ಬಂಜರು ಭೂಮಿ
ಬಂಜರು ಭೂಮಿ (ಪಾಳುಭೂಮಿ) ಎಂದರೆ ಸಸ್ಯ ಬೆಳವಣಿಗೆಯು ವಿರಳ, ಕುಂಠಿತವಾಗಿರಬಹುದಾದ, ಮತ್ತು/ಅಥವಾ ಸೀಮಿತ ಜೀವವೈವಿಧ್ಯವನ್ನು ಹೊಂದಿರಬಹುದಾದ ಭೂಪ್ರದೇಶ. ವಿಷಕಾರಿ ಅಥವಾ ಬರಡು ಮಣ್ಣು, ಜೋರಾದ ಗಾಳಿ, ಕರಾವಳಿ ಲವಣ ಸಿಂಪಡಿಕೆ ಮತ್ತು ಹವಾಮಾನ ಸನ್ನಿವೇಶಗಳಂತಹ ಪಾರಿಸರಿಕ ಪರಿಸ್ಥಿತಿಗಳು ಹಲವುವೇಳೆ ಕಳಪೆ ಸಸ್ಯ ಬೆಳವಣಿಗೆ ಮತ್ತು ವಿಕಸನದಲ್ಲಿ ಪ್ರಧಾನ ಅಂಶಗಳಾಗಿರುತ್ತವೆ. ಬಂಜರು ಭೂಮಿಗಳನ್ನು ಒಂದು ನಿರ್ದಿಷ್ಟ ಪ್ರದೇಶದ ವಾಯುಗುಣ, ಭೂವೈಜ್ಞಾನಿಕ ಲಕ್ಷಣಗಳು ಮತ್ತು ಭೌಗೋಳಿಕ ಸ್ಥಾನವನ್ನು ಆಧರಿಸಿ ವರ್ಗೀಕರಿಸಬಹುದು.[೧] ಪೈನ್ ಬಂಜರುಭೂಮಿಗಳು, ಕರಾವಳಿ ಬಂಜರುಭೂಮಿಗಳು ಮತ್ತು ಸರ್ಪೆಂಟೈನ್ ಬಂಜರುಭೂಮಿಗಳು ಬಂಜರು ಭೂಮಿಗಳ ಕೆಲವು ಹೆಚ್ಚು ವಿಶಿಷ್ಟ ಪ್ರಕಾರಗಳಾಗಿವೆ. ಇವನ್ನು ವಿಜ್ಞಾನಿಗಳು ಅತ್ಯಂತ ಸಾಮಾನ್ಯವಾಗಿ ಸಂಶೋಧಿಸುತ್ತಾರೆ. ಹಲವುವೇಳೆ "ಕುರುಚಲು ಭೂಮಿಗಳು" ಎಂದು ಕರೆಯಲ್ಪಡುವ ಬಂಜರು ಭೂಮಿಗಳು ಅದ್ವಿತೀಯ ಜೀವವೈವಿಧ್ಯ ಮತ್ತು ಜೀವವರ್ಗೀಕರಣ ಸಂಯೋಜನೆಗೆ ಶ್ರೇಷ್ಠವಾದ ಪರಿಸರಗಳಾಗಬಲ್ಲವು.
ಉಲ್ಲೇಖಗಳು
ಬದಲಾಯಿಸಿ- ↑ Oberndorfer, E. C.; Lundholm, J. T. (2008). "Species richness, abundance, rarity and environmental gradients in coastal barren vegetation". Biodiversity and Conservation. 18 (6): 1523–1553. doi:10.1007/s10531-008-9539-5.