ಸೀತಾಫಲ
ಸೀತಾಫಲ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
A. squamosa
Binomial name
ಅನೋನ ಸ್ಕ್ವಾಮೋಸ (Annona squamosa}

ಸೀತಾಫಲ (Custard Apple) ಮೂಲತಃ ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳ ನಿವಾಸಿ. ಈಗ ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಬೆಳೆಸಲ್ಪಡುತ್ತಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

ಬದಲಾಯಿಸಿ

ಇದು ಅನೋನಾಸಿ (Anonaceae) ಕುಟುಂಬಕ್ಕೆ ಸೇರಿದ್ದು, ಅನೋನ ಸ್ಕ್ವಾಮೋಸ (Anona squamosa) ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ. ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಅಪಲ್ ಎಂಬ ಬಳಕೆಯ ಹೆಸರೂ ಇದೆ.

ಸಸ್ಯದ ಗುಣಲಕ್ಷಣಗಳು

ಬದಲಾಯಿಸಿ

ಇದು ಹೆಚ್ಚು ಕಾಂಡಗಳನ್ನು ಹೊಂದಿದ ಸಾಧಾರಣ ಎತ್ತರದ (೩ ರಿಂದ ೮ ಮೀಟರ್) ಗಿಡ.[][] ಹೆಚ್ಚಾಗಿ ಶುಷ್ಕ ಪ್ರದೇಶದಲ್ಲಿ ಕಂಡು ಬರುವುದು. ಹಣ್ಣು ರುಚಿಕರವಾಗಿದೆ. ಹೃದಯಾಕಾರದ ಹಣ್ಣು ಹಳದಿ ಅಥವಾ ಹಸುರು ಬಣ್ಣ. ಹಣ್ಣಿನಲ್ಲಿ 73.9%ರಷ್ಟು ಶರ್ಕರ, 1.6%ರಷ್ಟು ಪ್ರೋಟೀನು ಹಾಗೂ 0.3% ಕೊಬ್ಬು ಇವೆ. ಜೀವಸತ್ತ್ವ ಎ ಕೂಡ ಅಲ್ಪ ಪ್ರಮಾಣದಲ್ಲಿರುತ್ತದೆ.

ಉಪಯೋಗಗಳು

ಬದಲಾಯಿಸಿ

ಇದರ ಹಣ್ಣು ರುಚಿಕರ ಹಾಗೂ ಪಚನಕಾರಿಯಾಗಿ ಒಳ್ಳೆಯ ಬೇಡಿಕೆ ಹೊಂದಿದೆ. ಇದರ ಬೀಜ ಹಾಗೂ ಎಲೆಗಳು ಕೀಟನಿರೋಧಕ ಗುಣಗಳನ್ನು ಹೊಂದಿದೆ. ಹಸುರೆಲೆಗಳಿಂದ ಎಣ್ಣೆ ತಯಾರಿಸುತ್ತಾರೆ.

ಔಷಧೀಯ ಗುಣಗಳು

ಬದಲಾಯಿಸಿ

ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಕುರು, ಗಡ್ಡೆ(ಗ್ರಂಥಿ)ಗಳಿಗೆ ಹಚ್ಚಿದರೆ ಆರಿ ಅಥವಾ ಸಣ್ಣದಾಗಿ ಸೋರಿಹೋಗುತ್ತದೆ. ಇದೇ ಎಲೆಗಳನ್ನು ಅರೆದು ಹಚ್ಚಿದರೆ ಬೆಂಕಿ ಬರುವುದು. ನವೆ(ದಡಿಕೆ) ಗುಣವಾಗುತ್ತದೆ. ೩ ರಿಂದ ೬ ದಿವಸ.

ಜ್ವರ, ಕೆಮ್ಮು, ದಮ್ಮಿಗೆ: ಸೀತಾಫಲದ ಗಿಡದ ತೊಗಟೆಕಷಾಯ ಮಾಡಿ ಜೇನು ಸೇರಿಸಿ ಕುಡಿದರೆ ಜ್ವರ, ಕೆಮ್ಮು, ಗೂರಲು (ಉಬ್ಬಸ) ಗುಣವಾಗಿ ನಿತ್ರಾಣ ಕಮ್ಮಿಯಾಗುತ್ತದೆ. ರೋಗಕ್ಕನುಸರಿಸಿ ಕೆಲವು ದಿವಸಗಳ ವರೆಗೆ ಸೇವಿಸುತ್ತಾ ಬರುವುದು.

ಹುಣ್ಣು, ಗಾಯಗಳಿಗೆ: ಸೀತಾಫಲದ ಎಲೆ ತಂದು ಒಣಗಿಸಿ ಬಾಣಲೆಯಲ್ಲಿ ಹಾಕಿ ಕರಕಾಗುವಂತೆ ಹುರಿದು ಹುಡಿಮಾಡಿಟ್ಟುಕೊಡು ಗಾಯಕ್ಕೆ ಹಾಕಿದರೆ, ಗುಣವಾಗುತ್ತದೆ. ಹುಡಿಯನ್ನು ವ್ಯಾಸಲೀನ್ ಹಾಕಿ ಮುಲಾಮಿನಂತೆ ಮಾಡಿಟ್ಟು ಹುಣ್ಣುಗಳಿಗೆ ಹಚ್ಚುತ್ತ ಬಂದರೆ ಹುಣ್ಣುಗಳು ಮಾಯುತ್ತವೆ.

ಆಧಾರ ಗ್ರಂಥಗಳು

ಬದಲಾಯಿಸಿ
  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.

ಉಲ್ಲೇಖಗಳು

ಬದಲಾಯಿಸಿ
  1. "Compilation: Annona squamosa". Global Plants. JSTOR. Retrieved 2019-09-05.
  2. Kral, Robert. "Annona squamosa Linnaeus, Sp. Pl. 1: 537. 1753". In Flora of North America Editorial Committee (ed.). Flora of North America North of Mexico. Vol. 3. Retrieved 2019-09-05.


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸೀತಾಫಲ&oldid=1169960" ಇಂದ ಪಡೆಯಲ್ಪಟ್ಟಿದೆ