ಸೀಬೋರ್ಗಿಯಮ್
ಸೀಬೋರ್ಗಿಯಮ್ ಒಂದು ಸಂಯೋಜಿತ ಮೂಲಧಾತು. ಇದರ ಅತ್ಯಂತ ಸ್ಥಿರವಾದ ಸಮಸ್ಥಾನಿಯ ಅರ್ಧಾಯುಷ್ಯ ಕೇವಲ ೧.೯ ನಿಮಿಷಗಳು. ಇದನ್ನು ೧೯೭೪ರಲ್ಲಿ ಅಮೇರಿಕ ದೇಶದ ಬೆರ್ಕೆಲಿಯಲ್ಲಿ ಮೊದಲು ಸಂಯೋಜಿಸಲಾಯಿತು. ಇದರ ಹೆಸರು ಅನೇಕ ಸಂಯೋಜಿತ ಧಾತುಗಳನ್ನು ಕಂಡುಹಿಡಿದ ಗ್ಲೆನ್ ಟಿ. ಸೀಬೋರ್ಗ್ ಅವರ ಗೌರವಾರ್ಥವಾಗಿ ಇಡಲಾಯಿತು.