Soymida febrifuga
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಸ್ಯಾಪಿಂಡೇಲ್ಸ್
ಕುಟುಂಬ: ಮೀಲಿಯೇಸೀ
ಕುಲ: ಸೊಯಿಮಿಡಾ
A.Juss.
ಪ್ರಜಾತಿ:
S. febrifuga
Binomial name
Soymida febrifuga
(Roxb.) A.Juss.

ಸೋಮೆಮರ ಮೀಲಿಯೇಸೀ ಕುಟುಂಬದ ಸೊಯಿಮಿಡಾ ಫೆಬ್ರಿಪ್ಯೂಗ ಪ್ರಭೇದದ ನೇರ ಕಾಂಡದ ಮರ. ಇದು ಭಾರತೀಯ ಉಪಖಂಡ ಮತ್ತು ಮ್ಯಾನ್ಮಾರ್‌ನಲ್ಲಿ ಕಂಡುಬರುತ್ತದೆ.[೧]

ಸಸ್ಯ ವಿವರಣೆ ಬದಲಾಯಿಸಿ

ಎಲೆ 3 ರಿಂದ 6 ಉಪಪರ್ಣಗಳನ್ನೊಳಗೊಂಡ ಸಂಯುಕ್ತ ಮಾದರಿಯದು. ಬಂಜರು ಪ್ರದೇಶಗಳಲ್ಲಿಯೂ ಸುಣ್ಣಕಲ್ಲಿನ ಮಣ್ಣುಗಳಲ್ಲಿಯೂ ಜಂಬೆ ಮತ್ತು ಕರಲು ಮಣ್ಣಿನ ಜಾಗಗಳಲ್ಲಿಯೂ ಶುಷ್ಕತೆಯಿರುವ ಕಾಡುಗಳಲ್ಲಿಯೂ ಈ ಮರ ಬೆಳೆಯಬಲ್ಲದು. ಶುಷ್ಕತೆ ಮತ್ತು ಬೆಂಕಿಯ ಹಾನಿಯನ್ನು ತಕ್ಕಷ್ಟು ತಡೆಯಬಲ್ಲದು. ಸ್ವಾಭಾವಿಕ ಪುನರುತ್ಪತ್ತಿ ಅಲ್ಲಲ್ಲಿ ಕಂಡುಬಂದು, ಬೇರು ಸಸಿಗಳೂ ಸಾಮಾನ್ಯವಾಗಿರುತ್ತವೆ.

ಉಪಯೋಗಗಳು ಬದಲಾಯಿಸಿ

ತೊಗಟೆಯಿಂದ ಅಂಟೂ ಕೆಂಪುನಾರೂ ಒದಗುವುವು. ತೊಗಟೆ ಚರ್ಮ ಹದ ಮಾಡಲೂ ಔಷಧಿಗೂ ಉಪಯುಕ್ತ.

ಚೌಬೀನೆ ಮನೆಕಟ್ಟಡಗಳಿಗೆ, ಅಂದವಾದ ಪೀಠೋಪಕರಣಗಳಿಗೆ, ಕೆತ್ತನೆ ಕೆಲಸಗಳಿಗೆ, ಒನಕೆ ತಯಾರಿಕೆ ಇತ್ಯಾದಿಗಳಿಗೆ ಒದಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. "Soymida A.Juss. | Plants of the World Online | Kew Science". Plants of the World Online (in ಇಂಗ್ಲಿಷ್). Retrieved 19 May 2021.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸೋಮೆಮರ&oldid=1170928" ಇಂದ ಪಡೆಯಲ್ಪಟ್ಟಿದೆ