ಸುನೇತ್ರ ಗುಪ್ತ ೧೫ ಮಾರ್ಚ್ ೧೯೬೫ ರಂದು ಕಲ್ಕತ್ತಾದಲ್ಲಿ ಜನಿಸಿದರು. ಇವರು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಸೈದ್ಧಾಂತಿಕ ರೋಗದ ಪ್ರೊಫೆಸರಾಗಿದ್ದಾರೆ.[] ಮಲೇರಿಯಾ, ಎಚ್‌.ಐ.ವಿ., ಇನ್ಫ್ಲುಯೆನ್ಸ ಮತ್ತು ಇತರ ಸಾಂಕ್ರಾಮಿಕ ರೋಗ ಹರಡಬಲ್ಲ ಎಜೆಂಟ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಇವರು ತಮ್ಮ ಮೊದಲ ಕೃತಿಯನ್ನು ಬೆಂಗಾಳದಲ್ಲಿ ರಚಿಸಿದ್ದಾರೆ. ಪ್ರಾಧ್ಯಾಪಕ ಆಡ್ರಿಯನ್ ವಿ.ಎಸ್ ಹಿಲ್ ವಿವಾಹವಾಗಿದ್ದಾರೆ.[]

ಸುನೇತ್ರ ಗುಪ್ತ
ಜನನ1965 (ವಯಸ್ಸು 59–60)
ಕಲ್ಕತ್ತಾ
ಸಂಸ್ಥೆಗಳುಆಕ್ಸ್ಫರ್ಡ್ ವಿಶ್ವವಿದ್ಯಾಲಯ
ಲಂಡನ್ ವಿಶ್ವವಿದ್ಯಾಲಯದ
ಪ್ರಿನ್ಸ್ಟನ್ ವಿಶ್ವವಿದ್ಯಾಲಯ
ಮಹಾಪ್ರಬಂಧಹೆಟ್ರೋಜೆನೆಟಿ ಅಂಡ್ ದಿ ಟ್ರಾಂಸ್ಮಿಶಂನ್ ಡೈನಾಮಿಕ್ಸ್ ಆಫ್ ಇನ್‌ಫೆಕ್ಷಿಸ್ ಡಿಸೀಸಸ್ (೧೯೯೨)
ಗಮನಾರ್ಹ ಪ್ರಶಸ್ತಿಗಳುರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಜಾಲತಾಣ
www.sunetragupta.com
www.zoo.ox.ac.uk/people/view/gupta_s.htm

ಸುನೇತ್ರ ಗುಪ್ತರವರ ಬಾಲ್ಯ ಮತ್ತು ಅವರ ಕುಟುಂಬದ ವ್ಯವಹಾರಗಳು ಇವರ ಭವಿಷ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅವರ ಬಾಲ್ಯದ ದಿನಗಳನ್ನು ಇಥಿಯೋಪಿಯ, ಜಾಂಬಿಯ, ಇಂಗ್ಲೆಂಡ್ ದೇಶಗಳಲ್ಲಿ ಕಳೆದರು.[] ಇವರಿಗೆ ೧೧ ವರ್ಷವಿದ್ದಾಗ ಕುಟುಂಬದವರು ಮತ್ತೆ ಕಲ್ಕತ್ತಾಗೆ ಮರಳಿದರು. ಇಲ್ಲಿ ಈ ನಗರವು ಅವಳಿಗೆ ಬರೆಯುವುದಕ್ಕೆ ಪ್ರೇರೆಪಿಸಿತು.

ತಂದೆ ದ್ರುಬ ಗುಪ್ತ (೧೯೩೪-೨೦೦೪) ಇವರ ಜೀವನದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದರು. ಸುನೇತ್ರಳ ಪ್ರತಿಯೊಂದು ಚಿಂತನೆಗಳ ಮೇಲೆ ಆಳವಾದ ಪ್ರಭಾವವನ್ನು ಹೊಂದಿದ್ದರು. ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಆಫ್ರಿಕಾದ ಇತಿಹಾಸವನ್ನು ಉಪನ್ಯಾಸ ಮಾಡುತ್ತಿದ್ದರು. ಅಲ್ಲದೆ ಬರೆಯುವುದು ಮತ್ತು ಸಿನಿಮಾ ಬಗ್ಗೆ ಭಾಷಣ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದರು. ಅವರು ಎಷ್ಟೋ ವಿಷಯಗಳ ಬಗ್ಗೆ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಪ್ರಬಂಧಗಳನ್ನು ಬರೆಯುತ್ತಿದ್ದರು. ವಿಮರ್ಶೆಯಲ್ಲಿ - ಹೇಗೆ ಕಲೆ ಸ್ವೀಕರಿಸಬೇಕು ಎಂಬುದರಲ್ಲಿ ಸುನೇತ್ರಳಿಗೆ ಶಿಕ್ಷಣ ನೀಡಿದರು. ಇವರಿಗೆ ಸುನೇತ್ರ ವಿಜ್ಞಾನಿಯಾಗುವುದರಲ್ಲಿ ಸ್ವಲ್ಪವೂ ಆಸಕ್ತಿಯಿರಲಿಲ್ಲ.

ಶಿಕ್ಷಣ

ಬದಲಾಯಿಸಿ
  • ಜೀವಶಾಸ್ತ್ರದ ತರಬೇತಿ
  • ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಸ್ನಾತಕ ಪದವಿ []
  • ಲಂಡನ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ.[]

ವಿಜ್ಞಾನದಲ್ಲಿ ಸಾಧನೆಗಳು

ಬದಲಾಯಿಸಿ

ಗುಪ್ತಾ ಪ್ರಸ್ತುತ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರದ ಇಲಾಖೆಯಲ್ಲಿ ಸೈದ್ಧಾಂತಿಕ ರೋಗದ ಪ್ರೊಫೆಸರಾಗಿ ಕೆಲಸ ಮಾಡುತಿದ್ದಾರೆ. ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್‌ನ ಯುರೋಪಿಯನ್ ಮಂಡಳಿಯಲ್ಲಿ ಸಲಹಾಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.[]

ಝೂಲಾಜಿಕಲ್ ಸೊಸೈಟಿ ಆಫ್ ಲಂಡನ್‌ನಿಂದ ವೈಜ್ಞಾನಿಕ ಪದಕ ನೀಡಲಾಗಿದೆ ಮತ್ತು ವೈಜ್ಞಾನಿಕ ಸಂಶೋಧನೆಗೆ ರಾಯಲ್ ಸೊಸೈಟಿ ರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ ದೊರಕಿದೆ. ಅವರ ಕಾದಂಬರಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ದಕ್ಷಿಣ ಆರ್ಟ್ಸ್ ಸಾಹಿತ್ಯ ಪ್ರಶಸ್ತಿ, ಕ್ರಾಸ್ವರ್ಡ್ ಪ್ರಶಸ್ತಿಗೆ ಮತ್ತು ಆರೆಂಜ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಜುಲೈ ೨೦೧೩ರಲ್ಲಿ ನಡೆದ ರಾಯಲ್ ಸೊಸೈಟಿಯ ಬೇಸಿಗೆ ವಿಜ್ಞಾನ ಪ್ರದರ್ಶನದ ಸಂದರ್ಭದಲ್ಲಿ ಪ್ರಮುಖ ಮಹಿಳಾ ವಿಜ್ಞಾನಿಗಳಾದ ಮೇಡಮ್ ಕ್ಯೂರಿ ಮುಂತಾದವರ ಭಾವಚಿತ್ರಗಳ ಜೊತೆಗೆ ಗುಪ್ತರವರ ಭಾವಚಿತ್ರವು ಪ್ರದರ್ಶನಗೊಂಡಿತ್ತು.[]

ಬರಹಗಾರರಾಗಿ ಸಾಧನೆ

ಬದಲಾಯಿಸಿ

ಗುಪ್ತಾ ತನ್ನ ಮೊದಲ ಕೃತಿಗಯನ್ನು ಬಂಗಾಳಿಯಲ್ಲಿ ಬರೆದಿದ್ದಾರೆ. ಅನುವಾದಕರಾಗಿ ರವೀಂದ್ರನಾಥ ಠಾಗೋರ್ ಕಾವ್ಯಗಳನ್ನು ಅನುವಾದಿಸಿದ್ದಾರೆ. ಇವರು ಇಂಗ್ಲೀಷ್ ಭಾಷೆಯಲ್ಲಿ ಹಲವಾರು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅಕ್ಟೋಬರ್ ೨೦೧೨ರಲ್ಲಿ ಇವರ ೫ನೇ ಕಾದಂಬರಿಯಾದ ಸೋ ಗುಡ್ ಇನ್ ಬ್ಲ್ಯಾಕ್ ಡಿಎಸ್ಸಿ ಪ್ರಶಸ್ತಿ ದಕ್ಷಿಣ ಏಷ್ಯಾ ಸಾಹಿತ್ಯಕ್ಕೆ ಆಯ್ಕೆಯಾಗಿತ್ತು.

ಕಾದಂಬರಿಗಳು

ಬದಲಾಯಿಸಿ
  • ಮೆಮೊರೀಸ್ ಆಫ್ ರೇನ್, ಪೆಂಗ್ವಿನ್ ಬುಕ್ಸ್ ಇಂಡಿಯ, ನವ ದೆಹಲಿ (೧೯೯೨)[]
  • ದಿ ಗ್ಲ್ಯಾಸ್‌ಬ್ಲೊವರ್ಸ್ ಬ್ರೆಥ್ (೧೯೯೩)
  • ಮೂನ್ಲೈಟ್ ಇನ್ ಮರ್ಜಿಪಾನ್(೧೯೯೫)
  • ಎ ಸಿನ್ ಆಫ್ ಕಲ್ಲರ್(೧೯೯೯)
  • ಸೋ ಗುಡ್ ಇನ್ ಬ್ಲ್ಯಾಕ್(೨೦೦೯)

ಸಣ್ಣ ಕಥೆಗಳು

ಬದಲಾಯಿಸಿ
  • ಸ್ವೀಟ್ ಲವ್

ಪ್ರಬಂಧಗಳು

ಬದಲಾಯಿಸಿ
  • ದಿ ವಿಕ್‌ಟಿಮ್ ಆಫ್ ಟ್ರೂತ್[]
  • ಕಲ್ಕತ್ತ
  • ದಿ ರಿಲೇಶನ್ ಬಿಟ್ವೀನ್ ಲ್ಯಾಂಗ್ವೇಜ್ ಅಂಡ್ ಥಾಟ್
  • ಇಯರ್ ಟೂ ಆರ್ ಸೆಮೆಟೆರೀಸ್, ಫೇಮ್ ಆಂಡ್ ಸ್ನೋ
  • ಆವಾಯ್‌ಡಿಂಗ್ ಅಮ್‌ಬಿಗ್ವಿಟಿ: ಮ್ಯಥೆಮ್ಯಾಟಿಕ್ಸ್ ಅಂದ್ ದಿ ಇಲ್ಲೂಶನ್ ಆಫ್ ಸರ್ಟೆನಿಟಿ

ಪ್ರಶಸ್ತಿಗಳು

ಬದಲಾಯಿಸಿ
  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೭)[೧೦]
  • ಕ್ರಾಸ್ವರ್ಡ್ ಪ್ರಶಸ್ತಿ(೧೯೯೯)
  • ದಕ್ಷಿಣ ಏಷ್ಯಾ ಸಾಹಿತ್ಯ ಪ್ರಶಸ್ತಿ ಆಯ್ಕೆ(೨೦೦೦)
  • ರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ(೨೦೦೯)[೧೧]
  • ಆರೆಂಜ್ ಪ್ರಶಸ್ತಿಗೆ ಆಯ್ಕೆ(೨೦೦೦)

ಉಲ್ಲೇಖಗಳು

ಬದಲಾಯಿಸಿ
  1. "ಸುನೇತ್ರ ಗುಪ್ತ".
  2. "ಆಡ್ರಿಯನ್ ವಿ.ಎಸ್ ಹಿಲ್".
  3. "ಸುನೇತ್ರ ಗುಪ್ತರ ಬಾಲ್ಯ ಜೀವನ".
  4. "ಪ್ರಿನ್ಸ್ಟನ್ ವಿಶ್ವವಿದ್ಯಾಲಯದ". Archived from the original on 2016-04-04. Retrieved 2016-03-12.
  5. "ಹೆಟ್ರೋಜೆನೆಟಿ ಅಂಡ್ ದಿ ಟ್ರಾಂಸ್ಮಿಶಂನ್ ಡೈನಾಮಿಕ್ಸ್ ಆಫ್ ಇನ್‌ಫೆಕ್ಷಿಸ್ ಡಿಸೀಸಸ್". Archived from the original on 2016-01-29. Retrieved 2016-03-12.
  6. "ಪ್ರಿನ್ಸ್ಟನ್ ಯೂನಿವರ್ಸಿಟಿ ಪ್ರೆಸ್‌". Archived from the original on 2011-06-08. Retrieved 2016-03-12.
  7. "ಭಾರತೀಯ ಮಹಿಳಾ ವಿಜ್ಞಾನಿಗಳ ಭಾವಚಿತ್ರ ಬ್ರಿಟನ್‌ನಲ್ಲಿ ಪ್ರದರ್ಶನಕ್ಕೆ".
  8. "ಸುನೇತ್ರ ಗುಪ್ತರ ಕಾದಂಬರಿಗಳು".
  9. "ಸುನೇತ್ರ ಗುಪ್ತ ಬರೆದಿರುವ ಪ್ರಬಂಧಗಳು".
  10. "ಆಂಗ್ಲಾ ಭಾಷೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ". Archived from the original on 2016-03-04. Retrieved 2016-03-12.
  11. "ರೋಸಲಿಂಡ್ ಫ್ರ್ಯಾಂಕ್ಲಿನ್ ಪ್ರಶಸ್ತಿ ವಿಜೇತರ ಪಟ್ಟಿ".