ಸುನಿಲ್ ಭಾರತಿ ಮಿತ್ತಲ್

(ಸುನಿಲ್ ಭಾರತಿ ಮಿಟ್ಟಲ್ ಇಂದ ಪುನರ್ನಿರ್ದೇಶಿತ)

ಸುನಿಲ್ ಭಾರತಿ ಮಿತ್ತಲ್ ದೇವನಾಗರಿ: सुनील भारती मित्तल, ಪಂಜಾಬಿ: ਸੁਨੀਲ ਭਾਰਤੀ ਮਿੱਤਲ, ೧೯೫೭ ಅಕ್ಟೋಬರ್ ೨೩ರಂದು ಜನಿಸಿದರು) . ಅವರು ಭಾರತದ ದೂರಸಂಪರ್ಕ ಉದ್ಯಮಿ, ಸಮಾಜ ಸೇವಕ ಮತ್ತು ಭಾರತಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕ ಅಧ್ಯಕ್ಷ ಮತ್ತು ಸಮೂಹದ CEO. The US$೭.೨ ಶತಕೋಟಿ ವಹಿವಾಟಿನ ಕಂಪನಿಯು ಭಾರತದ ಅತೀ ದೊಡ್ಡ GSM-ಆಧಾರದ ಮೊಬೈಲ್ ಫೋನ್ ‌ಸೇವೆಯನ್ನು ನಿರ್ವಹಿಸುತ್ತದೆ ಮತ್ತು ವಿಶ್ವದ ಐದನೇ ದೊಡ್ಡ ಮೊಬೈಲ್‌ ಕಂಪನಿಯಾಗಿದ್ದು, ಏಷ್ಯಾ ಮತ್ತು ಆಫ್ರಿಕಾದ ೧೯ರಾಷ್ಟ್ರಗಳ ೧೯೦ ದಶಲಕ್ಷ ಗ್ರಾಹಕರನ್ನು ಹೊಂದಿದೆ. ಸುನಿಲ್ ಭಾರತಿ ಮಿತ್ತಲ್ ಅವರು ಸತ್ ಪಾಲ್(ಮಾಜಿ ಲೋಕಸಭಾ ಸದಸ್ಯರು)ಮತ್ತು ಲಲಿತಾ ಅವರ ಪುತ್ರರಾಗಿದ್ದಾರೆ.[]

Sunil Bharti Mittal
Sunil Bharti Mittal in 2024
Born (1957-10-23) ೨೩ ಅಕ್ಟೋಬರ್ ೧೯೫೭ (ವಯಸ್ಸು ೬೭)
NationalityIndian
Alma materPunjab University[]
Occupation(s)Chairman and Group CEO of
Bharti Enterprises
SpouseNyna[]
Children3[]
Websitewww.airtel.in
Notes

೨೦೦೭ರಲ್ಲಿ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು.[]

ಆರಂಭಿಕ ಜೀವನ

ಬದಲಾಯಿಸಿ

ಸುನಿಲ್ ಮಿತ್ತಲ್ ಅವರು ಭಾರತದ ಪಂಜಾಬಿನ ಲೂಧಿಯಾನದಲ್ಲಿ ಜನಿಸಿದರು. ಅವರ ತಂದೆ ಸತ್ ಪಾಲ್ ಮಿತ್ತಲ್ ಲೂಧಿಯಾನ ಕ್ಷೇತ್ರದಿಂದ ಸಂಸತ್ತಿನ ಸದಸ್ಯ(M.P)ರಾಗಿದ್ದರು. ಅವರು ಮೊದಲಿಗೆ ಮುಸ್ಸೋರಿ[] ಯ ವೈನ್‌ಬರ್ಗ್ ಅಲ್ಲೆನ್ ಶಾಲೆಗೆ ಸೇರಿದರು. ನಂತರ ಗ್ವಾಲಿಯರ್ ಸಿಂಧಿಯ ಶಾಲೆಯಲ್ಲಿ ಅಭ್ಯಸಿಸಿದರು ಮತ್ತು ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದಿಂದ ೧೯೭೬ರಲ್ಲಿ ಕಲೆ ಮತ್ತು ವಿಜ್ಞಾನದ ಪದವಿಯನ್ನು ಗಳಿಸಿದರು.[] ಅವರ ತಂದೆ ೧೯೯೨ರಲ್ಲಿ ಹೃದಯಾಘಾತದಿಂದ ನಿಧನರಾದರು.[]

ಉದ್ಯಮದ ಸಾಹಸಗಳು

ಬದಲಾಯಿಸಿ

ಪ್ರಥಮ ತಲೆಮಾರಿನ ಉದ್ಯಮಿಯಾದ ಮಿತ್ತಲ್ ಅವರು ತಮ್ಮ ಪ್ರಥಮ ಉದ್ದಿಮೆಯನ್ನು ೧೮ನೇ ವಯಸ್ಸಿನಲ್ಲಿದ್ದಾಗ[] ೧೯೭೬ರ ಏಪ್ರಿಲ್‌ನಲ್ಲಿ ಆರಂಭಿಸಿದರು. ಅವರ ತಂದೆಯಿಂದ ಸಾಲವಾಗಿ ಪಡೆದ ೨೦ ,೦೦೦(U$೫೦೦) ರುಪಾಯಿಗಳ ಬಂಡವಾಳದೊಂದಿಗೆ ಈ ಉದ್ಯಮವನ್ನು ಆರಂಭಿಸಿದರು. ಅವರ ಪ್ರಥಮ ಉದ್ಯಮವು ಸ್ಥಳೀಯ ಬೈಸಿಕಲ್ ಉತ್ಪಾದಕರಿಗೆ ಚಾಲಕದಂಡಗಳನ್ನು(ಕ್ರಾಂಕ್‌ಶಾಫ್ಟ್)ತಯಾರಿಸುವುದಾಗಿತ್ತು.[]

೧೯೮೦ರಲ್ಲಿ ಅವರು ತಮ್ಮ ಸಹೋದರರಾದ ರಾಕೇಶ್, ರಾಜನ್ ಜತೆಗೆ ಭಾರತಿ ಓವರ್‌ಸೀಸ್ ಟ್ರೇಡಿಂಗ್ ಕಾರ್ಪೊರೇಷನ್(ಭಾರತಿ ಸಾಗರೋತ್ತರ ವ್ಯಾಪಾರ ನಿಗಮ)ಎಂದು ಹೆಸರಾದ ಆಮದು ಸಂಸ್ಥೆಯನ್ನು ಆರಂಭಿಸಿದರು.[] ಅವರು ತಮ್ಮ ಬೈಸಿಕಲ್ ಭಾಗಗಳನ್ನು ಮತ್ತು ನೂಲುಹುರಿಯ ಕಾರ್ಖಾನೆಗಳನ್ನು ಮಾರಾಟ ಮಾಡಿ ಮುಂಬೈಗೆ ಸ್ಥಳಾಂತರಗೊಂಡರು.[]

೧೯೮೧ರಲ್ಲಿ ಅವರು ಪಂಜಾಬಿನ ರಫ್ತು ಕಂಪೆನಿಗಳಿಂದ ಆಮದು ಪರವಾನಗಿಗಳನ್ನು ಖರೀದಿಸಿದರು.[] ನಂತರ ಅವರು ಜಪಾನ್‌ನಿಂದ ಸುಜುಕಿ ಮೋಟರ್ಸ್‌ನ ಪೋರ್ಟಬಲ್(ಸಾಗಿಸಬಹುದಾದ) ವಿದ್ಯುತ್ ಚಾಲಿತ ಸಾವಿರಾರು ಜನರೇಟರ್‌ಗಳನ್ನು ಆಮದು ಮಾಡಿಕೊಂಡರು. ಆಗಿನ ಭಾರತ ಸರ್ಕಾರವು ಜನರೇಟರ್‌ಗಳ ಆಮದನ್ನು ದಿಢೀರಾಗಿ ನಿಷೇಧಿಸಿತು.ಭಾರತದಲ್ಲಿ ಜನರೇಟರ್‌ಗಳ ತಯಾರಿಕೆಗೆ ಕೇವಲ ಎರಡು ಪರವಾನಗಿಗಳನ್ನು ಎರಡು ಕಂಪೆನಿಗಳಿಗೆ ಅದು ನೀಡಿತು.

೧೯೮೪ರಲ್ಲಿ ಅವರು ಪುಶ್ ಬಟನ್(ಒತ್ತುವ ಗುಂಡಿ)ನ ದೂರವಾಣಿಗಳ ಜೋಡಣೆಯನ್ನು ಭಾರತದಲ್ಲಿ ಆರಂಭಿಸಿದರು.[] ಅದಕ್ಕೆ ಮುಂಚೆ ಅವನ್ನು ತೈವಾನ್ ಕಂಪನಿ ಕಿಂಗ್ಟೆಲ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದರು. ಆಗ ದೇಶದಲ್ಲಿ ಬಳಸುತ್ತಿದ್ದ ಹಳೆದ ವಿನ್ಯಾಸದ ದೊಡ್ಡ ಗಾತ್ರದ ಸುತ್ತುವ ಡಯಲ್‌ನ ಪೋನ್‌‍ಗಳ ಬದಲಿಗೆ ಇವನ್ನು ಆಮದು ಮಾಡುತ್ತಿದ್ದರು. ಭಾರತಿ ಟೆಲಿಕಾಂ ಲಿಮಿಟೆಡ್( (BTL) ರಚನೆಯಾಗಿ, ಜರ್ಮನಿಯ ಸೈಮನ್ಸ್ AGಜತೆ ವಿದ್ಯುನ್ಮಾನ ಪುಶ್ ಬಟನ್(ಒತ್ತುವ ಗುಂಡಿ)ಯ ದೂರವಾಣಿಗಳ ತಯಾರಿಕೆಗೆ ತಾಂತ್ರಿಕ ಸಹಯೋಗ ಮಾಡಿಕೊಂಡಿತು. ೧೯೯೦ರ ದಶಕದ ಆದಿಯಲ್ಲಿ ಮಿತ್ತಲ್‌‌ ಅವರು ಫ್ಯಾಕ್ಸ್ ಯಂತ್ರಗಳನ್ನು ಕಾರ್ಡ್‌ಲೆಸ್(ತಂತಿರಹಿತ)ದೂರವಾಣಿಗಳನ್ನು ಮತ್ತು ಇತರೆ ದೂರಸಂಪರ್ಕ ಗೇರ್(ಸಾಮಗ್ರಿ)‌ಗಳನ್ನು ತಯಾರಿಸುತ್ತಿದ್ದರು. ಮಿತ್ತಲ್ ಹೇಳುತ್ತಾರೆ " ೧೯೮೩ರಲ್ಲಿ ಸರ್ಕಾರವು ಜನರೇಟರ್ ಸೆಟ್‌ಗಳ ಆಮದಿನ ಮೇಲೆ ನಿಷೇಧ ವಿಧಿಸಿತು. ತಾವು ಉದ್ಯಮದಿಂದ ರಾತ್ರೋರಾತ್ರಿ ಹೊರಗುಳಿಯಬೇಕಾಯಿತು. ನಾನು ಮಾಡುತ್ತಿದ್ದ ಎಲ್ಲ ಕೆಲಸಗಳೂ ಸ್ಥಗಿತಗೊಂಡು ತೊಂದರೆಯಲ್ಲಿ ಸಿಲುಕಿದ್ದೆ. ಆಗ ಎದ್ದ ಪ್ರಶ್ನೆಯೇನೆಂದರೆ: ನಾನು ಮುಂದೇನು ಮಾಡಲಿ? ನಂತರ, ಅವಕಾಶಗಳು ಕರೆಯತೊಡಗಿದವು. ತೈವಾನ್‌ನಲ್ಲಿದ್ದಾಗ ಪುಶ್ ಬಟನ್(ಒತ್ತುವ ಗುಂಡಿ)ಯ ದೂರವಾಣಿಯ ಜನಪ್ರಿಯತೆಯನ್ನು ಗಮನಿಸಿದೆ. -- ಆಗ ಭಾರತದಲ್ಲಿ ಇದು ಬಳಕೆಗೆ ಬಂದಿರಲಿಲ್ಲ. ನಾವು ಈ ಸುತ್ತುವ ಡಯಲ್‌‌(ಮುಖಫಲಕ)ಗಳನ್ನು ವೇಗದ ಡಯಲ್‌ಗಳು ಅಥವಾ ಮರುಡಯಲ್‌ ವ್ಯವಸ್ಥೆಗಳಿಲ್ಲದೇ ಇನ್ನೂ ಬಳಸುತ್ತಿದ್ದೆವು. ಈ ಅವಕಾಶವನ್ನು ನಾನು ಅರಿತುಕೊಂಡು ದೂರಸಂಪರ್ಕ ಉದ್ದಿಮೆಯನ್ನು ಸ್ವೀಕರಿಸಿದೆ. ನಾನು ದೂರವಾಣಿಗಳು, ಬೀಟಲ್ ಬ್ರಾಂಡ್ ಹೆಸರಿನಲ್ಲಿ ಆನ್ಸರಿಂಗ್(ದೂರವಾಣಿ ಸಂಭಾಷಣೆ ಧ್ವನಿಮುದ್ರಣ)/ ಫ್ಯಾಕ್ಸ್ ಯಂತ್ರಗಳ ಮಾರುಕಟ್ಟೆಯನ್ನು ಆರಂಭಿಸಿದೆ. ಕಂಪೆನಿಯು ನಿಜಕ್ಕೂ ಶರವೇಗದಲ್ಲಿ ಅಭಿವೃದ್ಧಿಗೊಂಡಿತು.[] ಅವರು ತಮ್ಮ ಪ್ರಥಮ ಒತ್ತುವ ಗುಂಡಿಯ ಫೋನ್‌ಗಳಿಗೆ ಮಿಟ್‌ಬ್ರೊ ಎಂದು ಹೆಸರಿಟ್ಟರು.[]

೧೯೯೨ರಲ್ಲಿ ಅವರು ಭಾರತದಲ್ಲಿ ಹರಾಜು ಮಾಡಿದ ನಾಲ್ಕು ಮೊಬೈಲ್ ಫೋನ್ ಜಾಲದ ಪರವಾನಗಿಗಳ ಪೈಕಿ ಒಂದನ್ನು ಘೋಷಿತ ಬೆಲೆಗೆ ಕೂಗುವಲ್ಲಿ ಯಶಸ್ವಿಯಾದರು.[] ಹರಾಜು ಕೂಗುವವರು(ಬಿಡ್ಡರ್) ದೂರಸಂಪರ್ಕ ನಿರ್ವಾಹಕರಾಗಿ ಸ್ವಲ್ಪ ಅನುಭವವನ್ನು ಹೊಂದಿರಬೇಕೆಂಬುದು ದೆಹಲಿಯ ಸೆಲ್ಯುಲಾರ್ ಪರವಾನಗಿ ನೀಡುವುದಕ್ಕೆ ಷರತ್ತುಗಳಲ್ಲಿ ಒಂದಾಗಿತ್ತು. ಆದ್ದರಿಂದ ಮಿತ್ತಲ್ ಅವರು ಫ್ರೆಂಚ್ ದೂರಸಂಪರ್ಕ ಸಮೂಹ ವಿವೆಂಡಿ ಜತೆಯಲ್ಲಿ ಒಪ್ಪಂದವೊಂದನ್ನು ಕುದುರಿಸಿದರು.

ಮೊಬೈಲ್ ದೂರಸಂಪರ್ಕ ಉದ್ಯಮವು ಪ್ರಮುಖ ಬೆಳವಣಿಗೆ ಕ್ಷೇತ್ರವಾಗಿ ಗುರುತಿಸಿದ ಮೊದಲ ಭಾರತೀಯ ಉದ್ಯಮಿಗಳಲ್ಲಿ ಅವರು ಒಬ್ಬರಾಗಿದ್ದಾರೆ. ಅವರ ಯೋಜನೆಗಳನ್ನು ೧೯೯೪ರಲ್ಲಿ ಅಂತಿಮವಾಗಿ ಸರ್ಕಾರವು ಅನುಮೋದಿಸಿತು[] ಮತ್ತು ಏರ್‌ಟೆಲ್ ಎಂಬ ಬ್ರಾಂಡ್(ವ್ಯಾಪಾರಮುದ್ರೆ) ಹೆಸರಿನಲ್ಲಿ ಸೆಲ್ಯುಲಾರ್(ಮೊಬೈಲ್)ಸೇವೆಗಳನ್ನು ನೀಡಲು ೧೯೯೫ರಲ್ಲಿ ಭಾರತಿ ಸೆಲ್ಯುಲಾರ್ ಲಿಮಿಟೆಡ್ ಸ್ಥಾಪಿಸುವ ಮೂಲಕ ಅವರು ದೆಹಲಿಯಲ್ಲಿ ಸೇವೆಗಳನ್ನು ಆರಂಭಿಸಿದರು. ಕೆಲವೇ ವರ್ಷಗಳಲ್ಲಿ ಭಾರತಿ ೨ ದಶಲಕ್ಷ ಮೊಬೈಲ್ ಗ್ರಾಹಕರ ಗುರಿಯನ್ನು ದಾಟಿದ ಪ್ರಥಮ ದೂರಸಂಪರ್ಕ ಕಂಪೆನಿ ಎನಿಸಿಕೊಂಡಿತು. ಭಾರತಿ 'ಇಂಡಿಯಒನ್' ಬ್ರಾಂಡ್ ಹೆಸರಿನಲ್ಲಿ STD/ISDಸೆಲ್ಯುಲಾರ್ ದರಗಳನ್ನು ಇಳಿಮುಖಗೊಳಿಸಿತು.[] ಇಂಡಿಯಒನ್ ಭಾರತದ ಪ್ರಥಮ ಖಾಸಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದೂರದ ಸೇವೆ ನೀಡುವ ಕಂಪೆನಿಯಾಗಿದ್ದು, ಸೇವೆಗಳನ್ನು ಅಗ್ಗದ ದರದಲ್ಲಿ ಒದಗಿಸುವುದು ಭಾರತಿ ಕಂಪೆನಿಯ ಯಶಸ್ಸಿನಲ್ಲಿ ಪ್ರಮುಖ ಅಂಶವಾಗಿತ್ತು.

೨೦೦೬ ನವೆಂಬರ್‌ನಲ್ಲಿ ಅವರು USಚಿಲ್ಲರೆ ವ್ಯಾಪಾರದ ದೈತ್ಯ ಕಂಪೆನಿ ವಾಲ್ ಮಾರ್ಟ್ ಜತೆ ಜಂಟಿ ಉದ್ಯಮ ಒಪ್ಪಂದವನ್ನು ಮಾಡಿಕೊಂಡರು. ಭಾರತದಾದ್ಯಂತ ಅನೇಕ ಚಿಲ್ಲರೆ ಮಾರಾಟದ ಅಂಗಡಿಗಳನ್ನು ಆರಂಭಿಸುವುದು ಈ ಒಪ್ಪಂದವಾಗಿತ್ತು.

೨೦೦೬ರ ಜುಲೈನಲ್ಲಿ ಅವರು ರಿಲಯನ್ಸ್ ADAG, NIS ಸ್ಪಾರ್ಟಾದಿಂದ ಮುಖ್ಯ ಕಾರ್ಯನಿರ್ವಾಹಕರನ್ನು ಆಕರ್ಷಿಸಿ ಭಾರತಿ ಕಾಮ್ಟೆಲ್ ಸೃಷ್ಟಿಸಿದರು.

೨೦೦೮ರ ಮೇನಲ್ಲಿ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ೨೧ ರಾಷ್ಟ್ರಗಳಲ್ಲಿ ಪ್ರಸಾರವ್ಯಾಪ್ತಿಯನ್ನು ಹೊಂದಿದ, ದಕ್ಷಿಣ ಆಫ್ರಿಕಾ ಮೂಲದ ದೂರಸಂಪರ್ಕ ಕಂಪೆನಿ MTN ಗ್ರೂಪ್ ಖರೀದಿಸುವ ಸಾಧ್ಯತೆಯನ್ನು ಸುನಿಲ್ ಭಾರತಿ ಮಿತ್ತಲ್ ಪರಿಶೋಧಿಸಿದರೆಂದು ತಿಳಿದುಬಂತು. ಭಾರತಿ MTNನ ೧೦೦% ಪಾಲಿಗೆ US$೪೫ ಶತಕೋಟಿಯನ್ನು ನೀಡುವ ಬಗ್ಗೆ ಪರಿಶೀಲಿಸುತ್ತಿದೆ ಎಂದು ದಿ ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿತು. ಭಾರತದ ಸಂಸ್ಥೆಯೊಂದರಿಂದ ಅತೀ ದೊಡ್ಡ ಸಾಗರೋತ್ತರ ಕಂಪೆನಿಯ ಸ್ವಾಧೀನದ ವ್ಯವಹಾರವಾಗಲಿದೆ ಎಂದು ಅದು ತಿಳಿಸಿತು. ಆದಾಗ್ಯೂ, ಎರಡೂ ಕಡೆ ತಾತ್ಕಾಲಿಕ ಸ್ವರೂಪದ ಮಾತುಕತೆಯೆಂದು ಪ್ರತಿಪಾದಿಸಿದವು. ಎಕಾನಾಮಿಸ್ಟ್ ನಿಯತಕಾಲಿಕೆಯು MTNಹೆಚ್ಚು ಚಂದಾದಾರರನ್ನು, ಹೆಚ್ಚು ಆದಾಯಗಳನ್ನು ಮತ್ತು ವಿಶಾಲ ಬೌಗೋಳಿಕ ಪ್ರಸಾರವ್ಯಾಪ್ತಿಯನ್ನು ಹೊಂದಿರುವುದರಿಂದ ಏನೇ ಆದರೂ ಭಾರತಿಯು ಅದರ ಜತೆ ಕೂಡಿಕೊಳ್ಳುತ್ತದೆ ಎಂದು ವರದಿ ಮಾಡಿತು.[] ಆದಾಗ್ಯೂ, MTN ಗ್ರೂಪ್ ಭಾರತಿಯನ್ನು ಹೊಸ ಕಂಪನಿಯ ಅಂಗ ಸಂಸ್ಥೆಯಾಗಿ ಬಹುಮಟ್ಟಿಗೆ ಮಾಡಲು ಪ್ರಯತ್ನಿಸುವ ಮೂಲಕ ಮಾತುಕತೆಗಳನ್ನು ಪೂರ್ಣ ಬದಲಿಸಿದ್ದರಿಂದ ಮಾತುಕತೆಯು ವಿಫಲಗೊಂಡಿತು.[]

೨೦೦೯ರ ಮೇನಲ್ಲಿ, ಭಾರತಿ ಏರ್‌ಟೆಲ್ ತಾವು MTN ಜತೆ ಮಾತುಕತೆ ನಡೆಸುತ್ತಿರುವುದಾಗಿ ಪುನಃ ದೃಢಪಡಿಸಿತು ಹಾಗು ೨೦೦೯ ಜುಲೈ ೩೧ರೊಳಗೆ ಸಂಭಾವ್ಯ ವ್ಯವಹಾರವನ್ನು ಚರ್ಚಿಸಲು ಕಂಪೆನಿಗಳು ಒಪ್ಪಿಕೊಂಡವು. ನಂತರ ಭಾರತಿ ಏರ್‌ಟೆಲ್ ಹೇಳಿಕೆಯೊಂದರಲ್ಲಿ ತಿಳಿಸಿತು. "MTN ಗ್ರೂಪ್ ‌ಜತೆ ಮಹತ್ವದ ಪಾಲುದಾರಿಕೆ ಮಾಡಿಕೊಳ್ಳುವ ಪ್ರಯತ್ನವನ್ನು ನವೀಕರಿಸಿರುವುದಾಗಿ ಪ್ರಕಟಿಸಲು ಭಾರತಿ ಏರ್‌ಟೆಲ್ ಲಿಮಿಟೆಡ್‌ಗೆ ಸಂತೋಷವಾಗುತ್ತದೆ".

ಆದರೆ ತರುವಾಯ ಒಪ್ಪಂದವಿಲ್ಲದೇ ಮಾತುಕತೆಯು ಅಂತ್ಯಗೊಂಡಿತು. ಇದು ದಕ್ಷಿಣ ಆಫ್ರಿಕ ಸರ್ಕಾರದ ವಿರೋಧದಿಂದ ಉಂಟಾಯಿತು ಎಂದು ಕೆಲವು ಮೂಲಗಳು ತಿಳಿಸಿದವು.[೧೦]

ವೈಯಕ್ತಿಕ ಜೀವನ

ಬದಲಾಯಿಸಿ

ಮಿತ್ತಲ್ ದೆಹಲಿಯಲ್ಲಿ ವಾಸಿಸಿದ್ದಾರೆ. ಅವರು ವಿವಾಹಿತರಾಗಿದ್ದು, ಮೂವರು ಮಕ್ಕಳಿದ್ದಾರೆ. ಅವರು ೨೩ನೇ ಸಂಖ್ಯೆಯ ಬಗ್ಗೆ ಅಂಧಶ್ರದ್ಧೆ ಹೊಂದಿದ್ದರು. ಏಕೆಂದರೆ ಅವರು ೨೩ನೇ ತಾರೀಖು ಜನಿಸಿದ್ದರು ಮತ್ತು ತಿಂಗಳ ೨೩ನೇ ದಿನದಂದು ವಿವಾಹಿತರಾಗಿದ್ದರು.[೧೧] ಯಾವುದೇ ದೊಡ್ಡ ಸಾಹಸಕ್ಕೆ ಇಳಿಯುವುದಕ್ಕೆ ಮುಂಚೆ ಅವರು ಮಾಂಸ ಸೇವನೆ ನಿಲ್ಲಿಸುತ್ತಿದ್ದರು.[೧೧]

ಸಮಾಜ ಸೇವೆ

ಬದಲಾಯಿಸಿ

ಭಾರತಿ ಪ್ರತಿಷ್ಠಾನದ ಮೂಲಕ ಭಾರತದ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯತ್ತ ಮಿತ್ತಲ್ ತೊಡಗಿಕೊಂಡಿದ್ದರು. ಈ ಪ್ರತಿಷ್ಠಾನವು ೨೦೦ಕ್ಕೂ ಹೆಚ್ಚು ಶಾಲೆಗಳನ್ನು ಸ್ಥಾಪಿಸಿದ್ದು, ೨೦೦೯ನೇ ಸಾಲಿನ ವಿಶ್ವದ ಉನ್ನತ ೨೫ ಪರೋಪಕಾರಿಗಳ ಪಟ್ಟಿಯಲ್ಲಿ ಅದರ ಹೆಸರು ಒಳಗೊಂಡಿದೆ.[೧೨]

ಹೊರಗಿನ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ Nair, Vinod (22 December 2002). "Sunil Mittal speaking: I started with a dream". Times of India.
  2. ೨.೦ ೨.೧ Heather Timmons (25 May 2008). "$50 Billion Telecom Deal Falls Apart". New York Times. Retrieved 1 April 2010.
  3. "India's Richest Billionares". Forbes. 18 November 2009. Retrieved 1 April 2010.
  4. "Sunil Mittal, Indra Nooyi get Padma Bhushan". The Hindu Businessline. 27 January 2009. Retrieved 1 April 2010.
  5. ೫.೦ ೫.೧ ೫.೨ pg.೧೪,ಏರ್‌ಟೆಲ್ ಮಿಟ್ಟಲ್ : ಪೆಸು! (ತಮಿಳು ಆವೃತ್ತಿ), ಕಿಜಕ್ಕು ,ISBN ೮೧೮೩೬೮೮೬೪೦
  6. "The World's Billionaires". Forbes. 11 March 2009. Retrieved April 1, 2010.
  7. ೭.೦ ೭.೧ ೭.೨ ೭.೩ ೭.೪ "Sunil Mittal TimesNow interview". YouTube.com. Retrieved 1 April 2010.
  8. ೮.೦ ೮.೧ Clay Chandler (17 January 2007). "Wireless Wonder: India's Sunil Mittal". CNN. CNNMoney.com. Retrieved 1 April 2010.
  9. "Emerging-market telecoms: Eyes on Africa". The Economist. 6 May 2008. Retrieved 1 April 2010.
  10. James Middleton (1 October 2009). "Bharti and MTN have called off merger discussions once again". Telecoms.com. Retrieved 1 April 2010.
  11. ೧೧.೦ ೧೧.೧ "I wonder who did this". India Today. 3 October 2010. Retrieved 12 October 2009.
  12. Suzanne McGee (30 November 2009). "The 25 Best Givers". Barron's. Retrieved 1 April 2010.