ಸಾನೆಟ್

(ಸಾನ್ನೆಟ್ ಇಂದ ಪುನರ್ನಿರ್ದೇಶಿತ)

ಸಾನೆಟ್ ಕಾವ್ಯ ರಚನೆಯ ಒಂದು ಪ್ರಕಾರ.ಸಾನ್ನೆಟ್ ಪ್ರಸಿದ್ದವಾದ "ಲಿಂಕ್"ನ ಒಂದು ಆಯಾಮವಾಗಿದ್ದು, ಎಲಿಜಬೆತ್ ಕಾಲದ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. "ಸಾನೆಟ್" ಎಂಬ ಪದ ಇಟಾಲಿಯನ್ ಭಾಷೆಯ "ಸಾನೆಟೋ" ಎಂಬ ಪದದಿಂದ ಉಗಮವಾಗಿದೆ. ಇದರರ್ಥ‍ "ಚಿಕ್ಕಹಾಡು" ಎಂಬುದಾಗಿದೆ. ಈ ಸಾನೆಟ್ ಗಳು ಯಾವುದಾದರೂ ಘಟನೆ, ವಿಷಯ ಕುರಿತದ್ದಾಗಿದ್ದು, "ಪ್ರೀತಿ" ಇದರ ಮೂಲ ಚರ್ಚಾ ವಿಷಯವಾಗಿದೆ. ಸಾನ್ನೆಟ್ ಸಾಮಾನ್ಯವಾಗಿ "ಹದಿನಾಲ್ಕು" ಸಾಲುಗಳುಳ್ಳ ಪದ್ಯಗಳಾಗಿದ್ದು ಇದು 'ಪಿಯಾಂಬಿಕ್ ಪೆಂಟಾಮೀಟರ್' ನಿಂದ ಕೂಡಿರುವುದಾಗಿರುತ್ತದೆ. ಇಂಗ್ಲೀಷ್ ಸಾಹಿತ್ಯ ಕ್ಷೇತ್ರದಲ್ಲಿ ಎಲಿಜಬೆತ್‍ನ ಕಾಲವು ಬಹಳ ಶ್ರೇಷ್ಠವಾದ ಮಹತ್ವವಾದ ಕಾಲವೆಂದೇ ಕರೆಯಬಹುದು. ಬ್ರಿಟಿಷ್ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವದ ಮೈಲು ಗಲ್ಲೇನಬಹುದು. ಎಲಿಜಬೆತ್ I, ಇಂಗ್ಲೀಷ್ ರಾಣಿ ಇಂಗ್ಲೀಷ್ ಸಾಹಿತ್ಯದ ಪುನರುಜ್ಜೀವನದಲ್ಲಿ ಪ್ರಮುಖವಾದ ಪಾತ್ರವನ್ನೇ ವಹಿಸುತ್ತಾಳೆ. ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳ ಪ್ರಾವಿಣ್ಯತೆ ಹೊಂದಿದ್ದ ಈಕೆ ನಾಟಕ, ಗದ್ಯ ಮತ್ತು ಪದ್ಯಗಳ ರಚನೆಯಲ್ಲಿ ಆಸಕ್ತಿಯನ್ನು ಹೊಂದಿದ್ದಳು. ಈ ಎಲಿಜಬೆತ್ ಕಾಲ ಘಟ್ಟದಲ್ಲಿ 'ಹೆಚ್ಚು ಜನಪ್ರಿಯತೆ ಉಳ್ಳ "ಲಿಂಕ್" ಬಹಳ ಶತಮಾನಗಳ ಕಾಲ, ಸಾಹಿತ್ಯದ ಸಂಪತ್ತನ್ನು ಇಮ್ಮಡಿಗೊಳಿಸುವತ್ತಾ ದಾಪು ಕಾಲಿಟ್ಟಿತು. ಇದರ ಇತರೇ ಪ್ರಮುಖ ಭಾಗಗಳೆಂದರೆ ಹಾಡು, ಓಡ್, ಬ್ಯಾಲಡ್, ಎಲ್ಜಿ, ಮತ್ತು ಸಾನ್ನೆಟ್.

ವಿಲಿಯಂ ಷೇಕ್ಸ್‌ಪಿಯರ್,ಸಾನೆಟ್‍ನ ಪ್ರಚಾರಕ( in the famous "Chandos" portrait. Artist and authenticity unconfirmed.National Portrait Gallery (UK).

ಸಾನ್ನೆಟ್ ನ ವಿಧಗಳು

ಬದಲಾಯಿಸಿ

ಸಾನ್ನೆಟ್ ನ್ನು ಅದರ ಕಾಲಘಟ್ಟ, ರಚನೆ, ಲಕ್ಷಣಗಳ ಆಧಾರದ ಮೇಲೆ ಎರಡು ವಿದಗಳನ್ನು ಮಾಡಲಾಗಿದೆ. ಅವುಗಳೆಂದರೆ "ಇಟಾಲಿಯನ್ ಅಥವಾ ಪೆಟ್ರಿಯೋಕ‌‌‌‍ನ ಸಾನ್ನೆಟ್" ಮತ್ತೊಂದು "ಇಂಗ್ಲೀಷ್" ಅಥವಾ "ಷೇಕ್ಸಪ್ಪಿಯರನ ಸಾನ್ನೆಟ್"

ಇಟಾಲಿಯನ್ ಅಥವಾ ಪೆಟ್ರಾರ್ಕನ್ ಸಾನ್ನೆಟ್

ಬದಲಾಯಿಸಿ
  • ಇದೊಂದು ಸಾಂಪ್ರದಾಯಿಕ ರೀತಿಯ ಸಾನೆಟ್ ಆಗಿದ್ದು. ಇದರ ಉಗಮ ಮತ್ತು ಬೆಳವಣಿಗೆಯನ್ನು 13ನೇ ಶತಮಾನದಲ್ಲಿ ಕಾಣಬಹುದಾಗಿದೆ. ಈ ವಿಧವಾದ ಸಾನೆಟ್ ನು ಬಳಸಿ, ಇದರ ಬೆಳವಣಿಗೆಗೆ ಕಾರಣರಾದವರಲ್ಲಿ ಪ್ರಮುಖರುಗಳೆಂದರೆ ಡಾಂಟೆ ಮತ್ತು ಪೆಟ್ರಾರ್ಕ್‍ ಲಕ್ಷಣಗಳು - ಈ ಪ್ರಕಾರದ ಸಾನೆಟ್ ಕೂಡ ಹದಿನಾಲ್ಕು ಸಾಲುಗಳ ಪದ್ಯವಾಗಿದ್ದು ಎರಡು ಪ್ರಮುಖ ಭಾಗಗಳನ್ನು ಕಾಣಬಹುದಾಗಿದೆ. ಮೊದಲನೆಯ ಭಾಗವನ್ನು "ಆಕ್ಟೇನ್" ಎರಡನೇ ಭಾಗವನ್ನು "ಸೆಸಟೆಟ್" ಎಂಬುದಾಗಿ ಹೆಸರಿಸಬಹುದು.
  • 'ಆಕ್ಟೇವ್' ಭಾಗವು ಪದ್ಯದಲ್ಲಿನ ಮೂಲ ವಿಷಯದ ಸಮಸ್ಯೆ ಮತ್ತು ಗೊಂದಲದಿಂದ ಕುರಿತಾದ ಎಂಟು ಸಾಲನ್ನು ಒಳಗೊಂಡಿದ್ದರೆ, "ಸೆಸಟೆಟ್", ಆಕ್ಟೇವ್ ಭಾಗದಲ್ಲಿನ ಸಮಸ್ಯೆಯ ಪೂರಕವಾಗಿ ಮತ್ತು ಅದರ ಪರಿಹಾರ ವಿಷಯವನ್ನು ಒಳಗೊಂಡಿರುತ್ತದೆ. ಮೂಲತಃ "ಆಕ್ಟೇವ್" ಬಹಳ ಪಠಿಣ ಸ್ವರೂಪದಾಗಿದ್ದು, "ಸೆಸಟೆಟ್" ಬಹಳ ನಮ್ರ ಸ್ವರೂಪದ್ದಾಗಿರುತ್ತದೆ. ಈ ಪಟ್ರಿಯಾಕ‍ನ ಸಾನೆಟ್ ಹೆಚ್ಚಿನ ಪದ್ಯಗಳು ರಚನೆ ಮಾಡಿದ್ದು ಥಾಮೆಸ್ ವ್ಯಾಟ್ ಎಂಬ ಕವಿ.

ಇಂಗ್ಲೀಷ್ ಅಥವಾ ಶೇಕ್ ಸ್ಪಿಯರ್ ನ ಸಾನೆಟ್

ಬದಲಾಯಿಸಿ
  • ಶೇಕ್ ಸ್ಪಿಯರ್ ನ ಸಾನೆಟ್ ಇಂಗ್ಲೀಷ್ ಸಾಹಿತ್ಯ ದ ಅಮೂಲ್ಯವಾದ ರತ್ನಗಳೆಂದೇ ಹೇಳಬಹುದಾಗಿದೆ. ಏಕೆಂದರೆ ಈತನ ಕಾಲದಲ್ಲಿ ಮಾರಣಾಂತಿಕ "ಪ್ಲೇಗ್" ನಿಂದಾಗಿ ಅಪಾರ ಸಾವು ನೋವುಗಳು ಉಂಟಾಗಿ, ರಾಜರ ಕಾಲದ ರಂಗ ಮಂದಿರಗಳು ಮುಚ್ಚಿಹೋದವು. ಕಾರಣ ಸರಕಾ‌ರವಾಗಲಿ, ರಾಜರುಗಳಾಗಲಿ ಈ ನಾಟಕರಂಗ ಮಂದಿರಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಈ ಪರಿಣಾಮವಾಗಿ ಬರಹಗಾರರು ತಮ್ಮ ಜೀವನಕ್ಕಾಗಿ ಮತ್ತೊಂದು ಮಾಗ‌‌‌‌‍ವನ್ನು ಕಂಡು ಕೊಳ್ಳಬೇಕಾಯಿತು.
  • ಆ ಪ್ರಮುಖವಾದ ಮಾಗ‌ವೇ "ಸಾನೆಟ್"ಗಳ ರಚನೆ. ಈ ಕಾಲಕ್ಕೆ "ಸಾನೆಟ್"ಗಳು ಬರಹಗಾರರ ಹೊಟ್ಟೆಯನ್ನು ತುಂಬಿಸುತ್ತಿದ್ದವು. ಇದು ಎಷ್ಟರ ಮಟ್ಟಿಗೆ ಎಂದರೆ, ಈ ಕಾಲಕ್ಕೆ "ಸಾನೆಟ್" ಒಂದು ಮಹತ್ವಪೂರ್ಣ‍ ಕಲೆಯಾಗಿ ಹೊರ ಹೊಮ್ಮಿತು. ಶೇಕ್ಸ ಪ್ಪಿಯರ್ ನ "ಸಾನೆಟ್"ಗಳು ರಚನೆಯಾದರೆ ಈ ಪದ್ಯಗಳು ಇಂಗ್ಲೀಷ್ ಸಾಹಿತ್ಯವನ್ನು ಉನ್ನತ ಶಿಖರವೆಂಬುವಂತೆ ಮಾಡಿದವು.

ಲಕ್ಷಣಗಳು

ಬದಲಾಯಿಸಿ

ಸಾಮಾನ್ಯವಾಗಿ ಈ ವಿಧವಾದ ಸಾನೆಟ್ ಹದಿನಾಲ್ಕು ಸಾಲುಗಳ ಪದ್ಯವಾಗಿದ್ದು. ಮೂರು ಕ್ವಾಟೈನ್ ಗಳು ಎಂದರೆ 12 ಸಾಲುಗಳು ಮತ್ತು ಕೊನೆಗೆ "ಕಪ್ ಲೆಟ್" ಎಂದರೆ ಎರಡು ಸಾಲುಗಳಿಂದ ಪೂರ್ಣಗೊಳ್ಳುತ್ತದೆ..

  • 1. ಜೋಡಣಾಕ್ರಮ ಈ ಸಾನೆಟ್ ಗಳು ಹದಿನಾಲ್ಕು ಸಾಲುಗಳಿದ್ದು, ಮೂರು ಕ್ವಾಟ್ರೇನ್ ಮತ್ತು ಒಂದು "ಕೆಪ್ ಲೆಟ್" ಅನ್ನು ಹೊಂದಿರುತ್ತದೆ.
  • 2. ಪ್ರಾಸಗಳ ಕ್ರಮ ಹದಿನಾಲ್ಕು ಸಾಲುಗಳ ಎ.ಬಿ.ಎಬಿ,ಸಿ.ಡಿ.ಸಿ.ಡಿ, ಇ.ಎಫ್,-ಇಎಫ್ ಮತ್ತು ಜಿ.ಜಿ ಎಂಬ ಪ್ರಾಸಗಳಿಂದ ಕೂಡಿರುತ್ತದೆ.
  • 3. ಮಾತ್ರಕಾಲ ಪ್ರತಿಯೊಂದು ಸಾಲುಗಳು "ಐಯಾಮ್ ಬಿಕ್ ಪೆಂಟಾ ಮೀಟರ್" ಎಂಬ ಮಾತ್ರ ಗುಂಪಿಗೆ ಸೇರಿದ್ದು, ಇದು ಐದು ಐಯ್ಯಂಬಿಕ್ ಮಾತ್ರಗಳನ್ನು ಹೊಂದಿರುತ್ತದೆ.

ವೋಲ್ಟಾ ಸಾನೆಟ್

ಬದಲಾಯಿಸಿ

ಒಂದು ತಿರುವಿನ ಘಟ್ಟವೇ. ವೋಲ್ಟಾ ಇದು ಸಾನೆಟ್ನನ ಅರ್ಥದ ಬದಲಾವಣೆಯನ್ನೇ ಸೂಚಿಸುತ್ತದೆ. ಅಷ್ಟ ಅಲ್ಲದೇ ಪದ್ಯದ ವಿಷಯ ಸಮಸ್ಯೆಗೆ ಪರಿಹಾರವನ್ನು ಸೂಚಿಸುತ್ತದೆ. ಪ್ರತಿಯೊಂದು ಸಾನೆಟ್ ಒಂದು ವೋಲ್ಟಾವನ್ನು ಹೊಂದಿದ್ದು, ಈ ವೋಲ್ಟಾವು "But" ಎಂಬ ಇಂಗ್ಲೀಷ್ ಪದದ ಮೂಲಕ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಈ ವೋಲ್ಟಾಗಳು ಸಾನೆಟ್ ಒಂಭತ್ತು ಮತ್ತು ಹದಿಮೂರನೇ ಸಾಲುಗಳಲ್ಲಿ ಕಾಣಬಹುದಾಗಿದೆ.

ಶೇಕ್ಸ್ ಪಿಯರ್ ನ ಸಾನೆಟ್ ಗಳು

ಬದಲಾಯಿಸಿ
 
Henry Howard, Earl of Surrey, c.1542 by Hans Holbein

ಶೇಕ್ಸ್ ಪಿಯರ್ ನ ಈ ಕೆಳಗಿನ ಸಾನೆಟ್ ಗಳು ಈ ಮೇಲಿನ ಕೆಲವು ಲಕ್ಷಣಗಳಿಂದ ಹೊರಗುಳಿದಿವೆ. ಅವುಗಳೆಂದರೆ.

  • ಸಾನೆಟ್ 99,=ಐದಿನೈದು ಸಾಲುಗಳಿವೆ.
  • ಸಾನೆಟ್ 126,= ಆರು "ಕಪಲೆಟ್" ಮತ್ತು "ಎರಡು ಖಾಲಿ ಇಟಾಲಿಕ್ ಆವರಣಗಳಿಂದ ಕೂಡಿದೆ.
  • ಸಾಲೆಟ್ 145,= ಇದು ಐಯಾಂಬಿಕ್ ಟೆಟ್ರಾ ಮೀಟರ್ ನಿಂದ ಕೂಡಿದೆ.

ಶೇಕ್ಸ್ ಪಿಯರ್ ನ ಸಾನೆಟ್ ಗಳು ಒಟ್ಟು 154. ಈ ಎಲ್ಲಾ ಸಾನೆಟ್ ಗಳು ಕಾಲದ ಪ್ರಭಾವ ಮತ್ತು ಕಾಲದ ಪರಿಪೂಣ‍ ತೆ, ಪ್ರೀತಿ, ಸೌಂದರ್ಯ ಮತ್ತು ಮತೆಣತೆಯನ್ನು ಕುರಿತು ಚರ್ಚಿಸುತ್ತದೆ. ವಿಷಯವಸ್ತು ಶೇಕ್ಸ್ ಪಿಯರ್ ನ ಸಾನೆಟ್ ನ್ನು ಪ್ರಮುಖವಾಗಿ ಸಾನೆಟ್ ಗಳ ಆಧಾರದ ಮೇಲೆ 3 ಭಾಗಗಳಾಗಿ ವಿಂಗಡಿಸ ಬಹುದು. ಅವುಗಳೆಂದರೆ-

  • (1) ಸಾನೆಟ್ 1-126:- "ಚಿರಯಪ್ಪನ"ವನ್ನು ಕುರಿತದ್ದಾಗಿದ್ದು ಈ ಸಾನೆಟ್ ಗಳನ್ನು "ಅಪರಿಚಿತವ್ಯಕ್ತಿಗೆ" ಶೇಕ್ಸ್ ಪಿಯರ್ ಅರ್ಪಣೆಯನ್ನು ಮಾಡಿದ್ದಾನೆ. ಈ ಸಾನೆಟ್ ಗಳು "ಯವ್ವನ" ಸೌಂದರ್ಯ ಮತ್ತು ಸಂಪದ್ಬರಿತವಾದ ಸೌಂದಯ್ಯತೆಯ ಕುರಿತು ಚರ್ಚಿಸುತ್ತದೆ. ಅಷ್ಟ ಅಲ್ಲದೇ "ದೇಹಸಂಭದ" ಕುರಿತು ತಿಳಿಸುತ್ತದೆ. ಈ ಮೊದಲ ಭಾಗದ ಸಾನೆಟ್ ಗಳು ಮದುವೆ ಮತ್ತು ಸಂಸಾರದ ಚಾದರ್ಯತೆಯನ್ನು ಒಳಗೊಂಡಿದೆ.
  • (2) ಸಾನೆಟ್ 127-152:- ಈ ಸಾನೆಟ್ ಗಳಲ್ಲಿಯೂ ಸಹ "ಡಾರ್ಕ್ಲ್ ಲೇಡಿ" ಎಂಬಾಕೆಗೆ ತನ್ನ ಸಾನೆಟ್ಗಳನ್ನು ಅರ್ಪಣೆಯನ್ನು ಮಾಡುತ್ತಾನೆ. ಈ ಸಾನೆಟ್ ಗಳಲ್ಲಿ ಪ್ರೀತಿ ಮತ್ತು ದುರಾಸೆಯು ಪ್ರಮುಖ ವಸ್ತು ವಿಷಯವಾಗಿದ್ದು , ವಯಸ್ಕ ಮಹಿಳೆಯು ತನ್ನ ಪ್ರೀತಿಯನ್ನು ನಿರಾಕರಿಸಿದರ ಬಗ್ಗೆ ತಿಳಿಸುತ್ತದೆ.

"ಪವಿತ್ರವಾದ ಪ್ರೀತಿಯನ್ನು" ಚಿರಯೌವ್ವನಕ್ಕೆ.. "ದೈಹಿಕ ಪ್ರೀತಿಯನ್ನು" "ಡಾರ್ಕ್ ಲೇಡಿ"ಗೆ ಈ ಸಾನೆಟ್ ಗಳಲ್ಲಿ ಅರ್ಪಿಸುತ್ತಾನೆ.

  • (3) ಸಾನೆಟ್ 153-154:- ಈ ಎರಡು ಸಾನೆಟ್ಗಳು, ಗ್ರೀಕ್ ದಂತಕತೆಗಳಿಗೆ ಸಂಬಂಧಿಸಿದ ವಿಷಯ ವಸ್ತುವನ್ನು ಹೊಂದಿದ್ದು. ಶೇಕ್ಸ್ ಸ್ಪಿಯರ್ ನ ಪ್ರೀತಿ ಐಹ್ಯಿಕ ಪ್ರಪಂಚಕ್ಕಿಂತ ಮೀರಿದ್ದು, ಇದು ಬಾಹ್ಯ ಪ್ರಪಂಚಕ್ಕಿಂತ ಶ್ರೇಷ್ಟ ಎಂಬುದನ್ನೇ ಚರ್ಚಿಸುತ್ತದೆ.

ಸಂಕೇತಗಳು

ಬದಲಾಯಿಸಿ

ಶೇಕ್ಸ್ ಸ್ಪಿಯರ್ ನ ಸಾನೆಟ್ ಗಳು ಕೆಲವು ರೀತಿಯ ಸಂಕೇತಗಳನ್ನು ತಮ್ಮ ದೈನಂದಿನ ಜೀವನಕ್ಕೆ ಹೋಲಿಕೆಯಾಗಿ ಹೂಗಳು ಮತ್ತು ಮರ, ನಕ್ಷತ್ರ, ಮತ್ತು ಹವಾಗುಣ ಮತ್ತು ಮಾಸಗಳು.

  • (1) ಹೂ ಮತ್ತು ಮರ:- ಈ ಸಂಕೇತಗಳು ಶೇಕ್ಸ್ ಸ್ಪಿಯರ್ ನ ಎಲ್ಲಾ ಸಾನೆಟ್ಗಳಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ. ಇವುಗಳು ಮನುಷ್ಯನ ಮುಪ್ಪು, ಜೀವನದ ಸಾರ್ಥಕತೆ, ಮುಪ್ಪಿನ ಹಂತಗಳು, ಪ್ರೀತಿ, ಐಶ್ವರ್ಯದ ಸಂಕೇತಗಳಾಗಿ ಹೊರಹೊಮ್ಮುತ್ತದೆ. ಬೋಡು ಬೋಡಾದಮರವು ಮನುಷ್ಯನ ವೃದ್ದಾಪ್ಯದ ಪ್ರತೀಕ ಮತ್ತು ಸಾವಿನ ಪ್ರತೀಕವಾಗಿದೆ. ಸಾನೆಡ್ 12 ರಲ್ಲಿ ಸಾಂಪ್ರದಾಯಿಕವಾಗಿ ಗುಲಾಬಿಯನ್ನು ರೋಮ್ಯಾಂಟಿಕ್ ಪ್ರೀತಿಯಾಗಿ ಸೂಚಿಸಲಾಗಿದೆ. ಅಷ್ಟೇ ಅಲ್ಲದೇ ಅದರ ಸುವಾಸನೆ, ಆಕರ್ಷಣೆ, ಅದರ ಜೊತೆಗೆ ಯೌವ್ವನದ ಸಂಬಂಧವನ್ನು ಬಹಳ ಅಚ್ಚುಕಟ್ಟಾಗಿ ಶೇಕ್ಸ್ ಸ್ಪಿಯರ್ ಸಾನೆಟ್ ಗಳಲ್ಲಿ ಕಾಣಬಹುದು.
  • (2) ನಕ್ಷತ್ರಗಳು:- ಶೇಕ್ಸ್ ಸ್ಪಿಯರ್ ಸಾನೆಟ್ ಗಳಲ್ಲಿ ನಕ್ಷತ್ರಗಳು ಮನುಷ್ಯನ ಹಣೆಬರಹದ ಸಾಂಕೇತಿಕವಾಗಿದೆ. ನಕ್ಷತ್ರವು ಪ್ರೀತಿ ಶಾಶ್ವತೆಯ ಪ್ರತೀಕ. ನಕ್ಷತ್ರವು ಸಾಮಾನ್ಯವಾಗಿ ಇವನ ಕಾಲದಲ್ಲಿ ಜೋತಿಷ್ಯ ಮತ್ತು ರಾಶಿಯನ್ನು ಹೇಳಲು ಬಳಸಲಾಗುತ್ತಿತ್ತು.
  • (3) ಹವಾಗುಣ ಮತ್ತು ಮಾಸ:- ಮನುಷ್ಯನ ಭಾವನೆಗಳು, ಆತನ ವರ್ತನೆಗಳನ್ನು ನಿಸರ್ಗದ ನೈಬತೆಯೊಳಗೆ ಚಿತ್ರಿಸಲಾಗಿದೆ. ಮನುಷ್ಯನು ಕರೆಗಿಸುವ ರೀತಿಯಲ್ಲಿ ಯೌವ್ವನದಿಂದ ಮುಪ್ಪಿನ ಕಡೆಗಿನ ಸಹಜ ವರ್ತನೆಯನ್ನು ಇವನ ಎಲ್ಲಾ ಸಾನೆಟ್ ಗಳಲ್ಲಿ ನಾವು ಕಾಣಬಹುದಾಗಿದೆ. "ಆಟೋಮನ್" ಕಾಲವನ್ನೇ ಮನುಷ್ಯನ ಮುಪ್ಪಿಗೆ "ವಸಂತಮಾಸ" ವನ್ನು ಹೊಸ ಚಿಗುರಿನ, ಹೊಸ ನವೀನತೆಯ ಪ್ರತೀಕವಾಗಿ "ವಿಂಟರ್" ಮಾಸವನ್ನು "ಸಾವಿಗೆ" ಹೋಲಿಕೆಯಾಗಿ ಇವನ ಸಾನೆಟ್ ಗಳಲ್ಲಿ ಕಾಣಬಹುದಾಗಿದೆ.

ಈ ಮೇಲಿನ ಎಲ್ಲಾ ಲಕ್ಷಣಗಳು, ಸಂಕೇತ, ವಿಷಯವಸ್ತು ಸಾನೆಟ್ ಗಳಲ್ಲಿ ಕಾಣ ಬಹುದಾಗಿದ್ದು, ಶೇಕ್ಸ್ ಸ್ಪಿಯರ್ ನ ಕೆಲವು ಸಾನೆಟ್ ಗಳು ಇಂಗ್ಲೀಷ್ ಸಾಹಿತ್ಯದಲ್ಲಿ ಸರ್ವಕಾಲ ಶ್ರೇಷ್ಠವಾಗಿ ಉಳಿಯುತ್ತದೆ. ಅವುಗಳಲ್ಲಿ ಪ್ರಮುಖವಾದ ಸಾನೆಟ್ ಗಳೆಂದರೆ

  • (1) ಸಾನೆಟ್ 18= (Shall I compare thee to a summer day)
  • (2) ಸಾನೆಟ್ 18= Let me not to the marriage of true minds.
  • (3) ಸಾನೆಟ್ 73= That time of year thou

ಸಾನೆಟ್ ನ ಪ್ರಮುಖ ಪಾತ್ರಗಳು

ಬದಲಾಯಿಸಿ

ನಾವು ಶೇಕ್ಸ್ ಸ್ಪಿಯರ್ ಸಾನೆಟ್ ಗಳ ಪ್ರಮುಖ ಪಾತ್ರಗಳನ್ನು ವಿಭಾಗಿಸುವುದಾದರೆ ಪ್ರಮುಖವಾಗಿ "‍Fair youth" "The Rival" and "The Dark Lady" ಮೊದಲನೆ ಶೇಕ್ಸ್ ಸ್ಪಿಯರ್ "Fair Youth"ನ ಸೌಂದರ್ಯದ ಬಗ್ಗೆ ಒಲವನ್ನು ಸೂಚಿಸಿದರೆ ನಂತರ ಅವನ ಮತ್ತು "The Dark Lady" ನಡುವಿನ ಸಂಬಂಧವನ್ನು ಚಿತ್ರಿಸುತ್ತಾನೆ.

  • (1) "Fair Youth":- "Fair Youth" ಎಂಬುದು ಒಂದು ಅಪರಿಚಿತ ವ್ಯಕ್ತಿಯ ಹೆಸರನ್ನು ಸೂಚಿಸುವುದಷ್ಟೇ ಅಲ್ಲದೆ 1 ರಿಂದ 126 ಸಾನೆಟ್ ಗಳು ಈ "Fair Youth" ಹೆಸರನ್ನು ಸೂಚಿಸುತ್ತದೆ. ಕೆಲವು ವಿಶ್ಲೇಷಣಕಾರರು "Fair Youth" ಮತ್ತು "ಶೇಕ್ಸ್ ಸ್ಪಿಯರ್"ನ ಮದ್ಯಗಿನ ಪ್ರೀತಿಯ ಮತ್ತು ಸೌಂದರ್ಯದ ಸಂಬಂಧ ಕುರಿತ ಸಾನೆಟ್ ಗಳಾಗಿವೆ ಎಂದು ಅಭಿಪ್ರಾಯಪಟ್ಟರೆ, ಕೆಲವು ವಿಶ್ಲೇಷಣಕಾರರು "ಅನೈತಿಕ ಸಂಬಂಧ" ಕುರಿತದಾಗಿದೆ ಎಂದು ಕೆಲವು ಅಭಿಪ್ರಾಯ ಪಟ್ಟಿದ್ದಾರೆ.
  • (2) "Dark Lady":- "Fair Youth"ನ ಪ್ರೀತಿಯ, ಸೌಂದರ್ಯದ ಸಂಬಂಧವನ್ನು "Dark Lady" ಪಾತ್ರದಲ್ಲಿ ನಾವು ಕಾಣುವುದಿಲ್ಲ. ಶೇಕ್ಸ್ ಸ್ಪಿಯರ್ ಹೇಳುವಂತೆ "The spiritual love for the fairs youth" and "The sexual love for the Dark Lady"
  • (3) " The Rival Poet" ಈ ಪಾತ್ರವು ಅನೇಕ ಗೌಪ್ಯತೆಗೆ ಕಾರಣವಾದುದಾಗಿದೆ. ಇದಕ್ಕೆ ಯಾವುದೇ ರೀತಿಯ ಸಾಕ್ಷಿ-ಪುರಾವೆಗಳನ್ನು ನಾವು ಕಾಣಲು ಸಾಧ್ಯವಾಗುವುದಿಲ್ಲ. ಈ ಸಾನೆಟ್ ಗಳು ಮನುಷ್ಯನ ಜೀವನದ ಒಂದು ಪ್ರಮುಖವಾದ ಭಾಗವಾಗಿ ನಾವು ಸಾನೆಟ್ ಗಳಲ್ಲಿ ಕಾಣಬಹುದಾಗಿದೆ.

ಅಚ್ಚರಿಯ ಅಂಶ

ಬದಲಾಯಿಸಿ
  • ಶೇಕ್ಸ್ ಸ್ಪಿಯರ್ ತನ್ನ ಸಾನೆಟ್ ಗಳ ರಚನೆಯಲ್ಲಿ ಸಾವಿರಾರು ಪದಗಳನ್ನು ಇಂಗ್ಲೀಷ್ ಸಾಹಿತ್ಯ ಕ್ಷೇತ್ರಕ್ಕೆ ತನ್ನ ಕೊಡುಗೆಯಾಗಿ ನೀಡಿದ್ದಾನೆ. ಕೇವಲ ಇಂಗ್ಲೀಷ್ ಪದಗಳಷ್ಟೆ ಅಲ್ಲದೇ, ಲ್ಯಾಟಿನ್, ಫ್ರೆಂಚ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿಯೂ ಸಹ ಇವನ ಕೊಡುಗೆ ಅಪಾರ. ಈ ಪರಿಣಾಮವಾಗಿ ಇಂಗ್ಲೀಷ್ ಶಬ್ದಕೋಶದಲ್ಲಿ ಈ ಪದಗಳನ್ನು ನಾವು ಕಾಣಬಹುದಾಗಿದೆ. ಅವುಗಳೆಂದರೆ, arch-villain, birth place, blood sucking, courtship, dewdrop, drown stairs, fanged, radiance, school boy, still born, watch dog. ಹೀಗೆ ಹಲಚು ಪದಗಳ ಶೇಕ್ಸ್ ಸ್ಪಿಯರ್ ನ ಕೊಡುಗೆಗೆ ಸಾಕ್ಷಿಯಾಗಿವೆ.
  • ಹೀಗೆ ಸಾನೆಟ್ ಇಂಗ್ಲೀಷ್ ಸಾಹಿತ್ಯ ಕ್ಷೇತ್ರದ ಪ್ರಮುಖ ಭಾಗವಾಗಿದ್ದು, ತನ್ನದೇ ಆದ ಶ್ರೇಷ್ಠತೆ, ನವೀನತೆ, ಪ್ರಾವಿಣ್ಯತೆಯನ್ನು ಈ ವರೆಗೂ ಉಳಿಸಿಕೊಂಡು ಬಂದಿದೆ. ಅವುಗಳಲ್ಲೂ ಪ್ರಮುಖವಾಗಿ ಶೇಕ್ಸ್ ಸ್ಪಿಯರ್ ನ ಸಾನೆಟ್ ಗಳು ಇಂಗ್ಲೀಷ್ ಸಾಹಿತ್ಯದ ಸಂಪತ್ತನ್ನೇ ಹೆಚ್ಚಿಸುವಲ್ಲಿ ಪ್ರಮುಖಪಾತ್ರವಹಿಸಿದೆ. ಆದರೂ ಕೆಲವು ಸಾನೆಟ್ ಗಳು ತನ್ನ ಗೌಪತ್ಯೆಯನ್ನು ಅರ್ಥವನ್ನು ಹಿಡಿದಿಟ್ಟುಕೊಂಡಿದ್ದು, ವಿಶ್ಲೇಷಣಾಕಾರರ ಹದ್ದಿನ ಕಣ್ಣಿಗೆ ಆಹಾರವಾಗಿಯೇ ಉಳಿದಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಸಾನೆಟ್&oldid=921722" ಇಂದ ಪಡೆಯಲ್ಪಟ್ಟಿದೆ