ಸಿನರ್ಜಿ (ಸಹಕ್ರಿಯೆ)

ವಿವಿಧ ಪದಾರ್ಥಗಳು ಒಟ್ಟುಗೂಡಿ ಅಥವಾ ಸಹಕರಿಸಿ, ಅನುಕೂಲಕರವಾದ ಸಮಷ್ಟಿ ಪರಿಣಾಮವನ್ನು ಉಂಟುಮಾಡುವುದಕ್ಕೆ ಸಿನರ್ಜಿ (ಸಹಜ ಕ್ರಿಯೆ) ಎನ್ನಲಾಗಿದೆ.

ವ್ಯಾವಹಾರಿಕ ದೃಷ್ಟಿಯಿಂದ, ಎಲ್ಲವೂ ಅಥವಾ ತಂಡದಲ್ಲಿ) ಎಲ್ಲರೂ ಒಟ್ಟಿಗೆ ಕೂಡಿ ಕೆಲಸ ಮಾಡುವುದರಿಂದ, ಪ್ರತಿಯೊಬ್ಬ ವ್ಯಕ್ತಿಯ ಪ್ರತ್ಯೇಕ ಹಿತಾಸಕ್ತಿಗಳಿಗಿಂತಲೂ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.  

ಸಿನರ್ಜಿ ಎಂಬ ಪದ ಹಾಗೂ ಅದರ ಪರಿಕಲ್ಪನೆಯನ್ನು ರೂಪಿಸಿದವರು R. ಬಕ್ಮಿನ್ಸ್ಟರ್‌ ಫುಲ್ಲರ್‌. ಇದು ತಮ್ಮ ಸಿನರ್ಜಟಿಕ್‌ ರೇಖಾಗಣಿತದ ಹಲವು ಹಕ್ಕುಸ್ವಾಮ್ಯಗಳನ್ನು ಒಳಗೊಂಡಿತ್ತು. [ಸೂಕ್ತ ಉಲ್ಲೇಖನ ಬೇಕು] ಈ ಪದವನ್ನು ಗ್ರೀಕ್‌ syn-ergos ಭಾಷೆಯಿಂದ ಪಡೆಯಲಾಗಿದೆ. συνεργός ಇದರ ಅರ್ಥ, 'ಒಟ್ಟಿಗೆ ಕೆಲಸ ಮಾಡುವುದು.' ಇದನ್ನು ಎಂಟ್ರಪಿ ಎಂಬ ಪರಿಕಲ್ಪನೆಗೆ ವಿರುದ್ಧ ಪದವನ್ನಾಗಿ ಬಳಸಬಹುದು. ಆದ್ದರಿಂದ, ವ್ಯುತ್ಪತ್ತಿ ಶಾಸ್ತ್ರೀಯ ದೃಷ್ಟಿಯಿಂದ ಹೇಳಬೇಕಾದರೆ, ಇದು ಬಹುಶಃ 'ಪರಿಶೋಧನೆ'ಯೇ ಆಗಿತ್ತು.

  • ಪ್ರತಿಯೊಬ್ಬ ವ್ಯಕ್ತಿ ಅಥವಾ ಪ್ರತಿಯೊಂದು ಪದಾರ್ಥದ ಕ್ರಿಯೆಯ ಪರಿಣಾಮದ ಬದಲಿಗೆ, ಒಟ್ಟುಗೂಡಿ ಕೆಲಸ ಮಾಡುವ ಕ್ರಿಯೆಗಳತ್ತ ಒಲವು ವ್ಯಕ್ತವಾಗುವ ಬಲ ವೈಜ್ಞಾನಿಕ ಸ್ಥಿತಿಯಿದು.
  • ತನ್ನ ಅಂಶಗಳ ವರ್ತನೆಗಳ ಮೂಲಕ ಮುಂಗಾಣಲಾಗದ ಒಟ್ಟು ವ್ಯವಸ್ಥೆಗಳ ವರ್ತನೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಬಹುದಾಗಿದೆ. ಇದಕ್ಕೆ ನಿಖರವಾಗಿ ಹೊರಬರುವ ವರ್ತನೆ ಎನ್ನಲಾಗಿದೆ.
  • ಪ್ರತಿಯೊಂದು ಉತ್ತೇಜಕವು ಹೊರತೆಗೆಯುವ ಪ್ರತಿಕ್ರಿಯೆಗಿಂತಲೂ ಎರಡು ಅಥವಾ ಹೆಚ್ಚು ಉತ್ತೇಜಕಗಳು (ಅಥವಾ ಔಷಧಗಳು)ವಿಭಿನ್ನ ಅಥವಾ ಹೆಚ್ಚಿನ ಪ್ರತಿಕ್ರಿಯೆಯನ್ನು ಹೊರತೆಗೆಯುವ ಸಹಕಾರೀ ಕ್ರಿಯೆ.

ಔಷಧ ಸಿನರ್ಜಿ (ಸಹಕ್ರಿಯೆ)

ಬದಲಾಯಿಸಿ

ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಪ್ರಭಾವಗಳು ಅಥವಾ ಉಪ-ಪ್ರಭಾವಗಳನ್ನು ಎತ್ತಿ ತೋರಿಸುವಂತೆ ಔಷಧಗಳು ಪರಸ್ಪರ ರಾಸಾಯನಿಕ ಕ್ರಿಯೆ ನಡೆಸಿದಾಗ, ಔಷಧ ಸಿನರ್ಜಿಸಮ್‌‌ ಎನ್ನಲಾಗುತ್ತದೆ. ಸಂಯುಕ್ತ ತಯಾರಿಕೆಗಳಲ್ಲಿ ಈ ತತ್ತ್ವವನ್ನು ಬಳಸಿಕೊಳ್ಳಲಾಗುತ್ತದೆ. ಉದಾಹರಣೆಗೆ, ಕೊಡೀನ್‌ನ್ನು ಅಸಿಟಮಿನೊಫೆನ್‌ ಅಥವಾ ಐಬುಪ್ರೊಫೆನ್‌ನೊಂದಿಗೆ ಸೇರಿಸುವುದರಿಂದ, ಕೊಡೀನ್‌ನ ನೋವು ನಿವಾರಕ ಸಾಮರ್ಥ್ಯ ಹೆಚ್ಚುತ್ತದೆ.

ಇದನ್ನು ಆಗಾಗ್ಗೆ ಪುನ:ಶ್ಚೇತನಾ ಔಷಧಗಳಿಗೆ ಅನ್ವಯಿಸಲಾಗುತ್ತದೆ. ಸಿರೊಟೋನಿನ್‌ ಪೂರ್ವವರ್ತಿಯಾದ 5-HTPಯನ್ನು ನಿರುತ್ಸಾಹ-ರೋಧಕವಾಗಿ ಬಳಸಲಾಗುತ್ತದೆ. ಅದರಲ್ಲೂ ವಿಶಿಷ್ಟವಾಗಿ, MDMA ಎಂಬ ಮನೊಕ್ಲೀಷೆ ಶಮನದ ಉದ್ದೇಶಕ್ಕಾಗಿ ಬಳಸುವ ಔಷಧವನ್ನು ಸೇವಿಸುವ ಸ್ವಲ್ಪ ಸಮಯದ ಮುಂಚೆ, ಸೇವಿಸುವಾಗ ಹಾಗು ಸೇವನೆಯ ನಂತರ 5-HTPಯನ್ನು ಬಳಸಲಾಗುತ್ತದೆ. ಇದಕ್ಕೆ ಕಾರಣ, MDMA ಬಳಕೆಯ ಹಂತಗಳಲ್ಲಿ ಉತ್ತೇಜನದ ಪ್ರಭಾವ ಹೆಚ್ಚು ಸಮಯ ಮುಂದುವರೆಸಿ, ಅದು ಕಡಿಮೆಯಾಗುವುದನ್ನು ತಡೆಗಟ್ಟುತ್ತದೆ. (ಆದರೂ, 5-HTP MDMAದ ಪ್ರಭಾವವನ್ನು ಕೆಲ ಮಟ್ಟಿಗೆ ಅಡ್ಡಿಪಡಿಸುವ ಸಾಂದರ್ಭಿಕ ಸಾಕ್ಷ್ಯಾಧಾರಗಳಿವೆ).  ಇತರೆ ಉದಾಹರಣೆಗಳು LSDಯೊಂದಿಗಿನ ಕ್ಯಾನಬಿಸ್‌ ಬಳಕೆಯನ್ನು ಹೊರತುಪಡಿಸುತ್ತವೆ. ಕ್ಯಾನಬಿಸ್‌ನಲ್ಲಿರುವ ಸಕ್ರಿಯ ರಾಸಾಯನಿಕಗಳು LSD ಬಳಕೆಯಿಂದಾಗುವ ಭ್ರಾಂತಿಸ್ವರೂಪದ ಅನುಭವ ಹೆಚ್ಚಿಸುತ್ತದೆ.   [ಸೂಕ್ತ ಉಲ್ಲೇಖನ ಬೇಕು]

ಸಿನರ್ಜಿಯ ನಕಾರಾತ್ಮಕ ಪ್ರಭಾವಗಳು ಒಂದು ರೀತಿಯ ವಿರುದ್ಧಚಿಹ್ನೆಗಳಾಗಿವೆ. ಕೇಂದ್ರ ನರ ವ್ಯವಸ್ಥೆ (CNS) ಮೇಲೆ ಪ್ರಭಾವ ಬೀರುವ ಒಂದಕ್ಕಿಂತಲೂ ಹೆಚ್ಚು (ನಿಸ್ತೇಜ)ನಿರುತ್ಸಾಹಗೊಳಿಸುವ ಔಷಧವನ್ನು ಬಳಸಿದಲ್ಲಿ ಅಲ್ಲಿ ಋಣಾತ್ಮಕ ಸಂಕೇತಗಳು ಕಾಣಿಸಿಕೊಳ್ಳಬಹುದು. ಉದಾಹರಣೆಗೆ, ಆಲ್ಕೊಹಾಲ್‌ ಮತ್ತು ವ್ಯಾಲಿಯಮ್‌ ಈ ರೀತಿಯ ವಿರುದ್ಧಚಿಹ್ನೆಗಳನ್ನು ತೋರಿಸಬಹುದು. ಪ್ರತ್ಯೇಕವಾಗಿ ಸೇವಿಸಿದಾಗ ಪ್ರತಿಯೊಂದು ಔಷಧವು ಉಂಟು ಮಾಡುವ ಪ್ರಭಾವಗಳಿಗಿಂತಲೂ, ಈ ಮಿಶ್ರಣವು ಇನ್ನೂ ಹೆಚ್ಚಿನ ಪ್ರತಿಕ್ರಿಯೆ ನೀಡಬಲ್ಲದು. ಇಂತಹ ವಿಶೇಷ ವಿಚಾರದಲ್ಲಿ, ಔಷಧಗಳ ಸಿನರ್ಜಿಯ ಅತಿ ಗಂಭೀರ ಪರಿಣಾಮದ ಕುರಿತು ಉತ್ಪ್ರೇಕ್ಷಿತ ಉಸಿರಾಟದ ಬಲ ಕುಗ್ಗುವಿಕೆ,ಉಂಟು ಮಾಡುವ ಸಾಧ್ಯತೆ ಇದೆ. ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಇದು ಜೀವಕ್ಕೇ ಅಪಾಯಕಾರಿಯಾಗಬಹುದು.

ಕೀಟನಾಶಕಗಳ ಸಿನರ್ಜಿ

ಬದಲಾಯಿಸಿ

ಜೈವಿಕ ವಾಹಕ ಜೀವಿ ಸಂಖ್ಯೆಯಲ್ಲಿ ಕೀಟನಾಶಕಗಳ ಸಿನರ್ಜಿ ಸಂಭವಿಸಬಹುದು. ಉದಾಹರಣೆಗೆ, ಪರಾವಲಂಬಿ A 10%ರಷ್ಟು ಹಾನಿಗೆ ಕಾರಣವಾಗಬಹುದು, ಪರಾವಲಂಬಿ B ಸಹ 10%ರಷ್ಟು ನಷ್ಟಕ್ಕೆ ಕಾರಣವಾಗಬಹುದು.

ಎರಡೂ ಪರಾವಲಂಬಿಗಳಿದ್ದಲ್ಲಿ, ಹಾನಿಯ ಅಂದಾಜು ಸಾಮಾನ್ಯವಾಗಿ 20%ಕ್ಕಿಂತಲೂ ಕಡಿಮೆಯಿರಬಹುದು. ಆದರೆ, ಕೆಲವೊಮ್ಮೆ ಹಾನಿಯು ಗಮನಾರ್ಹವಾಗಿ ಹೆಚ್ಚಾಗಿರುತ್ತವೆ.  ಇಂತಹ ಸಂದರ್ಭಗಳಲ್ಲಿ, ಜೊತೆಯಲ್ಲಿರುವ ಪರಾವಲಂಬಿಗಳು ಸಿನರ್ಜಿ  ಪ್ರಭಾವ ಹೊಂದಿರುತ್ತವೆ.

ವಿಷಶಾಸ್ತ್ರೀಯ ಸಿನರ್ಜಿ

ಬದಲಾಯಿಸಿ

ವಿಷಶಾಸ್ತ್ರೀಯ ಸಿನರ್ಜಿ ಸಾರ್ವಜನಿಕ ಮತ್ತು ನಿಯಂತ್ರಣಾ ನಿಯೋಗಗಳಿಗೆ ಸಂಬಂಧಿತ ವಿಚಾರವಾಗಿದೆ, ಏಕೆಂದರೆ, ಏಕ ರೂಪದಲ್ಲಿ ಸುರಕ್ಷಿತವೆನಿಸುವ ರಾಸಾಯನಿಕವು ಮಿಶ್ರಣದೊಂದಿಗೆ ಸೇರಿದರೆ ಅದು ಆರೋಗ್ಯಕ್ಕೆ ಅಥವಾ ಪರಿಸರ ದೃಷ್ಟಿಯಿಂದ ಅಹಿತಕರ ಪ್ರಭಾವ ಬೀರುವ ಸಾಧ್ಯತೆಗಳಿವೆ. ವೈಜ್ಞಾನಿಕ ಮತ್ತು ಸಾಮಾನ್ಯ ಪತ್ರಿಕೆಗಳಲ್ಲಿರುವ ಲೇಖನಗಳಲ್ಲಿ, ರಾಸಾಯನಿಕ ಅಥವಾ ವಿಷಶಾಸ್ತ್ರೀಯ ಸಿನರ್ಜಿಯ ಹಲವು ವ್ಯಾಖ್ಯಾಗಳನ್ನು ಹೊಂದಿರುತ್ತವೆ. ಇವು ಅಸ್ಪಷ್ಟ ಅಥವಾ ಪರಸ್ಪರ ಘರ್ಷಣೆಯಲ್ಲಿರಬಹುದು. ಯಾವುದೇ 'ಪರಸ್ಪರ ಕ್ರಿಯೆಯಿಲ್ಲ' ಎಂಬುದರಡಿ ವಿಷವುಳ್ಳ ಪರಸ್ಪರ ಕ್ರಿಯೆಗಳನ್ನು ಸಾಪೇಕ್ಷವಾಗಿ ವ್ಯಾಖ್ಯಾನಿಸಲಾದ ಕಾರಣ, 'ಯಾವುದೇ ಪರಸ್ಪರ ಕ್ರಿಯೆಯಿಲ್ಲ' ಎಂಬ ವ್ಯಾಖ್ಯಾನದ ಮೇಲೆ ಸಿನರ್ಜಿ ಅಥವಾ ವೈರುಧ್ಯ ನಿರ್ಣಯ ಅವಲಂಬಿಸಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಸರೀಯ ರಕ್ಷಣಾ ನಿಯೋಗವು ವಿಷಯುಳ್ಳ ಪರಸ್ಪರ ಕ್ರಿಯೆಗೆ ವಿಸ್ತೃತ ಮತ್ತು ನಿಖರ ವ್ಯಾಖ್ಯಾನ ಹೊಂದಿದ್ದು, ಅಪಾಯ ಅರಿಯಲು ನೆರವಾಗುವ ವಿನ್ಯಾಸ ಮಾಡಲಾಗಿದೆ. ಅವುಗಳ ಮಾರ್ಗದರ್ಶನ ಸೂತ್ರಗಳಲ್ಲಿ, ಯಾವುದೇ ಪರಸ್ಪರ ಕ್ರಿಯೆಯಿಲ್ಲದ ಯಥಾವತ್‌ ಕಲ್ಪನೆಯು ಸೇವನೆಯ ಹೆಚ್ಚಳವೆನಿಸಿದೆ. ಹಾಗಾಗಿ ಸಿನರ್ಜಿ ಎಂದರೆ ಸೇವನೆಯ ಹೆಚ್ಚಳ ಮೀರಿಸುವಂತಹ ಸಮ್ಮಿಶ್ರ ಪ್ರತಿಕ್ರಿಯೆಯೇ ಸಿನರ್ಜಿಯ ವ್ಯಾಖ್ಯಾನವಾಗಿದೆ. ಸಿನರ್ಜಿಯಿಂದಾದ ಮಿಶ್ರಣವು ಯಾವಾಗಲೂ ಅಪಾಯಕಾರಿಯಾಗುವುದಿಲ್ಲ. ಅಲ್ಲದೇ ಇಂತಹ ಮಿಶ್ರಣವನ್ನು ಕ್ಷೇಮಕರವಾಗಿಸುವಲ್ಲಿನ ಪ್ರಮಾಣ ಕಂಡುಬರುತ್ತದೆ. ಸೇವನೆಯ ಪ್ರಮಾಣದಡಿ ಪ್ರತಿಯೊಂದೂ ಮುಂದಾಗಬಹುದಾದ ಅಪಾಯಗಳನ್ನ ಅವಲಂಬಿಸುತ್ತದೆ.

ಉದಾಹರಣೆಗೆ, ಕೀಟನಾಶಕಗಳ ಬಳಕೆಯ ಪರಿಣಾಮ ಆರೋಗ್ಯ ಹದಗೆಡಬಹುದು. USನಲ್ಲಿ ಕೀಟನಾಶಕಗಳನ್ನು ನೋಂದಾಯಿಸುವ ಸಮಯ, ವಿವಿಧ ಪರೀಕ್ಷಾ ಹಂತಗಳಲ್ಲಿ ಮನುಷ್ಯರ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ತಿಳಿದುಕೊಳ್ಳಲು ವಿಸ್ತೃತ ಪ್ರಯೋಗಗಳನ್ನು ನಡೆಸಲಾಗುತ್ತದೆ.

ಇದರಿಂದಾಗಿ, ಆಹಾರಗಳಲ್ಲಿನ ಈ ಕೀಟನಾಶಕದ ಪ್ರಮಾಣದ ಮೇಲೆ ನಿರ್ಬಂಧಗಳನ್ನು ಹೇರಲಾಗುತ್ತದೆ.  ಆಹಾರಗಳಲ್ಲಿ ಕೀಟನಾಶಕದ ಪ್ರಮಾಣ ಈ ಮಿತಿಯೊಳಗೇ ಇರುವವರೆಗೆ ಆರೋಗ್ಯದ ಮೇಲೆ ಯಾವುದೇ ಪ್ರಭಾವ ಬೀರುವ ಸಾಧ್ಯತೆ ಕಡಿಮೆ. ಇದರಿಂದ ಆಹಾರವು ಸೇವನೆಗೆ ಸುರಕ್ಷಿತವಾಗಿದೆಯೆಂದು ಪರಿಗಣಿಸಬಹುದಾಗಿದೆ.

ಆದರೆ, ಸಾಮಾನ್ಯ ಕೃಷಿ ಪ್ರಯೋಗಗಳಲ್ಲಿ, ಒಂದೇ ಒಂದು ಕೀಟನಾಶಕ ಬಳಸುವುದು ವಿರಳ. ಫಸಲು ಇಳುವರಿಯ ಸಮಯದಲ್ಲಿ ಹಲವು ವಿಭಿನ್ನ ಕೀಟನಾಶಕಗಳನ್ನು ಬಳಸುವುದಿದೆ. ಇದರಲ್ಲಿ ಪ್ರತಿಯೊಂದಕ್ಕೂ ಒಂದು ನಿಯಂತ್ರಣಾ ಮಟ್ಟವಿದ್ದು, ಪ್ರತಿಯೊಂದು ಕೀಟನಾಶಕವೂ ಸಹ ಆ ಮಟ್ಟದಲ್ಲಿ ಸುರಕ್ಷಿತವೆಂದು ಪರಿಗಣಿಸಬಹುದಾಗಿದೆ. ಹಲವು ಸಂದರ್ಭಗಳಲ್ಲಿ, ವಾಣಿಜ್ಯ ಕೀಟನಾಶಕವು, ಹಲವು ರಾಸಾಯನಿಕ ಕಾರಕಗಳನ್ನು ತಾನೇ ಹೊಂದಿರುತ್ತದೆ. ಹಾಗಾಗಿ, ಸುರಕ್ಷಿತ ಮಟ್ಟಗಳು ನಿಜಕ್ಕೂ ಮಿಶ್ರಣದ ಮಟ್ಟಗಳನ್ನು ನಿರೂಪಿಸುತ್ತವೆ. ತದ್ವಿರುದ್ಧವಾಗಿ, ರೈತರು ಸೇರಿದಂತೆ ಬಳಕೆದಾರರು ಉತ್ಪಾದನೆಯಾಗುವ ಅಥವಾ ಸೃಷ್ಟಿಸುವ ಮಿಶ್ರಣಗಳನ್ನು ಪರೀಕ್ಷೆಗೊಳಪಡಿಸುವುದು ವಿರಳ. ಸಿನರ್ಜಿಯ ಸಾಮರ್ಥ್ಯ ತಿಳಿಯಲಾಗದು. ಆದರೆ ಇದೇ ರೀತಿಯ ಮಿಶ್ರಣಗಳ ದತ್ತಾಂಶಗಳಿಂದ ಅಂದಾಜು ಮಾಡಬಹುದಾಗಿದೆ. ಮಾಹಿತಿಯ ಕೊರತೆಯು ಮನುಷ್ಯರು ಈಡಾಗುವ ಹಲವು ರಾಸಾಯನಿಕ ಮಿಶ್ರಣಗಳಿಗೂ ಅನ್ವಯಿಸುತ್ತದೆ. ಇದರಲ್ಲಿ ಆಹಾರದಲ್ಲಿರುವ ಕೀಟನಾಶಕಗಳ ಅವಶೇಷಗಳು, ಒಳಾಂಗಣ ವಾಯು ಮಲಿನಕಾರಕಗಳು ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿನ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವಿಕೆಯೂ ಸೇರಿವೆ. ಈ ಮಿಶ್ರಣಗಳಿಗೆ ಒಡ್ಡಿಕೊಳ್ಳುವುದರಿಂದ ಅರ್ಬುದ ರೋಗ (ಕ್ಯಾನ್ಸರ್‌), ಆಸ್ತಮಾ ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರಬಹುದು, ಎಂದು ಕೆಲವರು ನಂಬಿದರೆ, ಇನ್ನೂ ಕೆಲವರು ಬೇರೆ ರೀತಿಯ ವಿವರಣೆ ನೀಡುವುದುಂಟು. ಜನತೆಯು ಹಲವು ವರ್ಷಗಳ ಕಾಲ ಇದಕ್ಕೆ ಈಡಾದ ನಂತರ, ಹಾಗೂ, ಸಾಮಾನ್ಯವಾಗಿ ಪ್ರಾಣಿಗಳ ಮೇಲೆ ಪ್ರಯೋಗಿಸಲಾದ ರಾಸಾಯನಿಕ ವಿಷದ ಪ್ರಮಾಣ ಕುರಿತ ಸಂಶೋಧನೆಯ ನಂತರವೇ ಈ ಪ್ರಶ್ನೆಗೆ ಉತ್ತರ ಲಭಿಸುವುದು. ಕೀಟನಾಶಕ ಸಿನರ್ಜಿಸ್ಟ್‌ಗಳ ಪೈಕಿ ಪೈಪರೊನಿಲ್‌ ಬುಟೊಕ್ಸೈಡ್‌ ಮತ್ತು MGK 264 ಸೇರಿವೆ [].

ಮಾನವ ಸಿನರ್ಜಿ

ಬದಲಾಯಿಸಿ

ಮಾನವ ಸಿನರ್ಜಿ ಮನುಷ್ಯರಿಗೆ ಸಂಬಂಧಿಸಿದ್ದು. ಉದಾಹರಣೆಗೆ, 'A' ಎಂಬ ಒಬ್ಬನೇ ವ್ಯಕ್ತಿ ಮರದಲ್ಲಿರುವ ಸೇಬುಹಣ್ಣನ್ನು ತಲುಪಲು ಬಹಳ ಕುಳ್ಳರಾಗಿರುತ್ತಾರೆ, ಇದೇ ರೀತಿ 'B' ಕೂಡಾ ಆತನಿಗಿಂತ ಕುಳ್ಳಗಿರುತ್ತಾರೆ. A ನ ಭುಜಗಳ ಮೇಲೆ B ಕುಳಿತುಕೊಂಡಾಗ ಅವರು ಹಣ್ಣನ್ನು ತಲುಪುವುದು ಸುಲಭವಾಗುತ್ತದೆ. ಈ ಉದಾಹರಣೆಯಲ್ಲಿ, ಸಿನರ್ಜಿಯ ಗುಣಲಬ್ಧ ಒಂದು ಸೇಬುಹಣ್ಣಾಗಿರುತ್ತದೆ. ರಾಜಕಾರಣಿಗಳು ಇನ್ನೊಂದು ಉದಾಹರಣೆಯಾಗಬಹುದು. ಪ್ರತಿಯೊಬ್ಬ ರಾಜಕಾರಣಿ ತಾವಾಗಿಯೇ ಒಂದು ದಶಲಕ್ಷ ಮತಗಳನ್ನು ಗಳಿಸಿದ್ದು, ಒಟ್ಟಿಗೆ ಅವರು 2.5 ದಶಲಕ್ಷ ಮತದಾರರನ್ನು ಒಲಿಸಲು ಯತ್ನಿಸಿದಲ್ಲಿ, ಅವರ ಸಿನರ್ಜಿಯಿಂದ (ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವುದಕ್ಕಿಂತಲೂ) 500,000 ಹೆಚ್ಚುವರಿ ಮತಗಳ ಪ್ರಾಪ್ತಿಯಾಗಬಹುದು. ಮಾನವ ಸಿನರ್ಜಿಗೆ ಹಾಡು ಸಹ ಒಂದು ಒಳ್ಳೆಯ ಉದಾಹರಣೆಯಾಗಬಹುದು. ಪ್ರತ್ಯೇಕವಾಗಿ ನುಡಿಸುವ ಹಾಡಿನ ಭಾಗಕ್ಕಿಂತಲೂ, ಸಂಗೀತದ ಒಂದಕ್ಕಿಂತಲೂ ಹೆಚ್ಚು ಭಾಗವನ್ನು ಒಟ್ಟುಗೂಡಿಸಿ ಸಿದ್ಧಪಡಿಸಿದ ಹಾಡು ಹೆಚ್ಚಿನ ಪ್ರಭಾವ ಹೊಂದಿರುವುದು ಸಾಬೀತಾಗುತ್ತದೆ.

ಮಾನವ ಸಿನರ್ಜಿಯ ಮೂರನೆಯ ರೂಪವೇನೆಂದರೆ, ಒಬ್ಬ ವ್ಯಕ್ತಿಯು ಒಂದು ಕ್ರಿಯಾಚಟುವಟಿಕೆ ಮೂಲಕ ಎರಡು ಪ್ರತ್ಯೇಕ ಕಾರ್ಯಗಳನ್ನು ಪೂರ್ಣಗೊಳಿಸಲು ಶಕ್ಯವಾಗಿರುವುದು. ಉದಾಹರಣೆಗೆ, ವ್ಯಕ್ತಿಯೊಬ್ಬರು ತಮ್ಮ ಅಧ್ಯಾಪಕ ಹಾಗೂ ಕಾರ್ಯಸ್ಥಳದಲ್ಲಿನ ಮೇಲಧಿಕಾರಿಯಿಂದ ತಮ್ಮ ಕೆಲಸ ಉತ್ತಮಗೊಳಿಸುವುದು ಹೇಗೆ ಎಂಬುದರ ಬಗ್ಗೆ ಪ್ರಬಂಧವನ್ನು ಬರೆಯಲು ತಿಳಿಸಿದಲ್ಲಿ, ಇದನ್ನು ಸಿನರ್ಜಿಯೆಂದು ಪರಿಗಣಿಸಬಹುದು. ಅಥವಾ, ದೃಶ್ಯರೂಪದ ಉದಾಹರಣೆಯಾಗಿ, ನಗಾರಿ ಹೊಡೆಯುವವನು ತಾನು ನಗಾರಿ ನುಡಿಸುವಾಗ ಒಂದು ನುಡಿಗೆ ನಾಲ್ಕು ಪ್ರತ್ಯೇಕ ತಾಳಗಳನ್ನು ಬಳಸುವನು.

ವಿಭಿನ್ನ ನೈಪುಣ್ಯಗಳುಳ್ಳ ಇಬ್ಬರು ವ್ಯಕ್ತಿಗಳು ಸಹಕರಿಸಿದಾಗ ಸಿನರ್ಜಿಯುಂಟಾಗುತ್ತದೆ. ಜೋಡಿಯಲ್ಲಿರುವ ಪುರುಷ ಮತ್ತು ಸ್ತ್ರೀ ನಡುವಿನ ಸಹಕಾರವೇ ಸಿನರ್ಜಿಯ ಮೂಲಭೂತ ಉದಾಹರಣೆಯಾಗಿದೆ. ಉದ್ದಿಮೆಯಲ್ಲಿ, ಸಂಘಟನಾ ಮತ್ತು ತಾಂತ್ರಿಕ ನೈಪುಣ್ಯ ಹೊಂದಿರುವ ಜನರ ನಡುವೆ ಯಾವಾಗಲೂ ಸಹಕಾರವಿರುತ್ತದೆ. ಒಟ್ಟಾರೆ ಹೇಳುವುದಾದರೆ, ಸಿನರ್ಜಿ ಪ್ರಾಪ್ತಿಯಾಗುತ್ತದೆಂಬ ಕಾರಣವೇ ಜನರು ಪರಸ್ಪರ ಸಹಕರಿಸಲು ಪ್ರೇರೇಪಿಸುತ್ತದೆ. ಇನ್ನೊಂದೆಡೆ, ಉನ್ನತ ಸೈನರ್ಜಿಯಿರುವ ಸಮೂಹಗಳನ್ನು ರಚಿಸಲೆಂದೇ ಜನರು ವಿಶೇಷಜ್ಞರಾಗುವ ಪ್ರವೃತ್ತಿ ತೋರುತ್ತಾರೆ. (ಶ್ರಮ ವಿಭಜನೆ ಹಾಗೂ ತಂಡದ ಕೆಲಸ - ಇವೆರಡನ್ನೂ ನೋಡಿ).

ಉದಾಹರಣೆ: ಗ್ರಾಹಕರಿಗೆ ಉತ್ತಮ ಸೇವೆ ನೀಡಲೆಂದು ತಾಂತ್ರಿಕ ಮತ್ತು ಸಂಘಟನಾ ನೈಪುಣ್ಯಗಳನ್ನು ಸೇರಿಸಲು, 'ಸಿಸ್ಟಮ್‌ ಅಡ್ಮಿನ್‌' ಕ್ಷೇತ್ರದಲ್ಲಿ ಎರಡು ತಂಡಗಳು ಒಟ್ಟುಗೂಡಿ ಕಾರ್ಯ ನಿರ್ವಹಿಸುವುದು ಸಹ ಸಿನರ್ಜಿಯ ಸೃಷ್ಟಿಗೆ ನಾಂದಿಯಾಗುತ್ತದೆ.

ಕಾರ್ಪೊರೇಟ್‌ ಸಿನರ್ಜಿ

ಬದಲಾಯಿಸಿ

ಸಂಸ್ಥೆಗಳು ಅಥವಾ ನಿಗಮಗಳು ಸಮರ್ಪಕವಾಗಿ ಪರಸ್ಪರ ಉತ್ಪಾದನಾ ಚಟುವಟಿಕೆಯಲ್ಲಿ ಸಹಕಾರ ತೋರಿದಲ್ಲಿ ಕಾರ್ಪೊರೇಟ್‌ (ಸಾಂಸ್ಥಿಕ) ಸಿನರ್ಜಿ ಉಂಟಾಗುವುದು. ಉದ್ದಿಮೆಯೊಂದು ಇನ್ನೊಂದು ಉದ್ದಿಮೆಯೊಂದಿಗೆ ವಿಲೀನವಾದಾಗ ಅಥವಾ ಉದ್ದಿಮೆಯನ್ನು ತನ್ನ ಸ್ವಾಧೀನ ಪಡೆದುಕೊಂಡಾಗ ತನಗೆ ಲಭಿಸುವ ಹಣಕಾಸಿನ ಅನುಕೂಲಗಳನ್ನು ಸಾಂಸ್ಥಿಕ ಸಿನರ್ಜಿ ಉಲ್ಲೇಖಿಸುತ್ತದೆ.

ಈ ರೀತಿಯ ಸಿನರ್ಜಿ, ಬಹುಶಃ ಸಾಂಸ್ಥಿಕ (ಕಾರ್ಪೊರೇಟ್ )ಸ್ವಾಧೀನ ಪಡೆಯುವಿಕೆಯ ಲಕ್ಷಣವಾಗಿದೆ. ಇದು ಕೊಳ್ಳುವವರ ಮತ್ತು ಮಾರುವವರ ನಡುವಿನ ಮಾತುಕತೆ-ಒಪ್ಪಂದಗಳ ಕೇಂದ್ರಬಿಂದುವಾಗಿದ್ದು, ಉಭಯ ಪಕ್ಷಗಳು ಒಪ್ಪುವಂತಹ ಅಂತಿಮ ಮೌಲ್ಯವಾಗುವುದು.

ಸಾಂಸ್ಥಿಕ(ಕಾರ್ಪೊರೇಟ್ ) ಸಿನರ್ಜಿಗಳಲ್ಲಿ ಮೂರು ವಿಭಿನ್ನ ರೀತಿಗಳಿವೆ:

ಜಂಟಿ ಸಂಸ್ಥೆಯೊಂದು, ತನ್ನ ಮೂಲದ ಎರಡು ಪ್ರತ್ಯೇಕ ಸಂಸ್ಥೆಗಳು ಗಳಿಸಿದ ಆದಾಯಕ್ಕಿಂತಲೂ ಹೆಚ್ಚು ಆದಾಯಗಳಿಸುವುದಕ್ಕೆ ಆದಾಯ ಸಿನರ್ಜಿ ಎನ್ನಲಾಗುವುದು. ಉದಾಹರಣೆಗೆ, ಸಂಸ್ಥೆ A ಉತ್ಪನ್ನ X, ಹಾಗೂ, ಸಂಸ್ಥೆ B ಉತ್ಪನ್ನ Y ಮಾರಲು ತನ್ನದೇ ಆದ ಮಾರಾಟ ವ್ಯವಸ್ಥೆ ಹೊಂದಿರುತ್ತವೆ. ಸಂಸ್ಥೆ A ಸಂಸ್ಥೆ Bಯನ್ನು ತನ್ನ ಸ್ವಾಮಕ್ಕೆ ಪಡೆದುಕೊಂಡ ನಂತರ, ಹೊಸ ಸಂಸ್ಥೆಯು, ಮಾರಾಟ ತಂಡದ ಪ್ರತಿಯೊಬ್ಬರನ್ನು X ಮತ್ತು Y ಎರಡೂ ಉತ್ಪನ್ನಗಳನ್ನು ಮಾರಲು ಸೂಚಿಸುತ್ತದೆ. ಇದರಿಂದಾಗಿ, ಪ್ರತಿಯೊಬ್ಬ ಮಾರಾಟಗಾರ ವ್ಯಕ್ತಿಯ ಮೂಲಕವೂ ಈ ಸಂಸ್ಥೆಯು ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆಯಿದೆ.

ಮಾಧ್ಯಮ ಕ್ಷೇತ್ರದ ಆದಾಯದಲ್ಲಿ, ಈ ಮಾಧ್ಯಮ ವಾಣಿಜ್ಯಕೂಟದ ಸ್ವಾಮ್ಯದಲ್ಲಿರುವ ವಿವಿಧ ಅಂಗ ಸಂಸ್ಥೆಗಳ ಮೂಲಕ ಉತ್ಪನ್ನವೊಂದರ ಮಾರಾಟವನ್ನು ಸಿನರ್ಜಿಯೆನ್ನಬಹುದು - ಉದಾಹರಣೆಗೆ ಚಲನಚಿತ್ರಗಳು, ಚಲನಚಿತ್ರ ಧ್ವನಿಪಥಗಳು ಅಥವಾ ವೀಡಿಯೊ ಕ್ರೀಡೆಗಳು.

ಆಡಳಿತ ಮಂಡಳಿ

ಬದಲಾಯಿಸಿ

ಆಡಳಿತ ನಿರ್ವಹಣೆ ಮತ್ತು ತಂಡದ ಕೆಲಸಕ್ಕೆ ಸಂಬಂಧಿಸಿದಂತೆ, ತಂಡದ ಸದಸ್ಯರಾಗಿ ವ್ಯಕ್ತಿಗಳು ಭಾಗವಹಿಸಿ ಒಟ್ಟುಗೂಡಿ ಶ್ರಮಿಸುವುದಕ್ಕೆ ಸಿನರ್ಜಿ ಎನ್ನಬಹುದಾಗಿದೆ. ಸಕಾರಾತ್ಮಕ ಹಾಗೂ ನಕಾರಾತ್ಮಕ ರೂಪಗಳಲ್ಲಿ ಸಿನರ್ಜಿ ಆಸ್ತಿತ್ವದಲ್ಲಿರಬಹುದು. ಸಂಸ್ಥೆಯೊಂದರ ವಿವಿಧ ವಿಭಾಗಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದರ ಪ್ರಭಾವಕ್ಕಿಂತಲೂ, ಪರಸ್ಪರ ಸಹಕರಿಸಿ ಕಾರ್ಯನಿರ್ವಹಿಸುವುದರ ಪ್ರಭಾವವು ಹೆಚ್ಚಾಗಿರುವುದು ಗಮನಾರ್ಹ ವಿಚಾರವಾಗಿದೆ.

ಉದ್ದಿಮೆಯ ನಿರ್ವಹಣಾ ವೆಚ್ಚಗಳನ್ನು ಕಡಿಮೆ ಅಥವಾ ಶೂನ್ಯಗೊಳಿಸಲು ಒಟ್ಟುಗೂಡಿದ ಸಂಯೋಜಕ ಕಾರ್ಪೊರೇಟ್ ಸಂಸ್ಥೆಯೊಂದಕ್ಕೆ ದೊರೆಯುವ ಅವಕಾಶಕ್ಕೆ ವೆಚ್ಚ ಕುರಿತಾದ ಸಿನರ್ಜಿ ಎನ್ನಲಾಗಿದೆ. ಸಮ್ಮಿಶ್ರ ಸಂಸ್ಥೆಯಲ್ಲಿ ಒಂದೇ ರೀತಿಯ ಎರಡು ಹುದ್ದೆಗಳಿದ್ದಲ್ಲಿ ಒಂದನ್ನು ಅನಗತ್ಯ ಎಂದು ತೆಗೆದುಬಿಡುವುದರಿಂದ ವೆಚ್ವದ ಒಟ್ಟುಗೂಡುವಿಕೆ ಮೂಲಕ ಸಿನರ್ಜಿ ಪ್ರಾಪ್ತಿಯಾಗಬಹುದು. ಉದಾಹರಣೆಗೆ, ಹಿಂದಿನ ಸಂಸ್ಥೆಗಳ ಪೈಕಿ ಒಂದರ ಪ್ರಧಾನ ಕಾರ್ಯಾಲಯ, ಸಿಬ್ಬಂದಿಯಲ್ಲಿನ ಕೆಲವರು, ಮಾನವ ಸಂಪನ್ಮೂಲ ವಿಭಾಗ (ಹೆಚ್‌ಆರ್‌) ಅಥವಾ ಹಿಂದಿನ ಉದ್ದಿಮೆಗಳ ಇತರೆ ನೌಕರರು ಇತ್ಯಾದಿ. ಇದು ಎಕನಾಮೀಸ್‌ ಆಫ್‌ ಸ್ಕೇಲ್‌ನ ಆರ್ಥಶಾಸ್ತ್ರೀಯ ಪರಿಕಲ್ಪನೆಗೆ ಸಂಬಂಧಿಸಿದೆ.

ಕಂಪ್ಯೂಟರ್‌ಗಳು

ಬದಲಾಯಿಸಿ

ಮಾನವನ ಸಾಮರ್ಥ್ಯ ಮತ್ತು ಕಂಪ್ಯೂಟರ್‌ಗಳ ಸಾಮರ್ಥ್ಯಗಳ ಮಿಶ್ರಣವನ್ನು ಸಿನರ್ಜಿ ಎಂದು ವ್ಯಾಖ್ಯಾನಿಸಬಹುದು; ಉದಾಹರಣೆಗೆ: ಆಧುನಿಕ ಚದುರಂಗದಾಟ. ಕಂಪ್ಯೂಟರ್‌ಗಳು ಮಾನವನಿಗಿಂತಲೂ ವೇಗವಾಗಿ ದತ್ತಾಂಶಗಳನ್ನು ಸಂಸ್ಕರಿಸಬಹುದು. ಆದರೆ, ವಿವರ್ಣಾತ್ಮಕಗಳಿಗೆ ಅವು ಪ್ರತಿಕ್ರಿಯೆ ನೀಡಲಾರವು.

ಮಾಧ್ಯಮದಲ್ಲಿ ಸಿನರ್ಜಿ*

ಬದಲಾಯಿಸಿ

ಮಾಧ್ಯಮಗಳ ಅರ್ಥಶಾಸ್ತ್ರೀಯದಲ್ಲಿ, ಮಾಧ್ಯಮ ವಾಣಿಜ್ಯ ಒಕ್ಕೂಟವು [] ವಿವಿಧ ಅಂಗಸಂಸ್ಥೆಗಳ ಮೂಲಕ, ಚಲನಚಿತ್ರ, ಚಲನಚಿತ್ರ ಸೌಂಡ್ ಟ್ರ್ಯಾಕ್ ಅಥವಾ ವೀಡಿಯೊ ಕ್ರೀಡೆಗಳಂತಹ ಉತ್ಪನ್ನಗಳ (ಹಾಗೂ ಅವುಗಳ ಆವೃತ್ತಿಗಳ) ಪ್ರೊತ್ಸಾಹ ಹಾಗೂ ಮಾರಾಟ ಮಾಡುವುದನ್ನು ಸಿನರ್ಜಿ ಎನ್ನಬಹುದಾಗಿದೆ. 1930ರ ದಶಕದಲ್ಲಿ ವಾಲ್ಟ್‌ ಡಿಸ್ನಿ ಸಿನರ್ಜಿ ಸ್ವರೂಪದ ಮಾರಾಟ ತಂತ್ರಗಳನ್ನು ಬಳಸಿದರು. ಉತ್ಪನ್ನಗಳು ಹಾಗೂ ಜಾಹೀರಾತುಗಳಲ್ಲಿ ಮಿಕ್ಕಿ ಮೌಸ್‌ ಪಾತ್ರವನ್ನು ಬಳಸಲು ಅವರು ಹಲವು ಸಂಸ್ಥೆಗಳಿಗೆ ಹಕ್ಕುಗಳನ್ನು ನೀಡಿದ್ದರು. ಅವರು ಆಯಾ ಆದೇಶ ವ್ಯವಸ್ಥೆಗಳ ಮೂಲಕ ಡಿಸ್ನಿ ಬ್ರಾಂಡ್ ಮಾರಾಟ ಮುಂದುವರೆಸಿದ್ದರು.

ಈ ಉತ್ಪನ್ನಗಳು ಚಲನಚಿತ್ರದ ಪ್ರಚಾರ ನಡೆಸಲು ಹಾಗೂ ಚಲನಚಿತ್ರದ ಮಾರಾಟ ಹೆಚ್ಚಿಸಲು ನೆರವಾಗುವವು.  ಉದಾಹರಣೆಗೆ, ಸ್ಪೈಡರ್ಮ್ಯಾನ್‌ ಚಿತ್ರಗಳು ವೆಬ್‌ಷೂಟರ್‌ಗಳು ಮತ್ತು ಆ ಚಲನಚಿತ್ರದಲ್ಲಿನ ಪ್ರಧಾನ ಪಾತ್ರವಹಿಸುವ ಬೊಂಬೆಗಳಿದ್ದವು. ಜೊತೆಗೆ ಭಿತ್ತಿಪತ್ರ ಮತ್ತು ಮನರಂಜನೆಯ ಆಟಗಳೂ ಇದ್ದವು. * ಮಾಧ್ಯಮ ಸಿನರ್ಜಿ ಕುರಿತು ಹೆಚ್ಚಿನ ಮಾಹಿತಿಗಾಗಿ, ನಾರ್ತ್‌ವೆಸ್ಟರ್ನ್ಸ್‌ ಜರ್ನಲ್‌ ಆಫ್‌ ಇಂಟಿಗ್ರೇಟೆಡ್‌ ಮಾರ್ಕೆಟಿಂಗ್‌ ಕಮ್ಯುನಿಕೇಷನ್ಸ್‌‌  (2008) ಎಂಬ ಲಿಂಡೆನ್‌ ಡ್ಯಾಲೆಕಿಯವರ ಲೇಖನವನ್ನು ಓದಿರಿ Archived 2010-06-13 ವೇಬ್ಯಾಕ್ ಮೆಷಿನ್ ನಲ್ಲಿ..


ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ಪೈರೆಥ್ರಾಯ್ಡ್ಸ್‌ ಅಂಡ್‌ ಪೈರೆಥ್ರಿನ್ಸ್‌ Archived 2010-04-01 ವೇಬ್ಯಾಕ್ ಮೆಷಿನ್ ನಲ್ಲಿ., U.S. ಪರಿಸರೀಯ ರಕ್ಷಣಾ ನಿಯೋಗ, epa.gov
  2. ಕ್ಯಾಂಪ್ಬೆಲ್‌, ರಿಚರ್ಡ್‌, ಕ್ರಿಸ್ಟೊಫರ್‌ ಆರ್‌. ಮಾರ್ಟಿನ್‌, ಅಂಡ್‌ ಬೆಟ್ಟಿನಾ ಫೆಬೊಸ್‌. ಮೀಡಿಯಾ ಅಂಡ್‌ ಕಲ್ಚರ್‌ 5: ಆನ್‌ ಇನ್ಟ್ರೊಡಕ್ಷನ್‌ ಟು ಮಾಸ್‌ ಕಮ್ಯುನಿಕೇಷನ್‌. ಐದನೆಯ ಪರಿಷ್ಕರಣ 2007 ಅಪ್ಡೇಟ್‌ ಎಡ್‌. ಬೊಸ್ಟಿನ್‌: ಬೆಡ್ಫರ್ಡ್‌ ಸ್ಟ್ರೀಟ್‌. ಮಾರ್ಟಿನ್ಸ್‌, 2007. 606.

ಹೊರಗಿನ ಕೊಂಡಿಗಳು

ಬದಲಾಯಿಸಿ

]