ಸಿಪಾಹಿಜೊಲಾ ವನ್ಯಜೀವಿ ಅಭಯಾರಣ್ಯ

ಸಿಪಾಹಿಜೊಲಾ ವನ್ಯಜೀವಿ ಅಭಯಾರಣ್ಯವು ಭಾರತದ ತ್ರಿಪುರ ರಾಜ್ಯದಲ್ಲಿರುವ ಒಂದು ವನ್ಯಜೀವಿ ಅಭಯಾರಣ್ಯವಾಗಿದೆ. ಇದರ ವಿಸ್ತೀರ್ಣ ಸುಮಾರು ೧೮.೫೩ ಚದರ ಕಿಲೋಮೀಟರ್. ಇದು ನಗರ ಕೇಂದ್ರದಿಂದ ಸುಮಾರು ೨೫ ಕಿಲೋಮೀಟರ್ ದೂರದಲ್ಲಿದ್ದು ಬಿಶಾಲ್‍ಗಢ್‍ನಲ್ಲಿ ಸ್ಥಿತವಾಗಿದೆ.[] ಇದು ಕಾಡುಪ್ರದೇಶವಾಗಿದ್ದು ಇಲ್ಲಿ ಒಂದು ಕೃತಕ ಸರೋವರ, ನೈಸರ್ಗಿಕ ಸಸೋದ್ಯಾನ ಮತ್ತು ಮೃಗಾಲಯಗಳಿವೆ. ಇದು ತನ್ನ ಮೋಡದ ಚಿರತೆಗಳ ಪ್ರಾಕಾರಗಳಿಗೆ ಪ್ರಸಿದ್ಧವಾಗಿದೆ.

ಈ ಅಭಯಾರಣ್ಯವು ಬಗೆಬಗೆಯ ಪಕ್ಷಿಗಳು, ಪ್ರೈಮೇಟುಗಳು ಮತ್ತು ಇತರ ಪ್ರಾಣಿಗಳನ್ನು ಹೊಂದಿದೆ. ಭೂಪ್ರದೇಶವು ವರ್ಷದಾದ್ಯಂತ ಹಸಿರಾಗಿರುತ್ತದೆ ಮತ್ತು ಎರಡು ಆರ್ದ್ರ ಬೇಸಿಗೆ ತಿಂಗಳುಗಳಾದ ಮಾರ್ಚ್ ಮತ್ತು ಏಪ್ರಿಲ್‌ನ್ನು ಹೊರತುಪಡಿಸಿ ಹವಾಮಾನವು ಸಮಶೀತೋಷ್ಣವಾಗಿರುತ್ತದೆ. ೧೯೭೨ರಲ್ಲಿ ಆರಂಭವಾದ ಅಭಯಾರಣ್ಯವು ಐದು ವಿಭಾಗಗಳನ್ನು ಹೊಂದಿದೆ: ಮಾಂಸಾಹಾರಿಗಳು, ಪ್ರೈಮೇಟುಗಳು, ಗೊರಸುಳ್ಳ ಪ್ರಾಣಿಗಳು, ಸರೀಸೃಪಗಳು ಮತ್ತು ಪಕ್ಷಿ ಆವರಣ. ಇಲ್ಲಿ ಹಲವಾರು ಸರೋವರಗಳಿವೆ; ಅವುಗಳ ಪೈಕಿ ಅಮೃತ್ ಸಾಗರ್ ಎಂಬ ಹೆಸರಿನ ಕೆರೆಯು ದೋಣಿ ಸೌಕರ್ಯವನ್ನು ಹೊಂದಿದೆ.[]

ಉಲ್ಲೇಖಗಳು

ಬದಲಾಯಿಸಿ
  1. tripurainfo
  2. "ಆರ್ಕೈವ್ ನಕಲು". Archived from the original on 2016-03-04. Retrieved 2020-08-30.

ಹೊರಗಿನ ಕೊಂಡಿಗಳು

ಬದಲಾಯಿಸಿ