ಮಿಠಾಯಿ ತಯಾರಿಕೆ ಎನ್ನುವುದು ಸಕ್ಕರೆ ಮತ್ತು ಕಾರ್ಬೋಹೈಡ್ರೆಟ್‍ಗಳ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ತಯಾರಿಸುವ ಕಲೆಯಾಗಿದೆ. ನಿಖರವಾದ ವ್ಯಾಖ್ಯಾನಗಳು ಸಿಗುವುದು ಕಷ್ಟ. ಸಾಮಾನ್ಯವಾಗಿ ಮಿಠಾಯಿಗಳನ್ನು ವಿಶಾಲವಾದ ಮತ್ತು ಸ್ವಲ್ಪಮಟ್ಟಿಗೆ ಅತಿಕ್ರಮಿಸುವ ವರ್ಗಗಳಾಗಿ ವಿಂಗಡಿಸಲಾಗಿದೆ. 1)ಬೇಕರಿ ಮಿಠಾಯಿ, 2)ಸಕ್ಕರೆ ಮಿಠಾಯಿಗಳು

ಬೇಕರಿ ಮಿಠಾಯಿಗಳು ಸಂಪಾದಿಸಿ

ಬೇಕರಿ ಮಿಠಾಯಿಗಳು ಹಿಟ್ಟು ಮಿಠಾಯಿಗಳೆಂದು ಕರೆಯಲ್ಪಡುತ್ತದೆ. ಮುಖ್ಯವಾಗಿ ಸಿಹಿ ಪೇಸ್ಟ್ರಿ, ಕೇಕ್ ಮತ್ತು ಅಂತಹುದೇ ಬೇಯಿಸಿದ ಸರಕುಗಳನ್ನು ಒಳಗೊಂಡಿರುತ್ತದೆ.

ಸಕ್ಕರೆ ಸಿಹಿತಿಂಡಿಗಳು ಸಂಪಾದಿಸಿ

ಸಕ್ಕರೆ ಸಿಹಿತಿಂಡಿಗಳಲ್ಲಿ ಮಿಠಾಯಿ(ಬ್ರಿಟೀಷ್ ಇಂಗ್ಲೀಷ್‍ನಲ್ಲಿ ಸ್ವೀಟ್ಸ್)ಗಳನ್ನು ಒಳಗೊಂಡಿರುತ್ತದೆ. ಚಾಕಲೇಟ್‍ಗಳು, ಚಿವಿಂಗಮ್, ಗುಳ್ಳೆಗಮ್, ಮತ್ತು ಇತರೆ ಮಿಠಾಯಿಗಳನ್ನು ತಯಾರಿಸಲು ಪ್ರಾಥಮಿಕವಾಗಿ ಸಕ್ಕರೆಯನ್ನು ಬಳಸಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಚಾಕಲೇಟ್ ಮಿಠಾಯಿಗಳು (ಚಾಕಲೇಟ್‍ನಿಂದ ತಯಾರಿಸಿದ ಸಿಹಿತಿನಿಸುಗಳು) ಪ್ರತ್ಯೇಕ ವರ್ಗವಾಗಿ ಪರಿಗಣಿಸಲ್ಪಡುತ್ತವೆ. ಅವುಗಳು ಸಕ್ಕರೆ ಮುಕ್ತ ಆವೃತ್ತಿಗಳಾಗಿವೆ. ಸಿಹಿ ಪದಾರ್ಥಗಳಾದ ಕ್ಯಾಂಡಿ(ಯುಎಸ್ ಮತ್ತು ಕೆನಡಾ) ಸಿಹಿತಿಂಡಿಗಳು(ಯುಕೆ ಮತ್ತು ಐರ್ಲೆಂಡ್) ಮತ್ತು ಲೋಲ್ಲೀಸ್(ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್) ಸಕ್ಕರೆ ಮಿಠಾಯಿ ಸಾಮಾನ್ಯ ಪದಾರ್ಥವಾಗಿದೆ. ಮಿಠಾಯಿ ಉದ್ಯಮವು ವಿಶೇಷ ತರಬೇತಿ ಶಾಲೆಗಳು ಮತ್ತು ವ್ಯಾಪಕ ಐತಿಹಾಸಿಕ ದಾಖಲೆಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಮಿಠಾಯಿ ಪ್ರಾಚಿನ ಕಾಲಕ್ಕೆ ಹೋಗುತ್ತದೆ ಮತ್ತು ಮಧ್ಯಯುಗದ ಮೂಲಕ ಆಧುನಿಕ ಯುಗದವರೆಗಿನವರು ತಿನ್ನುತ್ತಾರೆ.

ಇತಿಹಾಸ ಸಂಪಾದಿಸಿ

ಪ್ರಾಚೀನ ಪಾಶ್ಚಿಮಾತ್ಯ ಜಗತ್ತಿನಲ್ಲಿ ಸಕ್ಕರೆ ಸುಲಭವಾಗಿ ಲಭ್ಯವಾಗುವ ಮೊದಲು, ಮಿಠಾಯಿ ಜೇನುತುಪ್ಪವನ್ನು ಆಧರಿಸಿತ್ತು. ಪ್ರಾಚೀನ ಚೀನಾ, ಪ್ರಾಚೀನ ಭಾರತ, ಪ್ರಾಚೀನ ಈಜಿಪ್ಟ್, ಪುರಾತನ ಗ್ರೀಸ್ ಮತ್ತು ಪುರಾತನ ರೋಮನ್‍ನಲ್ಲಿ ಕೋಟ್ ಹಣ್ಣುಗಳು ಮತ್ತು ಹೂವುಗಳನ್ನು ಸಂರಕ್ಷಿಸಲು ಅಥವಾ ಸಿಹಿ ಪದಾರ್ಥಗಳನ್ನು ತಯಾರಿಸಲು ಜೇನುತುಪ್ಪವನ್ನು ಬಳಸಲಾಗುತ್ತಿತ್ತು. ಕ್ರಿಸ್ತಪೂರ್ವ ನಾಲ್ಕು ಮತ್ತು ಆರನೇ ಶತಮಾನಗಳ ನಡುವೆ ಪರ್ಷಿಯನ್ನರು, ಗ್ರೀಕರು ಜೇನುನೊಣಗಳಿಲ್ಲದೇ ಜೇನು ತುಪ್ಪ ಉತ್ಪಾದಿಸುವ ರೀಡ್ಸ್ ವಿಧಾನವನ್ನು ಅನುಸರಿಸಿದರು. ಇವರು ಭಾರತದ ಉಪಖಂಡದೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಕಬ್ಬು ಭಾರತ ಉಷ್ಣವಲಯದ ಮತ್ತು ಎಷ್ಯಾ ಖಂಡದ ಬೆಳೆಯಾಗಿದೆ. ಗ್ರೀಕರು ಸಕ್ಕರೆ ಮತ್ತು ಕಬ್ಬು ಕೃಷಿಯನ್ನು ಅಳವಡಿಸಿಕೊಂಡರು ಮತ್ತು ನಂತರ ಅದರ ವ್ಯಾಪ್ತಿಯನ್ನು ಹರಡಿದರು. ಯುರೋಪಿನಲ್ಲಿ ಸಕ್ಕರೆ ಬಳಕೆಯ ಆರಂಭಿಕ ಇತಿಹಾಸದಲ್ಲಿ, ಸಕ್ಕರೆಯನ್ನು ಮನೆ ಔಷಧಿ ಉತ್ಪನ್ನವಾಗಿ ಬಳಸಲಾಗುತ್ತಿತ್ತು. ಮಧ್ಯಕಾಲೀನ ಐರೋಪ್ಯ ವೈಧ್ಯರು, ಅರಬ್ಬರು ಮತ್ತು ಬೈಜಾಂಟೈನ್ ಗ್ರೀಕರಿಂದ ಸಕ್ಕರೆಯನ್ನು ವೈಧ್ಯಕೀಯ ಕ್ಷೇತ್ರದಲ್ಲಿ ಉಪಯೋಗಿಸುವುದನ್ನು ಕಲಿತರು. ಅರೇಬಿಕ್ ಅಲ್ ಫನಾಡ್ ಅಥವಾ ಅಲ್ ಪನಾಡ್ ಎಂದು ಕರೆಯಲ್ಪಡುವ ಸಕ್ಕರೆಯ ತಿರುಚಿದ ತುಂಡುಗಳು ತುರ್ತು ಪರಿಸ್ಥಿತಿ ಮತ್ತು ಜ್ವರಗಳಿಗೆ ಮಧ್ಯಪ್ರಾಚ್ಯದ ಪರಿಹಾರವಾಗಿ ಬಳಸಲಾಗುತ್ತಿತ್ತು. ಇವುಗಳು ಸಾಮಾನ್ಯವಾಗಿ ಇಗ್ಲೆಂಡಿನಲ್ಲಿ ಅಲ್ಪೆನಿಕ್ಸ್ ಅಥವಾ ಪೆನಿಡಿಯಾ , ಪೆನಿಡ್ಸ್, ಪೆನ್ನೆಟ್ ಅಥವಾ ಪ್ಯಾನ್ ಸಕ್ಕರೆ ಎಂದು ಕರೆಯಲ್ಪಡುತ್ತವೆಂದು ತಿಳಿದುಬಂದವು. ಸಕ್ಕರೆಯ ಔಷಧೀಯವಲ್ಲದ ಅನ್ವಯಗಳನ್ನು ಅಭಿವೃದ್ಧಿಪಡಿಸಿದಂತೆ, ಮಿಠಾಯಿ ತಯಾರಕ ಅಥವಾ ಮಿಠಾಯಿಗಾರನು ಕ್ರಮೆಣ ಪ್ರತ್ಯೇಕ ವ್ಯಾಪಾರವಾಗಿ ಹೊರಹೊಮ್ಮಿದನು. ಮಧ್ಯಕಾಲೀನ ಯುಗದ ಅವಧಿಯಲ್ಲಿ ಬೇರು, ಹಣ್ಣು ಅಥವಾ ಹೂವುಗಳಿಂದ ತಯಾರಿಸಿದ ಎಲ್ಲಾ ವಿಧದ ಸಿಹಿಪದಾರ್ಥಗಳಿಗೆ ಕಾಂಫೆಕ್ಸ್ ಅಥವಾ ಕಮ್ಪಿಟ್ ಸಾಮಾನ್ಯ ಪದಗಳಾಗಿವೆ. 16ನೇ ಶತಮಾನದ ಹೊತ್ತಿಗೆ ಸಕ್ಕರೆಯ ಒಂದು ಸಮ್ಮಿಶ್ರಣವು ಹೆಚ್ಚು ನಿರ್ದಿಷ್ಟವಾಗಿ ಹಣ್ಣಿನ ಬೀಜಗಳನ್ನು ಸಕ್ಕರೆ ಪಾಕದೊಂದಿಗೆ ಬೆರೆಸಿ ಮಿಠಾಯಿ ತಯಾರಿಸಲಾಗುತ್ತಿತ್ತು. ಹಣ್ಣುಗಳನ್ನು ಒಳಗೊಂಡಿರುವ ಕ್ಯಾಂಡಿ ಉತ್ಪಾದನೆ ಆರಂಭಿಕ ಮಿಠಾಯಿಗಾರರ ಒಂದು ಪ್ರಮುಖ ಕೌಶಲ್ಯ ಆಗಿತ್ತು. ಸಾಮಾನ್ಯವಾಗಿ 16 ಮತ್ತು 17ನೇ ಶತಮಾನದಲ್ಲಿ ಇಗ್ಲೆಂಡ್‍ನ್ನು ಮಿಠಾಯಿ ತಯಾರಕ ಪ್ರದೇಶವೆಂದು ಹೇಳಲಾಗುತ್ತಿತ್ತು. ಆದಾಗ್ಯೂ ಅವರ ಮೂಲ ಔಷಧೀಯ ಉದ್ದೇಶಗಳನ್ನು ಪ್ರತಿಬಿಂಬಿಸುವ ಮೂಲಕ ವಿತರಣಾಲಯಗಳಲ್ಲಿ ಮತ್ತು ಪಾಕಶಾಸ್ತ್ರದ ಪಠ್ಯಗಳಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎನ್ನುವುದರ ಬಗ್ಗೆಯೂ ಸಹ ತಯಾರಿ ನಡೆಸಲಾಗುತ್ತಿತ್ತು. ಔಷಧ ವ್ಯಾಪಾರಿಯ ಆರಂಭಿಕ ಮಧ್ಯಕಾಲೀನ ಲ್ಯಾಟಿನ್ ಹೆಸರು ಮಿಠಾಯಿಯಾಗಿತ್ತು. ಈ ತರಹದ ಸಕ್ಕರೆ ಕೆಲಸದಲ್ಲಿ ಈ ಎರಡು ವ್ಯವಹಾರಗಳ ಚಟುವಟಿಕೆಗಳು ಅತಿಕ್ರಮಿಸಲ್ಪಟ್ಟವು ಮತ್ತು ಇದರಿಂದ ಮಿಠಾಯಿ ಪದವು ಜನ್ಮತಾಳಿತು. 1847ರಲ್ಲಿ ಕ್ಯಾಂಡಿ ಬಾರ್ ಅನ್ನು ಜೋಸೆಫ್ ಫ್ರೈ ಕಂಡುಹಿಡಿದನು. ಕರಗಿದ ಕೋಕೋ ಬೀಜವನ್ನು ಸಕ್ಕರೆ ಜೊತೆಗೆ ಕೊಕೊ ಪುಡಿಗೆ ಬೆರೆಸುವ ವಿಧಾನವನ್ನು ಪತ್ತೆಹಚ್ಚಲು ಒಂದು ವಿಧಾನವನ್ನು ಕಂಡುಹಿಡಿದನು.[೧]

ಸಿಹಿತಿಂಡಿಗಳ ಕಾರ್ಯಕರ್ತ ಸಂಪಾದಿಸಿ

ಸಾಮಾನ್ಯವಾಗಿ ಮನೆ ಅಡುಗೆಗಾಗಿ ಬಳಸುವ ಸಿಹಿಕಾರಕ ಪದಾರ್ಥವೆಂದರೆ ಟೇಬಲ್ ಸಕ್ಕರೆ, ಇದು ರಾಸಾಯನಿಕವಾಗಿ ಗ್ಲೂಕೋಸ್ ಮತ್ತು ಫ್ರಕ್ಟೋಸ್‍ಗಳನ್ನು ಹೊಂದಿರುವ ಡಿಸ್ಚಾರ್ರೈಡ್ ಆಗಿದೆ. ಸುಕ್ರೋಸ್‍ನ ಹೈಡ್ರೊಲೈಸಿಸ್ ವಿಲೋಮ ಸಕ್ಕರೆ ಎಂಬ ಮಿಶ್ರಣವನ್ನು ನೀಡುತ್ತದೆ. ಇದು ಸಿಹಿಯಾಗಿರುತ್ತದೆ ಮತ್ತು ಇದು ಸಾಮಾನ್ಯ ವಾಣಿಜ್ಯ ಪದಾರ್ಥವಾಗಿದೆ. ಅಂತಿಮವಾಗಿ, ಹೈಡ್ರೊಲೈಸಿಫೋಫ್ ಪಿಷ್ಟದಿಂದ ಪಡೆಯಲಾದ ವಿವಿಧ ಸಿರಪ್‍ಗಳಿಂದ ವಾಣಿಜ್ಯ ಪದಾರ್ಥಗಳಾದ ಮಿಠಾಯಿಗಳನ್ನು ಸಿಹಿಗೊಳಿಸಲಾಗುತ್ತದೆ. ಈ ಸಿಹಿಕಾರಕಗಳು ಎಲ್ಲಾ ರೀತಿಯ ಕಾರ್ನ್‍ಸಿರಪ್‍ಗಳನ್ನು ಒಳಗೊಂಡಿವೆ.

ಬೇಕರಿ ಮಿಠಾಯಿಗಳು ಸಂಪಾದಿಸಿ

ಬೇಕರಿ ಮಿಠಾಯಿಗಳಲ್ಲಿ ಬೇಯಿಸಿದ ಸಿಹಿ ಸರಕುಗಳು ಸೇರಿವೆ, ವಿಶೇಷವಾಗಿ ಸಿಹಿ ಕೋರ್ಸ್‍ಗೆ ಇದನ್ನು ನೀಡಲಾಗುತ್ತಿತ್ತು. ಬೇಕರಿ ಮಿಠಾಯಿಗಳು ಸಿಹಿ ಪದಾರ್ಥಗಳಾಗಿವೆ, ಹಿಟ್ಟು ಬೇಕರಿ ಮಿಠಾಯಿಗಳ ಮುಖ್ಯ ಘಟಕಾಂಶವಾಗಿದೆ ಮತ್ತು ಅದನ್ನು ಬೇಯಿಸಲಾಗುತ್ತದೆ. ಬೇಕರಿ ಮಿಠಾಯಿಯನ್ನು ಕೇಕ್, ಸಿಹಿ ಪೇಸ್ಟ್ರಿ, ಡೊನುಟ್ಸ್ ಸ್ಕಾನ್‍ಗಳನ್ನು ಮತ್ತು ಕುಕಿಗಳು ಎಂದು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ. ಮಧ್ಯಪ್ರಾಚ್ಯ ಮತ್ತು ಏಷ್ಯಾದಲ್ಲಿ ಹಿಟ್ಟು ಆಧಾರಿತ ಮಿಠಾಯಿಗಳು ಹೆಚ್ಚಾಗಿವೆ.

ಬೇಕರಿ ಮಿಠಾಯಿ ವಿಧಗಳು ಸಂಪಾದಿಸಿ

ಕೇಕ್ಸ್ ಸಂಪಾದಿಸಿ

ಇದು ಸ್ವಲ್ಪ ಬ್ರೆಡ್ ತರಹದ ವಿನ್ಯಾಸವನ್ನು ಹೊಂದಿದ್ದು, ಶತಮಾನಗಳ ಹಳೆಯ ಸ್ಟೋಲನ್(ಹಣ್ಣಿನ ಕೇಕ್) ಅಥವಾ ಹಳೆಯ ರಾಜ ಕೇಕ್‍ನಂತಹ ಹಿಂದಿನ ಶ್ರೀಮಂತ ಈಸ್ಟ್ ಬ್ರೆಡ್‍ಗಳಾಗಿವೆ. ವಿವಿಧ ಶೈಲಿಗಳಲ್ಲಿ ಅಲಂಕೃತವಾಗಿ ತಯಾರಿಸಲಾಗುತ್ತದೆ. ಪ್ರಮುಖ ವಿಭಾಗಗಳಲ್ಲಿ ಬೆಣ್ಣೆ ಕೇಕ್, ಟೋರ್ಟೆಸ್ ಮತ್ತು ಫೋಮ್ ಕೇಕ್‍ಗಳು ಸೇರಿವೆ. ಚೀಸ್ ಕೇಕ್, ಬಾಸ್ಟನ್ ಕ್ರೀಮ್ ಪೈನಂತಹ ಕೆಲವು ಸಿಹಿಭಕ್ಷ್ಯಗಳು ಕೇಕ್‍ಗಳಲ್ಲದಿದ್ದರೂ ತಮ್ಮ ಹೆಸರುಗಳಲ್ಲಿ ಕೇಕ್ ಎನ್ನುವ ಪದವನ್ನು ಸೇರಿಸಿ ಕೇಕ್ ಎಂದು ಕರೆಯಲ್ಪಡುತ್ತಿವೆ.[೨]

ಪೇಸ್ಟ್ರಿ ಸಂಪಾದಿಸಿ

ಇದು ಬೇಯಿಸಿದ ಸರಕುಗಳ ಒಂದು ದೊಡ್ಡ ಮತ್ತು ವೈವಿಧ್ಯಮಯ ವರ್ಗವಾಗಿದೆ. ಉತ್ಪನ್ನದ ಅಡಿಪಾಯವಾಗಿ ಬಳಸಲಾಗುವ ಹಿಟ್ಟಿನಿಂದ ಸಂಯೋಜಿಸಲ್ಪಟ್ಟಿದೆ. ಈ ಹಿಟ್ಟು ಯಾವಾಗಲೂ ಸಿಹಿಯಾಗಿರುವುದಿಲ್ಲ. ಆದರೆ ಸಕ್ಕರೆ, ಹಣ್ಣು, ಚಾಕಲೇಟ್, ಕೆನೆ ಅಥವಾ ಇತರ ಸಿಹಿತಿಂಡಿಗಳಿಂದ ಇದು ಸಿಹಿಯಾಗಬಹುದು. ಪೇಸ್ಟ್ರಿಗಳನ್ನು ಅಲಂಕರಿಸಬಹುದು ಅಥವಾ ಅವುಗಳು ಸರಳವಾಗಿರಬಹುದು.[೩]

ಕುಕೀಸ್ ಸಂಪಾದಿಸಿ

ಇದು ಸಣ್ಣ ಸಿಹಿ ಬೇಯಿಸಿದ ಕುಕಿಗಳಾಗಿ ಹುಟ್ಟಿಕೊಂಡಿವೆ. ಕೆಲವು ಸಾಂಪ್ರದಾಯಿಕ ಕುಕೀಸ್‍ಗಳು ಮೃದುವಾಗಿರುತ್ತದೆ. ಇವುಗಳು ಕೇಕ್ ಮಾದರಿಯ ವಿನ್ಯಾಸವನ್ನು ಹೊಂದಿವೆ.

ಸಕ್ಕರೆ ಮಿಠಾಯಿ ಸಂಪಾದಿಸಿ

ಸಕ್ಕರೆ ಪದಾರ್ಥಗಳು ಸಿಹಿ, ಸಕ್ಕರೆ ಆಧಾರಿತ ಆಹಾರಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಸಾಮಾನ್ಯವಾಗಿ ಲಘು ಆಹಾರವಾಗಿ ಸೇವಿಸಲಾಗುತ್ತದೆ. ಇದರಲ್ಲಿ ಸಕ್ಕರೆ ಮಿಠಾಯಿಗಳು, ಚಾಕಲೇಟ್‍ಗಳು, ಸಕ್ಕರೆ ಹಣ್ಣುಗಳು ಮತ್ತು ಬೀಜಗಳು, ಚಿವಿಂಗಮ್ ಮತ್ತು ಐಸ್‍ಕ್ರೀಮ್‍ಗಳನ್ನು ಒಳಗೊಂಡಿದೆ. ಕೆಲವು ಸಂದರ್ಭಗಳಲ್ಲಿ ಸಕ್ಕರೆ ಮುಕ್ತತೆಗಳ ಸಕ್ಕರೆ ಮುಕ್ತ ಆವೃತ್ತಿಗಳು ಚಾಕಲೇಟ್ ಮಿಠಾಯಿಗಳು ಒಂದು ಪ್ರತ್ಯೇಕ ವರ್ಗವಾಗಿ ಪರಿಗಣಿಸಲ್ಪಡುತ್ತವೆ. ಇಂಗ್ಲೀಷ್‍ನ ವಿವಿಧ ಉಪಭಾಷೆಗಳು ಸಕ್ಕರೆ ಮಿಠಾಯಿಗಳಿಗಾಗಿ ಪ್ರಾದೇಶಿಕ ಪದಗಳನ್ನು ಬಳಸುತ್ತವೆ.

ಸಾಂಪ್ರದಾಯಿಕ ಪಾತ್ರಗಳು ಸಂಪಾದಿಸಿ

ಬೇಕರಿ ಮತ್ತು ಸಕ್ಕರೆ ಮಿಠಾಯಿಗಳೆರಡನ್ನು ಅತಿಥಿಗಳಿಗೆ ಆತಿಥ್ಯ ನೀಡಲು ಬಳಸಲಾಗುತ್ತದೆ. ವಿವಾಹಗಳಲ್ಲಿ, ಹುಟ್ಟುಹಬ್ಬಗಳಲ್ಲಿ, ವಿಶೇಷ ಆಚರಣೆಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ.ಪ್ರವಾಸಿಗರು ಸಾಮಾನ್ಯವಾಗಿ ತಮ್ಮ ಪ್ರಯಾಣದ ಭಾಗವಾಗಿ ಮಿಠಾಯಿಯನ್ನು ತಿನ್ನುತ್ತಾರೆ. ಸಕ್ಕರೆ ಆಹಾರಗಳಲ್ಲಿ ತೊಡಗಿಕೊಳ್ಳುವುದು ಶ್ರೀಮಂತರಿಗೆ ವಿಶೇಷ ಸತ್ಕಾರದಂತೆ ಕಾಣುತ್ತದೆ. ಇದರಿಂದ ಸ್ಥಳೀಯ ವಿಶೇಷತೆಗಳನ್ನು ಆಯ್ಕೆ ಮಾಡಲು ಇದು ಜನಪ್ರೀಯವಾಗಿದೆ. ಉದಾಹರಣೆಗೆ ವಿಯೆನ್ನಾಗೆ ಭೇಟಿ ನಿಡುವವರು ಸಚರ್ಟೊರ್ಟೆ ಮತ್ತು ಯುಕೆನಲ್ಲಿ ಕಡಲತೀರದ ರೆಸಾರ್ಟ್‍ಗಳಿಗೆ ಭೇಟಿ ನೀಡುವವರು ಬ್ಲ್ಯಾಕ್ಪೂಲ್ ರಾಕ್ ಕ್ಯಾಂಡಿಯನ್ನು ತಿನ್ನುತ್ತಾರೆ.

ಉಲ್ಲೇಖ ಸಂಪಾದಿಸಿ

.

  1. https://en.wikipedia.org/wiki/Confectionery
  2. https://www.allrecipes.com/recipes/276/desserts/cakes/
  3. https://www.bissingers.com/category/Bissingers-Chocolates
"https://kn.wikipedia.org/w/index.php?title=ಮಿಠಾಯಿ&oldid=909903" ಇಂದ ಪಡೆಯಲ್ಪಟ್ಟಿದೆ