಕಡೆಗೆ ಸೆಳೆಯುವುದು ಎಂದರ್ಥ. ಅನೇಕ ವೇಳೆ, ಕಲಾ ನೈಪುಣ್ಯವು ಒಂದು ಕ್ರಿಯಾತ್ಮಕ ವಸ್ತುವಿನಲ್ಲಿ ಬಳಸಲ್ಪಟ್ಟರೆ, ಜನರು ಇದನ್ನು ಕಲೆಯ ಬದಲಾಗಿ ಒಂದು ಜಾಣ್ಮೆ (ಕೌಶಲ) ಎಂದು ಪರಿಗಣಿಸುತ್ತಾರೆ, ಇದು ಹಲವಾರು ಸಮಕಾಲೀನ ಕೌಶಲ ಚಿಂತಕರಿಂದ ವಿವಾದಕ್ಕೊಳಗಾಗಲ್ಪಟ್ಟ ಸಂಗತಿಯಾಗಿದೆ. ಅದೇ ರೀತಿಯಾಗಿ, ಕಲಾ ನೈಪುಣ್ಯವು ಒಂದು ವಾಣಿಜ್ಯಕ ಅಥವಾ ಔದ್ಯಮಿಕ ಮಾರ್ಗದಲ್ಲಿ ಬಳಸಲ್ಪಟ್ಟರೆ, ಇದು ಕಲೆಯ ಬದಲಾಗಿ ವಿನ್ಯಾಸ (ರಚನೆ) ಎಂದು ಪರಿಗಣಿಸಲ್ಪಡುತ್ತದೆ, ಅಥವಾ ವ್ಯತಿರಿಕ್ತವಾಗಿ ಇವುಗಳು ಕಲೆಯ ವಿಧಗಳು ಎಂದು ಉಲ್ಲೇಖಿಸಲ್ಪಡುತ್ತವೆ, ಪ್ರಾಯಶಃ ಆನ್ವಯಿಕ ಕಲೆ ಎಂದು ಕರೆಯಲ್ಪಡುತ್ತವೆ. ಉದಾಹರಣೆಗೆ, ಕೆಲವು ಚಿಂತಕರು, ಲಲಿತ ಕಲೆ ಮತ್ತು ಆನ್ವಯಿಕ ಕಲೆಗಳ ನಡುವಣ ಭಿನ್ನತೆಯು ಯಾವುದೇ ಸರಳವಾದ ಉಲ್ಲೇಖನಾತ್ಮಕ ಭಿನ್ನತೆಗಳ ಬದಲಾಗಿ ವಸ್ತುವಿನ ವಾಸ್ತವವಾದ ಕಾರ್ಯದ ಜೊತೆಗೆ ತುಂಬಾ ಹೆಚ್ಚಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.[೧೭] ಕಲೆಯು ಸಾಮಾನ್ಯವಾಗಿ ಒಂದು ಆಲೋಚನೆಯನ್ನು ತಿಳಿಸುವುದು ಅಥವಾ ಸಂವಹನ ಮಾಡುವುದನ್ನು ಹೊರತುಪಡಿಸಿ ಯಾವುದೇ ಕಾರ್ಯವನ್ನು ಸೂಚಿಸುವುದಿಲ್ಲ.

ತುಂಬಾ ತಡವಾಗಿ ಅಂದರೆ ೧೯೧೨ ರಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಎಲ್ಲಾ ಕಲೆಗಳು ಸೌಂದರ್ಯದ ಉದ್ದೇಶಗಳನ್ನು ಹೊಂದಿರುತ್ತವೆ ಎಂಬ ಊಹೆಯು ಸಾಮಾನ್ಯವಾಗಿತ್ತು, ಮತ್ತು ಆದ್ದರಿಂದ ಯಾವುದು ಸುಂದರವಾಗಿರಲು ಪ್ರಯತ್ನಿಸುವುದಿಲ್ಲವೋ ಅದು ಕಲೆ ಎಂಬುದಾಗಿ ಪರಿಗಣಿಸಲ್ಪಡುವುದಿಲ್ಲ. ಘನಾಕೃತಿ ಕಲಾಕಾರರು, ಡಾಡಾವಾದಿಗಳು, ಸ್ಟ್ರಾವಿನ್‌ಸ್ಕಿ, ಮತ್ತು ಹಲವಾರು ಕಲಾ ಚಳುವಳಿಗಳು, ಸೌಂದರ್ಯವು ಕಲೆಯ ಉಲ್ಲೇಖದ ಕೇಂದ್ರವಾಗಿದೆ ಎಂಬ ಈ ಕಲ್ಪನೆಯ ವಿರುದ್ಧ ಹೋರಾಟವನ್ನು ನಡೆಸಿದವು, ಅದರ ಯಶಸ್ಸಿನ ಜೊತೆಗೆ, ಡಾಂಟೋನು, "ಸೌಂದರ್ಯವು ೧೯೬೦ ರ ದಶಕದ ಮುಂದುವರೆದ ಕಲೆಯಿಂದ ಮಾತ್ರ ಆಶಾಭಂಗವನ್ನು ಮಾಡಿಲ್ಲ ಆದರೆ ಅದೇ ರೀತಿಯಾಗಿ ಆ ದಶಕದ ಮುಂದುವರೆದ ತತ್ವಶಾಸ್ತ್ರದಿಂದಲೂ ಕೂಡ ನಿರಾಸೆಯನ್ನುಂಟುಮಾಡಿದೆ" ಎಂದು ಹೇಳಿದನು.[೧೫] ಬಹುಶಃ "ಅಭಿವ್ಯಕ್ತಿ" (ಕ್ರೊಸೆಯ ಸಿದ್ಧಾಂತಗಳಲ್ಲಿನ) ಎಂಬಂತಹ ಒಂದು ಅರ್ಥವು ಅಥವಾ "ಪ್ರತಿ-ವಾತಾವರಣ" (ಮ್ಯಾಕ್‌ಲುಹಾನ್‌ನ ಸಿದ್ಧಾಂತ) ಇವು ಸೌಂದರ್ಯದ ಮುಂಚಿನ ಪಾತ್ರವನ್ನು ಪುನಃಸ್ಥಾಪನೆ ಮಾಡುತ್ತವೆ. ಬ್ರೇನ್ ಮ್ಯಾಸುಮಿಯು "ಸೌಂದರ್ಯ"ವನ್ನು "ಅಭಿವ್ಯಕ್ತಿ"ಯ ಜೊತೆ ಜೊತೆಗೂಡಿ ಪರಿಗಣನೆಯಲ್ಲಿ ವಾಪಸು ತಂದನು.[೧೮] "ಸೌಂದರ್ಯ"ದಂತೆ ಕಲೆಯ ತತ್ವಶಾಸ್ತ್ರಕ್ಕೆ ಬಹು ಮುಖ್ಯವಾಗಿರುವ ಮತ್ತೊಂದು ವಿಷಯವು "ಉದಾತ್ತೀಕರಣ" (ಆದರ್ಶವಾದ) ಎಂಬುದಾಗಿದೆ, ಇದು ಆಧುನಿಕತೆಯ ನಂತರದ ತತ್ವಶಾಸ್ತ್ರಜ್ಞ ಜೀನ್-ಪ್ರಾನ್ಸೊಯಿಸ್ ಲ್ಯೋಟಾರ್ಡ್‌ನಿಂದ ಇಪ್ಪತ್ತನೆಯ ಶತಮಾನದಲ್ಲಿ ವಿವರಣೆ ನೀಡಲ್ಪಟ್ಟಿತು.

ಬಹುಶಃ (ಕೆನ್ನಿಕ್‌ನಲ್ಲಿರುವಂತೆ) ಇದಕ್ಕಿಂತ ಹೆಚ್ಚಿನ ಅರ್ಥದ ಯಾವ ವ್ಯಾಖ್ಯಾನವು ದೊರೆಯುವ ಸಂಬವವಿಲ್ಲ. ಪ್ರಾಯಶಃ ಒಂದು ವಿಟ್ಟರ್‌ಜೆಸ್ಟೇನಿಯನ್‌ ಶೈಲಿಯಲ್ಲಿನ (ವಿಟ್ಜ್ ಅಥವಾ ಬ್ಯೂಸ್ ನಲ್ಲಿರುವಂತೆ) ಸಂಬಂಧಿತ ವಿಷಯಗಳ ಒಂದು ಸಮೂಹವು ಕಲೆ ಎಂದು ಭಾವಿಸಲ್ಪಟ್ಟಿದೆ. ಮತ್ತೊಂದು ವಿಧಾನವು ಹೇಳುವುದೇನೆಂದರೆ "ಕಲೆ"ಯು ಮೂಲಭೂತವಾಗಿ ಒಂದು ಸಮಾಜಶಾಸ್ತ್ರದ ವಿಭಾಗವಾಗಿದೆ, ಅಂದರೆ ಕಲೆಯ ಸ್ಕೂಲ್‌ಗಳು ಮತ್ತು ಸಂಗ್ರಹಾಲಯಗಳು ಮತ್ತು ಕಲಾಕಾರರು ಕಲೆಯನ್ನು ವಿಧ್ಯುಕ್ತವಾದ ವ್ಯಾಖ್ಯಾನ ಎಂದು ಪರಿಗಣಿಸದೇ ಅದನ್ನು ಕೇವಲ ಕಲೆ ಎಂದು ಪರಿಗಣಿಸುತ್ತವೆ. "ಕಲೆಯ ಸಾಂಸ್ಥಿಕ ವ್ಯಾಖ್ಯಾನ"ವು (ಸಾಂಸ್ಥಿಕ ವಿಮರ್ಶೆಯನ್ನೂ ನೋಡಿ) ಜಾರ್ಜ್ ಡಿಕಿಯ ಮೂಲಕ ಮಹತ್ವವನ್ನು ಪಡೆಯಿತು. ಆಂಡಿ ವಾರ್ಹೊಲ್ ಮತ್ತು ಮಾರ್ಸೆಲ್ ಡಿಶಂಪ್‌ರು (ಅನುಕ್ರಮವಾಗಿ) ತಮ್ಮನ್ನು ಕಲೆಯ ವಿಷಯದಲ್ಲಿ ಪ್ರಸ್ತುತಪಡೆಸುವವರೆಗೆ ಹೆಚ್ಚಿನ ಜನರು ಬ್ರಿಲ್ಲೋ ಬಾಕ್ಸ್ ಅಥವಾ ಒಂದು ಅಂಗಡಿಯಿಂದ-ತಂದ ಮೂತ್ರದಾನಿಯನ್ನು ಕಲೆ ಎಂದು ಪರಿಗಣಿಸಿರಲಿಲ್ಲ (ಅಂದರೆ, ಕಲಾ ಸಂಗ್ರಹಾಲಯ), ಅದು ನಂತರ ಈ ವಸ್ತುಗಳ ಸಂಯೋಜನೆಯನ್ನು ಕಲೆಯನ್ನು ವ್ಯಾಖ್ಯಾನಿಸಿದ ಸಂಘಟನೆಗಳ ಜೊತೆ ಸಂಯೋಜನವನ್ನು ಪ್ರಸ್ತುತಪಡಿಸಿದರು.

ಕಾರ್ಯನಿರ್ವಹಣಾವಾದಿಗಳು ಅನೇಕ ವೇಳೆ ಕಲೆಯು, ಕಲೆಯ ಒಂದು ಕಾರ್ಯದಿಂದ ನಿರ್ಮಿಸಲ್ಪಡುವ ಅಥವಾ ಅದನ್ನು ಕಲೆಯಾಗಿ ಮಾಡುವ ಒಂದು ಪ್ರಕಿಯೆ ಎಂದು ಹೇಳುತ್ತಾರೆ ಅಥವಾ ಒಂದು ವಸ್ತುವಿನ ಯಾವುದೇ ಆನುವಂಶಿಕ ಗುಣಗಳು ಕಲೆ ಅಲ್ಲ, ಅಥವಾ ಕಲಾ ಜಗತ್ತಿನ ಸಂಸ್ಥೆಗಳಿಂದ ತೆಗೆದುಕೊಳ್ಳಲ್ಪಟ್ಟ ಉಲ್ಲೇಖನಗಳು ಸಮಾಜಕ್ಕೆ ಪರಿಚಯಿಸಲ್ಪಟ್ಟಾಗ ಅದು ಎಷ್ಟು ಒಳ್ಳೆಯ ರೀತಿಯಲ್ಲಿ ತೆಗೆದುಕೊಳ್ಳಲ್ಪಡುತ್ತದೆ ಎಂಬುದು ಕಲೆಯಾಗಿದೆ ಎಂದು ಹೇಳುತ್ತಾರೆ. ಹಾಗೆಯೇ, ಅದೇ ರೀತಿಯಾದ ಶಬ್ದಗಳು ಒಬ್ಬ ಪತ್ರಕರ್ತನಿಂದ ಬರೆಯಲ್ಪಟ್ಟರೆ, ಅಂದರೆ ಅವನು ನಂತರದಲ್ಲಿ ದೊಡ್ಡ ಲೇಖನವನ್ನು ಬರೆಯುವುದಕ್ಕಾಗಿ ಅವುಗಳನ್ನು ಮೊಟಕುಗೊಳಿಸಿ ಬರೆದುಕೊಂಡಿದ್ದರೆ, ಅದು ಒಂದು ಕವಿತೆಯಾಗುವುದಕ್ಕೆ ಸಾಧ್ಯವಿಲ್ಲ. ಮತ್ತೊಂದು ಪ್ರಕಾರದಲ್ಲಿ ಹೇಳುವುದಾದರೆ, ಲಿಯೋ ಟಾಲ್‌ಸ್ಟಾಯ್, ಕೆಲವನ್ನು ಕಲೆಯನ್ನಾಗಿ ಮಾಡುವ ಅಥವಾ ಮಾಡದಿರುವುದು ಇದರ ಪ್ರೇಕ್ಷಕರ ಮೂಲಕ ತಿಳಿದುಬರಲ್ಪಡುತ್ತದೆ, ಅದರ ನಿರ್ಮಾಪಕನ ಉದ್ದೇಶದಿಂದ ಅಲ್ಲ ಎಂಬ ಹೇಳಿಕೆಯನ್ನು ನೀಡಿದನು. ಮೊನ್ರೋಯ್ ಬೀರ್ಡ್‌ಸ್ಲೇರಂತಹ ಕ್ರಿಯಾತ್ಮಕ ವಾದಿಗಳು, ವಸ್ತುವಿನ ಒಂದು ಚೂರು ಕಲೆಯಾಗಿ ಪರಿಗಣಿಸಲ್ಪಡುತ್ತದೆಯೋ ಇಲ್ಲವೋ ಎಂಬುದು ಒಂದು ನಿರ್ದಿಷ್ಟ ವಿಷಯದಲ್ಲಿ ಅದು ಯಾವ ಕಾರ್ಯವನ್ನು ನಿರ್ವಹಿಸುತ್ತದೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ ಎಂದು ವಾದಿಸಿದನು; ಒಂದೇ ರೀತಿಯಾದ ಗ್ರೀಕ್ ಪುಷ್ಪದಾನಿಯು ಒಂದು ಸಂದರ್ಭದಲ್ಲಿ ಕಲಾತ್ಮಕ-ಅಲ್ಲದ ಪಾತ್ರವನ್ನು ನಿರ್ವಹಿಸಬಹುದು (ವೈನ್ ಅನ್ನು ತೆಗೆದುಕೊಂಡುಬರುವ ಸಂದರ್ಭದಲ್ಲಿ), ಮತ್ತು ಮತ್ತೊಂದು ಸಂದರ್ಭದಲ್ಲಿ ಒಂದು ಕಲಾತ್ಮಕವಾದ ಕಾರ್ಯವನ್ನು ನಿರ್ವಹಿಸಬಹುದು (ಮಾನವನ ಸೌಂದರ್ಯವನ್ನು ವರ್ಣನೆ ಮಾಡುವ ಸಮಯದಲ್ಲಿ ಸಹಾಯ ಮಾಡುವ ಮೂಲಕ). '

ಇದನ್ನೂ ನೋಡಿ: ಕಲೆಯ ಬಗೆಗಿನ ವರ್ಗೀಕರಣಕ್ಕೆ ಸಂಬಂಧಿಸಿದ ವಿವಾದಗಳು

ನಾವು ಕಲೆಯನ್ನು ನಿರ್ಣಯಿಸುವಾಗ ಏನನ್ನು ನಿರ್ಣಯ ಮಾಡಬೇಕು?

ಬದಲಾಯಿಸಿ

ಕಲೆಯು ತತ್ವ ಮೀಮಾಂಸೆಯ ಮತ್ತು ಮೂಲತತ್ವ ಶಾಸ್ತ್ರದ ಹಂತಗಳಲ್ಲಿ ಬಹಳ ಕ್ಲಿಷ್ಟವಾಗಿರುತ್ತದೆ ಹಾಗೆಯೇ ಮೌಲ್ಯ ಸಿದ್ಧಾಂತದ ಹಂತದಲ್ಲಿಯೂ ಕೂಡ ಕಷ್ಟಕರವಾಗಿರುತ್ತದೆ. ನಾವು ಹ್ಯಾಮ್ಲೆಟ್‌ ನ ಕಾರ್ಯನಿರ್ವಹಣೆಯನ್ನು ನೋಡುವಾಗ, ನಾವು ಎಷ್ಟೊಂದು ಕಲೆಯ ಕಾರ್ಯಗಳ ಅನುಭವವನ್ನು ಪಡೆಯುತ್ತೇವೆ, ಮತ್ತು ಯಾವುದನ್ನು ನಾವು ನಿರ್ಣಯ ಮಾಡಬೇಕು? ಪ್ರಾಯಶಃ ಅಲ್ಲಿ ಕೇವಲ ಒಂದೇ ಒಂದು ಪ್ರಸಕ್ತವಾದ ಕಲೆ ಅಸ್ತಿತ್ವದಲ್ಲಿರುತ್ತದೆ, ಪೂರ್ತಿ ಅಭಿನಯದಲ್ಲಿ, ಹಲವಾರು ಜನರು ಅದಕ್ಕೆ ತಮ್ಮ ಸಹಾಯವನ್ನು ನೀಡಿರುತ್ತಾರೆ, ಮತ್ತು ಅದು ಸಂಕ್ಷಿಪ್ತವಾಗಿ ಅಸ್ತಿತ್ವಕ್ಕೆ ಬರುತ್ತದೆ ಮತ್ತು ನಂತರದಲ್ಲಿ ಅದೃಶ್ಯವಾಗುತ್ತದೆ. ಬಹುಶಃ ಷೇಕ್ಸ್‌ಪಿಯರ್‌ನ ಹಸ್ತಪ್ರತಿಯು (ಮ್ಯಾನುಸ್ಕ್ರಿಪ್ಟ್) ತಂಡದ ಮೂಲಕ ನಡೆಸಿದ ನಾಟಕದ ಕಲೆಯ ಒಂದು ವಿಭಿನ್ನವಾದ ಕಾರ್ಯವಾಗಿದೆ, ಅದು ಆ ರಾತ್ರಿಯಲ್ಲಿ ಈ ತಂಡದಿಂದ ಮಾಡಲ್ಪಟ್ಟ ನಾಟಕ ಅಭಿನಯದ ಒಂದು ಭಿನ್ನತೆಯೂ ಕೂಡ ಆಗಿದೆ, ಮತ್ತು ಈ ಮೂರೂ ನಿರ್ಣಯಿಸಲ್ಪಡಬಹುದು, ಆದರೆ ಭಿನ್ನವಾದ ಮಾನದಂಡಗಳ ಮೂಲಕ ನಿರ್ಣಯಿಸಲ್ಪಡಬೇಕು.

ಇದರಲ್ಲಿ ಒಳಗೊಳ್ಳಲ್ಪಟ್ಟ ಪ್ರತಿ ವ್ಯಕ್ತಿಯು ಅವನ ಅಥವಾ ಅವಳ ಅರ್ಹತೆಗಳಿಗನುಗುಣವಾಗಿ ಪ್ರತ್ಯೇಕವಾಗಿ ನಿರ್ಣಯಿಸಲ್ಪಡಬೇಕು, ಮತ್ತು ಪ್ರತಿಯೊಂದು ವೇಷಭೂಷಣ ಅಥವಾ ರೂಪರೇಖೆಗಳು ಕಲೆಯ ಸ್ವಂತ ಕೆಲಸದಂತೆ ಪರಿಗಣಿಸಲ್ಪಡಬೇಕು (ಪ್ರಾಯಶಃ ನಿರ್ದೇಶಕನು ಅವುಗಳೆಲ್ಲವನ್ನು ಏಕೀಕರಿಸುವ ಕಾರ್ಯವನ್ನು ಹೊಂದಿರುತ್ತಾನೆ). ಇದೇ ರೀತಿಯಾದ ಸಮಸ್ಯೆಗಳು ಸಂಗೀತ, ಸಿನೆಮಾ ಮತ್ತು ಚಿತ್ರಕಲೆಯಲ್ಲಿಯೂ ಕೂಡ ಉದ್ಭವವಾಗುತ್ತವೆ. ಒಬ್ಬ ಚಿತ್ರಕಾರನ ವರ್ಣಚಿತ್ರವನ್ನೇ ನಿರ್ಣಯ ಮಾಡಬೇಕೋ, ವರ್ಣಚಿತ್ರಕಾರನ ಕಾರ್ಯಗಳನ್ನು ಶ್ಲಾಘಿಸಬೇಕೋ, ಅಥವಾ ಸಂಗ್ರಹಾಲಯದ ಕೆಲಸಗಾರರಿಂದ ಪ್ರದರ್ಶನದಸಂದರ್ಭದಲ್ಲಿ ಅದನ್ನು ಅಣಿಗೊಳಿಸಿದ ರೀತಿಯನ್ನು ಶ್ಲಾಘಿಸಬೇಕೋ?

ಈ ಸಮಸ್ಯೆಗಳು ೧೯೬೦ ರ ದಶಕದ ಸಮಯದಲ್ಲಿ ಭಾವನಾತ್ಮಕ (ಕಲ್ಪನಾತ್ಮಕ) ಕಲೆಯ ಬೆಳವಣಿಗೆಯ ಮೂಲಕ ಇನ್ನೂ ಕ್ಲಿಷ್ಟಕರವಾಗಲ್ಪಟ್ಟವು. ವಾರ್ಹೋಲ್‌ನ ಜನಪ್ರಿಯವಾದ ಬ್ರಿಲ್ಲೋ ಬಾಕ್ಸ್‌ ಗಳು ಆ ಸಮಯದಲ್ಲಿ ವಾಸ್ತವವಾದ ಬ್ರಿಲ್ಲೋ ಬಾಕ್ಸ್‌ಗಳಿಂದ ಭಿನ್ನವಾಗಿಸುವುದಕ್ಕೆ ಸಾಧ್ಯವಾಗದಂತವುಗಳಾಗಿದ್ದವು. ಈ ಬಾಕ್ಸ್‌ಗಳ ಸಲುವಾಗಿ ವರ್ಹೋಲ್‌ನನ್ನು ಶ್ಲಾಘಿಸುವುದು ಒಂದು ಪ್ರಮಾದವಾಗಬಹುದು (ಇವುಗಳು ಸ್ಟೀವ್ ಹಾರ್ವೇನಿಮ್ದ ರಚಿಸಲ್ಪಟ್ಟಿದ್ದವು), ಆದರೂ ಒಂದು ಸಂಗ್ರಹಾಲಯದಲ್ಲಿ ಇತರ ವಿಧದ ವರ್ಣಚಿತ್ರಗಳ ಜೊತೆ ಇವುಗಳನ್ನು ಪ್ರದರ್ಶಿಸಿದ ಕಲ್ಪನಾತ್ಮಕ ಪ್ರಯತ್ನ ಮಾತ್ರ ವಾರ್ಹೋಲ್‌ನದಾಗಿದೆ. ನಾವು ವಾರ್ಹೋಲ್‌ನ ವಿಷಯವನ್ನು ನಿರ್ಣಯ ಮಾಡುತ್ತಿದ್ದೇವೆಯೇ? ಮಾಧ್ಯಮದಲ್ಲಿ ಅವನ ವಿಷಯದ ನಿರ್ವಹಿಸುವಿಕೆಯನ್ನು ಅಂದಾಜಿಸುತ್ತಿದ್ದೇವೆಯೇ? ವಾರ್ಹೋಲ್‌ನು ಬಾಕ್ಸ್‌ಗಳನ್ನು ಪ್ರದರ್ಶಿಸುವುದಕ್ಕೆ ಅನುಮತಿಸಿದ ಮೇಲ್ವಿಚಾರಕನ ಒಳದೃಷ್ಟಿ? ಒಟ್ಟಾರೆ ಫಲಿತಾಂಶ? ಫಲಿತಾಂಶದ ಬಗೆಗಿನ ನಮ್ಮ ಅನುಭವ ಅಥವಾ ವ್ಯಾಖ್ಯಾನ (ಅರ್ಥವಿವರಣೆ)? ಮೂಲತತ್ವಶಾಸ್ತ್ರದ ಪ್ರಕಾರ, ನಾವು ಕಲೆಯ ಕಾರ್ಯಗಳ ಅಬಗೆಗೆ ಹೇಗೆ ಆಲೋಚಿಸಬೇಕು? ಇದು ಒಂದು ಭೌತಿಕ ವಸ್ತುವೇ? ಹಲವಾರು ವಸ್ತುಗಳ ಮಿಶ್ರಣವೇ? ಒಂದು ಶ್ರೇಣಿಯ ವಸ್ತುಗಳೇ? ಒಂದು ಮಾನಸಿಕ ವಸ್ತುವೇ? ಒಂದು ಕ್ರಿಯಾತ್ಮಕ ವಸ್ತುವೇ? ಒಂದು ಅಮೂರ್ತ ವಸ್ತುವೇ? ಒಂದು ಘಟನೆಯೇ? ಅಥವಾ ಸರಳವಾಗಿ ಒಂದು ಕ್ರಿಯಯೇ?

ಕಲೆಯು ಯಾವುದರಂತಿರಬೇಕು?

ಬದಲಾಯಿಸಿ

ಹಲವಾರು ಮಹತ್ವಾಕಾಂಕ್ಷಿಗಳು ಕಲೆಗಾಗಿ ವಾದವನ್ನು ಮಾಡಿದ್ದಾರೆ, ಮತ್ತು ಸೌಂದರ್ಯಶಾಸ್ತ್ರಜ್ಞರು ಅನೇಕ ವೇಳೆ ಒಂದು ಉದ್ದೇಶ ಅಥವಾ ಮತ್ತೊಂದು ಕೆಲವೊಂದು ರೀತಿಯಲ್ಲಿ ಉತ್ಕೃಷ್ಟವಾಗಿರುತ್ತವೆ ಎಂದು ವಾದಿಸಿದನು. ಉದಾಹರಣೆಗೆ, ಕ್ಲೆಮೆಂಟ್ ಗ್ರೀನ್‌ಬರ್ಗ್, ೧೯೬೦ ರಲ್ಲಿ ಪ್ರತಿ ಕಲಾತ್ಮಕವಾದ ಮಾಧ್ಯಮವು ಯಾವುದು ಇದನ್ನು ಸಂಭವನೀಯ ಮಾಧ್ಯಮಗಳ ನಡುವೆ ಅಪೂರ್ವವನ್ನಾಗಿಸುತ್ತದೆ (ಏಕಮಾತ್ರ) ಎಂಬುದನ್ನು ಅರಿಯಬೇಕು ಮತ್ತು ನಂತರದಲ್ಲಿ ಇದರ ಒಂದು ವಿಧವಾದ ಸ್ವಂತ ಅನನ್ಯತೆಯನ್ನು ಹೊರತುಪಡಿಸಿ ಉಳಿದ ಎಲ್ಲವುಗಳಿಂದ ತನ್ನನ್ನು ಶುದ್ಧೀಕರಿಸಿಕೊಳ್ಳಬೇಕು.[೧೯] ಮತ್ತೊಂದು ವಿಧದಲ್ಲಿ, ಡಾಡಾವಾದಿ ಟ್ರಿಸ್ಟನ್ ಟ್ಜಾರಾನು ೧೯೧೮ ರಲ್ಲಿ ಕಲೆಯ ಕಾರ್ಯಗಳನ್ನು ಒಂದು ಹುಚ್ಚು ಸಮಾಜದ ಕಾರ್ಯಗಳ ನಾಶಪಡಿಸುವಿಕೆ ಎಂಬಂತೆ ವೀಕ್ಷಿಸಿದನು. “ನಾವು ಕಸ ಗುಡಿಸಬೇಕು ಮತ್ತು ಶುದ್ಧವಾಗಿಟ್ಟುಕೊಳ್ಳಬೇಕು. ಹುಚ್ಚುತನದ ಸ್ಥಿತಿಯ ನಂತರ ವೈಯುಕ್ತಿಕ ಶುದ್ಧತೆಯನ್ನು ಧೃಢವಾಗಿ ಹೇಳಬೇಕು, ಒಂದು ಜಗತ್ತಿನ ಪೂರ್ಣ ಹುಚ್ಚುತನವನ್ನು ನ್ಯಾಯಭ್ರಷ್ಟರ ಕೈಯಲ್ಲಿ ಪರಿತ್ಯಜಿಸಿ ಆಕ್ರಮಣಶೀಲರಾಗಬೇಕು."[೨೦] ಸಾಂಪ್ರದಾಯಿಕ ಗುರಿಗಳು, ಕ್ರಿಯಾತ್ಮಕ ಗುರಿಗಳು, ಸ್ವಯಂ-ಅಭಿವ್ಯಕ್ತಿ, ರಾಜಕೀಯ ಉದ್ದೇಶಗಳು, ಆಧ್ಯಾತ್ಮಿಕ ಉದ್ದೇಶಗಳು, ತತ್ವಶಾಸ್ತ್ರೀಯ ಗುರಿಗಳು, ಮತ್ತು ಹೆಚ್ಚು ಐಂದ್ರಿಯಕ ಅಥವಾ ಸೌಂದರ್ಯಾತ್ಮಕ ಗುರಿಗಳೂ ಕೂಡ ಕಲೆಯು ಹೇಗಿರಬೇಕು ಎಂಬುದರ ಜನಪ್ರಿಯ ಚಿತ್ರಣಗಳಾಗಿವೆ.

ಕಲೆಯ ಮೌಲ್ಯ

ಬದಲಾಯಿಸಿ

ಟಾಲ್‌ಸ್ಟಾಯ್‌ನು ಕಲೆಯನ್ನು ವ್ಯಾಖ್ಯಾನಿಸಿದನು, ಮತ್ತು ಪ್ರಾಸಂಗಿಕವಾಗಲ್ಲದೇ ಇದರ ಮೌಲ್ಯದ ಗುಣಲಕ್ಷಣಗಳನ್ನು ಈ ರೀತಿಯಾಗಿ ವಿವರಿಸಿದನು: "ಕಲೆಯು ಇದರಲ್ಲಿ ಒಳಗೊಂಡಿರುವ ಒಂದು ಮಾನವ ಚಟುವಟಿಕೆಯಾಗಿದೆ, ಅದನ್ನು ಒಬ್ಬ ವ್ಯಕ್ತಿಯು ಜಾಗೃತಾವಸ್ಥೆಯಲ್ಲಿ, ಕೆಲವು ನಿರ್ದಿಷ್ಟವಾದ ಬಾಹಿಕ ಸಂಕೇತಗಳ ಮೂಲಕ, ಅವನು ಜೀವಿಸಿದ ಇತರರ ಭಾವನೆಗಳನ್ನು ಹಸ್ತಾಂತರಿಸುತ್ತಾನೆ, ಮತ್ತು ಆ ಇತರ ವ್ಯಕ್ತಿಗಳು ಈ ಭಾವನೆಗಳಿಂದ ಪ್ರಭಾವಿತಲಾಗಲ್ಪಡುತ್ತಾರೆ ಮತ್ತು ಅವುಗಳನ್ನು ಅನುಭವಿಸುತ್ತಾರೆ."

ಕಲೆಯ ಮೌಲ್ಯವು, ನಂತರದಲ್ಲಿ, ತಾದ್ಯಾತ್ಮಾನುಭೂತಿಯ ಮೌಲ್ಯದ ಜೊತೆಗೊಂಡಿದೆ.

ಇತರ ಸಂಭವನೀಯ ಅವಲೋಕನಗಳು ಇಂತಿವೆ: ಕಲೆಯು ಜ್ಞಾನದ ಕೆಲವು ವಿಶಿಷ್ಟವಾದ ವಿಧದಗಳಿಗೆ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಕಲೆಯು ಮಾನವನ ಸ್ಥಿತಿಯೊಳಗಿನ ಒಂದು ಒಳನೋಟವಾಗಿದೆ. ಕಲೆಯು ವಿಜ್ಞಾನ ಮತ್ತು ಧರ್ಮಕ್ಕೆ ಸಂಬಂಧಿಸಿದೆ. ಕಲೆಯು ಶಿಕ್ಷಣದ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ಅಥವಾ ಬೋಧನೆ, ಅಥವಾ ಎನ್‌ಕಲ್ಚುರೇಷನ್‌ಗಳ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ. ಕಲೆಯು ನಮ್ಮನ್ನು ಹೆಚ್ಚು ನೈತಿಕರನ್ನಾಗಿ ಮಾಡುತ್ತದೆ. ಇದು ನಮ್ಮನ್ನು ಅಧ್ಯಾತ್ಮಿಕತೆಯ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇತರ ಸಾಧನಗಳ ಮೂಲಕ ಕಲೆಯು ರಾಜಕೀಯವಾಗಿದೆ. ಕಲೆಯು ಶೋಧನೆಯನ್ನು ಅನುಮತಿಸುವುದರ ಮೌಲ್ಯವನ್ನು ಹೊಂದಿದೆ. ಯಾವುದೇ ದೃಷ್ಟಾಂತದಲ್ಲಿ, ಕಲೆಯ ಮೌಲ್ಯವು ಒಂದು ಕಲಾ ವಿಧದ ಹೊಂದಿಕೆಯಾಗುವಿಕೆಯನ್ನು ನಿರ್ಧರಿಸುತ್ತದೆ. ಅವುಗಳು ತಮ್ಮ ಮೌಲ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಭಿನ್ನತೆಯನ್ನು ಹೊಂದಿರುತ್ತವೆಯೇ, ಅಥವಾ (ಅದಲ್ಲದಿದ್ದರೆ) ಕಲೆಯ ಏಕತೆಯ ಮೌಲ್ಯವನ್ನು ಸಾಧಿಸುವುದರಲ್ಲಿನ ಅವುಗಳ ಸಾಮರ್ಥ್ಯವು ಭಿನ್ನವಾಗಿರುತ್ತದೆಯೇ?

ಆದರೆ ಕಲೆಯ ಮೌಲ್ಯದ ಪ್ರಶ್ನೆಯನ್ನು ವ್ಯವಸ್ಥಿತವಾಗಿ ಸಮೀಪಿಸುವುದಕ್ಕೆ, ಒಬ್ಬ ವ್ಯಕ್ತಿಯು ಕೇಳಬೇಕು: ಯಾರಿಗೆ? ಕಲಾಕಾರನಿಗೆ? ವೀಕ್ಷಕರಿಗೆ? ಸಮಾಜದ ಜನತೆಗೆ, ಮತ್ತು/ಅಥವಾ ವೀಕ್ಷರಕರನ್ನು ಹೊರತುಪಡಿಸಿದ ವ್ಯಕ್ತಿಗಳಿಗೆ? ಕಲೆಯ "ಮೌಲ್ಯ"ವು ಈ ರೀತಿಯಾದ ಭಿನ್ನವಾದ ಸಂದರ್ಭಗಳಲ್ಲಿ ಭಿನ್ನವಾಗಿರುತ್ತದೆಯೇ?

ಕಲೆಯ ಉದ್ದೇಶಿತ ಮೌಲ್ಯವು ಕಲೆ ಮತ್ತು ಇತರ ಕಾರ್ಯಗಳ ನಡುವಣ ಸಂಬಂಧವನ್ನು ಉಲ್ಲೇಖಿಸಲು ಸಹಾಯ ಮಾಡುತ್ತದೆ. ಕಲೆಯು ಸ್ಪಷ್ಟವಾಗಿ ಹಲವಾರು ವಿಷಯಗಳಲ್ಲಿ (ಸಂದರ್ಭಗಳಲ್ಲಿ) ಆಧ್ಯಾತ್ಮಿಕ ಉದ್ದೇಶಗಳನ್ನೂ ಹೊಂದಿದೆ, ಆದರೆ ಧಾರ್ಮಿಕ ಕಲೆ ಮತ್ತು ಧರ್ಮ ಪರ್ ಸೆ ಗಳ ನಡುವೆಯಿರುವ ಭಿನ್ನತೆಯು ನಿರ್ದಿಷ್ಟವಾಗಿ ಎನು? ಸತ್ಯವು ಕ್ಲಿಷ್ಟವಾಗಿದೆ - ಕಲೆಯು ಒಂದು ಕ್ರಿಯಾತ್ಮಕ ಗ್ರಹಿಕೆಯಲ್ಲಿ ಅನುಪಯುಕ್ತವಾಗಿದೆ ಮತ್ತು ಮಾನವ ಚಟುವಟಿಕೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಕಾಲ್ಪನಿಕ ಕಥೆ ’ನಕ್ಷತ್ರಪುಂಜಗಳಿಗೆ ಬಿಟ್ಟಿ ಪಯಣಿಗನ ಮಾರ್ಗದರ್ಶನ’ಕ್ಕೆ ಸಂಬಂಧಿಸಿದ ಕೆಲಸದಲ್ಲಿ ಕೆಲಯ ಮೌಲ್ಯದ ಒಂದು ವಾದವು ಹೇಳುವುದೇನೆಂದರೆ, ಅಲ್ಲಿ ಭೂಮಿಯ ವಿನಾಶಕ್ಕೆ ಸಂಬಂಧಿಸಿದ ಕೆಲವು ಬಾಹಿಕ ಶಕ್ತಿಗಳು ಅಸ್ತಿತ್ವದಲ್ಲಿವೆ, ನಿವಾಸಿಗಳನ್ನು ಕೇಳಿ, ಮಾನವತೆಯ ಉಪಯೋಗವೇನು, ಮಾನವತೆಯ ಪ್ರತಿಕ್ರಿಯೆಯು ಏನಾಗಿರಬೇಕು? ವಾದವು ಮುಂದುವರೆಯುತ್ತ, ಇದರ ನಿರಂತರ ಅಸ್ತಿತ್ವಕ್ಕಾಗಿ ಮಾನವತೆಯು ನೀಡಬಹುದಾದ ಒಂದೇ ಒಂದು ಸಮರ್ಥನೆಯೆಂದರೆ ಷೇಕ್ಸ್‌ಪಿಯರ್‌ನ ನಾಟಕ, ರೆಂಬ್ರಂಡ್ಟ್‌ನ ಒಂದು ವರ್ಣಚಿತ್ರ ಅಥವಾ ಒಂದು ಬ್ಯಾಚ್ ಸಂಗೀತ ಕಚೇರಿಗಳಂತಹ ಗತಕಾಲದ ನಿರ್ಮಾಣ ಮತ್ತು ನಿರಂತರ ನಿರ್ಮಾಣವಾಗಿದೆ. ಇವುಗಳು ಮಾನವತೆಯನ್ನು ವ್ಯಾಖ್ಯಾನಿಸುವ ವಸ್ತುಗಳ ಮೌಲ್ಯಗಳಾಗಿವೆ ಎಂಬುದು ಒಂದು ಸೂಚನೆಯಾಗಿದೆ.[೨೧]

ಸೌಂದರ್ಯಶಾಸ್ತ್ರದ ಸಾರ್ವತ್ರಿಕ ನಿಯಮಗಳು

ಬದಲಾಯಿಸಿ

ತತ್ವಶಾಸ್ತ್ರಜ್ಞ ಡೆನಿಸ್ ಡಟನ್‌ನು ಮಾನವ ಸೌಂದರ್ಯಶಾಸ್ತ್ರದಲ್ಲಿ ಏಳು ಸಾರ್ವತ್ರಿಕ ಸಂಕೇತಗಳನ್ನು ಕಂಡುಹಿಡಿದನು:[೨೨]

  1. ಪರಿಣತಿ ಅಥವಾ ಕಲಾರಸಿಕತೆ. ತಾಂತ್ರಿಕ ಕಲಾತ್ಮಕ ಕೌಶಲ್ಯಗಳು ಬೆಳೆಸಲ್ಪಡುತ್ತವೆ, ಗುರುತಿಸಲ್ಪಡುತ್ತವೆ, ಮತ್ತು ಗೌರವಿಸಲ್ಪಡುತ್ತವೆ.
  2. ಪ್ರಯೋಜಕತಾ ವಾದದ ಸಂತೋಷ. ಜನರು ಕಲೆಗೋಸ್ಕರ ಕಲೆಯನ್ನು ಆನಂದಿಸುತ್ತಾರೆ, ಮತ್ತು ಇದು ಅವರನ್ನು ಬೆಚ್ಚಗಿರಿಸುತ್ತದೆ ಅಥವಾ ಟೇಬಲ್‌ನ ಮೇಲೆ ಆಹಾರವನ್ನು ತಂದಿಡಬೇಕು ಎಂದು ಅವರು ಆದೇಶಿಸುವುದಿಲ್ಲ.
  3. ಶೈಲಿ. ಕಲಾತ್ಮಕ ವಸ್ತುಗಳು ಮತ್ತು ಕಾರ್ಯನಿರ್ವಹಣೆಗಳು ಸಂಯೋಜನೆಯ ತತ್ವಗಳನ್ನು ತೃಪ್ತಿಗೊಳಿಸುತ್ತವೆ, ಅದನ್ನು ಒಂದು ತ್ವರಿತವಾಗಿ ಗುರುತಿಸಬಹುದಾದ ಶೈಲಿಯಲ್ಲಿ ಇರಿಸುತ್ತವೆ.
  4. ವಿಮರ್ಶೆ. ಜನರು ಕಲೆಯ ಕೆಲಸಗಳ ನಿರ್ಣಯ, ಶ್ಲಾಘನೆ, ಮತ್ತು ಅರ್ಥವಿವರಣೆಯ ಒಂದು ಟಿಪ್ಪಣಿಯನ್ನು ಮಾಡುತ್ತದೆ.
  5. ಅನುಕರಣೆ. ಅಮೂರ್ತ ವರ್ಣಚಿತ್ರಕಲೆಯಂತಹ ಕೆಲವು ಪ್ರಮುಖವಾದ ವಿನಾಯಿತಿಗಳ ಜೊತೆ, ಕಲೆಯ ಕಾರ್ಯಗಳು ಜಗತ್ತಿನ ಅನುಭವಗಳನ್ನು ಹೊಂದಿರುವ ಸೋಗನ್ನು ನಟಿಸುತ್ತವೆ.
  6. ವಿಶೇಷವಾದ ಕೇಂದ್ರ. ಕಲೆಯನ್ನು ಸಾಮಾನ್ಯ ಜೀವನದಿಂದ ಮತ್ತು ಅನುಭವದ ಒಂದು ನಾಟಕೀಯ ಕೆಂದ್ರದಿಂದ ಹೊರಗಿರಿಸಲಾಗಿದೆ.

ಇದು ವಿರೋಧಿಸಲ್ಪಡಬಹುದು, ಆದಾಗ್ಯೂ, ಅಲ್ಲಿ ಡಾನ್‌ನ ವಿಭಾಗಗಳಲ್ಲಿ ಹಲವಾರು ವಿನಾಯಿತಿಗಳಿವೆ. ಉದಾಹರಣೆಗೆ, ಸಮಕಾಲೀನ ಕಲಕಾರ ಥಾಮಸ್ ಹರ್ಶೊರ್ನ್‌ನ ಅಳವಡಿಕೆಗಳು ತಾಂತ್ರಿಕತೆಯ ಕಲಾರಸಿಕತೆಯನ್ನು ಉದ್ದೇಶಪೂರ್ವಕವಾಗಿ ತ್ಯಜಿಸುತ್ತದೆ. ಒಂದು ಪುನರುತ್ಥಾನ ಮೆಡೊನಾವನ್ನು ಸೌಂದರ್ಯದ ಕಾರಣಗಳಿಂದಾಗಿ ಜನರು ಅದನ್ನು ಶ್ಲಾಘಿಸುತ್ತಾರೆ, ಆದರೆ ಅಂತಹ ವಸ್ತುಗಳು ಅನೇಕ ವಸ್ತುಗಳು (ಮತ್ತು ಕೆಲವು ವೇಳೆ ಈಗಲೂ ಕೂಡ ಹೊಂದಿವೆ) ನಿರ್ದಿಷ್ಟವಾದ ನಿಷ್ಠೆಯ ಕಾರ್ಯಗಳನ್ನು ಹೊಂದಿರುತ್ತವೆ. ’ಸಂಯೋಜನೆಯ ತತ್ವಗಳು’ ಇವು ಡಿಶಾಂಪ್‌ನ ಫೌಂಟೇನ್ ಅಥವಾ ಜಾನ್ ಕೇಜ್‌ನ ೪'೩೩" ನಲ್ಲಿ ಕಂಡುಬರುತ್ತವೆ, ಇವು ಕೆಲಸವನ್ನು ಒಂದು ಪರಿಗಣಿಸಬಹುದಾದ ಶೈಲಿಯಲ್ಲಿ ಸ್ಥಾಪಿಸುವುದಿಲ್ಲ (ಅಥವಾ ನಿರ್ದಿಷ್ಟವಾಗಿ ಕೆಲಸದ ಅರ್ಥಮಾಡಿಕೊಳ್ಳುವಿಕೆಯ ಶೈಲಿಯಲ್ಲಿ ಸ್ಥಾಪಿಸಲ್ಪಡುವುದಿಲ್ಲ). ಅದಕ್ಕೂ ಹೆಚ್ಚಾಗಿ, ಡಟನ್‌ನ ಕೆಲವು ವಿಭಾಗಗಳು ತುಂಬಾ ವಿಸ್ತಾರವಾಗಿರುವಂತೆ ಕಂಡುಬರುತ್ತವೆ: ಒಬ್ಬ ಭೌತವಿಜ್ಞಾನಿಯು ಒಂದು ಸಿದ್ಧಾಂತವನ್ನು ತಯಾರಿಸುವ ಸಮಯದಲ್ಲಿ ಅವನ/ಅವಳ ಕಲ್ಪನೆಯಲ್ಲಿ ಕಾಲ್ಪನಿಕ ಜಗತ್ತುಗಳಿಗೆ ಪ್ರಾಧಾನ್ಯ ನೀಡಬಹುದು.

ಇನ್ನೂ ಹೆಚ್ಚಿನದಾಗಿ ಹೇಳಬೇಕೆಂದರೆ, ವಿಜ್ಞಾನಗಳಲ್ಲಿ ಮತ್ತು ಮಾನವೀಯತೆಗಳಲ್ಲಿ ಶಿಕ್ಷಣಗಳು ಮನಶಾಸ್ತ್ರ ಮತ್ತು ಸೌಂದರ್ಯಶಾಸ್ತ್ರದ ನಡುವಣ ಸಂಬಂಧವನ್ನು ಅರ್ಥಮಾಡಿಕೊಳ್ಳುವುದಕ್ಕೆ ವಿಕಾಸಾತ್ಮಕ ಮನಶಾಸ್ತ್ರ ಮತ್ತು ಜ್ಞಾನಗ್ರಹಣ ವಿಜ್ಞಾನಗಳ ಮೊರೆಹೋದರು. ಡಟನ್‌ನ ಹೊರತಾಗಿಯೂ, ಈ ಸಂಶೋಧನಾ ಕ್ಸೇತ್ರವು ಡೇವಿಡ್ ಬೋರ್ಡ್‌ವೆಲ್, ಬ್ರೇನ್ ಬೊಯ್ಡ್, ಕ್ರಿಸ್ಟೈನ್ ಬ್ಯೂಸಿ-ಗ್ಲುಕ್ಸ್‌ಮನ್, ನೊಯೆಲ್ ಕ್ಯಾರಲ್, ಎಲೆನ್ ಡಿಸ್ಸಾನಾಯಕ್, ನ್ಯಾನ್ಸಿ ಈಸ್ಟರ್‌ಲಿನ್, ಬ್ರಾಕಾ ಎಟಿಂಜರ್, ಡೇವಿಡ್ ಈವನ್ಸ್, ಜೋನಾಟನ್ ಗೊಟ್‌ಶಲ್, ಟೊರ್ಬೆನ್ ಗ್ರೊಡಾಲ್, ಪೌಲ್ ಹೆರ್ನಾಡಿ, ಪ್ಯಾಟ್ರಿಕ್ ಹೋಗನ್, ಕಾರ್ಲ್ ಪ್ಲ್ಯಾಂಟಿಗಾ, ಎಲೈನ್ ಸ್ಕ್ಯಾರಿ, ಮುರ್ರೇ ಸ್ಮಿತ್, ವೆಂಡಿ ಸ್ಟೈನರ್, ರೊಬರ್ಟ್ ಸ್ಟೋರೇ, ಫ್ರೆಡರಿಕ್ ಟರ್ನರ್, ಮತ್ತು ಮಾರ್ಕ್ ಟರ್ನರ್ ಮುಂತಾದವರನ್ನು ಒಳಗೊಳ್ಳುತ್ತದೆ.

ವಿಮರ್ಶೆ

ಬದಲಾಯಿಸಿ

ಸೌಂದರ್ಯಶಾಸ್ತ್ರದ ತತ್ವಶಾಸ್ತ್ರವು ಕೆಲವು ಸಮಾಜಶಾಸ್ತ್ರಜ್ಞರು ಮತ್ತು ಬರಹಗಾರರಿಂದ ಕಲೆ ಮತ್ತು ಸಮಾಜದ ಬಗ್ಗೆ ವಿಮರ್ಶೆ ಮಾಡಲ್ಪಟ್ಟಿತು. ಅಲ್ಲಿ ಒಂದು ಅನನ್ಯವಾದ ಸೌಂದರ್ಯಶಾಸ್ತ್ರದ ವಸ್ತು ಇಲ್ಲ ಎಂದು ರೇಮಂಡ್ ವಿಲಿಯಮ್ಸ್‌ನು ವಾದಿಸುತ್ತಾನೆ, ಆದರೆ ಒಂದು ಸಾಧಾರಣ ಮಾತುಕತೆಯಿಂದ ಪರಿಣಿತರ ಮಾತುಕತೆಯವರೆಗಿನ ಸಾಂಸ್ಕೃತಿಕ ವಿಧಗಳ ಒಂದು ನಿರಂತರತೆಗಳು ಒಂದು ಯೋಜನೆ, ಸಂಸ್ಥೆ ಅಥವ ವಿಶಿಷ್ಟ ಘಟನೆಯ ಮೂಲಕ ಸಂಕೇತಿಸಲ್ಪಡುತ್ತವೆ. ಪಿರ್ರೆ ಬೊರ್ಡಿಯು ಇವನೂ ಕೂಡ ಈ ಸಮಸ್ಯೆಯನ್ನು ಕಾಂಟ್‌ನ ಸೌಂದರ್ಯಶಾಸ್ತ್ರದ ಜೊತೆಗೆ ತೆಗೆದುಕೊಂಡನು ಮತ್ತು ಇದು ಒಂದು ಉನ್ನತ ಶ್ರೇಣಿಯ ಹೆಬಿಟಸ್ ಮತ್ತು ವಿದ್ವತ್‌ಪೂರ್ಣ ವಿಶ್ರಾಂತಿಯ ಉತ್ಪನ್ನದ ಒಂದು ಅನುಭವವನ್ನು ಪ್ರತಿನಿಧಿಸುತ್ತದೆ ಎಂದು ವಾದಿಸಿದನು.

ಸೌಂದರ್ಯಶಾಸ್ತ್ರದ ಇತಿಹಾಸ

ಬದಲಾಯಿಸಿ
 
ಅಥೆನ್ಸ್‌ನ ನ್ಯಾಶನಲ್ ಆರ್ಕಿಯೊಲಾಗಿಕಲ್ ಮ್ಯೂಸಿಯಮ್‌‍ನಲ್ಲಿರುವ ಪೊಸೈಡನ್ ಅಥವಾ ಜೀನಸ್‌ನದೆನ್ನಲಾಗುವ ಕಂಚಿನ ಶಿಲ್ಪ.

ಪ್ರಾಚೀನ ಸೌಂದರ್ಯಶಾಸ್ತ್ರ

ಬದಲಾಯಿಸಿ

ನಾವು ಇತಿಹಾಸಕ್ಕೂ-ಮುಂಚಿನ ಕಲೆಗಳ ಉದಾಹರಣೆಗಳನ್ನು ಹೊಂದಿದ್ದೇವೆ, ಆದರೆ ಅವುಗಳು ಬಹಳ ವಿರಳವಾಗಿವೆ, ಮತ್ತು ಅವುಗಳ ಉತ್ಪಾದನೆ ಮತ್ತು ಬಳಕೆಗಳ ವಿಷಯಗಳು ಅಷ್ಟು ಸ್ಪುಟವಾಗಿಲ್ಲ, ಆದ್ದರಿಂದ ನಾವು ಅವುಗಳ ಉತ್ಪಾದನೆ ಮತ್ತು ಅರ್ಥವಿವರಣೆಯನ್ನು ನಿರ್ದೇಶಿಸಿದ ಸೌಂದರ್ಯಶಾಸ್ತ್ರದ ಸಿದ್ಧಾಂತಗಳ ಬಗ್ಗೆ ಅದಕ್ಕಿಂತ ಹೆಚ್ಚಾಗಿ ಊಹಿಸಬಹುದಾಗಿದೆ.

ಪ್ರಾಚೀನ ಕಲೆ ಬೃಹತ್ ಪ್ರಮಾಣದಲ್ಲಿ, ಆದರೆ ಪೂರ್ತಿಯಾಗಲ್ಲದೇ, ಏಳು ಪ್ರಮುಖ ಪ್ರಾಚೀನ ನಾಗರೀಕತೆಗಳ ಮೇಲೆ ಅವಲಂಬಿತವಾಗಿದೆ: ಈಜಿಪ್ಟ್, ಮೆಸಪೊಟಮಿಯಾ, ಗ್ರೀಸ್, ರೋಮ್, ಪರ್ಷಿಯಾ, ಭಾರತ, ಮತ್ತು ಚೀನಾ. ಮುಂಚಿನ ಪ್ರಾಚೀನ ನಾಗರೀಕತೆಗಳ ಈ ಪ್ರತಿಯೊಂದು ಕೇಂದ್ರಗಳು ಕಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಮತ್ತು ಗುಣಲಕ್ಷಣಗಳುಳ್ಳ ಶೈಲಿಯನ್ನು ಬೆಳಸಿದವು. ಪಶ್ಚಿಮ ಭಾಗದಲ್ಲಿ ಸೌಂದರ್ಯಶಾಸ್ತ್ರದ ಬೆಳವಣಿಗೆಯ ಮೇಲೆ ಗ್ರೀಸ್ ಹೆಚ್ಚಿನ ಪ್ರಭಾವವನ್ನು ಬೀರಿದೆ. ಗ್ರೀಕ್ ಕಲೆಯ ಈ ಅವಧಿಯು ಮಾನವ ದೈಹಿಕ ವಿಧದ ಆದರಿಸುವಿಕೆ ಮತ್ತು ಸ್ನಾಯು ವ್ಯೂಹ, ಸಮಚಿತ್ತತೆ, ಸೌಂದರ್ಯ ಮತ್ತು ಸ್ವಯಂಚಾಲಿತವಾದ ನಿರ್ದಿಷ್ಟವಾದ ಪರಿಮಾಣಗಳಂತಹ ಸಂಬಂಧಿತ ಕೌಶಲ್ಯಗಳ ಬೆಳವಣಿಗೆಯನ್ನು ವೀಕ್ಷಿಸಿತು. ಅದಕ್ಕೂ ಹೆಚ್ಚಾಗಿ, ಹಲವಾರು ಪಾಶ್ಚಾತ್ಯ ಮತ್ತು ಪೌರಾತ್ಯ ಸಂಸ್ಕೃತಿಗಳಲ್ಲಿ ಅದೇ ರೀತಿಯಾದ, ದೇಹ, ಕೂದಲುಗಳಂತಹ ಗುಣಲಕ್ಷಣಗಳು ದೈಹಿಕ ಸೌಂದರ್ಯವನ್ನು ವರ್ಣಿಸುವ ಕಲೆಯಲ್ಲಿ ಬಹಳ ವಿರಳವಾಗಿ ಚಿತ್ರಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು] ಈ ಗ್ರೀಕ್-ಪಾಶ್ಚಾತ್ಯ ಸೌಂದರ್ಯಶಾಸ್ತ್ರದ ಶೈಲಿಯ ಜೊತೆ ಹೆಚ್ಚು ವ್ಯತಿರಿಕ್ತವಾಗಿರುವುದು ಅಸಂಬದ್ಧವಾದ ಚಿತ್ರಶೈಲಿಯಾಗಿದೆ.[೨೩]

ಗ್ರೀಕ್ ತತ್ವಶಾಸ್ತ್ರಜ್ಞರು ಮೊದಲಿಗೆ ಸೌಂದರ್ಯಶಾಸ್ತ್ರೀಯವಾಗಿ ನಿವೇದಿಸುವ ವಸ್ತುಗಳು ಒಳಗೆ ಮತ್ತು ತಮ್ಮಷ್ಟಕ್ಕೇ ತಾವೇ ಸುಂದರವಾಗಿದ್ದವು ಎಂದು ಭಾವಿಸಿದರು. ಸುಂದರವಾದ ವಸ್ತುಗಳು ತಮ್ಮ ಭಾಗಗಳಲ್ಲಿ ಪ್ರಮಾಣ, ಸಾಮರಸ್ಯ, ಮತ್ತು ಏಕತೆಯನ್ನು ಒಳಗೊಂಡಿವೆ ಎಂದು ಪ್ಲೆಟೋ ಭಾವಿಸಿದನು. ಅದೇ ರೀತಿಯಾಗಿ, ತತ್ವಮೀಮಾಂಸೆ ಯಲ್ಲಿ ಅರಿಸ್ಟಾಟಲ್‌ನು ಸೌಂದರ್ಯದ ಸಾರ್ವತ್ರಿಕ ಘಟಕಗಳು ಕ್ರಮ, ಸಮರೂಪತೆ, ಮತ್ತು ನಿರ್ದಿಷ್ಟತೆಯನ್ನು ಹೊಂದಿವೆ ಎಂದು ಕಂಡುಹಿಡಿದನು.

ಇಸ್ಲಾಮಿನ ಸೌಂದರ್ಯಶಾಸ್ತ್ರ

ಬದಲಾಯಿಸಿ

ನಿರ್ದಿಷ್ಟವಾಗಿ ಹೇಳುವುದಾದರೆ ಇಸ್ಲಾಮಿಕ್ ಕಲೆಯು ಕೇವಲ ಧರ್ಮಕ್ಕೆ ಸಂಬಂಧಿಸಿದ ಕಲೆ ಮಾತ್ರವೇ ಆಗಿದೆ. ಇಸ್ಲಾಮಿಕ್ ಎಂಬ ಶಬ್ದವು ಕೇವಲ ಧರ್ಮಕ್ಕೆ ಮಾತ್ರವೇ ಉಲ್ಲೇಖಿಸಲ್ಪಡುವುದಿಲ್ಲ, ಆದರೆ ಇಸ್ಲಾಮಿನ ಸಂಸ್ಕೃತಿಯಲ್ಲಿ ಅಥವಾ ಒಂದು ಇಸ್ಲಾಮಿಗೆ ಸಂಬಂಧಿಸಿದ ವಿಷಯದಲ್ಲಿ ರಚಿಸಲ್ಪಟ್ಟ ಒಂದು ಕಲೆಗೆ ಉಲ್ಲೇಖಿಸಲ್ಪಡುತ್ತದೆ. ಎಲ್ಲಾ ಮುಸ್ಲಿಮರು ಕಲೆಯನ್ನು ಧಾರ್ಮಿಕ ಅವಲೋಕನದಲ್ಲಿ ಬಳಸುವುದಕ್ಕೆ ಸಹಮತಿಯನ್ನು ಹೊಂದಿದ್ದಾರೆ ಎಂದು ಊಹಿಸುವುದೂ ಕೂಡ ಒಂದು ತಪ್ಪು ತಿಳಿವಳಿಕೆಯಾಗಿದೆ, ಸಮಾಜದಲ್ಲಿ ಕಲೆಯ ಸರಿಯಾದ ಸ್ಥಾನ, ಅಥವಾ ಜಾತ್ಯತೀತ ಕಲೆ ಮತ್ತು ಧಾರ್ಮಿಕ ಸಂವೇದನೆಗಳಿಗೆ ಅನುಗುಣವಾಗಿ ಜಾತ್ಯತೀತ ಜಗತ್ತಿನಲ್ಲಿ ಇರಿಸಲ್ಪಟ್ಟ ಬೇಡಿಕೆಗಳ ನಡುವಣ ಸಂಬಂಧಗಳಿಗೆ ಎಲ್ಲಾ ಮುಸ್ಲಿಮರ ಸಹಮತ ಇರುವುದಿಲ್ಲ. ಇಸ್ಲಾಮಿನ ಕಲೆಯು ಪುನರಾವರ್ತಿತವಾಗಿ ಜಾತ್ಯತೀತ ಅಂಶಗಳನ್ನು ಅಳವಡಿಸಿಕೊಳ್ಳುತ್ತದೆ ಮತ್ತು ನಿಷಿದ್ಧವಲ್ಲದಿದ್ದರೆ, ಈ ಅಂಶಗಳು ಕೆಲವು ಇಸ್ಲಾಮಿನ ದೇವತಾಶಾಸ್ತ್ರಜ್ಞರ ಮೂಲಕ ಪ್ರತಿಭಟಿಸಲ್ಪಡುತ್ತವೆ.[೨೪]

ಇಸ್ಲಾಮ್‌ನ ಪ್ರಕಾರ, ಕಲೆಯ ಮಾನವ ಕಾರ್ಯಗಳು ದೇವರ ಕಾರ್ಯಗಳಿಗೆ ಹೋಲಿಸಿ ನೋಡಿದಾಗ ಆನುವಂಶಿಕವಾಗಿ ನಾಶಗೊಳ್ಳಲ್ಪಟ್ಟಿವೆ; ಆದ್ದರಿಂದ, ಯಾವುದೇ ಪ್ರಾಣಿ ಅಥವಾ ಮನುಷ್ಯನನ್ನು ಒಂದು ವಾಸ್ತವವಾದ ವಿಧದಲ್ಲಿ ವರ್ಣಿಸುವ ಪ್ರಯತ್ನವು ದೇವರಿಗೆ ಮಾಡುವ ಅಪಮಾನಕರ ವರ್ತನೆ ಎಂದು ಹಲವಾರು ಜನರು ನಂಬಿದ್ದಾರೆ. ಈ ಪೃವೃತ್ತಿಯು ಕಲೆಯನ್ನು ಅರಬ್, ಮೊಸಾಯಿಕ್, ಇಸ್ಲಾಮ್‌ನ ಸುಂದರ ಲಿಪಿಗಾರಿಕೆ, ಮತ್ತು ಇಸ್ಲಾಮ್‌ನ ವಾಸ್ತುಶಿಲ್ಪಶಾಸ್ತ್ರದಂತಹ ವಿಭಾಗಗಳಲ್ಲಿ ಕಲೆಯ ವಿಧಗಳ ಕಲಾತ್ಮಕ ಸಂಭವನೀಯತೆಯನ್ನು ಕಡಿಮೆಗೊಳಿಸುವ ಪರಿಣಾಮವನ್ನು ಹೊಂದಿದೆ, ಅದೇ ರೀತಿಯಾಗಿ ಹೆಚ್ಚು ಸಾಮಾನ್ಯವಾಗಿ ಯಾವುದೇ ಪ್ರತ್ಯೇಕಿಸುವ ವಿಧಗಳು ಪ್ರಾತಿನಿಧಿಕ-ಅಲ್ಲದ ಕಲೆಯ ಸ್ಥಾನಮಾನವನ್ನು ಪಡೆದುಕೊಂಡವು.

ಸೀಮಿತ ಸಂಭವನೀಯತೆಗಳು ಕಲಾತ್ಮಕ ಅಭಿವ್ಯಕ್ತಿಗೆ ಒಂದು ಸಾಧನವಾಗಿ ಕಲಾಕಾರರಿಂದ ಪರೀಕ್ಷಿಸಲ್ಪಟ್ಟವು, ಮತ್ತು ಜ್ಯಾಮಿತೀಯ ಮಾದರಿಗಳು, ಹೂಗಳ ಮಾದರಿಗಳು, ಮತ್ತು ಅರಬ್-ಅಲಂಕಾರ ಮದರಿಗಳಂತಹ ಪ್ರಾತಿನಿಧಿಕ-ಅಲ್ಲದ ವಿಧಗಳ ಮೂಲಕ ಕಲೆಯ ಅಲಂಕಾರಿಕ ಕಾರ್ಯ, ಅಥವಾ ಇದರ ಧಾರ್ಮಿಕ ಕಾರ್ಯಗಳು ಒಂದು ಸಕಾರಾತ್ಮಕ ಶೈಲಿ ಮತು ಸಂಪ್ರದಾಯವಾಗಲು ಹೆಚ್ಚಿನ ಪ್ರಯತ್ನವನ್ನು ನಡೆಸಲ್ಪಟ್ಟವು.

ಮಾನವನ ಅಥವಾ ಪ್ರಾಣಿಗಳ ವರ್ಣನೆಯು ಇಸ್ಲಾಮಿನ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿ ಪೂರ್ಣವಾಗಿ ನಿಷೆಧಿಸಲ್ಪಟ್ಟಿದೆ ಏಕೆಂದರೆ ಇದು ಶಿಲ್ಪಕಲೆಗಳ ಚೂರಾಗುವಿಕೆಗೆ ಕಾರಣವಾಗುತ್ತದೆ ಮತ್ತು ನಂತರ ಇದು ಅವುಗಳನ್ನು ಮೂರ್ತಿಯಾಗಿ ಅಥವಾ "ಪ್ರತಿಮೆ"ಯಾಗಿ ಪೂಜಿಸುವುದಕ್ಕೆ ಕೊಂಡೊಯ್ಯುತ್ತದೆ. ಮಾನವ ವರ್ಣನೆಗಳು ಧಾರ್ಮಿಕ ಅಧಿಕಾರಿಗಳ ಮೂಲಕ ಸ್ವೀಕರಣೆಯ ಬದಲಾಗುತ್ತಿರುವ ಮಟ್ಟದ ಜೊತೆಗೆ ಮುಂಚಿನ ಇಸ್ಲಾಮ್‌ನ ಸಂಸ್ಕೃತಿಗಳಲ್ಲಿ ಕಂಡುಬರುತ್ತವೆ. ಪೂಜಿಸುವಿಕೆಯ ಉದ್ದೇಶಕ್ಕಾಗಿ ಮಾನವ ಪ್ರಾತಿನಿಧಿಕತೆಯು ಶರಿಯಾ ಕಾನೂನಿನಲ್ಲಿ ಏಕರೀತಿಯಾಗಿ ವಿಗ್ರಹಾರಾಧನೆ ಎಂದು ಪರಿಗಣಿಸುತ್ತ ಅದನ್ನು ನಿಷೇಧಿಸಲಾಗಿದೆ. ಐತಿಹಾಸಿಕ ಇಸ್ಲಾಮ್ ಕಲೆಯಲ್ಲಿ ಇಸ್ಲಾಮ್‌ನ ಪ್ರಧಾನ ಸಂತ ಮೊಹಮ್ಮದ್‌ರ ವರ್ಣನೆಗಳಿವೆ.[೨೫][೨೬]

ಸುಂದರಲಿಪಿಯ ಕಲೆಗಳು ಕುರಾನ್‌ನ ಅಧ್ಯಯನಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕಾಗಿನ ಒಂದು ಪ್ರಯತ್ನವಾಗಿ ಬೆಳೆಯಲ್ಪಟ್ಟವು. ವಿಷಯದ ಪ್ರತಿ ಶಬ್ದವನ್ನು ಸಹನೆಯಿಂದ ಲಿಪ್ಯಂತರ (ನಕಲು) ಮಾಡುವ ಮೂಲಕ, ಬರಹಗಾರನು ಇದರ ಅರ್ಥವನ್ನು ಅವಲೋಕನ ಮಾಡುತ್ತಾನೆ. ಸಮಯವು ಕಳೆದಂತೆ, ಈ ಸುಂದರ ಲಿಪಿಯ ಕೆಲಸಗಳು ಕಲೆಯ ಕಾರ್ಯಗಳು ಎಂಬ ಪ್ರಶಂಸೆಯನ್ನು ಪಡೆದುಕೊಂಡವು, ಅವು ಬರಹಗಳ ಸುವರ್ಣಾಲಂಕರಣದಲ್ಲಿ ಮತ್ತು ಅವುಗಳನ್ನು ವಿನ್ಯಾಸಗೊಳಿಸುವುದರಲ್ಲಿ ಗಣನೀಯವಾಗಿ ಬೆಳೆಯಿತು. ಈ ಸುವರ್ಣಾಲಂಕರಣಗಳು ಕುರಾನ್ ಅನ್ನು ಹೊರತುಪಡಿಸಿದಂತೆ ಇತರ ಕಾರ್ಯಗಳಿಗೂ ಅನ್ವಯಿಸಲ್ಪಟ್ಟವು, ಮತ್ತು ಇದು ತನ್ನ ಒಳಗೆ ಮತ್ತು ತನ್ನಲ್ಲಿಯೇ ಒಂದು ಗೌರವಾನ್ವಿತ ಕಲೆಯ ವಿಧವಾಗಿ ಬೆಳೆಯಿತು.

ಭಾರತೀಯ ಸೌಂದರ್ಯಶಾಸ್ತ್ರ

ಬದಲಾಯಿಸಿ

ಭಾರತೀಯ ಕಲೆಯು ವೀಕ್ಷಕರಲ್ಲಿ ವಿಶಿಷ್ಟವಾದ ಆಧ್ಯಾತ್ಮಿಕ ಅಥವಾ ತತ್ವಶಾಸ್ತ್ರೀಯ ಸ್ಥಿತಿಗಳನ್ನು ಪ್ರಚೋದಿಸುವುದರ ಜೊತೆಗೆ, ಅಥವಾ ಅವರನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತ ಬೆಳೆಯಲ್ಪಟ್ಟಿತು ಕಪಿಲ ವಾತ್ಸ್ಯಾಯನನ ಪ್ರಕಾರ, "ಸಾಂಪ್ರದಾಯಿಕ ಭಾರತೀಯ ವಾಸ್ತುಶಿಲ್ಪ, ಮೂರ್ತಿ, ವರ್ಣಚಿತ್ರ, ಸಾಹಿತ್ಯ, ಕಾವ್ಯ , ಸಂಗೀತ, ಮತ್ತು ನೃತ್ಯಗಳು ತಮ್ಮ ಸ್ವಂತ ತತ್ವಗಳನ್ನು ಅವುಗಳ ಅನುಕ್ರಮವಾದ ಮಾಧ್ಯಮಗಳ ಮೂಲಕ ಕಟ್ಟುಪಾಡಿಗೊಳಪಡಿಸಿಕೊಳ್ಳುವುದರ ಮೂಲಕ ಬೆಳೆಯಲ್ಪಟ್ಟವು, ಆದರೆ ಅವುಗಳು ತಮ್ಮ ತಮ್ಮಲ್ಲಿ ಕೇವಲ ಭಾರತೀಯ ಧಾರ್ಮಿಕ-ತತ್ವಶಾಸ್ತ್ರೀಯ ವಿಚಾರಗಳ ನಂಬಿಕೆಗಳನ್ನು ಮಾತ್ರ ಪರಸ್ಪರ ವಿನಿಮಯ ಮಾಡಿಕೊಳ್ಳಲಿಲ್ಲ, ಆದರೆ ಸಂಕೇತ ಮತ್ತು ಆಧ್ಯಾತ್ಮಿಕ ಸ್ಥಿತಿಗಳು ವಿವರವಾಗಿ ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಸಂಬಂಧಗಳ ಮೂಲಕ ಕಾರ್ಯವಿಧಾನಗಳನ್ನೂ ಪರಸ್ಪರ ವಿನಿಮಯ ಮಾಡಿಕೊಂಡವು."

ಭಾರತೀಯ ನಾಟಕ ಮತ್ತು ಸಾಹಿತ್ಯಕ್ಕೆ ನಿರ್ದಿಷ್ಟವಾಗಿ ಸಂಬಂಧವಿರುವ ಶಬ್ದ ರಸ ಇದು ಸಾಮಾನ್ಯವಾಗಿ ಬರಹಗಾರನಿಂದ ಕಾರ್ಯದೊಳಗೆ ವರ್ಣಿಸಲ್ಪಟ್ಟ ಭಾವನಾತ್ಮಕ ವಿಚಾರಗಳಿಗೆ ಉಲ್ಲೇಖಿಸಲ್ಪಡುತ್ತದೆ ಮತ್ತು ಇದು ಒಂದು ’ಸಂವೇದನಾಶೀಲ ವೀಕ್ಷಕ’ ಅಥವಾ ಸಹೃದಯ ನ ಮೂಲಕ ಅದರ ಮಾಧುರ್ಯವನ್ನು ಹೆಚ್ಚಿಸಿಕೊಳ್ಳುತ್ತದೆ. ಕಾಳಿದಾಸನಂತಹ ಕವಿಗಳು ರಸ ಶಬ್ದಕ್ಕೆ ಹೆಚ್ಚಿನ ಗಮನವನ್ನು ನೀಡುವಂತವರಾಗಿದ್ದರು, ಅದು ಪೂರ್ತಿಯಾಗಿ ಬೆಳವಣಿಗೆ ಹೊಂದಿದ ಒಂದು ಸೌಂದರ್ಯಶಾಸ್ತ್ರದ ವ್ಯವಸ್ಥೆಯಾಗಿ ವಿಕಸನಗೊಂಡಿತು. ಸಮಕಾಲೀನ ಭಾರತದಲ್ಲಿಯೂ ಕೂಡ "ಸುವಾಸನೆ" ಎಂಬುದನ್ನು ಸೂಚಿಸುವ ರಸ ಎಂಬ ಶಬ್ದವು ಸಿನೆಮಾಗಳಲ್ಲಿ ಸೌಂದರ್ಯಶಾಸ್ತ್ರದ ಅನುಭವಗಳನ್ನು ವರ್ಣಿಸುವುದಕ್ಕಾಗಿ ಆಡುಮಾತಿನ ಶೈಲಿಯಲ್ಲಿ ಬಳಸಲ್ಪಟ್ಟಿತು; "ಮಸಾಲಾ ಮಿಕ್ಸ್" ಇದು ಒಂದು ಸಮತೋಲಿತಗೊಂಡ ಭಾವನಾತ್ಮಕ ಔತಣವನ್ನು ನೀಡುವ ಜನಪ್ರಿಯ ಹಿಂದಿ ಸಿನೆಮಾಗಳನ್ನು ವರ್ಣಿಸುತ್ತದೆ, ಇದು ವೀಕ್ಷಕನಿಂದ ರಸ ಎಂಬುದಾಗಿ ಆಸ್ವಾದಿಸಲ್ಪಟ್ಟಿತು.

ರಸದ ಸಿದ್ಧಾಂತದ ವಿಕಸನವು ಸಂಸ್ಕೃತ ಬರಹ ನಾಟ್ಯಶಾಸ್ತ್ರದ ಜೊತೆಗೆ ತನ್ನ ಉಗಮವನ್ನು ಪಡೆಯಿತು, (ನಾಟ್ಯ ಅಂದರೆ "ನಾಟಕ" ಮತ್ತು ಶಾಸ್ತ್ರ ಅಂದರೆ "ಅದರ ವಿಜ್ಞಾನ), ಇದು ಭರತ ಮುನಿಯ ಒಂದು ರಚನೆಯಾಗಿದೆ, ಅಲ್ಲಿ ದೇವತೆಗಳು ಇದನ್ನು "ಐದನೆಯ ವೇದ" ಎಂಬುದಾಗಿ ಘೋಷಿಸಿದರು ಏಕೆಂದರೆ ಧಾರ್ಮಿಕ ಸೂಚನೆಯ ಒಂದು ಅತ್ಯುತ್ತಮ ವಿಧದಂತೆ ವಯಸ್ಸನ್ನು ಕಡಿಮೆಗೊಳಿಸುವುದಕ್ಕೆ ಸಹಾಯಕವಾಗಿದೆ. ನಾಟ್ಯಶಾಸ್ತ್ರದ ರಚನೆಯ ದಿನಾಂಕವು ಹಲವಾರು ವಿದ್ವಾಂಸರುಗಳ ಪ್ರಕಾರ ಬೇರೆ ಬೇರೆಯಾಗಿದೆ, ಇದು ಪ್ಲೆಟೋ ಮತ್ತು ಅರಿಸ್ಟಾಟಲ್‌ನ ಕಾಲಮಾನದಿಂದ ಕ್ರಿ.ಶ. ಏಳನೆಯ ಶತಮಾನದವರೆಗೂ ತನ್ನ ವ್ಯಾಪ್ತಿಯನ್ನು ಹೊಂದಿದೆ. ನಾಟ್ಯಶಾಸ್ತ್ರವು ರಸದ ಸೌಂದರ್ಯಾತ್ಮಕ ಸಂಗತಿಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ಅನುಕ್ರಮವಾಗಿ ಪರಿಚ್ಛೇದ ಆರು ಮತ್ತು ಏಳರಲ್ಲಿ ಅವುಗಳಿಗೆ ಸಂಬಂಧಿಸಿದ ಭಾವಗಳನ್ನೂ ಪ್ರಸ್ತುತಪಡಿಸುತ್ತದೆ, ಅದು ಪೂರ್ಣ ಕೆಲಸದ ಒಂದು ಅವಲಂಬಿತವಲ್ಲದ ಕಾರ್ಯವಾಗಿ ಕಂಡುಬಂದಿತು. ಎಂಟು ರಸಗಳು ಮತ್ತು ಅವುಗಳಿಗೆ ಸಂಬಂಧಿತ ಭಾವಗಳು ಹೆಸರಿಸಲ್ಪಟ್ಟಿವೆ ಮತ್ತು ಅವುಗಳ ಆನಂದಿಸುವಿಕೆಯು ಔತಣವನ್ನು ಸವಿಯುದಕ್ಕೆ ಸಮ ಎಂಬಂತೆ ಸಂಬಂಧ ಕಲ್ಪಿಸಲಾಗಿದೆ: ರಸವು ಅವಶ್ಯಕ ಅಂಶಗಳ ಸರಿಯಾದ ತಯಾರಿಕೆ ಮತ್ತು ಆ ಅಂಶಗಳ ಸರಿಯಾದ ಗುಣಗಳಿಂದ ಉಂಟಾಗುವ ಆಸ್ವಾದನೆಗಳ ಆನಂದದ ಅನುಭವಿಸುವಿಕೆಯಾಗಿದೆ. ಒಂದು ಸೈದ್ಧಾಂತಿಕ ಗ್ರಹಿಕೆಯ ಪ್ರಕಾರ, ವಾಸ್ತವಿಕವಾಗಿ ರಸ ಅಂದರೆ, ಸಂಭಾಷಣೆಗೆ ನಿಲುಕುವುದಲ್ಲ ಮತ್ತು ನಾಟ್ಯಶಾಸ್ತ್ರದ ಅರ್ಥಗರ್ಭಿತವಾದ ಶಬ್ದಗಳಿಂದ ನೀಡಲ್ಪಟ್ಟಿರುವುದಲ್ಲ, ಇದು ಮೂಲ ಬರಹಗಾರರ ನಿರ್ದಿಷ್ಟವಾದ ಅರ್ಥಗಳನ್ನು ತಿಳಿಯುವುದಾಗಿದೆ.

ರಸದ ಸಿದ್ಧಾಂತವು ಕಾಶ್ಮೀರದ ಸೌಂದರ್ಶಾಸ್ತ್ರಜ್ಞ ಅಂದಾಂದವರ್ಧನನ ಕಾವ್ಯದ ಮೇಲ್ಪಂಕ್ತಿ ಧ್ವನ್ಯಲೋಕದ ಜೊತೆಗೆ ಗಣನಿಯ ಪ್ರಮಾಣದಲ್ಲಿ ಅಭಿವೃದ್ಧಿಗೊಂಡಿತು, ಧ್ವನ್ಯಲೋಕವು ಒಂಭತ್ತನೆಯ ರಸವಾದ ಶಾಂತಿ ರಸವನ್ನು ಶಾಂತಿಯ ಧಾರ್ಮಿಕವಾದ ಭಾವನೆ ಎಂದು ನಿರ್ದಿಷ್ಟವಾಗಿ ವರ್ಣಿಸುತ್ತದೆ (ಶಾಂತ ರಸ ) ಅದು ತನ್ನ ಭಾವದಿಂದ ಉತ್ಪತ್ತಿಯಾಗಲ್ಪಡುತ್ತದೆ, ಅಂದರೆ ಜಗತ್ತಿನ ಸಂತೋಷಗಳ ಮೇಲಿನ ಬೇಸರದಿಂದ ಉಂಟಾಗಲ್ಪಡುತ್ತದೆ. ಈ ಬರಹದ ಪ್ರಾಥಮಿಕ ಉದ್ದೇಶವೆಂದರೆ ಸಾಹಿತ್ಯಕ ವಿಷಯವಾದ ಧ್ವನಿ ಅಥವಾ ಕಾವ್ಯಾತ್ಮಕ ಸೂಚನೆಯನ್ನು ಸುಸಂಸ್ಕೃತಗೊಳಿಸುವುದಾಗಿದೆ, ರಸ-ಧ್ವನಿ ಗಳ ಅಸ್ತಿತ್ವಕ್ಕಾಗಿ ವಾದಿಸುವುದರ ಮೂಲಕ, ಪ್ರಾಥಮಿಕವಾಗಿ ಒಂದು ಶಬ್ದ, ವಾಕ್ಯ ಅಥವಾ ಪೂರ್ಣ ಕಾರ್ಯಗಳನ್ನು ಒಳಗೊಂಡ ಸಂಸ್ಕೃತದ ವಿಧಗಳಲ್ಲಿ ಒಂದು ವಾಸ್ತವವಾದ-ಜಗತ್ತಿನ ಭಾವನಾತ್ಮಕ ಸ್ಥಿತಿ ಅಥವಾ ಭಾವವನ್ನು "ಸೂಚಿಸುವ" ಮೂಲಕ ಸಂಸ್ಕರಿಸಲ್ಪಡುತ್ತದೆ, ಆದರೆ ಸೌಂದರ್ಯಶಾಸ್ತ್ರದ ಅಂತರಕ್ಕೆ ಆಭಾರಿಯಾಗಿರುವುದಾಗಿದೆ ಏಕೆಂದರೆ ಸಂವೇದನಾಶೀಲ ವೀಕ್ಷಕನು ರಸವನ್ನು ಆಸ್ವಾದಿಸುತ್ತಾನೆ, ಅಂದರೆ ಅವನು ದುಖಃ, ಸಾಹಸ ಅಥವಾ ಪ್ರಣಯಗಳಂತಹ ಸೌಂದರ್ಯಾತ್ಮಕ ಭಾವನೆಗಳನ್ನು ಆಸ್ವಾದಿಸುತ್ತಾನೆ.

೯ನೆಯ- ೧೦ ಯ ಶತಮಾನದ "ಕಾಶ್ಮೀರದ ಅದ್ವಿತೀಯ ಶೈವಿಸಮ್" (ಅಥವಾ "ಕಾಶ್ಮೀರ್ ಶೈವಿಸಮ್) ಎಂದು ತಿಳಿಯಲ್ಪಟ್ಟ ಧಾರ್ಮಿಕ ವ್ಯವಸ್ಥೆ ಮತ್ತು ಸೌಂದರ್ಯಶಾಸ್ತ್ರಜ್ಞ ಅಭಿನವಗುಪ್ತ ಇವನು ಧ್ವನ್ಯಲೋಕ, ಧ್ವನ್ಯಲೋಕ-ಲೋಕಾನಾ (ಮ್ಯಾಸನ್ ಮತ್ತು ಪಟವರ್ಧನ ಎಂಬ ಇಂಗಾಲ್ಸ್‌ರಿಂದ ಅನುವಾದಿಸಲ್ಪಟ್ಟಿತು, ೧೯೯೨) ಮತ್ತು ಅಭಿನವಭಾರತಿಗಳ ಮೇಲಿನ ತನ್ನ ಪ್ರತ್ಯೇಕವಾದ ವಿಮರ್ಶೆಗಳಲ್ಲಿ ರಸ ಸಿದ್ಧಾಂತವನ್ನು ಇದರ ತುತ್ತತುದಿಯಾಗಿ ತೆಗೆದುಕೊಂದು ಬಂದನು, ನಾಟ್ಯಶಾಸ್ತ್ರದ ಮೇಲಿನ ಅವನ ವಿಮರ್ಶೆಗಳ ಕೆಲವು ಭಾಗಗಳು ಗ್ನೋಲಿ ಮತ್ತು ಮ್ಯಾಸನ್ ಮತ್ತು ಪಟವರ್ಧನರಿಂದ ಅನುವಾದಿಸಲ್ಪಟ್ಟಿತು. ಅಭಿನವಗುಪ್ತನು ಮೊಟ್ಟ ಮೊದಲ ಬಾರಿಗೆ ರಸದ ತಾಂತ್ರಿಕ ವ್ಯಾಖ್ಯಾನವನ್ನು ನೀಡಿದನು, ಅದು ಸ್ವಯಂ ಅಥವ ಆತ್ಮನ್‌ದ ಸಾರ್ವಕಾಲಿಕ ಪರಮಾನಂದವಾಗಿದೆ, ಅದು ಧರ್ಮದ ಭಾವನಾತ್ಮಕ ಸ್ವರದಿಂದ ಹೆಚ್ಚಿನ ಪ್ರಾಮುಖ್ಯವನ್ನು ನೀಡಲ್ಪಟ್ಟಿತು. ಶಾಂತ-ರಸದ ಕ್ರಿಯೆಗಳು ರಸಗಳ ಗುಂಪುಗಳ ಸದಸ್ಯ ರಸಗಳಿಗೆ ಸರಿಸಮಾನವಾಗಿದೆ ಆದರೆ ಅದೇ ಸಮಯದಲ್ಲಿ ಇದು ಸೌಂದರ್ಯಾತ್ಮಕ ಪರಮಾನಂದದ ಹೆಚ್ಚು ಸರಳವಾದ ಒಂದು ವಿಧವಾಗಿ ಉಳಿದವುಗಳಿಗಿಂತ ಭಿನ್ನವಾಗಿದೆ. ಅಭಿನವಗುಪ್ತನು ಇದನ್ನು ಒಂದು ರತ್ನಖಚಿತ ಕಂಠಾಭರಣದ ದಾರದಂತೆ ಎಂದು ವರ್ಣಿಸುತ್ತಾನೆ; ಆದರೆ ಇದು ಹೆಚ್ಚಿನ ಜನರು ಸಮ್ಮತಿಸುವಂತಹ ವರ್ಣನೆಯಾಗಿರಲಿಲ್ಲ. ಇದು ಕಂಠಾಭರಣಕ್ಕೆ ಒಂದು ರೂಪವನ್ನು ನೀಡುವ ದಾರವಾಗಿದೆ ಮತ್ತು ಇದು ಇತರ ಎಂಟು ರಸಗಳ ಹಾರಗಳನ್ನು ಅಸ್ವಾದಿಸುವಂತೆ ಮಾಡುವುದಕ್ಕೆ ಸಹಾಯಕವಾಗಿದೆ. ರಸಗಳನ್ನು ಆಸ್ವಾದಿಸುವುದು ಮತ್ತು ಅದರಲ್ಲೂ ಮುಖ್ಯವಾಗಿ ಶಾಂತ-ರಸವನ್ನು ಅಸ್ವಾದಿಸುವುದು ತುಂಬಾ-ಉತ್ತಮ ಎಂದು ಸೂಚಿಸಲಾಗಿದೆ ಆದರೆ ಅದು ಯಾವತ್ತಿಗೂ ಕೂಡ ಯೋಗಿಗಳಿಂದ ಅನುಭವಿಸಲ್ಪಟ್ಟ ಸ್ವಯಂ-ಸಾಕ್ಷಾತ್ಕಾರದ ಪರಮಾನಂದಕ್ಕೆ ಸರಿಸಮವಾಗುವುದಿಲ್ಲ.

ಚೀನಾದ ಸೌಂದರ್ಯಶಾಸ್ತ್ರ

ಬದಲಾಯಿಸಿ

ಚೀನಾದ ಕಲೆಯು ವಿಭಿನ್ನವಾದ ಶೈಲಿಗಳ ಮತ್ತು ಮಹತ್ವಗಳ ದೀರ್ಘ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ ತತ್ವಶಾಸ್ತ್ರಜ್ಞರು ಆ ಸಮಯಕ್ಕಾಗಲೇ ಸೌಂದರ್ಯಶಾಸ್ತ್ರದ ಬಗ್ಗೆ ವಾದಿಸಲು ಪ್ರಾರಂಭಿಸಿದ್ದರು. ಕನ್‌ಫ್ಯೂಶಿಯಸ್‌ನು ಮಾನವನ ಸ್ವಭಾವವನ್ನು ವಿಶಾಲವಾಗಿಸುವುದರಲ್ಲಿ ಮತ್ತು "ಲಿ" ಯನ್ನು (ಶಿಷ್ಟಾಚಾರ, ಧಾರ್ಮಿಕ ವಿಧಿಗಳು) ಸ್ಥಾಪಿಸುವಲ್ಲಿ ಕಲೆ ಮತ್ತು ಮಾನವತೆಗಳ ಪಾತ್ರವನ್ನು ವರ್ಣಿಸಿದನು, ಇದು ಮಾನವತೆಗೆ ಯಾವುದು ಅತಿ ಮುಖ್ಯ ಎಂದು ತಿಳಿದುಕೊಂಡು ನಮ್ಮನ್ನು ಅದಕ್ಕೆ ವಾಪಸು ತರುವುದಕ್ಕೆ ಸಹಾಯ ಮಾಡುತ್ತದೆ. ಅವನ ವಿರೋಧಿ ಮೊಜಿ, ಆದಾಗ್ಯೂ, ಸಂಗೀತ ಮತ್ತು ಲಲಿತ ಕಲೆಗಳು ಸಂಪ್ರದಾಯಬದ್ಧವಾಗಿದ್ದವು ಮತ್ತು ಅನುಪಯುಕ್ತವಾಗಿದ್ದವು, ಅದು ಕೇವಲ ಶ್ರೀಮಂತರಿಗೆ ಮಾತ್ರ ಉಪಯೋಗವನ್ನುಂಟುಮಾಡುತ್ತದೆ, ಆದರೆ ಸಾಮಾನ್ಯ ಜನರಿಗೆ ಯಾವ ಉಪಯೋಗವನ್ನೂ ಉಂಟುಮಾಡುವುದಿಲ್ಲ ಎಂದು ವಾದಿಸಿದನು.

ಕ್ರಿ.ಶ. ೪ ನೆಯ ಶತಮಾನದ ವೇಳೆಗೆ, ಕಲಾಕಾರರು ಕಲೆಯ ನಿರ್ದಿಷ್ಟವಾದ ಗುರಿಗಳ ಬಗ್ಗೆ ಬರೆಯುವುದರಲ್ಲಿ ಚರ್ಚೆಯನ್ನು ಪ್ರಾರಂಭಿಸಿದರು. ಗು ಕೈಜಿಯು ವರ್ಣಚಿತ್ರಕಲೆಯ ಈ ಸಿದ್ಧಾಂತದ ಮೇಲಿನ ಅಸ್ತಿತ್ವದ ೩ ಪುಸ್ತಕಗಳನ್ನು ಹೊಂದಿದ್ದನು, ಉದಾಹರಣೆಗೆ, ಮತ್ತು ಅದರ ನಂತರ ಕಲೆಯನ್ನು ನಿರ್ಮಿಸಿದ ಮತ್ತು ಕಲೆಯ ನಿರ್ಮಾಣದ ಬಗ್ಗೆ ಬರೆದ ಹಲವಾರು ಕಲಾಕಾರರನ್ನು/ವಿದ್ವಾಂಸರನ್ನು ಕಾಣುವುದು ಅಸಾಮಾನ್ಯದ ಸಂಗತಿಯೇನಲ್ಲ. ಕಲೆಯ ಮೇಲಿನ ಧಾರ್ಮಿಕ ಮತ್ತು ತತ್ವಶಾಸ್ತ್ರೀಯ ಪ್ರಭಾವವು ಸಾಮಾನ್ಯವಾಗಿತ್ತು (ಮತ್ತು ವಿರುದ್ಧವಾಗಿತ್ತು) ಆದರೆ ಯಾವತ್ತಿಗೂ ಕೂಡ ಸಾರ್ವತ್ರಿಕವಾಗಿರಲಿಲ್ಲ; ಬೃಹತ್ ಪ್ರಮಾಣದಲ್ಲಿ ತತ್ವಶಾಸ್ತ್ರವನ್ನು ಮತ್ತು ಧರ್ಮವನ್ನು ಸರಿಸುಮಾರು ಚೀನಾದ ಎಲ್ಲಾ ಕಾಲದ ಅವಧಿಯಲ್ಲಿ ಕಡೆಗಣಿಸುವ ಕಲೆಯನ್ನು ಕಂಡುಹಿಡಿಯುವುದು ಬಹಳ ಸುಲಭವಾಗಿದೆ.

ಆಫ್ರಿಕಾದ ಸೌಂದರ್ಯಶಾಸ್ತ್ರ

ಬದಲಾಯಿಸಿ
 
ಗ್ರೇಟ್ ಮಾಸ್ಕ್ಯೂಸ್ ಸಿಗ್ನೇಚರ್ ಆಫ್ ಟ್ರಿಯೊ ಆಫ್ ಮಿನರೆಟ್ಸ್, ಜೆನೆಯ ಕೇಂದ್ರ ಮಾರುಕಟ್ಟೆಯ ಸುತ್ತಲಿನ ದೃಶ್ಯ. ಯುನೀಕ್ ಮಾಲಿಯನ್ ಎಸ್ಥೆಟಿಕ್

ಆಫ್ರಿಕಾದ ಕಲೆಯು ಹಲವಾರು ವಿಧಗಳಲ್ಲಿ ಮತ್ತು ಶೈಲಿಗಳಲ್ಲಿ ಅಸ್ತಿತ್ವದಲ್ಲಿತ್ತು, ಮತ್ತು ಆಫ್ರಿಕಾದ ಹೊರಭಾಗಗಳಿಂದ ತುಂಬಾ ಕಡಿಮೆ ಪ್ರಭಾವವನ್ನು ಹೊಂದಿತ್ತು. ಇದರ ಹಲವಾರು ವಿಧಗಳು ಸಾಂಪ್ರದಾಯಿಕ ವಿಧಗಳನ್ನು ಅನುಸರಿಸಿದವು ಮತ್ತು ಸೌಂದರ್ಯಾತ್ಮಕ ಸಂಪ್ರದಾಯಗಳು ಮೌಖಿಕವಾಗಿ ಹಾಗೆಯೇ ಲಿಖಿತವಾಗಿಯೂ ಕೆಳಗಿಳಿಸಲ್ಪಟ್ಟವು. ಶಿಲ್ಪಗಳು ಮತ್ತು ಕಲೆಯ ಕಾರ್ಯನಿರ್ವಹಣೆಗಳು ಬಹಳ ಪ್ರಮುಖವಾಗಿದ್ದವು, ಅಮೂರ್ತವಾಗಿದ್ದವು, ಮತ್ತು ನಿರ್ದಿಷ್ಟವಾಗಿ ಹೇಳುವುದಾದರೆ ಈ ಅಮೂರ್ತವಾದ ವಿಧಗಳು ಮೌಲ್ಯ ಮಾಪನ ಮಾಡಲ್ಪಟ್ಟವು ಮತ್ತು ಪಾಶ್ಚಾತ್ಯ ಸಂಪ್ರದಾಯದ ಪೂರ್ವಸೂಚನೆಯಿಮ್ದ ಪ್ರಭಾವವು ಪ್ರಾರಂಭವಾಗುವ ತುಂಬಾ ಮುಂಚೆಯೇ ಇವುಗಳು ಮೌಲ್ಯಮಾಪನ ಮಾಡಲ್ಪಟ್ಟವು. ನೊಕ್ ಸಂಸ್ಕೃತಿಯು ಇದರ ಪ್ರಮಾಣೀಕರಣವಾಗಿದೆ. ತಿಂಬಕ್ತುದ ಮಸೀದಿಯು ಅನನ್ಯವಾದ ಸೌಂದರ್ಯಶಾಸ್ತ್ರವನ್ನು ಅಭಿವೃದ್ಧಿಗೊಳಿಸಿದ ನಿರ್ದಿಷ್ಟವಾದ ಪ್ರದೇಶಗಳನ್ನು ತೋರಿಸುತ್ತದೆ.

ಪಾಶ್ಚಾತ್ಯ ಮಧ್ಯಯುಗದ ಸೌಂದರ್ಯಶಾಸ್ತ್ರ

ಬದಲಾಯಿಸಿ

ಮಧ್ಯಯುಗದ ಕಲೆಯನ್ನು ಉಳಿಸಿಕೊಂಡು ಹೋಗುವುದು ಹೆಚ್ಚಾಗಿ ಧಾರ್ಮಿಕತೆಯ ಮೇಲೆ ಅವಲಂಬಿತವಾಗಿದೆ, ಮತ್ತು ಇದು ವಿಶಿಷ್ಟವಾಗಿ ರಾಜ್ಯ, ಸಾಂಪ್ರದಾಯಿಕ ಅಥವಾ ರೋಮನ್ ಕ್ಯಾಥೊಲಿಕ್ ಚರ್ಚ್, ಪ್ರಬಲವಾದ ಕ್ರೈಸ್ತಧರ್ಮದ ವ್ಯಕ್ತಿಗಳು, ಅಥವಾ ಶ್ರೀಮಂತ ಜಾತ್ಯತೀತ ಮಾದರಿಗಳ ಮೂಲಕ ಸ್ಥಾಪಿಸಲ್ಪಟ್ಟಿತು. ಅನೇಕ ವೇಳೆ ವಿಭಾಗಗಳು ಒಂದು ಉದ್ದೇಶಿತ ಧರ್ಮಾಚರಣೆಗೆ ಸಂಬಂಧಿಸಿದ ಕಾರ್ಯಗಳನ್ನು ಹೊಂದಿರುತ್ತವೆ, ಉದಾಹರಣೆಗೆ ಚ್ಯಾಲಿಸ್‌ಗಳು ಅಥವಾ ಚರ್ಚ್‌ಗಳು.

ಮಧ್ಯಯುಗದ ಕಲೆಯ ವಸ್ತುಗಳು ಬಂಗಾರ ಮತ್ತು ಲಾಪಿಸ್‌ಗಳಂತಹ ವಿರಳವಾದ ಮತ್ತು ಮೌಲ್ಯಯುತವಾದ ಮೂಲವಸ್ತುಗಳಿಂದ ಮಾಡಲ್ಪಟ್ಟಿದ್ದವು, ಅವುಗಳ ವೆಚ್ಚವು ಅನೇಕ ವೇಳೆ ಅದನ್ನು ಮಾಡುವವನ ಕೂಲಿಗಿಂತ ಹೆಚ್ಚಿರುತ್ತಿತ್ತು.

ಕಲೆ ಮತ್ತು ಸೌಂದರ್ಯದ ತತ್ವಶಾಸ್ತ್ರವು ಸ್ಪಷ್ಟವಾದ ಮತಧರ್ಮಶಾಸ್ತ್ರದ ವಿಭಾಗದ ಜೊತೆ ಪ್ರಾಚೀನ ವಿಚಾರಗಳ ಮುಂದುವರಿಕೆಯಾಗಿದೆ. ಸಂತ ಬೊನಾವೆಂಚರ್‌ನ "ಕಲೆಯನ್ನು ಮತಧರ್ಮಶಾಸ್ತ್ರಕ್ಕೆ ಪರಾಮರ್ಶಿಸುವುದು" ಇದು ನಾಲ್ಕು "ಬೆಳಕುಗಳ" (ಜ್ಞಾನದ) ಮೂಲಕ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಉದ್ದೇಶಕ್ಕಾಗಿ ಕುಶಲಕರ್ಮಿಗೆ ದೇವರು ನೀಡಲ್ಪಟ್ಟ ವರವಾಗಿದೆ: ತಾಂತ್ರಿಕ ಕಲೆಯಲ್ಲಿನ ಕೌಶಲ್ಯದಲ್ಲಿನ ಬೆಳಕು ಕಲಾಸತ್ಯದ ಜಗತ್ತನ್ನು ಪ್ರಕಟಪಡಿಸುತ್ತದೆ, ಸಂವೇದನೆಯ ಗ್ರಹಿಕೆಯ ಮೂಲಕ ನಿರ್ದೇಶಿಸಲ್ಪಟ್ಟ ಬೆಳಕು ಸ್ವಾಭಾವಿಕ ವಿಧಗಳ ಜಗತ್ತನ್ನು ತಿಳಿಯಪಡಿಸುತ್ತದೆ, ತತ್ವಶಾಸ್ತ್ರದ ಮೂಲಕ ನಿರ್ದೇಶಿಸಲ್ಪಟ್ಟ ಬೆಳಕು ಬೌದ್ಧಿಕ ಜಗತ್ತನ್ನು ಪ್ರಕಟಪಡಿಸುತ್ತದೆ, ದೈವಿಕ ಬುದ್ಧಿವಂತಿಕೆಯಿಂದ ನಿರ್ದೇಶಿಸಲ್ಪಟ್ಟ ಬೆಳಕು ಸತ್ಯವನ್ನು ಉಳಿಸುವ ಜಗತ್ತಿಗೆ ದಾರಿಯಾಗಿದೆ.

ಸಂತ ಥಾಮಸ್ ಅಕ್ವೈನಸ್‌ನ ಸೌಂದರ್ಯಶಾಸ್ತ್ರದ ಸಿದ್ಧಾಂತವು ವಿವಾದಾತ್ಮಕವಾಗಿ ಹೆಚ್ಚು ಜನಪ್ರಿಯವಾಗಿದೆ ಮತ್ತು ಮಧ್ಯಯುಗದ ಸೌಂದರ್ಯಶಾಸ್ತ್ರದ ಸಿದ್ಧಾಂತಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದೆ. ಇದು ಜನಪ್ರಿಯ ಬರಹಗಾರ ಜೇಮ್ಸ್ ಜೊಯ್ಸ್ ಹಾಗೆಯೇ ೨೦ ನೆಯ ಶತಮಾನದ ಹಲವಾರು ಇತರ ಪ್ರಭಾವಶಾಲಿ ಬರಹಗಾರರಿಂದ ಬಹಿರಂಗಿಕವಾಗಿ ಬಳಸಿಕೊಳ್ಳಲ್ಪಟ್ಟಿದೆ. ಥಾಮಸ್‌ನು, ಹಲವಾರು ಇತರ ಮಧ್ಯಯುಗದ ಬರಹಗಾರರ ಜೊತೆಯಂತೆ, ಯಾವತ್ತಿಗೂ ಕೂಡ ತನ್ನಲ್ಲಿಯೇ "ಸೌಂದರ್ಯದ" ಮೌಲ್ಯದ ಬಹಿರಂಗ ಹೇಳಿಕೆಯನ್ನು ನೀಡುವುದಿಲ್ಲ, ಆದರೆ ಸಿದ್ಧಾಂತವು ಕಾರ್ಯಗಳ ವ್ಯಾಪಕ ಶ್ರೇಣಿಯಲ್ಲಿನ ವಿದೃಶ ಹೇಳಿಕೆಗಳ ಆಧಾರದ ಮೇಲೆ ಪುನರ್‌ರಚಿಸಲ್ಪಟ್ಟಿತು. ಅವನ ಸಿದ್ಧಾಂತವು ಅರಿಸ್ಟಾಟಲ್‌ನ ಸಾಂಪ್ರದಾಯಿಕ ಮಾದರಿಯನ್ನು ಅನುಸರಿಸುತ್ತದೆ, ಆದರೆ ಸೌಂದರ್ಯದ ಬಹಿರಂಗಿಕ ರಚನೆ "ಪಲ್‌ಕ್ರಮ್ ಟಾನ್ಸೆಂಡೆಂಟೇಲ್" ಅಥವಾ ಇತರ "ವಿಷಯಾತೀತ" (ಅನುಭವಾಗತವಲ್ಲದ) ಅಂದರೆ "ಸತ್ಯ" ಮತ್ತು "ಒಳ್ಳೆಯತನ"ದಂತೆ ಬದಲಾಗಬಲ್ಲ ಹೇಳಿಕೆಯ ಜೊತೆ ರಚಿಸಲ್ಪಟ್ಟಿತು. ಅಂಬೆರ್ಟೋ ಇಕೋನ ಥಾಮಸ್ ಅಕ್ವಿನಸ್‌ನ ಸೌಂದರ್ಯಶಾಸ್ತ್ರ ವು ಅಕ್ವಿನಸ್‌ನ ತತ್ವಶಾಸ್ತ್ರದಲ್ಲಿನ ಮೂರು ಸುಂದರ ವಸ್ತುಗಳ ಗುಣಲಕ್ಷಣಗಳನ್ನು ಇಂಟಿಗ್ರಿಟಾಸ್, ಕಾನ್ಸನ್ಷಿಯಾ, ಮತ್ತು ಕ್ಲಾರಿಟಾಸ್ ಎಂದು ಗುರುತಿಸುತ್ತದೆ. ಅರಿಸ್ಟಾಟಲ್‌ನು ಮೊದಲ ಎರಡು ಗುಣಲಕ್ಷಣಗಳನ್ನು ಗುರುತಿಸುತ್ತಾನೆ, ಮೂರನೆಯದು ಪ್ಲೆಟೋನ/ನಿಯೋ-ಪ್ಲೆಟಾನಿಕ್ ಮತ್ತು ಆಗಸ್ಟಿನಿಯನ್ ವಿಚಾರಗಳ ಬೆಳಕಿನಲ್ಲಿ ಅಕ್ವಿನಾಸ್‌ನ ಒಂದು "ಸಂಶೋಧನೆ" ಎಂದು ಗುರುತಿಸುತ್ತಾನೆ. ಒಟ್ಟಾರೆ, ಆ ಸಮಯದಲ್ಲಿ ಒಂದು ಏಕೀಕೃತ ವ್ಯವಸ್ಥೆಯಾಗಿರದ ಮಧ್ಯಯುಗದ ಸೌಂದರ್ಯಶಾಸ್ತ್ರವು ಸೌಂದರ್ಯದ ಒಂದು ಅನನ್ಯವಾದ ಅವಲೋಕನವನ್ನು ನೀಡುತ್ತದೆ, ಅದು ಕಲೆಯ ಇತಿಹಾಸದಲ್ಲಿ ಒಂದು ಆಳವಾದ ಪ್ರತಿಪಾದನೆಯನ್ನು ಪಡೆದುಕೊಳ್ಳುತ್ತದೆ. ಕಾಲರಿಜ್‌ನು ಎರಡು ಏಕಪ್ರಕಾರದ ಶಬ್ದಗಳನ್ನು ರಚಿಸುತ್ತಾನೆ: ಅನೇಕತ್ವ ಮತ್ತು ಏಕತ್ವ, ಅದು ಇತರ ಎರಡರಿಂದ ಉಂಟಾಗುವ ಉಜ್ವಲತೆಗೆ (ಅಕ್ವಿನಾಸ್‌ನ ಕ್ಲಾರಿಟಾಸ್) ಕಾರಣವಾಗುತ್ತದೆ, ಮತ್ತು ನಂತರದಲ್ಲಿ ತೆಗೆದುಕೊಳ್ಳುವವನಲ್ಲಿ "ಸಂತೋಷದ ಉಜ್ವಲತೆ"ಗೆ ಕಾರಣವಾಗುತ್ತದೆ. ಜಿರಾರ್ಡ್ ಮ್ಯಾನ್ಲಿ ಹಾಪ್‌ಕಿನ್ಸ್‌ನು ನಂತರ ಅಂತರ್ಗುಣ ಮತ್ತು ಅಂತರ್‌ಒತ್ತಡ ಶಬ್ದಗಳನ್ನು ಈ ಪರಿಣಾಮಗಳನ್ನು ವರ್ಣಿಸುವುವ ಉದ್ದೇಶದಿಂದ ಸಂಯೋಜಿಸಿದನು.

 
ಲಾರ್ಶ್ ಗಾಸ್ಪೆಲ್ಸ್ 778–820. ಚಾರ್ಲೆ ಮಾಗ್ನೆಯ ಕೊರ್ಟ್ ಸ್ಕೂಲ್.

ಮಧ್ಯಯುಗವು ಪುನರುತ್ಥಾನ ಕಾಲಕ್ಕೆ ಬದಲಾದಂತೆ, ಕಲೆಯು ಮತ್ತೊಮ್ಮೆ ಈ ಜಗತ್ತಿನಲ್ಲಿ ಮತ್ತು ಮಾನವ ಜೀವನ ಜಾತ್ಯತೀತ ಸಮಸ್ಯೆಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯಿತು. ಪ್ರಾಚೀನ ಗ್ರೀಕರು ಮತ್ತು ರೋಮನ್ನರ ಕಲೆಯ ತತ್ವಶಾಸ್ತ್ರವು ಪುನಃ-ವಶಪಡಿಸಿಕೊಳ್ಳಲ್ಪಟ್ಟಿತು.

ಆಧುನಿಕ ಸೌಂದರ್ಯಶಾಸ್ತ್ರ

ಬದಲಾಯಿಸಿ

೧೭ ನೆಯ ಶತಮಾನದ ಕೊನೆಯಿಂದ ೨೦ ನೆಯ ಶತಮಾನದ ಮೊದಲಿನವರೆಗೆ ಪಾಶ್ಚಾತ್ಯ ಸೌಂದರ್ಯಶಾಸ್ತ್ರವು ಒಂದು ನಿಧಾನವಾದ ಬದಲಾವಣೆಗೆ ಅಂದರೆ ಅನೇಕ ವೇಳೆ ಆಧುನಿಕತಾವಾದ ಎಂದು ಕರೆಯಲ್ಪಟ್ಟಿದುದರ ಬದಲಾವಣೆಗೆ ಒಳಗಾಗಲ್ಪಟಿತು. ಜರ್ಮನ್ ಮತ್ತು ಬ್ರಿಟಿಷ್ ಚಿಂತಕರು ಸೌಂದರ್ಯವನ್ನು ಕಲೆಯ ಒಂದು ಮೂಲ ಅಂಶ ಮತ್ತು ಸೌಂದರ್ಯಶಾಸ್ತ್ರದ ಅನುಭವ ಎಂಬುದಾಗಿ ಗುರುತಿಸಿದರು, ಮತ್ತು ಕಲೆಯು ಅವಶ್ಯಕವಾಗಿ ಸೌಂದರ್ಯದ ಉದ್ದೇಶದ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಮನಗಂಡರು.

ಬೌಮ್‌ಗೆರ್ಟನ್ ಸೌಂದರ್ಯಶಾಸ್ತ್ರವು ಈ ಅನುಭವಗಳ ಸಂವೇದನದ ವಿಜ್ಞಾನವಾಗಿದೆ, ಇದು ತರ್ಕಶಾಸ್ತ್ರದ ಕಿರಿಯ ಸಹೋದರಿ ಎಂದು ಕರೆಯಲ್ಪಡುತ್ತದೆ, ಮತ್ತು ಆದ್ದರಿಂದ ಸೌಂದರ್ಯವು ಅನುಭವದ ಸಂವೇದನೆಯು ಹೊಂದಬಹುದಾದ ಜ್ಞಾನದ ಪರಿಪೂರ್ಣವಾದ ವಿಧವಾಗಿದೆ. ಕ್ಯಾಂಟ್‌ನ ಪ್ರಕಾರ ಸುಂದರತೆಯ ಸೌಂದರ್ಯಶಾಸ್ತ್ರದ ಅನುಭವವು ಒಂದು ವಸ್ತುನಿಷ್ಠತೆಯ ನಿರ್ಣಯವಾಗಿದೆ ಆದರೆ ಸಾರ್ವತ್ರಿಕ ಸತ್ಯ, ಎಲ್ಲಾ ಜನರು "ಈ ಗುಲಾಬಿಯು ಸುಂದರವಾಗಿದೆ" ಎಂದು ಒಪ್ಪಿಕೊಳ್ಳುವುದು ವಾಸ್ತವದಲ್ಲಿ ಅದು ಸುಂದರವಾಗಿದ್ದರೆ ಮಾತ್ರ. ಆದಾಗ್ಯೂ, ಸೌಂದರ್ಯವು ಯಾವುದೇ ಹೆಚ್ಚಿನ ಮೂಲ ಗುಣಲಕ್ಷಣಗಳ ಗುಂಪುಗಳಿಗೆ ಇಳಿಸಲ್ಪಡುವುದಿಲ್ಲ. ಶಿಲ್ಲರ್‌ನ ಪ್ರಕಾರ ಸೌಂದರ್ಯದ ಸೌಂದರ್ಯಾತ್ಮಕ ಶ್ಲಾಘನೆಯು ಮಾನವ ಸ್ವಭಾವದ ಸಂವೇದನಾತ್ಮಕ ಮತ್ತು ವಿವೇಚನಾಶೀಲತೆಯ ಅತ್ಯಂತ ಸಮಂಜಸವಾದ ಸಮನ್ವಯವಾಗಿದೆ.

ಶೆಲ್ಲಿಂಗ್‌ನ ಪ್ರಕಾರ ಕಲೆಯ ತತ್ವಶಾಸ್ತ್ರವು ತತ್ವಶಾಸ್ತ್ರದ "ವಿಚಾರ ಸಾಧನ"ವಾಗಿದೆ. ಸೌಂದರ್ಯಶಾಸ್ತ್ರವು ಈಗ ಕಲೆಯ ತತ್ವಶಾಸ್ತ್ರದ ಒಂದು ಹೆಸರಾಗಿದೆ. ಫ್ರೆಡ್‌ರಿಕ್ ವೋನ್ ಶ್ಲೆಗೆಲ್, ಆಗಸ್ಟ್ ವಿಲ್‌ಹೆಮ್ ಶೆಗೆಲ್, ಶೆಲೈಮಾರ್ಶರ್ ಮತ್ತು ಹೆಗೆಲ್ ಇವರುಗಳೂ ಕೂಡ ೧೮೦೦ ರ ನಂತರ ಸೌಂದರ್ಯಶಾಸ್ತ್ರದ ಬಗ್ಗೆ ಅದು "ಕಲೆಯ ತತ್ವಶಾಸ್ತ್ರ" ಎಂಬುದಾಗಿ ಉಪನ್ಯಾಸ ನೀಡಿದರು. ಹೆಗೆಲ್‌ನ ಪ್ರಕಾರ ಎಲ್ಲಾ ಸಂಸ್ಕೃತಿಗಳು ತಮ್ಮಲ್ಲಿಯೇ ಹಂತ ಹಂತವಾಗಿ ಸ್ಪಷ್ಟೀಕರಣ ನೀಡುವ "ಅಮೂರ್ತವಾದ ಸ್ಪೂರ್ತಿ"ಯ ಒಂದು ವಿಷಯವಾಗಿವೆ. ಕಲೆಯು, ಅಮೂರ್ತವಾದ ಸ್ಪೂರ್ತಿಯು ಸಂವೇದನೆಯ-ಗ್ರಹಿಕೆಯಾಗಿ ವ್ಯಕ್ತವಾಗುವ ಮೊದಲ ಹಂತವಾಗಿದೆ, ಮತ್ತು ಆದ್ದರಿಂದ ಇದು ಸೌಂದರ್ಯದ ಪ್ರಕಟಣೆಯ ವಸ್ತುನಿಷ್ಠತೆಯ ಹೊರತಾಗಿ ಒಂದು ಕ್ರಿಯೆಗೆ ಸಂಬಂಧಿಸಿದ್ದಾಗಿದೆ.

ಶೊಪೆನ್‌ಹೌರ್‌ಗೆ ಸೌಂದರ್ಯದ ಸೌಂದರ್ಯಾತ್ಮಕ ಪರಿಕಲ್ಪನೆಯು ಹೆಚ್ಚು ಸ್ವತಂತ್ರವಾಗಿದೆ, ಅದು ಮನಸ್ಸಿನ ಅಪ್ಪಣೆಯಿಂದ ಬಂದ ಪರಿಶುದ್ಧವಾದ ವಿಚಾರಶಕ್ತಿಯಾಗಿದೆ; ಇಲ್ಲಿ ನಾವು ವಿಧದ ಪೂರ್ಣತೆಯ ಪರಿಕಲ್ಪನೆಯನ್ನು ಯಾವುದೇ ರೀತಿಯಾ ಜಾಗತಿಕವಲ್ಲದ ಕಾರ್ಯಕ್ರಮದ ಮೂಲಕ ಮಾಡುತ್ತೇವೆ, ಮತ್ತು ಆದ್ದರಿಂದ ಯಾವುದೇ ಉಪಯುಕ್ತತೆಯ ಅಥವಾ ರಾಜಕೀಯದ ಒಳಸೇರುವಿಕೆಗಳು ಸೌಂದರ್ಯದ ಮಟ್ಟವನ್ನು ಹಾಳುಮಾಡುತ್ತವೆ.

ಬ್ರಿಟಿಷರು ದೊಡ್ಡ ಪ್ರಮಾಣದಲ್ಲಿ ಪ್ರತ್ಯಕ್ಷ ಜ್ಞಾನವಾದಿ ಮತ್ತು ವಿಶ್ಲೇಷಣಾತ್ಮಕ ಗುಂಪುಗಳು ಎಂಬುದಾಗಿ ವಿಂಗಡಿಸಲ್ಪಡುತ್ತಾರೆ. ಸೌಂದರ್ಯಶಾಸ್ತ್ರದ ಅನುಭವವು ಕೆಲವು ವಿಧದ ಮನಸ್ಸಿನ ಏಕೈಕ ವಿಭಾಗದಿಂದ ಬಹಿರಂಗಗೊಳಿಸಲ್ಪಡುತ್ತದೆ ಎಂದು ಪ್ರತ್ಯಕ್ಷ ಜ್ಞಾನವಾದಿಗಳು ನಂಬಿದ್ದರು. ಶಾಫ್ಟ್ಸ್‌ಬರಿಯ ಅರ್ಲ್‌ನ ಪ್ರಕಾರ ಇದು ನೈತಿಕ ಸಂವೇದನೆಗೆ ಸರಿಸಮವಾಗಿದೆ, ಸೌಂದರ್ಯವು ನೈತಿಕ ಒಳ್ಳೆಯತನದ ಸಂವೇದನಾತ್ಮಕ ಆವೃತ್ತಿಯಾಗಿದೆ. ವಿಟ್‌ಜೆಂಸ್ಟೈನ್‌ನ ಸೌಂದರ್ಯಶಾಸ್ತ್ರದ ಪ್ರಕಾರ ಸೌಂದರ್ಯವು ಒಂದು ಭಾಷಾತ್ಮಕ ಅಸಂಭವನೀಯತೆಯಾಗಿರುವ ಒಂದು ಪೂರ್ಣ ಸಂಸ್ಕೃತಿಯ ವಿವರಣೆಯಾಗಿದೆ. ಯಾವುದು ಸೌಂದರ್ಯಶಾಸ್ತ್ರವನ್ನು ಸಂಯೋಜಿಸುತ್ತದೆಯೋ ಅದು ಭಾಷೆಯ ಆಟದ ಕ್ಷೇತ್ರದ ಹೊರಗಿರುತ್ತದೆ.

ಆಸ್ಕರ್ ವಿಲ್ಡೆಯ ಪ್ರಕಾರ ಸೌಂದರ್ಯಕ್ಕೋಸ್ಕರ ಸೌಂದರ್ಯದ ಅಭಿವ್ಯಕ್ತಿಯು ಈ ಸಾಹಿತ್ಯಕ ತ್ವರಿತಗತಿಗಳಲ್ಲಿ ಹೆಚ್ಚಿನವುಗಳ ಕೇವಲ ಅಡಿಪಾಯ ಮಾತ್ರವೇ ಅಲ್ಲ ಆದರೆ ಒಂದು ಹೇಳಿಕೆಯಂತೆ ಅಭಿವ್ಯಕ್ತಿಗೊಳಿಸಲ್ಪಡುತ್ತದೆ "ಸೌಂದರ್ಯಶಾಸ್ತ್ರವಾದವು ಸೌಂದರ್ಯದ ಸಂಕೇತಗಳ ನಂತರದ ಒಂದು ಸಂಶೋಧನೆಯಾಗಿದೆ. ಇದು ಸೌಂದರ್ಯತೆಯ ವಿಜ್ಞಾನವಾಗಿದೆ ಆದಾಗ್ಯೂ ಕೂಡ ಇದನ್ನು ಮಾನವರು ಕಲೆಯ ಪರಸ್ಪರ ಸಂಬಂಧ ಎಂಬುದಾಗಿ ಅನ್ವೇಷಿಸುತ್ತಾರೆ. ಹೆಚ್ಚು ನಿಖರವಾಗಿ ಹೇಳುವುದಾದರೆ ಇದು ಜೀವನದ ರಹಸ್ಯದ ನಂತರದ ಸಂಶೋಧನೆಯಾಗಿದೆ." [೨೭]

ವಿಲ್ಡೆಯು ೧೮೮೨ ರಲ್ಲಿ ಜನಪ್ರಿಯವಾಗಿ ಯುನೈಟೆಡ್ ಸ್ಟೇಟ್ಸ್‌ನ ಪ್ರವಾಸ ಮಾಡಿದನು. ಅವನು "ಇಂಗ್ಲೀಷ್‌ನ ಪುನರುತ್ಥಾನ" ಎಂದು ಕರೆಯಲ್ಪಡುವ ತನ್ನ ಭಾಷಣದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಎಲ್ಲೆಡೆ ಪ್ರವಾಸವನ್ನು ಕೈಗೊಳ್ಳುತ್ತ ಸೌಂದರ್ಯದ ಪರಿಕಲ್ಪನೆಯನ್ನು ಹರಡುವ ಪ್ರಯತ್ನ ನಡೆಸಿದನು. ಅವನ ಭಾಷಣದಲ್ಲಿ ಅವನು ಸೌಂದರ್ಯ ಮತ್ತು ಸೌಂದರ್ಯಶಾಸ್ತ್ರಗಳು "ನಿಷ್ಕ್ರಿಯವಲ್ಲ ಆದರೆ ಶಕ್ತಿಯುತವಾಗಿವೆ" ಎಂದು ಸೂಚಿಸಿದನು. ಜೀವನದ ಬಾಹಿಕ ಸಂಗತಿಗಳನ್ನು ಸೌಂದರ್ಯಯುತವಾಗಿಸುವುದರ ಮೂಲಕ ಒಬ್ಬ ವ್ಯಕ್ತಿಯು ಆಂತರಿಕ ಸಂಗತಿಗಳನ್ನು ಸೌಂದರ್ಯಯುತವಾಗಿಸಿಕೊಳ್ಳಬಹುದು." ಅವನು ಹೇಳಿದನು, ಇಂಗ್ಲೀಷ್‌ನ ಪುನರುತ್ಥಾನವು, "ಇದಕ್ಕೂ ಮುಂಚಿನ ಇಟಲಿಯ ಪುನರುತ್ಥಾನದಂತೆ ಇತ್ತು, ಮನುಷ್ಯನ ಸ್ಪೂರ್ತಿಯ ಪುನರ್ಜನ್ಮವಾಗಿತ್ತು".[೨೮]

 
1745ರ ವಿಲಿಯಮ್ ಹೊಗರ್ತ್‌ನ ಸ್ವಚಿತ್ರ

ಹ್ಯೂಚೆಸಾನ್‌ನ ಪ್ರಕಾರ ಸೌಂದರ್ಯವು ಆಂತರಿಕ ಮನಸ್ಸಿನ ಸಂವೇದನೆಯ ಮೂಲಕ ಪ್ರಕಟಿಸಲ್ಪಡುತ್ತದೆ, ಆದರೆ ವಾಸ್ತವಿಕ ಸಂಗತಿಗಿಂತ ಹೆಚ್ಚಾಗಿ ವಸ್ತುನಿಷ್ಠ ಸಂಗತಿಯಾಗಿದೆ. ವಿಶ್ಲೇಷಣಾತ್ಮಕ ಸಿದ್ಧಾಂತಿಕವಾದಿಗಳಾದ ಲಾರ್ಡ್ ಕೇಮ್ಸ್, ವಿಲಿಯಮ್ ಹೊಗ್ರತ್, ಮತ್ತು ಎಡ್‌ಮಂಡ್ ಬರ್ಕೆ ಇವರುಗಳು ಸೌಂದರ್ಯವನ್ನು ಕೆಲವು ಗುಣಲಕ್ಷಣಗಳ ಯಾದಿಗೆ ಇಳಿಸುವುದಕ್ಕೆ ಇಚ್ಛಿಸಿದರು. ಉದಾಹರಣೆಗೆ, ಹೊಗ್ರತ್‌ನು ಸೌಂದರ್ಯವು ಈ ಕೆಳಗಿನವುಗಳನ್ನು ಒಳಗೊಳ್ಳುತ್ತದೆ ಎಂದು ಆಲೋಚಿಸುತ್ತಾನೆ, (೧) ಸೌಂದರ್ಯವು ಕೆಲವು ವಿನ್ಯಾಸಗಳಿಗೆ ದೇಹದ ಭಾಗಗಳ ಹೊಂದಿಕೆ; (೨) ಎಷ್ಟು ಮಾರ್ಗದಲ್ಲಿ ಸಾಧ್ಯವೋ ಅಷ್ಟು ಮಾರ್ಗಗಳಲ್ಲಿನ ಭಿನ್ನತೆ; (೩) ಏಕರೂಪತೆ, ನಿಯಮಿತತೆ ಅಥವಾ ಸಮರೂಪತೆ, ಅದು ಹೊಂದಿಕೆಯ ಗುಣಲಕ್ಷಣಗಳನ್ನು ಉಳಿಸಿಕೊಂಡು ಹೋಗಲು ಸಹಾಯ ಮಾಡಿದಾಗ ಮಾತ್ರ ಸುಂದರವಾಗಿರುತ್ತದೆ; (೪) ಸರಳತೆ ಅಥವಾ ವಿಭಿನ್ನತೆ, ಅದು ತನ್ನಷ್ಟಕ್ಕೇ ತನ್ನಲ್ಲಿ ಮಾತ್ರ ಸಂತೋಷವನ್ನು ನೀಡುವುದಿಲ್ಲ, ಆದರೆ ತನ್ನ ಕಣ್ಣುಗಳ ಮೂಲಕ ಸರಳವಾಗಿ ಸಂತೋಷವನ್ನು ಆಸ್ವಾದಿಸುವ ಅವಕಾಶವನ್ನು ನೀಡುತ್ತದೆ; (೫) ಗಹನತೆ (ಜಟಿಲತೆ), ಇದು ನಮ್ಮ ಕ್ರಿಯಾತ್ಮಕ ಶಕ್ತಿಗಳಿಗೆ ಕೆಲಸವನ್ನು ನೀಡುತ್ತದೆ, ಅದು ಕಣ್ಣುಗಳನ್ನು "ಒಂದು ಚಂಚಲ ಸ್ವಭಾವದ ಹುಡುಕುವಿಕೆಗೆ" ಕರೆದೊಯ್ಯುತ್ತದೆ; ಮತ್ತು (೬) ಪ್ರಮಾಣ ಅಥವಾ ದೊಡ್ದದಾಗಿರುವಿಕೆ, ಅದು ನಮ್ಮ ಏಕಾಗ್ರತೆಯನ್ನು ಚಂಚಲವಾಗಿಸುತ್ತದೆ ಮತ್ತು ಶ್ಲಾಘನೆ ಮತ್ತು ವಿಸ್ಮಯಗಳನ್ನು ಉತ್ಪತ್ತಿ ಮಾಡುತ್ತದೆ. ನಂತರದ ವಿಶ್ಲೇಷಣಾತ್ಮಕ ಸೌಂದರ್ಯಶಾಸ್ತ್ರಜ್ಞರು ಸೌಂದರ್ಯವನ್ನು ಕೆಲವು ಮನಶಾಸ್ತ್ರದ (ಜೇಮ್ಸ್ ಮಿಲ್‌ರಂತಹ ಸೌಂದರ್ಯಶಾಸ್ತ್ರಜ್ಞರು) ವೈಜ್ಞಾನಿಕ ಸಿದ್ಧಾಂತಗಳಿಗೆ ಅಥವಾ ಜೀವವಿಜ್ಞಾನಕ್ಕೆ (ಹೆರ್ಬೆರ್ಟ್ ಸ್ಪೆನ್ಸರ್‌ರಂತಹ ಸೌಂದರ್ಯಶಾಸ್ತ್ರಜ್ಞರು) ಸಂಯೋಜಿಸಲು ಪ್ರಯತ್ನಿಸಿದರು.

ಆಧುನಿಕತೆಯ-ನಂತರದ ಸೌಂದರ್ಯಶಾಸ್ತ್ರ ಮತ್ತು ಮನೋವಿಶ್ಲೇಷಣ

ಬದಲಾಯಿಸಿ

ಇಪ್ಪತ್ತನೆಯ ಶತಮಾನದ ಮೊದಲಿನ ಕಲಾಕಾರರು, ಕವಿಗಳು ಮತ್ತು ಸಂಯೋಜಕರು, ಸೌಂದರ್ಯವು ಕಲೆ ಮತ್ತು ಸೌಂದರ್ಯಶಾಸ್ತ್ರದ ಕೇಂದ್ರ ಎಂಬ ಊಹೆಯ ಮೇಲೆ ಸವಾಲನ್ನು ಹಾಕಿದರು. ಆ ನಂತರ ಆಧುನಿಕತೆಯ-ನಂತರದ ಸೌಂದರ್ಯಶಾಸ್ತ್ರವನ್ನು ವ್ಯಾಖ್ಯಾನಿಸುವುದಕ್ಕಾಗಿ ಹಲವಾರು ಪ್ರಯತ್ನಗಳು ನಡೆಸಲ್ಪಟ್ಟವು.

ಈ ಸವಾಲು, ಮೂಲಭೂತವಾದದ್ದು ಎಂದು ಭಾವಿಸಲಾಗುತ್ತದೆ, ವಾಸ್ತವಿಕವಾಗಿ ಇದು ಹಳೆಯ ಸೌಂದರ್ಯಶಾಸ್ತ್ರದ ಸಿದ್ಧಾಂತದ ಮುಂದುವರಿಕೆಯಾಗಿದೆ; ಅರಿಸ್ಟಾಟಲ್‌ನು ತನ್ನ ನಾಟಕದ ಸಿದ್ಧಾಂತದಲ್ಲಿ "ಸೌಂದರ್ಯ"ವನ್ನು ವಿಧಗಳಾಗಿ ವಿಂಗಡಿಸುವುದರಲ್ಲಿ ಮೊದಲಿಗನಾಗಿದ್ದಾನೆ, ಮತ್ತು ಕ್ಯಾಂಟ್‌ನು ಸೌಂದರ್ಯ ಮತ್ತು ಅದ್ಭುತಗಳ ನಡುವಣ ಭಿನ್ನತೆಯನ್ನು ಮಾಡಿದನು. ಕೆಲವು ನಿರ್ದಿಷ್ಟ ವಿಧಗಳ ಹೆಚ್ಚಿನ ಸ್ಥಾನಮಾನದ ಒಂದು ನಿರಾಕರಣವು ಆ ಸಮಯದಲ್ಲಿ ಹೊಸ ಸಂಗತಿಯಾಗಿತ್ತು, ಅಲ್ಲಿ ಜೀವವರ್ಗೀಕರಣಶಾಸ್ತ್ರವು ಒಂದು ದುರಂತದ ಪ್ರಾಧಾನ್ಯತೆಯಾಗಿ ಅನ್ವಯಿಸಲ್ಪಟ್ಟಿತು ಮತ್ತು ವಿನೋದ ಮತ್ತು ಆಡಂಬರಗಳ ಉದಾತ್ತೀಕರಣವಾಗಿತ್ತು.

"ಅಭಿವ್ಯಕ್ತಿ"ಯು, ಹಿಂದೊಮ್ಮೆ ಕೇಂದ್ರವಾಗಿದ್ದ ಸೌಂದರ್ಯದ ಸ್ಥಾನವನ್ನು ಆಕ್ರಮಿಸಿಕೊಂಡು ಈಗ ಕೇಂದ್ರಸ್ಥಾನವನ್ನು ಹೊಂದಿದೆ ಎಂದು ಕ್ರೋಸ್‌ನು ಸೂಚಿಸಿದನು. ಕಲಾ ಜಗತ್ತಿನ ಸಮಾಜಶಾಸ್ತ್ರೀಯ ಸಂಸ್ಥೆಗಳು ಕಲೆ ಮತ್ತು ಸಂವೇದನಾಶೀಲತೆಯನ್ನು ಏಕತೆಯಲ್ಲಿ ಬಂಧಿಸುವ ಕೂಡಿಕೆಗಳಾಗಿದ್ದವು ಎಂದು ಜಾರ್ಜ್ ಡಿಕಿಯು ಸೂಚಿಸಿದನು. ಕಲೆಯು ಯಾವಾಗಲೂ ಒಂದು ಸಮಾಜದ ಬಗ್ಗೆ ಸಾಮಾನ್ಯವಾಗಿ ಅಗೋಚರವಾದುದನ್ನು ಗೋಚರವಾಗುವಂತೆ ಮಾಡುವುದಕ್ಕೆ ರಚಿಸಲ್ಪಟ್ಟ ಒಂದು "ಪ್ರತಿ-ವಾತಾವರಣ"ದಂತೆ ಕಾರ್ಯನಿರ್ವಹಿಸುತ್ತದೆ ಎಂದು ಮಾರ್ಶಲ್ ಮ್ಯಾಕ್‌ಲುಹಾನ್‌ನು ಸೂಚಿಸಿದನು.[page needed] ಕಲೆ ಮತ್ತು ಸೌಂದರ್ಯಶಾಸ್ತ್ರದ ಅನುಭವಗಳ ಸಂಯೋಜನೆಯಲ್ಲಿ ಸಾಂಸ್ಕೃತಿಕ ಉದ್ದಿಮೆಗಳ ಪಾತ್ರವನ್ನು ಮುಖಾಮುಖಿಯಾಗುವಂತೆ ಮಾಡದ ವಿನಹಾ ಸೌಂದರ್ಯಶಾಸ್ತ್ರವು ಮುಂದುವರೆಯುವುದಿಲ್ಲ ಎಂದು ಥಿಯೋಡರ್ ಅಡೊರ್ನೊನು ಭಾವಿಸಿದನು. ಹ್ಯಾಲ್ ಫೋಸ್ಟರ್‌ನು (ಕಲೆಯ ವಿಮರ್ಶಕ) ತನ್ನ ಪ್ರಬಂಧ ಸೌಂದರ್ಯಶಾಸ್ತ್ರ-ವಿರೋಧಿ: ಆಧುನಿಕತೆಯ ನಂತರದ ಸಂಸ್ಕೃತಿ ಯ ಪ್ರಬಂಧಗಳಲ್ಲಿ ಸೌಂದರ್ಯ ಮತ್ತು ಆಧುನಿಕತಾ ಕಲೆಯ ಪ್ರತಿಕ್ರಿಯೆಗಳ ವರ್ಣನೆಯನ್ನು ಮಾಡುವುದಕ್ಕೆ ಪ್ರಯತ್ನವನ್ನು ಮಾಡಿದನು. ಅರ್ಥರ್ ಡಾಂಟೋನು ಈ ಪ್ರತಿಕ್ರಿಯೆಯನ್ನು "ಕಾಲಿಫೋಬಿಯಾ" ಎಂದು ವರ್ಣಿಸಿದನು (’ಕಾಲೋಸ್’-ಸುಂದರತೆಗೆ ಗ್ರೀಕ್ ಶಬ್ದದ ನಂತರ).[೨೯] ಆಂಡ್ರೆ ಮಾಲ್‌ರುಕ್ಸ್‌ ನು ಸೌಂದರ್ಯದ ಕಲ್ಪನೆಯು ಕಲೆಯ ನಿರ್ದಿಷ್ಟವಾದ ಸಂಗತಿಯ ಜೊತೆ ಸಂಬಂಧಿತವಾಗಿದೆ ಎಂದು ಅವನು ವಿವರಿಸುತ್ತಾನೆ, ಕಲೆಯ ವಿಷಯವು ಪುನರುತ್ಥಾನದ ಜೊತೆ ಬೆಳವಣಿಗೆಯನ್ನು ಹೊಂದಿತು ಮತ್ತು ಹದಿನೆಂಟನೆಯ ಶತಮಾನದಲ್ಲೂ ಕೂಡ ತನ್ನ ಪ್ರಾಬಲ್ಯತೆಯನ್ನು ಹೊಂದಿತ್ತು (ಆದರೆ ನಂತರ ಮತ್ತೊಂದು ವಿಷಯದಿಂದ ಬದಲಾಯಿಸಲ್ಪಟ್ಟಿತು). ಹದಿನೆಂಟನೆಯ ಶತಮಾನದಲ್ಲಿ ತನ್ನ ಉಗಮವನ್ನು ಪಡೆದ ಸೌಂದರ್ಯಶಾಸ್ತ್ರದ ಭೋದನಾಶಾಖೆಯು ಕಲೆಯ ಒಂದು ಶಾಶ್ವತವಾದ ಸ್ವರೂಪದ ಪ್ರಕಟಪಡಿಸುವಿಕೆಯ ಸಲುವಾಗಿ ಈ ಸಂಗತಿಗಳ ಕ್ಷಣಿಕ ಸ್ಥಿತಿಯನ್ನು ತಪ್ಪಾಗಿ ಅರ್ಥೈಸಿತು. ಬ್ರೇನ್ ಮಾಸುಮಿಯು ಡೆಲ್ಯೂಜ್ ಮತ್ತು ಗುಟಾರಿಯ ತತ್ವಶಾಸ್ತ್ರದಲ್ಲಿನ ವಿಚಾರಗಳನ್ನು ಅನುಸರಿಸುವ ಸೌಂದರ್ಯಶಾಸ್ತ್ರದ ಸುಂದರತೆಯನ್ನು ಪುನಃ ಪರಿಗಣಿಸಬೇಕು ಎಂಬುದಾಗಿ ಸಲಹೆ ನೀಡಿದನು.[೩೦]

ಡೇನಿಯಲ್ ಬರ್ಲಿನ್‌ನು ೧೯೭೦ ರಲ್ಲಿ ಪ್ರಯೋಗಾತ್ಮಕ ಸೌಂದರ್ಯಶಾಸ್ತ್ರದ ವಿಭಾಗವನ್ನು ನಿರ್ಮಿಸಿದನು, ಅದಕ್ಕಾಗಿ ಅವನು ಅವನ ಮರಣದ ದಶಕಗಳ ನಂತರ ಈಗಲೂ ಕೂಡ ನೆನಪಿಸಿಕೊಳ್ಳಲ್ಪಡುತ್ತಾನೆ.[೩೧]

ನ್ಯುಮೇಸ್ಟ್ ಸೌಂದರ್ಯಶಾಸ್ತ್ರವಾದವು ಕಲೆಯ ಸಿದ್ಧಾಂತವಾಗಿದೆ ಮತ್ತು ಕಲೆಯನ್ನು ನಿರಾಕರಿಸುವ ಸೌಂದರ್ಯಶಾಸ್ತ್ರದ ಐತಿಹಾಸಿಕ ಪೂರ್ವಾಗ್ರಹಗಳ ಒಂದು ಹೆಚ್ಚಿನ ಮಟ್ಟದ ಪ್ರಾಯೋಗಿಕ ವಿಧಾನವಾಗಿದೆ.

ಜೀನ್-ಫ್ರಾಂಕೋಸಿಸ್ ಲ್ಯೋಟಾರ್ಡ್‌ನು ಆಸ್ವಾದನೆ ಮತ್ತು ಉದಾತ್ತೀಕರಣದ ನಡುವಣ ಕ್ಯಾಂಟಿಯನ್ ಭಿನ್ನತೆಯನ್ನು ಪುನಃ-ವಿಂಗಡಿಸಿದನು. ಉದಾತ್ತೀಕರಣದ ವರ್ಣಚಿತ್ರಕಲೆಯು ಕಿಟ್ಸ್‌ನ ವಾಸ್ತವಿಕತಾವಾದದಂತಿರಲಿಲ್ಲ, "...ಅದು ನಮಗೆ ನೋಡಲು ಅಸಾಧ್ಯವಾಗುವಂತೆ ಮಾಡುವ ಮೂಲಕ ನೋಡುವುದಕ್ಕೆ ಸಹಾಯ ಮಾಡುತ್ತಿತ್ತು; ಇದು ನೋವನ್ನು ನೀಡುವುದರ ಮೂಲಕ ಮಾತ್ರವೇ ಸಂತೋಷವನ್ನುಂಟುಮಾಡುತ್ತದೆ."[೩೨][೩೩]

ಸಿಗ್‌ಮಂಡ್ ಪ್ರಾಯ್ಡ್ನು ಮನೋವಿಶ್ಲೇಷಣೆಯಲ್ಲಿ ಸೌಂದರ್ಯಶಾಸ್ತ್ರದ ವಿಚಾರಗಳನ್ನು ಪ್ರಾರಂಭಿಸಿದನು, ಪ್ರಮುಖವಾಗಿ "ವಿಲಕ್ಷಣವಾದ" ಸೌಂದರ್ಯಶಾಸ್ತ್ರದ ಪರಿಣಾಮದ ಮೂಲಕ ಪ್ರಾರಂಭಿಸಲ್ಪಟ್ಟಿತು.[೩೪] ಫ್ರ್ಯೂಡ್ ಮತ್ತು ಮೆರ್ಲೀಯು-ಪೊಂಟಿ ಇವರುಗಳನ್ನು ಅನುಸರಿಸುತ್ತ,[೩೫] ಜಾಕ್ಸ್ ಲಾಕನ್‌ನು ಸೌಂದರ್ಯಶಾಸ್ತ್ರವನ್ನು ಉದಾತ್ತೀಕರಣ ಮತ್ತು ವಸ್ತುಗಳಿಗೆ ಅನುಗುಣವಾಗಿ ಸೈದ್ಧಾಂತಿಕವಾಗಿಸಿದನು.[೩೬]

ಸೌಂದರ್ಯಶಾಸ್ತ್ರ ಮತ್ತು ಮಾಹಿತಿ

ಬದಲಾಯಿಸಿ
 
ಮಾಂಡೆಲ್‌ಬ್ರೊಟ್‌ನ ನಿರಂತರ ಬಣ್ಣದ ವಾತಾವರಣದ ಜೂಮ್ ಸರಣಿಯ ಮೊದಲಿನ ಚಿತ್ರ

೧೯೭೦ರ ಸಮಯದಲ್ಲಿ, ಸೌಂದರ್ಯಶಾಸ್ತ್ರ, ಮಾಹಿತಿ ಪ್ರಕ್ರಿಯೆ ಮತ್ತು ಮಾಹಿತಿ ಸಿದ್ಧಾಂತಕ್ಕೆ ಸಂಬಂಧಿಸಿದ ವಿಷಯಗಳ ನಡುವಿನ ಕೊಂಡಿಯನ್ನು ವಿಶ್ಲೇಷಿಸಿದವರುಗಳಲ್ಲಿ ಅಬ್ರಾಹಮ್ ಮೋಲ್ಸ್ ಮತ್ತು ಫ್ರೀಡರ್ ನೇಕ್ ಮೊದಲಿಗರು[೩೭][೩೮].

೧೯೯೦ರಲ್ಲಿ, ಜರ್ಗನ್ ಶಿದುಬೆರ್ ಅವರು ವೀಕ್ಷಕನ ವಿಷಯವಸ್ತುವನ್ನು ಗಣನೆಗೆ ತೆಗೆದುಕೊಳ್ಳುವ ಮತ್ತು ಸಮರ್ಥಿಸುವ ಸೌಂದರ್ಯದ ಗಣಕ ವಿಧಾನ ವಿದ್ಧಾಂತವನ್ನು ವಿವರಿಸಿದರು: ವೀಕ್ಷಕನ ಹಿಂದಿನ ಬುದ್ದಿಮತ್ತೆ ಮತ್ತು ಆತನ ದತ್ತಾಂಶವನ್ನು ರೂಪಿಸುವ ನಿರ್ಧಿಷ್ಟ ವಿಧಾನದ ಮೂಲಕ, ನೀಡಲ್ಪಟ್ಟ ವಿಷಯಾತ್ಮಕ ವೀಕ್ಷಕನಿಂದ ತುಲನೆ ಮಾಡಬಹುದಾದ ವಿಭಜಿಸಲ್ಪಟ್ಟ ಹಲವಾರು ವೀಕ್ಷಣೆಗಳಲ್ಲಿ ಸೌಂದರ್ಯಶಾಸ್ತ್ರಾತ್ಮಕವಾಗಿ ಹೆಚ್ಚು ಮೆಚ್ಚುಗೆಯನ್ನು ಗಳಿಸಿದ ಅತ್ಯಂತ ಕಿರಿಯ ನಿರೂಪಣೆಯಾಗಿದೆ[೩೯][೪೦]. ಇದು ಗಣಕೀಯ ವಿಧಾನದ ಮಾಹಿತಿ ಸಿದ್ಧಾಂತದ ತತ್ವಗಳಿಗೆ ಮತ್ತು ಸೀಮಿತ ನಿರೂಪಣಾ ಕಾಲಾವಧಿಗೆ ಹತ್ತಿರವಾದ ಸಂಬಂಧವನ್ನು ಹೊಂದಿದೆ. ಇದರ ಒಂದು ಉದಾಹರಣೆ ಎಂದರೆ: ಗಣಿತಶಾಸ್ತ್ರಜ್ಞರು ತಮ್ಮ ಔಪಚಾರಿಕ ಭಾಷೆಯಲ್ಲಿನ ಅತ್ಯಂತ ಚಿಕ್ಕ ನಿರೂಪಣೆಯೊಂದಿಗಿನ ಸಾಮಾನ್ಯ ಪುರಾವೆಯನ್ನು ಆನಂದಿಸುತ್ತಾರೆ. ಮತ್ತೊಂದು ಅತಿ ಮುಖ್ಯವಾದ ಉದಾಹರಣೆಯು ಸೌಂದರ್ಯಾತ್ಮಕವಾಗಿ ಸಂತೋಷ ಪಡಿಸುವ ಮನುಷ್ಯನ ಮೊಗವನ್ನು ವಿವರಿಸುವಂತೆ, ಮಾಹಿತಿಯ[೪೧][೪೨] ಕೆಲವೇ ಕೆಲವು ತುಣುಕುಗಳ ಮೂಲಕ ಭಾಗಗಳನ್ನು ವಿವರಿಸಬಹುದಾದ ಲಿಯನಾರ್ಡೋ ಡಾ ವಿಂಚಿ ಮತ್ತು ಆಲ್‌ಬ್ರೆಕ್ ಡ್ಯೂರೆರ್ ಮೂಲಕ ನಡೆದ ಅತ್ಯಂತ ಕಡಿಮೆ ವಿವರಣೆಯ ೧೫ನೇ ಶತಮಾನದ ಭಾಗಗಳ ಅಧ್ಯಯನವು ಸ್ಪೂರ್ತಿಯನ್ನು ನೀಡುತ್ತದೆ. ಆಸಕ್ತಿಯು ವಿಷಯಾತ್ಮಕವಾಗಿ ಒಪ್ಪಿಕೊಳ್ಳಲಾದ ಸೌಂದರ್ಯದ ಮೊದಲ ನಿಷ್ಪನ್ನವಾಗಿದೆ ಎಂದು ಹೇಳಿಕೆಯನ್ನು ನೀಡುವ ಮೂಲಕ ಶಿದುಬೆರ್ ಸಿದ್ಧಾಂತವು ಯಾವುದು ಸುಂದರವಾದುದು ಮತ್ತು ಯಾವುದು ಆಸಕ್ತಿದಾಯಕವಾದುದು ಎಂಬುದನ್ನು ಸ್ಪಷ್ಟವಾಗಿ ವಿಂಗಡಿಸುತ್ತದೆ. ಇಲ್ಲಿನ ಆಧಾರ ಪ್ರಮೇಯವೆಂದರೆ ಯಾವುದೇ ವೀಕ್ಷಕನು ಪುನರಾವರ್ತನೆ ಮತ್ತು ಸಮಾನತೆಗಳು ಹಾಗೂ ಭಿನ್ನವಾದ ಸ್ವ-ಸಮಾನತೆ ಮೂಲಕ ವೀಕ್ಷಣೆಯ ಭವಿಷ್ಯ ನುಡಿಯ ಸಾಧ್ಯತೆ ಮತ್ತು ಸಂಕ್ಷೇಪಿಸುವ ಸಾಧ್ಯತೆಯನ್ನು ಸುಧಾರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುವದು. ಎಲ್ಲಿಯವರೆಗೆ ವೀಕ್ಷಕರ ತಿಳಿದುಕೊಳ್ಳುವಿಕೆ ಪ್ರಕ್ರಿಯೆಯು (ಅದು ಭವಿಷ್ಯ ನುಡಿಯಬಹುದಾದ ನರಕ್ಕೆ ಸಂಬಂಧಿಸಿದ ಕೊಂಡಿಯಾಗಿರಬಹುದು - ನರಸೌಂದರ್ಯಶಾಸ್ತ್ರವನ್ನು ನೋಡಿ) ಸುಧಾರಿತ ದತ್ತಾಂಶ ಸಂಕುಚನೆಗೆ ದಾರಿ ಮಡಿಕೊಡುತ್ತದೆಯೋ ಆಗ ವೀಕ್ಷಣೆಯ ಕ್ರಮಾನುಗತಿಯನ್ನು ಮೊದಲಿಗಿಂತಲೂ ಅನುಕೂಲಕರ ಬಿಟ್‌ಗಳಲ್ಲಿ ವಿವರಿಸಬಹುದು, ದತ್ತಾಂಶದ ತಾತ್ಕಾಲಿಕ ಆಸಕ್ತಿಯು ಈಗಾಗಲೇ ಸಂಗ್ರಹಗೊಂಡ ಬಿಟ್‌ಗಳ ಸಂಖ್ಯೆಗೆ ಹೊಂದಿಕೊಂಡಿರುತ್ತದೆ. ಈ ಸಂಕುಚಿತ ಪ್ರಗತಿಯು ವೀಕ್ಷಕರ ಆಂತರಿಕ ಮೆಚ್ಚಿಗೆಗೆ ಸಮಾನಾಂತರವಾಗಿರುತ್ತದೆ, ಇದನ್ನು ಉತ್ಸಾಹಕ ಮೆಚ್ಚುಗೆ ಎಂದೂ ಕರೆಯಲಾಗುತ್ತದೆ. ಪುನಃ ಶಕ್ತಿಯನ್ನು ಗಳಿಸಿಕೊಳ್ಳುವುದರ ಕಲಿಯುವಿಕೆಯ ಕ್ರಮಾವಳಿಯು, ಕ್ರಿಯೆಗಳನ್ನು ಕರಾರುವಕ್ಕಾಗಿ ಕಾರ್ಯರೂಪಕ್ಕೆ ತರುವುದಕ್ಕೆ ಕಲಿಯುವಿಕೆಯ ಮೂಲಕ ಭವಿಷ್ಯದಲ್ಲಿನ ನಿರೀಕ್ಷೆಗಳನ್ನು ಗರಿಷ್ಠಗೊಳಿಸುವುದಕ್ಕೆ ಬಳಸಿಕೊಳ್ಳಲ್ಪಡುತ್ತದೆ, ಅದು ಈಗಲೂ ಕೂಡ ತಿಳಿಯಲ್ಪಟ್ಟಿರದ ಆದರೆ ಕಲಿತುಕೊಳ್ಳಬಹುದಾದ ಭವಿಷ್ಯದ ಊಹಿಕೆ ಅಥವಾ ನಿರಂತರತೆಯ ಜೊತೆಗಿನ ಆಂತರಿಕ ಮಾಹಿತಿಗಳ ಹೆಚ್ಚುವರಿ ಆಸಕ್ತಿಯನ್ನು ಉಂಟುಮಾಡುತ್ತದೆ. ಮೂಲತತ್ವಗಳು, ನಂತರದಲ್ಲಿ ಒಂದು ವಿಧದ ಕೃತಕ ಕುತೂಹಲವನ್ನು ತೋರ್ಪಡಿಸುವ ಕೃತಕ ಘಟಕಗಳ ಮೇಲೆ ಕಾರ್ಯರೂಪಕ್ಕೆ ತರಲ್ಪಡುತ್ತದೆ[೪೩][೪೪][೪೫][೪೬].

ಅನ್ವಯಿಸಲ್ಪಟ್ಟ ಸೌಂದರ್ಯಶಾಸ್ತ್ರ

ಬದಲಾಯಿಸಿ

ಸೌಂದರ್ಯಶಾಸ್ತ್ರವು ಯಾವ ರೀತಿಯಲ್ಲಿ ಕಲೆಗೆ ಅನ್ವಯಿಸಲ್ಪಟ್ಟಿದೆಯೋ ಅದೇ ರೀತಿಯಲ್ಲಿ ಸಾಂಸ್ಕೃತಿಕ ಅಂಶಗಳಿಗೂ ಕೂಡ ಅನ್ವಯಿಸಲ್ಪಟ್ಟಿದೆ. ಸೌಂದರ್ಯಶಾಸ್ತ್ರವನ್ನು ಕಲೆಯ-ಅಂಶಗಳು ಮತ್ತು ವೈದ್ಯಕೀಯ ವಿಷಯಗಳ ನಡುವೆ ಸಂಯೋಜನವಾಗುವಂತೆ ಯುಎಸ್ ಮಾಹಿತಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಅಧ್ಯಕ್ಷರುಗಳಿಂದ ಮಾಡಲ್ಪಟ್ಟಿತು[೪೭] ಇಂಗ್ಲಿಷ್ ಭಾಷೆಯನ್ನು ಮಾತನಾಡುವ ಜನರು ತಮ್ಮ ಸ್ವಂತ ದೇಶದಲ್ಲಿ ಸಭಿಕರನ್ನು ಕುರಿತು ಮಾತನಾಡುವಾಗ ಅನುವಾದಕರನ್ನು ಬಳಸಿಕೊಳ್ಳಲ್ಪಟ್ಟ ಸಂದರ್ಭದಲ್ಲಿ ಕಲಿಕಾ ಮಾದರಿಯನ್ನು ಪುನಃಸ್ಥಾಪಿಸಲು ಈ ಸಂಯೋಜನೆಯ ರಚನೆಯಾಯಿತು. ಸಭಿಕರು ವಾಸ್ತವವಾಗಿ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವಂತವರಾಗಿರಲಿಲ್ಲ. ಇದು ಸೌಂದರ್ಯಶಾಸ್ತ್ರಕ್ಕೆ ವ್ಯತಿರಿಕ್ತವಾದ ವಿಷಯಗಳಾದ ಗಣಿತಶಾಸ್ತ್ರ, ಭೋಜನಕಲೆ ಮತ್ತು ಶಾಸ್ತ ಮತ್ತು ವಿನ್ಯಾಸದ ರಚನೆ ಮುಂತಾದವುಗಳಲ್ಲೂ ಕೂಡ ಬಳಸಿಕೊಳ್ಳಲ್ಪಡುತ್ತದೆ.

ಸೌಂದರ್ಯಶಾಸ್ತ್ರದ ನೀತಿಶಾಸ್ತ್ರಗಳು

ಬದಲಾಯಿಸಿ

ಸೌಂದರ್ಯಶಾಸ್ತ್ರದ ನೀತಿ ತತ್ವಗಳು, ಮಾನವ ವರ್ತನೆ ಮತ್ತು ನಡುವಳಿಕೆಗಳು ಯಾವುದು ಸುಂದರ ಮತ್ತು ಆಕರ್ಷಕವಾಗಿರುತ್ತದೆಯೋ ಅದರಿಂದ ನಿರ್ದೇಶಿಸಲ್ಪಡಬೇಕು ಎಂಬ ಕಲ್ಪನೆಗೆ ಉಲ್ಲೇಖಿಸಲ್ಪಡುತ್ತವೆ. ಜಾನ್ ಡಿವೇ[೪೮] ಹೇಳಿದನು, ಸೌಂದರ್ಯಶಾಸ್ತ್ರ ಮತ್ತು ನೀತಿಶಾಸ್ತ್ರದ ಏಕತೆಯು ನಡುವಳಿಕೆಯು "ನ್ಯಾಯಯುತ"ವಾಗಿರಬೇಕೆಂಬ ನಮ್ಮ ತಿಳುವಳಿಕೆಯಲ್ಲಿ ಪ್ರತಿಬಿಂಬಿಸಲ್ಪಡುತ್ತದೆ - "ನ್ಯಾಯಯುತ" ಎಂಬ ಶಬ್ದವು ಆಕರ್ಷಕ ಮತ್ತು ನೈತಿಕವಾಗಿ ಅಂಗೀಕಾರಾರ್ಹ ಎಂಬ ಎರಡು ಅರ್ಥಗಳನ್ನು ಒಳಗೊಳ್ಳುತ್ತದೆ. ತೀರಾ ಇತ್ತೀಚಿನಲ್ಲಿ, ಸೌಂದರ್ಯಶಾಸ್ತ್ರದ ನೀತಿತತ್ವವು ಶಾಂತಿಯುತ ಶಿಕ್ಷಣಕ್ಕೆ ಒಂದು ತತ್ವಶಾಸ್ತ್ರೀಯ ತರ್ಕಾಧಾರವನ್ನು ನಿರ್ಮಿಸುವುದಕ್ಕೆ ತೆಗೆದುಕೊಳ್ಳಲ್ಪಡಬೇಕು ಎಂದು ಜೇಮ್ಸ್ ಪೇಜ್[೪೯] ಹೇಳಿತು.

ಸೌಂದರ್ಯ, ಗಣಿತಶಾಸ್ತ್ರ, ವಿಶ್ಲೇಷಣಾತ್ಮಕ ತತ್ವಶಾಸ್ತ್ರ, ಮತ್ತು ಭೌತಶಾಸ್ತ್ರದ ಪ್ರಕಾರ ಸತ್ಯ

ಬದಲಾಯಿಸಿ

ಸಮಸೂತ್ರತೆ ಮತ್ತು ಕ್ಲಿಷ್ಟತೆಗಳಂತಹ ಗಣಿತಶಾಸ್ತ್ರದ ಪರಿಗಣನೆಗಳು ಸೈದ್ಧಾಂತಿಕ ಸೌಂದರ್ಯಶಾಸ್ತ್ರದಲ್ಲಿ ವಿಶ್ಲೇಷಣೆಗಾಗಿ ಬಳಸಿಕೊಳ್ಳಲ್ಪಟ್ಟಿವೆ. ಇದು ಗಣಿತಶಾಸ್ತ್ರೀಯ ಸೌಂದರ್ಯದ ಅಧ್ಯಯನದಲ್ಲಿ ಬಳಸಿಕೊಳ್ಳಲ್ಪಟ್ಟ ಅನ್ವಯಿಸಲ್ಪಟ್ಟ ಸೌಂದರ್ಯಶಾಸ್ತ್ರದ ಪರಿಗಣನೆಗಳಿಗಿಂತ ಭಿನ್ನವಾಗಿದೆ. ಸಮರೂಪತೆ ಮತ್ತು ಸರಳತೆಗಳಂತಹ ಸೌಂದರ್ಯಶಾಸ್ತ್ರದ ಪರಿಗಣನೆಗಳು ತತ್ವಶಾಸ್ತ್ರದ ವಿಭಾಗಗಳಾದ ನೀತಿಶಾಸ್ತ್ರ, ಸೈದ್ಧಾಂತಿಕ ಭೌತಶಾಸ್ತ್ರ ಮತ್ತು ವಿಶ್ವಶಾಸ್ತ್ರಗಳಲ್ಲಿ ಅನುಭವದ ಪರಿಗಣನೆಯ ಹೊರಗಿರುವ ಸತ್ಯವನ್ನು ಉಲ್ಲೇಖಿಸುವುದಕ್ಕೆ ಬಳಸಿಕೊಳ್ಳಲ್ಪಟ್ಟಿತು. ಸೌಂದರ್ಯ ಮತ್ತು ಸತ್ಯ ಇವುಗಳು ಸರಿಸುಮಾರು ಒಂದೇ ಅರ್ಥವನ್ನು ನೀಡುವ ಶಬ್ದಗಳು ಎಂದು ವಾದಿಸಲ್ಪಡುತ್ತವೆ.[೫೦]

ಸೌಂದರ್ಯಶಾಸ್ತ್ರದ ಗಣನಾತ್ಮಕ ನಿರ್ಣಯ

ಬದಲಾಯಿಸಿ

೨೦೦೫ ರ ನಂತರದಿಂದ, ಕಂಪ್ಯೂಟರ್ ವಿಜ್ಞಾನಿಗಳು ಚಿತ್ರಣಗಳ ಸೌಂದರ್ಯಾತ್ಮಕ ಗುಣಗಳನ್ನು ನಿರ್ಣಯಿಸಲು ಸ್ವಯಂ ಚಾಲಿತ ವಿಧಾನಗಳನ್ನು ಅಭಿವೃದ್ಧಿಗೊಳಿಸಲು ಪ್ರಯತ್ನ ನಡೆಸಿದರು. ಹಲವಾರು ಸಂಖ್ಯೆಯ ಕೈಯಿಂದ ನಿರ್ಣಯಿಸಲ್ಪಟ್ಟ ಆನ್‌ಲೈನ್ ಛಾಯಾಚಿತ್ರಗಳು, ಸೌಂದರ್ಯದ ಗುಣಮಟ್ಟದ ಪ್ರಸಕ್ತತೆಗೆ ಯಾವ ಗೋಚರ ಅಂಶಗಳು ಅವಶ್ಯಕ ಎಂಬುದರ ಬಗ್ಗೆ ಕಂಪ್ಯೂಟರ್‌ಗಳಿಗೆ "ಕಲಿಸುವುದಕ್ಕೆ" ಬಳಸಲ್ಪಟ್ಟವು. ಪೆನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಗೊಳಿಸಲ್ಪಟ್ಟ ಅಕ್ವೈನ್ ಎಂಜಿನ್ ಇದು ಬಳಕೆದಾರರಿಂದ ಅಪ್‌ಲೋಡ್ ಮಾಡಲ್ಪಟ್ಟ ನೈಸರ್ಗಿಕ ಛಾಯಾಚಿತ್ರಗಳನ್ನು ಪ್ರಮಾಣೀಕರಿಸುತ್ತದೆ.[೫೧]

ಈ ವಿಭಾಗದಲ್ಲಿ ಪ್ರಮುಖವಾದವರೆಂದರೆ ರಟ್‌ಜರ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೈಕೆಲ್ ಲೇಯ್ಟನ್ ಇವರು. ಲೇಯ್ಟನ್ ಇವರು ಗಣಿತಶಾಸ್ತ್ರ ಮತ್ತು ಗಣನಾತ್ಮಕ ಸೌಂದರ್ಯಶಾಸ್ತ್ರದ ಅಂತರಾಷ್ಟ್ರೀಯ ಸಂಸ್ಥೆ ಮತ್ತು ಜ್ಞಾನಗ್ರಹಣ ವಿಜ್ಞಾನದಲ್ಲಿನ ಗ್ರುಪ್ ಸಿದ್ಧಾಂತದ ಅಂತರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ ಮತ್ತು ಆಕಾರ (ಗಾತ್ರ)ದ ಬೆಳವಣಿಗೆಯ ಸಿದ್ಧಾಂತವನ್ನೂ ಅಭಿವೃದ್ಧಿಗೊಳಿಸಿದ್ದಾರೆ.

ಇವನ್ನೂ ವೀಕ್ಷಿಸಿ

ಬದಲಾಯಿಸಿ
  • ಸೌಂದರ್ಯ ಶಾಸ್ತ್ರಜ್ಞರು
  • ಸೌಂದರ್ಯ ಪ್ರಜ್ಞೆ
  • ಸೌಂದರ್ಯದ ಭಾವನೆಗಳು
  • ಸೌಂದರ್ಯದ ನೈಜತೆ
  • ಸೌಂದರ್ಯದ ಸಾಪೇಕ್ಷತಾ ಸಿದ್ಧಾಂತ
  • ಕ್ರೈಸ್ತಚರ್ಚಿನಲ್ಲಿ ಕಲಿಯುತ್ತಿರುವ ಇಸ್ಲಾಂನ ಸೌಂದರ್ಯ ಶಾಸ್ತ್ರಜ್ಞರು, NZ (ಅಲ್-ಹುದಾ ಇಸ್ಲಾಮಿಕ್ ಚಾರಿಟೆಬಲ್ ಟ್ರಸ್ಟ್)77u u
  • ಪ್ರತಿ-ಕಲೆ
  • ಕಲಾ ವಸ್ತು
  • ಚೆಲುವು
  • ಕಲೆಯ ಬಗೆಗಿನ ವಿಂಗಡಣಾತ್ಮಕ ವಿವಾದಗಳು
  • ಕೂಲ್ (ಆಫ್ರಿಕಾದ ತತ್ವ ಶಾಸ್ತ್ರ)
  • ಸಾಂಸ್ಕೃತಿಕ ಸಂವೇದನ- ಶಕ್ತಿ
  • ದಿಟ್ಟಿಸಿ ನೋಡು
  • ಗೋಲ್ಡನ್ ರೇಶ್ಯೂ
  • ಸೌಂದರ್ಯ ಶಾಸ್ತ್ರದ ಇತಿಹಾಸ(೨೦ನೇ ಶಮಾನಕ್ಕಿಂತ ಮೊದಲಿನ)
  • ಮಾನವತಾ ವಾದದ ಸೌಂದರ್ಯ ಪ್ರಜ್ಞೆ
  • ಕೈಗಾರಿಕಾ ವಿನ್ಯಾಸ
  • ಜಪಾನೀಯರ ಇಕಿ (ಸೌಂದರ್ಯದ ಮಾದರಿ)
  • ಸೌಂದರ್ಯ ಶಾಸ್ತ್ರಜ್ಞರ ಪಟ್ಟಿ

ತತ್ವಶಾಸ್ತ್ರೀಯ ಸೌಂದರ್ಯ ಪ್ರಜ್ಞೆಯ ಪೀಠಿಕೆಗಳ ಪಟ್ಟಿ

  • ಲೂಕಿಸಮ್
  • ಮಾರ್ಕ್ಸ್‌ವಾದಿ ಸೌಂದರ್ಯಶಾಸ್ತ್ರ
  • ಗಣಿತಶಾಸ್ತ್ರ ಮತ್ತು ಕಲೆ
  • ಸಂಗತ ಮತ್ತು ಭಾವುಕತೆ
  • ಮೈಕೆಲ್ ಟಾಪಿ
  • ನ್ಯೂರೊ ಎಸ್ಥಟಿಕ್ಸ್
  • ಸುಂದರವಾದುದು ಮತ್ತು ಭವ್ಯವಾದುದರ ಭಾವನೆಗಳ ಅವಲೋಕನಗಳು


  • ಲೈಕೊ ಕಲೆ
  • ಸಂಪೂರ್ಣತೆ ("ಸೌಂದರ್ಯದ ಸಂಪೂರ್ಣತೆ ")
  • ದೈಹಿಕ ಆಕರ್ಷಣೆ
  • ಆಧುನಿಕೋತ್ತರ ಕಲೆ
  • ಕಲೆ ಮನಃಶಾಸ್ತ್ರ
  • ಶೊಪೆನ್‌ಹೌರ್‌ನ ಸೌಂದರ್ಯ ಶಾಸ್ತ್ರ
  • ಸಂಕೇತ-ವಿಜ್ಞಾನಗಳ ಮಾದರಿ ಚೆಲುವು
  • ಲೈಂಗಿಕ ಆಕರ್ಷಣೆ
  • ಲೈಂಗಿಕ ಆಯ್ಕೆ
  • ಉದಾತ್ತೀಕರಣ
  • ಅಭಿರುಚಿ (ಸೌಂದರ್ಯ ಶಾಸ್ತ್ರ)
  • ಟೆರಿಯನ್ ಗ್ಯಾಲರಿ
  • ಸೈದ್ಧಾಂತಿಕ ಸೌಂದರ್ಯ ಶಾಸ್ತ್ರ
  • ಕುರೂಪತೆ
  • ವಾಬಿ-ಸಾಬಿ

ಉಲ್ಲೇಖಗಳು

ಬದಲಾಯಿಸಿ
  1. ಮರಿಯನ್-ವೆಬ್‌ಸ್ಟರ್ ಪದಕೋಶ ಆನ್‌ಲೈನ್‌ನಿಂದ ಡೆಫನೆಶನ್ಸ್ 1 ಆಫ್ ಎಸ್ಥಟಿಕ್ಸ್ .
  2. ಜಾಂಗ್‌ವಿಲ್, ನಿಕ್. "ಎಸ್ಥಟಿಕ್ ಜಡ್ಜ್‌ಮೆಂಟ್", ಸ್ಟಾನ್‌ಫೊರ್ಡ್ ಎನ್ಸೈಕ್ಲೋಪೀಡಿಯಾ ಆಫ್ ಸೈಕಾಲಜಿ , ೦೨-೨೮-೨೦೦೩/೧೦-೨೨-೨೦೦೭. ಮರುಗಳಿಸಲಾಗಿದೆ ೦೭-೨೪-೨೦೦೮.
  3. ಕೆಲ್ಲೀ (೧೯೯೮) p. ix
  4. ಟಾಮ್ ರೀಡಲ್‌ನಿಂದ ರಿವ್ಯೂ Archived 2017-01-31 ವೇಬ್ಯಾಕ್ ಮೆಷಿನ್ ನಲ್ಲಿ. (ರೆಗಿನ್ಸ್ ಯುನಿವರ್ಸಿಟಿ)
  5. ಬ್ರುಯ್ನ್, ಪ್ರೊಫೆಸರ್ ಸೆವೆರೈನ್ ಟಿ. "ಆರ್ಟ್ ಆ‍ಯ್‌೦ಡ್ ಎಸ್ಥೆಟಿಕ್ ಇನ್ ಆ‍ಯ್‌ಕ್ಷನ್ Archived 2010-04-20 ವೇಬ್ಯಾಕ್ ಮೆಷಿನ್ ನಲ್ಲಿ.", ಬೊಸ್ಟನ್ ಕಾಲೇಜ್, ೨೦೦೨. ಮರುಸಂಪಾದಿಸಲಾಗಿದೆ ೦೭-೨೨-೨೦೦೮.
  6. ಫ್ರೀಮನ್, ಲಿಂಡ್ಸೆ (Phd) ರಿಮೆಂಬರಿಂಗ್ ಡೆಬೊರ್ಡ್ cannon-beach.net
  7. ಆನ್‌ಲೈನ್ ಎಟಿಮೊಲಜಿ ಡಿಕ್ಷನರಿಯಿಂದ ಸೌಂದರ್ಯ ಶಾಸ್ತ್ರ ದ ವ್ಯಾಖ್ಯಾನ
  8. ಹಾಲ್ಮ್, ಐವರ್ (೨೦೦೬). ಐಡಿಯಾಸ್ ಇನ್ ಬಿಲೀಫ್ಸ್ ಇನ್ ಆರ್ಕಿಟೆಕ್ಚರ್ ಆ‍ಯ್‌೦ಡ್ ಇಂಡಸ್ಟ್ರಿಯಲ್ ಡಿಸೈನ್: ಹೌ ಆಟಿಟ್ಯೂಡ್ಸ್, ಓರಿಯಂಟೇಶನ್ಸ್, ಆ‍ಯ್‌೦ಡ್ ಅಂಡರ್‌ಲೈಯಿಂಗ್ ಅಸ್ಸುಂಶನ್ಸ್ ಶೇಪ್ ದ ಬ್ಯುಲ್ಟ್ ಎನ್ವಿರಾನ್‌ಮೆಂಟ್ . ಒಸ್ಲೊ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ‍ಯ್‌೦ಡ್ ಡಿಸೈನ್. ISBN ೦-೬೮೮-೧೬೮೯೪-೯
  9. ಕಾರ್ಸ್‌ಮೆಯರ್, ಕಾರೊಲೈನ್ ed. ಎಸ್ಥಟಿಕ್ಸ್: ದ ಬಿಗ್ ಕ್ವಸ್ಚನ್ಸ್ ೧೯೯೮
  10. "ಆನ್ ಮಾಡರ್ನಿಸ್ಟ್ ಪೈಂಟಿಂಗ್ಸ್"ನಲ್ಲಿ ಕನ್ಸಿಡರ್ ಕ್ಲೆಮೆಂಟ್ ಗ್ರೀನ್ಬರ್ಗ್‌ನ ವಾದಗಳು (೧೯೬೧), ಸೌಂದರ್ಯಶಾಸ್ತ್ರನ್ನು ಮರು ಮುದ್ರಿಸಲಾಗಿದೆ: ಎ ರೀಡರ್ ಇನ್ ಫಿಲಾಸಫಿ ಆಫ್ ಆರ್ಟ್ಸ್.
  11. ಇಮ್ಯಾನ್ಯುಯೆಲ್ ಕಂಟ್, ದ ಕ್ರಿಟಿಕ್ ಆಫ್ ಜಡ್ಜ್‌ಮೆಂಟ್.
  12. The Abuse of Beauty: Aesthetics and the Concept of Art, By Arthur Coleman Danto, p.1, Published by Open Court Publishing, 2003, ISBN 0-8126-9540-2, 9780812695403
  13. ಅನ್ನಮರಿಯೆ ಗೆಟಮನ್-ಸೈಫೆರ್ಟ್, ಇಂಟ್ರಡಕ್ಷನ್ಸ್ ಟು ಆಸ್ಥೆಟಿಕ್ಸ್ (Einführung in die Ästhetik ), ಮುನಿಚ್, ವಿಲ್ಹೆಮ್ ಫಿಂಕ್, ೧೯೯೫, p. ೭.
  14. ಡೇವಿಸ್, ೧೯೯೧, ಕರೊಲ್, ೨೦೦೦, et al.
  15. ೧೫.೦ ೧೫.೧ ಡಾಂಟೊ, ೨೦೦೩
  16. ಗೂಡ್ಮನ್,
  17. ನೊವಿಟ್ಜ್, ೧೯೯೨
  18. ಬ್ರೈನ್ ಮಸ್ಸೊಮಿ, ಡಒಲೂಸ್, ಗುಟ್ಟೂರ್ ಆ‍ಯ್‌೦ಡ್ ದ ಫಿಲಾಸಫಿ ಆಫ್ ಎಕ್ಸ್‌ಪ್ರೆಶನ್ , ಸಿಆರ್‌ಸಿಎಲ್, ೨೪:೩, ೧೯೯೭.
  19. ಕ್ಲೆಮೆಂಟ್ ಗ್ರೀನ್‌ಬರ್ಗ್, “ಆನ್ ಮಾಡರ್ನಿಸ್ಟ್ ಪೇಯಿಂಟಿಗ್”.
  20. ಟ್ರಿಸ್ಟನ್ ಜಾರ, ಸೆಪ್ಟ್ ಮನಿಫೆಸ್ಟೆಸ್ ಡಾಡ.
  21. ಡೌಗ್ಲಸ್ ಆಡಮ್ಸ್‌ನ ದ ಹಿಚಿಕರ್ಸ್ ಗೈಡ್ ಟು ದ ಗೆಲಾಕ್ಸಿ
  22. ಡೆನಿಸ್ ಡಟನ್ನ ಎಸ್ಥೆಟಿಕ್ ಯುನಿವರ್ಸಲ್ಸ್ ದ ಬ್ಲಾಂಕ್ ಸ್ಲೇಟ್ ನ ಸ್ಟೀವನ್ ಪಿಂಕರ್‌ನಿಂದ ಸಾರಾಂಶ
  23. ಗ್ರಾಟೆಸ್ಕ್ಯೂ ಕೆಲ್ಲೀಯ ಪ್ರವೇಶ ೧೯೯೮, pp.೩೩೮-೩೪೧
  24. ಡೇವೀಸ್, ಪೆನೆಲೋಪ್ ಜೆ.ಇ. ಡೆನ್ನಿ, ವಾಲ್ಟರ್ ಬಿ. ಹಾಫ್ರಿಚ್ಟರ್, ಫ್ರಿಮ ಫಾಕ್ಸ್. ಜಾಕಬ್ಸ್, ಜೊಸೆಫ್. ರಾಬರ್ಟ್ಸ್, ಆನ್ನ್ ಎಮ್. ಸಿಮನ್, ಡೇವಿಡ್ ಎಲ್. ಜಾನ್ಸನ್‌ನ ಹಿಸ್ಟರಿ ಆಫ್ ಆರ್ಟ್ಸ್, ಪ್ರೆಂಟಿಸ್ ಹಾಲ್; ೨೦೦೭, ಅಪ್ಪರ್ ಸ್ಯಾಡಲ್ ರಿವರ್, ನ್ಯೂಜರ್ಸಿ. ಏಳನೇ ಆವೃತ್ತಿ, ISBN ೦-೧೩-೧೯೩೪೫೫-೪ pg. ೨೭೭
  25. ದ ಅರಬ್ ಕಾಂಟ್ರಿಬ್ಯೂಶನ್ ಟು ಇಸ್ಲಾಮಿಕ್ ಆರ್ಟ್: ಫ್ರಂ ದ ಸೆವೆಂತ್ ಟು ದ ಫಿಫ್ಟಿಂತ್ ಸೆಂಚುರೀಸ್ , ವಿಜಾನ್ ಅಲೀ, ಅಮೇರಿಕನ್ ಯುನಿವ್ ಇನ್ ಕಾರಿಯೊ ಪ್ರೆಸ್, ಡಿಸೆಂಬರ್ ೧೦, ೧೯೯೯, ISBN ೯೭೭-೪೨೪-೪೭೬-೧
  26. ಫ್ರಂ ದಿ ಲಿಟೆರಲ್ ಟು ದಿ ಸ್ಪಿರುಚಿಯಲ್: ದ ಡೆವಲಪ್‌ಮೆಂಟ್ ಆಫ್ ದ ಪ್ರೊಪೆಟ್ ಮಹಮದ್‌ಸ್ (s.a.w) ಪೊರ್ಟೇಯಲ್ ಫ್ರಂ ದ ಥರ್ಟೀಂತ್ ಸೆಂಚುರಿ ಇಲ್ಕನೈಡ್ ಮಿನಿಯೇಚರ್ಸ್ ಟು ಸೆವೆಂಟೀಂತ್ ಸೆಂಚುರಿ ಒಟ್ಟೊಮನ್ ಆರ್ಟ್ಸ್ Archived 2004-12-03 ವೇಬ್ಯಾಕ್ ಮೆಷಿನ್ ನಲ್ಲಿ., ವಿಜನ್ ಅಲಿ, ಇಜೆಒಎಸ್ ( ಎಲೆಕ್ಟ್ರಿಕಲ್ ಜರ್ನಲ್ ಆಫ್ ಓರಿಯಂಟಲ್ ಸ್ಟಡೀಸ್), ಸಂಪುಟ IV, ಪ್ರಚಾಲನ ೭, p. ೧-೨೪, ೨೦೦೧
  27. ರಿಚರ್ಡ್_ಇಲ್ಮನ್‌ನ "ಆಸ್ಕರ್ ವಿಲ್ಡೆ" p ೧೫೯, ಆಲ್ಫ್ರೆಡ್ ಎ ನಾಫ್ ಪ್ರಕಟಿಸಿರುವುದು, INC. ೧೯೮೮
  28. ಇಲ್ಮನ್, p೧೬೪
  29. ಆರ್ಟ್ ಜರ್ನಲ್‌ ನ 'ಕಾಲಿಫೊಬಿಯ ಇನ್ ಕಾಂಟೆಂಪರರಿ ಆರ್ಟ್ಸ್' v. ೬೩ no. ೨ (ಸಮ್ಮರ್ ೨೦೦೪) p. ೨೪-೩೫
  30. ಮಸ್ಸೂಮಿ, ಬ್ರೈನ್, (ed.), ಶಾಕ್ ಟು ಟಾಟ್. ಎಕ್ಸ್‌ಪ್ರೆಶನ್ ಆಫ್ಟರ್ ಡೆಲೆಜ್ ಆ‍ಯ್‌೦ಡ್ ಗುಟ್ಟಾರಿ. ಲಂಡನ್ & NY: ರೂಟ್‌ಲೆಡ್ಜ್, ೨೦೦೨. ಐಎಸ್‌ಬಿಎನ್ ೦-೬೭೪-೪೪೩೦೧-೨
  31. ಡೇನಿಯಲ್ ಬೆರ್ಲೈನ್ (೧೯೨೪-೧೯೭೬): ಬಯೋಗ್ರಾಫಿಕಲ್ ಅನಾಲಿಸಿಸ್. http://www.psych.utoronto.ca/users/furedy/daniel_berlyne.htm
  32. ೧೯೮೪ರ ' ದ ಪೋಸ್ಟ್‌ಮಾಡರ್ನ್ ಕಂಡೀಶನ್ /೧}, ಮಿನ್ನೆಸೊಟ ಆ‍ಯ್‌೦ಡ್ ಮ್ಯಾನ್ಚೆಸ್ಟರ್‌ನಲ್ಲಿನ ಲೈಯೊಟಾರ್ಡ್, ಜೀನ್-ಪ್ರಾಂಕೋಯಿಸ್, ವಾಟ್ ಇಸ್ ಪೋಸ್ಟ್‌ಮಾಡರ್ನಿಸಮ್? .
  33. ಲೈಯೊಟಾರ್ಡ್, ಜೀನ್-ಪ್ರಾಂಕೋಯಿಸ್, ಸ್ಕ್ರಿಪ್ಚರ್ಸ್: ಡಿಫ್ರಾಕ್ಟೆಡ್ ಟ್ರೇಸಸ್ ,ಇನ್ ಥಿಯರಿ, ಕಲ್ಚರ್ ಆ‍ಯ್‌೦ಡ್ ಸೊಸೈಟಿ, ಸಂಪುಟ ೨೧, ಸಂಖ್ಯೆ೧, ೨೦೦೪.
  34. ಫ್ರಾಯ್ಡ್, ಸಿಗ್ಮಂಡ್, "ದ ಅನ್‌ಕ್ಯಾನಿ" (೧೯೧೯). ಸ್ಟಾಂಡರ್ಡ್ ಎಡಿಶನ್ ಆಫ್ ದ ಕಂಪ್ಲೀಟ್ ಸೈಕಾಲಾಗಿಕಲ್ ವರ್ಕ್ ಆಫ್ ಸಿಗ್ಮಂಡ್ ಫ್ರಾಯ್ಡ್‌, ೧೭:೨೩೪-೩೬. ಲಂಡನ್: ದ ಹೊಗರ್ತ್ ಪ್ರೆಸ್
  35. ಮೆರ್ಲೆಯು-ಪೊಂಟೀ, ಮೌರಿಸ್ (೧೯೬೪), "ದ ವಿಸಿಬಲ್ ಆ‍ಯ್‌೦‌ಡ್ ಇನ್‌ವಿಸಿಬಲ್". ನಾರ್ತ್‌ವೆಸ್ಟರ್ನ್ ಯುನಿವರ್ಸಿಟಿ ಪ್ರೆಸ್. ಐಎಸ್‌ಬಿಎನ್ ೦-೬೭೪-೪೪೩೦೧-೨
  36. ಲಕನ್, ಜಾಕ್ಯೂಸ್, ದ ಎತಿಕ್ಸ್ ಆಫ್ ಸೈಕೊಅನಾಲಿಸಿಸ್ ( ಜಾಕ್ಯೂಸ್ ಲಕನ್ ಬುಕ್ VIIನ ಸೆಮಿನಾರ್), NY: ಡಬ್ಲೂ. ಡಬ್ಲೂ. ನರ್ಟನ್ & ಕಂಪನಿ, ೧೯೯೨.
  37. ಎ. ಮೊಲೆಸ್: ಥಿಯರೆ ಡೆ ಎಲ್‌ಇನ್ಫಾರ್ಮೇಶನ್ ಎಟ್ ಪರ್ಸೆಪ್ಶನ್ ಎಸ್ಥೆಟಿಕ್ , ಪ್ಯಾರಿಸ್, ಡೆನೊಯೆಲ್, ೧೯೭೩ (ಇನ್ಫಾರ್ಮೇಶನ್ ಥಿಯರಿ ಮತ್ತು ಸೌಂದರ್ಯದ ಅನುಭವ)
  38. ಎಫ್ ನೇಕ್(೧೯೭೪). ಅಸ್ಥೆಟಿಕ್ ಅಲ್ಸ್ ಇನ್ಫಾರ್ಮೇಶನ್ಸ್‌ವೆರರ್ಬೆಯಿಟುಂಗ್. (ಮಾಹಿತಿಯ ಪರಿಷ್ಕರಣೆಯಾಗಿ ಸೌಂದರ್ಯ ಶಾಸ್ತ್ರ). Grundlagen und Anwendungen der Informatik im Bereich ästhetischer Produktion und Kritik. Springer, ೧೯೭೪, ISBN ೩-೨೧೧-೮೧೨೧೬-೪, ISBN ೯೭೮-೩-೨೧೧-೮೧೨೧೬-೭
  39. ಜೆ. ಚ್ಮಿದುಬೆರ್. ಲೊ-ಕಾಂಪ್ಲೆಕ್ಸಿಟಿ ಆರ್ಟ್. ಲಿಯನಾರ್ಡೊ, ಕಲಾ, ವಿಜ್ಞಾನ ಮತ್ತು ತಂತ್ರಜ್ಞಾನದ ಇಂಟರ್‌ನ್ಯಾಶನಲ್ ಸೊಸೈಟಿಯ ಜರ್ನಲ್, ೩೦(೨):೯೭–೧೦೩, ೧೯೯೭. http://www.jstor.org/pss/೧೫೭೬೪೧೮
  40. ಜೆ. ಚ್ಮಿದುಬೆರ್. ೧೯೯೪ ತರುವಾಯದ ಸುಂದರತೆಯ ಸಿದ್ಧಾಂತದ ಮೇಲಿನ ಕಾಗದಗಳು ಮತ್ತು ಲೊ-ಕಾಂಪ್ಲೆಕ್ಸಿಟಿ ಆರ್ಟ್ : http://www.idsia.ch/~juergen/beauty.html
  41. ಜೆ. ಚ್ಮಿದುಬೆರ್ ಮುಖದ ಸೌಂದರ್ಯ ಮತ್ತು ಪ್ರಾಕ್ಟಲ್ ಜ್ಯಾಮಿತಿ. ಹಕ್ಕುಸ್ವಾಮ್ಯಕ್ಕೊಳಪಟ್ಟ ಆರ್‌ರ್ಚೈವ್: http://cogprints.soton.ac.uk Archived 2013-07-05 ವೇಬ್ಯಾಕ್ ಮೆಷಿನ್ ನಲ್ಲಿ. , ೧೯೯೮
  42. ಜೆ. ಚ್ಮಿದುಬೆರ್ ಸಿಂಪಲ್ ಆಲ್ಗೋರಿಥಮಿಕ್ ಪ್ರಿನ್ಸಿಪಲ್ಸ್ ಆಫ್ ಡಿಸ್ಕವರಿ, ಸಬ್ಜೆಕ್ಟಿವ್ ಬ್ಯೂಟಿ, ಸೆಲೆಕ್ಟಿವ್ ಅಟೆನ್ಷನ್, ಕ್ಯೂರಿಯಾಸಿಟಿ & ಕ್ರಿಯೆಟಿವಿಟಿ. Proc. ೧೦ನೇ ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಡಿಸ್ಕವರಿ ಸೈನ್ಸ್(DS ೨೦೦೭) p. ೨೬-೩೮, ಎಲ್‌ಎನ್‌ಎಐ ೪೭೫೫, ಸ್ಪ್ರಿಂಜರ್, ೨೦೦೭. Also in Proc. ೧೮ನೇ ಇಂಟರ್ನ್ಯಾಶನಲ್ ಕಾನ್ಫರೆನ್ಸ್ ಆನ್ ಅಲ್ಗೋರಿದಮಿಕ್ ಲರ್ನಿಂಗ್ ಥಿಯರಿ (ALT ೨೦೦೭) p. ೩೨, ಎಲ್‌ಎನ್‌ಎಐ ೪೭೫೪, ಸ್ಪ್ರಿಂಜರ್, ೨೦೦೭. ಜಾಯಿಂಟ್ ಇನ್‌ವೈಟೆಡ್ ಲೆಕ್ಚರ್ ಫಾರ್ ಡಿ‌ಎಸ್ ಆ‍ಯ್‌೦ಡ್ ಎಎಲ್‌ಟಿ ೨೦೦೭, ಸೆಂಡೈ, ಜಪಾನ್, ೨೦೦೭. http://arxiv.org/abs/೦೭೦೯.೦೬೭೪
  43. ಜೆ. ಚ್ಮಿದುಬೆರ್ ಕ್ಯೂರಿಯಸ್ ಮಾಡೆಲ್-ಬಿಲ್ಡಿಂಗ್ ಕಂಟ್ರೋಲ್ ಸಿಸ್ಟಮ್ಸ್. ಇಂಟರ್ನ್ಯಾಶನಲ್ ಜಾಯಿಂಟ್ ಕಾನ್ಫರೆನ್ಸ್ ಆನ್ ನ್ಯೂರಲ್ ನೆಟ್‌ವರ್ಕ್ಸ್, ಸಿಂಗಾಪೂರ್, ಸಂಪುಟ ೨, ೧೪೫೮–೧೪೬೩. ಐಇಇಇ ಪ್ರೆಸ್, ೧೯೯೧
  44. ಜೆ. ಚ್ಮಿದುಬೆರ್ ೧೯೯೦ ತರುವಾಯದ ಆರ್ಟಿಫಿಶಿಯಲ್ ಕ್ಯೂರಿಯಾಸಿಟಿಯ ಕಾಗದಗಳು: http://www.idsia.ch/~juergen/interest.html
  45. ಜೆ. ಚ್ಮಿದುಬೆರ್ ಡೆವಲಪ್‌ಮೆಂಟಲ್ ರೊಬೊಟಿಕ್ಸ್, ಆಪ್ಟಿಮಲ್ ಆರ್ಟಿಫಿಶಿಯಲ್ ಕ್ಯೂರಿಯಾಸಿಟಿ, ಕ್ರಿಯೆಟಿವಿಟಿ, ಮ್ಯೂಸಿಕ್, ಮತ್ತು ಫೈನ್ ಆರ್ಟ್‌ಗಳು. ಕನೆಕ್ಷನ್ ಸೈನ್ಸ್, ೧೮(೨):೧೭೩–೧೮೭, ೨೦೦೬
  46. ಜರ್ಮನ್ ಟಿ ವಿ ಷೊನಲ್ಲಿನ ಚ್ಮಿದುಬೆರ್‌ನ ಸೌಂದರ್ಯ ಮತ್ತು ಕುತೂಹಲಗಳು : http://www.br-online.de/bayerisches-fernsehen/faszination-wissen/schoenheit--aesthetik-wahrnehmung-ID1212005092828.xml Archived 2008-06-03 ವೇಬ್ಯಾಕ್ ಮೆಷಿನ್ ನಲ್ಲಿ.
  47. Giannini AJ (1993). "Tangential symbols: using visual symbolization to teach pharmacological principles of drug addiction to international audiences". Journal of clinical pharmacology. 33 (12): 1139–46. PMID 7510314. {{cite journal}}: Unknown parameter |month= ignored (help)
  48. ಡೆವಿ, ಜಾನ್. (೧೯೩೨)ಜೇಮ್ಸ್ ಟಫ್ಟ್ಸ್ ಜೊತೆಗಿನ 'ಎಥಿಕ್ಸ್', . In: ದ ಕಲೆಕ್ಟೆಡ್ ವರ್ಕ್ಸ್ ಆಫ್ ಜಾನ್ ಡೆವಿ, ೧೮೮೨-೧೯೫೩ ಸಂಪಾದನೆ ಜೊ-ಆ‍ಯ್‌ನ್ ಬಾಯ್‌ಸ್ಟನ್: ಕಾರ್ಬನ್ಸ್‌ಡಲೆ: ಸೌತರ್ನ್ ಇಲ್ಲಿನೊಸ್ ಯುನಿವರ್ಸಿಟಿ ಪ್ರೆಸ್. p. ೨೭೫.
  49. ಪುಟ, ಜೇಮ್ಸ್ ಎಸ್. (೨೦೦೮) ಪೀಸ್ ಎಜುಕೇಶನ್: ಎಕ್ಸ್‌ಪ್ಲೊರಿಂಗ್ ಎಥಿಕಲ್ ಆ‍ಯ್‌೦ಡ್ ಫಿಲಾಸಾಫಿಕಲ್ ಫೌಂಡೇಶನ್ಸ್. ಶಾರ್ಲೆಟ್: ಇನ್‌ಫಾರ್ಮೇಶನ್ ಏಜ್ ಪಬ್ಲಿಶಿಂಗ್. ಐಎಸ್‌ಬಿಎನ್ ೯೭೮-೧-೯೩೩೨೮೫-೫೯-೭ [೧] Archived 2008-12-29 ವೇಬ್ಯಾಕ್ ಮೆಷಿನ್ ನಲ್ಲಿ.[೨] Archived 2018-11-04 ವೇಬ್ಯಾಕ್ ಮೆಷಿನ್ ನಲ್ಲಿ.
  50. ವಯ್ ಬ್ಯೂಟಿ ಇಸ್ ಟ್ರುಥ್: ದ ಹಿಸ್ಟರಿ ಆಫ್ ಸಿಮೆಟ್ರಿ, ಐಯಾನ್ ಸ್ಟೆವರ್ಟ್, ೨೦೦೮
  51. "Aesthetic Quality Inference Engine - Instant Impersonal Assessment of Photos". Penn State University. Archived from the original on 9 ಮೇ 2009. Retrieved 21 June 2009.

ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • ಥಿಯೊಡೊರ್ ಡಬ್ಲೂ. ಅಡೊರ್ನೊ, ಎಸ್ಥಟಿಕ್ ಥಿಯರಿ , ಮಿನ್ನೆಅಪೋಲಿಸ್, ಮಿನ್ನೆಸೊಟ ಪ್ರೆಸ್ ವಿಶ್ವವಿದ್ಯಾಲಯ, ೧೯೯೭.
  • ಡೆರಕ್ ಅಲನ್, ಆರ್ಟ್ ಆ‍ಯ್೦ಡ್ ಹ್ಯೂಮನ್ ಅಡ್ವೆಂಚರ್,ಆ‍ಯ್‌೦ಡ್ರಿ ಮೆಲರೌಸ್ ಥಿಯರಿ ಆಫ್ ಆರ್ಟ್ಸ್ , ರೊಡೊಪಿ, ೨೦೦೯
  • ಆ‍ಯ್‌ಗ್ರೊಸ್, ರಾಬರ್ಟ್ ಎಮ್., ಸ್ಟಾನ್ಸಿಯು, ಜಾರ್ಜ್ ಎನ್., ದ ನ್ಯೂ ಸ್ಟೋರಿ ಆಫ್ ಸೈನ್ಸ್: ಮೈಂಡ್ ಆ‍ಯ್‌೦ಡ್ ದ ಯುನಿವರ್ಸ್ , ಲೇಕ್ ಬ್ಲಫ್, ಇಲ್.: ರೆಗ್ನೆರಿ ಗೇಟ್‌ವೇ, c೧೯೮೪. ISBN ೦-೮೯೫೨೬-೮೩೩-೭ ( ಕಲೆ, ವಿಜ್ಞಾನ ಮತ್ತು ಅವುಗಳ ತತ್ವಶಾಸ್ತ್ರಗಳ ಮೇಲೆ ಪ್ರಮುಖವಾದ ವಿಷಯಗಳನ್ನಿ ಹೊಂದಿದೆ)
  • ಜಾನ್ ಬೆಂಡರ್ ಮತ್ತು ಗೆನೆ ಬ್ಲಾಕರ್ ಕಾಂಟೆಪರರಿ ಫಿಲಾಸಫಿ ಆಫ್ ಆರ್ಟ್: ರೀಡಿಂಗ್ಸ್ ಇನ್ ಅನಾಲಿಟಿಕ್ ಎಸ್ಥಟಿಕ್ಸ್ ೧೯೯೩.
  • ಕ್ರಿಸ್ಟೈನ್ ಬುಸಿ-ಗ್ಲುಕ್ಸ್‌ಮನ್ (೨೦೦೩), Esthétique de l'éphémère , ಗಲಿಲೆ. (ಫ್ರೆಂಚ್)
  • ನೊಯೆಲ್ ಕರೊಲ್ (೨೦೦೦), ಥಿಯರೀಸ್ ಆಫ್ ಆರ್ಟ್ಸ್ ಟುಡೇ ,ವಿಸ್‌ಕನ್‌ಸಿನ್ ಪ್ರೆಸ್ ಯುನಿವರ್ಸಿಟಿ.
  • ಬೆನೆಡೆಟ್ಟೊ ಕ್ರೊಸ್ (೧೯೨೨), ಎಸ್ಥಟಿಕ್ ಆ‍ಯ್‌ಸ್ ಸೈನ್ಸ್ ಆಫ್ ಎಕ್ಸ್‌ಪ್ರನ್ ಆ‍ಯ್‌೦ಡ್ ಜನರಲ್ ಲಿಂಗ್ವೆಸ್ಟಿಕ್.
  • ಇ. ಎಸ್. ಡಲ್ಲಾಸ್ (೧೮೬೬), ದ ಗೇ ಸೈನ್ಸ್T , ೨ ಅಧ್ಯಾಯ, ಕಾವ್ಯದ ಸೌಂದರ್ಯದ ಬಗೆಗಿನದು.
  • ಡಂಟೊ, ಆರ್ಥರ್ (೨೦೦೩), ದ ಅಬ್ಯೂಸ್ ಆಫ್ ಬ್ಯೂಟಿ: ಎಸ್ಥಟಿಕ್ಸ್ ಆ‍ಯ್‌೦ಡ್ ದ ಕಾನ್ಸೆಪ್ಟ್ ಆಫ್ ಆರ್ಟ್ , ಬಹಿರಂಗ ನ್ಯಾಯಾಲಯ.
  • ಸ್ಟೆಫನ್ ಡೇವಿಸ್ (೧೯೯೧), ಡೆಫಿನಿಶನ್ಸ್ ಆಫ್ ಆರ್ಟ್ಸ್.
  • ಟೆರ್ರಿ ಈಗಲ್ಟನ್ (೧೯೯೦), ದ ಐಡಿಯಾಲಜಿ ಆಫ್ ಎಸ್ಥಟಿಕ್ಸ್. ಬ್ಲಾಕ್‌ವೆಲ್. ISBN ೦-೧೯-೨೧೧೫೫೦-೬
  • ಫಿಯಾಜಿನ್ ಆ‍ಯ್‌೦ಡ್ ಮೇನಾರ್ಡ್ (೧೯೯೭), ಎಸ್ಥಟಿಕ್ಸ್. ಆಕ್ಸ್‌ಫರ್ಡ್.
  • ಪೆನ್ನಿ ಫ್ಲೊರೆನ್ಸ್ ಆ‍ಯ್‌೦ಡ್ ಫ್ಲೋರೆನ್ಸ್ ನಿಕೊಲ ಫೊಸ್ಟರ್ (eds.) (೨೦೦೦), ಡಿಫೆರೆನ್ಸಿಯಲ್ ಎಸ್ಥಟಿಕ್ಸ್ . ಲಂಡನ್:ಆ‍ಯ್‌ಶ್‌ಗಟೆ. ಐಎಸ್‌ಬಿಎನ್ ೦-೦೬-೦೯೫೩೩೯-X
  • ಬೆರ್‌ಯೇಸ್ ಗೌಟ್ ಮತ್ತು ಡೊಮೆನಿಕ್ ಮ್ಯಾಕ್‌ಐವರ್ ಲೊಪ್ಸ್ /೧} (eds.), "ರೌಲೆಡ್ಜ್ ಕಂಪಾನಿಯನ್ ಟು ಎಸ್ಥಟಿಕ್ಸ". ಲಂಡನ್: ರೌಟ್‌ಲೆಡ್ಜ, ೨೦೦೫. ISBN ೦-೬೮೮-೧೬೮೯೪-೯
  • ಅನ್ನೆಮಾರಿಯೆ ಗೆಥಮನ್-ಸೈಫೆರ್ಟ್ (೧೯೯೫), ಇನ್ಫುರಂಗ್ ಇನ್ ಡೈ ಎಸ್ಥಟಿಕ್ , ಮುನಿಚ್, ಡಬ್ಲೂ. ಫಿಂಕ್.
  • ಡೇವಿಡ್ ಗೊಡ್‌ಬ್ಲಾಟ್ ಮತ್ತು ಲೀ ಬ್ರೌನ್, ed. (೧೯೯೭), ಎಸ್ಥಟಿಕ್ಸ್: ಎ ರೀಡರ್ ಇನ್ ದ ಫಿಲಾಸಫಿ ಆಫ್ ದ ಆರ್ಟ್ಸ.
  • ಗ್ರೀನ್‌ಬರ್ಗ್, ಕ್ಲೆಮೆಂಟ್ (೧೯೬೦), "ಮಾಡೆರ್ನಿಸ್ಟ್ ಪೈಂಟಿಂಗ್", ದ ಕಲೆಕ್ಟೆಡ್ ಎಸ್ಸೇಸ್ ಆ‍ಯ್‌೦ಡ್ ಕ್ರಿಟಿಸಿಸಮ್ ೧೯೫೭-೧೯೬೯ , ಚಿಕಾಗೊ ಪ್ರೆಸ್ ವಿಶ್ವವಿದ್ಯಾಲಯ, ೧೯೯೩, ೮೫-೯೨.
  • ಎವೆಲಿ ಹ್ಯಾಚರ್ (ed.), ಆರ್ಟ್ ಆ‍ಯ್‌ಸ ಕಲ್ಚರ್: ಆ‍ಯ್‌ನ್ ಇಂಟ್ರಡಕ್ಷನ್ ಟು ದ ಆ‍ಯ್‌೦ಥ್ರೊಪಾಲಜಿ ಆಫ್ ಆರ್ಟ್ಸ್. ೧೯೯೯
  • ಗೇಯಾರ್ಕ್ ವಿಲ್‌ಹೆಮ್ ಫ್ರೀಡ್ರಿಚ್ ಹೆಗೆಲ್ (೧೯೭೫), ಎಸ್ಥಟಿಕ್ಸ್. ಲೆಕ್ಚರ್ಸ್ ಆನ್ ಫೈನ್ ಆರ್ಟ್ಸ್ , ಭಾಷಾಂತರಿಸಲಾಗಿದೆ. ಟಿ.ಎಮ್. ನಾಕ್ಸ್, ೨ ಸಂಪುಟಗಳು. ಆಕ್ಸ್‌ಫರ್ಡ್: ಕ್ಲಾರೆನ್ಡನ್ ಪ್ರೆಸ್.
  • ಹಾನ್ಸ್ ಆಫ್‌ಮನ್ ಮತ್ತು ಸಾರಾ ಟ್ ವೀಕ್ಸ್; ಬಾರ್ಟ್‌ಲೆಟ್ ಹೆಚ್ ಹೇಯ್ಸ್; ಆ‍ಯ್‌ಡಿಸನ್ ಗ್ಯಾಲರಿ ಆಫ್ ಅಮೇರಿಕನ್ ಆರ್ಟ್ಸ್ ; ಸರ್ಚ್ ಫಾರ್ ದಿ ರಿಯಲ್, ಆ‍ಯ್‌೦ಡ್ ಅದರ್ ಎಸ್ಸೇಸ್ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ. (ಕೇಂಬ್ರಿಡ್ಜ್, ಮಾಸ್.,ಎಮ್.ಐ.ಟಿ. ಪ್ರೆಸ್, ೧೯೬೭) ಒಸಿಎಲ್‌ಸಿ ೧೧೨೫೮೫೮
  • ಮೈಕೆಲ್ ಆ‍ಯ್‌ನ್ ಹೊಲಿ ಮತ್ತು ಕೈತ್ ಮೊಕ್ಸಿ (eds.), ಆರ್ಟ್ ಹಿಸ್ಟರಿ ಆ‍ಯ್‌೦ಡ್ ವಿಸುಯಲ್ ಸ್ಟಡೀಸ್ . ಯುಲೆ ಯುನಿವರ್ಸಿಟಿ ಪ್ರೆಸ್, ೨೦೦೨. ಐಎಸ್‌ಬಿಎನ್ ೦-೬೭೪-೪೪೩೦೧-೨
  • ಕಾಂಟ್, ಇಮ್ಮ್ಯಾನ್ಯುಯಲ್ (೧೭೯೦), ಕ್ರಿಟಿಕ್ ಆಫ್ ಜಡ್ಜ್‌ಮೆಂಟ್, ವರ್ನರ್ ಎಸ್.ಪ್ಲುಹರ್‌ರಿಂದ ಭಾಷಾಂತರಿಸಲಾಗಿದೆ, ಹಾಕೆಟ್ ಪಬ್ಲಿಶಿಂಗ್ ಕಂಪೆನಿ., ೧೯೮೭.
  • ಕೆಲ್ಲಿ, ಮೈಕೆಲ್ (ಮುಖ್ಯ ಸಂಪಾದಕ) (೧೯೯೮) ಎನ್‌ಸೈಕ್ಲೋಪೀಡಿಯಾ ಅಫ್ ಎಸ್ಥಟಿಕ್ಸ್ . ನ್ಯೂಯಾರ್ಕ್, ಆಕ್ಸ್‌ಫರ್ಡ್, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್. ೪ ಸಂಪುಟ l., pp. XVII-೫೨೧, pp. ೫೫೫, pp. ೫೩೬, pp. ೫೭೨; ೨೨೨೪ ಒಟ್ಟು ಪುಟಗಳು; ೧೦೦ ನಡುವಿನ ಚಿತ್ರಗಳು; ISBN ೯೭೮-೦-೧೯-೫೧೧೩೦೭-೫.

ವಿಶ್ವದ ತತ್ವಶಾಸ್ತ್ರಕ್ಕೆ ಸಂಬಂಧಿಸಿದ, ಇತಿಹಾಸಕ್ಕೆ ಸಂಬಂಧಿಸಿದ, ಸೊಶಿಯೋಲಾಜಿಕಲ್ ಮತ್ತು ಬಯೋಗ್ರಾಫಿಕಲ್ ಆದ ಕಲೆ ಮತ್ತು ಸೌಂದರ್ಯ ಶಾಸ್ತ್ರಕ್ಕೆ ಸಂಬಂಧಿಸಿದ ರೂಪಗಳನ್ನು ಆವರಿಸುತ್ತದೆ.

  • ಅಲೆಕ್ಸಾಂಡರ್ ಜೆ ಕೆಂಟ್, "ಆಸ್ಥೆಟಿಕ್ಸ್: ಎ ಲಾಸ್ಟ್ ಕಾಸ್ ಇನ್ ಕಾರ್ಟೊಗ್ರಾಫಿಕ್ ಥಿಯರಿ?" ದ ಕಾರ್ಟೊಗ್ರಾಫಿಕ್ ಜರ್ನಲ್, ೪೨(೨) ೧೮೨-೮, ೨೦೦೫.
  • ಪೀಟರ್ ಕಿವಿ (ed.), ದ ಬ್ಲಾಕ್‌ವೆಲ್ ಗೈಡ್ ಟು ಎಸ್ಥಟಿಕ್ಸ್. ೨೦೦೪
  • ಕರೊಲಿನ್ ಕೊರ್ಸ್‌ಮೆಯರ್ (ed.), ಎಸ್ಥಟಿಕ್ಸ್: ದ ಬಿಗ್ ಕ್ವೆಶನ್ಸ್. ೧೯೯೮
  • ಲಿಯೊಟಾರ್, ಜೀನ್-ಫ್ರಾಂಕೋಯಿಸ್ (೧೯೭೯), ದ ಪೋಸ್ಟ್‌ಮಾಡರ್ನ್ ಕಂಡಿಶನ್ , ಮ್ಯಾಂಚೆಸ್ಟರ್ ಯುನಿವರ್ಸಿಟಿ ಪ್ರೆಸ್, ೧೯೮೪.
  • ಮೆರ್‌ಲೆಯು-ಪೊಂಟಿ, ಮೌರಿಸ್ (೧೯೬೯), ದ ವಿಸಿಬಲ್ ಆ‍ಯ್‌೦ಡ್ ದ ಇನ್‌ವಿಸಿಬಲ್ , ನಾರ್ತ್ ವೆಸ್ಟರ್ನ್ ಯುನಿವರ್ಸಿಟಿ ಪ್ರೆಸ್.
  • ಮಾರ್ಟಿನ್ಸ್ ನಿಜ್‌ಹಾಫ್, ಎ ಹಿಸ್ಟರಿ ಆಫ್ ಸಿಕ್ಸ್ ಇಡಿಯಾಸ್: ಆ‍ಯ್‌ನ್ ಎಸ್ಸೆ ಇನ್ ಅಸ್ಥೆಟಿಕ್ಸ್ , ದ ಹಾಗ್ಯೂ, ೧೯೮೦.
  • ನೊವಿಟ್ಜ್, ಡೇವಿಡ್ (೧೯೯೨), ದ ಬೌಂಡರೀಸ್ ಆಫ್ ಆರ್ಟ್ಸ್.
  • ಮಾರಿಯೊ ಪೆರ್ನಿಯೊಲ, ದ ಆರ್ಟ್ ಆ‍ಯ್‌೦ಡ್ ಇಟ್ಸ್ ಶ್ಯಾಡೊ ,ಹಗ್ ಜೆ.ಸಿಲ್ವರ್‌ಮನ್‌ರ ಪ್ರಸ್ತಾವನೆ, ಮಸಿಮೊ ವೆರ್ಡಿಚಿಯೊರ ಭಾಷಾಂತರ, ಲಂಡನ್-ನ್ಯೂಯಾರ್ಕ್, ಕಾಂಟಿನಮ್, ೨೦೦೪.
  • ರಾಬರ್ಟ್ ಪಿರ್ಸಿಗ್, Zen and the Art of Motorcycle Maintenance: An Inquiry into Values , ೧೯೭೪, ಪೇಪರ್‌ಪ್ಯಾಕ್, ಅಥವಾ ಹಾರ್ಡ್‌ಬ್ಯಾಕ್, ಮೊದಲನೇ ಆವೃತ್ತಿ ISBN ೦-೬೮೮-೦೦೨೩೦-೭
  • ಗ್ರಿಸೆಲ್ಡ ಪೊಲಾಕ್ , "ಡಸ್ ಆರ್ಟ್ ಥಿಂಕ್?" ಇನ್: ಡನ ಅರ್ನಾಲ್ಡ್ ಮತ್ತು ಮಾರ್ಗರೇಟ್ ಐವರ್ಷನ್ (eds.) ಆರ್ಟ್ ಆ‍ಯ್‌೦ಡ್ ಥಾಟ್. ಆಕ್ಸ್‌ಫರ್ಡ್: ಬೇಸಿಲ್ ಬ್ಲ್ಯಾಕ್‌ವೆಲ್, ೨೦೦೩. ೧೨೯-೧೭೪. ISBN ೦-೧೯-೨೧೧೫೫೦-೬
  • [18] ^ ಗ್ರಿಸೆಲ್ಡ ಪೊಲೊಕ್, ವಾಸ್ತವವಾದ ಸ್ತ್ರೀ ಸಮಾನತಾವಾದಿ ಸಂಗ್ರಹಾಲಯದಲ್ಲಿ ಸೆಣಸಾಟಗಳು: ಸಮಯ, ಸ್ಥಳ ಮತ್ತು ಒಟ್ಟುಗೂಡಿಕೆಗಳು. ರೌಟ್‌ಲೆಡ್ಜ್, ೨೦೦೭. ISBN ೦-೬೮೮-೧೬೮೯೪-೯
  • ಜಾರ್ಜ್ ಸಂತಯಣ (೧೮೯೬) , ದ ಸೆನ್ಸ್ ಆಫ್ ಬ್ಯೂಟಿ. ಬೀಯಿಂಗ್ ದ ಔಟ್‌ಲೈನ್ಸ್ ಆಫ್ ಅಸ್ಥೆಟಿಕ್ ಥಿಯರಿ. ನ್ಯೂ ಯಾರ್ಕ್, ಮಾಡರ್ನ್ ಲೈಬ್ರರಿ, ೧೯೫೫.
  • ಎಲೈನ್ ಸ್ಕೇರೀ, ಆನ್ ಬ್ಯೂಟಿ ಆ‍ಯ್‌೦ಡ್ ಬೀಯಿಂಗ್ ಜಸ್ಟ್. ಪ್ರಿನ್ಸ್‌ಟನ್, ೨೦೦೧. ISBN ೦-೬೮೮-೧೬೮೯೪-೯
  • ಫ್ರೀಡ್ರಿಚ್ ಶಿಲ್ಲರ್, (೧೭೯೫), ಆನ್ ದಿ ಎಸ್ಥಟಿಕ್ ಎಜುಕೇಶನ್ ಆಫ್ ಮ್ಯಾನ್ . ಡೊವರ್ ಪಬ್ಲಿಕೇಶನ್ಸ್, ೨೦೦೪.
  • ಅಲಾನ್ ಸಿಂಗರ್ & ಅಲೆನ್ ಡುನ್ (eds.), ಲಿಟರರಿ ಎಸ್ಥಟಿಕ್ಸ್: ಎ ರೀಡರ್. ಬ್ಲಾಕ್‌ವೆಲ್ ಪಬ್ಲಿಶಿಂಗ್ ಲಿಮಿಟೆಡ್, ೨೦೦೦. ISBN ೯೭೮-೦-೮೦೪೬-೮೦೭೫-೨
  • Władysław Tatarkiewicz, ಹಿಸ್ತರಿ ಆಫ್ ಎಸ್ಥಟಿಕ್ಸ್ , ೩ ಸಂಪುಟಗಳು. (೧–೨, ೧೯೭೦; ೩, ೧೯೭೪), ದ ಹಾಗ್ಯೂ, ಮೌಟನ್.
  • ಲಿಯೊ ಟಾಲ್‌ಸ್ಟಾಯ್, ವಾಟ್ ಇಸ್ ಆರ್ಟ್? , ಪೆಂಗ್ವಿನ್ ಕ್ಲಾಸಿಕ್ಸ್, ೧೯೯೫.
  • ಲಂಡನ್ ಫಿಲಾಸಫಿ ಸ್ಟಡೀ ಗೈಡ್ Archived 2009-09-23 ವೇಬ್ಯಾಕ್ ಮೆಷಿನ್ ನಲ್ಲಿ. ವಿಧ್ಯಾರ್ಥಿಗಳ ನಿಕಟತೆಯನ್ನು ಆಧರಿಸಿ ಯವುದನ್ನು ಓದಬೇಕೆಂದು ಹಲವು ಸಲಹೆಗಳನ್ನು ನೀಡುತ್ತದೆ: ಸೌಂದರ್ಯ ಶಾಸ್ತ್ರ Archived 2011-06-23 ವೇಬ್ಯಾಕ್ ಮೆಷಿನ್ ನಲ್ಲಿ.
  • ಜಾನ್ ಎಮ್. ವಾಲಂಟೈನ್, ಬಿಗಿನಿಂಗ್ ಎಸ್ಥಟಿಕ್ಸ್: ಆ‍ಯ್‌ನ್ ಇಂಟ್ರಡಕ್ಷನ್ ಟು ದ ಫಿಲಾಸಫಿ ಆಫ್ ಆರ್ಟ್. ಮ್ಯಾಕ್‌ಗ್ರಾ-ಹಿಲ್, ೨೦೦೬. ISBN ೯೭೮-೦-೮೦೪೬-೮೦೭೫-೨
  • ಥಾಮಸ್ ವಾರ್ಟೆನ್‌ಬರ್ಗ್, ದ ನೇಚರ್ ಆಫ್ ಆರ್ಟ್ಸ್. (೨೦೦೬)
  • ಜಾನ್ ವೈಟ್‌ಹೆಡ್, ಗ್ರಾಸ್ಪಿಂಗ್ ಫಾರ್ ದ ವಿಂಡ್. ೨೦೦೧.
  • ಲುಡ್‌ವಿಂಗ್ ವಿಟ್‌ಗೆನ್‌ಸ್ಟೈನ್ , ಲೆಕ್ಚರ್ಸ್ ಆನ್ ಎಸ್ಥಟಿಕ್ಸ್, ಸಕಾಲಜಿ ಆ‍ಯ್‌೦ಡ್ ರೆಲೀಜಿಯಸ್ ಬಿಲೀಫ್ , ಆಕ್ಸ್‌ಫರ್ಡ್, ಬ್ಲಾಕ್‌ವೆಲ್, ೧೯೬೬.
  • ರಿಚರ್ಡ್ ವೊಲ್‌ಹೈಮ್, ಆರ್ಟ್ಸ್ ಆ‍ಯ್‌೦ಡ್ ಇಟ್ಸ್ ಆಬ್ಜೆಕ್ಟ್ಸ್ , ೨ನೇ ಆವೃತ್ತಿ, ೧೯೮೦, ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ISBN ೦೫೨೧ ೨೯೭೦೬ ೦

ಬಾಹ್ಯ ಕೊಂಡಿಗಳು

ಬದಲಾಯಿಸಿ