ಸೀಮಿತ ಹೊಣೆಗಾರಿಕೆ ಸಹಭಾಗಿತ್ವ
Expression error: Unexpected < operator.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2008) |
ಸೀಮಿತ ಹೊಣೆಗಾರಿಕೆ ಸಹಭಾಗಿತ್ವ (LLP )ವು ಕೆಲವು ಅಥವಾ ಎಲ್ಲಾ ಸಹಭಾಗಿಗಳೂ (ಸರಹದ್ದಿನ ವ್ಯಾಪ್ತಿಯ ಆಧಾರದ ಮೇಲೆ)ಸೀಮಿತ ಹೊಣೆಗಾರಿಕೆ ಹೊಂದಿರುವಂತಹ ಪಾಲುದಾರಿಕೆಯಾಗಿರುತ್ತದೆ. ಆದ್ದರಿಂದ ಅದು ಸಹಭಾಗಿತ್ವಗಳ ಮತ್ತು ಪಾಲಿಕೆಗಳ ವಿಷಯ, ವಿಚಾರಗಳನ್ನು ವ್ಯಕ್ತಪಡಿಸುತ್ತದೆ.[೧] ಎಲ್ ಎಲ್ ಪಿಯಲ್ಲಿ ಒಬ್ಬ ಸಹಭಾಗಿಯು ಮತ್ತೊಬ್ಬ ಸಹಭಾಗಿಯ ಅನುಚಿತ ವರ್ತನೆ ಅಥವಾ ಅಜಾಗರೂಕತೆಗೆ ಜವಾಬ್ದಾರನಲ್ಲ. ಸೀಮಿತ ಸಹಭಾಗಿತ್ವಕ್ಕೂ ಹಾಗೂ ಇದಕ್ಕೂ ಇದೇ ಪ್ರಮುಖ ವ್ಯತ್ಯಾಸ. ಎಲ್ ಎಲ್ ಪಿ ಯಲ್ಲಿ, ಕೆಲವು ಪಾಲುದಾರರಿಗೆ ನಿಗಮಗಳ ಪಾಲುದಾರರಿಗೆ ಇರುವಂತೆಯೇ ಸೀಮಿತ ಹೊಣೆಗಾರಿಕೆಯ ಕ್ರಮಗಳು ಇರುತ್ತವೆ.[೨] ಕೆಲುವು ದೇಶಗಳಲ್ಲಿ ಸೀಮಿತ ಹೊಣೆಗಾರಿಕೆ ಸಹಭಾಗಿತ್ವದಲ್ಲಿ ಅಸೀಮ ಹೊಣೆಗಾರಿಕೆಯಿರುವ ಕನಿಷ್ಠ ಒಬ್ಬ "ಪ್ರಧಾನ ಪಾಲುದಾರ"ನಾದರೂ ಕಡ್ಡಾಯವಾಗಿ ಇರಬೇಕು. ನಿಗಮದ ಪಾಲುದಾರರಂತಲ್ಲದೆ, ಸಹಭಾಗಿಗಳಿಗೆ ವ್ಯವಹಾರವನ್ನು ನೇರವಾಗಿ ನಿಭಾಯಿಸುವ ಹಕ್ಕಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನಿಗಮಗಳ ಪಾಲುದಾರರು ನಿರ್ದೇಶಕರ ಮಂಡಳಿಯನ್ನು ವಿವಿಧ ರಾಜ್ಯಗಳ ಸನದುಗಳ ಅಡಿಯಲ್ಲಿ ಚುನಾಯಿಸಬೇಕು. ಮಂಡಳಿಯು ಸ್ವಯಂ ವ್ಯವಸ್ಥಾಪಿತವಾಗುತ್ತದೆ (ಇದೂ ಸಹ ವಿವಿಧ ರಾಜ್ಯಗಳ ಸನದುಗಳ ಮೂಲಕವೇ) ಮತ್ತು ನಿಗಮದ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತದೆ ಮತ್ತು ಅವರು "ನಿಗಮದ" ವ್ಯಕ್ತಿಗಳಾಗಿ ನಿಗಮದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ನಿಗಮವನ್ನು ನಿಭಾಯಿಸುವ ಕಾನೂನುಬದ್ಧ ಹೊಣೆಯನ್ನು ಹೊರಬೇಕಾಗುತ್ತದೆ. ಎಲ್ ಎಲ್ ಪಿ ಯಲ್ಲಿ ನಿಗಮದ ರೀತಿಗಿಂತಲೂ ವಿಭಿನ್ನ ಮಟ್ಟದ ತೆರಿಗೆ ಹೊಣೆಗಾರಿಕೆಯನ್ನು ಹೊಂದಿರುತ್ತದೆ.
ಕೆಲವು ದೇಶಗಳಲ್ಲಿ ಸೀಮಿತ ಹೊಣೆಗಾರಿಕೆ ಸಹಭಾಗಿತ್ವಗಳು ಸೀಮಿತ ಸಹಭಾಗಿತ್ವಗಳಿಗಿಂತಲೂ ವಿಭಿನ್ನವಾಗಿದ್ದು, ಎಲ್ ಎಲ್ ಪಿ ಸಹಭಾಗಿಗಳು ಸೀಮಿತ ಹೊಣೆಗಾರಿಕೆ ಹೊಂದಲು ಅನುವು ಮಾಡಿಕೊಡುತ್ತವೆ; ಆದರೆ ಸೀಮಿತ ಸಹಭಾಗಿತ್ವದಲ್ಲಿ ಒಬ್ಬ ಪಾಲುದಾರನಾದರೂ ಅಸೀಮ ಸಹಭಾಗಿಯಾಗಿದ್ದು, ಇತರರು ತಟಸ್ಥ ಅಥವಾ ಸೀಮಿತ ಹೊಣೆಗಾರಿಕೆಯುಳ್ಳ ಹೂಡಿಕೆದಾರರಾಗಿರಬಹುದು. ಪರಿಣಾಮವಾಗಿ, ಈ ದೇಶಗಳಲ್ಲಿ ಎಲ್ಲಾ ಪಾಲುದಾರರೂ ಕ್ರಿಯಾತ್ಮಕವಾಗಿ ವ್ಯವಸ್ಥೆಯಲ್ಲಿ ತೊಡಗಿಕೊಳ್ಳಲು ಇಚ್ಚಿಸುವಂತಹ ವ್ಯಾಪಾರಗಳಿಗೆ ಈ ಎಲ್ ಎಲ್ ಪಿ ಹೆಚ್ಚು ಸೂಕ್ತವೆನಿಸುತ್ತದೆ.
ಯುಎಸ್ ನಲ್ಲಿ ರಚಿತವಾದ ಎಲ್ ಎಲ್ ಪಿ ಗಳಿಗೂ, ಯುಕೆಯಲ್ಲಿ 2001ರಲ್ಲಿ ಪರಿಚಿಯಿಸಲ್ಪಟ್ಟ ಎಲ್ ಎಲ್ ಪಿ ಗಳಿಗೂ ಹಾಗೂ ಇತರ ಎಡೆಗಳಲ್ಲಿ ರಚಿತವಾದುದಕ್ಕೂ ಕ್ರಮದ ಬಗ್ಗೆ ಸಾಕಷ್ಟು ಗೊಂದಲಗಳಿವೆ - ಕೆಳಗೆ ನೋಡಿ - ಏಕೆಂದರೆ ಯುಕೆಯ ಎಲ್ ಎಲ್ ಪಿ ಯು, ಹೆಸರು ಅದೇ ಆದರೂ, ನಿರ್ದಿಷ್ಟವಾಗಿ ಕ್ರಮವನ್ನನುಸರಿಸಿರುವುದು ನಿಗಮದ ವ್ಯವಸ್ಥೆಯನ್ನೇ ವಿನಹ ಸಹಭಾಗಿತ್ವವನ್ನಲ್ಲ.
ರಾಷ್ಟ್ರೀಯ ವಿಭಿನ್ನತೆಗಳು
ಬದಲಾಯಿಸಿ- ಸಮಗ್ರ ದೇಶ-ದೇಶದ ಸಹಭಾಗಿತ್ವಗಳು ಮತ್ತು ಕಂಪನಿಗಳ ವಿಧಗಳ ಪಟ್ಟಿಗಾಗಿ ವ್ಯವಹಾರ ಅಸ್ತಿತ್ವದ ವಿಧಗಳು ಎಂಬುದನ್ನು ನೋಡಿರಿ.
ಕೆನಡಾ
ಬದಲಾಯಿಸಿಕ್ಯುಬೆಕ್, ಆಂಟಾರಿಯೋ, ಮನಿಟೋಬಾ, ಆಲ್ಬರ್ಟಾ ಪ್ರಾಂತ್ಯಗಳು, ನುನಾವಟ್ ಪ್ರದೇಶಗಳು ಮತ್ತು ಇತ್ತೀಚೆಗೆ ಸೇರ್ಪಡೆಯಾದ ನೋವಾ ಸ್ಕಾಟಿಯಾಗಳಲ್ಲಿ ವಕೀಲರು ಎಲ್ ಎಲ್ ಪಿ ಕ್ರಮವನ್ನು ಬಳಸಲು ಅನುಮತಿ ನೀಡಲಾಗಿದೆ ಬಿಸಿಯಲ್ಲಿ, 2004ರ ಸಹಭಾಗಿತ್ವ ತಿದ್ದುಪಡಿ ಕಾಯಿದೆ,(ಮಸೂದೆ 35) ವಕೀಲರು ಮತ್ತು ಇತರ ವೃತ್ತಿಪರರು ಹಾಗೂ ವ್ಯಾಪಾರಸ್ಥರು ಎಲ್ ಎಲ್ ಪಿ ಗಳನ್ನು ರಚಿಸಲು ಅನುಮತಿಸಿತು.[೩]
ಚೀನಾ
ಬದಲಾಯಿಸಿಚೀನಾದಲ್ಲಿ ಎಲ್ ಎಲ್ ಪಿ ಯು ವಿಶೇಷ ಸಾಮಾನ್ಯ ಸಹಭಾಗಿತ್ವ (特殊普通合伙)ಎಂದು ಕರೆಯಲ್ಪಡುತ್ತದೆ. ಸಂಸ್ಥೆಯ ಸ್ವರೂಪವು ಜ್ಞಾನ-ಆಧಾರಿತ ವೃತ್ತಿಗಳು ಮತ್ತು ತಾಂತ್ರಿಕ ಸೇವಾ ಉದ್ಯೋಗಗಳಿಗೆ ಸೀಮಿತವಾಗಿರಬೇಕಾಗಿದೆ. ಒಬ್ಬ ಅಥವಾ ಒಂದು ಗುಂಪು ಮಾಡುವ ಐಚ್ಛಿಕ ಅನುಚಿತ ಕಾರ್ಯಗಳಿಂದ ಅಥವಾ ಪೂರ್ಣ ಅಸಡ್ಡೆಯಿಂದ ಉಂಟಾಗಬಹುದಾದ ಬಾಧ್ಯತೆಗಳಿಂದ ಈ ಕ್ರಮವು ಸಹಭಾಗಿಗಳನ್ನು ರಕ್ಷಿಸುತ್ತದೆ.
ಜರ್ಮನಿ
ಬದಲಾಯಿಸಿಜರ್ಮನಿಯ ಪಾರ್ಟರ್ಸ್ಕಾಫ್ಟ್ಸ್ ಜೆಸೆಲ್ಸ್ಕಾಫ್ಟ್ ಅಥವಾ ಪಾರ್ಟ್ ಜಿ ಎಂಬುದು ಆರ್ಥಿಕಪರವಲ್ಲದ ವೃತ್ತಿಪರರ ಒಂದು ಸಂಘವಾಗಿದ್ದು ಒಟ್ಟಿಗೆ ಕಾರ್ಯಗಳನ್ನೆಸಗುತ್ತಿದೆ. ನಿಗಮದ ಅಸ್ತಿತ್ವವಿಲ್ಲದಿದ್ದರೂ,ಅದು ದಾವೆ ಹಾಕಬಲ್ಲದು ಮತ್ತು ಅದರ ಮೇಲೂ ದಾವೆ ಹಾಕಬಹುದು, ಆಸ್ತಿಯನ್ನು ಹೊಂದಬಹುದು ಮತ್ತು ಸಹಭಾಗಿತ್ವದ ಹೆಸರಿನಡಿಯಲ್ಲಿ ಚಟುವಟಿಕೆಗಳನ್ನು ಮಾಡಬಹುದು. ಆದರೆ, ಕೆಲವೇ ಪಾಲುದಾರರ ಅನುಚಿತ ವರ್ತನೆಯಿಂದ ಇತರ ವ್ಯಕ್ತಿಗೆ ಹಾನಿಯುಂಟಾದ ಸಂದರ್ಭದಲ್ಲಿ ಮತ್ತು ಆ ಸಂದರ್ಭದಲ್ಲಿಯೂ ವೃತ್ತಿಪರ ಹೊಣೆಗಾರಿಕೆ ವಿಮೆಯು ಕಡ್ಡಾಯವಾಗಿರುವ ಸಂದರ್ಭಗಳನ್ನು ಹೊರತುಪಡಿಸಿ, ಪಾಲುದಾರರು ಸಹಭಾಗಿತ್ವದ ಎಲ್ಲಾ ಋಣಭಾರಗಳಿಗೆ ಒಟ್ಟಾಗಿಯೂ, ಒಂಟಿಯಾಗಿಯೂ ಬದ್ಧರಾಗಿರುತ್ತಾರೆ ಪಾರ್ಟರ್ಸ್ಕಾಫ್ಟ್ಸ್ ಜೆಸೆಲ್ಸ್ಕಾಫ್ಟ್ ಗೆ ಯಾವುದೇ ನಿಗಮಸಮಬಂಧಿತ ಅಥವಾ ವಾಣಿಜ್ಯ ತೆರಿಗೆಗಳಿರುವುದಿಲ್ಲ, ಕೇವಲ ಅದರ ಸಹಭಾಗಿಗಳ ಆದಾಯಗಳು ಮಾತ್ರ ತೆರಿಗೆಗೆ ಒಳಪಡುತ್ತವೆ.
ಗ್ರೀಸ್
ಬದಲಾಯಿಸಿಗ್ರೀಕ್ ನೆ EE (ಎಟೆರೋರಿದ್ಮಿ ಎಟೈರೀಯ) ಎಂಬ ಸೀಮಿತ ಸಹಭಾಗಿತ್ವವನ್ನು ಹೋಲುವಂತಹ ವ್ಯವಸ್ಥೆ ಎಲ್ ಎಲ್ ಪಿ ಯ ಸರಿಸುಮಾರು ರೀತಿಯದ್ದಾಗಿದೆ.
ಭಾರತ
ಬದಲಾಯಿಸಿಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಮಸೂದೆಯು 2008ರಲ್ಲಿ ಭಾರತದ ಅಧಿಕೃತ ಗೆಝೆಟ್ ನಲ್ಲಿ ಜನವರಿ 9, 2009ರಂದು ಪ್ರಕಟಗೊಂಡಿತು ಮತ್ತು ಮಾರ್ಚ್ 31, 2009ರಿಂದ ಅಧಿಸೂಚಿತವಾಯಿತು. ಆದಾಗ್ಯೂ, ಈ ಮಸೂದೆಯು ಸೂಚಿತವಾಗಿರುವುದು ಸೀಮಿತ ವಿಭಾಗಗಳೊಂದಿಗೆ ಮಾತ್ರ.[೪]. ಸಂಬಂಧಿತ ನಿಯಮಗಳನ್ನು ಅಧಿಕೃತ್ ಗೆಝೆಟ್ ನಲ್ಲಿ ಏಪ್ರಿಲ್ 1, 2009ರಂದು ಸೂಚಿಸಲಾಗಿದೆ. ಮೊದಲ ಎಲ್ ಎಲ್ ಪಿ ಯನ್ನು 2009ರ ಏಪ್ರಿಲ್ ಮೊದಲನೆಯ ವಾರದಲ್ಲಿ ಜಾರಿಗೊಳಿಸಲಾಯಿತು.
ಭಾರತದಲ್ಲಿ, ಎಲ್ಲಾ ತೆರಿಗೆ ಸಂಬಂಧಿತ ವಿಷಯಗಳಿಗೆ, ಎಲ್ ಎಲ್ ಪಿ ಯನ್ನು ಇತರ ಸಹಭಾಗಿತ್ವ ಸಂಸ್ಥೆಗಳಂತೆಯೇ ಪರಿಗಣಿಸಲಾಗುತ್ತದೆ.
2008ರ ಎಲ್ ಎಲ್ ಪಿ ಕಾಯಿದೆಯ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:-
1. ಎಲ್ ಎಲ್ ಪಿ ಯ ಸೀಮಿತ ಹೊಣೆಗಾರಿಕೆಯ ಉಪಯೋಗಗಳನ್ನು ನೀಡುವಂತಹ,ಆದರೆ ಅದರ ಸದಸ್ಯರು ಕರಾರಿನ ಮೇರೆಗೆ ಸಹಭಾಗಿತ್ವದ ಆಂತರಿಕ ಸ್ವರೂಪಗಳನ್ನು ವ್ಯವಸ್ಥೆಗೊಳಿಸಿಕೊಳ್ಳಲು ಅನುಮತಿಸುವ ಒಂದು ಪರ್ಯಾಯ ನಿಗಮ ವಾಹಕವು ಎಲ್ ಎಲ್ ಪಿ ಯಲ್ಲಿ ಇದೆ.
2. ಎಲ್ ಎಲ್ ಪಿ ಕಾಯಿದೆಯು ಎಲ್ ಎಲ್ ಪಿ ವಿನ್ಯಾಸವನ್ನು ಕೆಲವೇ ವೃತ್ತಿಪರ ವರ್ಗಗಳಿಗೆ ಸೀಮಿತಗೊಳಿಸದೆ, ಯಾವುದೇ ಉದ್ಯೋಗವು ಈ ಕಾಯಿದೆಯ ನಿಯಮಗಳನ್ನು ಅನುಸರಿಸಿದಲ್ಲಿ ಅದಕ್ಕೆ ಲಭ್ಯವಾಗುತ್ತದೆ.
3. ಎಲ್ ಎಲ್ ಪಿ ಗೆ ತನ್ನದೇ ಆದ ಪ್ರತ್ಯೇಕ ಅಸ್ತಿತ್ವವಿದ್ದು, ಅದರ ಸಂಪೂರ್ಣ ಆಸ್ತಿಯ ಹೊಣೆಯಿರುವುದಾಗಿರುತ್ತದಾದರೂ, ಅದರ ಸದಸ್ಯರ ಹೊಣೆಗಾರಿಕೆಯು ತಾವು ಒಪ್ಪಿ, ಎಲ್ ಎಲ್ ಪಿ ಗೆ ನೀಡಿದ ಮೊಬಲಗಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ, ಯಾವುದೇ ಪಾಲುದಾರನು ಇತರ ಪಾಲುದಾರರು ಸ್ವತಂತ್ರವಾಗಿ ಅಥವಾ ಅನುಮತಿಯಿಲ್ಲದೆ ಮಾಡಿದ ಕಾರ್ಯಕ್ಕೆ ಬದ್ಧನಾಗಿರುವುದಿಲ್ಲ, ಹೀಗಾಗಿ ಪ್ರತಿ ಪಾಲುದಾರನೂ ಇತರ ಪಾಲುದಾರನು ಮಾಡಿದ ದೋಷಯುಕ್ತ ವ್ಯವಹಾರ ಅಥವಾ ಅನುಚಿತ ತೀರ್ಮಾನಗಳಿಂದ ಉಂಟಾಗಬಹುದಾದ ನಷ್ಟಕ್ಕೆ ಹೊಣೆಗಾರನಾಗುವುದಿಲ್ಲ.
4. ಎಲ್ ಎಲ್ ಪಿ ಯು ಒಂದು ನಿಗಮ ಸ್ವರೂಪಿಯಾಗಿದ್ದು ಪಾಲುದಾರರಿಮದ ಹೊರತಾದ ಕಾನೂನಿನ ಅಸ್ತಿತ್ವ ಹೊಂದಿರುವಂತಹುದಾಗಬೇಕು. ಅದಕ್ಕೆ ಅನವರತ ವಾರಸು ಇರುತ್ತದೆ. ಭಾರತೀಯ ಸಹಭಾಗಿತ್ವ (ಪಾಲುದಾರಿಕೆ) ಕಾಯಿದೆ, 1932 ಎಲ್ ಎಲ್ ಪಿ ಗಳಿಗೆ ಅನ್ವಯಿಸಬಾರದು ಮತ್ತು ಗರಿಷ್ಠ ಸದಸ್ಯರ ಸಂಖ್ಯೆ ಇಪ್ಪತ್ತನ್ನು ಮೀರಬಾರದೆಂಬ ಸಾಮಾನ್ಯ ಸಹಭಾಗಿತ್ವ ಸಂಸ್ಥೆಗಳಿಗಿರುವ ನಿಯಮವು ಎಲ್ ಎಲ್ ಪಿ ಗಳಿಗೆ ಅನ್ವಯಿಸುವಂತಿಲ್ಲ; ಎಲ್ ಎಲ್ ಪಿ ಕಾಯಿದೆಯು ಪಾಲುದಾರರಲ್ಲಿ ಒಬ್ಬರಾದರೂ ಭಾರತೀಯರು ಕಡ್ಡಾಯವಾಗಿ ಇರಲೇಬೇಕೆಂದು ಆದೇಶಿಸುತ್ತದೆ.
5. ನಿಗಮಗಳಿಗೆ ಹೊಂದುವಂತಹ ಸೇರ್ಪಡೆ, ಬೇರೊಂದರಲ್ಲಿ ಸೇರಿಹೋಗುವಿಕೆ, ಮುಂತಾದುವುಗಳಿಗೆ ಅವಕಾಶಗಳಿರುತ್ತವೆ.
6. ಎಲ್ ಎಲ್ ಪಿ ಗಳನ್ನು ಮುಚ್ಚಲು ಹಾಗೂ ವಿಚ್ಛಿನ್ನಗೊಳಿಸಲು ಸಾಕಷ್ಟು ಸಾಧ್ಯತೆಗಳನ್ನು ಕಾಯಿದಯಲ್ಲಿ ನೀಡಿದ್ದರೂ, ಇದರ ಬಗ್ಗೆ ಸವಿಸ್ತಾರವಾದ ವಿಚಾರಗಳನ್ನು ಕಾಯಿದೆಯ ಅಡಿಯಲ್ಲಿನ ನಿಯಮಗಳಲ್ಲಿ ನೀಡಲಾಗಿದೆ.
7. ಈ ಕಾಯಿದೆಯನ್ವಯ ಅಸ್ತಿತ್ವದಲ್ಲಿರುವ ಸಹಭಾಗಿ ಸಂಸ್ಥೆ, ಖಾಸಗಿ ಸೀಮಿತ ಕಂಪನಿ ಮತ್ತು ಪಟ್ಟಿಯಲ್ಲಿ ಸೇರಿಸದ ಸಾರ್ವಜನಿಕ ಕಂಪನಿಗಳನ್ನು ಎಲ್ ಎಲ್ ಪಿ ಗೆ ಬದಲಾಯಿಸುವ ಸೌಲಭ್ಯಗಳಿವೆ; ಅವುಗಳನ್ನು ಕಂಪನಿಗಳ ನೋಂದಣಿ ಅಧಿಕಾರಿಯೊಂದಿಗೆ (ROC)ನೋಂದಾಯಿಸಿದರಾಯಿತು.
8. 1932ರ ಸಹಭಾಗಿತ್ವ ಕಾಯಿದೆಯ ಯಾವುದೇ ಅಂಶಗಳನ್ನೂ ಎಲ್ ಎಲ್ ಪಿ ಗೆ ಅನ್ವಯಿಸುವಂತಿಲ್ಲ.
9. ಕಂಪನಿಗಳ ನೋಂದಣಿಕಾರನು (Roc) ಎಲ್ ಎಲ್ ಪಿ ಗಳನ್ನು ನೋಂದಾಯಿಸುವುದು ಮತ್ತು ನಿಯಂತ್ರಿಸುವುದನ್ನು ಮಾಡಬೇಕು.
10. ಎಲ್ ಎಲ್ ಪಿ ಗಳನ್ನು ನಡೆಸುವಂತಹುದು ಈಗಿನ ಮಿನಿಸ್ಟ್ರಿ ಆಫ್ ಕಾರ್ಪೊರೇಟ್ ಅಫೇಯ್ರ್ಸ್ ಪೋರ್ಟಲ್ ನಂತಹ ಯಶಸ್ವಿ ವಿನ್ಯಾಸದ ಆಧಾರದ ರೀತ್ಯಾ ವಿದ್ಯುನ್ಮಾನ ಕ್ರಮದಲ್ಲಿರಬೇಕು. ನೂತನ ಎಲ್ ಎಲ್ ಪಿ ಯನ್ನು ನೋಂದಾಯಿಸಲು ಎಲ್ ಎಲ್ ಪಿ ಪೋರ್ಟಲ್ Archived 2015-12-11 ವೇಬ್ಯಾಕ್ ಮೆಷಿನ್ ನಲ್ಲಿ. ಗೆ ಭೇಟಿ ಕೊಡಿ.
ಜಪಾನ್
ಬದಲಾಯಿಸಿಜಪಾನ್ 2006ರಲ್ಲಿ ವ್ಯವಹಾರ ಸಂಸ್ಥೆಗಳ ಸಮಬಂಧಿತವಾದ ದೇಶದ ಕಾನೂನು ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬೃಹತ್-ಪ್ರಮಾಣದಲ್ಲಿ ಬದಲಾಯಿಸಿದಾಗ Limited liability partnerships (有限責任事業組合 yūgen sekinin jigyō kumiai?)ಅನ್ನು ಪರಿಚಯಿಸಲಾಯಿತು. ಜಪಾನ್ ನ ಎಲ್ ಎಲ್ ಪಿ ಗಳನ್ನು ಯಾವುದೇ ಉದ್ದೇಶಕ್ಕಾಗಿ ನಿರ್ಮಿಸಬಹುದು (ಆದರೆ ಉದ್ದೇಶವು ಸಾಮಾನ್ಯವಾಗಿರದೆ, ನಿರ್ದಿಷ್ಟವಾಗಿ ಪಾಲುದಾರಿಕೆಯ ಕರಾರಿನಲ್ಲಿ ನಮೂದಿಸಿರಬೇಕು), ಸಂಪೂರ್ಣ ಸೀಮಿತ ಹೊಣೆಗಾರಿಕೆಯನ್ವಯವಾಗಿರುತ್ತದೆ ಮತ್ತು ತೆರಿಗೆ ಸಂಬಂಧಿತವಾಗಿ ನೇರ-ಮಾರ್ಗದ್ದಾಗಿರುತ್ತವೆ. ಆದರೆ ಎಲ್ ಎಲ್ ಪಿ ಯಲ್ಲಿನ ಪ್ರತಿ ಪಾಲುದಾರನೂ ವ್ಯವಹಾರದಲ್ಲಿ ಸಕ್ರಿಯ ಪಾತ್ರ ವಹಿಸಬೇಕು; ಆದ್ದರಿಂದ ಈ ಕ್ರಮವು ಹೆಚ್ಚಾಗಿ ಜಂಟಿ ಚಟುವಟಿಕೆಗಳು ಮತ್ತು ಚಿಕ್ಕ ವ್ಯವಹಾರಗಳಿಗೆ ಹೊಂದುವಷ್ಟು ತಟಸ್ಥ ಹೂಡಿಕೆದಾರರನ್ನು ಹೊಂದಿರುವ ಕಂಪನಿಗಳಿಗೆ ಹೊಂದುವುದಿಲ್ಲ.[೫][೬] ಜಪಾನಿನ ಎಲ್ ಎಲ್ ಪಿ ಯನ್ನು ವಕೀಲರು ಮತ್ತು ಆರ್ಥಿಕ ತಜ್ಞರು ಬಳಕೆ ಮಾಡದೆ ಇರಬಹುದು, ಏಕೆಂದರೆ ಈ ವೃತ್ತಿಪರರರು ಅಸೀಮಿತ ಹೊಣೆಗಾರಿಕೆ ವ್ಯವಸ್ಥೆಗಳ ಮೂಲಕ ತಮ್ಮ ವೃತ್ತಿಯನ್ನು ಕೈಗೊಳ್ಳಬೇಕಾಗಿ ಬರಬಹುದು.[೭]
ಜಪಾನಿನ ಎಲ್ ಎಲ್ ಪಿ ಯು ನಿಗಮವಲ್ಲ[೮], ಆದರೆ ಪಾಲುದಾರರ ನಡುವೆ ನಡೆದ ಕರಾರಿನ ಸಂಬಂಧಿತವಾಗಿ ಅಸ್ತಿತ್ವದಲ್ಲಿರುತ್ತದೆ ಹಾಗೂ ಇದು ಅಮೆರಿಕದ ಎಲ್ ಎಲ್ ಪಿ ಗೆ ಸಾದೃಶವಾಗಿದೆ. ಜಪಾನಿನಲ್ಲಿ ಗೋಡೋ ಕೈಶಾ ಎಂಬ ಪಾಲುದಾರಿಕೆಯ ಶೈಲಿಯ ಆಂತರಿಕ ರೂಪರೇಷೆಗಳನ್ನು ಹೊಂದಿರುವ ಒಂದು ನಿಗಮದ ಪ್ರಕಾರವೂ ಇದ್ದು, ಇದು ಬ್ರಿಟಿಷ್ ಎಲ್ ಎಲ್ ಪಿ ಅಥವಾ ಅಮೆರಿಕದ ಸೀಮಿತ ಹೊಣೆಗಾರಿಕೆ ಕಂಪನಿಗಳನ್ನು ಹೋಲುತ್ತದೆ.
ಕಝಕ್ ಸ್ತಾನ್
ಬದಲಾಯಿಸಿಇಲ್ಲಿ ಎಲ್ ಎಲ್ ಪಿ ಗೆ ಸರಿಸಮನಾದುದು "Жауапкершілігі шектеулі серіктестік"
ಪೊಲಂಡ್
ಬದಲಾಯಿಸಿಪೋಲಿಷ್ ಕಾನೂನಿನಲ್ಲಿ ಸೀಮಿತ ಹೊಣೆಗಾರಿಕೆ ಸಹಭಾಗಿತ್ವವನ್ನು ಹೋಲುವಂತಹ ಕ್ರಮವೆಂದರೆ 2001ರಲ್ಲಿ ಪರಿಚಯಿಸಲ್ಪಟ್ಟ ಸ್ಪೋರ್ಸ್ಕಾ ಪಾರ್ಟ್ನರ್ಸಿಕಾ . ಈ ವಿಧವಾದ ಕಂಪನಿಗಳನ್ನು ಸ್ಥಾಪಿಸಲು ಕನಿಷ್ಠ ಇಬ್ಬರು ವೃತ್ತಿಪರ ಸೇವೆ ಸಲ್ಲಿಸುವವರು ಭಾಗಿಗಳಾಗಿರಲೇಬೇಕು. ಇತರ ಚಟುವಟಿಕೆಗಳು ನಿಷೇಧಿಸಲ್ಪಟ್ಟಿವೆ.
ರೊಮೇನಿಯ
ಬದಲಾಯಿಸಿರೋಮಾನಿಯಾದ ಕಾನೂನು ವಾಹಕವಾದ ಸೊಸೈಟಾಟೆ ಸಿವಿಲಾ ಪ್ರೊಫೆಷೊನಲಾ ಕ್ಯು ರಾಸ್ಪುಂಡೆರೆ ಲಿಮಿಟಾಟಾ ಹಾಗೂ ಎಲ್ ಎಲ್ ಪಿ ಸರಿಸಮವಾದುದೆನ್ನಬಹುದು.
ಸಿಂಗಾಪುರ್
ಬದಲಾಯಿಸಿಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಕಾಯಿದೆ 2005ರ ಪ್ರಕಾರ ಎಲ್ ಎಲ್ ಪಿ ಗಳನ್ನು ನಿರ್ಮಿಸಬೇಕಾಗುತ್ತದೆ. ಈ ವಿಧಿಸ್ಥಾಪಕವು ಯುಕೆ ಮತ್ತು ಯುಎಸ್ ಮಾದರಿಯ ಎಲ್ ಎಲ್ ಪಿ ಗಳೆರಡರ ಅಂಶಗಳನ್ನು ಹೆಕ್ಕಿ, ಯುಕೆಯಂತೆ ಎಲ್ ಎಲ್ ಪಿ ಯನ್ನು ನಿಗಮದಂತೆಯೇ ಸ್ಥಾಪಿಸಿದೆ. ಆದರೆ ತೆರಿಗೆ ವಿಷಯಗಳಿಗೆ ಸಂಬಂಧಿಸಿದಂತೆ ಇದನ್ನು ಸಾಮಾನ್ಯ ಸಹಭಾಗಿತ್ವದಂತೆಯೇ ಪರಿಗಣಿಸಲಾಗಿ, ಪಾಲುದಾರಿಕೆಯ ಸಂಸ್ಥೆಯಲ್ಲದೆ ಪಾಲುದಾರರು ಮಾತ್ರ ತೆರಿಗೆಗೆ (ತೆರಿಗೆ ಪಾರದರ್ಶಕತೆ) ಒಳಪಡುತ್ತಾರೆ.
ಯುನೈಟೆಡ್ ಕಿಂಗ್ಡಮ್
ಬದಲಾಯಿಸಿಯುನೈಟೆಡ್ ಕಿಂಗ್ಡಂನಲ್ಲಿ ಎಲ್ ಎಲ್ ಪಿ ಗಳು 2000ರ ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಕಾಯಿದೆಯ ರೀತ್ಯಾ ಪಾಲಿಸಲಾಗುತ್ತವೆ. (in ಇಂಗ್ಲೆಂಡ್ ಮತ್ತು ವೇಲ್ಸ್ ಹಾಗೂ ಸ್ಕಾಟ್ ಲ್ಯಾಂಡ್ಗಳಲ್ಲಿ )ಮತ್ತು ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಕಾಯಿದೆ (ಉತ್ತರ ಐರ್ಲೆಂಡ್) 2002 ರ ರೀತ್ಯಾ ಉತ್ತರ ಐರ್ಲೆಂಡ್ನಲ್ಲಿ. ಯುಕೆಯ ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಸಂಸ್ಥೆಯು ಒಂದು ನಿಗಮವಿದ್ದಂತೆ - ಎಂದರೆ ಸದಸ್ಯರ ಮೇಲೆ ಅವಲಂಬಿತವಾಗದೆ ಸ್ವತಂತ್ರವಾದ ಕಾಯಿದೆಪರ ಅಸ್ತಿತ್ವವನ್ನು ಹೊಂದಿರುತ್ತದೆ, ಆದರೆ ಸಹಭಾಗಿತ್ವಗಳಲ್ಲಿ (ಇಂಗ್ಲೆಂಡ್ ಮತ್ತು ವೇಲ್ಸ್ ಗಳಲ್ಲಿ ಹೀಗಿಲ್ಲ) ಸದಸ್ಯರ ಮೇಲೆಯೇ ಅದರ ಅಸ್ತಿತ್ವವು ಅವಲಂಬಿತವಾಗಿರುತ್ತದೆ.
ಯುಕೆಯ ಎಲ್ ಎಲ್ ಪಿ ಯ ಸದಸ್ಯರ ಒಟ್ಟಾರೆ ("ಜಂಟಿ") ಜವಾಬ್ದಾರಿಯು ಅವರು ಒಂದು "ಎಲ್ ಎಲ್ ಪಿ ಒಪ್ಪಂದ"ಕ್ಕೆ ಸಮ್ಮತಿಸುವ ಮಟ್ಟದವರೆಗೂ ಇದ್ದು, ಯಾವುದೇ ವ್ಯಕ್ತಿಯ ("ಹಲವಾರು ವ್ಯಕ್ತಿಗಳ") ಕಾರ್ಯಾಚರಣೆಗೆ ಇತರರು ಜವಾಬ್ದಾರರಾಗಿಲ್ಲದಿರುವ ರೀತಿಯಲ್ಲಿರುತ್ತದೆ. ಸೀಮಿತ ಕಂಪನಿ ಅಥವಾ ನಿಗಮದ ಸದಸ್ಯರಂತೆಯೇ ಎಲ್ ಎಲ್ ಪಿ ಯ ಸದಸ್ಯರೂ ಸಹ, ಮೋಸ ಅಥವಾ ದೋಷಯುಕ್ತ ವ್ಯವಹಾರವಿಲ್ಲದಿದ್ದಲ್ಲಿ, ತಮ್ಮ ಹೂಡಿಕೆಗಿಂತಲೂ ಹೆಚ್ಚಿನ ಹಣವನ್ನು ಕಳೆದುಕೊಳ್ಳುವುದು ಸಾಧ್ಯವಿಲ್ಲ.
ಆದರೆ ತೆರಿಗೆಯ ವಿಷಯದಲ್ಲಿ ಯುಕೆಯ ಎಲ್ ಎಲ್ ಪಿ ಯು ಸಹಭಾಗಿತ್ವ (ಪಾಲುದಾರಿಕೆ) ಸಂಸ್ಥೆಗಳಂತೆಯೇ: ಅದು ತೆರಿಗೆ ಪಾರದರ್ಶಕ ಅಥವಾ ನೇರ-ಮಾರ್ಗವಾಗಿದೆ, ಎಂದರೆ ಸಂಸ್ಥೆಯು ಯಾವುದೇ ಯುಕೆ ತೆರಿಗೆಯನ್ನು ಹಾಗೂ ಅದರ ಸದಸ್ಯರು ಎಲ್ ಎಲ್ ಪಿ ಯ ಮೂಲಕ ತಮಗೆ ವೈಯುಕ್ತಿಕವಾಗಿ ಬಂದ ಆದಾಯ ಅಥವಾ ಲಾಭದ ಅಂಶಕ್ಕೆ ತೆರಿಗೆ ತೆರುತ್ತಾರೆ.
ಇದು ಸಮಗ್ರ ಹಾಗೂ ವ್ಯಕ್ತಿಗತ ಹಕ್ಕುಗಳು ಮತ್ತು ಬಾಧ್ಯತೆಗಳ ಹಾಗೂ ಅವುಗಳ ಅನಂತ ಹರಹು-ಹರಿವುಗಳ ಸಮ್ಮಿಶ್ರಣವನ್ನು ಹೊಂದಿರುವ ಒಂದು ವಿಶಿಷ್ಟ ಕ್ರಮವಾಗಿದೆ - ಹಾಗೆ ನೋಡಿದರೆ ಎಲ್ ಎಲ್ ಪಿ ಯ ಬರಹರೂಪಕ್ಕಿಳಿಸಿದ ಒಪ್ಪಂದದ ಅಗತ್ಯವೂ ಇಲ್ಲ; ಏಕೆಂದರೆ ಇದು ಸರಳಸಮಭಾಗಿತ್ವ-ಆಧಾರಿತ ನಿಯಮಗಳಿಗೆ ತಾನಾಗಿಯೇ ಅನ್ವಯವಾಗುತ್ತದೆ.
ಇಂದಿಗೆ ಈ ವ್ಯವಸ್ಥೆಯನ್ನು ಜಪಾನ್ ಸರಿಸುಮಾರು ರೀತಿಯಲ್ಲಿ ಅಳವಡಿಸಿಕೊಂಡಿದೆ - ಮೇಲೆ ನೋಡಿ - ಮತ್ತು ದುಬೈ ಹಾಗೂ ಕತಾರ್ ನ ವಾಣಿಜ್ಯ ಕೆಂದ್ರಗಳೂ ಇದನ್ನು ಅಳವಡಿಸಿಕೊಂಡಿವೆ. ಇದು ಸ್ವರೂಪದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಸೀಮಿತ ಹೊಣೆಗಾರಿಕೆ ಕಂಪನಿಗೆ ಬಹಳ ಸಮೀಪದಲ್ಲಿದೆ; ಅದಕ್ಕೆ ಇದಕ್ಕೆ ವ್ಯತ್ಯಾಸವೆಂದರೆ ಎಲ್ ಎಲ್ ಸಿ ಯು ತಮ್ಮ ಸದಸ್ಯರ ಮೇಲೆ ಅವಲಂಬಿತವಾಗದೆ ಸ್ವತಂತ್ರ ಅಸ್ತಿತ್ವ ಹೊಂದಿದ್ದರೂ ತಾಂತ್ರಿಕವಾಗಿ ಅದು ನಿಗಮವಾಗುದಿಲ್ಲ, ಏಕೆಂದರೆ ಅದರ ಕಾನೂನುಬದ್ಧ ಅಸ್ತಿತ್ವಕೆ ಕಾಲ ಮಿತಿಯಿದೆಯಾದ್ದರಿಂದ "ಅನವರತ"ವಲ್ಲ.
ಹೆಚ್ಚಿನ ಮಾಹಿತಿಯು ಅಧಿಕೃತ ಕಂಪನಿಗಳ ಗೃಹ ಜಾಲತಾಣ ದಲ್ಲಿ ದೊರೆಯುತ್ತದೆ.
ಅಮೆರಿಕ ಸಂಯುಕ್ತ ಸಂಸ್ಥಾನ
ಬದಲಾಯಿಸಿಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರತಿ ರಾಜ್ಯವೂ ತನ್ನದೇ ಆದ ಕಾನೂನುಗಳಡಿಯಲ್ಲಿ ತನ್ನ ಸೀಮೆಗಳನ್ನು ರೂಪಿಸಿಕೊಂಡಿದೆ. ಸೀಮಿತ ಹೊಣೆಗಾರಿಕೆ ಸಹಭಾಗಿತ್ವವು 1990ರ ದಶಕದ ಪೂರ್ವಭಾಗದಲ್ಲಿ ಆರಂಭವಾಯಿತು: 1992ರಲ್ಲಿ ಎರಡೇ ರಾಜ್ಯಗಳು ಎಲ್ ಎಲ್ ಪಿ ಗಳನ್ನು ಅನುಮತಿಸಿದವಾದರೂ, 1996ರಲ್ಲಿ ಏಕರೂಪಿ ಸಹಭಾಗಿತ್ತ ಕಾಯಿದೆಗೆ ಎಲ್ ಎಲ್ ಪಿ ಗಳನ್ನು ಸೇರಿಸುವ ವೇಳೆಗೆ ನಲವತ್ತಕ್ಕೂ ಹೆಚ್ಚು ಸಂಸ್ಥೆಗಳು ಎಲ್ ಎಲ್ ಪಿ ಯ ನಿಯಮಾಗಳಿಗಳನ್ನು ಅಳವಡಿಸಿಕೊಂಡಿದ್ದವು.[೯]
ಸೀಮಿತ ಹೊಣೆಗಾರಿಕೆ ಸಹಭಾಗಿತ್ವವನ್ನು 1980ರಲ್ಲಿ ಭೂವ್ಯವಹಾರ ನೆಲಕಚ್ಚಿ, ಶಕ್ತಿಯ ದರಗಳೂ ಕೆಳಗಿಳಿದ ಪರಿಣಾಮವಾಗಿ ರೂಪಿಸಲಾಯಿತು. ಈ ನೆಲಕಚ್ಚುವಿಕೆಯಿಂದ ಬ್ಯಾಂಕ್, ಉಳಿತಾಯ ಮತ್ತು ಸಾಲಗಳ ವಿಫಲತೆಯ ಬೃಹತ್ ಅಲೆಯೇ ಉಂಟಾಯಿತು. ಬ್ಯಾಂಕ್ ಗಳಿಂದ ವಸೂಲಿ ಮಾಡಲಾಗುವಂಹ ಮೊತ್ತಗಳು ಚಿಕ್ಕದಾಗಿದ್ದುದರಿಂದ, 1980ರ ಮೊದಲ ಭಾಗದಲ್ಲಿ ಆ ಬ್ಯಾಂಕ್ ಗಳಿಗೆ ಸಲಹೆ ನೀಡಿದ್ದ ವಕೀಲರು ಮತ್ತು ಹಣಕಾಸು ಸಲಹೆಗಾರ(ಅಕೌಂಟೆಂಟ್)ರಿಂದ ಆ ಹಣ/ಆಸ್ತಿಯನ್ನು ವಸೂಲು ಮಾಡಲು ಯತ್ನಿಸಲಾಯಿತು. ಇದಲ್ಲೆ ಕಾರಣವೆಂದರೆ ಕಾನೂನು ಮತ್ತು ವಿತ್ತ ಸಂಸ್ಥೆಗಳಲ್ಲಿನ ಪಾಲುದಾರರಿಂದ ಬಹಳ ಬೃಹತ್ತಾದ ಹಕ್ಕುಗಳನ್ನು (ಹಣವನ್ನು)ಸೆಳೆಯುವ ಸಾಧ್ಯತೆಗಳಿದ್ದು, ತನ್ಮೂಲಕ ಅವರು ಪಾಪರ್ ಆಗುವ ಭೀತಿಯಿದ್ದಿತು; ಆದ್ದರಿಂದ ಸಹಭಾಗಿತ್ವ ಸಂಸ್ಥೆಗಳ ಮುಗ್ಧ ಸದಸ್ಯರನ್ನು ಹೊಣೆಗಾರಿಕೆಯಿಂದ ಕಾಪಾಡುವ ಸಲುವಾಗಿ ಮೊದಲ ಎಲ್ ಎಲ್ ಪಿ ನಿಯಮಗಳನ್ನು ಜಾರಿಗೆ ತರಲಾಯಿತು.[೧೦]
ಹಲವಾರು ವ್ಯವಹಾರ ಕ್ಷೇತ್ರಗಳಲ್ಲಿ ಈ ಎಲ್ ಎಲ್ ಪಿ ಯು ಕಂಡುಬಂದರೂ, ವೃತ್ತಿಪರ ಸಂಸ್ಥೆಗಳು ಹಾಗೂ ವೃತ್ತಿನಿರತರಾದ ವಕೀಲರು, ಲೆಕ್ಕ ಪರೀಕ್ಷಕರು ಮತ್ತು ಶಿಲ್ಪಿಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿರುವುದು. ಕ್ಯಾಲಿಫೋರ್ನಿಯಾ, ನ್ಯೂ ಯಾರ್ಕ್, ಒರೆಗಾನ್, ಮತ್ತು ನೆವಾಡಾ ಗಳಂತಹ ಕೆಲವು ಯು ಎಸ್ ರಾಜ್ಯಗಳಲ್ಲಿ, ಎಲ್ ಎಲ್ ಪಿ ಯನ್ನು ಕೇವಲ ಮೇಲ್ಕಂಡ ವೃತ್ತಿಗಳಿಗೆ ಮಾತ್ರ ರಚಿಸಬಹುದು.[೧೧] ಎಲ್ ಎಲ್ ಪಿ ಯನ್ನು ರಚಿಸಲು ಕೌಂಟಿ ಮತ್ತು ರಾಜ್ಯದ ಕಚೇರಿಗಳಲ್ಲಿ ವಿಶೇಷವಾದ ಪ್ರಮಾಣಪತ್ರಗಳನ್ನು ಭರ್ತಿಗೊಳಿಸಬೇಕಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೆ ನಿರ್ದಿಷ್ಟ ನಿಯಮಗಳು ಬದಲಾದರೂ, ಎಲ್ಲಾ ರಾಜ್ಯಗಳೂ ಪರಿಷ್ಕೃತ ಏಕರೂಪಿ ಸಹಭಾಗಿತ್ವ ಕಾಯಿದೆಯ ಭಿನ್ನ ರೂಪಗಳನ್ನು ಜಾರಿಗೆ ತಂದಿವೆ.
ಸಹಭಾಗಿಗಳ ಹೊಣೆಗಾರಿಕೆಯು ರಾಜ್ಯದಿಂದ ರಾಜ್ಯಕ್ಕೆ ಬೇರೆಯದಾಗಿರುತ್ತದೆ. ಪರಿಷ್ಕೃತ ಏಕರೂಪಿ ಸಹಭಾಗಿತ್ವ ಕಾಯಿದೆಯ ವಿಭಾಗ 306(c)(1997)(RUPA) (ಬಹುತೇಕ ರಾಜ್ಯಗಳು ಬಳಸುವ ಸಾಮಾನ್ಯ ನಿಯಮಾವಳಿ) ಎಲ್ ಎಲ್ ಪಿ ಗಳಿಗೆ ನಿಗಮದ ರೀತಿಯ ಸೀಮಿತ ಹೊಣೆಗಾರಿಕೆಯ ಕ್ರಮವನ್ನು ರಚಿಸಲು ಅನುಮತಿಸುತ್ತದೆ:
ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಸಂಸ್ಥೆಯಾಗಿದ್ದಾಗ ಸಹಭಗಿತ್ವದಲ್ಲಿ ಉಂಟಾದ ಋಣವು, ಕರಾರಿನಿಂದಲಾಗಲೀ, ಕರ್ತವ್ಯಲೋಪದಿಂದಾಗಲೀ, ಅಥವಾ ಇನ್ನಾವುದೇ ವಿಧದಲ್ಲಾಗಲೀ ಉಂಟಾದರೆ, ಅದು ಸಹಭಾಗಿತ್ವದ ಋಣ ಮಾತ್ರ ಆಗಿರುತ್ತದೆ. ಯಾವುದೇ ಪಾಲುದಾರನೂ, ವೈಯಕ್ತಿಕವಾಗಿ ನೇರವಾಗಿ ಅಥವಾ ಪರೋಕ್ಷವಾಗಿ, ಸಲ್ಲಿಸುವಿಕೆಯ ಮೂಲಕ ಅಥವಾ ಅಲ್ಲದೆ,, ಪಾಲುದಾರನಾದ ಏಕೈಕ ಕಾರಣಕ್ಕೆ ಅಥವಾ ಪಾಲುದಾರಿಕಯ ಜವಾಬ್ದಾರಿ ಹೊತ್ತುದರಿಂದ, ಅಂತಹ ಋಣಕ್ಕೆ(ಹೊಣೆಗೆ) ಜವಾಬ್ದಾರನಲ್ಲ.[ಸೂಕ್ತ ಉಲ್ಲೇಖನ ಬೇಕು]
ಆದರೆ ಸಾಕಷ್ಟು ಸಂಖ್ಯೆಯಲ್ಲಿರುವ ರಾಜ್ಯಗಳು ಈ ರಕ್ಷಣೆಯನ್ನು ಸಣ್ಣಪುಟ್ಟ ಕ್ಲೈಮುಗಳವರೆಗೆ ಮಾತ್ರ ನೀಡುತ್ತವೆ, ಹೀಗಾಗಿ ಎಲ್ ಎಲ್ ಪಿ ಯ ಪಾಲುದಾರರು ವೈಯಕ್ತಿಕವಾಗಿ ಕರಾರಿನ ಹಾಗೂ ಐಚ್ಛಿಕ ಕರ್ತವ್ಯ ಲೋಪದಿಂದಾಗಲೀ ಎಲ್ ಎಲ್ ಪಿ ಯ ವಿರುದ್ಧ ಉಂಟಾಗುವ ಕ್ಲೈಮುಗಳ ಹೊಣೆ ಹೊರಬೇಕಾಗುತ್ತದೆ. ಟೆನೆಸ್ಸಿ ಮತ್ತು ಪಶ್ಚಿಮ ವರ್ಜೀನಿಯಾಗಳು RUPAವನ್ನು ಇನ್ನೆಲ್ಲಾ ಅಂಶಗಳಲ್ಲೂ ಅಳವಡಿಸಿಕೊಂಡಿದ್ದರೂ, ವಿಭಾಗ ೩೦೬ಚಿಷಯದಲ್ಲಿ ಮಾತ್ರ ಏಕರೂಪ ಭಾಷ್ಯದಿಂದ ಬೇರೆಯದೇ ಆದುದನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಕೇವಲ ಹೊಣೆಗಾರಿಕೆಯ ಕವಚದ ಒಂದು ಅಂಶ ಮಾತ್ರ ನೀಡಲಾಗಿದೆ.
ಸಹಭಾಗಿತ್ವ ಅಥವಾ ಸೀಮಿತ ಸಹಭಾಗಿತ್ವ ಕಂಪನಿ(ಎಲ್ ಎಲ್ ಸಿ)ಗಳಲ್ಲಿರುವಂತೆಯೇ, ಎಲ್ ಎಲ್ ಪಿ ಯಲ್ಲಿ ಬಂದ ಭಾಗವನ್ನು ತೆರಿಗೆಯ ಉದ್ದೇಶಕ್ಕಾಗಿ ಪಾಲುದಾರರಲ್ಲಿ ಹಂಚಲಾಗುತ್ತದೆ, ತನ್ಮೂಲಕ ನಿಗಮಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ "ದುಪ್ಪಟ್ಟು ತೆರಿಗೆ"ಯ ತೊಂದರೆಯನ್ನು ತಪ್ಪಿಸಲಾಗುತ್ತದೆ.
ಕೆಲವು ಯುಎಸ್ ರಾಜ್ಯಗಳು ಎಲ್ ಪಿ ಮತ್ತು ಎಲ್ ಎಲ್ ಪಿ ರೀತಿಗಳನ್ನು ಒಟ್ಟುಗೂಡಿದಿ ಸೀಮಿತ ಹೊಣೆಗಾರಿಗೆ ಸೀಮಿತ ಸಮಭಾಗಿತ್ವದ ಸೃಷ್ಟಿಗೆ ನಾಂದಿ ಹಾಡಿವೆ.
ಕೆಳಗಿನವುಗಳನ್ನು ಓದಬಹುದು
ಬದಲಾಯಿಸಿಲೇಖನಗಳು
ಬದಲಾಯಿಸಿ- ↑ Sullivan, arthur (2003). Economics: Principles in action. Upper Saddle River, New Jersey 07458: Prentice Hall. p. 190. ISBN 0-13-063085-3. Archived from the original on 2016-12-20. Retrieved 2021-02-24.
{{cite book}}
: Unknown parameter|coauthors=
ignored (|author=
suggested) (help)CS1 maint: location (link) - ↑ ರೇ, ಜೇಮ್ಸ್ ಸಿ. (ವಕೀಲ). "ದ ಮೋಸ್ಟ್ ವ್ಯಲ್ಯುಯೆಬಲ್ ಬಿಸಿನೆಸ್ ಫಾರ್ಮ್ಸ್ ಯೂ ವಿಲ್ ಎವರ್ ನೀಡ್" (3ನೆಯ ಆವೃತ್ತಿ) ಪುಟ 13 2001 ಸ್ಫಿಂಕ್ಸ್ ಪ್ರಕಾಶನ, ಯುಎಸ್ಎ.
- ↑ "Provincial News: Limited Liability Partnerships: A Reality at Last in BC". BarTalk. 16.3 (June 2004). Archived from the original on 2010-05-30. Retrieved 2010-06-23.
[S]ubject to the copyright by the British Columbia Branch of the Canadian Bar Association, 2004, all rights reserved [reprint].
– Scholar search}} - ↑ "ಭಾರತದ ಅಧಿಕೃತ ಗೆಝೆಟ್" (PDF). Archived from the original (PDF) on 2009-03-25. Retrieved 2010-06-23.
- ↑ ಹಿರೋಆಕಿ ಕಿಟಾಓಕಾ, ಎಸ್ಕ್., 有限責任事業組合(日本版LLP)(1):中堅中小企業にも利用価値のある制度 Archived 2006-06-30 ವೇಬ್ಯಾಕ್ ಮೆಷಿನ್ ನಲ್ಲಿ. (ಜಪಾನೀ ಭಾಷೆಯಲ್ಲಿ)
- ↑ "ಜಪಾನೀ ಎಲ್ಎಲ್ ಪಿ ಕಾಯಿದೆ (ಇಂಗ್ಲಿಷ್ ಅನುವಾದ)". Archived from the original on 2017-07-06. Retrieved 2010-06-23.
- ↑ ವಿತ್ತ, ವಾಣಿಜ್ಯ ಮತ್ತು ಉದ್ಯೋಗ ಮಂತ್ರಿಮಂಡಲ, 40 ಎಲ್ ಎಲ್ ಪಿ ಪ್ರಶ್ನೆಗಳು ಮತ್ತು ಉತ್ತರಗಳು (ಜಪಾನಿ ಭಾಷೆಯಲ್ಲಿ) Archived 2016-04-16 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಆಂಗ್ಲೋ-ಅಮೆರಿಕನ್ ಕಾನೂನಿನ ಭಾಷ್ಯದ ವ್ಯಾಪ್ತಿಯಲ್ಲೇ ಬರುವ ಪಾಲುದಾರರಿಂದ ಪ್ರತ್ಯೇಕವಾದ ಒಂದು ಕಾನೂನಿನ ಅಂಗ.
- ↑ ಹಿಂಬರಹದ ಸೂಚಿಗೊಂದು ಸೇರ್ಪಡೆ, ಏಕರೂಪಿ ಸಮಭಾಗಿತ್ವ ಕಾಯಿದೆ (1997) Archived 2008-07-18 ವೇಬ್ಯಾಕ್ ಮೆಷಿನ್ ನಲ್ಲಿ..
- ↑ Robert W. Hamilton (1995). "Registered Limited Liability Partnerships: Present at Birth (Nearly)". Colorado Law Review. 66: 1065, 1069.
- ↑ ನೋಡಿರಿ ಥಾಮಸ್ ಇ. ರಟ್ಲೆಡ್ಜ್ ಮತ್ತು ಎಲಿಝಬೆತ್ ಜಿ. ಹೆಸ್ಟರ್,ಪ್ರ್ಯಾಕ್ಟಿಕಲ್ ಗೈಡ್ ಟು ಲಿಮಿಟೆಸ್ ಲಯಬಿಲಿಟಿ ಪಾರ್ಟರ್ನರ್ಷಿಪ್ಸ್, ಅಧ್ಯಾಯ 8, 5 ಸ್ಟೇಟ್ ಲಿಮಿಟೆಡ್ ಲಯಬಿಲಿಟಿ ಕಂಪನಿ & ಪಾರ್ಟ್ನರ್ಷಿಪ್ ಲಾಸ್ (ಆಸ್ಪೆನ್ 2008).
ಹೊರ ಕೊಂಡಿಗಳು
ಬದಲಾಯಿಸಿ- ಡೆಫೆನೆಷನ್ ಆಫ್ "ಲಿಮಿಟೆಡ್ ಲಯಬಲಿಟಿ ಪಾರ್ಟ್ನರ್ಷಿಪ್" – "ಸಂಗ್ರಹ" Nolo.com ನಲ್ಲಿ. ಮೇ 11, 2007ರಲ್ಲಿ ಸಂಕಲನಗೊಂಡಿದೆ.
- "ಲಿಮಿಟೆಡ್ ಪಾರ್ಟ್ನರ್ಷಿಪ್ಸ್ & ಲಿಮಿಟೆಡ್ ಲಯಬಲಿಟಿ ಪಾರ್ಟ್ನರ್ಷಿಪ್ಸ್: ದ ಬೇಸಿಕ್ಸ್", ಲೇಖಕರು ಪೆರಿ ಹೆಚ್. ಪಕ್ರೂ, ಜೆ.ಡಿ. – ಲೇಖನವು Nolo.com ನಲ್ಲಿ ಲಭ್ಯವಿದೆ. ಮೇ 11, 2007ರಲ್ಲಿ ಸಂಕಲನಗೊಂಡಿದೆ.