ರಸಾಯನಶಾಸ್ತ್ರದಲ್ಲಿ, ಸಂಯೋಜಿತ ಅಥವಾ ಸಂಶ್ಲಿಷ್ಟವೆಂದು ವರ್ಗೀಕರಿಸಲಾದ ಮೂಲಧಾತು(Synthetic element)ಗಳು ಬಹಳ ಅಸ್ಥಿರವಿರುವುದರಿಂದ ಭೂಮಿಯ ಮೇಲೆ ಪ್ರಕೃತಿಸಿದ್ಧವಾಗಿ ಸಿಗುವುದಿಲ್ಲ. ಈ ಸಂಯೋಜಿತ ಧಾತುಗಳು ಭೂಮಿಯ ವಯಸ್ಸಿಗೆ ಹೋಲಿಸಿದರೆ ಅತಿ ಕಡಮೆ ಅರ್ಧಾಯುಷ್ಯಗಳನ್ನು ಹೊಂದಿರುವುದರಿಂದ ಭೂಮಿಯ ರಚನೆಯಾದಾಗ ಅಸ್ತಿತ್ವದಲ್ಲಿದ್ದಿರಬಹುದಾದ ಈ ಧಾತುಗಳ ಯಾವುದೇ ಪರಮಾಣುಗಳು ಯಾವತ್ತೋ ನಶಿಸಿ ಹೋಗಿರುತ್ತವೆ. ಈ ಕಾರಣದಿಂದ, ಸಂಯೋಜಿತ ಮೂಲಧಾತುಗಳ ಪರಮಾಣುಗಳು ಭೂಮಿಯ ಮೇಲೆ ಕೇವಲ ಬೈಜಿಕ ಸ್ಥಾವರಗಳು ಅಥವಾ ಕಣ ಉತ್ಕರ್ಷಕಗಳನ್ನು ಒಳಗೊಂಡ ಪ್ರಯೋಗಗಳ ಉತ್ಪನ್ನವಾಗಿ ಬೈಜಿಕ ಸಮ್ಮಿಲನ ಅಥವಾ ನ್ಯೂಟ್ರಾನ್ ವಿಲೀನದ ದ್ವಾರಾ ಉಪಸ್ಥಿತವಿರುತ್ತವೆ.

ವೈಶಿಷ್ಟ್ಯಗಳುಸಂಪಾದಿಸಿ

ಕೃತಕ ಮೂಲಧಾತುಗಳು ವಿಕಿರಣಶೀಲವಾಗಿ ಅತ್ಯಂತ ಕಡಿಮೆ ಅರ್ದಾಯುಷ್ಯವನ್ನು ಹೊಂದಿರುತ್ತವೆ.

ಕೃತಕ ಮೂಲಧಾತುಗಳ ಪಟ್ಟಿಸಂಪಾದಿಸಿ

ಈ ಕೆಳಗಿನ ಮೂಲಧಾತುಗಳು ಭೂಮಿಯಲ್ಲಿ ತೃಣಮಾತ್ರ ಇರುವುದರಿಂದ ಕೃತಕವಾಗಿ ಸಂಯೋಜಿಸಲ್ಪಟ್ಟವು.

ಮೂಲಧಾತುವಿನ ಹೆಸರು ರಾಸಾಯನಿಕ
ಚಿನ್ಹೆ
ಪರಮಾಣು
ಸಂಖ್ಯೆ
ಪ್ರಥಮ ಖಚಿತ
ಸಂಯೋಜನೆ
ಟೆಕ್ನೀಶಿಯಮ್ Tc 43 1936
ಪ್ರೊಮೆಥಿಯಮ್ Pm 61 1945
ಆಸ್ಟಟೈನ್ At 85 1940
ನೆಪ್ಚೂನಿಯಮ್ Np 93 1940
ಪ್ಲುಟೋನಿಯಮ್ Pu 94 1940