ಸೋಹನ್ ಹಲ್ವಾ ದಕ್ಷಿಣ ಏಷ್ಯಾದಲ್ಲಿನ ಒಂದು ಸಾಂಪ್ರದಾಯಿಕ ಮುಘಲಾಯಿ[] ಸಿಹಿತಿನಿಸಾಗಿದೆ. ಇದು ದಟ್ಟವಾದ, ಸಿಹಿಯಾದ ಮಿಠಾಯಿ ಅಥವಾ ಹಲ್ವಾದ ಬಗೆಯಾಗಿದೆ. ಮೊಘಲರ ಕಾಲದಿಂದಲೂ ಘೀವಾಲಾ ಹಲ್ವಾ ಸೋಹನ್ ಹಲ್ವಾ ಎಂದು ಜನಪ್ರಿಯವಾಗಿದೆ.

ಸೋಹನ್ ಹಲ್ವಾ
ವೃತ್ತಾಕಾರದ ಬಿಲ್ಲೆಯ ರೂಪದಲ್ಲಿರುವ ಸೋಹನ್ ಹಲ್ವಾದ ಒಂದು ಭೇದ
ಮೂಲ
ಮೂಲ ಸ್ಥಳಪಶ್ಚಿಮ ಏಷ್ಯಾ ಮತ್ತು ಭಾರತೀಯ ಉಪಖಂಡ
ವಿವರಗಳು
ಸೇವನಾ ಸಮಯಸಿಹಿತಿನಿಸು
ಮುಖ್ಯ ಘಟಕಾಂಶ(ಗಳು)ಮುಸುಕಿನ ಜೋಳದ ಹಿಟ್ಟು, ಸಕ್ಕರೆ, ಹಾಲು, ನೀರು
ಪ್ರಭೇದಗಳುಬಾದಾಮಿ
ಇತರೆ ವಿವರಗಳುಹಲ್ವಾ
ಸರೈಕಿ ಸೋಹನ್ ಹಲ್ವಾ

ಇದನ್ನು ನೀರು, ಸಕ್ಕರೆ, ಹಾಲು ಮತ್ತು ಮುಸುಕಿನ ಜೋಳದ ಹಿಟ್ಟಿನ ಮಿಶ್ರಣವನ್ನು ಗಟ್ಟಿಯಾಗುವವರೆಗೆ ಕುದಿಸಿ ತಯಾರಿಸಲಾಗುತ್ತದೆ. ಕೇಸರಿಯನ್ನು ಸುವಾಸನೆಗಾಗಿ ಬಳಸಲಾಗುತ್ತದೆ. ಬಾಣಲೆಗೆ ಅಂಟಿಕೊಳ್ಳದಂತೆ ತಡೆಯಲು ತುಪ್ಪವನ್ನು ಬಳಸಲಾಗುತ್ತದೆ. ಬಾದಾಮಿ, ಪಿಸ್ತಾ ಮತ್ತು ಏಲಕ್ಕಿ ಬೀಜಗಳನ್ನು ಸೇರಿಸಲಾಗುತ್ತದೆ. ಭಾರತೀಯ ಉಪಖಂಡದಲ್ಲಿನ ಇತರ ಹಲ್ವಾ ತಿನಿಸುಗಳಿಗಿಂತ ಭಿನ್ನವಾಗಿ, ಇದು ಘನವಾಗಿದ್ದು ಇದರ ಮಧ್ಯಪ್ರಾಚ್ಯ ಪ್ರತಿರೂಪಗಳನ್ನು ಹೋಲುತ್ತದೆ.

ವಾಣಿಜ್ಯ ಉತ್ಪಾದನೆ

ಬದಲಾಯಿಸಿ

ಸೋಹನ್ ಹಲ್ವಾವನ್ನು ದಶಕಗಳಿಂದ ಸಾಂಪ್ರದಾಯಿಕ ಮಿಠಾಯಿಗಾರರು ವಾಣಿಜ್ಯಿಕವಾಗಿ ಉತ್ಪಾದಿಸುತ್ತಿದ್ದಾರೆ. ಇದು ಭಿದುರ ಮತ್ತು ಕ್ಯಾರಮೆಲೈಸ್ ಆಗಿದ್ದು, ಸಾಮಾನ್ಯವಾಗಿ 5-6 ಮಿಮೀ ದಪ್ಪದ ದುಂಡು ಬಿಲ್ಲೆಗಳಾಗಿ ಅಥವಾ ಚೌಕವಾದ ತುತ್ತು ಗಾತ್ರದ ತುಂಡುಗಳಾಗಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಸಂಕೀರ್ಣ ವಿನ್ಯಾಸದ ತವರದ ಉರುಳೆಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇತರ ಪೊಟ್ಟಣಗಳು ಸಹ ಸಾಮಾನ್ಯವಾಗಿವೆ.[]

ಉಲ್ಲೇಖಗಳು

ಬದಲಾಯಿಸಿ

[]

  1. "Not Butter Chicken, Delhi Was Once Renowned For Its Sohan Halwa, Brief History Of The Sweet". Slurrp. Retrieved 2022-03-27. The Mughals, who were of Persian descent, made this [Sohan] Halwa popular in India as well.
  2. Ramazani, Nesta (1997). Persian Cooking: A Table Of Exotic Delights. Ibex Publishers, Inc. p. 296. ISBN 978-0-936347-77-6.
  3. Usman, Nizam Ud Deen. "Multani Sohan Halwa". Multani Sohan Halwa. Archived from the original on 2023-05-17. Retrieved 2023-05-17.